ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-01-2019

By blogger on ಸೋಮವಾರ, ಜನವರಿ 21, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-01-2019 

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 13/2019 ಕಲಂ 379 ಐಪಿಸಿ :- ದಿನಾಂಕ 20.01.2019 ರಂದು ಸಮಯ ಬೆಳಿಗ್ಗೆ 6:00 ಗಂಟೆಗೆ ಎ-1 ಆರೋಪಿತನು ಎ-2 ಹೇಳಿದಂತೆ ಈ ಮೇಲ್ಕಂಡ ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಕಳ್ಳತನದಿಂದ ಕೊಂಕಲ್ ಸಿಮಾಂತರದಲ್ಲಿಯ ಮರಳನ್ನು ಸಾಗಿಸುತ್ತಿದ್ದಾಗ ಸಿಪಿಐ ಗುರುಮಠಕಲ್ ವೃತ್ತ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎ-1 ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಎ-1 ನನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 13/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 12/2019 ಕಲಂ 379 ಐಪಿಸಿ :- ದಿನಾಂಕ 20.01.2019 ರಂದು ಸಮಯ ಬೆಳಿಗ್ಗೆ 5:40 ಗಂಟೆಗೆ ಎ-1 ಆರೋಪಿತನು ಎ-2 ಹೇಳಿದಂತೆ ಎ-2 ಈತನ ಟ್ರ್ಯಾಕ್ಟರನಲ್ಲಿಯ ಮರಳನ್ನು ಮತ್ತು ಎ-3 ಈತನು ಟ್ರ್ಯಾಕ್ಟರ ನಂ: ಟ್ರ್ಯಾಕ್ಟರ ನಂ: ಕೆಎ-33-ಟಿಎ-5571 ಮತ್ತು ಟ್ರ್ಯಾಲಿ ನಂ: ಕೆಎ-33-5572 ನೇದ್ದರಲ್ಲಿ ಅಕ್ರಮವಾಗಿ ಕಳ್ಳತನದಿಂದ ಕೊಂಕಲ್ ಸಿಮಾಂತರದಲ್ಲಿಯ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎ-3 ಈತನು ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿದ್ದು ಎ-1 ಈತನು ಸಿಕ್ಕಿಬಿದ್ದಿದ್ದು ಇರುತ್ತದೆ. ನಂತರ ಎ-1 ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಎ-1 ನನ್ನು ಹಾಗೂ ಎ-3 ಈತನು ಬಿಟ್ಟು ಹೋಗಿದ್ದ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 12/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 14/2019 ಕಲಂ: 341, 323, 354, 504, 506 ಐಪಿಸಿ :- ದಿನಾಂಕ 19.01.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯೊಂದಿಗೆ ಕೂಲಿಗೆ ಹೋಗಿದ್ದ ಮಾಣಿಕೆಮ್ಮ, ದೇವಮ್ಮ ಮೂರು ಜನರು ಸೇರಿ ಚನ್ನಾರಡ್ಡಿ ಮಾಸ್ತರ ಇವರ ಹೊಲದಲ್ಲಿ ನಾಟಿ ಮಾಡಿ ಮರಳಿ ಮನೆಗೆ ಬರುತ್ತಿದ್ದಾಗ ಆರೋಪಿತನು ಫಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕೈ ಹಿಡಿದು ಎಳೆದಾಳಿ ಮಾನಭಂಗ ಮಾಡಲು ಯತ್ನಸಿದ್ದುಅ ಅಲ್ಲದೇ ಕೈ ಇಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ಇಂದು ದಿನಾಂಕ 20.01.2019 ರಂದು ತನ್ನ ಗಂಡನೊಂದಿಗೆ ಠಾಣೆಗೆ ಹಾಜರಾಗಿ ಬಾಯಿ ಮಾತಿನ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಸದರಿ ಫಿರ್ಯಾದಿಯ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 14/2019 ಕಲಂ: 341, 323, 354, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 178/2018 ಕಲಂ: 279, 337, 338 304(ಎ) ಐಪಿಸಿ ಸಂಗಡ 187 ಐಎಂವಿ ಯಾಕ್ಟ :- ದಿನಾಂಕ: 24/12/2018 ರಂದುರಂದು 09.30 ಎಎಂಕ್ಕೆ ಗಂಗಾ ಆಸ್ಪತ್ರೆ ಕಲಬುರಗಿಇಂದದೂರವಾಣಿ ಮೂಲಕ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಸ್ರೀ ಭಿಮಣ್ಣ ಹೆಚಿಸಿ-146 ರವರು ಸದರಿಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಶ್ರೀ. ಅಬ್ದುಲ ಕರೀಂತಂದೆಅಬ್ದುಲ್ ಸಲಾಂಸಾಬ ಆನೂರಿ ವಯಾ:40 ವರ್ಷ ಉ: ಬಟ್ಟೆ ವ್ಯಾಪಾರಜಾ: ಮುಸ್ಲೀಂ ಸಾ: ಗೋಗಿ (ಪೇಠ) ತಾ: ಶಹಾಪೂರಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 07.30 ಪಿಎಂ ಕ್ಕೆ ಬಂದು ಹಾಜರ ಪಡೆಸಿದ್ದು ಸದರಿ ಹೇಳಿಕೆ ಸಾರಂಶದಏನಂದರೆ, ನಾನು ಮೇಲಿನ ವಿಳಾಸದ ನಿವಾಸಿತನಿದ್ದು ಸಂತೆ-ಸಂತೆತಿರುಗಾಡಿ ಬಟ್ಟೆ ವ್ಯಾಪಾರ ಮಾಡಿಕೊಂಡುಉಪಜೀವಿಸುತ್ತೇನೆ. ನನ್ನಂತೆಯೇ ನಮ್ಮಊರಿನ ಮಹ್ಮದಇಸ್ಮಾಯಿಲ್ತಂದೆ ಯಾಸೀನಸಾಬ ಬೈಬರಿ ವಯಾ:65 ವರ್ಷ ಉ: ಬಟ್ಟೆ ವ್ಯಾಪಾರ, ಮಹಾದೇವತಂದೆ ಶಂಕ್ರೆಪ್ಪ ನರಬೋಳಿ ವಯಾ:42 ಉ: ಬಟ್ಟೆ ವ್ಯಾಪಾರ ಮತ್ತುರಾಧಬಾಯಿಗಂಡತಿರುಪತಿ ಸಾಳೇರ ವಯಾ:45 ಸಾ: ಗೋಗಿ ಪೇಠಎಲ್ಲರೂ ಸಂತೆಗೆ ಹೋಗಿ ಬಟ್ಟೆ ವ್ಯಾಪಾರ ಮಾಡುತ್ತಾರೆ. ಹೀಗಿದ್ದು, ನಿನ್ನೆ ದಿನಾಂಕ:23/12/2018 ರಂದುರವಿವಾರ ಚಾಮನಾಳ ಸಂತೆಗೆ ಬಟ್ಟೆ ವ್ಯಾಪರಕ್ಕೆ ನಾವೆಲ್ಲರೂ ಹೋಗಿದ್ದೆವು. ಸಂತೆಯಲ್ಲಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಮರಳಿ ಗೋಗಿಗೆ ಬರುವಕುರಿತು ನಮ್ಮೂರಿನಗುರುತಂದೆಅಮೃತ ಇಳಗೇರ ಈತನಟಂ.ಟಂಅಟೋ ನಂ: ಕೆಎ-33-4132 ನೇದ್ದರಲ್ಲಿ ಕುಳಿತು 05.30 ಪಿಎಂಕ್ಕೆ ಚಾಮನಾಳದಿಂದ ಹೊರಟಿದ್ದೇವು, ಸದರಿಅಟೋ ಚಾಲಕ ಗುರುತಂದೆಅಮೃತ ಈಳಗೇರ ಸಾ: ಗೋಗಿ ಪೇಠಈತನುದರ್ಶನಾಪೂರಕ್ರಾಸ್ದಾಟಿದ ನಂತರತನ್ನಅಟೋವನ್ನುಅತೀವೇಗ ಮತ್ತುಅಲಕ್ಷತನದಿಂದ ನಡೆಸುತ್ತಿದ್ದನು. ನಾವು ನಿದಾನಅಂತ ಹೇಳಿದರು ಕೇಳದೆ ಹಾಗೇಯೇ ನಡೆಸಿಕೊಂಡು ಗೋಗುತ್ತಿದ್ದ, ರಬ್ಬನಳ್ಳಿ ಕ್ರಾಸ್ದಾಟಿದ ನಂತರ ಸ್ವಲ್ಪ ಮುಂದೆ ಗೋಗಿ ಕಡೆಗೆ ಬಂದಾಗ 06.00 ಪಿಎಂ ಸುಮಾರಿಗೆ ನಮ್ಮಟಂಟಂಅಟೋದಎದರುನಿಂದಅಂದರೆ ಗೋಗಿ ಕಡೆಯಿಂದಒಂದು ಮೋಟಾರ ಸೈಕಲ ನೇದ್ದರ ಸವಾರತನ್ನ ಮೋಟಾರ ಸೈಕಲ್ನ್ನುಅತೀವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದ, ಇಬ್ಬರು ಚಾಲಕರುಗಳು ತಮ್ಮ ವಾಹನಗಳನ್ನು ಅತೀವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಮುಖಾಮುಖಿ ಡಿಕ್ಕಿಪಡೆಸಿದ್ದರ ಪರಿಣಾಮವಾಗಿ ನಾವು ಕುಳಿತು ಹೊರಟಿದ್ದಟಂ.ಟಂಅಟೋ ಪಲ್ಟಿಯಾಗಿ ನಾವೆಲ್ಲ ಕೆಳಗೆ ಬಿದ್ದೆವು. ಆಗ ಮಹಾದೇವ ನರಬೋಳಿ, ಮತ್ತುರಾದಾಬಾಯಿ, ಗುರು ಇಳಗೇರ ಇವರು ಪಲ್ಟಿಯಾಗಿ ಬಿದ್ದಿದ್ದಟಂ.ಟಂಅಟೋಎತ್ತಿದ್ದು ಕೆಳಗೆ ಸಿಕ್ಕಿದ್ದ ನನಗೆ ಬಲಗಾಲ ತೊಡೆಗೆ ಎಲಬು ಮುರಿದ ಬಾರಿ ಗಪ್ತ ಘಾಯವಾಗಿರುತ್ತದೆ. ಮಹ್ಮದಇಸ್ಮಾಯಿಲ್ಈತನಿಗೆ, ತಲೆಗೆ ಭಾರಿಗುಪ್ತಗಾಯವಾಗಿ ಕಿವಿಯಿಂದರಕ್ತ ಬಂದಿದ್ದು, ಮೂಗಿಗೆ, ಎರಡು ತುಳಿಗಳಿಗೆ, ಬಲಗೈ ಮೋಳಕೈ ಕೆಳಗೆ, ಬಲಗಾಲ ಪಾದದ ಮೇಲೆ, ಎಡಗಾಲಿನ ಪಾದದ ಮೇಲೆ ಮತ್ತುಎಡಗಾಲಿನ ಮೋಳಕಾಲಿನ ಕೆಳಗೆ ತರಚಿದ ರಕ್ತಗಾಯಗಳಾಗಿರುತ್ತವೆ. ಟಂ.ಟಂಅಟೋ ಚಾಲಕ ಗುರುಈತನಿಗೆಟೊಂಕದ ಹತ್ತಿರ ಮತ್ತು ಮೋಳಕಾಲಿನ ಹತ್ತಿರಗುಪ್ತಗಾಯಆಗಿರುತ್ತದೆಅಂತಾ ತಿಳಿಸಿದ. ಮೋಟಾರ ಸೈಕಲ್ ನೋಡಲಾಗಿಅದರ ನಂ:ಕೆಎ-33-ಡಬ್ಲೂ-8639 ಅಂತಾಇದ್ದುಅದರ ಸವಾರನಿಗೆ ಹೆಸರು ವಿಚಾರಿಸಿದ್ದು ತನ್ನ ಹೆಸರು ಶ್ರೀಶೈಲ ತಂದೆ ಮಹಾಂತಪ್ಪಅಂಗಡಿ ಸಾ: ಕೆಂಬಾವಿ ಅಂತಾ ತಿಳಿಸಿದ್ದು ಸದರಿಯವನಿಗೆಕೂಡ ಮೋಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ತಿಳಿಸದನು. ಆಗ ಮಹಾದೇವ ನರಬೋಳಿ ಈತನುಅಂಬೂಲೆನ್ಸ ಗೆ ಮತ್ತು ನಮ್ಮ ಮನೆಯವರಿಗೆ ಪೋನ ಮಾಡಿದ್ದು, ನಮ್ಮೂರಿನಿಂದ ಮೈಹೀಬೂಬ ತಂದೆ ಯಾಸೀನಸಾಬ ಇವರು ಬಂದಿದ್ದು, ಸದರಿ ಮೈಹೀಬೂಬ ಮತ್ತು ಮಹಾದೇವ ನರೋಬೋಳಿ ಇವರುಗಳು 108 ಅಂಬುಲೆನಸ್ ಬಂದ ನಂತರ ನಮಗೆ ಶಹಾಪೂರಆಸ್ಪತ್ರೆಗೆ, ನಂತರಅಲ್ಲಿಂದ ಕಲಬುರಗಿಯ ಗಂಗಾ ಆಸ್ಪತ್ರೆಗೆತಂದು ಸೇರಿಕೆ ಮಾಡಿರುತ್ತಾರೆ. ಮಹ್ಮದಇಸ್ಮಾಯಿಲ್ಈತನುಇನ್ನು ಬೇಹೋಸ್ದಲ್ಲಿಇರುತ್ತಾನೆ ಮಾತನಾಡುವದಿಲ್ಲ. ಘಟನೆಯಲ್ಲಿ ಮಹಾದೇವ ನರಬೋಳಿ ಮತ್ತುರಾಧಾಬಾಯಿಇವರಿಗೆಯಾವುದೆ ಗಾಯಗಳಾಗಿರುವದಿಲ್ಲ. ಸದರಿ ಮೋಟಾರ್ ಸೈಕಲ್ ಚಾಲಕ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣತಮ್ಮ ವಾಹನಗಳನ್ನು ಅತೀವೇಗ ಮತ್ತುಅಲಕ್ಷತನದಿಂದ ನಡೆಸಿ ಮುಖಾಮುಖಿ ಡಿಕ್ಕಿ ಪಡೆಸಿ ಅಪಘಾತ ಮಾಡಿದ ಮೋಟಾರ ಸೈಕಲ ನಂ:ಕೆಎ-33-ಡಬ್ಲೂ-8639 ನೇದ್ದರ ಸವಾರ ಶ್ರೀಶೈಲ ತಂದೆ ಮಹಾಂತಪ್ಪಅಂಗಡಿ ಸಾ: ಕೆಂಬಾವಿ ಹಾಗೂ ಟಂ.ಟಂಅಟೋ ನಂ: ಕೆಎ-33-4132 ಚಾಲಕ ಗುರುತಂದೆಅಮೃತ ಈಳಗೇರ ಸಾ: ಗೋಗಿ ಪೇಠ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾಪಿಯರ್ಾದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 179/2018 ಕಲಂ: 279, 337, 338 ಐಪಿಸಿ ಸಂಗಡ 187 ಐಎಂವಿ ಯಾಕ್ಟ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದು,     ಪ್ರಕರಣದಲ್ಲಿ ದಿನಾಂಕ:21/01/2019 ರಂದು 06.05 ಎಎಂ ಕ್ಕೆ ಸಾಕ್ಷಿದಾರ ಮಹ್ಮದ ಮುಸ್ತಾಪ ಈತನು ಹಾಜರಾಗಿತಮ್ಮತಂದೆಯಾದ ಮಹ್ಮದಇಸ್ಮಾಯಿಲ್ತಂದೆ ಯಾಸಿನ ಸಾಬ ಬೈಬರಿ ವ:65 ವರ್ಷ ಸಾ; ಗೋಗಿ ಪೇಠಇವರು ದಿ:20/01/2019 ರಂದು 03.30 ಪಿಎಂ ಕ್ಕೆ ಮೃತಪಟ್ಟಿರುತ್ತಾರೆಅಂತಾ ಪುರವಣಿ ಹೇಳಿಕೆ ನೀಡಿದ್ದು ಸದರಿ ಹೆಳಿಕೆ ಸಾರಂಶದ ಮೇಲಿಂದ  ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!