ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-01-2019

By blogger on ಶನಿವಾರ, ಜನವರಿ 19, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-01-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 02/2019  ಕಲಂ 174 ಸಿ.ಆರ್ ಪಿಸಿ :- ದಿನಾಂಕ; 18/01/2019 ರಂದು 10-00 ಎಎಮ್ ಕ್ಕೆ ಶ್ರೀ ಪಂಪಾಪತಿ ಹೆಚ್.ಸಿ-145 ಯಾದಗಿರಿ ನಗರ ಠಾಣೆ ರವರು ಒಂದು ಲಿಖಿತ ಅಜರ್ಿ ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ಎರಡು ತಿಂಗಳಿಂದ ಯಾದಗಿರಿ ಜಿಲ್ಲಾ ಸಕರ್ಾರೀ ಆಸ್ಪತ್ರೆಯ ಉಕ್ಕಡ ಪೊಲೀಸ ಠಾಣೆಯಲ್ಲಿ ನಿರ್ವಹಿಸುತ್ತಿದ್ದು ಇರುತ್ತದೆ. ಹಿಗೀದ್ದು  ದಿನಾಂಕ; 15/01/2019 ರಂದು 11-30 ಎಎಮ್ ಸುಮಾರಿಗೆ ಯಾದಗಿರಿ ನಗರದ ಕಂದಕುರ ಮೆಡಿಕಲ ಹತ್ತಿರ ಒಬ್ಬ ಅಪರಿಚಿತ ಗಂಡು ಮನುಷ್ಯ ಅಂದಾಜು ವಯಸ್ಸು 50 ರಿಂದ 55 ವರ್ಷ ಇರಬಹುದು ಅನಾರೋಗ್ಯದಿಂದ ಬಳಲುತ್ತಾ ರಸ್ತೆಯ ಮೇಲೆ ಬಿದ್ದಿದ್ದರಿಂದ 108 ಅಂಬುಲೆನ್ಸನವರು ಉಪಚಾರ ಕುರಿತು ಯಾದಗಿರಿ ಸಕರ್ಾರೀ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದರು. ಅಪರಿಚಿತ ವ್ಯಕ್ತಿಯು ಉಪಚಾರ ಹೊಂದುತ್ತಾ ಗುಣಮುಖನಾಗದೇ ಇಂದು ದಿನಾಂಕ; 18/01/2019 ರಂದು ಬೆಳೆಗಿನ ಜಾವ 5-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಕಾರಣ ಮೃತ ಅಪರಿಚಿತ ವ್ಯಕ್ತಿಯು ಭಿಕ್ಷುಕನಂತೆ ಕಂಡು ಬರುತ್ತಿದ್ದು ಯಾರು ಎಲ್ಲಿಯವನು ಎಂಬುವುದರ ಬಗ್ಗೆ ಗೊತ್ತಾಗಿರುವುದಿಲ್ಲ. ಅಪರಿಚಿತ ವ್ಯಕ್ತಿ ಇದ್ದು ಹೊಟ್ಟೆಗೆ ಅನ್ನ, ನೀರು, ಆಹಾರವಿಲ್ಲದೇ ಹಸಿವಿನಿಂದ ಬಳಲಿರಬಹುದು ಮತ್ತು ಯಾವುದೋ ಕಾಯಿಲೆಯ ಅನಾರೋಗ್ಯದಿಂದ ಬಳಲುತ್ತಿರಬಹುದು ಮೃತ ವ್ಯಕ್ತಿಗೆ ಉಪಚಾರ ಕುರಿತು ದಿನಾಂಕ; 15/01/2019 ರಂದು ಯಾದಗಿರಿ ಸಕರ್ಾರೀ ಆಸ್ಪತ್ರಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ಗುಣಮುಖನಾಗದೇ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರುತ್ತಾನೆ. ಮೃತನ ಮೈಮೇಲೆ ಒಂದು ಬೂದಿ ಬಣ್ಣದ ಶರ್ಟ,ಒಂದು ನೀಲಿ,ಕಪ್ಪು ಬಣ್ಣದ ಲುಂಗಿ, ಒಂದು ನಾಶಿ ಬಣ್ಣದ ಜಾಂಗ ಇದ್ದು ಅಪರಿಚಿತ ಗಂಡು ಮನುಷ್ಯ ಇರುತ್ತಾನೆ.ಯಾರು ವಾರಸುದಾರರು ಕಂಡು ಬಂದಿರುವುದಿಲ್ಲ. ದಿನಾಂಕ; 18/01/2019 ರಂದು ಬೆಳಗಿನ ಜಾವ 5-30 ಎಎಮ್ ಕ್ಕೆ ಜಿಜಿಹೆಚ್ ಯಾದಗಿರಿಯಲ್ಲಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ.02/2019 ಕಲಂ.174 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 25/2019  ಕಲಂ 279, 337, 304 (ಎ) ಐ.ಪಿ.ಸಿ :- ದಿನಾಂಕ:18/01/2019 ರಂದು ಮಧ್ಯಾಹ್ನ 2.30 ಪಿ.ಎಂ.ಕ್ಕೆ ಶ್ರೀ ವಿರುಪಾಕ್ಷಪ್ಪ ತಂ/ ಈರಪ್ಪ ಬಡಿಗೇರ ಸಾ|| ದಿಗ್ಗಿ ಹಾ.ವ|| ಗಣೇಶ ನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಹಾಜರಪಡಿಸಿದ್ದು ಸದರ ಅಜರ್ಿ ಸಾರಾಂಶವೇನೆಂದರೆ, ನನ್ನ ಮಗಳು ಸೃಷ್ಟಿಗೆ ನೋಟಬುಕ್ ಮತ್ತು ಇತರೆ ಶಾಲಾ ವಸ್ತುಗಳನ್ನು ಕೊಡಿಸಲು ಇಂದು ದಿನಾಂಕ:18/01/2019 ರಂದು ನಮ್ಮ ಹೋಂಡಾ ಆಕ್ಟಿವ್ ಸ್ಕೂಟಿ ನಂ. ಕೆಎ-33 ವಿ-7324 ನೇದ್ದರಲ್ಲಿ ಕೂಡಿಸಿಕೊಂಡು ಮನೆಯಿಂದ ಹೊರಟೆನು 1.30 ಪಿ.ಎಂ ಸುಮಾರಿಗೆ ಭೀ.ಗುಡಿ-ಶಹಾಪುರ ಮುಖ್ಯ ರಸ್ತೆಯ ಕಾಮಾ ಬಿಲ್ಡಿಂಗ್ ಹತ್ತಿರ ರೋಡಿನಲ್ಲಿ ಹೊರಟಿದ್ದಾಗ ನಮ್ಮ ಹಿಂದಿನಿಂದ ಒಂದು ಟಾಟಾ ಕಂಪನಿಯ ಬಾಡಿ ಕಟ್ಟಲಾರದ ಬಿಳಿ ಲಾರಿ ನೇದ್ದರ ಚಾಲಕನು ತನ್ನ ಲಾರಿಯನ್ನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಸ್ಕೂಟಿಯ ಹಿಂಬಾಗಕ್ಕೆ ಡಿಕ್ಕಿಪಡಿಸಿದರಿಂದ ಅಪಘಾತದಲ್ಲಿ ನನ್ನ ಮಗಳಿಗೆ ಬಾರಿ ಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಅಪಘಾತಕ್ಕೆ  ಕಾರಣನಾದ ಹೊಸ ಟಾಟಾ ಕಂಪನಿಯ ಬಾಡಿ ಕಟ್ಟಲಾರದ ಬಿಳಿ ಬಣ್ಣದ ಲಾರಿ ಚೆಸ್ಸಿ ನೋಡಲಾಗಿ ಒಂಖಿ447264ಎ5ಕ31681 ನೇದ್ದರ ಚಾಲಕ ಕಾಲು ತಂ/ ತಾರಾಚಂದ ಸಾ|| ಕಾಂಕಡ್, ಹರಿಣಕೇಡಿ, ಇಂದೋರ (ಮಧ್ಯ ಪ್ರದೇಶ) ಈತನ ವಿರುದ್ದ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 25/2019 ಕಲಂ 279, 337, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ 78(3) ಕೆ.ಪಿ ಯಾಕ್ಟ :- ದಿನಾಂಕ: 18.01.2019 ರಂದು ಪಿರ್ಯಾಧಿದಾರರಿಗೆ ಯಕ್ತಾಪೂರ ಗ್ರಾಮದ ಗುತ್ತಿಬಸವಣ್ಣ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ 03.10 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಇಬ್ಬರು ವ್ಯಕ್ತಿಗಳು ಸಿಕ್ಕಿದ್ದು ಸದರಿಯವರಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 580/- ರೂಪಾಯಿ, 2 ಮಟಕಾ ನಂಬರ ಬರೆದ ಚೀಟಿ, 2 ಬಾಲ ಪೆನ್ನು ಸಿಕ್ಕಿದ್ದು ಸದರಿ ಮುದ್ದೇಮಾಲು ಹಾಗೂ ಆರೋಪಿತರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸುವ ಕುರಿತು ವರದಿ ನೀಡಿದ್ದು ಸದರಿ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 06/2019 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 23/2019  ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 :- ದಿನಾಂಕ:18-01-2019 ರಂದು 3-45 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಸೊಮಲಿಂಗ ಒಡೆಯವರ ಪಿ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರ ಮತ್ತು ಆರೋಪಿಯೊಂದಿಗೆ ಜಪ್ತಿಪಂಚನಾಮೆ ಹಾಗೂ ವರದಿಯೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಠಾಣೆಯ ಶ್ರೀ ಸೊಮಯ್ಯಾ ಸಿಪಿಸಿ-235 ರವರೊಂದಿಗೆ ಕೊಟ್ಟು ಕಳಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:18-01-2019 ರಂದು 1 ಎ.ಎಮ್ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಸೋಮಯ್ಯಾ ಸಿಪಿಸಿ-235 ಇವರೊಂದಿಗೆ ಗಾಂದಿ ಚೌಕ ಹತ್ತಿರ ಪೆಟ್ರೊಲೀಂಗ ಕರ್ತವ್ಯದಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೇನಂದರೆ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯ ದಡದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ದೇವಾಪೂರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಇವರನ್ನು 1-30 ಎ.ಎಂ.ಕ್ಕೆ   ಗಾಂದಿಚೌಕ ಹತ್ತಿರ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಹಾಗೂ ಠಾಣೆಯ ಸಿಬ್ಬಂದಿಯೊಂದಿಗೆ ಒಂದು ಖಾಸಗಿ ವಾಹನದಲ್ಲಿ ಹೊರಟು ದೇವಾಪೂರ ಕ್ರಾಸ ಹತ್ತಿರ 2 ಎ.ಎಂ.ಸುಮಾರಿಗೆ ಹೊರಟಾಗ ಶೇಳ್ಳಗಿ ಕ್ರಾಸ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ  ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ತಡೆದು ನಿಲ್ಲಿಸಿ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಬೀಮರಾಯ ತಂದೆ ಹಣಮಂತ ಕಂಪಾಪೂರ ವಯಾ:33 ವರ್ಷ ಜಾತಿ:ಬೇಡರ ಉ:ಡ್ರೈವರ ಸಾ:ದೇವಾಪೂರ ಅಂತಾ ತಿಳಿಸಿದ್ದು, ಸದರಿಯವರನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರಗಳನ್ನು ವಿಚಾರಿಸಲು ಮರಳು ತುಂಬಿದ ಬಗ್ಗೆ ಯಾವುದೆ ಕಾಗದ ಪತ್ರ ಇರುವದಿಲ್ಲ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯ ದಡದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ತಗೆದುಕೊಂಡು ಹೊರಟಿದ್ದು ಇರುತ್ತದೆ. ಅಂತಾ ತಿಳಿಸಿದ್ದು, ಸದರಿ ಟ್ಯಾಕ್ಟರನ್ನು ಪರೀಶಿಲಿಸಲು ಒಂದು ಸ್ವರಾಜ್ಯ ಕಂಪನಿಯ ನೀಲಿ ಬಣ್ಣದ ಟ್ಯಾಕ್ಟರ ಇದ್ದು ನಂಬರ ಕೆಎ-33 ಟಿಎ-6665 ನೇದ್ದು ಇದ್ದು ಟ್ರಾಲಿ ನಂಬರ ಇರುವದಿಲ್ಲ. ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 2 ಎ.ಎಮ್ ದಿಂದ 3 ಎ.ಎಮ್ ದ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಚಾಲಕನೊಂದಿಗೆ ಠಾಣೆಯ ಸಿಬ್ಬಂಧಿಯಾದ ಸೋಮಯ್ಯಾ ಸಿಪಿಸಿ-235 ರವರೊದಿಗೆ ಕಳಿಸಿಕೊಟ್ಟಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ 87  ಕೆ.ಪಿ ಯಾಕ್ಟ :- ದಿನಾಂಕ:18/01/2019 ರಂದು 14.40 ಗಂಟೆಯ ಸುಮಾರಿಗೆ ಆರೋಪಿತರು ಗುಳಬಾಳ ಬಸ್ ನಿಲ್ದಾಣದ ಸಮೀಪ ರೋಡ ದಂಡೆಗೆ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪರಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಸಿಬ್ಬಂದಿಯವರಾದ ಹೆಚ್.ಸಿ-130 138 ಪಿಸಿ-173, 310 ಎಪಿಸಿ-144 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತರಿಂದ 56200=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 07/2019 ಕಲಂ78(3)  ಕೆ.ಪಿ ಯಾಕ್ಟ :- ದಿನಾಂಕ:17/01/2019 ರಂದು 14.00 ಗಂಟೆಯ ಸುಮಾರಿಗೆ ಆರೋಪಿತನು ವಜ್ಜಲ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಕಲ್ಯಾಣ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 133 ಪಿಸಿ-173, 310 ಎಪಿಸಿ-144 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 6550=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 24/2019  ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 :- ದಿನಾಂಕ:18-01-2019 ರಂದು 6-15 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಸೊಮಲಿಂಗ ಒಡೆಯವರ ಪಿ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರ ಮತ್ತು ಆರೋಪಿಯೊಂದಿಗೆ ಜಪ್ತಿಪಂಚನಾಮೆ ಹಾಗೂ ವರದಿಯೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:18-01-2019 ರಂದು 3-30 ಎ.ಎಮ್ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105 ಹಾಗೂ ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಇವರೊಂದಿಗೆ ದೇವಾಪೂರ ಕ್ರಾಸ ಹತ್ತಿರ ಅಕ್ರಮ ಮರಳು ತಡೆ ಕಾಯರ್ಾಚರಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೇನಂದರೆ ಕೃಷ್ಣಾ ನದಿಯ ದಡದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ದೇವಾಪೂರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದಿದ್ದು ಸದರಿ ವಿಷಯವನ್ನು ಸಿಬ್ಬಂಧಿ ಹಾಗೂ ಪಂಚರಿಗೆ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಸಿಬ್ಬಂಧಿಯಾದ ಮನೋಹರ ಹೆಚ್ಸಿ-105 ಎಲ್ಲರೂ ಒಂದು ಖಾಸಗಿ ವಾಹನದಲ್ಲಿ ಹೊರಟು ದೇವಾಪೂರ ಗ್ರಾಮದ ರಾಮಲಿಂಗ ಗುಡಿಯ ಹತ್ತಿರ 4 ಎ.ಎಂ.ಸುಮಾರಿಗೆ ಹೋಗುತ್ತಿರುವಾಗ  ಅರಳ್ಳಳ್ಳಿ  ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ  ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ತಡೆದು ನಿಲ್ಲಿಸಿ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಚೌಡಪ್ಪ ತಂದೆ ಮಲ್ಲಪ್ಪ ಅಂಬಿಗೇರ ವಯಾ:30 ವರ್ಷ ಉ:ಡೈವರ ಸಾ:ದೇವಾಪೂರ ಅಂತಾ ತಿಳಿಸಿದ್ದು, ಸದರಿಯವರನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರಗಳನ್ನು ವಿಚಾರಿಸಲು ಮರಳು ತುಂಬಿದ ಬಗ್ಗೆ ಯಾವುದೆ ಕಾಗದ ಪತ್ರ ಇರುವದಿಲ್ಲ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯ ದಡದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ತಗೆದುಕೊಂಡು ಹೊರಟಿದ್ದು ಇರುತ್ತದೆ. ಅಂತಾ ತಿಳಿಸಿದ್ದು, ಸದರಿ ಟ್ಯಾಕ್ಟರನ್ನು ಪರೀಶಿಲಿಸಲು ಒಂದು ಜಾನ್ ಡಿರೆ ಕಂಪನಿಯ ಟ್ಯಾಕ್ಟರ ಇದ್ದು ನಂಬರ ನಂಬರ ಇರುವದಿಲ್ಲ ಇಂಜಿನ ನಂಬರ  ಕಙ3029ಆ208186  ಚೆಸ್ಸಿ ನಂಬರ-  3029ಆಕಙ04 ನೇದ್ದು ಇದ್ದು ಟ್ರಾಲಿ ನಂಬರ ಇರುವದಿಲ್ಲ. ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 4 ಎ.ಎಮ್ ದಿಂದ 5 ಎ.ಎಮ್ ದ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 25/2019  ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 :- ದಿನಾಂಕ:18-01-2019 ರಂದು 11-45 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:18-01-2019 ರಂದು 8 ಎ.ಎಮ್ ಕ್ಕೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಸೋಮಯ್ಯಾ ಸಿಪಿಸಿ- 235 ಹಾಗೂ ಡಿಸಿಬಿ ಘಟಕದ ಸಿಬ್ಬಂಧಿಯವರಾದ 3) ಶ್ರೀ ಗುಂಡಪ್ಪ ಹೆಚ್ಸಿ-115 4) ಶ್ರೀ ಶಿಮಂತ ಸಿಂಘೆ ಸಿಪಿಸಿ-114 5) ಶ್ರೀ ಹರಿನಾಥರೆಡ್ಡಿ ಸಿಪಿಸಿ-267 ಠಾಣೆಯಲ್ಲಿದ್ದಾಗ  ಖಚಿತವಾಗ ಮಾಹಿತಿ ಬಂದಿದ್ದೆನೆಂದರೆ ತಿಂಥಣಿ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ ಟಿಪ್ಪರ ವಾಹನದಲ್ಲಿ  ಅಕ್ರಮವಾಗಿ ಮರಳು ತುಂಬಿಕೊಂಡು ಶಾಂತಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಸಿಬ್ಬಂದಿಯವರೆಲ್ಲರೂ ಕೂಡಿ ಸದರಿ ಪಂಚರೊಂದಿಗೆ ಠಾಣೆಯ ಸರಕಾರಿ ಒಂದು ಖಾಸಗಿ  ವಾಹನದಲ್ಲಿ 08.30 ಎ.ಎಮ್ಕ್ಕೆ ಠಾಣೆಯಿಂದ ಹೊರಟು 09-30 ಎ.ಎಮ್ ಶಾಂತಪೂರ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಅದೇ ಸಮಯಕ್ಕೆ ತಿಂಥಣಿ ಬ್ರಿಡ್ಜ್  ಕಡೆಯಿಂದ ಒಂದು ಟಿಪ್ಪರ ವಾಹನ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ಕಂಡು ಸದರಿ ವಾಹನವನ್ನು ತಡೆದು ನಿಲ್ಲಿಸಿಸಲು ಟಿಪ್ಪರ ಚಾಲಕನು ನಮ್ಮ ಪೊಲೀಸ್ ಡ್ರೆಸ್ನ್ನು ನೋಡಿ ತನ್ನ ಟಿಪ್ಪರನ್ನು ಸೈಡಿಗೆ ನಿಲ್ಲಸಿ ಕೆಳಗೆ ಇಳಿದು ಓಡಿ ಹೋಗಿದ್ದು, ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಅದರ ನಂಬರ ಕೆಎ-33, ಎ-4775 ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಸದರಿ ಓಡಿ ಹೋದ ಚಾಲಕನ ಹೆಸರು ವೆಂಕಟೇಶ ತಂದೆ ಸಂಗಯ್ಯ ಸುಬೇದಾರ ವಯಾ : 34 ವರ್ಷ ಜಾ: ಕುರಬರ ಸಾ: ಹಿರಿಹಳ್ಳ ತಾ:ಸುರಪುರ ಅಂತ ತಿಳಿಯಿತು.ಸದರಿ ಟಪ್ಪರ ಚಾಲಕ ಮತ್ತು ಟಿಪ್ಪರ ಮಾಲೀಕ ಇಬ್ಬರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ  ಅಕ್ರಮ  ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಲಾರಿಯಲ್ಲಿ 13 ಘನ ಮೀಟರ ಮರಳು ಇದ್ದು  ಮರಳಿನ ಒಟ್ಟು ಅಂದಾಜು ಬೆಲೆ 10400=00 ರೂ ಆಗುತ್ತದೆ. ಮರಳನ್ನು ಮತ್ತು ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಜಪ್ತಿ ಪಂಚನಾಮೆಯನ್ನು 09-30 ಎ.ಎಮ್ ದಿಂದ 10-30 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ.ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಲಾರಿಯಲ್ಲಿನ ಒಟ್ಟು 10400=00 ರೂ ಕಿಮ್ಮತ್ತಿನ   ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಲಾರಿಯನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!