ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-01-2019

By blogger on ಗುರುವಾರ, ಜನವರಿ 17, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-01-2019 

ಗುರುಮಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 11/2019 ಕಲಂ: 279,337,338, 304(ಎ) ಐಪಿಸಿ :- ದಿನಾಂಕ.13.01.2019 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಫಿರ್ಯಾದಿ ಕ್ಯಾಮಾ ಶೇಖರ ಮತ್ತು ಮೃತ ಪವನಕಲ್ಯಾಣ ಇಬ್ಬರು ಕೂಡಿಕೊಂಡು ಮೈಲಾಪೂರಕ್ಕೆ ತಮ್ಮ ಮೋಟಾರು ಸೈಕಲ್ ಟಿ.ಎಸ್.-06-ಇಇ-2740  ನೇದ್ದರ ಮೇಲೆ ನಾರಾಯಣಪೇಠ ಕಡೆಯಿಂದ ಅನಪೂರ ಮಾರ್ಗವಾಗಿ ರಾಜ್ಯ ಹೇದ್ದಾರಿ ಸಂಖ್ಯೆ 127 ನೇದ್ದರ ಮುಖಾಂತರ ಹೋಗುತ್ತಿದ್ದಾಗ ಸದರಿ ಮೋಟಾರು ಸೈಕಲ್ನ್ನು ಮೃತ ಪವನಕಲ್ಯಾಣ ಈತನು ಚಲಾಯಿಸುತ್ತಿದ್ದು ಫಿರ್ಯಾದಿ ಕ್ಯಾಮಾ ಶೇಖರ ಈತನು ಹಿಂಬದಿಯಲ್ಲಿ ಕುಳೀತಿದ್ದನು. ಕಿ.ಮಿ ಕಲ್ಲು ಸಂಖ್ಯೆ 42 ರಿಂದ ಸುಮಾರು 350 ಮೀಟರ ದೂರದಲ್ಲಿ ಯಾದಗಿರಿ ಕಡೆಗೆ ಹೋಗುವ ದಾರಿಯಲ್ಲಿ ರಸ್ತೆಯ ತಿರುವಿನಲ್ಲಿ ಯಾದಗಿರಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ ನಂ.ಕೆ.ಎ-33-ಎಫ್-0317 ನೇದ್ದರ ಚಾಲಕ ಬಸ್ನ್ನು ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ಬಂದು ಅನಪೂರ ಕಡೆಯಿಂದ ಬರುತ್ತಿದ್ದ ಸದರಿ ಮೋಟಾರು ಸೈಕಲ್ಗೆ ಡಿಕ್ಕಿಸಿದ್ದರ ಪರಿಣಾಮವಾಗಿ ಮೃತ ಪವನ ಕಲ್ಯಾಣ ಈತನಿಗೆ ತಲೆಗೆ ಮತ್ತು ಕಾಲಿಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಅಲ್ಲಲ್ಲಿ ತರಚಿದ ಸಾಧಾ ಸ್ವರೂಪದ ಗಾಯಗಳಾಗಿದ್ದರಿಂದ ಸದರಿ ಗಾಯಾಳುವನ್ನು ದಿನಾಂಕ 13.01.2019 ರಂದು ಉಪಚಾರಕ್ಕಾಗಿ ಯಶೋಧ ಆಸ್ಪತ್ರೆ, ಹೈದ್ರಾಬಾದಗೆ ಸೇರಿಕೆ ಮಾಡಿದ್ದು ಆ ಬಗ್ಗೆ ಫಿರ್ಯಾದಿ ದಿನಾಂಕ 14.01.2019 ರಂದು ಠಾಣೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 11/2019 ಕಲಂ: 279,337,338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ. ನಂತರ ಸದರಿ ಮೃತ ಪವನಕಲ್ಯಾಣ ಈತನು ದಿನಾಂಕ 13.01.2019 ರಂದು ರಿಂದ ದಿನಾಂಕ 15.01.2019 ರ ಸಂಖ್ಯೆ 7:20 ಗಂಟೆಯ ವರೆಗೆ ಸದರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 13.01.2019 ರಂದು ಬೆಳಿಗ್ಗೆ 11:00 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆದ ಗಾಯಗಳಿಂದ ಮೃತಪಟ್ಟಿದ್ದು ಕಾರಣ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮುಖಾಂತರ ನಿವೇದಿಸಿಕೊಳ್ಳಲಾಗಿದೆ ಅಂತಾ ಮಾನ್ಯರವರಲ್ಲಿ ವರದಿ ಸಲ್ಲಿಸುತ್ತಿದ್ದು ಅದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ 32, 34 ಕೆ.ಇ. ಆ್ಯಕ್ಟ :- ದಿನಾಂಕ 16/01/2019 ರಂದು 10-15 ಎ.ಎಮ್ ಕ್ಕೆ ಆರೋಪಿತನು ತನ್ನ ಹೊಟೆಲ ಮುಂದೆ ಅನದೀಕ್ರತವಾಗಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಮ್.ಎಲ್ ದ 126 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ  30.32/- ರೂ ಯಂತೆ ಒಟ್ಟು  126 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಕಿಮ್ಮತ್ತು 3820.32/- ರೂ ಕಿಮ್ಮತ್ತಿನ ಪಾಕೇಟಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 11/2019 ಕಲಂ 143, 147, 341, 323, 324, 504, 506 ಸಂ 149 ಐಪಿಸಿ :- ದಿನಾಂಕ 15-01-2019 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾಧಿದಾರನು ತಮ್ಮ ಹೊಲಕ್ಕೆ ಹೋಗುವಾಗ ಆರೋಪಿತರೆಲ್ಲರೂ ಕೂಡಿಕೊಂಡು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಯನ್ನು ಹಿಡಿದುಕೊಂಡು ಬಂದು ಹಳೆ ದ್ವೇಶದಿಂದ ಫಿರ್ಯಾಧಿಯ ಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಏ ಚೋದು ಸೂಳೇ ಮಗನೇ ಇ ಹಿಂದೆ ನೀನು ನಿಮ್ಮ ಮನೆಯ ಹೆಣ್ಣು ಮಗಳ ಮಯರ್ಾದೆ ಹಾಳು ಮಾಡಿದ್ದಿನಿ ಅಂತಾ ತಾಂಡಾದಲ್ಲಿ ನ್ಯಾಯ ಪಂಚಾಯಿತಿ ಮಾಡಿಸಿ ನಮ್ಮ ಮನೆಯ ಮಯರ್ಾದೆ ಹಾಳು ಮಾಡಿದ್ದಿ ಅಂತಾ ಅವಾಚ್ಯವಾಗಿ ಬೈದು ಜಗಳ ತೆಗೆದು, ಕೈಯಿಂದ, ಕಲ್ಲಿನಿಂದ ಮತ್ತು ಬಡಿಗೆಯಿಂದ, ಫಿರ್ಯಾದಿಗೆ ಹೊಡೆಬಡೆ ಮಾಡಿ ಗುಪ್ತಗಾಯ, ಗಳು ಮಾಡಿ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 12/2019 ಕಲಂ: 279, 338 ಐ.ಪಿ.ಸಿ :- ದಿನಾಂಕ 16/01/2019 ರಂದು ಸಾಯಂಕಾಲದ ಸುಮಾರಿಗೆ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಕೆ.ಎ-50-ಎಚ್.-427 ನೆದ್ದರ ಮೇಲೆ ತಮ್ಮೂರಿನಿಂದ ಯಾದಗಿರಿಗೆ ಬಂದು ತನ್ನ ವೈಯಕ್ತಿಕ ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವಾಗ ಮುಂಡರಗಿ-ರಾಮಸಮುದ್ರ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಬ್ರಿಡ್ಜಗೆ ಮೋಟಾರ ಸೈಕಲ್ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಆರೋಪಿತನ ತಲೆಗೆ ಭಾರಿ ರಕ್ತಗಾಯ, ಗುಪ್ತಗಾಯ, ತರಚಿದಗಾಯ ಆಗಿರುತ್ತವೆ ಅಂತಾ ಪ್ರಕರಣ ದಾಖಲು ಆಗಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 18/2019 ಕಲಂ 363 ಐಪಿಸಿ :- ದಿನಾಂಕ:16-01-2019 ರಂದು 10 ಎ.ಎಂ.ಕ್ಕೆ ಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿರುವಾಗ ಶ್ರೀ ಮಹಾದೇವಪ್ಪತಂದೆ ಸಿದ್ದಯ್ಯಾ ಮೂಲಿಮನಿ ಸಾ:ಸಿದ್ದಾಪೂರ ಇವರುಠಾಣೆಗೆ ಬಂದುಒಂದು ಗಣಕೀಕರಿಸಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನಗೆ ಮೂವರುಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಮೂವರುಗಂಡು ಮಕ್ಕಳಲ್ಲಿ ಸಣ್ಣವನಾದ ಬಲಬೀಮ ತಂದೆ ಮಹಾದೇವಪ್ಪ ಮೂಲಿಮನಿ ವಯಾ:15 ವರ್ಷಈತನಿಗೆ ಹುಟ್ಟಿದ 9 ತಿಂಗಳಿಂದ ಕಿಡ್ನಿತೊಂದರೆಇದ್ದು ಆಗಾಗ ಕಿಡ್ನಿ ಮೇಲೆ ಬಾವು ಬಂದುಕಾಲ್ಮಡಿಕಟ್ಟಾಗಿ ಮೈಯೆಲ್ಲಾ ಬಾವು ಬರುತ್ತಿತ್ತು. ಅವನಿಗೆ ಬೆಂಗಳೂರಿನ ಇಂದ್ರಾಗಾಂದಿ ಆಸ್ಪತ್ರೆಯಲ್ಲಿತೋರಿಸುತ್ತಾ ಬಂದಿದ್ದು, ಆರಾಮವಾಗಿದ್ದನು. ಹೀಗಿರುವಾಗ ದಿನಾಂಕ:25-12-2018 ರಂದು ನಾನು ಕೂಲಿಕೆಲಸಕ್ಕೆ ಹೋದಾಗ ಮಗನಾದ ಬಲಬೀಮ ಈತನು ಮನೆಯಲ್ಲಿದ್ದನು. ನಂತರ ನಾನು ನನ್ನ ಹೆಂಡತಿಯಾದ ಮಲ್ಲಮ್ಮಇನ್ನೊಬ್ಬ ಮಗನಾದದೇವಪ್ಪಎಲ್ಲರೂ ಕೂಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ 6 ಗಂಟೆಗೆ ಮನೆಗೆ ಬಂದಾಗ ಮಗ ಮನೆಯಲ್ಲಿಇರಲಿಲ್ಲ. ನಾವು ಎಲ್ಲಾದರೂ ಹೋರಗೆ ಹೋಗಿರಬಹುದುರಾತ್ರಿ ಬರುತ್ತಾನೆಅಂತಾ ಸುಮ್ಮನಿದ್ದೆವುಅಂದುರಾತ್ರಿ 10 ಗಂಟೆಯಾದರೂ ಮನೆಗೆ ಬರದೆಇದ್ದಾಗಊರಲ್ಲಿಅಲ್ಲಿಇಲ್ಲಿ ಹುಡುಕಾಡಿದರೂಎಲ್ಲಿ ಮಾಹಿತಿ ಸಿಗಲಿಲ್ಲ. ಅಂದಿನಿಂದ ಇಂದಿನವರೆಗೂಎಲ್ಲಾ ನಮ್ಮ ಸಂಬಂಧಿಕರಲ್ಲಿ ವಿಚಾರ ಮಾಡಿ ಹುಡುಕಾಡಿದರು ಮಗನ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ದಿನಾಂಕ:25-12-2018 ರಂದು 4 ಪಿ.ಎಂ.ಕ್ಕೆ ಮಗ ಮನೆಯಿಂದ ಹೋಗಿದ್ದುಇರುತ್ತದೆ. ಮಗನಾದ ಬಲಬೀಮ ಈತನುಎತ್ತರ 4.5'' ಪೀಟ, ಕೆಂಪು ಬಣ್ಣ, ದುಂಡು ಮುಖ ಹೊಂದಿದ್ದು, ಹಸಿರು ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ಬಲಗಡೆ ಹಸ್ತದ ಮೇಲೆ ಸುಟ್ಟಗಾಯಇರುತ್ತದೆ. ನಾವು ಎಲ್ಲಾಕಡೆ ಹುಡುಕಾಡಿತಡವಾಗಿಠಾಣೆಗೆ ಬಂದಿದ್ದುಇರುತ್ತದೆ. ಸದರಿ ನನ್ನ ಮಗನನ್ನುಯರೋಯಾವುದೋಉದ್ದೇಶಕ್ಕಾಗಿಅಪಹರಣ ಮಾಡಿಕೊಂಡು ಹೋಗಿದ್ದುಇರುತ್ತದೆ. ಸದರಿಅಪಹರಣ ಮಾಡಿಕೊಂಡು ಹೋದ ಬಗ್ಗೆ  ಪ್ರಕರಣ ದಾಖಲಿಸಿ ಮಗನ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟ ಸಾರಾಂಶದ ಮೇಲಿಂದಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 19/2019 ಕಲಂ 279,338 ಐಪಿಸಿ ಸಂಗಡ 187 ಐ.ಎಂ.ವಿಕಾಯ್ದೆ :- ದಿನಾಂಕ: 16-01-2019 ರಂದು 2-15 ಪಿ.ಎಮ್. ಕ್ಕೆ ಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿರುವಾಗ  ಶ್ರೀ ಹಣಮಂತಅಂತರಗಂಗಿ ಸಾ|| ಕುಂಭಾರಪೇಠ್ಇವರುಠಾಣೆಗೆ ಬಂದುಒಂದುಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಹೀಗಿದ್ದು ದಿನಾಂಕ:13/01/2019 ರಂದು ಬೆಳಿಗ್ಗೆ ಸುಮಾರಿಗೆ ನನ್ನ ಮಗನಾದ ಮಹೇಶ ತಂದೆ ಹಣಮಂತಅಂತರಗಂಗಿ ವಯಾ:19 ವರ್ಷಈತನುರುಕುಂಪೇಠೆಯಅಯ್ಯಪ್ಪಸ್ವಾಮಿಜಾತ್ರೆಗೆ ಹೋಗುತ್ತೆನೆಅಂತಾತನ್ನ ಗೆಳೆಯನ ಮೋಟಾರ ಸೈಕಲ್ ನಂ: ಕೆ.ಎ-33 ಕೆ-1157 ನೇದ್ದನ್ನುತಗೆದುಕೊಂಡು ಮನೆಯಿಂದ ಹೋಗಿದ್ದನು. ಅಂದಾಜು 4-45 ಪಿ.ಎಂ. ಸುಮಾರಿಗೆ ಮನೆಯಲ್ಲಿರುವಾಗಕುಂಬಾರಪೇಠದತಿರುಪತಿತಂದೆರಂಗಪ್ಪಅನ್ವರಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಿಮ್ಮ ಮಗನಾದ ಮಹೇಶ ಈತನುಅಯ್ಯಪ್ಪಸ್ವಾಮಿಜಾತ್ರೆ ಮುಗಿಸಿಕೊಂಡು ಸುರಪುರ-ಬೆಂಗಳೂರ ಬೈಪಾಸ ಮುಖ್ಯರಸ್ತೆಯಕುಂಬಾರ ಪೇಠದ ಸೂಯರ್ೊದಯ ವೇ ಬ್ರಿಡ್ಜ ಹತ್ತಿರಕುಂಬಾರ ಪೇಠಕಡೆಗೆ 4-30 ಪಿ.ಎಂ. ಸುಮಾರಿಗೆ ಮೊಟಾರ ಸೈಕಲ್ ನಡೆಸಿಕೊಂಡು ಬರುತ್ತಿರುವಾಗಕುಂಬಾರ ಪೇಠಕಡೆಯಿಂದಒಂದು ಲಾರಿ ನಂಬರ ಕೆಎ-32 ಸಿ-5096 ನೇದ್ದರ ಚಾಲಕನು ತನ್ನ ಲಾರಿಯನ್ನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದವನೆ ನಿಮ್ಮ ಮಗ ಮಹೇಶ ಈತನ ಮೊಟಾರ ಸೈಕಲ್ಗೆಎದುರಿನಿಂದಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು, ಆಗ ಅದೇರಸ್ತೆಯ ಮುಖಾಂತರ ನಡೆದುಕೊಂಡು ಹೋಗುತ್ತಿದ್ದ ನಾನು  ರಂಗಪ್ಪತಂದೆ ಬೀಮಣ್ಣ ಹರಪನಳ್ಳಿ ಇಬ್ಬರುಘಟನೆಯನ್ನು ನೋಡಿ ಮಹೇಶನನ್ನು ಎಬ್ಬಿಸಿ ನೋಡಲು ಅವನ ಎಡಗೈಗೆ ಬಲಗೈ ಭಾರಿರಕ್ತಗಾಯವಾಗಿದ್ದು  ಬಲಗಾಲ ತೊಡೆಯ ಹತ್ತಿರ ಎಲುಬು ಮುರಿಂದಂತಾಗಿ ಭಾರಿರಕ್ತಗಾಯವಾಗಿದ್ದುಇರುತ್ತದೆ. ಬೆಗ ಬನ್ನಿರಿಅಂತಾ ವಿಷಯ ತಿಳಿಸಿದ ಕೂಡಲೆ ನಾನು ಘಟನಾ ಸ್ಥಳಕ್ಕೆ ಹೋಗಿ ನೋಡಲು ಮಗ ಮಹೇಶ ಈತನಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದು, ಮೋಟರ್ ಸೈಕಲ್ಜಖಂಗೊಂಡಿದ್ದುಇರುತ್ತದೆ. ಅಪಘಾತ ಮಾಡಿದ ಲಾರಿಅಲ್ಲೆ ನಿಂತಿದ್ದು ನೋಡಿದೆನು. ನಂತರಗಾಯಗೊಂಡ ಮಗ ಮಹೇಶನನ್ನುಕೂಡಲೆಒಂದು ಖಾಸಗಿ ವಾಹನದಲ್ಲಿಕರೆದುಕೊಂಡುಉಪಚಾರಕುರಿತು ಸರಕಾರಿಆಸ್ಪತ್ರೆ ಸುರಪುರದಲ್ಲಿಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನಉಪಚಾರಕುರಿತು ಕಲಬುರಗಿಯಕಾಮರೆಡ್ಡಿಆಸ್ಪತ್ರೆ ಸೇರಿಕೆ ಮಾಡಿದ್ದುಇರುತ್ತದೆ. ನನ್ನ ಮಗನ ಉಪಚಾರ ಕಾಲಕ್ಕೆ ಅವನ ಹತ್ತಿರಯಾರುಇರದಕಾರಣ ನಾನು ಅವನ ಹತ್ತಿರಇದ್ದುಉಪಚಾರ ಮಾಡಿಸಿ ಠಾಣೆಗೆತಡವಾಗಿ ಬಂದಿದ್ದುಇರುತ್ತದೆ. ಸದರಿಅಪಘಾತ ಮಾಡಿದ ಲಾರಿ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ ಲಾರಿ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದುಇರುತ್ತದೆ. ಅಪಘಾತ ಮಾಡಿದ ಲಾರಿ ಚಾಲಕನ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ. ಅಂತಾಕೊಟ್ಟ ಸಾರಾಂಶದ ಮೇಲಿಂದಗುನ್ನೆದಾಖಲು ಮಾಡಿಕೊಂಡುತನಿಖೆಕೈಗೊಂಡಿದ್ದುಇರುತ್ತದೆ.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 03/2019 ಕಲಂ: 32,34 ಕೆ.ಇ ಎಕ್ಟ್ 1965 :- ದಿನಾಂಕ: 16/01/2019 ರಂದು 7-30 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 16/01/2019 ರಂದು ಸಾಯಂಕಾಲ ನಾನು ಮತ್ತು ರಾಜಕುಮಾರ ಹೆಚ್.ಸಿ 179, ಮಹೇಂದ್ರ ಪಿಸಿ 254 ಮತ್ತು ದೇವಿಂದ್ರ ಪಿಸಿ 86 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಖಾನಾಪೂರ ಗ್ರಾಮದ ಯಾದಗಿರಿ ಶಹಾಪೂರ ಮೇನ ರೋಡ ವೆಂಕಟೇಶ್ವರ ಚೌಕ ಹತ್ತಿರ ಖಾಲಿ ಸ್ಥಳದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಪೌಚುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 5-30 ಪಿ.ಎಮ್ ಕ್ಕೆ ಖಾನಾಪೂರ ಗ್ರಾಮದ ಬಸ್ ಸ್ಟಾಪ ಹತ್ತಿರ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಸಿದ್ದಪ್ಪ ತಂದೆ ಯಂಕಪ್ಪ ಈತನ ಖಾನಾವಳಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 40/- ರೂ. ಗೆ ಒಂದು ಪೌಚು ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿಯಬೇಕು ಎನ್ನುವಷ್ಟರಲ್ಲಿ ಆ ಮನುಷ್ಯನು ಅಲ್ಲಿಂದ ತಪ್ಪಿಸಿಕೊಂಡು ಸಂದಿಯಲ್ಲಿಂದ ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಭೀಮರಾಯ ತಂದೆ ಯಂಕಪ್ಪ ತಿಪ್ಪನಟಗಿ, ವ:40, ಜಾ:ಉಪ್ಪಾರ, ಉ:ಹೊಟೆಲ್ ವ್ಯಾಪಾರ ಸಾ:ಖಾನಾಪೂರ ಎಂದು ಹೇಳಿದನು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ಗೊಬ್ಬರ ಚೀಲದಲ್ಲಿ 90 ಎಮ್.ಎಲ್ ದ ಓರಿಜಿನಲ್ ಚಾಯ್ಸ್ ವ್ಹಿಸ್ಕಿ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ 90 ಎಮ್.ಎಲ್ ದ ಒಟ್ಟು 54 ಪೌಚುಗಳು ಇದ್ದು, ಒಟ್ಟು 90*54=4 ಲೀಟರ್ 860 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 30.32*54=1637.28=00 ರೂ. ಗಳು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು 5-30 ಪಿಎಮ್ ದಿಂದ 6-30 ಪಿಎಮ್ ದವರೆಗೆ ಪಂಚನಾಮೆ ಜರುಗಿಸಿ, 7-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ, ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 03/2019 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!