ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-01-2019
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 04/2019 ಕಲಂ 78(3) ಕೆ.ಪಿ ಎಕ್ಟ್ :- ದಿನಾಂಕ:14/01/2019 ರಂದು 8-30 ಪಿಎಮ್ ಕ್ಕೆ ಶ್ರೀ ಅಂಬಾರಾಯ ಕಮಾನಮನಿ ಪಿ.ಐ ಡಿಸಿಬಿ ವಿಶೇಷ ಪೊಲೀಸ್ ಠಾಣೆ ಯಾದಗಿರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ನಾನು 5-30 ಪಿಎಂಕ್ಕೆ ಡಿಸಿಬಿ ವಿಶೇಷ ಪೊಲೀಸ್ ಠಾಣೆ ಜಿಲ್ಲಾ ಪೊಲೀಸ್ ಕಾಯರ್ಾಲಯದಲ್ಲಿದ್ದಾಗ ಯಾದಗಿರಿಯ ಸುಭಾಸ ಚೌಕ ಹತ್ತಿರ ಯಾರೋ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರು 5-45 ಪಿಎಂಕ್ಕೆ ಯಾದಗಿರಿ ನಗರ ಪೊಲಿಸ್ ಠಾಣೆಗೆ ಬಂದು ಶ್ರೀ ಬಾಪುಗೌಡ ಪಾಟೀಲ ಪಿ.ಎಸ್.ಐ(ಕಾ.ಸು) ನಗರ ಪೊಲೀಸ್ ಠಾಣೆ ರವರಿಗೆ ವಿಷಯ ತಿಳಿಸಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಹೋಗಿ 7-00 ಪಿಎಂಕ್ಕೆ ದಾಳಿ ಮಾಡಿ ಮೂರು ಜನರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರುಗಳು 1) ರಾಘವೇಂದ್ರ ತಂ. ಪ್ರಕಾಶರಾವ ದರ್ಶನಕರ ವಃ27 ಜಾಃ ಮರಾಠ ಉಃಫೈನಾನ್ಸ ಕೆಲಸ ಸಾಃ ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವರಿಗೆ ಪೊಲೀಸರು ಚೆಕ್ ಮಾಡಲಾಗಿ ಈತನ ಹತ್ತಿರ 2600-00 ರೂ. ನಗದು ಹಣ 2) ಒಂದು ಬಾಲ ಪೆನ್ ಅಂ.ಕಿ.00-00 3) ಒಂದು ಮಟಕಾ ಚೀಟಿ ಅ.ಕಿ.00=00 ರೂ. ಸಿಕ್ಕಿದ್ದು ಮತ್ತು 2) ಬಾಲರಾಜ ತಂ. ಕೃಷ್ಣ ಡೈಜೋಡ್ ವಃ 26 ಜಾಃ ಮರಾಠ ಉಃಕೂಲಿಕೆಲಸ ಸಾಃ ಬಸವೇಶ್ವರ ನಗರ ಯಾದಗಿರಿ ಅಂತಾ ತಿಳಿಸಿದ್ದು ಈತನ ಹತ್ತಿರ 1)ನಗದು ಹಣ 2860=00 ರೂ. ಗಳು 2) ಒಂದು ಬಾಲ ಪೆನ್ ಅಂ.ಕಿ.00-00 3)ಒಂದು ಮಟ್ಕ ಚೀಟಿ ಅ.ಕಿ.00-00 ಸಿಕ್ಕಿದ್ದು, 3) ರಾಮಚಂದ್ರ ತಂ. ಲಕ್ಷ್ಮಣ ಇಂಗಳೆ ವಃ 32 ಜಾಃ ಮರಾಠ ಉಃ ಖಾಸಗಿ ಕೆಲಸ ಕೆಲಸ ಸಾಃ ಇಂದಿರಾ ನಗರ ಯಾದಗಿರಿ ಈತನ ಹತ್ತಿರ 1) 2160-00 ನಗದು ಹಣ 2) ಒಂದು ಬಾಲ ಪೆನ್ 3) ಒಂದು ಮಟಕಾ ಚೀಟಿ ಸಿಕ್ಕಿದ್ದು ಒಟ್ಟು 7620-00 ರೂ ನಗದು ಹಣ ಮತ್ತು ಮೂರು ಬಾಲ ಪೆನ್ಗಳು, ಮೂರು ಮಟಕಾ ಚೀಟಿಗಳನ್ನು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಂಚನಾಮೆಯನ್ನು 7 ಪಿಎಂ ದಿಂದ 8-00 ಪಿಎಂ ದವರೆಗೆ ಮುಗಿಸಿ ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 8-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ನನ್ನ ಜ್ಞಾಪನದೊಂದಿಗೆ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಕ್ರಮ ಕೈಕೊಳ್ಳಲು ಸೂಚಿಸಿದ್ದು ಇರುತ್ತದೆ. ಈ ಬಗ್ಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 15/01/2019 ರಂದು 3-15 ಪಿಎಮ್ ಕ್ಕೆ ಪಿಸಿ 398 ರವರು ಪರವಾನಿಗೆ ತಂದು ಹಾಜರ ಪಡಿಸಿದ್ದರಿಂದ ನ್ಯಾಯಾಲಯದ ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ;04/2019 ಕಲಂ 78(3) ಕೆ ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 05/2019 ಕಲಂ 379 ಐಪಿಸಿ :- ದಿನಾಂಕ.15/01/2019 ರಂದು 5 ಪಿಎಂಕ್ಕೆ ಪಿರ್ಯಾದಿ ಶ್ರೀ ಹಣಮಂತ ತಂ. ನಿಂಗಪ್ಪ ನಾಟೇಕಾರ ವಃ29 ಜಾಃ ಬೇಡರು ಉಃವಿಸ್ಯಾಥರ್ಿ ಸಾಃ ಜೀನಕೇರಾ ತಾಃ ಜಿಃ ಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಅಜಿಯನ್ನು ಕೊಟ್ಟಿದ್ದು ಸಾರಾಂಶವೆನೆಂದರೆ, ನಾನು ಬಿ.ಎಡ್ ವಿದ್ಯಾಭ್ಯಾಸ ಮಾಡಿಕೊಂಡು ಯಾದಗಿರಿ ನಗರದ ಬಸವೇಶ್ವರ ನಗರದಲ್ಲಿ ರೂಂ ಬಾಡಿಗೆ ಮಾಡಿಕೊಂಡು ಇರುತ್ತೇನೆ ನನ್ನದೊಂದು ಹಿರೋ ಸ್ಪ್ಲೆಂಡರ ಪ್ಲಸ್ ನಂ.ಕೆಎ-33-ಕ್ಯೂ-1532 ಇರುತ್ತದೆ. ದಿನಾಂಕ 13/01/2019 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಮೋ.ಸೈಕಲನ್ನು ನಾನು ಬಾಡಿಗೆ ಇದ್ದ ರೂಂ ಮುಂದುಗಡೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದೆನು. ನಂತರ ದಿನಾಂಕ.14/01/2019 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನಾನು ಎದ್ದು ರೂಂ ಮುಂದೆ ಬಂದು ನೋಡಿದಾಗ ನನ್ನ ಮೋ.ಸೈಕಲ್ ಕಾಣಿಸಲಿಲ್ಲಾ ನಂತರ ಸುತ್ತ ಮುತ್ತ ನೋಡಲಾಗಿ ಎಲ್ಲಯೂ ಕಾಣಿಸಲಿಲ್ಲಾ. ನಂತರ ನಾನು ನಮ್ಮ ಚಿಕ್ಕಮ್ಮನ ಮಗನಾದ ನಾಗರಾಜ ತಂ. ದೇವಿಂದ್ರಪ್ಪ ನಾಯಕ ಈತನಿಗೆ ವಿಷಯ ತಿಳಿಸಿದಾಗ ಅವನು ನನ್ನಲ್ಲಿಗೆ ಬಂದನು ಇಬ್ಬರೂ ಕೂಡಿಕೊಂಡು ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಗಲಿಲ್ಲಾ. ನನ್ನ ಮೋ.ಸೈಕಲನ್ನು ಯಾರೋ ಕಳ್ಳರು ನನ್ನ ಮೋಟರ್ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರಬಹುದು. ಇಲ್ಲಿಯ ವರೆಗೆ ನಾನು ಅಲ್ಲಿ ಇಲ್ಲಿ ಹುಡುಕಾಡಿದ್ದು ನನ್ನ ಮೋಟರ್ ಸೈಕಲ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ಅಜರ್ಿ ನೀಡಿರುತ್ತೇನೆ. ಸದರಿ ಘಟನೆ ದಿನಾಂಕ.13/01/2019 ರಂದು ರಾತ್ರಿ 8-30 ಗಂಟೆಯಿಂದ ದಿನಾಂಕ.14/01/2019 ರಂದು ಬೆಳಿಗ್ಗೆ 5-00 ಗಂಟೆಯ ಮದ್ಯೆದ ಅವದಿಯೊಳಗೆ ಜರುಗಿದ್ದು ಇರುತ್ತದೆ.ನನ್ನ ಹಿರೋ ಸ್ಪ್ಲೆಂಡರ ಪ್ಲಸ್ ಸಿಲ್ವರ ಕಲರ್ ಮೋಟರ್ ಸೈಕಲ ನಂ.ಏಂ 33 ಕಿ 1532, ಇಟಿರಟಿಜ ಓಠ- ಊಂ10ಇಎಆಊಈ48001, ಅಚಿ ಓಠ- ಒಃಐಊಂ10ಂಒಆಊಈ49097, ಅಂ.ಕಿ..25,000/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನ್ನ ಮೋಟರ್ ಸೈಕಲ ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.05/2019 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ 143, 147, 341, 323, 324, 504, 506 ಸಂ 149 ಐಪಿಸಿ :- ದಿನಾಂಕ 15-01-2019 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾಧಿದಾರನ ತಂದೆ ಮತ್ತು ಅವನ ಮಗ ಇಬ್ಬರೂ ತಮ್ಮ ಹೊಲಕ್ಕೆ ಹೋಗುವಾಗ ಆರೋಪಿತರೆಲ್ಲರೂ ಕೂಡಿಕೊಂಡು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಯನ್ನು ಹಿಡಿದುಕೊಂಡು ಬಂದು ಹಳೆ ದ್ವೇಶದಿಂದ ಫಿರ್ಯಾಧಿಯ ತಮ್ಮನನ್ನು ಮತ್ತು ಮಗನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಏ ಚೋದು ಸೂಳೇ ಮಗನೇ ಇ ಹಿಂದೆ ನೀನು ನಮ್ಮ ಮನೆಯ ಹೆಣ್ಣು ಮಗಳ ಮಯರ್ಾದೆ ಹಾಳು ಮಾಡಿದ್ದಿ ಅಂತಾ ಅವಾಚ್ಯವಾಗಿ ಬೈದು ಜಗಳ ತೆಗೆದು, ಕೈಯಿಂದ, ಕಲ್ಲಿನಿಂದ ಮತ್ತು ಬಡಿಗೆಯಿಂದ, ಫಿರ್ಯಾದಿಯ ತಮ್ಮನಿಗೆ ಮತ್ತು ಮಗನೆಗೆ ಹೊಡೆಬಡೆ ಮಾಡಿ ಗುಪ್ತಗಾಯ, ರಕ್ತಗಾಯ ಮತ್ತು ತರಚಿದ ಗಾಯಗಳು ಮಾಡಿ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
ಶಹಾಪೂರು ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ 15 [ಎ] 32 [3] ಕೆ.ಇ ಆಕ್ಟ :- ದಿನಾಂಕ 15/01/2019 ರಂದು ಮದ್ಯಾಹ್ನ 15-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 12-10 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಚೌಡಯ್ಯನ ನಗರ ಹಳಿ ಸಗರ ಏರಿಯಾದಲ್ಲಿ ಆರೋಪಿ ಸಾಯಬನ್ಣ ತಂದೆ ಶಿವಪ್ಪ ಅಪ್ಲೆ ಈತನು ತನ್ನ ಚಹಾ ಹೋಟೆಲ್ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 1) 90 ಎಮ್.ಎಲ್.ನ 9 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯದ ಪಾಕೇಟಗಳು ಅಂ.ಕಿ 272=00 ರೂಪಾಯಿ 88 ಪೈಸೆ. 2) 5 ಖಾಲಿ 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಪಾಕೇಟ್ ಅಂ.ಕಿ 00-00 3) 6 ಪ್ಲಾಸ್ಟೀಕ್ ಗ್ಲಾಸ್ ಅಂ.ಕಿ 00-00 ನೇದ್ದವುಗಳನ್ನು ಮತ್ತು ಒಂದು ಪ್ರತ್ಯಕವಾಗಿ 90 ಎಮ್.ಎಲ್ ನ್ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಪರೀಕ್ಷೆ ಕುರಿತು ಒಂದು ಬಿಳಿ ಅರಿವೆಯಲ್ಲಿ ಹಾಕಿ ಕೊಲೆದು ಎಸ್.ಹೆಚ್.ಪಿ ಅರಗಿನ ಶಿಲ್ ಮಾಡಿ ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 13-45 ಗಂಟೆಯಿಂದ 14-45 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 22/2019 ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ, 143,147,323,324, 504,506 ಸಂ. 149 ಐ.ಪಿ.ಸಿ :- ದಿನಾಂಕ:15/01/2019 ರಂದು 07.10 ಪಿಎಂ ಕ್ಕೆ ಶ್ರೀ. ಶಿವಶಂಕರ ತಂದೆ ಬಸವಂತ್ರಾಯಆಂದೇಲಿ ವ:38 ಉ:ಖಾಸಗಿ ಕೆಲಸ ಜಾ:ಲಿಂಗಾಯತ ಸಾ:ಕೋರವಾರ ತಾ:ಸಿಂದಗಿ ಜಿ:ವಿಜಯಪೂರ ಇವರುಠಾಣೆಗೆ ಹಾಜರಾಗಿಒಂದುಕನ್ನಡದಲ್ಲಿಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು, ಅದರ ಸಾರಂಶಏನಂದರೆ, ಸುಮಾರುಒಂದು ವರ್ಷದ ಹಿಂದ ನನ್ನ ಮತ್ತು ನಮ್ಮಊರಿನರಫಿಕ ಮತ್ತು ಖಾಸಿಂ ಬಾರಿ ಚೋರಗಸ್ತಿ ಮತ್ತುಇತರರ ನಡುವೆಕೇಸ್ ಗಳು ಆಗಿದ್ದು ಆ ವಿಷಯದಲ್ಲಿಆವಾಗಿನಿಂದ ಸದರಿಯವರು ನಮ್ಮಜೋತೆ ವೈಷ್ಯಮ್ಯ ಬೆಳಸಿಕೊಂಡಿದ್ದರು. ಹೀಗಿದ್ದು ನಿನ್ನೆ ದಿನಾಂಕ:14/01/2019 ರಂದು ಬೆಳಿಗ್ಗೆ 10.00 ಎಎಂ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರ ನಮ್ಮ ಮನೆಯಿಂದ ಬಜಾರಕಡೆಗೆ ಬರುತ್ತಿದ್ದಾಗ ನಮ್ಮೂರಿನತಾಯಿರುತಂದೆ ಬಾರಿ ಚೋರಗಸ್ತಿ ಈತನು ನನ್ನ ಮುಡ್ಡಿಗೆಡಿಕ್ಕಿಯಾದ ಆಗ ನಾನು ಹೀಗೇ ಏಕೆ ? ನೊಡಿಕೊಂಡು ಬರಲು ಆಗುವದಿಲ್ಲವೇನುಅಂತಾಅಂದಾಗ ಸದರಿತಾಯಿರುಈತನು ನೀನು ಕಣ್ಣು ಮುಚ್ಚಿಕೊಂಡು ಬರುತ್ತೇನು ಸೂಳೆ ಮಗನೆ ಅಂತಾಅವಾಚ್ಯವಗಾಗಿ ಬೈಯತೊಡಗಿದ ಆಗ ನಾನು ನೀನು ಹೊಲಸು ಮಾತನಾಡ ಬೇಡ ಹೋಗು ಅಂತಾ ಹೇಳಿ ನಾನು ಬಜಾರಕಡೆಗೆ ಹೋದೆನು. ನಂತರ ನಾನು 10.30 ಎಎಂ ಸುಮಾರಿಗೆ ಮರಳಿ ಮನಿಗೆ ಬರುತ್ತಿರುವಾಗ, ಸದರಿ 1) ತಾಯಿರುತಂದೆ ಬಾರಿ ಚೋರಗಸ್ತಿ, 2) ಖಾಸಿಂ ತಂದೆ ಮಹ್ಮದ ಬಾರಿ ಚೋರಗಸ್ತಿ 3) ಗೌಸ್ತಂದೆಗಫೂರ ಚೋರಗಸ್ತಿ 4) ಬಾರಿತಂದೆಗಫೂರ ಬಾರಿ ಚೋರಗಸ್ತಿ 5) ರಫಿಕ 6)ಇಸಾಕ 7) ಮಹಿಬೂಬ ಇವರೆಲ್ಲರೂಕೂಡಿ ನಾನು ನಮ್ಮ ಮನೆಯ ಹತ್ತಿರ ಹೋಗುತ್ತಿದ್ದಂತೆ ನನ್ನನ್ನುತಡೆದು ನಿಲ್ಲಿಸಿ ಖಾಸಿಂ ಈತನುರಂಡಿ ಮಗನೆ ನಮ್ಮತಾಯಿರುಈತನಿಗೆ ಬೈಯುತ್ತೇನಲೆ ಸೂಳೆ ಮಗನೆ ಅಂತಾ ನನ್ನಎದೆಯ ಮೇಲಿನ ಅಂಗಿ ಹಿಡಿದು ಮುಂದೆ ಹೋಗುತ್ತಿದ್ದವನನ್ನುತಡದು ನಿಲ್ಲಿಸಿ ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ರಫೀಕ, ಇಸಾಕ, ಮೈಹಿಬುಬ, ಗೌಸ್, ಬಾರಿ ಮತ್ತುತಾಯಿರುಇವರೆಲ್ಲರೂಕೂಡ ನನ್ನ ಬೆನ್ನಿಗೆ, ತಲೆಗೆ ಮತ್ತು ಕಪಾಳಕ್ಕೆ ಕೈಯಿಂದ ಹೊಡೆದು ಹಲ್ಲೆ ಮಾಡಿಎಲ್ಲರೂ ಸೂಳೆ ಮಗನೆ ನಿನಗೆ ಸೊಕ್ಕು ಬಹಳ ಬಂದಿದೆ ಮಗನೆ ನಮ್ಮ ಹುಡಗರಜೋತೆಯಲ್ಲಿ ಸುಮ್ಮನೆ ಜಗಳ ಮಾಡುತ್ತಿ ಬೋಸುಡಿಕೆಅಂತಾಅವಾಚ್ಯವಾಗಿ ಬೈಯುತ್ತಿದ್ದರು. ಆಗ ನನ್ನ ಹೆಂಡತಿ ನಜಮಾ ಬೇಗಂ ಇವಳು ಬಂದು ಬಿಡಿಸಿಕೊಂಡು ಆಗ ಸದರಿಯವರೆಲ್ಲರೂ ಈ ಸೂಳೆ ಮಗ ಇನ್ನೊಮ್ಮ ನಮ್ಮತಂಟೆಗೆ ಬಂದರೆಇವನನ್ನುಜೀವದಿಂದ ಹೊಡೆದುಖಲಾಸ್ ಮಾಡುತ್ತೇವೆಅಂತಾಜೀವದ ಬೆದರಿಕೆ ಹಾಕಿರುತ್ತಾರೆ. ನನಗೆ ತಲೆಗೆ ಮತ್ತು ಮುಖಕ್ಕೆ ಕೈಯಿಂದ ಹೊಡೆದಿದ್ದರಿಂದ ಪೆಟ್ಟಾಗಿದ್ದು ನಾನು ನಿನ್ನೆ ಶಹಾಪೂರ ಸರಕಾರಿಆಸ್ಪತ್ರೆಗೆ ತೋರಿಸಿಕೊಂಡಿದ್ದು, ನಂತರ ನಮ್ಮ ಮನೆಯಲ್ಲಿ ನನ್ನ ಹೆಂಡತಿಯಜೋತೆಯಲ್ಲಿ ವಿಚಾರ ಮಾಡಿತಡವಾಗಿ ಬಂದು ಹೇಳಿಕೆ ನೀಡಿರುತ್ತೇನೆ. ಕಾರಣ ನನಗೆ ವಿನಾಃ ಕಾರಣಡಿಕ್ಕಿ ಹೊಡೆದು ಬೈಯ್ದು ನಂತರ ಸದರಿಯವರೆಲ್ಲರೂಕೂಡಿ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದುಕೈಯಿಂದ, ಹೊಡೆದುಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮಜರುಗಿಸಬೇಕು. ವಿನಂತಿಅಂತಾಅಜರ್ಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 06/2019 ಕಲಂ: 143,147,323,324, 504, 506 ಸಂ:149 ಐಪಿಸಿ ನೇದ್ರಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 05/2019 ಕಲಂ: 379 ಐ.ಪಿ.ಸಿ ಮತ್ತು 21 (3) (4) ಎಮ್ಎಮ್ಡಿಆರ್ ಆಕ್ಟ 1957 :- ದಿನಾಂಕ: 15/01/2019 ರಂದು 04.00 ಎಎಮ್ಕ್ಕೆ ಪಿರ್ಯಾಧಿದಾರರಿಗೆ ಮಾಹಿತಿ ಬಂದಿದ್ದೇನೆಂದರೆ, ಕಿರದಳ್ಳಿ ಕ್ರಾಸ್ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 04.30 ಎಎಮ್ಕ್ಕೆ ಸರಕಾರಿ ಜೀಪ್ನಲ್ಲಿ ಹೊರಟು ಕಿರದಳ್ಳಿ ಕ್ರಾಸ್ ಹತ್ತಿರ 05.00 ಎಎಮ್ಕ್ಕೆ ನಿಂತಾಗ ಹೆಗ್ಗನದೊಡ್ಡಿ ಕ್ರಾಸ್ ಕಡೆಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದೊಂದಿಗೆ 05.15 ಎ.ಎಮ್ ಕ್ಕೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಭಲಬೀಮ ತಂದೆ ಸೊಮಣ್ಣ ದೊರಿ ಸಾ: ಗೊಡ್ರಿಹಾಳ ಅಂತ ತಿಳಿಸಿದ್ದು, ಚಾಲಕನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ರಾಜಧನ ಕಟ್ಟಿರುವುದಿಲ್ಲಾ ಅಂತ ತಿಳಿಸಿದ್ದು, ನಂತರ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ ಟ್ರಾಕ್ಟರನ್ನು ನೋಡಲಾಗಿ ಟ್ರ್ಯಾಕ್ಟರ ಇಂಜೀನ ನಂ ಕೆ.ಎ-33/ಟಿಎ-4454 ನೇದ್ದು ಇದ್ದು ಟ್ರ್ಯಾಕ್ಟರ ಟ್ರ್ಯಾಲಿಗೆ ಯಾವುದೆ ನಂಬರ ಇರುವುದಿಲ್ಲ. ಅದರಲ್ಲಿ ಮರಳು ತುಂಬಿದ್ದು ಅದರ ಮಾಲಿಕ ಸದರಿ ಟ್ರ್ಯಾಕ್ಟರ ಮಾಲಿಕನ ಹೆಸರು ಕೇಳಲಾಗಿ ಹುಲಗಪ್ಪ ತಂದೆ ಸೊಮಣ್ಣ ದೊರಿ ಸಾ: ಗೊಡ್ರಿಹಾಳ ಅಂತಾ ತಿಳಿಸಿರುತ್ತಾನೆ. ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ. ಟ್ರಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು. ಸದರಿ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ 5.15 ಎಎಮ್ದಿಂದ 6.15 ಎಎಮ್ದವರೆಗೆ ಪಂಚನಾಮೆಯನ್ನು ಕೈಕೊಂಡು ಸದರಿ ವಾಹನವನ್ನು ಮರಳು ಸಮೇತ ಜಪ್ತಪಡೆಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಟ್ರಾಕ್ಟರರನ್ನು ಖಾಸಗಿ ವಾಹನ ಚಾಲಕನ ಸಹಾಯದಿಂದ ಮರಳು ಸಮೇತ ಮರಳು ತುಂಬಿದ ಟ್ರಾಕ್ಟರನ್ನು 06.45 ಎಎಮ್ಕ್ಕೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ವರದಿ ಒಪ್ಪಿಸಿದ್ದು ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 05/19 ಕಲಂ: 379 ಐಪಿಸಿ & 21 (3) (4) ಎಮ್ಎಮ್ಆರ್ಡಿ ಆಕ್ಟ ನೇದ್ದರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using