ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-01-2019

By blogger on ಮಂಗಳವಾರ, ಜನವರಿ 15, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-01-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 08/2019  ಕಲಂ 379 ಐ.ಪಿ ಸಿ :- ದಿನಾಂಕ 21/10/2016 ರಂದು ರಾತ್ರಿ 9-30 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀಮತಿ ರೇಣುಕಾ ಗಂಡ ಚಂಬಣ್ಣ ಮುಂಡರಗಿ ವಯ: 50 ಉ: ಮನೆಕೆಲಸ ಜಾತಿ: ಹಿಂದೂ ಗಾಣಿಗ ಸಾ;ತಾ:ಜಿ: ಚಿಕ್ಕಬಳ್ಳಾಪುರ ಇವರು ಹಾಜರಾಗಿ ತಮ್ಮದೊಂದು ಹೇಳಿಕೆ ಫಿಯರ್ಾದು ಸಲ್ಲಿಸಿದ್ದೆನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದವಳಿದ್ದು, ಮನೆಕೆಲಸ ನನ್ನ 2 ಜನ ಮಕ್ಕಳೊಂದಿಗೆ ಉಪಜೀವಿಸುತ್ತೇನೆ. ಹೀಗಿರುವಾಗ ನಾವು ಮನೆ ದೇವರಾದ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವರ ಜಾತ್ರೆ ನಿಮಿತ್ಯ ಮೈಲಾಪುರ ಗ್ರಾಮಕ್ಕೆ ನಿನ್ನೆ ದಿನಾಂಕ 13-01-2019 ರಂದು ಬೆಳಿಗ್ಗೆ ಒಂದು ಖಾಸಗಿ ವಾಹನ ತೆಗೆದುಕೊಂಡು ನಾನು ಮತ್ತು ನನ್ನ ಮಗಳು 1} ಶ್ರೀಮತಿ ಶ್ವೇತಾ ಗಂಡ ಫಕೀರೆಶ ಮುಂಡರಗಿ ಮತ್ತು ನಮ್ಮ ಸಂಬಂಧಿಕರಾದ 2} ಶಾಂತವ್ವ ಗಂಡ ತಿಪ್ಪಣ್ಣ ಹೊನ್ನಣ್ಣನೋರ 3}ತಿಪ್ಪವ್ವ ಗಂಡ ರುದ್ರಪ್ಪ ಸಿದ್ದಣ್ಣೋರ 4} ದೇವಪ್ಪ ತಂದೆ ರುದ್ರಪ್ಪ ಸಿದ್ದಣ್ಣೋರ ಹಾಗೂ ಇತರರು ಕೂಡಿಕೊಂಡು ಜಾತ್ರೆಗೆ ಬಂದಿರುತ್ತೆವೆ. ನಂತರ ನಾವೆಲ್ಲರೂ ಸ್ನಾನಕ್ಕಾಗಿ ಕೆರೆಯ ದಂಡೆಯ ಮೇಲೆ ಹೋಗಿ ಸ್ನಾನಕ್ಕೆ ನನ್ನ ಮಗಳು ಹಾಗೂ ಇತರರು ಹೋಗಿದ್ದಾಗ ನಾನು ಕೆರೆ ದಂಡೆಯ ಮೇಲೆ ಕುಳಿತು ಎಲ್ಲರ ಸಾಮಾನುಗಳು ನೋಡಿಕೊಳ್ಳುತ್ತಾ ಕುಳಿತಾಗ ಯಾರೋ ಕಳ್ಳರು ನನ್ನ ಹತ್ತಿರ  ಬ್ಯಾಗನ್ನು ಕಳುವು ಮಾಡುವ ಉದ್ದೇಶದಿಂದ ನನ್ನ ಬೆನ್ನ ಮೇಲೆ ಏನೋ ಒಂದು ವಸ್ತು ಸಿಂಪಡಿಸಿದಾಗ ನಾನು ನನ್ನ ಬೆನ್ನು ನೋಡುನೋಡುತ್ತಿದ್ದಂತೆ ನನ್ನ ಬೆನ್ನು ಕೆಂಪಾಗಿದ್ದು. ಇದ್ದನ್ನು ಕಂಡು ಸ್ನಾನ ಮಾಡಲು ಹೋದ ಎಲ್ಲರೂ ಮರಳಿ ನನ್ನ ಹತ್ತಿರ ಬಂದು ನೋಡುವಾಗ ಆ ಸಮಯದಲ್ಲಿ ಯಾರೋ ಕಳ್ಳರು ನನ್ನ ಹತ್ತಿರ ಬಂದು ನನ್ನ ಬಾಜು ಇಟ್ಟಿದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಆ ಬ್ಯಾಗನಲ್ಲಿ ನನ್ನ ತಾಳಿ ಚೈನ 70 ಗ್ರಾಂ ಬಂಗಾರದು ಅದರ ಅ.ಕಿ. 2,07,030/ರೂ ಇರುತ್ತದೆ, ನಗದು ಹಣ 35000 ರೂ, ಹಾಗೂ 3 ಮೋಬೈಲ್ಗಳು ಅವುಗಳ ಪೈಕಿ 1)ಒಂದು ನೊಕಿಯಾ ಮೊಬೈಲ ನಂ 9538692102 ಅ.ಕಿ. 1500/ರೂ, 2)ಒಂದು ನೊಕಿಯಾ ಕಂಪನಿ ಮೊಬೈಲ ನಂ 7338143883 ಅ.ಕಿ. 1500/ರೂ 3)ಒಂದು ನೊಕಿಯಾ ಕಂಪನಿ ಮೊಬೈಲ ನಂ 9035843298 ಅ.ಕಿ. 2000/ರೂ ಒಟ್ಟು ಅ.ಕಿ. 2,47,030/ರೂ ಕಿಮ್ಮತ್ತಿನ ಬಂಗಾರ, ನಗದು ಹಣ ಮತ್ತು ಮೊಬೈಲಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಸದರಿ ಘಟನೆಯು ನಿನ್ನೆ ದಿನಾಂಕ 13-01-2019 ರಂದು ಬೆಳಗ್ಗೆ 8-30 ರಿಂದ 09-30 ಗಂಟೆಯ ಅವಧಿಯಲ್ಲಿ ಜರುಗಿದ್ದು ಇರುತ್ತದೆ. ನಾನು ಕಳೆದುಕೊಂಡ ಬ್ಯಾಗ ಎಷ್ಟು ಹುಡಿಕಿದರೂ ಸಿಕ್ಕರುವದಿಲ್ಲ. ಕಾರಣ ನಾನು ಈ ವಿಷಯದ ಬಗ್ಗೆ ನಮ್ಮ ಮನೆಯವರಿಗೆ ವಿಚಾರಣೆ ಮಾಡಿ ಇಂದು ದಿನಾಂಕ 14/01/2019 ರಂದು ರಾತ್ರಿ 9-30 ಪಿ.ಎಂ.ಕ್ಕೆ ತಡವಾಗಿ ಠಾಣೆಗೆ ಬಂದು ಫಿಯರ್ಾದು ನೀಡುತ್ತಿದ್ದು ನನ್ನ ಹತ್ತಿರ ಇದ್ದ ಬ್ಯಾಗನಲ್ಲಿರುವ 70 ಗ್ರಾಂ ಬಂಗಾರದ ಚೈನ ಹಾಗೂ ನಗದು ಹಣ 35000/ರೂ ಮತ್ತು 3 ಮೋಬೈಲ್ ಇದ್ದ ಬ್ಯಾಗನ್ನು ಪತ್ತೆ ಮಾಡಿಕೊಡಬೇಕೆಂದು ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2019 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರುಮಿಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 08/2019  ಕಲಂ 379 ಐಪಿಸಿ :- ದಿನಾಂಕ 14.01.2019 ರಂದು ಸಮಯ ಬೆಳಿಗ್ಗೆ 6:00 ಗಂಟೆಗೆ ಎ-1 ಆರೋಪಿತನು ಎ-2 ಆರೋಪಿತ ಹೇಳಿದಂತೆ ತಮ್ಮ ಟ್ರ್ಯಾಕ್ಟರ ನಂ: ಕೆಎ-33-ಟಿಎ-9566 ಮತ್ತು ಟ್ರ್ಯಾಲಿ ನಂ: ಕೆಎ-33-ಟಿಎ-9567 ನೇದ್ದರಲ್ಲಿ   ಅಕ್ರಮವಾಗಿ ಕಳ್ಳತನದಿಂದ ಯಲ್ಹೇರಿ ಸಿಮಾಂತರದಲ್ಲಿ ತಮ್ಮ ಹೊಲದಲ್ಲಿಯ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 08/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರುಮಿಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ279,337,338 ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ :- ದಿನಾಂಕ 14.01.2019 ರಂದು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ಗಾಯಾಳುದಾರರು ತಮ್ಮ ಕೆಲಸದ ಸ್ಥಳದಿಂದ ಗುರುಮಠಕಲ್ಗೆ ತಮ್ಮ ಮೋಟಾರು ಸೈಕಲ್ ಮೇಲೆ ಮಧ್ಯಾಹ್ನ ಊಟ ತರಲು ಬರುತ್ತಿದ್ದಾಗ ಬೋರಬಂಡಾ-ಧರ್ಮಪೂರ ಗ್ರಾಮಗಳ ನಡುವೆ ಘಾಟನಲ್ಲಿ ಬೋರಬಂಡಾ ಕಡೆಯಿಂದ ಬಂದ ಕಮಾಂಡರ ಜೀಪ್ ನಂ: ಎಪಿ-07-ಎ.ಹೆಚ್.-7162 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿಪಡಿಸಿದರ ಪರಿಣಾಮವಾಗಿ ಗಾಯಾಳುದಾರರಿಗೆ ಭಾರಿ ಮತ್ತು ಸಾಧಾ ಸ್ವರೂಪದ ಗಾಯಳಗಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 09/2019 ಕಲಂ279,337,338 ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಿಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ:143,147,323,324,504,506 ಸಂಗಡ 149 ಐಪಿಸಿ :- ದಿನಾಂಕ 14.01.2019 ರಂದು ಸಂಜೆ 5:45 ಗಂಟೆಗೆ ಫಿರ್ಯಾದಿ ತನ್ನ ಗೆಳೆಯನೊಂದಿಗೆ ಗುರುಮಠಕಲ್ ಪಟ್ಟಣದ ನೇಹರು ಕ್ರಿಡಾಂಗಣಕ್ಕೆ ಹೋಗಿದ್ದು ಆಗ ಅಲ್ಲಿದ್ದ ಈ ಮೇಲ್ಕಂಡ ಆರೋಪಿತರು ಏಕೊದ್ದೇಶದಿಂದ, ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಗೆ ಅವಾಚ್ಯವಾಗಿ ಬೈದು , ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:10/2019 ಕಲಂ:143, 147, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಿಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 11/2019 ಕಲಂ: 279,337,338 ಐಪಿಸಿ :- ದಿನಾಂಕ.13.01.2019 ರಂದು ನಾನು ಮತ್ತು ನನ್ನ ಸಂಬಂಧಿಕನಾದ  ಪವನ ಕಲ್ಯಾಣ ತಂದೆ ರಾಮುಲು ಕ್ಯಾಮಾ ಇಬ್ಬರು ಕೂಡಿಕೊಂಡು ಕನರ್ಾಟಕದ ಯಾದಗಿರಿ ಜಿಲ್ಲೆಯ ಮೈಲಾಪೂರಕ್ಕೆ  ನಮ್ಮ ಮನೆದೇವರಾದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ನಮ್ಮ ಮೋಟಾರ ಸೈಕಲ್ ಪ್ಯಾಶನ ಪ್ರೋ. ಎಸ್.ಬಿ.ಕೆ. ನಂ. ಟಿ.ಎಸ್.-06  ಇಇ-2740  ನೇದ್ದರ ಮೇಲೆ ನಾರಾಯಣಪೇಠ ಕಡೆಯಿಂದ ಯಾದಗಿರಿ ಕಡೆಗೆ ಹೋರಟಿದ್ದಾಗ ಅನಪೂರ ಗ್ರಾಮದಿಂದ ಸುಮಾರು 2 ಕಿ.ಮೀ ಮುಂದೆ ಇರುವ ಬ್ರಿಡ್ಜ ಹತ್ತಿರ ಮೇನ ರೋಡ ಮೇಲೆ ಯಾದಗಿರಿ ಕಡೆಯಿಂದ ನಮ್ಮ ಎದುರಿಗೆ ಬಂದ ಕೆ.ಎಸ್.ಆರ್.ಟಿ.ಸಿ ಬಸ ನಂ.ಕೆ.ಎ-33 ಎಫ್-0317 ನೇದ್ದರ ಚಾಲಕ  ಸಮಯ  ಬೆಳಿಗ್ಗೆ 11-00 ಗಂಟೆ ಸುಮಾರಿಗೆ ತನ್ನ ಬಸ್ಸನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪವನಕಲ್ಯಾಣ ಈತನು ನಡೆಸುತ್ತಿದ್ದ ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದನು. ಅದರಿಂದಾಗಿ ಪವನ ಕಲ್ಯಾಣ ಮತ್ತು ನಾನು ಕೆಳಗೆ ಬಿದ್ದಿದ್ದು ಪವನ ಈತನಿಗೆ ಬಲತೊಡೆಯ ಮೂಳೆ ಮುರಿದು ಭಾರಿ ರಕ್ತಗಾಯ ಆಗಿರುತ್ತದೆ. ಬಲಗಡೆ ಹಣೆಗೆ, ತಲೆಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ.ಬಲ ಭುಜಕ್ಕೆ,ಬಲಗಡೆ ಎದೆಗೆ ಗುಪ್ತ ಪೆಟ್ಟಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುತ್ತವೆ. ನನಗೆ ಕಾಲಿಗೆ ಅಲ್ಪಸ್ವಲ್ಪ ಪೆಟ್ಟಾಗಿರುತ್ತದೆ. ನಂತರ ನಮ್ಮಂತೆ ಜಾತ್ರೆಗೆ ನಮ್ಮ ಹಿಂದೆ ಮೋಟಾರ ಸೈಕಲ ಮೇಲೆ ಹೊರಟಿದ್ದ ನಮ್ಮ ಗ್ರಾಮದ ಪವನ ತಂದೆ ನರಸಿಂಹ ಮತ್ತು ಮಹೇಶ ತಂದೆ ಕೃಷ್ಣಯ್ಯ ಮತ್ತು ನಾನು  ಗಂಭೀರವಾಗಿ ಗಾಯಗೊಂಡಿದ್ದ ಪವನ ಕಲ್ಯಾಣ ಈತನಿಗೆ ಕೂಡಲೇ ಒಂದು ಖಾಸಗಿ ಕಾರನಲ್ಲಿ  ನಾರಾಯಣಪೇಟ್ ಸರಕಾರಿ ಆಸ್ಪತ್ರೆಗೆ ಕಾರಿನಲ್ಲಿ ಹಾಕಿಕೊಂಡು ಹೋದೆವು. ನಂತರ ಹೆಚ್ಚಿನ ಉಪಚಾರ ಕುರಿತು ಯಶೋಧಾ ಆಸ್ಪತ್ರೆ ಮಲಕಪೇಟ್ ಹೈದ್ರಾಬಾದಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನಂತರ ಮನೆಯವರು ವಿಚಾರಿಸಿಕೊಂಡು ಸದರಿ ಪವನ ಕಲ್ಯಾಣ ಈತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಾನು ತಡವಾಗಿ ಇಂದು ದಿನಾಂಕ.14.01.2019 ರಂದು ರಾತ್ರಿ 9.30 ಗಂಟೆಗೆ ಗುರುಮಠಕಲ ಪೊಲೀಸ್ ಠಾಣೆಗೆ ಬಂದು ಫಿಯರ್ಾದಿ ನೀಡುತ್ತಿದ್ದು, ಸದರಿ ನನ್ನ ಸಂಬಂಧಿಕನಾದ ಪವನ ಕಲ್ಯಾಣ ಈತನಿಗೆ ಅತೀವೇಗ ಮತ್ತು ಅಲಕ್ಷತನದಿಂದ ತನ್ನ ಬಸ ನಡೆಸಿಕೊಂಡು ಬಂದು ಮೋಟಾರ ಸೈಕಲಗೆ  ಡಿಕ್ಕಿಪಡಿಸಿ ಸಾದಾ ಮತ್ತು ಗಂಭೀರ ಸ್ವರೂಪದ ಗಾಯವನ್ನುಂಟು ಮಾಡಿ ದು:ಖಪತಗೊಳಿಸಿದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ  ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ.11/2019 ಕಲಂ.279,337,338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಅದೆ,  

ಶಹಾಪೂರು ಪೊಲೀಸ್ ಠಾಣೆ ಗುನ್ನೆ ನಂ:- 19/2019 ಕಲಂ 78(3) ಕೆಪಿ.ಯಾಕ್ಟ :- ದಿನಾಂಕ 14/01/2019 ರಂದು 10.00 ಎಎಂ ಕ್ಕೆ ಶ್ರೀ ನಾಗರಾಜ ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ವಿಭೂತಿಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಸಿದ್ದನಗೌಡ ತಂದೆ ಶಿವರಾಜಪ್ಪ ಪೊಲೀಸ್ ಪಾಟೀಲ ವ|| 52ವರ್ಷ ಜಾ|| ಲಿಂಗಾಯತರೆಡ್ಡಿ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಕೂಲಿ ಕೆಲಸ ಸಾ|| ಬಿಜಾಸಪೂರ ತಾ|| ಸುರಪೂರ ಈತನಿಂದ ನಗದು ಹಣ 650/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 14/01/2019 ರಂದು 12.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ 1.00 ಪಿ.ಎಂಕ್ಕೆ ಠಾಣೆಗೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 19/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರು ಪೊಲೀಸ್ ಠಾಣೆ ಗುನ್ನೆ ನಂ:- 20/2019 ಕಲಂ 15(ಎ), 32(3) ಕನರ್ಾಟಕ ಅಬಕಾರಿ ಕಾಯ್ದೆ:- ದಿನಾಂಕ 14/01/2018 ರಂದು 2.50 ಪಿ,ಎಂ ಕ್ಕೆ ಠಾಣೆಗೆ ಸ||ತ|| ಫಿಯರ್ಾದಿದಾರರಾದ ಶ್ರೀ ನಾಗರಾಜ,ಜಿ, ಪಿ.ಐ, ರವರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ ಇಂದು  ದಿನಾಂಕ: 14/01/2019 ರಂದು 12.05 ಪಿ.ಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಬಾತ್ಮೀ ಬಂದಿದ್ದೇನೆಂದರೆ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಹಾಪೂರ ನಗರದ ರಾಖಂಗೇರಾ ಕ್ರಾಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ರಾಜಕುಮಾರ ಪಿಎಸ್ಐ, ಸಿಬ್ಬಂದಿಯವರಾದ ಬಾಬು ಹೆಚ್ಸಿ 162, ಹೊನ್ನಪ್ಪ ಹೆಚ್ಸಿ 101 ಮತ್ತು ನಾಗರೆಡ್ಡಿ ಎಪಿಸಿ 161 ರವರಿಗೆ ಬಾತ್ಮೀ ವಿಷಯ ತಿಳಿಸಿ ಬಾಬು ಹೆಚ್ಸಿ 162 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1) ಶ್ರೀ ಅಮಲಪ್ಪ ತಂದೆ ನಿಂಗಪ್ಪ ನಾರಾಯಣಿ ವಯ|| 25 ಜಾ|| ಪ.ಪಂಗಡ ಉ|| ಕೂಲಿ ಸಾ|| ಹಳಿಸಗರ ಶಹಾಪೂರ  2) ಶ್ರೀ ಮಹಾಂತೇಶ ತಂದೆ ನಾಗಪ್ಪ ಹೊಸಮನಿ ವಯ|| 28 ಜಾ|| ಪ.ಜಾತಿ ಉ|| ಕೂಲಿಕೆಲಸ ಸಾ|| ಬೇವಿನಳ್ಳಿ ತಾ|| ಶಹಾಪೂರ ಇವರನ್ನು 12.15 ಪಿ.ಎಂಕ್ಕೆ ಕರೆದುಕೊಂಡು ಬಂದು ಹಾಜರಪಡಿಸಿದ್ದು, ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಕಾಲಕ್ಕೆ ಪಂಚರಾಗಿ ಪಂಚನಾಮೆಯನ್ನು ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿ ಕೊಂಡಿದ್ದು ಎಲ್ಲರು ಕೂಡಿ ದಾಳಿ ಕುರಿತು ಠಾಣೆಯ ಸಕರ್ಾರಿ ಜೀಪ ನಂ: ಕೆಎ-33 ಜಿ-0138 ನೇದರಲ್ಲಿ ಕುಳಿತುಕೊಂಡು ಠಾಣೆಯಿಂದ 12.30 ಪಿ.ಎಂ ಕ್ಕೆ ಹೊರಟೆವು ಜೀಪನ್ನು ನಾಗರಡ್ಡಿ ಎಪಿಸಿ-161 ರವರ ಚಲಾಯಿಸುತ್ತಿದ್ದರು. ನೇರವಾಗಿ ಶಹಾಪೂರ ನಗರದ ರಾಖಂಗೇರಾ ಕ್ರಾಸ ಹತ್ತಿರ 12.45 ಪಿ.ಎಂಕ್ಕೆ ಹೋಗಿ ನಮ್ಮ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದುಕೊಂಡು ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ, ಅಲ್ಲಿ ಒಬ್ಬ ವ್ಯಕ್ತಿ ರಾಖಂಗೇರಾ ಕ್ರಾಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿ ಕೊಟ್ಟಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 12.50 ಪಿ.ಎಂಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದಾಗ ಒಬ್ಬ ವ್ಯಕ್ತಿ ಸಿಕ್ಕಿದ್ದು ಮತ್ತು ಮದ್ಯ ಕುಡಿಯಲು ಬಂದ ಜನರು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿಯನ್ನು ಹಿಡಿದು  ಆತನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಯೇಸುಮಿತ್ರ ತಂದೆ ಲಕ್ಷ್ಮಣ ಗುಡೇನವರ ವ|| 45 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ದೇವಿನಗರ ಶಹಾಪೂರ ತಾ|| ಶಹಾಪೂರ  ಅಂತ ತಿಳಿಸಿದ್ದು ಸದರಿ ವ್ಯಕ್ತಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ಪರವಾನಿಗೆಯ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವುದೇ ಅನುಮತಿ ಇರುವುದಿಲ್ಲ ಅಂತಾ ತಿಳಿಸಿದನು. ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 180 ಎಂ.ಎಲ್.ನ 15 ಬ್ಯಾಗಪೇಪರ್ ಡಿಲಕ್ಸ್ ವಿಸ್ಕಿ ಪೌಚಗಳು ಇದ್ದು ಪ್ರತಿಯೊಂದರ ಅಂ|| ಕಿ|| 90.21 ರೂಪಾಯಿ ಇದ್ದು ಒಟ್ಟು 15 ಪೌಚಗಳ ಕಿಮ್ಮತ್ತು 1353.15 ರೂಪಾಯಿ ಆಗುತ್ತದೆ. ಮತ್ತು 02 ಪ್ಲಾಸ್ಟಿಕ್ ಖಾಲಿ ಗ್ಲಾಸ್ಗಳು ಅ:ಕಿ:00=00 ರೂ ಇದ್ದು ಸದರಿ ಖಾಲಿ ಗ್ಲಾಸಗಳು ಮದ್ಯ ಕುಡಿಯಲು ಉಪಯೋಗಿಸಿದಂತೆ ಕಂಡು ಬಂದಿದ್ದು ಮತ್ತು 02 ಕುಡಿಯಲು ಉಪಯೋಗಿಸಿದ 180 ಎಂ.ಎಲ್.ನ ಖಾಲಿ ಬ್ಯಾಗಪೇಪರ್ ಡಿಲಕ್ಸ್ ವಿಸ್ಕಿ ಪೌಚಗಳು ಇದ್ದು ಅವುಗಳ ಅ|| ಕಿ|| 00=00 ರೂ. ಸಿಕ್ಕಿದ್ದು ಅವುಗಳಲ್ಲಿ 180 ಎಂಎಲ್ ನ ಒಂದು ಬ್ಯಾಗಪೇಪರ್ ಡಿಲಕ್ಸ್ ವಿಸ್ಕಿ ಪೌಚನ್ನು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನುಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು ಸದರಿ ಜಪ್ತಿ ಪಂಚನಾಮೆಯನ್ನು  12.50 ಪಿಎಂ ದಿಂದ 1.50 ಪಿಎಂ ದವರೆಗೆ ಜಪ್ತಿ ಪಂಚನಾಮೆ ಮಾಡಿದ್ದು, ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 2.20 ಪಿಎಂ ಕ್ಕೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 2.50 ಪಿಎಂ ಕ್ಕೆೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಕೊಟ್ಟಿದ್ದು ಸದರಿ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 20/2019 ಕಲಂ 15(ಎ) 32(3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 21/2019.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ :- ದಿನಾಂಕ 14/01/2019 ರಂದು 18-00 ಗಂಟೆಗೆ ಶ್ರೀ ನಾಗರಾಜ.ಜಿ, ಪಿ.ಐ, ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 14/01/2019 ರಂದು ಮದ್ಯಾಹ್ನ 15-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಹಾಪೂರ ನಗರದ ಯಾದಗಿರಿ- ಶಹಾಪೂರ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಹಷರ್ಾ ಭಾರ ಹತ್ತಿರ ಇರುವ ಮದಿನಾ ಹೋಟೆಲ್ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ರಾಜಕುಮಾರ ಪಿ.ಎಸ್.ಐ. (ಎಲ್&ಓ) ಸಿಬ್ಬಂದಿಯವರಾದ ಹೋನ್ನಪ್ಪ ಹೆಚ್,ಸಿ, 101, ಬಾಬು ಹೆಚ್,ಸಿ, 162, ಶಿವನಗೌಡ ಪಿ.ಸಿ.141, ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161, ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ, ಶಿವನಗೌಡ ಪಿ.ಸಿ.141, ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ ಕರೆದುಕೊಂಡು ಬಂದು 15-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ. ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿ,ವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಕುಳಿತುಕೊಂಡು 15-25 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 15-40 ಗಂಟೆಗೆ ಸಂಗಮೇಶ್ವರ ಆಗ್ರೋ ಹತ್ತಿರ ದೂರದಲ್ಲಿ ಜೀಪ ನಿಲ್ಲಸಿ ನಡೆದುಕೊಂಡು ಹೋಗಿ ಯಾದಗಿರಿ- ಶಹಾಪೂರ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಮದಿನಾ ಹೋಟೆಲ್ ಹತ್ತಿರ ಹೋಗಿ ಹೋಟೆಲ್ಗಳ, ಅಂಗಡಿಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ 15-45 ಗಂಟೆಗೆ ನೋಡಲಾಗಿ, ಒಬ್ಬ ವ್ಯೆಕ್ತಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 15-50 ಪಿ.ಎಂ.ಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಶರಣಬಸಪ್ಪ ತಂದೆ ಸಿದ್ದಣ್ಣ ಪೊಲೀಸ್ ಬೀರೆದಾರ ವ|| 33 ಜಾ|| ಲಿಂಗಾಯತ ಸಾ|| ಕೂಲಿಕೆಲಸ ಸಾ|| ರಿಕ್ಕಿನ ಆಲೂರ ತಾ|| ಆಳಂದ ಜಿ|| ಕಲಬುರಗಿ. ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಮದಿನಾ ಹೋಟೆಲ್ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ 90 ಎಂ.ಎಲ್.ನ ಒಟ್ಟು 45 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ಗಳು ಇದ್ದು ಒಂದು ಪಾಕೆಟ್ನ ಕಿಮ್ಮತ್ತು 30=32 ರೂ ಅಂತಾ ಇದ್ದು, ಒಟ್ಟು 45 ಮದ್ಯದ ಪಾಕೇಟ್ಗಳ ಕಿಮ್ಮತ್ತು 1364=4 ರೂ ಗಳಾಗುತ್ತಿದ್ದು, ಒಂದು ಪ್ಲಾಸ್ಟಿಕ್ ಚಿಲ ಅ:ಕಿ: 00=00 ರೂ ಮತ್ತು 04 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ ಮತ್ತು ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 2 ಖಾಲಿ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ಗಳು ಇದ್ದವು. ಅ:ಕಿ:00=00 ರೂ ಹಾಗೂ ಒಟ್ಟು 45 ಮದ್ಯದ ಪಾಕೇಟ್ಗಳಲ್ಲಿ ಒಂದು 90 ಎಂ.ಎಲ್.ನ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ನ್ನು ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು ಮದ್ಯಾಹ್ನ 16-00 ಗಂಟೆಯಿಂದ 17-00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ ಸಾಯಂಕಾಲ 17-20 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 18-00  ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 21/2019 ಕಲಂ 15(ಎ) 32(3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:-08/2019 ಕಲಂ 78(3) ಕೆ.ಪಿ.ಆ್ಯಕ್ಟ:- ದಿನಾಂಕ 07/01/2018 ರಂದು 4-50 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೇಂದರೆ ಶಹಾಪೂರ ನಗರದ ಸಕರ್ಾರಿ ಆಸ್ಪತ್ರೆ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ, ಅಂತ ಖಚಿತ ಬಾತ್ಮೀ ಬಂದ್ದಿದ್ದರ ಮೇರೆಗೆ ಮಾಹಿತಿ ವಿಷಯ ಠಾಣೆಯಲ್ಲಿದ್ದ ಶ್ರೀ ರಾಜಕುಮಾರ ಪಿ,ಎಸ್,ಐ(ಕಾ.ಸು) ರವರಿಗೆ ಮತ್ತು ಸಿಬ್ಬಂದಿಯವರಾದ ಬಾಬು ಹೆಚ್ ಸಿ-162, ಗಜೇಂದ್ರ ಪಿಸಿ-313 ಮತ್ತು ನಾಗರಡ್ಡಿ ಎಪಿಸಿ-161 ರವರಿಗೆೆ ಬಾತ್ಮಿ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ಹೇಳಿ, ದಾಳಿ ಕುರಿತು ಹೋಗುವ ಸಂಬಂದ ಬಾಬು ಹೆಚ್ ಸಿ-162 ರವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ತಿಳಿಸಿದೆನು. ಬಾಬು ಹೆಚ್ ಸಿ ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 27 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರ ತಾ|| ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವಯ|| 25 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ತಾ|| ಶಹಾಪೂರ ಇವರಿಗೆ 5.15 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ್ದರ ಮೇರೆಗೆ ಸದರಿಯವರಿಗೆ ಖಚಿತ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಹಾಗೂ ಬಾಬು ಹೆಚ್ ಸಿ-162, ಗಜೇಂದ್ರ ಪಿಸಿ-313 ಹಾಗೂ ನಾಗರಡ್ಡಿ ಎಪಿಸಿ-161 ರವರೊಂದಿಗೆ ಸರ್ಚ ಲೈಟ ಸಮೇತ ಠಾಣೆಯ ಸಕರ್ಾರಿ ಜೀಪ ನಂ: ಕೆಎ-33 ಜಿ-0138 ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ 5-20 ಪಿ.ಎಂ ಕ್ಕೆ ಹೊರಟು ಶಹಾಪೂರ ನಗರದ ಸಕರ್ಾರಿ ಆಸ್ಪತ್ರೆಯಿಂದ ಸ್ವಲ್ಪ ದೂರ 5-30 ಪಿ.ಎಂ ಕ್ಕೆ  ಹೊಗಿ ನಮ್ಮ ಜೀಪ ನಿಲ್ಲಿಸಿ ಜೀಪನಿಂದ ಕೆಳಗೆ ಇಳಿದು ನಡೆದುಕೊಂಡು 5.35 ಪಿ.ಎಂ ಕ್ಕೆೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ ಸಕರ್ಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ನೊಡಿ ನಾವು ಅವರಿಬ್ಬರೂ ಇದು ಬಾಂಬೆ ಮಟಕಾ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ನಾನು ಮತ್ತು ನಮ್ಮ ಠಾಣೆಯ ಪಿ,ಎಸ್,ಐ ಮತ್ತು ಸಿಬ್ಬಂದಿಯವರು ಕೂಡಿ ಅವರಿಬ್ಬರ ಮೇಲೆ 5-40 ಪಿ.ಎಂ ಕ್ಕೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿರುವವರಿಬ್ಬರಲ್ಲಿ ಒಬ್ಬನು ಸಿಕ್ಕಿದ್ದು ಇನ್ನೊಬ್ಬನು ಓಡಿ ಹೊದನು. ಸಿಕ್ಕಿಬಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಅಬ್ದುಲಭಾಷಾ ತಂದೆ ನಬಿಸಾಬ ಮುಲ್ಲಾ ವಯ|| 35 ಉ|| ಮಟಕಾ ಬರೆದುಕೊಳ್ಳುವದು ಜಾ|| ಮುಸ್ಲಿಂ ಸಾ|| ಕಿರಿಹಯ್ಯಾಳ ತಾ|| ಶಹಾಪೂರ ಜಿ|| ಯಾದಗಿರ  ಅಂತ ತಿಳಿಸಿದನು. ಪಂಚರ ಸಮಕ್ಷಮ ಸದರಿಯವನ ಅಂಗಶೋಧನೆ ಮಾಡಿದಾಗ ಆತನ ಹತ್ತಿರ ಮಟಕಾ ಅಂಕಿ ಸಂಖ್ಯೆ ಬರದುಕೊಂಡ ನಗದು ಹಣ 630- ರೂಪಾಯಿ, ಒಂದು ಬಾಲ್ ಪೆನ್ ಅ:ಕಿ: 00=00 ರೂ  ಒಂದು ಮಟಕಾ ಅಂಕಿ ಸಖ್ಯೆಗಳನ್ನು ಬರೆದುಕೊಂಡ ಚೀಟಿ ಅ:ಕಿ: 00=00 ರೂ ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 5-40 ಪಿ.ಎಂ ದಿಂದ 6-40 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆ ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯ ಕಾಲಕ್ಕೆ ಓಡಿಹೊದ ಇನ್ನೊಬ್ಬ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಸಿಕ್ಕಿಬಿದ್ದ ಅಬ್ದುಲಬಾಷಾ ಈತನಿಗೆ ವಿಚಾರಿಸಲಾಗಿ ಓಡಿಹೋದವನ ಹೆಸರು ಸಿದ್ದನಗೌಡ ಪಾಟೀಲ ಸಾ|| ಬಿಜಾಸಪೂರ @ ಕೃಷ್ಣಾಪೂರ ತಾ|| ಸೂರಪೂರ ಅಂತ ತಿಳಿಸಿದನು. ಸಿದ್ದನಗೌಡ ಪಾಟೀಲ ಸಾ|| ಬಿಜಾಸಪೂರ @ಕೃಷ್ಣಾಪೂರ ತಾ|| ಸೂರಪೂರ ಈತನನ್ನು ನಾನು ಮತ್ತು ನಮ್ಮ ಪಿ,ಎಸ್,ಐ ಹಾಗೂ ಸಿಬ್ಬಂದಿಯವರು ನೋಡಿದ್ದು ಆತನನ್ನು ಇನ್ನೋಮ್ಮೆ ನೋಡಿದರೆ ಗುರುತಿಸುತ್ತೆವೆ.  ದಾಳಿಯಲ್ಲಿ ಸಿಕ್ಕ ಒಬ್ಬ ವ್ಯೆಕ್ತಿಯೊಂದಿಗೆೆ ಎಲ್ಲರೂ ಕೂಡಿ ಮರಳಿ ಠಾಣೆಗೆ 7-00 ಪಿ.ಎಂ ಕ್ಕೆ ಬಂದು ವರದಿ ತಯ್ಯಾರಿಸಿ. ಒಬ್ಬ ಆರೋಪಿ, ಮತ್ತು ಜಪ್ತಿ ಪಂಚನಾಮೆ, ಮುದ್ದೆಮಾಲು, ಹಾಜರಪಡಿಸಿ 7-30 ಪಿ.ಎಂ ಕ್ಕೆ ಮುಂದಿನ  ಕ್ರಮ ಕೈಕೊಳ್ಳಲು ವರದಿ ನೀಡಿರುತ್ತೆನೆ. ಅಂತಾ ವರದಿ ಕೊಟ್ಟಿದ್ದು ಸದರಿ ವರದಿಯ ಸಾರಾಂಸವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್,ಸಿ ನಂ-03/19 ಪ್ರಕಾರ ಪ್ರಕರಣ ದಾಖಲಿಸಿಕೊಂಡು ನಂತರ ಕಲಂ 78(3) ಕೆ,ಪಿ ಆಕ್ಟ ಪ್ರಕಾರ ಪ್ರಕರಣ ದಾಕಲು ಮಾಡಿಕೊಮಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಣ್ಣ ಪಿಸಿ.424 ರವರು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಮಡು ಠಾಣೆಗೆ 8-45 ಪಿಎಂ ಕ್ಕೆ ಬಂದು ಅನುಮತಿ ಹಾಜರು ಪಡಿಸಿದ್ದರಿಂದ ಶಹಾಪೂರ ಠಾಣೆಯ ಗುನ್ನೆ ನಂ 08/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!