ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-01-2019

By blogger on ಮಂಗಳವಾರ, ಜನವರಿ 8, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-01-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 01/2019 ಕಲಂ 32, 34 ಕೆ ಇ ಆಕ್ಟ :- ದಿನಾಂಕ.07/01/2019 ರಂದು 5-00 ಪಿಎಂಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿ.ಎಸ್ಐ (ಕಾ.ಸು) ಸಾಹೇಬರು ರವರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ. 07/01/2019 ರಂದು 2-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಡಿಗ್ರಿ ಕಾಲೇಜಿನ ಕ್ರಾಸ ಹತ್ತಿರ ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು ದಾಳಿ ಕುರಿತು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯಿಂದ 2-45 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು 3-00 ಪಿಎಂಕ್ಕೆ  ಡಿಗ್ರಿ ಕಾಲೇಜು ಕ್ರಾಸ ಇನ್ನು ಸ್ವಲ್ಪ ಮುಂದೆ ಇರುವಂತೆ ಡಿ.ಡಿ.ಪಿ.ಐ ಕಛೇರಿ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಡಿ.ಡಿ.ಪಿ.ಐ ಕಛೇರಿಯ ಕಂಪೌಂಡ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಡಿಗ್ರಿ ಕಾಲೇಜು ಕ್ರಾಸಿನ ಮುಂದೆ ರೋಡಿನ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು 3-30 ಪಿಎಂಕ್ಕೆ  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಚಂದಪ್ಪ ತಂದೆ ಹಣಮಂತ ಹಲಗಿ ವ;28 ಜಾ; ಮಾದಿಗ ಉ; ಕೂಲಿಕೆಲಸ ಸಾ; ಹೆಡಗಿಮದ್ರಾ ತಾ; ಜಿ; ಯಾದಗಿರಿ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಸ್ಥಳದಲ್ಲಿ ಒಂದು ಕಾಟನ ಬಾಕ್ಸನಲ್ಲಿ ಒಟ್ಟು 30 ಓರಿಜಿನಲ್ ಚಾಯ್ಸ್ ವಿಸ್ಕಿ  90 ಎಂ.ಎಲ್.ಪೌಚಗಳಿದ್ದು ಒಂದಕ್ಕೆ 30.32 ರೂ.ದಂತೆ ಒಟ್ಟು 909=06 ರೂ. ಕಿಮತ್ತಿನವುಗಳಿದ್ದು ಸದರಿಯವನಿಗೆ ಕ್ವಾರ್ಟರಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೇ ಹಾಜರುಪಡಿಸುವಂತೆ ವಿಚಾರಿಸಲು ಅವನು ಯಾವುದೇ ಪರವಾನಿಗೆ ಇರುವುದಿಲ್ಲ. ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ನಂತರ 30 ಓರಿಜಿನಲ ಚಾಯ್ಸ ವಿಸ್ಕಿ 90 ಎಂಎಲ್. ಪೌಚಗಳಲ್ಲಿ ಒಂದನ್ನು ಶ್ಯಾಂಪಲ್ಗಾಗಿ ಎಫ್.ಎಸ್.ಎಲ್. ಪರೀಕ್ಷೇ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ ಎಲ್ಲಾ ಮಧ್ಯದ ಪೌಚಗಳನ್ನು ಮುಂದಿನ ಪುರಾವೆ ಕುರಿತು ಕಾಟನ ಬಾಕ್ಸನಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 3-30 ಪಿಎಂ ದಿಂದ 4-30 ಪಿಎಂ ದವರೆಗೆ ಮುಗಿಸಿ ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 5-00 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನಾ ಪತ್ರ ಕೊಟ್ಟಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.01/2019 ಕಲಂ.32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 03/2019 ಕಲಂ 32, 34 ಕೆ.ಇ. ಆ್ಯಕ್ಟ :- ದಿನಾಂಕ 07/01/2019 ರಂದು 4-30 ಪಿ.ಎಮ್ ಕ್ಕೆ ಆರೋಪಿತನು ತನ್ನ ಕಿರಾಣಿ ಅಂಗಡಿಯಲ್ಲಿ ಅನದೀಕ್ರತವಾಗಿ ಮಧ್ಯದ ಬಾಟಲಿಗಳು, ಪ್ರೇಶರ ಶೀಲ್ಡ ಪಾಕೇಟಗಳು ಮತ್ತು ಬಿಯರ ಬಾಟಲಿಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಮ್.ಎಲ್ ದ 46 ಯು.ಎಸ್. ವಿಸ್ಕಿ ಪ್ಲಾಸ್ಟಿಕ್ ಬಾಟಲಗಳು ಇದ್ದು, ಒಂದು ಯು.ಎಸ್. ವಿಸ್ಕಿ ಪ್ಲಾಸ್ಟಿಕ್ ಬಾಟಲ ಕಿಮ್ಮತ್ತು 30.32/- ರೂ ಯಂತೆ ಒಟ್ಟು  46 ಬಾಟಲಿಗಳ ಕಿಮ್ಮತ್ತು 1394.72/- ರೂ ಆಗುತ್ತದೆ. ಮತ್ತು 2) 650 ಎಮ್.ಎಲ್ ದ 4 ಕೆ.ಎಫ್. ಪ್ರಿಮಿಯಮ್ ಬಿಯರ್ ಬಾಟಲಿಗಳು ಇದ್ದು ಒಂದು ಕೆ.ಎಫ್. ಸ್ಟ್ರಾಂಗ ಬಿಯರ್ ಬಾಟಲಿ ಕಿಮ್ಮತ್ತು 125/-ರೂ ಯಂತೆ ಒಟ್ಟು 4 ಕೆ.ಎಫ್. ಪ್ರಿಮಿಯಮ್ ಬಿಯರ್ ಬಾಟಲಿಗಳ ಕಿಮ್ಮತ್ತು 500/- ರೂ ಆಗುತ್ತದೆ. ಮತ್ತು 90 ಎಮ್.ಎಲ್.ದ 15 ಓರಿಜಿನಲ್ ಚೌಯಿಸ್ ಪ್ರೇಶರ್ ಶೀಲ್ಡ ಪಾಕೇಟಗಳು ಇದ್ದು, ಒಂದು ಓರಿಜಿನಲ್ ಚೌಯಿಸ್ ಪ್ರೇಶರ್ ಶೀಲ್ಡ ಪಾಕೇಟ ಕಿಮ್ಮತ್ತು 30.32/-ರೂ ಯಂತೆ ಒಟ್ಟು 15 ಓರಿಜಿನಲ್ ಚೌಯಿಸ್ ಪ್ರೇಶರ್ ಶೀಲ್ಡ ಪಾಕೇಟಗಳ ಕಿಮ್ಮತ್ತು 454.8/- ರೂ ಆಗುತ್ತದೆ. ಒಟ್ಟು ಮಧ್ಯದ ಬಾಟಲಿಗಳು, ಬಿಯರ್ ಬಾಟಲಿಗಳು ಮತ್ತು ಪ್ರೇಶರ್ ಶೀಲ್ಡ ಪಾಕೇಟಗಳ ಕಿಮ್ಮತ್ತು 2349.52/- ರೂ,  ಕಿಮ್ಮತ್ತಿನ ಮಧ್ಯದ ಬಾಟಲಿಗಳು, ಪ್ರೆಶರ ಶೀಲ್ಡ ಪಾಕೆಟಗಳು ಮತ್ತು ಬಿಯರ ಬಾಟಲಿಳನ್ನು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.

ಗುರುಮಿಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 03/2019 ಕಲಂ: 273, 284 ಐಪಿಸಿ ಮತ್ತು  32, 34 ಕೆ.ಇ ಆಕ್ಟ್ :- ದಿನಾಂಕ 07.01.2019 ರಂದು ಸಂಜೆ 5:30 ಗಂಟೆಗೆ ಆರೋಪಿತನು ತನ್ನ ಮನೆಯ ಮುಂದಿನ ಖುಲ್ಲಾ ಸ್ಥಳದಲ್ಲಿ ಅಕ್ರಮವಾಗಿ ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ರಾಸಾಯನೀಕ ಸಿ.ಹೆಚ್. ಪುಡಿಯಿಂದ ತಯಾರಿಸಿದ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆತನ ವಶದಲ್ಲಿದ್ದ ಒಟ್ಟು 45 ಲೀಟರ ಹೆಂಡ ಮತ್ತು ನಗದು ಹಣ 370/- ರೂ ಹೀಗೆ ಒಟ್ಟು 1720- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 03/2019 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆದಾಖಲಿಸಿಕೊಂಡನು.

ಸೈದಾಪೂರು ಪೊಲೀಸ್ ಠಾಣೆ ಗುನ್ನೆ ನಂ:- 01/2019 ಕಲಂ 32,34 ಕೆ,ಇ ಯಾಕ್ಟ್ :- ದಿನಾಂಕ- 07-01-2019 ರಂದು 07-30 ಪಿ.ಎಮ್ ಕ್ಕೆ ಮಾನ್ಯ ಪಿ,ಎಸ್,ಐ ಸಾಹೇಬರು ಜೈಗ್ರಾಮ ಊರಲ್ಲಿ ಸೈಲು ಅಂಗಡಿಯಲ್ಲಿ ಮದ್ಯ ಜಪ್ತಿ ಮಾಡಿಕೊಂಡು ಮದ್ಯ ಜಪ್ತಿ ಪಂಚನಾಮೆಯನ್ನು ಮತ್ತು ಮುದ್ದೆ ಮಾಲನ್ನು ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಠಾಣೆಗೆ ತಂದು ಹಾಜರುಪಡಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.01/2019 ಕಲಂ 32,34 ಕೆ.ಇ ಯಾಕ್ಟ್  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರು ಪೊಲೀಸ್ ಠಾಣೆ ಗುನ್ನೆ ನಂ:- 02/2019  ಕಲಂ  279.337.338. ಐ ಪಿ ಸಿ  :- ದಿನಾಂಕ 07-01-2019 ರಂದು 2-30 ಪಿ ಎಂ ಕ್ಕೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಒಂದು ಅರ್.ಟಿ.ಎ ಎಮ್.ಎಲ್.ಸಿ ವಸೂಲಾಗಿದ್ದು. ಸದರಿ ಎಮ್.ಎಲ್.ಸಿ ಹೇಳಿಕೆಯನ್ನು ಪಡೆಯಲು ಸರಕಾರಿ ಆಸ್ಪತ್ರೆ ಯಾದಗಿರಿಗೆ ಬೇಟಿ ನೀಡಿ ಗಾಯಾಳು ಖಾಸಿಂ ಪಟೇಲ್ ತಂದೆ ಗೂಡುಪಟೇಲ ಹೊಸಮನಿ ವಯಾ|| 35 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಜಿನಕೇರಾ ತಾ|| ಜಿಲ್ಲಾ|| ಯಾದಗಿರಿ. ಲ್ಯಾಪ್ಟಾದಲ್ಲಿ ಗಣಕೀಕರಣ ಮಾಡಿಸಿದ ಹೇಳಿಕೆ ಪಿಯರ್ಾದಿಪಡೆದುಕೊಂಡಿದ್ದು ಅದರ ಸಾರಾಂಶವೇನಂದರೆ. ನಮ್ಮ ಸಂಬಂದಿಕರಲ್ಲಿ ಬಾಲಚೇಡ ಗ್ರಾಮದಲ್ಲಿ ಮದುವೆ ಎಂಗೇಜಮೆಂಟ್ ಕಾರ್ಯಕ್ರಮ ಇದ್ದ ಪ್ರಾಯುಕ್ತ ಇಂದು ದಿನಾಂಕ 07-01-2019 ರಂದು 12 ಗಂಟೆಯ ಸುಮಾರಿಗೆ ನಾನು ಮತ್ತು  ನಮ್ಮೂರ ಸಾಯಿಪಟೇಲ ತಂದೆ ಮಕ್ತುಂ ಪಟೇಲ್ ಎದುರುಮನೆ. ಗೂಡು ಪಟೇಲ ತಂದೆ ಹುಸೇನ ಪಟೆಲ್ ಮತ್ತು ಮಹ್ಮದ ಪಟೇಲ ತಂದೆ ಅಮೀರ ಪಟೇಲ್. ಮತ್ತು ತಾಯಪ್ಪ ತಂದೆ ನಾಗಪ್ಪ ಬಾವೂರ ಕಬ್ಬೇರ ಎಲ್ಲಾರು ಕೂಡಿಕೊಂಡು ಬಳಿಚಕ್ರ ಗ್ರಾಮದ ಹಣಮಂತ ತಂದೆ ಶರಣಪ್ಪ ಇವರ ಅಟೋ ನಂ-ಕೆಎ-33-ಎ-0745 ನೇದ್ದರಲ್ಲಿ ಕುಳಿತು ನಮ್ಮೂರದಿಂದ ಬಾಲಚೇಡ ಗ್ರಾಮಕ್ಕೆ ಹೊರಟೆವು ಇಂದು ದಿನಾಂಕ 07-01-2019 ರಂದು ಮದ್ಯಾನ 1 ಗಂಟೆಯ ಸುಮಾರಿಗೆ ಅಟೋ ಗೌಡಗೇರ ಗ್ರಾಮದ ಕ್ರಾಸ ದಾಟಿ ಮುಂದೆ ಕಿಲ್ಲನಕೇರಾ ಗ್ರಾಮದ ಕಡೆಗೆ ಹೋಗುವಾಗ ಶಾಲೆಯ ಹತ್ತಿರ ಅಟೋ ಚಾಲಕ ಹಣಮಂತ ತಂದೆ ಶರಣಪ್ಪ ಇವನು ತನ್ನ ಅಟೋವನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿ ಶಾಲೆಯ ಹತ್ತಿರ ಪಲ್ಟಿ ಮಾಡಿದ್ದು ಇದರಿಂದ ನನಗೆ ಬಲಗಾಲು ಹಿಂಬಡಿಗೆ ರಕ್ತಗಾಯವಾಗಿದೆ. ಅದರಂತೆ ಸಾಯಿಪಟೇಲ ತಂದೆ ಮಕ್ತುಂ ಪಟೇಲ ಇವರಿಗೆ ನೋಡಲು ಎರಡು ಮೊಣಕಾಲು ಹತ್ತಿರ ಬಾರೀ ಒಳಪೆಟ್ಟು ಆಗಿದೆ. ಬೆನ್ನಿಗೆ ಟೊಂಕದ ಹತ್ತಿರ ಒಳಪೆಟ್ಟು ಆಗಿದೆ. ಅದೇ ರೀತಿ ಚಾಲಕ ಹಣಮಂತ ತಂದೆ ಶರಣಪ್ಪ ಇವರಿಗೆ ನೋಡಲು ತಲೆಯ ಹಿಂದುಗಡೆ ಬಾರೀ ಗುಪ್ತಗಾಯವಾಗಿದೆ. ಇನ್ನುಳಿದವರಿಗೆ ಯಾರಿಗೂ ಗಾಯಗಳು ಆಗಿಲ್ಲಾ. ನಮ್ಮೆಲ್ಲಾರಿಗೆ ಅಟೋದಲ್ಲಿ ಇದ್ದು ಗಾಯಾಗದವರು ಕೂಡಿ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದರು. ಅಟೋ ನಂ ಕೆಎ-33-ಎ-0745 ನೇದ್ದರ ಚಾಲಕ ಹಣಮಂತ ತಂದೆ ಶರಣಪ್ಪ ಸಾ|| ಬಳಿಚಕ್ರ ಇವರು ತನ್ನ ಅಟೋವನ್ನು ಅತೀ ವೇಗ ಹಾಗು ನಿರ್ಲಕ್ಷತನದಿಂದ ಓಡಿಸಿ ಪಲ್ಟಿ ಮಾಡಿದ್ದು ಅಟೋ ಚಾಲಕನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 02/2019 ಕಲಂ. 279.337.338. ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:-01/2019 ಕಲಂ: 32,34 ಕೆ.ಇ ಎಕ್ಟ್ 1965 :- ದಿನಾಂಕ: 07/01/2019 ರಂದು 6-30 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ಇಂದು ದಿನಾಂಕ: 07/01/2019 ರಂದು ಸಾಯಂಕಾಲ ನಾನು ಮತ್ತು ಪ್ರಕಾಶ ಹೆಚ್.ಸಿ 18, ಶಿವಪುತ್ರ ಹೆಚ್.ಸಿ 82 ಮತ್ತು ಮಹೇಂದ್ರ ಪಿಸಿ 254 ಜೀಪ ಚಾಲಕ ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಹಾಲಗೇರಾ ಗ್ರಾಮದ ಪಾಳು ಬಿದ್ದ ಸರಕಾರಿ ಶಾಲೆ ಹತ್ತಿರ ಇರುವ ಖಾಲಿ ಸ್ಥಳದಲ್ಲಿ ಯಾರೋ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 4-30 ಪಿ.ಎಮ್ ಕ್ಕೆ ಹಾಲಗೇರಾ ಗ್ರಾಮದ ಬಸ್ ಸ್ಟಾಪ ಹತ್ತಿರ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಸರಕಾರಿ ಪಾಳು ಬಿದ್ದ ಶಾಲೆಯನ್ನು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 150/- ರೂ. ಗೆ ಒಂದು ಬಿಯರ ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿಯಬೇಕು ಎನ್ನುವಷ್ಟರಲ್ಲಿ ಆ ಮನುಷ್ಯನು ಅಲ್ಲಿಂದ ತಪ್ಪಿಸಿಕೊಂಡು ಸಂದಿಯಲ್ಲಿಂದ ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಸಾಯಬಣ್ಣ ತಂದೆ ದೊಡ್ಡಪ್ಪ ದಿಡ್ಡಿಮನಿ, ವ:55, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಹಾಲಗೇರಾ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ಗೊಬ್ಬರ ಚೀಲದಲ್ಲಿ ದೊಡ್ಡವು ಮತ್ತು ಸಣ್ಣವು ಬಿಯರ ಬಾಟಲಿಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ 650 ಎಮ್.ಎಲ್ ದ ಒಟ್ಟು 10 ಬಾಟಲಿಗಳು, 330 ಎಮ್.ಎಲ್ ದ 19 ಹೀಗೆ ಒಟ್ಟು 29 ಬಾಟಲಿಗಳು ಇದ್ದವು. ಒಟ್ಟು ಮದ್ಯ 650*10=6 ಲೀಟರ್ 500 ಎಮ್.ಎಲ್ ಮತ್ತು 330*19=6 ಲೀಟರ 270 ಎಮ್ ಎಲ್ ಹೀಗೆ ಒಟ್ಟು 12 ಲೀಟರ 770 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ 650 ಎಮ್.ಎಲ್ ಬಾಟಲಿ ಮೇಲೆ ಎಮ್.ಆರ್.ಪಿ ಬೆಲೆ 130*10=1300=00 ರೂ. ಗಳು ಮತ್ತು 330 ಎಮ್.ಎಲ್ ಬಾಟಲಿ ಮೇಲೆ ಎಮ್.ಆರ್.ಪಿ ಬೆಲೆ 70*10=1330=00 ರೂ. ಒಟ್ಟು ರೂ. 2630=00 ರೂ. ಗಳು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು 4-30 ಪಿಎಮ್ ದಿಂದ 5-30 ಪಿಎಮ್ ದವರೆಗೆ ಪಂಚನಾಮೆ ಜರುಗಿಸಿ, 6-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ, ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 01/2019 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:-03/2019 ಕಲಂ 78[3] ಕೆಪಿ ಯ್ಯಾಕ್ಟ :- ದಿನಾಂಕ 07/01/2019 ರಂದು 3 ಪಿಎಮ್ ಕ್ಕೆ ಭೀ.ಗುಡಿಯ ಜ್ಯೋತಿ ಧಾಬಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ  ಮಲ್ಲಪ್ಪ ತಂದೆ ನಾಗಪ್ಪ ದೊಡ್ಡಮನಿ ವ:45ವರ್ಷ, ಜಾ:ಹೊಲೆಯ, ಉ:ಪೇಂಟರ್, ಸಾ:ಹುಲಕಲ್ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 3680=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 3.15 ಪಿಎಮ್ ದಿಂದ 4.15 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 4.30 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 5.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 01/2019 ಕಲಂ 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 04/2019 ಕಲಂ 420 ಐಪಿಸಿ ಮತ್ತು 78[3] ಕೆಪಿ ಯ್ಯಾಕ್ಟ :- ದಿನಾಂಕ 07/01/2019 ರಂದು 5.40 ಪಿಎಮ್ ಕ್ಕೆ ಭೀ.ಗುಡಿಯ ಕೋರಿಕೆ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿಜಯಕುಮಾರ ತಂದೆ ತಿಪ್ಪಣ್ಣ ರಾಠೋಡ ವ:30ವರ್ಷ, ಜಾ:ಲಂಬಾಣಿ ಉ:ಅಟೋಚಾಲಕ, ಸಾ:ಹೊತಪೇಟ ಮುಂದಿನ ತಾಂಡಾ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಸಿಪಿಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 960=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ 4)ಡು ಕಂಪನಿಯ ಒಂದು ಮೊಬೈಲ್ ಅ.ಕಿ. 300=00 ನೇದ್ದವುಗಳನ್ನು 5.50 ಪಿಎಮ್ ದಿಂದ 6.50 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 7 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಠಾಣೆ ಗುನ್ನೆ ನಂ 04/2019 ಕಲಂ 420 ಐಪಿಸಿ ಮತ್ತು 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 07/2019 ಕಲಂ 78[3] ಕೆ.ಪಿ ಆಕ್ಟ :- ದಿನಾಂಕ 07/01/2019 ರಂದು ಸಾಯಂಕಾಲ 16-45 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು  ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ  ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/01/2019 ರಂದು ಮದ್ಯಾಹ್ನ  14-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಕನ್ಯಾಕೊಳ್ಳುರ ಬೇಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ. ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಫಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ   ದಾಳಿ ಕುರಿತು ಕನ್ಯಾಕೊಳ್ಳುರ ಬೇಸ್ ಹತ್ತಿರ ಹೋಗಿ ನಿಗಾ ಮಾಡಿ ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಒಬ್ಬ ವ್ಯಕ್ತಿ ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ವ್ಯಕ್ತಿ ದಾಳಿಯಲ್ಲಿ ಸಿಕ್ಕಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಗೆ   ಅಂಗಶೋಧನೆ ಮಾಡಿದಾಗ ನಗದು ಹಣ 720=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮದ್ಯಾಹ್ನ 15-00 ಗಂಟೆಯಿಂದ ಸಾಯಂಕಾಲ 16-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿದ್ದು ಓಡಿ ಹೋದ ಆರೋಪಿತನ ಹೆಸರು ವಿಳಾಸದ ಬಗ್ಗೆ ತಿಳಿದುಕೊಂಡು ದಾಳಿಯಲ್ಲಿ ಸಿಕ್ಕ ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 02/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 17-30 ಗಂಟೆಗೆ  ಠಾಣೆ ಗುನ್ನೆ ನಂಬರ 07/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:-08/2019 ಕಲಂ 78(3) ಕೆ.ಪಿ.ಆ್ಯಕ್ಟ:- ದಿನಾಂಕ 07/01/2018 ರಂದು 4-50 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೇಂದರೆ ಶಹಾಪೂರ ನಗರದ ಸಕರ್ಾರಿ ಆಸ್ಪತ್ರೆ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ, ಅಂತ ಖಚಿತ ಬಾತ್ಮೀ ಬಂದ್ದಿದ್ದರ ಮೇರೆಗೆ ಮಾಹಿತಿ ವಿಷಯ ಠಾಣೆಯಲ್ಲಿದ್ದ ಶ್ರೀ ರಾಜಕುಮಾರ ಪಿ,ಎಸ್,ಐ(ಕಾ.ಸು) ರವರಿಗೆ ಮತ್ತು ಸಿಬ್ಬಂದಿಯವರಾದ ಬಾಬು ಹೆಚ್ ಸಿ-162, ಗಜೇಂದ್ರ ಪಿಸಿ-313 ಮತ್ತು ನಾಗರಡ್ಡಿ ಎಪಿಸಿ-161 ರವರಿಗೆೆ ಬಾತ್ಮಿ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ಹೇಳಿ, ದಾಳಿ ಕುರಿತು ಹೋಗುವ ಸಂಬಂದ ಬಾಬು ಹೆಚ್ ಸಿ-162 ರವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ತಿಳಿಸಿದೆನು. ಬಾಬು ಹೆಚ್ ಸಿ ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 27 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರ ತಾ|| ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವಯ|| 25 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ತಾ|| ಶಹಾಪೂರ ಇವರಿಗೆ 5.15 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ್ದರ ಮೇರೆಗೆ ಸದರಿಯವರಿಗೆ ಖಚಿತ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಹಾಗೂ ಬಾಬು ಹೆಚ್ ಸಿ-162, ಗಜೇಂದ್ರ ಪಿಸಿ-313 ಹಾಗೂ ನಾಗರಡ್ಡಿ ಎಪಿಸಿ-161 ರವರೊಂದಿಗೆ ಸರ್ಚ ಲೈಟ ಸಮೇತ ಠಾಣೆಯ ಸಕರ್ಾರಿ ಜೀಪ ನಂ: ಕೆಎ-33 ಜಿ-0138 ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ 5-20 ಪಿ.ಎಂ ಕ್ಕೆ ಹೊರಟು ಶಹಾಪೂರ ನಗರದ ಸಕರ್ಾರಿ ಆಸ್ಪತ್ರೆಯಿಂದ ಸ್ವಲ್ಪ ದೂರ 5-30 ಪಿ.ಎಂ ಕ್ಕೆ  ಹೊಗಿ ನಮ್ಮ ಜೀಪ ನಿಲ್ಲಿಸಿ ಜೀಪನಿಂದ ಕೆಳಗೆ ಇಳಿದು ನಡೆದುಕೊಂಡು 5.35 ಪಿ.ಎಂ ಕ್ಕೆೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ ಸಕರ್ಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ನೊಡಿ ನಾವು ಅವರಿಬ್ಬರೂ ಇದು ಬಾಂಬೆ ಮಟಕಾ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ನಾನು ಮತ್ತು ನಮ್ಮ ಠಾಣೆಯ ಪಿ,ಎಸ್,ಐ ಮತ್ತು ಸಿಬ್ಬಂದಿಯವರು ಕೂಡಿ ಅವರಿಬ್ಬರ ಮೇಲೆ 5-40 ಪಿ.ಎಂ ಕ್ಕೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿರುವವರಿಬ್ಬರಲ್ಲಿ ಒಬ್ಬನು ಸಿಕ್ಕಿದ್ದು ಇನ್ನೊಬ್ಬನು ಓಡಿ ಹೊದನು. ಸಿಕ್ಕಿಬಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಅಬ್ದುಲಭಾಷಾ ತಂದೆ ನಬಿಸಾಬ ಮುಲ್ಲಾ ವಯ|| 35 ಉ|| ಮಟಕಾ ಬರೆದುಕೊಳ್ಳುವದು ಜಾ|| ಮುಸ್ಲಿಂ ಸಾ|| ಕಿರಿಹಯ್ಯಾಳ ತಾ|| ಶಹಾಪೂರ ಜಿ|| ಯಾದಗಿರ  ಅಂತ ತಿಳಿಸಿದನು. ಪಂಚರ ಸಮಕ್ಷಮ ಸದರಿಯವನ ಅಂಗಶೋಧನೆ ಮಾಡಿದಾಗ ಆತನ ಹತ್ತಿರ ಮಟಕಾ ಅಂಕಿ ಸಂಖ್ಯೆ ಬರದುಕೊಂಡ ನಗದು ಹಣ 630- ರೂಪಾಯಿ, ಒಂದು ಬಾಲ್ ಪೆನ್ ಅ:ಕಿ: 00=00 ರೂ  ಒಂದು ಮಟಕಾ ಅಂಕಿ ಸಖ್ಯೆಗಳನ್ನು ಬರೆದುಕೊಂಡ ಚೀಟಿ ಅ:ಕಿ: 00=00 ರೂ ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 5-40 ಪಿ.ಎಂ ದಿಂದ 6-40 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆ ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯ ಕಾಲಕ್ಕೆ ಓಡಿಹೊದ ಇನ್ನೊಬ್ಬ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಸಿಕ್ಕಿಬಿದ್ದ ಅಬ್ದುಲಬಾಷಾ ಈತನಿಗೆ ವಿಚಾರಿಸಲಾಗಿ ಓಡಿಹೋದವನ ಹೆಸರು ಸಿದ್ದನಗೌಡ ಪಾಟೀಲ ಸಾ|| ಬಿಜಾಸಪೂರ @ ಕೃಷ್ಣಾಪೂರ ತಾ|| ಸೂರಪೂರ ಅಂತ ತಿಳಿಸಿದನು. ಸಿದ್ದನಗೌಡ ಪಾಟೀಲ ಸಾ|| ಬಿಜಾಸಪೂರ @ಕೃಷ್ಣಾಪೂರ ತಾ|| ಸೂರಪೂರ ಈತನನ್ನು ನಾನು ಮತ್ತು ನಮ್ಮ ಪಿ,ಎಸ್,ಐ ಹಾಗೂ ಸಿಬ್ಬಂದಿಯವರು ನೋಡಿದ್ದು ಆತನನ್ನು ಇನ್ನೋಮ್ಮೆ ನೋಡಿದರೆ ಗುರುತಿಸುತ್ತೆವೆ.  ದಾಳಿಯಲ್ಲಿ ಸಿಕ್ಕ ಒಬ್ಬ ವ್ಯೆಕ್ತಿಯೊಂದಿಗೆೆ ಎಲ್ಲರೂ ಕೂಡಿ ಮರಳಿ ಠಾಣೆಗೆ 7-00 ಪಿ.ಎಂ ಕ್ಕೆ ಬಂದು ವರದಿ ತಯ್ಯಾರಿಸಿ. ಒಬ್ಬ ಆರೋಪಿ, ಮತ್ತು ಜಪ್ತಿ ಪಂಚನಾಮೆ, ಮುದ್ದೆಮಾಲು, ಹಾಜರಪಡಿಸಿ 7-30 ಪಿ.ಎಂ ಕ್ಕೆ ಮುಂದಿನ  ಕ್ರಮ ಕೈಕೊಳ್ಳಲು ವರದಿ ನೀಡಿರುತ್ತೆನೆ. ಅಂತಾ ವರದಿ ಕೊಟ್ಟಿದ್ದು ಸದರಿ ವರದಿಯ ಸಾರಾಂಸವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್,ಸಿ ನಂ-03/19 ಪ್ರಕಾರ ಪ್ರಕರಣ ದಾಖಲಿಸಿಕೊಂಡು ನಂತರ ಕಲಂ 78(3) ಕೆ,ಪಿ ಆಕ್ಟ ಪ್ರಕಾರ ಪ್ರಕರಣ ದಾಕಲು ಮಾಡಿಕೊಮಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಣ್ಣ ಪಿಸಿ.424 ರವರು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಮಡು ಠಾಣೆಗೆ 8-45 ಪಿಎಂ ಕ್ಕೆ ಬಂದು ಅನುಮತಿ ಹಾಜರು ಪಡಿಸಿದ್ದರಿಂದ ಶಹಾಪೂರ ಠಾಣೆಯ ಗುನ್ನೆ ನಂ 08/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ 279 ಐ.ಪಿ.ಸಿ ಸಂ. 187 ಐ.ಎಮ್.ವ್ಹಿ ಆಕ್ಟ್ :- ದಿನಾಂಕ: 05/01/2019 ರಂದುರೂಟ್ ನಂ: 7677 ನೇದ್ದಕ್ಕೆ ಬಸ್ ನಂ: ಕೆ.ಎ-32 ಎಫ್-2014 ನೇದ್ದಕ್ಕೆ ಕಲಬುಗರ್ಿ-ಬೆಂಗಳೂರ ಕರ್ತವ್ಯಕ್ಕೆ ನೇಮಿಸಿದ್ದು ಇರುತ್ತದೆ. ನಾನು ಮತ್ತು ನಿವರ್ಾಹಕನಾದರಾಮು ನಿವರ್ಾಹಕ ಸಂಖ್ಯೆ : 3838 ಇಬ್ಬರೂಕೂಡಿ ದಿನಾಂಕ: 05/01/2019 ರಂದುರಾತ್ರಿ 7:00 ಗಂಟೆಗೆ ಕಲಬುಗರ್ಿ ಬಿಟ್ಟು ದಿನಾಂಕ: 06/01/2019 ರಂದು ಬೆಳಿಗ್ಗೆ ಬೆಂಗಳೂರು ತಲುಪಿದ್ದುಇರುತ್ತದೆ. ನಂತರ ವಿಶ್ರಾಂತಿ ಪಡೆದುಕೊಂಡು ದಿನಾಂಕ:  06/01/2019 ರಂದುರಾತ್ರಿ 9:00 ಪಿ.ಎಮ್ ಕ್ಕೆ ಪ್ರಯಾಣಿಕರಿಗೆಕರೆದುಕೊಂಡು ಬೆಂಗಳೂರಿನಿಂದ ಕಲಬುಗರ್ಿಗೆ ಹೋರಟಿದ್ದುಇರುತ್ತದೆ. ಹೀಗಿದ್ದುಇಂದು ದಿನಾಂಕ: 07/01/2019 ರಂದು ಬೆಳಿಗ್ಗೆ 6:00 ಎ.ಎಮ್ ಕ್ಕೆ ಬೀದರ-ಬೆಂಗಳೂರ ಮುಖ್ಯರಸ್ತೆಯ ಮೇಲೆ ಶೆಳ್ಳಗಿ ಕ್ರಾಸ್ದಾಟಿಕವಡಿಮಟ್ಟಿ ಸಮೀಪ ನಾನು ನನ್ನ ಬಸ್ಸನ್ನು ಚಲಾಯಿಸಿಕೊಂಡು ಕಲಬುಗರ್ಿಕಡೆಗೆ ಹೋಗುತ್ತಿದ್ದಾಗ, ನನ್ನ ಮುಂದುಗಡೆಅಂದರೆ ಸುರಪೂರಕಡೆಗೆಒಬ್ಬ ಲಾರಿ ನಂ:  ಕೆ.ಎ-52 ಎ-7388 ನೇದ್ದರ ಚಾಲಕ ತನ್ನ ಲಾರಿಯನ್ನುಅತೀ ವೇಗ ಮತ್ತುಅಲಕ್ಷತನದಿಂದ ಚಲಾಯಿಸಿಕೊಂಡು ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದಾಗ, ನಾನು ಅವನಿಗೆ ಸೈಡ್ಕೋಡುವಂತೆ ಹಾರ್ನ ಹಾಕಿದಾಗ ಅವನು ನನಗೆ ಕೈ ಮಾಡಿ ಮುಂದೆ ಹೋಗುವಂತೆ ಸೈಡ್ ನೀಡಿದಾಗ ನಾನು ನನ್ನ ಬಸ್ಸನ್ನು ಮುಂದಕ್ಕೆ ಸೈಡನಿಂದ ಹೋಗುತ್ತಿದ್ದಾಗ, ಒಮ್ಮೆಂದೋಮ್ಮಲೆ ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ಬಲಗಡೆಕಟ್ ಮಾಡಿದ್ದರಿಂದ ಲಾರಿಯ ಹಿಂದಿನ ಭಾಗ ನನ್ನ ಬಸ್ಸಿನ ಮುಂದಿನ ಗ್ಲಾಸಿಗೆ ಮತ್ತು ಬಸ್ಸಿನ ಬಾಗಿಲಿಗೆ ಗುದ್ದಿ ಬಸ್ಸು ಜಖಂಗೊಂಡಿದ್ದು ಇರುತ್ತದೆ. ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ನನ್ನ ಬಸ್ಸಿಗೆ ಡಿಕ್ಕಿಪಡಿಸಿ ತನ್ನ ಲಾರಿಯನ್ನು ನಿಲ್ಲಿಸದೇಅತೀ ವೇಗವಾಗಿ ಚಲಾಯಿಸಿಕೊಂಡು ಓಡಿ ಹೋಗಿದ್ದುಇರುತ್ತದೆ. ಸದರಿ ಲಾರಿಚಾಲಕನ್ನು ನಾನು ನೋಡಿದ್ದುಅವನ್ನು ಪುನಃ ನೋಡಿದರೆಗುರುತಿಸುತ್ತೇನೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗಾಗಲೀ ಮತ್ತು ನಮಗಾಗಲೀ ಯಾವುದೇಗಾಯ ವಗೈರೆಆಗಿರುವುದಿಲ.ಲಾರಿ ನಂ: ಕೆ.ಎ-52 ಎ-7388 ನೇದ್ದರ ಚಾಲಕನು ತನ್ನ ಲಾರಿಯನ್ನುಅತೀ ವೇಗ ಮತ್ತು ನಿಷ್ಕಳಜಿತನದಿಂದ ಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿ, ನನ್ನ ಬಸ್ಸಿಗೆ ಡಿಕ್ಕಿಪಡಿಸಿ ಬಸ್ಸನ್ನುಜಖಂ ಗೊಳಿಸಿದ್ದು, ಸದರಿ ಲಾರಿಚಾಲಕನನ್ನು ಪತ್ತೆ ಮಾಡಿ ಅವನ ವಿರುದ್ಧ ಕಾನೂನು ಪ್ರಕಾರಕ್ರಮ ಕೈಕೊಳ್ಳಲು ವಿನಂತಿಅಂತಾಕೊಟ್ಟ ಫಿಯರ್ಾದಿ ಅಜರ್ಿಸಾರಾಂಶದ ಮೇಲಿಂದಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ. 
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ: 341,323,324,504,354 ಸಂ: 34 ಐ.ಪಿ.ಸಿ :- ದಿನಾಂಕ: 03/01/2019 ರಂದು ಮುಂಜಾನೆಅಂದಾಜು 9-00 ಗಂಟೆಗೆ ಮನೆಯ ಮುಂದೆ ಸಾರ್ವಜನಿಕರಸ್ತೆಯಲ್ಲಿದ್ದಾಗಅದೇ ಸಮಯಕ್ಕೆ ಶ್ರೀದೇವಿ ಗಂಡ ಶಿವಣ್ಣ ಮುಧೋಳ ಅವಳ ಮಗಳಾದ ದೇವಮ್ಮಗಂಡ ಹಣಮಂತ ನಾಯ್ಕೋಡಿ, ಅಳಿಯನಾದ ಹಣಮಂತ ನಾಯ್ಕೋಡಿಎಲ್ಲರುತಮ್ಮ ಮನೆಯಿಂದ ಬಂದವರೆಅವರಲ್ಲಿಯ ಶ್ರೀದೇವಿ ಇವಳು ತನ್ನಗಂಡನಿಗೆ ನಿನಗೆ ಬಹಳ ಸೊಕ್ಕು ಬಂದಿದೆ. ಕೆ.ಇ.ಬಿ. ವೈರ್ಜೋತು ಬಿದ್ದಿರುತ್ತವೆ. ಸಂಬಂಧಪಟ್ಟವರಿಗೆ ಹೇಳಬೇಕು ಅಂತಾಇತ್ಯಾದಿ ಗಂಡನಿಗೆ ಬೈಯುತ್ತಿರುವಾಗ ಸದರದೇವಮ್ಮಗಂಡ ದಿ. ನಂದಪ್ಪ ಇವಳು ಗಂಡನ ಮೇಲೆ ಹಾಕಿ ಏಕೆ ಬೈಯುತ್ತಿರುವಿ? ಅಂತಾ ಕೇಳಿದ ತಕ್ಷಣಎಲ್ಲರು ನನಗೆ ಎಲೇ ಸೂಳೆ ನಿನಗೆ ಬಹಳ ಸೊಕ್ಕು ಬಂದಿದೆಅನ್ನುತ್ತಾಒಡೆಯಲು ಬಂದತಕ್ಷಣ ಮನೆಯೊಳಗೆ ಹೋಗುತ್ತಿದ್ದ ನನಗೆ ಅವರಲ್ಲಿಯ ಶ್ರೀದೇವಿ ಗಂಡ ಶಿವಣ್ಣ ಇವಳು ಇವಳು ನನ್ನಕೂದಲು ಹಿಡಿದುಜಗ್ಗಾಡಿ ಮುಂದೆ ಹೋಗದಂತೆ ಹಿಡಿದು ನಿಲ್ಲಿಸಿ ಕೈಯಿಂದ ಕಪಾಳ ಮೆಲೆ ಹೊಡೆದಳು. ದೇವಮ್ಮಳುಒಂದು ಬಡಿಗೆಯಿಂದ ನನ್ನ ಬಲಗಾಲ ತೊಡೆಗೆ, ಎಡಗಾಲ ಮೊಳಕಾಲಿಗೆ, ಎಡ ಭುಜಕ್ಕೆ ಹೊಡೆದಳು. ಜಗಳ ಬಿಡಿಸಳು ಬಂದ ನನ್ನತಂದೆ ಬಸವರಾಜನಿಗೆ ಹಣಮಂತನುಒಂದು ಹಿಡಿಗಲ್ಲಿನಿಂದಎಡಮಗ್ಗಲಿಗೆ ಹೊಡೆದನು. ಸದರ ಹಣಮಂತ ನಾಯ್ಕೋಡಿಇತನು ನನ್ನತಲೆಯ ಮೇಲಿನ ಕೂದಲು ಹಿಡಿದುಜಗ್ಗಾಡಿ ಮಾನ ಹಾನಿ ಮಾಡಿದನು.  ಘಟನೆಯನ್ನು ನೋಡಿ ನನ್ನತಾಯಿ ಸರಸ್ವತಿ ಮತ್ತು ಬಸಮ್ಮಗಂಡ ಬಸವರಾಜ ಆಲ್ದಾಳ ಇವರು ಬಂದು ಜಗಳ ಬಿಡಿಸಿದರು. ಜಗಳದಲ್ಲಿ ನನಗೆ ಮತ್ತು ನನ್ನತಂದೆ ಬಸವರಾಜನಿಗೆಗಾಯ ಪೆಟ್ಟಾಗಿದ್ದು, ಅಂದಿನ ದಿವಸ ರಾತ್ರಿಯೇ ಸುರಪುರ ಸಕರ್ಾರಿಆಸ್ಪತ್ರೆಯಲ್ಲಿಉಪಚಾರ ಪಡೆದುಕೊಂಡಿರುತ್ತೇವೆ. ನಾವು ಉಪಚಾರ ಹೊಂದುತಡವಾಗಿಠಾಣೆಗೆ ಬಂದು ಫಿಯರ್ಾದಿ ನೀಡಿದ್ದು, ಜಗಳಕ್ಕೆ ಕಾರಣಿಭೂತರಾದ ಶ್ರೀದೇವಿ ಗಂಡ ಶಿವಣ್ಣ, ದೇವಮ್ಮಗಂಡ ಹಣಮಂತ ನಾಯ್ಕೊಡಿ ಮತ್ತು ಹಣಮಂತ ನಾಯ್ಕೋಡಿಇವರೆಲ್ಲರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ. ಅಂತಾಕೊಟ್ಟ ಫಿಯರ್ಾದಿ ಹೇಳಿಕೆ ಸಾರಾಂಶದಆಧಾರದ ಮೇಲಿಂದಠಾಣಾಗುನ್ನೆ ನಂ: 10/2019 ಕಲಂ: 341,323,324,504,354 ಸಂ: 34 ಐ.ಪಿ.ಸಿ ನೇದ್ದರಅಡಿಯಲ್ಲಿ ಗುನೆ ದಾಖಲು ಮಾಡಿಕೊಂಡುತನಿಖೆಕೈಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!