ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-01-2019

By blogger on ಶುಕ್ರವಾರ, ಜನವರಿ 4, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-01-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 01/2019 ಕಲಂ: 279  ಐಪಿಸಿ  :- ದಿನಾಂಕ:03-01-2019 ರಂದು 8 ಎ.ಎಂ.ಕ್ಕೆ ನಮ್ಮ ತಾಯಿಯ ಅಣ್ಣ ಸೊದರಮಾವನಾದ ದ್ಯಾವಪ್ಪ ತಂದೆ ಪರಮಣ್ಣ ಹಾದಿಮನಿ ಸಾ:ಶಾಂತಪೂರ ಇವರಿಗೆ ದುರ್ಗಪ್ಪ ವಯಾ:30 ವರ್ಷದ ಒಬ್ಬನೆ ಮಗನಿದ್ದು ಸದರಿ ಅಳಿಯ ದುರ್ಗಪ್ಪನಿಗೆ ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು ಒಬ್ಬ ಗಂಡು ಮಗ ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾರೆ. ದುರ್ಗಪ್ಪನ ಹೆಂಡತಿಯಾದ ಶ್ರೀಮತಿ ಅಯ್ಯಮ್ಮ ಇವಳು ಸುಮಾರು 6-7 ತಿಂಗಳದ ಹಿಂದೆ ಹಾವು ಕಚ್ಚಿ ಮೃತಪಟ್ಟಿದ್ದು, ಇಬ್ಬರು ಮಕ್ಕಳನ್ನು ದುರ್ಗಪ್ಪ ಈತನು ಸಲಹುತ್ತಿದ್ದನು. ಹೀಗಿರುವಾಗ ದಿನಾಂಕ:01-01-2019 ರಂದು ಹುಣಸಿಹೊಳಿ ದೇವಿ ಜಾತ್ರೆ ಇದ್ದ ಪ್ರಯುಕ್ತ ಅಳಿಯನಾದ ದುರ್ಗಪ್ಪ ಈತನು ಮಧ್ಯಾಹ್ನ ಸುಮಾರಿಗೆ ತನ್ನ ಮೊಟಾರ ಸೈಕಲ್ ನಂಬರ ಕೆಎ-03 ಇಡಬ್ಲೂ-1662 ನೇದ್ದರ  ಮೇಲೆ ಹುಣಸಿಹೊಳೆ ಜಾತ್ರೆಗೆ ಹೋಗಿ ಜಾತ್ರೆ ಮುಗಿಸಿಕೊಂಡು ರಾತ್ರಿ 10 ಗಂಟೆ ಸುಮಾರಿಗೆ ಅಳಿಯ ದುರ್ಗಪ್ಪನು ತನ್ನ ಮೊಟಾರ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷಿನತದಿಂದ ನಡೆಸಿಕೊಂಡು ಶಾಂತಪೂರಕ್ಕೆ ಬರುವ ಕುರಿತು ಶ್ರೀ ಬಾಳು ಶಾಲೆ ಹತ್ತಿರ ಬರುತ್ತಿರುವಾಗ ರೋಡಿನಲ್ಲಿ ಸೈಕಲ್ ಮೋಟಾರ ಸ್ಕಿಡ್ಡ್ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ತಲೇ ಭಾರಿ ರಕ್ತಗಾಯ ಮಾಡಿಕೊಂಡಿದ್ದು, ಆಗ ಅದೇ ರಸ್ತೆಯ ಮುಖಾಂತರ ಹೋಗುತ್ತಿದ್ದ ಶಾಂತಪೂರ ಗ್ರಾಮದ ರವಿಕುಮಾರ ತಂದೆ ಬಸಣ್ಣ ಹಾದಿಮನಿ, ಬೀಮಣ್ಣ ತಂದೆ ನಾಗಪ್ಪ ಪೊಲೀಸ್ ಪಾಟೀಲ ಈ ಇಬ್ಬರು ಘಟನೆಯನ್ನು ನೋಡಿ ದುರ್ಗಪ್ಪನನ್ನು 108 ಅಂಬುಲೇನ್ಸ ವಾಹನಕ್ಕೆ ಕರೆ ಮಾಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕಳಿಸಿಕೊಟ್ಟು ನಮಗೆ ವಿಷಯ ತಿಳಿಸಿದಾಗ ನಾನು ದುರ್ಗಪ್ಪನ ತಾಯಿಯಾದ ದುರ್ಗಮ್ಮ, ಹಾಗೂ ಸಣ್ಣ ನಿಂಗಪ್ಪ ತಂದೆ ಬೀಮಣ್ಣ ಪೊಲೀಸ್ ಪಾಟೀಲ ಮೂವರು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ದುರ್ಗಪ್ಪನ ತಲೆಗೆ ಭಾರಿ ರಕ್ತಗಾಯವಾಗಿದ್ದನ್ನು ನೋಡಿದೆವು. ನಂತರ ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಅದೆ ದಿವಸ ಹೆಚ್ಚಿನ ಉಪಚಾರ ಕುರತು ಕಲಬುರಗಿ ಸರಕಾರಿ ಆಸ್ಪತ್ರೆಗೆ (ಜಯದೇವ) ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ:03-01-2019 ರಂದು 3 .ಎ.ಎಂ.ಕ್ಕೆ ಅಳಿಯ ದುರ್ಗಪ್ಪ ಈತನು ಮೃತಪಟ್ಟಿದ್ದು ಇರುತ್ತದೆ. ಅಳಿಯ ದುರ್ಗಪ್ಪನ ಹಿಂದೆ ಮುಂದೆ ಯಾರು ಇರದ ಕಾರಣ ನಾನು ಅವನ ತಾಯಿ ದುರ್ಗಮ್ಮ ಇಬ್ಬರು ಉಪಚಾರ ಕುರಿತು ಕಲಬುರಗಿಯಲ್ಲಿಯೆ ಇದ್ದು ಇಂದು ಠಾಣೆಗೆ ಬಂದ್ದಿದ್ದು ಇರುತ್ತದೆ. ಸದರಿ ಅಳಿಯ ದುರ್ಗಪ್ಪ ಈತನು ತನ್ನ ಮೋಟಾರ ಸೈಕಲ್ನ್ನು ತಾನೇ ಅತೀ ವೇಗ ಅಲಕ್ಷಿತನದಿಂದ ನಡೆಸಿಕೊಂಡು ಹೋಗುತ್ತಾ ತನ್ನಿಂದತಾನೆ ಮೋಟಾರ ಸೈಕಲ್ ಸ್ಕಿಡ್ಡ ಮಾಡಿ ಕೆಳಗೆ ಬಿದ್ದಿದ್ದರಿಂದ ತಲೇಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಹೇಳಿ ಗಣಕೀಕರಿಸಿದ್ದು ನಿಜವಿರುತ್ತದೆ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 01/2019 ಕಲಂ: 323, 324, 504, 506 ಸಂಗಡ 34 ಐಪಿಸಿ :- ದಿನಾಂಕ: 03/01/2019 ರಂದು 09.30 ಎಎಂಕ್ಕೆ ಶ್ರೀ. ಸುರೇಶತಂದೆಖೇಮುನಾಯ್ಕರಾಠೋಡ ವ:25 ವರ್ಷಜಾ: ಲಂಬಾಣಿ ಉ:ಕೂಲಿಕೆಲಸ ಸಾ: ಉಕ್ಕನಾಳ ಖೇಮುನಾಯ್ಕತಾಂಡಾತಾ: ಶಹಾಪೂರರವರುಠಾಣೆಗೆ ಬಂದುತನಗೆತಮ್ಮತಾಂಡದಲ್ಲಿ ಹೊಡೆದಿದ್ದಾರೆ ಮೊದಲುಆಸ್ಪತ್ರೆಗೆ ಕಳುಹಿಸಿಕೊಡಿ ಅಂತಾ ತಿಳಿಸಿದ ಮೇರೆಗೆಆಸ್ಪತ್ರೆಗೆ ಕಳುಹಿಸಿಕೊಟ್ಟು, ನಂತರ ನಾನು ಆಸ್ಪತ್ರೆಗೆ ಬೇಟಿ ಮಾಡಿ ಸದರಿ ಗಾಯಾಳುವಿನ ಹೇಳಿಕೆ ಪಡೆದುಕೊಂಡು ಬಂದಿದ್ದು, ಸದರಿ ಪಿಯರ್ಾದಿ ಸಾರಂಶದಏನಂದರೆ, ಇಂದು ದಿನಾಂಕ:03/01/2018 ರಂದು 06.30 ಎಎಂ ಸುಮಾರಿಗೆ ನಾನು ಉಕ್ಕನಾಳ ಸೀಮಾಂತರದಲ್ಲಿರುವ ನಮ್ಮ ಹೊಲಕ್ಕೆ ಹೊಗುವಾಗ ದಾರಿಯಲ್ಲಿ 1) ಪುತ್ರ್ಯಾ @ ದೇವಪುತ್ರತಂದೆ ಬೀಮಲ್ಯಾರಾಠೋಡ ವಯಾ: 38 ವರ್ಷ ಉ: ಕೂಲಿ ಕೆಲಸ ಜಾ; ಲಂಬಾಣಿ 2) ಪುಟ್ಟ್ಯಾತಂದೆಚಂದ್ಯಾಚವ್ಹಾಣ ವಯಾ::25 ಉ: ಕೂಲಿ ಜಾ: ಲಂಬಾಣಿ 3) ಚಂದ್ಯಾತಂದೆ ಭೀಮಲ್ಯಾ ವಯಾ; 45 ಜಾ: ಲಂಬಾಣಿಎಲ್ಲರೂ ಸಾ: ಉಕ್ಕನಾಳ ಕಾಳುನಾಯ್ಕ ತಾಂಡಾಇವರೆಲ್ಲರೂಕೂಡಿ ನನ್ನ ಹತ್ತಿರ ಬಂದು ಮಗನೆ ಮೋನ್ನೆ ನಮ್ಮ ರಾಶಿ ಮಸಿನ ಯಾಕೆತಗೆದುಕೊಂಡು ಹೋಗಿಲ್ಲ. ಬೇರೆ ರಾಶಿ ಮಸಿನದಿಂದ ಯಾಕೆ ರಾಶಿ ಮಾಡಿಸಿದಿ ಬೋಸಡಿ ಮಗನೆ ಅಂತಾಅವಾಚ್ಯವಾಗಿ ಬೈಯತೊಡಗಿದರು. ಆಗ ನಾನು ನನಗೆ ಅವಸರಇದ್ದಕಾರಣ ನನ್ನ ಹೊಲದ ರಾಶಿಯನ್ನು ಬೇರೆ ಮಸಿನ ದಿಂದ ಮಾಡಿಸಿದ್ದೇನೆ. ನಿಮಗೇನಾಯಿತು. ಅಂತಾಅಂದಾಗ ಪುತ್ರ್ಯಾ @ ದೇವಪೂತ್ರಈತನು ಸೂಳೆ ಮಗನೆ ನಮ್ಮನ್ನು ಬಿಟ್ಟು ಬೇರೆಯವರಕಡೆ ಹೋಗುವಷ್ಟು ಸೊಕ್ಕು ಬಂತಾ ನಿನಗೆ ಅಂತಾಅವಾಚ್ಯವಾಗಿ ಬೈಯುತ್ತಾ ನನಗೆ ಕೈಯಿಂದ ಬೆನ್ನಿಗೆ ಹೊಡೆದುಕುತ್ತಗೆಯ ಹತ್ತಿರಚೂರಿದನು. ಆಗ ಪುಟ್ಟ್ಯಾಈತನುಒಂದು ಬಡಿಗೆಯಿಂದ ನನ್ನಟೊಂಕಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಚಂದ್ಯಾಈತನು ನನಗೆ ಕೈಯಿಂದ ಹೊಡೆದು ಕೆಳಗೆ ಕೆಡವಿದನು. ಆಗ ನನಗೆ ಎರಡು ಕಣ್ಣುಗಳ ಹತ್ತರ ಮತ್ತುಎರಡು ಮೋಳಕಾಲಿನ ಹತ್ತಿರತರಚಿದ ಗಾಯಗಳಾಗಿರುತ್ತವೆ. ಅಷ್ಟರಲ್ಲಿಜೈರಾಮತಂದೆ ಖೇಮು ರಾಠೋಡ ಸಾ: ಖೆಮುನಾಯ್ಕತಾಂಡಾ ಮತ್ತುದೇವಪುತ್ರತಂದೆಗುಂಡಪ್ಪರಾಠೊಡ ಸಾ:ಖೇಮುನಾಯ್ಕತಾಂಡಾ ಇವರುಗಳು ನೋಡಿ ಬಿಡಿಸಿಕೊಂಡರು. ಆಗ ಸದರಿ ಮೂರುಜನರು, ನನಗೆ ಇವತ್ತು ಉಳದಿದಿ ಮಗನೆ ಇನ್ನೊಮ್ಮೆ ನಮ್ಮ ವಿರುದ್ಧ ಹೋದರ ನಿನಗೆ ಖಲಾಸ ಮಾಡುತ್ತೇವೆಅಂತಾಜೀವದ ಬೇದರಿಕೆ ಹಾಕಿರುತ್ತಾರೆ. ಸದರಿ ಮೇಲಿನ 03 ಜನರ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾಪಿಯರ್ಾದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 01/2019 ಕಲಂ: 323, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 01/2019 ಕಲಂ: 323, 354, 504, 506 ಸಂಗಡ 34 ಐಪಿಸಿ :- ದಿನಾಂಕ 03.01.2019 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಆರೋಪಿತರೆಲ್ಲಾರು ಸೇರಿ ಫಿರ್ಯಾದಿಯ ಮನೆಯನ್ನು ಸುತ್ತುವರೆದು ನೋಡಿದ ನಂತರ ಫಿರ್ಯಾದಿಯ ಮನೆಯ ಮುಂದೆ ಬಂದು ನೋಡುತ್ತಿದ್ದಾಗ ಫಿರ್ಯಾದಿ ನಮ್ಮ ಮನೆ ಯಾಕ ಸುತ್ತುವರೆದಿದ್ದಿರಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲಾರು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಕೈಹಿಡಿದು ಎಳೆದಾಡಿ ಜೀವದ ಬೆದರಿಕೆ ಹಾಕಿದ ನಂತರ ಫಿರ್ಯಾದಿ ಮತ್ತು ಆಕೆಯ ಸೊಸೆ ಹಾಗೂ ನೆಗೆಣ್ಣಿ ನಿನ್ನೆ ದಿನಾಂಕ 03.01.2019 ರಂದು ಗುರುಮಠಕಲ್ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡ ನಂತರ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ 04.01.2019 ರಂದು ಗುರುಮಠಕಲ್ ಠಾಣೆಗೆ ಬಂದು ನೀಡಿದ ಹೇಳೀಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 01/2019 ಕಲಂ: 323, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 01/2019 ಕಲಂ: 143, 147, 148, 323, 324, 504, 506 ¸ÀA 149 L¦¹ :- ದಿ: 03/01/19 ರಂದು 12.30 ಪಿಎಮ್ಕ್ಕೆ ಶ್ರೀ ಆನಂದ ತಂದೆ ಚಿದಾನಂದ ನಾಟೆಕಾರ ಸಾ: ಸಂಜೀವನಗರ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಸುಮಾರು 1 ವರ್ಷಗಳ ಹಿಂದೆ ನಮ್ಮ ಮನೆಯ ಪಕ್ಕದಲ್ಲಿರುವ ಸುಖಮುನಿ ಬಡಿಗೆರ ಇವರ ಮಗಳಾದ ಪೂಜಾ ಇವಳ ಜೋತೆ ಮೊಬೈಲ್ದಲ್ಲಿ ಮಾತನಾಡುವ ವಿಷಯವಾಗಿ ನನಗೆ ಮತ್ತು ಸುಖಮುನಿ ಬಡಿಗೇರ ಇವರ ಮದ್ಯ ತಕರಾರು ಆಗಿ ವೈಮನಸ್ಸು ಆಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 03.01.2019 ರಂದು ಬೇಳಗಿನ ಜಾವ 01.00 ಘಂಟೆ ಸುಮಾರಿಗೆ ಸಂಜೀವ ನಗರ ದಲ್ಲಿರುವ ನಮ್ಮ ಮನೆಯ ಮುಂದೆ ಮೊಬೈಲ್ದಲ್ಲಿ ನಮ್ಮ ಗೆಳೆಯನ ಜೋತೆ ಮಾತಾನಾಡುತ್ತಾ ಕುಳಿತಾಗ ಆರೋಪಿತರು ಬಂದವರೆ ಎಲೇ ಬೋಸಡಿ ಮಗನೇ ನನ್ನ ಮಗಳಾದ ಪೂಜಾ ಇವಳ ಜೋತೆ ಮೊಬೈಲ್ದಲ್ಲಿ ಮಾತನಾಡುತ್ತಿದ್ದಿಯಾ ಅಂತಾ ಕೇಳಿದಾಗ ನಾನೇಕೆ ನಿಮ್ಮ ಮಗಳ ಜೋತೆ ಮಾತನಾಡಲಿ ನಮ್ಮ ಗೆಳೆಯನ ಜೊತೆ ಮಾತನಾಡುತ್ತಿದ್ದೆನೆ, ಅಂತಾ ಅಂದಾಗ ಎಲ್ಲರೂ ಕೂಡಿ ಸುಳ್ಳು ಹೇಳುತ್ತಿಯಾ ಸೂಳೆ ಮಗನೇ ಅಂತಾ ಬೈದು ನಿನ್ನದು ಬಹಳ ಆಗಿದೆ  ಇವತ್ತು ನಿನಗೆ ಬಿಡುವುದಿಲ್ಲ ಅಂತಾ ಅವಾಚ್ಯವಾಗಿ ಬೈದು ಎಲ್ಲರು ಕೂಡಿ ಕೈಯಿಂದ ಮತ್ತು ಕಾಲಿನಿಂದ ನೆಲಕ್ಕೆ ಹಾಕಿ ಒದೆಯುತ್ತಿದ್ದಾಗ ಸುಖಮುನಿ ಈತನು ಮನೆಯಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಕೊಡಲಿಯಿಂದ ನನ್ನ ಬಲಗಾಲು ಮೊಳಕಾಲಿನ ಕೆಳಗೆ ಹಾಗೂ ತೆಲೆಗೆ ಹೋಡೆದು ರಕ್ತಗಾಯ ಮಾಡಿದನು. ನಂತರ ಸುಖಮುನಿ ಇವರ ಇನ್ನೊಬ್ಬ ಮಗಳಾದ ಪೂಜಾ ಇವಳು ಬಂದು ನನಗೆ ಅವಾಚ್ಯವಾಗಿ ಬೈದಿರುತ್ತಾಳೆ. ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಜೀವದ ಬೆದರಿಕೆ ಹಾಖಿ ಹೋದರು ಅಂತ ಕೊಟ್ಟ ಪಿರ್ಯಾಧಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 01/19 ಕಲಂ: 143, 147, 148, 323, 324, 504, 506, 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!