ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-12-2018
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 208/2018 ಕಲಂ 279, 337, 338, 304(ಎ) ಐಪಿಸಿ:-ದಿನಾಂಕ:10/12/2018 ರಂದು ಗಾಯಾಳು ಹುಣಸಗಿಗೆ ಬಂದು ಹುಣಸಗಿ ಚನ್ನಮ್ಮ ಚೌಕ್ ಹತ್ತಿರ ಹುಣಸಗಿ-ತೋಳಿಕೊಟಿ ರೋಡನ್ನು ದಾಟಿ 12.00 ಗಂಟೆಯ ಸುಮಾರಿಗೆ ಹುಣಸಗಿ ಅಗಸಿಯೊಳಗೆ ಹೊರಟಾಗ ಆರೋಪಿತನು ಹುಣಸಗಿ ಬಸ್ ನಿಲ್ದಾಣದ ಕಡೆಯಿಂದಾ ತನ್ನ ಮೋಟಾರ್ ಸೈಕಲ ನಂ. ಕೆಎ-33 ಕೆ-0084 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಗಾಯಾಳುವಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಗಾಯಳುವಿಗೆ ಬಲಗಾಲ ಗುಡಗಿಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು, ಬಲಗೈಯ ಮೊಳಕೈಗೆ ಹಾಗೂ ಮೂಗಿಗೆ ತರಚಿದ ಗಾಯವಾಗಿದ್ದು ಇರುತ್ತದೆ. ನಿನ್ನೆ ಗಾಯಳುವಿಗೆ ಹೆಚ್ಚನ ಉಪಚಾರಕ್ಕೆಂದು ವಿಜಯಪುರ ದವಾಖಾನೆಗೆ ತೆಗೆದುಕೊಂಡು ಹೋಗುವ ಅವಸರದಲ್ಲಿ ಯಾವುದೇ ದೂರು ಕೊಟ್ಟಿರುವದಿಲ್ಲಾ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ. ಇಂದು ದಿ:19/12/2018 ರಂದು 19.00 ಗಂಟೆಗೆ ಪ್ರಕರಣದಲ್ಲಿ ಗಾಯಾಳು ಮಗನಾದ ಗುರುಬಸಪ್ಪ ಹದ್ದನೂರ ಈತನು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಕೊಟ್ಟಿದ್ದೇನೆಂದರೆ, ದಿ:10/12/2018 ರಿಂದಾ ದಿ:19/12/2018 ರ ವರಗೆ ನಮ್ಮ ತಂದೆಯಾದ ಹಣಮಂತ್ರಾಯ ಇವರಿಗೆ ವಿಜಯಪುರ ಸಂಜೀವಿನಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು, ಇಂದಿನವರಗೆ ನಮ್ಮ ತಂದೆಗೆ ಆರಾಮವಾಗದೆ ಇದ್ದುದ್ದಕ್ಕೆ ಇಂದು ದಿನಾಂಕ:19/12/2018 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ಸಂಜೀವಿನಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಸಲಹೆಗೆ ವಿರುದ್ದವಾಗಿ ನಮ್ಮ ತಂದೆಗೆ ದವಾಖಾನೆಯಿಂದಾ ಬಿಡುಗಡೆ ಮಾಡಿಸಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಮರಳಿ ನಮ್ಮೂರಿಗೆ ಬರುತ್ತಿದಾಗ ಮನಗೂಳಿಯ ಸಮೀಪ 3.30 ಪಿ.ಎಂ ಸುಮಾರಿಗೆ ಮೃತಪಟ್ಟನು. ನಂತರ ನಮ್ಮ ತಂದೆಯ ಹೆಣವನ್ನು ಅದೇ ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಣಸಗಿ ಸರಕಾರಿ ದವಾಖಾನೆ ತಂದು ಹಾಕಿರುತ್ತೇವೆ ಅಂತಾ ಹೇಳಿಕ ಕೊಟ್ಟಿದ್ದರ ಸಾರಾಂಶದ ಮೇಲಿಂದಾ ಪ್ರಕರಣದಲ್ಲಿ ಕಲಂ.304 (ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಮುಖಾಂತರ ನಿವೇಧಿಸಿಕೊಂಡು ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 22/2018 ಕಲಂ: 323 354 504 506 ಐಪಿಸಿ :- ದಿನಾಂಕ 19/12/2018 ರಂದು ಪಿಯರ್ಾದಿದಾರರಾದ ಲಕ್ಷ್ಮೀಬಾಯಿ ಗಂಡ ಭೀಮಾಶಂಕರ ಹಡಪಾದ ವ-53 ಜಾ-ಹಡಪಾದ ಸಾ-ಮೈಲಾಪೂರ ಅಗಸಿ ಯಾದಗಿರಿ ದೂರಿನ ಸಾರಂಶವೆನಂದರೆ ನನಗೆ ಮೂರು ಜನ ಗಂಡು ಮಕ್ಕಳು ಎರಡು ಜನ ಹೆಣ್ಣು ಮಕ್ಕಳು ಇರುತ್ತಾರೆ. ಎಲ್ಲರಿಗೂ ಮದುವೆಯಾಗಿದ್ದು ನನ್ನ ಗಂಡ ತೀರಿ ಹೋದ ಮೇಲೆ ನನ್ನ ಮಕ್ಕಳು ಕುಲಕಸಬು (ಕಟಿಂಗ್ ಶಾಪ್ ) ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ಹೀಗಿದ್ದು ದಿನಾಂಕ 15/12/2018 ರಂದು ರಾತ್ರಿ 9 ಗಂಟೆಗೆ ನಮ್ಮ ಸಮಾಜದ ಮನೆಯ ಪಕ್ಕದಲ್ಲಿರುವ ಬಸು ತಂದೆ ಹಣಮಂತ ಇತನು ರಾತ್ರಿ ವೇಳೆಯಲ್ಲಿ ಅಂದಾಜು 10 ರಿಂದ 11 ಗಂಟೆವರೆಗೆ ನಮ್ಮ ಮನೆಯ ಹತ್ತಿರ ಬಂದು ಮದ್ಯ ಸೇವನೆ ಮಾಡುವುದು ಇತರೆ ಹುಡುಗರೊಂದಿಗೆ ಕೂಡಿ ಚಿರಾಡುವುದು ಗಲಾಟೆ ಮಾಡುವುದು ಮಾಡುತ್ತಿದ್ದರಿಂದ ಈ ವಿಷಯವಾಗಿ ನಮಗೂ ಮತ್ತು ಹಣಮಂತ ಹಡಪಾದ ಇತನ ಮದ್ಯ ವೈಷಮ್ಯ ಬೆಳೆದಿದ್ದರಿಂದ ನಮ್ಮ ಸಮಾಜದವನೆ ಆದ ರಾಮು ತಂದೆ ಬೀಮಣ್ಣ ಹಡಪಾದ ಇತನು ಮದ್ಯ ಕುಡಿದ ಬಂದು ಅಮಲಿನಲ್ಲಿ ಯಾ ಸೂಳೆ ಮಕ್ಕಳು ಸೆಂಟಾ ಕಿತ್ತೋಗೊತ್ತಾರ ಅಂತಾ ಅವಾಚ್ಯಾವಾಗಿ ಬೈದಾಡುತ್ತಿದ್ದರಿಂದ ನಾವು ಅಷ್ಟಕ್ಕೆ ಸುಮ್ಮನಾಗಿ ನಾವು ಎಲ್ಲಾ ಒಂದೆ ಸಮಾಜದವರಾಗಿದ್ದರಿಂದ ಸುಮ್ಮನಾಗಿದ್ದೇವುಹೀಗಿರುವಾಗ ನಿನ್ನೆ ದಿನಾಂಕ 18/12/2018 ರಂದು ರಾತ್ರಿ 8 ಗಂಟೆಗೆ ನನ್ನ ಮಗನಾದ ನಾಗರಾಜ ಇತನು ತನ್ನ ಹೆಂಡತಿಗೆ ದವಾಖಾನಿಗೆ ಕರೆದುಕೊಂಡು ಹೋಗಿದ್ದನು. ಇನ್ನೋಬ್ಬ ಮಗ ಸಿದ್ದಲಿಂಗಪ್ಪ ಎಂಬುವನು ಹೊರಗಡೆ ಹೋಗಿದ್ದನು. ನಾನು ಮತ್ತು ನನ್ನ ಮಗಳಾದ ನಿರ್ಮಲಾ ಹಾಗು ನನ್ನ ಅಳಿನಾದ ಶ್ರೀನಿವಾಸ ಮನೆಯಲ್ಲಿ ಇದ್ದಾಗ ಈ ಮೇಲೆ ಹೇಳಿದ ರಾಮು ತಂದೆ ಭೀಮಣ್ಣ ಹಡಪಾದ ಈತನು ಮೋಟಾರ ಸೈಕಲ್ ಮೇಲೆ ನಮ್ಮ ಮನೆಯ ಹತ್ತಿರ ಬಂದು ಮೋಟಾರ ಸೈಕಲ್ ಜೋರಾಗಿ ರೇಸ್ ಮಾಡುತ್ತಾ ಹೊರಗಡೆ ಬರ್ರೀ ಸೂಳೆರೆ . ರಂಡೆರೆ ಅಂತಾ ಅವಾಚ್ಯವಾಗಿ ಬೈದಾಡುತ್ತಾ ಕುಡಿದ ಅಮಲಿನಲ್ಲಿ ಮನೆಯ ಹತ್ತಿರ ನಿಂತುಕೊಂಡು ಜೋರಾಗಿ ಚಿರಾಡುತ್ತಿದ್ದನು. ಆಗ ನಾನು ಹೋಗಡೆ ಬಂದು ನೋಡ;ಲಾಗಿ ಬಾರಲೇ ಸೂಳಿ ನನ್ನ ಮೇಲೆ ಪೊಲೀಸ್ ಸ್ಟೇಷನಗೆ ಹೋಗಿ ಕೇಸು ಮಾಡುತ್ತಿರಿ ಇವತ್ತು ನಿಮಗೆ ಜೀವ ಸಮೇತ ಬಿಡಲ್ಲಾ ನೀವು ಹಡಸು ಸೂಳೆರು ಅಂತಾ ಬೈದಾಡುತ್ತಿದ್ದನು . ಆಗ ನಾನು ನೀನು ಕುಡಿದಿದ್ದಿ ಮನೆಗೆ ಹೋಗಪ್ಪ ಅಂತಾ ಅಂದಾಗ ಮೋಟಾರ ಸೈಕಲ್ ನನ್ನ ಮೇಲೆ ತಂದಂತೆ ಮಾಡಿ ನನ್ನ ಹತ್ತಿರ ಬಂದು ನನ್ನ ಕೈ ಹಿಡಿದು ಏಳೆದಾಡಿ ನೆರೆದಿದ್ದ ಜನರ ಮುಂದೆ ನಾನು ವಯಸ್ಸಾದ ಹೆಣ್ಣು ಮಗಳಿದ್ದು ಅವನ ತಾಯಿಯ ವಯಸ್ಸಿನ ಅಥವಾ ಅಜ್ಜಿಯ ವಯಸ್ಸಿನವಳು ಅಂತಾ ಲೆಕ್ಕಿಸದೆ ಹೆಣ್ಣತನಕ್ಕೆ ಅಪಮಾನ ಮಾಡಿರುತ್ತಾನೆ. ಮತ್ತು ನನ್ನ ಸೀರೆ ಹಿಡಿದು ಜೋಗ್ಗಾಡಿ ಅಪಮಾನ ಮಾಡಿ ಕೈಯಿಂದ ಬಲರೆಟ್ಟೆಗೆ , ಹೊಟ್ಟೆಗೆ ಬೆನ್ನಿಗ ಹೊಡೆ ಬಡೆ ಮಾಡಿರುತ್ತಾನೆ. ನೀನು ಮತು ್ತನಿನ್ನ ಮಗಳು ಹಡಸು ಸೂಳೆರು ಇದ್ದಿರಿ ಎಷ್ಟು ಗಳಿಸಿರಿ ನಿಮದು ಬಹಳ ಆಗ್ಯಾದ ಸೂಳೆ ಮಕ್ಕಳೆ ಓಣ್ಯಾಗ ಹ್ಯಾಂಗ್ ಕಾಲ ಮಾಡುತ್ತಿರಿ ನೋಡುತ್ತಿನಿ ಅಂತಾ ಜೀವದ ಭಯ ಹಾಕಿರುತ್ತಾನೆ. ಗಲಾಟೆ ಮಾಡುವಾಗ ನಮ್ಮ ಓಣಿಯ ರಾಘವೆಂದ್ರ ತಂದೆ ಬುಗ್ಗಪ್ಪ ಹಡಪಾದ , ಕೇಶವ ತಂದೆ ಕೃಷ್ಣಾ ಹಾಗು ನನ್ನ ಮಗಳು ನಿರ್ಮಲಾ ನನ್ನ ಅಳಿಯಾ ಶ್ರೀನಿವಾಸ ಇವರು ಜಗಳ ಬಿಡಿಸಿರುತ್ತಾರೆ. ಜಗಳವು ರಾತ್ರಿ 8-30 ಗಂಟೆಗೆ ನಮ್ಮ ಮನೆಯ ಮುಂದೆ ಜರುಗಿದ್ದು ಜಗಳ ಆದ ವಿಷಯವನ್ನು ನನ್ನ ಮಕ್ಕಳಾದ ನಾಗರಾಜ ಮತ್ತು ಸಿದ್ದಲಿಂಗಪ್ಪ ಇವರಿಗೆ ಗೋತ್ತಾಗಿ ಆವರು ಬಂದು ರಾಮುವಿಗೆ ವಿಚಾರಣೆ ಮಾಡುತ್ತೇನೆ ಅಂತ ಹೇಳಿದ್ದರಿಂದ ನಾನು ಬೇಡ ಅಂತ ಹೇಳಿದ್ದೆ, ಆದರೆ ರಾತ್ರಿಯಾಗಿದ್ದರಿಂದ ನಾನು ಆಸ್ಪತ್ರೆಗೆ ಹೋಗಿರುವುದಿಲ್ಲ. ಈ ದಿನ ಸರಕಾರಿ ಆಸ್ಪತ್ರೆ ಯಾದಗಿರಿಗೆ ಉಪಚಾರಕ್ಕಾಗಿ ಸೇರಿಕೆಯಾಗಿರುತ್ತೇನೆ. ನಮ್ಮ ಮನೆಯಲ್ಲಿ ಎಲ್ಲರಿಗೂ ವಿಚಾರಣೆ ಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ಕೋಡುತ್ತಿದ್ದೆನೆ. ನನಗೆ ಮತ್ತು ನನ್ನ ಮಗಳಿಗೆ ವಿನಾಕಾರಣ ಅವ್ಯಾಚವಾಗಿ ಬೈದು ನನಗೆ ಕೈಹಿಡಿದು ಎಳೆದಾಡಿ ಅಪಮಾನ ಮಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ರಾಮು ತಂದೆ ಬೀಮಣ್ಣ ಹಡಪಾದ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಸದರಿ ದೂರಿನ ಸಾರಂಶ ಮೇಲಿಂದ ಠಾಣಾ ಗುನ್ನೆ ನಂ 22/2018 ಕಲಂ 323 354 504 506 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 204/2018 ಕಲಂ. 279.304(ಎ) ಐ ಪಿ ಸಿ:-ದಿನಾಂಕ 20-12-2018 ರಂದು ಬೆಳೆಗ್ಗೆ 7-15 ಎ ಎಂ ಕ್ಕೆ ಪಿಯರ್ಾದಿ ಶ್ರೀ ಮಾತರ್ಾಂಡ ತಂದೆ ಪಾಂಡುರಂಗ್ ಪುಲಸೆ ವಯಾ|| 37 ವರ್ಷ ಜಾ|| ಹಿಂದು ಭವಸಾರ ಕ್ಷತ್ರಿಯಾ ಉ|| ವ್ಯಾಪಾರ ಸಾ|| ಗಂಜ ಏರಿಯಾ ಯಾದಗಿರಿ ಇವರು ಒಂದು ಕಬನ್ನಡದಲ್ಲಿ ಗಣಕೀಮರಣ ಮಾಡಿಸಿದ ಹೇಳಿಕೆ ಪಿಯರ್ಾದಿ ವಸೂಲಾಗಿದ್ದು. ಅದರ ಸಾರಾಂಶವೇನಂದರೆ. ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು. ಗಾಣದ ಎಣ್ಣಿ ವ್ಯಾಪಾರ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇದ್ದು ಉಪಜೀವನ ಸಾಗಿಸುತ್ತೇನೆ. ದಿನಾಂಕ 19-12-2018 ರಂದು ಮದ್ಯಾನ 1 ಗಂಟೆಯ ಸುಮಾರಿಗೆ ನನ್ನ ಹೆಂಡತಿಯ ಕಡೆಯಿಂದ ನನಗೆ ಅಣ್ಣನಾಗುದ ಸಂಬಂದಿಕನಾದ ವಿಠಲರ್ರಾವ್ ತಂದೆ ಗೋಪಾಲರಾವ್ ಬಾಸೂತಕಾರ ಸಾ|| ಶಹಪೂರ ಇವರು ಯಾದಗಿರಿಯಲ್ಲಿ ನನಗೆ ಬೇಟಿಯಾಗಿ ನಾನು ರಾಯಚೂರಕ್ಕೆ ಅಶೋಕ ಹತ್ತಿರ ಹೋಗಿ ಬರುತ್ತೇನೆ. ಅಂತಾ ಹೇಳಿ ಹೋದನು. ನಿನ್ನೆ ದಿನಾಂಕ 19-12-2018 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನನಗೆ ವಿಠಲ್ರಾವ್ ತಂದೆ ಗೋಪಾಲರಾವ್ ಬಾಸೂತಕಾರ ಇವರು ಪೋನ ಮಾಡಿ ನಾನು ಬರುತ್ತೀದ್ದೇನೆ.ಸದ್ಯ ಬಳಿಚಕ್ರ ಹತ್ತಿರ ಇದ್ದೇನೆ ಸೈಕಲ ಮೊಟಾರದ ಮೇಲೆ ಬರುತ್ತಿದ್ದೇನೆ ಅಂತಾ ಹೇಳಿದ ನಾನು ನಿದಾನವಾಗಿ ಬಾ ಅಂತಾ ಹೇಳಿದೆ. ರಾತ್ರಿ ಬರಲಿಲ್ಲಾ. ನಾನು ಹಾಗೆ ಶಹಪೂರಕ್ಕೆ ಹೋಗಿರಬಹುದು ಅಂತಾ ಬೆಳೆಗ್ಗೆ ತಿಳಿದಿದ್ದೆ. ಇಂದು ದಿನಾಂಕ 20-12-2018 ರಂದು ಬೆಳೆಗೆ 6 ಗಂಟೆಯ ಸುಮಾರಿಗೆ ನನಗೆ ವಿಠಲರಾವ್ ಇವರ ಹೆಂಡತಿಯಾದ ವೀನಾಕ್ಷಿ ಇವರು ನನಗೆ ಪೋನ ಮಾಡಿ ನನ್ನ ಗಂಡ ಶಕ್ತಿನಗರದಿಂದ ಮನೆಗೆ ಬರಲಿಲ್ಲಾ. ರಾತ್ರಿನೇ ಶಕ್ತಿನಗರ ಬಿಟ್ಟಿದ್ದಾನೆ ಸ್ವಲ್ಪ ನೋಡ್ರಿ ಅಂತಾ ತಿಳಿಸಿದಾಗ ನಾನು ಬೆಳೆಗ್ಗೆ 6-15 ಗಂಟೆಯ ಮನೆಯಿಂದ ಹೊರಟು ಮೈಲಾಪೂರ ಮಾರ್ಗವಾಗಿ ಮುಂದೆ ಬಳಿಚಕ್ರ ಕಡೆಗೆ ಬರುತ್ತಿರುವಾಗ ನಾಗ್ಲಾಪೂರ ಹಾಗೂ ಬಳಿಚಕ್ರದ ನಡುವೆ ಬಂದು ನೋಡಲು ವಿಠಲರ್ರಾವ್ ತಂದೆ ಗೋಪಾಲರಾವ್ ಬಾಸೂತಕಾರ ಸಾ|| ಶಹಪೂರ ಇವರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮೇಲೆ ಸೈಕಲ ಮೋಟಾರ ಹಾಕಿಕೊಂಡು ಬಿದ್ದು ಸತ್ತಿದ್ದು. ಆತನ ಬಲಗಾಲು ಮೊಣಕಾಲ ಕೆಳಗೆ ಬಾರೂ ಗುಪ್ತಗಾಯವಾಗಿ ಕಾಲು ಮುರಿದಂತೆಯಾಗಿದೆ. ಮತ್ತು ಹಣೆಯ ಮೇಲೆ ತಲೆಯ ಮುಂದೆ ಬಾರೀ ರಕ್ತಗಾಯಬಾಗಿದೆ. ಮತ್ತು ಗದ್ದಕ್ಕೆ ತರಚಿದ ಗಾಯವಾಗಿದೆ.ಪಕ್ಕದಲ್ಲಿ ಬಿದ್ದ ಗಾಡಿಯನ್ನುನೋಡಲು ಹೀರೋಹೊಂಡ ಸ್ಪ್ಲೇಂಡರ ನಂ.ಕೆಎ-33-ಇ-5521 ಅಂತಾ ಇರುತ್ತದೆ. ರಾತ್ರಿ ಅಪಘಾತವಾಗಿದ್ದು ಯಾರು ನೋಡಿರಲ್ಲಾ. ಆದ ಕಾರಣ ನಾನು ಬೆಳೆಗೆ. ಆತನಿಗೆ ಹುಡುಕಲು ಬಂದಾಗ ನಾನು ಶವವನ್ನು ನೋಡಿರುತ್ತೇನೆ. ನನ್ನ ಸಂಬಂದಿಕನಾದ ವಿಠಲರ್ರಾವ್ ತಂದೆ ಗೋಪಾಲರಾವ್ ಬಾಸೂತಕಾರ ಸಾ|| ಶಹಪೂರ ಇವರು ದಿನಾಂಕ 19-12-2018 ರಂದು ರಾತ್ರಿ 9-30 ಗಂಟೆಯಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ತನ್ನ ಸೈಕಲ ಮೊಟಾರ ನಂ ಕೆಎ-33-ಇ-5521 ನೇದ್ದರ ಮೇಲೆ ತನ್ನ ಸೈಕಲ ಮೋಟಾರನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ತನ್ನ ಸೈಕಲ ಮೊಟಾರದ ಮೇಲೆ ನಿಯಂತ್ರಣ ಕಳೆದುಕೊಂಡು ಬಿದ್ದು ಬಾರೀ ರಕ್ತ ಮತ್ತು ಗುಪ್ತಗಾಯಗಳು ಆಗಿ ಸ್ಥಳದಲ್ಲಿ ಮೃತನಾಗಿದ್ದು. ಕಾರಣ ಮುಂದಿನ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಗಣಕೀಕರಣ ಮಾಡಿಸಿದಹ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ.204/2018 ಕಲಂ. 279.304(ಎ) ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 208/2018 ಕಲಂ: 279,337,338,304(ಎ) ಐಪಿಸಿ ಮತ್ತು 122 ಐ.ಎಮ್.ವಿ ಎಠ್ಟಿ್ :- ದಿನಾಂಕ 19/12/2018 ರಂದು 8.10 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಂ.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ನೀಡಿದ್ದು, ಯಾದಗಿರಿ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಿದ್ದು ಆಸ್ಪತ್ರೆಯಲ್ಲಿ ಮೃತನ ಅಣ್ಣನಾದ ಚನ್ನಬಸ್ಸಪ್ಪ ತಂದೆ ಮಹಾದೇವಪ್ಪ ನಾಟೇಕಾರ ವ|| 38 ವರ್ಷ ಜಾ|| ಹೊಲೆಯ (ಎಸ್.ಸಿ) ಉ|| ಒಕ್ಕಲುತನ ಸಾ|| ವಡಗೇರಾ ತಾ|| ವಡಗೇರಾ ಇವರು ಹೇಳಿಕೆ ಫಿಯರ್ಾದಿ ಕೊಟ್ಟಿದ್ದೇನೆಂದರೆ, ಇಂದು ದಿನಾಂಕ: 19-12-2018 ರಂದು ನನ್ನ ತಮ್ಮ ಸುರೇಶನು ತನ್ನ ಗೆಳೆಯ ಹೊನ್ನಪ್ಪ ತಂದೆ ಈರಪ್ಪ ನಾಟೇಕಾರ ಈತನೊಂದಿಗೆ ಕೆಲಸದ ನಿಮಿತ್ಯ ಯಾದಗಿರಿಗೆ ಹೋಗಿ ಬರುವುದಾಗಿ ಹೇಳಿ ಮೋಟಾರ್ ಸೈಕಲ ನಂ. ಕೆಎ-33/ಯು-6545 ನೇದ್ದರ ಮೇಲೆ ಯಾದಗಿರಿಗೆ ಹೋದರು. ನಾನು ಊರಲ್ಲಿದ್ದೆನು. ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ತಮ್ಮನೊಂದಿಗೆ ಹೋಗಿದ್ದ ಹೊನ್ನಪ್ಪ ತಂದೆ ಈರಪ್ಪ ಈತನು ನನಗೆ ಫೋನಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ನಿನ್ನ ತಮ್ಮ ಸುರೇಶ ಇಬ್ಬರು ಮೋಟಾರ್ ಸೈಕಲ ಮೇಲೆ ಯಾದಗಿರಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಬರುತ್ತಿದ್ದೆವು. ಸುರೇಶನು ಮೋಟಾರ್ ಸೈಕಲ ಚಲಾಯಿಸುತ್ತಿದ್ದು ನಾನು ಹಿಂದುಗಡೆ ಕುಳಿತಿಕೊಂಡಿದ್ದೆನು. ಯಾದಗಿರಿ-ವಡಗೇರಾ ಮೇನ್ ರೋಡ್ ಹುಲಕಲ್ ಗೇಟ್ ದಾಟಿದ ನಂತರ ಸುರೇಶನು ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿನತದಿಂದ ಚಲಾಯಿಸಿಕೊಂಡು ಹೋಗುತ್ತಿದ್ದು ಹುಲಕಲ್ ಹಳ್ಳದ ಬ್ರಿಜ್ ಮೇಲ್ಗಡೆ ಎಡಗಡೆ ಸೈಡಿಗೆ ಒಂದು ಟ್ರಾಕ್ಟರ್ ಚಾಲಕನು ಇಂಡಿಕೇಟರ್ ವಗೈರೆ ಹಾಕದೆ ಟ್ರಾಕ್ಟರ್ ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿದ್ದು, ಲೇಬರ್ ಜನರು ಟ್ರಾಕ್ಟರ್ದಲ್ಲಿ ಕೆ.ಇ.ಬಿ ವೈರಿನ ಬಂಡಲಗಳು ಮತ್ತು ಕ್ಲ್ಯಾಂಪಗಳನ್ನು ಲೋಡ ಮಾಡುತ್ತಿದ್ದರು. ಸುರೇಶನು ಮೋಟಾರ್ ಸೈಕಲ್ ಅತೀವೇಗದಿಂದ ಚಲಾಯಿಸಿ ನಿಂತಿದ್ದ ಟ್ರಾಕ್ಟರಿಗೆ ಹಿಂದಿನಿಂದ ಡಿಕ್ಕಿಪಡಿಸಿದನು. ಆಗ ನಾವು ಮೋಟಾರ್ ಸೈಕಲ ಸಮೇತ ಕೆಳಗೆ ಬಿದ್ದೆವು. ಅಪಘಾತದಲ್ಲಿ ನನಗೆ ಬಲಗಡೆ ಕಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯ, ಬಲಗಡೆ ಭುಜಕ್ಕೆ ಒಳಪೆಟ್ಟು, ಬಲ ಮೊಳಕಾಲಿಗೆ ಒಳಪೆಟ್ಟು ಮತ್ತು ಎಡಗಡೆ ಟೊಂಕಕ್ಕೆ ಒಳಪೆಟ್ಟಾಯಿತು. ಸುರೇಶನಿಗೆ ನೋಡಲಾಗಿ ಮುಖಕ್ಕೆ ಭಾರೀ ಜಜ್ಜಿದ ರಕ್ತಗಾಯ, ತಲೆಯ ಹಿಂದೆ ಮತ್ತು ಬಲಗಡೆ ಭಾರೀ ರಕ್ತಗಾಯವಾಗಿ ಬಲಕಿವಿ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿತ್ತು. ಬಲಗೈ ಮೊಳಕೈಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಸದರಿ ಟ್ರಾಕ್ಟರನಲ್ಲಿ ಸಾಮಾನು ಲೋಡ ಮಾಡುತ್ತಿದ್ದ ಲೇಬರ್ ಜನರಾದ ಕಾಲು ಮಂಡಲ ತಂದೆ ತೇನಾಮಂಡಲ, ಮೋನಿಶೇಖ ತಂದೆ ಜಾಖೀರ ಹುಸೇನ, ಕಾತರ್ಿಕ ತಂದೆ ಗೌರ್ ಸುರನ್ ಮತ್ತು ಟ್ರಾಕ್ಟರ್ ಚಾಲಕನಾದ ಸುಶಾಂತ ತಂದೆ ಕಾಂಚನ್ ಮುರಮು ಹಾಗೂ ಅಲ್ಲಿಯೇ ನಿಂತಿದ್ದ ದೇವಪ್ಪ ತಂದೆ ಬಸ್ಸಪ್ಪ ಹಾಲಗರಾ ಇವರುಗಳಿಗೆ ಅಲ್ಲಲ್ಲಿ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ. ಟ್ರಾಕ್ಟರ್ ಹೊಸದಿದ್ದು ನೊಂದಣಿ ಇರುವುದಿಲ್ಲ. ಮ್ಯಾಸೆ ಫರ್ಗೂಷನ್ ಕಂಪನಿಯದಿರುತ್ತದೆ. ನೀವು ಬೇಗನೆ ಬನ್ನಿ ಅಂತಾ ಹೇಳಿದಾಗ ನಾನು ಮತ್ತು ನಿಂಗಪ್ಪ ತಂದೆ ಈರಪ್ಪ ನಾಟೇಕಾರ ಮತ್ತು ಇತರರು ಸೇರಿ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಗಾಯಾಳುಗಳಿಗೆ 108 ಅಂಬ್ಯೂಲೆನ್ಸ್ದಲ್ಲಿ ಹಾಕಿ ಯಾದಗಿರಿ ಸರಕಾರಿ ದವಾಖಾನೆಗೆ ಕಳುಹಿಸಿಕೊಟ್ಟಿದ್ದರು. ನಮ್ಮ ತಮ್ಮ ಸುರೇಶನಿಗೆ ನೋಡಲಾಗಿ ಮುಖಕ್ಕೆ ಭಾರೀ ಜಜ್ಜಿದ ರಕ್ತಗಾಯ, ತಲೆಯ ಹಿಂದೆ ಮತ್ತು ಬಲಗಡೆ ಭಾರೀ ರಕ್ತಗಾಯವಾಗಿ ಬಲಕಿವಿ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿತ್ತು. ಬಲಗೈ ಮೊಳಕೈಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಮ್ಮ ತಮ್ಮನ ಶವವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಹಾಕಿದೆವು. ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಹೊನ್ನಪ್ಪ ಈತನಿಗೆ ನೋಡಿ ವಿಚಾರಿಸಲಾಗಿ ಮೇಲಿನಂತೆ ಘಟನೆ ನಡೆದ ಬಗ್ಗೆ ಹೇಳಿದನು. ಕಾರಣ ಮ್ಯಾಸೆ ಫರ್ಗೂಷನ್ ಟ್ರಾಕ್ಟರ್ ಚಾಲಕ ಸುಶಾಂತ ತಂದೆ ಕಾಂಚನ್ ಮುರಮು ಈತನು ಟ್ರಾಕ್ಟರನ್ನು ಯಾವುದೇ ಇಂಡಿಕೇಟರ್ ವಗೈರೆ ಹಾಕದೆ ಅಪಾಯಕಾರಿ ಸ್ಥಿತಿಯಲ್ಲಿ ಸಾಮಾನುಗಳು ಲೋಡಮಾಡಲು ರಸ್ತೆಯ ಎಡಸೈಡಿಗೆ ನಿಲ್ಲಿಸಿದ್ದು ನನ್ನ ತಮ್ಮ ಸುರೇಶನು ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಟ್ರಾಕ್ಟರ್ ಮತ್ತು ಲೇಬರ್ ಜನರಿಗೆ ಡಿಕ್ಕಿಪಡಿಸಿ ಭಾರೀಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ಫಿಯರ್ಾದಿ ಪಡೆದುಕೊಂಡು ಮರಳಿ ಠಾಣೆಗೆ 10.00 ಪಿ.ಎಂ.ಕ್ಕೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 208/2018 ಕಲಂ 279, 337, 338, 304(ಎ) ಐಪಿಸಿ ಮತ್ತು 122 ಐ.ಎಮ್.ವಿ ಎಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂ
Hello There!If you like this article Share with your friend using