ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-12-2018

By blogger on ಬುಧವಾರ, ಡಿಸೆಂಬರ್ 19, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-12-2018 
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 327/2018 ಕಲಂ: 323, 354, 504, 506 ಐಪಿಸಿ :- ದಿನಾಂಕ 18.12.2018 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿಯು ಡಿ.ನಾರಾಯಣ ಈತನ ಮನೆಯ ಮುಂದೆ ನಿಂತಿದ್ದಾಗ ಆರೋಪಿತನ ಮೆಲೆ ಫಿರ್ಯಾದಿಯು ಅಜರ್ಿ ಹಾಕಿದಕ್ಕೆ ಸಂಬಂಧಿಸಿದಂತೆ ಹಳೆಯ ವೈಶ್ಯಮ್ಯದಿಂದ ಆರೋಪಿತನು ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 327/2018 ಕಲಂ: 323, 354, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  

ಯಾದಗಿರಿ ಪೊಲೀಸ್ ಠಾಣೆ ಗುನ್ನೆ ನಂ:- 177/2018 ಕಲಂ.323,324,504,506 ಸಂ.34 ಐಪಿಸಿ :- ದಿನಾಂಕ.18/12/2018 ರಂದು 4-45 ಪಿಎಂಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಗಾಯಾಳು ಎಂ.ಎಲ್.ಸಿ ಪೋನ ಮಾಹಿತಿ ಮೇರೆಗೆ ಆಸ್ಪತ್ರೆಗೆ 5 ಪಿಎಂಕ್ಕೆ ಬೇಟಿ ನೀಡಿ ಗಾಯಾಳು ಪಿರ್ಯಾದಿ ಶ್ರೀ ವಸಂತಕುಮಾರ ತಂ.ವೆಂಕಣ್ಣಗೌಡ ಬಸರೆಡ್ಡೆರ ವಃ25 ಜಾಃಲಿಂಗಾಯತ ಉಃಒಕ್ಕಲುತನ ಮತ್ತು ಚಾಲಕ ಸಾಃಬಿರನಾಳ ತಾಃಶಹಾಪೂರ ಜಿಃ ಯಾದಗಿರಿ  ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು ಒಕ್ಕಲುತನ ಮತ್ತು ಟ್ರ್ಯಾಕ್ಟರ ಚಾಲಕ ಅಂತ ಕೆಲಸ ಮಾಡಿಕೊಂಡು ಇರುತ್ತೇನೆ. ಹೀಗಿದ್ದು ಇಂದು ದಿನಾಂಕ. 18/11/2018 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ನಮ್ಮೂರಿನಿಂದ ಟ್ರ್ಯಾಕ್ಟರ ತೆಗೆದುಕೊಂಡು ಯಾದಗಿರಗೆ ಮಿಲ್ಗೆ ಬರುತ್ತಿದ್ದು ಯಾದಗಿರಿ ಹಳೆ ಬಸ್ ನಿಲ್ದಾಣದ ಹತ್ತಿರ ಬಂದಾಗ ನನ್ನ ಎದುರಿಗೆ ಒಂದು ಬಸ್ ಹೊರಟಿದ್ದು ಆಗ ನಾನು ಟ್ರ್ಯಾಕ್ಟರ ಸೈಡ ತೆಗೆದುಕೊಂಡು ಹೋಗುತ್ತಿರುವಾಗ ಒಂದು ಕಲ್ಲಂಗಡಿ ಹಣ್ಣಿ ಬಂಡಿಯವನು ನನ್ನ ಟ್ರ್ಯಾಕ್ಟರಗೆ ಎದುರು ಬಂದು ನಿಂತು ನನಗೆ ಏ ಬೋಸಡಿ ಮಗನೇ ನನ್ನ ಬಂಡಿಗೆ ಟ್ರ್ಯಾಕ್ಟರಗೆ ಹಾಯ್ದಿದಿ ಅಂತಾ ಬೈಯುತ್ತಿರುವಾಗ ನಾನು ಯಾಕೆ ಬೈಯುತ್ತಿ ನಾನು ನಿನ್ನ ಬಂಡಿಗೆ ಹಾಯ್ದಿಲ್ಲಾ ಅಂತಾ ಅಂದಿದ್ದಕ್ಕೆ ಅವನು ಸುಳ್ಳು ಹೇಳುತ್ತಿ ಮಗನೆ ಅಂತಾ ಅಂದವನೆ ಅಕ್ಕಪಕ್ಕದಲ್ಲಿದ್ದ ಇನ್ನೂ ಮೂರು ಜನರನ್ನು ಕರೆದು ಎಲ್ಲರೂ ಕೂಡಿ ನನಗೆ ಎಳೆದಾಡಿ ರೋಡಿನ ಮೇಲೆ ಈ ಸೂಳಿ ಮಗನಿಗೆ ಇವತ್ತು ಜೀವ ಸಹಿತ ಬಿಡಬಾರದು ಅಂತಾ ಅಂದವರೆ ಅವರಲ್ಲಿ ಒಬ್ಬನು ನನಗೆ ಕಲ್ಲಿನಿಂದ ಬಾಯಿಗೆ ಹೊಡೆದಾಗ ತುಟಿಗೆ ರಕ್ತಗಾಯವಾಗಿದ್ದು ಮತ್ತು ಇನ್ನೂಬ್ಬನು ಕಾಲಿನಿಂದ ಎದೆಗೆ, ಹೊಟ್ಟೆಗೆ ಒದ್ದನು. ಇನ್ನೋಬ್ಬನು ಬಡಿಗೆಯಿಂದ ಎರಡು ಕಾಲುಗಳಿಗೆ ಮತ್ತು ಎಡಗೈ ಮೊಳಕೈಗೆ ಹೊಡೆದು ಗುಪ್ತಗಾಯ ಮತ್ತು ಒಳಪೆಟ್ಟು ಮಾಡಿರುತ್ತಾನೆ. ಇನ್ನೋಬ್ಬನು ಕೈಯಿಂದ ನನ್ನ ಎದೆಗೆ, ಕಿವಿಗೆ ಹೊಡೆದು ಒಳಪೆಟ್ಟು ಮಾಡಿದನು. ಆಗ ನಾನು ಚೀರಾಡುತ್ತಿರುವಾಗ ಅಲ್ಲಿ ಹಳೆ ಬಸ್ ನಿಲ್ದಾಣದ ಹತ್ತಿರ ಊರಿಗೆ ಹೋಗಲು ನಿಂತಿದ್ದ ನಮ್ಮೂರಿನ ದೇವಿಂದ್ರಪ್ಪ ತಂ. ಭಿಮಪ್ಪ ಬಾಂಡೆದೊರ, ದೇವಿಂದ್ರಪ್ಪ ತಂ.ನಾಗಪ್ಪ ಜಂಬಣ್ಣೊರ, ಹಣಮಂತ ತಂ.ಲಗಮಣ್ಣ ಬಾಗಡ್ಡೆರ, ಇವರು ಜಗಳಾ ಬಿಡಿಸಿದರು. ಸದರಿ ಘಟನೆ 4-00 ಪಿಎಂ ಸುಮಾರಿಗೆ ಹಳೆ ಬಸ್ ನಿಲ್ದಾಣದ ಹತ್ತಿರ ಜರುಗಿದ್ದು  ನಂತರ ನನಗೆ ಹೊಡೆ ಬಡೆ ಮಾಡಿದವರ ಹೆಸರುಗಳು ಅಕ್ಕಪಕ್ಕದ ಜನರಿಂದ ಗೊತ್ತಾಗಿದ್ದೆನೆಂದರೆ, ಯಾಸಿನ್ ತಂ. ಶೇಖಅನ್ವರ, ಶೇಖ ಭಾಷಾ ತಂ.ಶೇಖ ಆನ್ವರ, ಅಂತಾ ಗೊತ್ತಾಗಿದ್ದು ಇನ್ನಿಬ್ಬರ ಹೆಸರು ಗೊತ್ತಾಗಿರುವುದಿಲ್ಲಾ. ಗೊತ್ತಾದಲ್ಲಿ ನಂತರ ತಿಳಿಸುತ್ತೇನೆ ಮತ್ತು ಅವರನ್ನು ನಾನು ನೋಡಿದಲ್ಲಿ ಗುತರ್ಿಸುತ್ತೇನೆ. ನಂತರ ನನಗೆ ಜಗಳ ಬಿಡಿಸಿದವರು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ  ತಂದು ಸೇರಿಕೆ ಮಾಡಿರುತ್ತಾರೆ. ನನಗೆ ಹೊಡೆ ಬಡೆ ಮಾಡಿದವರ ಮೇಲೆೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ  ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 6-00 ಪಿಎಂಕ್ಕೆ ಬಂದು ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.177/2018 ಕಲಂ.323,324,504,506, ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!