ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-12-2018
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 323/18 ಕಲಂ 323, 307, 504, 506, 302 ಐಪಿಸಿ :- ದಿನಾಂಕ 08.12.2018 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಗಾಯಾಳು ರತ್ನಪ್ಪ ಈತನ ಮಗ ಆರೋಪಿ ಜಾನ್ ಎಂಬಾತನು ತನಗೆ ತನ್ನ ತಂದೆ-ತಾಯಿ ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಅದೇ ಸಿಟ್ಟಿನಿಂದ ತನ್ನ ತಂದೆಯೊಂದಿಗೆ ಜಗಳ ತೆಗೆದು ಕೈಯಿಂದ ನೂಕಿ ಕೊಟ್ಟು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಕೊಡಲಿಂದ ತನ್ನ ತಂದೆಗೆ ಬಲಗೈ ಮತ್ತು ತಲೆಯ ಮೇಲೆ ಹೊಡೆದು ಹತ್ಯೆ ಮಾಡುವ ಪ್ರಯತ್ನ ಮಾಡಿರುತ್ತಾನೆ. ಘಟನಾ ಕಾಲಕ್ಕೆ ಗಾಯಗೊಂಡಿರುವ ರತ್ನಪ್ಪ ತಂದೆ ಬಸಪ್ಪ ಅಲಿಗೋರ ಈತನು ಬೆಂಗಳೂರು ಕೆಸಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತ ಗುಣಮುಖನಾಗದೆ ದಿನಾಂಕ 14.12.2018 ರಂದು ಮೃತಪಟ್ಟಿರುತ್ತಾನೆ. ಕಾರಣ ಪ್ರಕರಣದಲ್ಲಿ ಕಲಂ 302 ಐಪಿಸಿ ಕಾಯ್ದೆ ಕಲಂನ್ನು ಅಳವಡಿಸಿದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 202/2018 ಕಲಂ 279,338, 304(ಎ) ಐಪಿಸಿ :- ದಿನಾಂಕ: 14-12-2018 ರಂದು ಸಾಯಂಕಾಲ 06-00 ಗಂಟೆಗೆ ನಾನು ನಮ್ಮ ತಾಯಿ ಸಾಬಮ್ಮ ಮನೆಯಲ್ಲಿ ಇರುವಾಗ ನಮ್ಮ ಕಾಕನ ಮಗ ಹುಸೇನಪ್ಪ ಇತನು ಮನೆಗೆ ಬಂದು ತಿಳಿಸಿದ್ದೆನೆಂದರೆ ಸಣ್ಣಸಾಬಣ್ಣ ಇತನು ಸೈದಾಪೂರದಿಂದ ನಮ್ಮೂರಿಗೆ ಬರುವಾಗ ಮುನಗಲ್ ಹತ್ತಿರ ರೋಡಿನ ಮೇಲೆ ಆಟೋ ಅಪಘಾತವಾಗಿ ಸಣ್ಣಸಾಬಣ್ಣನ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಆಟೋ ಚಾಲಕನು ಆಟೋ ಬಿಟ್ಟು ಓಡಿ ಹೋಗಿರುತ್ತಾನೆ ಸ್ಥಳದಲ್ಲಿ ಆಟೋ ಇದ್ದು ಅದರ ನಂ. ಕೆಎ-33. 9409 ಅಂತಾ ಇರುತ್ತದೆ ಆತನಿಗೆ ಉಪಚಾರ ಕುರಿತು ರಾಯಚೂರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತಿದ್ದೆವೆ ನಿವು ಚೆಗುಂಟ ಕ್ರಾಸಿಗೆ ಬರ್ರೀ ಅಂತಾ ಪೊನ್ ಮಾಡಿ ತಿಳಿದ್ದಾರೆ ಹೋಗೋಣ ಅಂತಾ ತಿಳಿದ್ದರಿಂದ ಆಗ ನಾವು ಗಾಬರಿಯಾಗಿ ನಾನು ನಮ್ಮ ತಾಯಿ ಮತ್ತು ಹುಸೇನಪ್ಪ ಮೂರು ಜನರು ಸೇರಿ ಆಟೋದಲ್ಲಿ ಚೆಗುಂಟ ಕ್ರಾಸಿಗೆ ಬಂದೆವು ಆಗ ಸೈದಾಪೂರ ಕಡೆಯಿಂದ ನಮ್ಮ ತಮ್ಮನಿಗೆ ಕಾರಿನಲ್ಲಿ ಹಾಕಿಕೊಂಡು ಬಂದರು ಆಗ ನಮ್ಮ ತಮ್ಮನಿಗೆ ನೋಡಲಾಗಿ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ರಕ್ತ ಬರುತಿತ್ತು ಆಗ ನಾವೆಲ್ಲರು ಕಾರಿನಲ್ಲಿ ಕುಳಿತು ಉಪಚಾರ ಕುರಿತು ರಾಯಚೂರ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ಅಲ್ಲಿ ವೈದ್ಯರು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಗೆ ಹೋಗಲು ತಿಳಿದ್ದರಿಂದ ನಮ್ಮ ತಮ್ಮನಿಗೆ ಹೆಚ್ಚಿನ ಉಪಚಾರ ಕುರಿತು ನಮ್ಮ ತಾಯಿ ಮತ್ತು ಹುಸೇನಪ್ಪ ಇವರಿಗೆ ನೀವು ಹೈದ್ರಾಬದಕ್ಕೆ ತೆಗೆದುಕೊಂಡು ಹೋಗಿರಿ ನಾನು ಊರಿಗೆ ಹೋಗಿ ದುಡ್ಡು ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೈದ್ರಾಬಾದಗೆ ಕಳುಹಿಸಿ ನಾನು ಊರಿಗೆ ಬಂದಿರುತ್ತೇನೆ ದಿನಾಂಕ:14-12-2018 ರಂದು ಸಾಯಂಕಾಲ 05-30 ಗಂಟೆಗೆ ಸೈದಾಪೂರದಿಂದ ಬಾಡಿಯಳ ಗ್ರಾಮಕ್ಕೆ ಬರುವಾಗ ಮುನಗಲ್ ಹತ್ತಿರ ರೋಡಿನ ಮೇಲೆ ಆಟೋ ಚಾಲಕನು ತನ್ನ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೆ ಬ್ರೇಕ್ ಹಾಕಿದ್ದರಿಂದ ಆಟೋದಿಂದ ನಮ್ಮ ಸಣ್ಣಸಾಬಣ್ಣ ತಂದೆ ಹಣಮಂತ ವ|| 30 ವರ್ಷ ಇತನು ಕೇಳಗೆ ಬಿದ್ದಾಗ ತಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ಗೊತ್ತಾಗಿರುತ್ತದೆ
ಕಾರಣ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದ ಆಟೋ ಚಾಲಕನ ಮೇಲೆ ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ಇಂದು ಠಾಣೆಗೆ ಬಂದು ಹೇಳಿಕೆ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.202/2018 ಕಲಂ. 279,338 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇಂದು ದಿನಾಂಕ: 16-12-2018 ರಂದು ಬೆಳಿಗ್ಗೆ 10-31 ಗಂಟೆಗೆ ಗಾಯಾಳು ಮೃತಪಟ್ಟಿರುತ್ತಾನೆ ಅಂತಾ ಹೈದ್ರಾಬಾದ ಯಶೋಧ ಆಸ್ಪತ್ರೆಯಿಂದ ಡೆತ್ ಎಮ್ .ಎಸ್.ಸಿ ಕಳುಹಿಸಿದ್ದು ಇರುತ್ತದೆ ಕಾರಣ ಸದರಿ ಪ್ರಕರಣದಲ್ಲಿ 304(ಎ) ಐಪಿಸಿಯನ್ನು ಅಳವಡಿಸಿಕೊಳ್ಳು ಮಾನ್ಯ ನ್ಯಾಯಾಲಯಕ್ಕೆ ಕೊರಿಕೆ ಪತ್ರ ಸಲ್ಲಿಸಲಾಗಿದೆ
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 203/2018 ಕಲಂ 279,338, ಐಪಿಸಿ :- ದಿನಾಂಕ: 14-12-2018 ರಂದು ಮದ್ಯಾಹ್ನ 01-30 ಗಂಟೆ ಸುಮಾರಿಗೆ ನಮ್ಮ ಹೋಸ ಮೋಟರ ಸೈಕಲ್ ಹೊರೋ ಹೊಂಡ ಇನ್ನು ನಂಬರ ಬಂದಿರುವದಿಲ್ಲ ಇದನ್ನು ತೆಗೆದುಕೊಂಡು ಹುಣಸೇಹಣ್ಣು ಉದರಿಸಲು ನನ್ನ ಮಗ ಶಂಕ್ರಪ್ಪ ಮತ್ತು ಸಂಭದಿಕ ವೆಂಕಟೇಶ ತಂದೆ ಭೀಮಶಪ್ಪ ಇಬ್ಬರು ಕೂಡಿ ಮನೆಯಿಂದ ಹೋಗುತ್ತಿರುವಾಗ ಮೋಟರ ಸೈಕಲ್ ಮೇಲೆ ನನ್ನ ಮಗ ಹಿಂದೆ ಕುಂತಿದ್ದನು ವೆಂಕಟೇಶ ಇತನು ಮೋಟರ ಸೈಕಲ್ ನಡೆಸಿಕೊಂಡು ಹೋದನು. ಮದ್ಯಾಹ್ನ 02-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಇರುವಾಗ ಶಾಲೆ ಹುಡಗರು ನನಗೆ ಬಂದು ತಿಳಿದ್ದೆನೆಂದರೆ ನಿಮ್ಮ ಮಗ ಮತ್ತು ವೆಂಕಟೇಶ ಮೋಟರ ಸೈಕಲ್ ಮೇಲೆ ಬಿದಿದ್ದಾರೆ ಅಂತಾ ತಿಳಿದ್ದರಿಂದ ಆಗ ನಾನು ಮತ್ತು ಲಕ್ಷ್ಮಣ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮೂರ ರೋಡಿನ ಮೇಲೆ ಯಲ್ಲಮ್ಮ ದೇವಿ ಗುಡಿಯ ಹತ್ತಿರ ಮೋಟರ ಸೈಕಲ್ ಹಾಕಿಕೊಂಡು ಬಿದಿದ್ದು ನಾವು ನೋಡಲಾಗಿ ನನ್ನ ಮಗನಿಗೆ ತಲೆಯ ಬಲ ಭಾಗಕ್ಕೆ ಭಾರಿ ರಕ್ತಗಾಯ, ಎಡ ಕಪಳಕ್ಕೆ ಮತ್ತು ತುಟಿಗೆ ತರಚಿದ ರಕ್ತಗಾಯವಾಗಿತ್ತು ನನ್ನ ಮಗನಿಗೆ ಮಾತಾಡಿಸಲು ಮಾತನಾಡುತಿರಲಿಲ್ಲ. ಗಾಡಿ ನಡೆಸುತಿದ್ದ ವೆಂಕಟೇಶನಿಗೆ ಯಾವುದೆ ಗಾಯಗಳು ಆಗಿರಲಿಲ್ಲ, ಆಗ ನಾನು ಹೆಗಾಯಿತು ಅಂತಾ ವೆಂಕಟೇಶನಿಗೆ ವಿಚಾರಿಸಲಾಗಿ ನಾವು ಮೋಟರ ಸೈಕಲ್ ತೆಗೆದುಕೊಂಡು ದುಪಲ್ಲಿ- ಬದ್ದೆಪಲ್ಲಿ ರೋಡಿನ ಮೇಲೆ ಯಲ್ಲಮ್ಮ ಗುಡಿಯ ಹತ್ತಿರ ಹೊಲಕ್ಕೆ ಹುಣಸೆಹಣ್ಣು ಉದರಿಸಲು ಮದ್ಯಾಹ್ನ 01-45 ಗಂಟೆಗೆ ಹೋಗುತ್ತಿರುವಾಗ ಒಮ್ಮಲೆ ರೋಡಿನ ಮೇಲೆ ಹಂದಿ ಅಡ್ಡಬಂದಿದ್ದರಿಂದ ನಾನು ಮೋಟರ ಸೈಕಲ್ ಬ್ರೇಕ್ ಹಾಕಿದ್ದರಿಂದ ಗಾಡಿ ಸ್ಕೀಡ್ ಆಗಿ ನಾವು ಕೆಳಗೆ ಬಿದ್ದೆವು ಅಂತಾ ತಿಳಿಸಿದನು, ಆಗ ನಾನು ಮತ್ತು ಲಕ್ಷ್ಮಣ ಇಬ್ಬರು ಕೂಡಿ ಕಾರಿನಲ್ಲಿ ಹಾಕಿಕೊಂಡು ನನ್ನ ಮಗನಿಗೆ ಉಪಚಾರ ಕುರಿತು ರಾಯಚೂರ ರೀಮ್ಸ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 393/2018 ಕಲಂ: 448 323,504, 506 ಸಂಗಡ 34 ಐಪಿಸಿ :- ದಿನಾಂಕಃ 16/12/2018 ರಂದು 8-15 ಪಿ.ಎಮ್ ಕ್ಕೆ ಶ್ರೀ ಬಸವರಾಜ ತಂದೆ ಗುರಪ್ಪ ಜಮದರಖಾನಿ ಅಧ್ಯಕ್ಷರು ವೀರಶೈವ ಸಮಾಜ ಕಲ್ಯಾಣ ಸಂಘ ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 15-12-2018 ರಂದು ಸಂಜೆ 7 ಗಂಟೆಗೆ ನಾನು ವೀರಶೈವ ಸಮಾಜ ಕಲ್ಯಾಣ ಸಮಾಜದ ಕಛೇರಿಗೆ ಹೋದಾಗ 1) ನಾಗಭೂಷಣಸ್ವಾಮಿ ತಂದೆ ಮಲ್ಲಿಕಾಜರ್ುನಸ್ವಾಮಿ ಸಾಃ ಕಬಾಡಗೇರಾ ಸುರಪೂರ ಹಾಗು 2) ಲಕ್ಷ್ಮೀಬಾಯಿ ಗಂಡ ನಾಗಭೂಷಣಸ್ವಾಮಿ ಹಾಗು ಅವರ ಮಗಳಾದ 3) ಶಾಂಭವಿ ತಂದೆ ನಾಗಭೂಷಣಸ್ವಾಮಿ 4) ಸುಶೀಲಮ್ಮ ಗಂಡ ಗಂಡ ಮಲ್ಲಿಕಾಜರ್ುನಯ್ಯಸ್ವಾಮಿ ಇವರೆಲ್ಲರೂ ಕೂಡಿಕೊಂಡು ನಮ್ಮ ಕಛೇರಿ ಒಳಗೆ ಅತಿಕ್ರಮ ಪ್ರವೇಶ ಮಾಡಿ ನನಗೆ ಏಲೇ ಭೋಸಡಿ ಮಗನೇ, ನೀನು ಅಧ್ಯಕ್ಷನಾದ ಮೇಲೆ ನಾನು ಮಾಡಿದ ಕೇಸಿನಲ್ಲಿ ಕೋಟರ್ಿಗೆ ತಿರುಗಾಡಿಸುತ್ತೀರಿ, ನೀನು ಹೊರಗೆ ಬಂದರೆ ನಿನಗೆ ಜನರ ಸಮಕ್ಷಮದಲ್ಲಿ ಹೊಡೆಬಡೆ ಮಾಡಿ ಮಯರ್ಾದೆ ಕಳೆಯುತ್ತೇನೆ ಅಂತ ಅವಾಛ್ಯ ಶಬ್ದಗಳಿಂದ ಬೈಯ್ಯುತ್ತ ತನ್ನ ಭುಜದ ಮೇಲಿದ್ದ ಕೆಂಪು ಶೆಲ್ಯೆಯನ್ನು ತಗೆದು ನನ್ನ ಕುತ್ತಿಗೆಗೆ ಬಿಗಿಯುತ್ತಿದ್ದಾಗ ನಾನು ಜೋರಾಗಿ ಕಿರುಚಾಡಿದ್ದನ್ನು ಕೇಳಿ ಅಲ್ಲಿಯೇ ಪಕ್ಕದ ಮನೆಯಲ್ಲಿದ್ದ ಮಹಾದೇವಪ್ಪ ಹಳ್ಳದ, ಹಾಗು ಭೀಮಪ್ಪ, ಸಿದ್ದಲಿಂಗಯ್ಯ, ಮಹೇಶ, ಶರಣು ಮುಂತಾದವರು ಬಂದು ಬಿಡಿಸಿರುತ್ತಾರೆ. ಅವರಿಂದ ನಮಗೆ ಜೀವದ ಅಪಾಯವಿದ್ದು ಅವರ ಮೇಲೆ ಯೋಗ್ಯ ಕ್ರಮ ಕೈಕೊಳ್ಳಬೇಕು ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 393/2018 ಕಲಂಃ 448, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using