ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-12-2018

By blogger on ಶುಕ್ರವಾರ, ಡಿಸೆಂಬರ್ 14, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-12-2018 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 229/2018 ಕಲಂ: 302 ಸಂ 34 ಐಪಿಸಿ :- ದಿನಾಂಕ 13/12/2018 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶಿವಶರಣಪ್ಪ ತಂದೆ ಸೋಮಲಿಂಗಪ್ಪ ಬಡಿಗೇರ 35 ವರ್ಷ ಜಾಃ ಕಬ್ಬಲೀಗ ಉಃ ಒಕ್ಕಲುತನ ಸಾಃ ಸನ್ನತಿ ತಾಃ ಚಿತ್ತಾಪೂರ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನಮ್ಮ ತಂದೆ-ತಾಯಿಗೆ ನಾವು ನಾಲ್ಕು ಜನ ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣು ಮಕ್ಕಳು ಇರುತ್ತೆವೆ, ನನ್ನ ತಮ್ಮನಾದ ದೊಡ್ಡಭೀಮರಾಯ ತಂದೆ ಸೋಮಲಿಂಗಪ್ಪ ಬಡಿಗೇರ ಇತನಿಗೆಸುಮಾರು ಎಂಟು ವರ್ಷಗಳ ಹಿಂದೆ ಓರುಂಚಾ ಗ್ರಾಮದ ಮಹಾದೇವಿ ಎಂಬುವವಳ ಜೋತೆಗೆ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿರುತ್ತೆವೆ, ಅವರಿಗೆ  ಮೂರು ಜನ ಮಕ್ಕಳು ಇದ್ದಿರುತ್ತಾರೆ, ಎರಡು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಿರುತ್ತಾರೆ, ನಾವೆಲ್ಲರೂ ಅಣ್ಣ-ತಮ್ಮಂದಿರು ನಮ್ಮ ನಮ್ಮ ಕುಟುಂಬದವರೊಂದಿಗೆ ಬೇರೆ ಬೇರೆ ಆಗಿ ಇದ್ದಿರುತ್ತೆವೆ, ಈಗ ಮೂರು ವರ್ಷಗಳ ಹಿಂದೆ ನನ್ನ ತಮ್ಮನ ಹೆಂಡತಿಯಾದ ಮಹಾದೇವಿ ಇವಳು ನಮ್ಮೂರಿನಲ್ಲಿ ಇರುವದಿಲ್ಲ ಅಂತಾ ನನ್ನ ತಮ್ಮನ ಜೋತೆಗೆ ಜಗಳ ಮಾಡುತ್ತಿದ್ದಳು, ಆಗ ನನ್ನ ತಮ್ಮ ಮತ್ತು ಅವನ ಹೆಂಡತಿ, ಮಕ್ಕಳೊಂದಿಗೆ ನಮ್ಮೂರಿನಿಂದ ಓರುಂಚಾ ಗ್ರಾಮಕ್ಕೆ ಬಂದು ಬೇರೆ ಮನೆ ಮಾಡಿಕೊಂಡು ಇದ್ದಿರುತ್ತಾರೆ, ಆಗಾಗ ನನ್ನ ತಮ್ಮ ಭೀಮರಾಯ ಇತನು ಓರುಂಚಾ ಗ್ರಾಮದಿಂದ ನಮ್ಮೂರಿಗೆ ಬಂದು ಹೋಗುತ್ತಿದ್ದನು, ಆ ಸಮಯದಲ್ಲಿ ನನ್ನ ತಮ್ಮನು ಅವನ ಹೆಂಡತಿ, ಅತ್ತೆ, ಮಾವ ಮತ್ತು ಅಳಿಯ ಎಲ್ಲರೂ ಕೂಡಿ ನೀನು ಇಲ್ಲಿ ಇರಬೇಡ, ನಮ್ಮ ಮನೆಗೆ ಬರಬೇಡ, ನೀನು ನಮ್ಮ ಮನೆಗೆ ಬಂದರೇ ನಿನ್ನ ಪರಿಣಾಮ ನೆಟ್ಟಗೆ ಇರುವದಿಲ್ಲ ಎಲ್ಲಾದರೂ ಹೋಗಿ ಸಾಯಿ, ನೀನು ನಿನ್ನ ಹೆಂಡತಿ ಮಕ್ಕಳಿಗೆ ಸರಿಯಾಗಿ ನೋಡಿಕೊಳ್ಳುವ ಯೋಗ್ಯತೆ ಇಲ್ಲಾ ಅಂತಾ ಅಂದು ನನ್ನ ತಮ್ಮನಿಗೆ ಮನೆಯಲ್ಲಿ ಸೇರಿಸಿಕೊಳ್ಳದೆ ಅಂಜಿಸುತ್ತಿದ್ದರು ಅಂತಾ ನನ್ನ ತಮ್ಮ ಆಗಾಗ ಹೇಳುತ್ತಿದ್ದನು, ಹೀಗಿರುವಾಗ ಇಂದು ದಿನಾಂಕ 13/12/2018 ರಂದು ಮಾದ್ಯಾಹ್ನ 12-50 ಗಂಟೆಗೆ ನಾನು ನಮ್ಮ ಮನೆಯ ಹತ್ತಿರ ಇರುವಾಗ ನನ್ನ ತಮ್ಮನು ತನ್ನ ಮೊಬೈಲ ನಂ 8296900572 ಇದರಿಂದ ನನ್ನ ಮೊಬೈಲ ನಂ 9538622986 ನೆದ್ದಕ್ಕೆ ಪೋನ ಮಾಡಿ ಏ ಅಣ್ಣಾ ನನ್ನ ಜೋತೆಗೆ ನನ್ನ ಹೆಂಡತಿ ಮಹಾದೇವಿ, ಅತ್ತೆ ಬಸಮ್ಮ ಗಂಡ ಬಸಪ್ಪ ಜಾಳೇರ, ನನ್ನ ಅಳಿಯ ಸಾಬಣ್ಣ ತಂದೆ ಬಸಪ್ಪ ಜಾಳೇರ ಮತ್ತು ನನ್ನ ಮಾವ ಬಸಪ್ಪ ತಂದೆ ಸಾಬಣ್ಣ ಜಾಳೇರ ಇವರೆಲ್ಲರೂ ಕೂಡಿಕೊಂಡು ನನ್ನ ಜೋತೆಗೆ ಜಗಳ ತೆಗೆದು ಏ ಬೋಸಡಿ ಮಗನೇ ನೀನು ನಮ್ಮ ಮನೆಯ ಸನಿ ಬರಬ್ಯಾಡ, ನೀನು ಎಲ್ಲಾದರು ಹೋಗಿ ಸಾಯಿ ಅಂತಾ ಅವಾಚ್ಯವಾಗಿ ಬೈದು ನನಗೆ ಹೊಡೆಯುತ್ತಿದ್ದಾರೆ, ನೀನು ಬೇಗನೇ ಬಂದು ನನ್ನ್ನನು ಕರೆದುಕೊಂಡು ಹೋಗು, ಇಲ್ಲಾಂದರೆ ನನಗೆ ಅವರು ಸಾಯಿಸುತ್ತಾರೆ ಅಂತಾ ಹೇಳಿದನು, ಆಗ ನಾನು ಬರುತ್ತೆನೆ ನೀನು ಸಮಾಧಾನದಿಂದ ಇರು ಅಂತಾ ಹೇಳುವಷ್ಟರಲ್ಲಿ ಅವನ ಪೋನ ಕಟ್ ಆಯಿತು, ಸ್ವಲ್ಪ ಸಮಯದ ನಂತರ ಅಂದರೇ 1-30 ಗಂಟೆಯ ಸುಮಾರಿಗೆ ಓರುಂಚಾ ಗ್ರಾಮದ ದುರ್ಗಪ್ಪ ದಂಡಗುಂಡ ಎಂಬುವವನು ನನ್ನ ತಮ್ಮನ ಮೊಬೈಲದಿಂದ ನನಗೆ ಪೋನ ಮಾಡಿ ನಿನ್ನ ತಮ್ಮನಾದ ಭೀಮರಾಯ ಇತನು ಮನೆಯಲ್ಲಿ ಸತ್ತಿರುತ್ತಾನೆ ಅಂತಾ ಹೇಳಿ ಪೋನ ಕಟ್ ಮಾಡಿದನು, ಆಗ ನಾನು, ನನ್ನ ತಮ್ಮ ಸಣ್ಣಭೀಮರಾಯ, ನನ್ನ ಹೆಂಡತಿ ಸೋಮಮ್ಮ, ನನ್ನ ಅತ್ತೆ ಮಲ್ಲಮ್ಮ ಗಂಡ ಸೋಮಲಿಂಗ ಅದಗಲ್ಲೋರ, ನನ್ನ ತಂಗಿ ಭೀಮಬಾಯಿ ಗಂಡ ಮೋನಪ್ಪ ನಿಂಗಾನೊರ, ರಾಜಶೇಖರ ತಂದೆ ಬಸವರಾಜ ನಿಂಗಾನೊರ, ಬಸವರಾಜ ತಂದೆ ಸಿದ್ದಣ್ಣ ಅದಗಲೊರ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನ ಮಾಡಿಕೊಂಡು ನಮ್ಮೂರಿನಿಂದ ಓರುಂಚಾ ಗ್ರಾಮದಲ್ಲಿರುವ ನನ್ನ ತಮ್ಮನ ಮನೆಗೆ ಬಂದು ನೋಡಲಾಗಿ ನನ್ನ ತಮ್ಮ ಭೀಮರಾಯನು ಸತ್ತಿದ್ದನು, ಅವನ ಗದ್ದದ ಕೆಳಗೆ ಕಂದು ಗಟ್ಟಿದ ಗಾಯವಾಗಿತ್ತು, ಅವನಿಗೆ ಯಾವುದರಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಗೋತ್ತಾಗಿರುವದಿಲ್ಲ, ಈ ಘಟನೆಯು ಇಂದು ದಿನಾಂಕ 13/12/2018 ರಂದು ಸುಮಾರು 1-20 ಗಂಟೆಗೆ ಆಗಿರಬಹುದು, ನನ್ನ ತಮ್ಮನು ಈಗ ಎರಡು-ಮೂರು ದಿವಸಗಳ ಹಿಂದೆ ತನ್ನ ಹೆಂಡತಿ ಮಕ್ಕಳ ಹತ್ತಿರ ಓರುಂಚಾ ಗ್ರಾಮಕ್ಕೆ ಬಂದಿದ್ದು, ಓರುಂಚಾ ಗ್ರಾಮದಲ್ಲಿ ಇಂದು ದಿನಾಂಕ 13/12/2018 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ನನ್ನ ತಮ್ಮ ಭೀಮರಾಯ ಇತನ ಸಂಗಡ ಆತನ ಹೆಂಡತಿ ಮಹಾದೇವಿ, ಅತ್ತೆ ಬಸಮ್ಮ ಗಂಡ ಬಸಪ್ಪ ಜಾಳೇರ, ನನ್ನ ಅಳಿಯ ಸಾಬಣ್ಣ ತಂದೆ ಬಸಪ್ಪ ಜಾಳೇರ ಮತ್ತು ನನ್ನ ಮಾವ ಬಸಪ್ಪ ತಂದೆ ಸಾಬಣ್ಣ ಜಾಳೇರ ಇವರೆಲ್ಲರೂ ಕೂಡಿಕೊಂಡು ನೀನು ನಿನ್ನ ಹೆಂಡತಿ ಮಕ್ಕಳಿಗೆ ನೋಡಿಕೊಳ್ಳುವದಿಲ್ಲಾ ಅಂತಾ ಜಗಳ ತೆಗೆದು ಎಲ್ಲರೂ ಕೂಡಿ ಯಾವುದೋ ವಸ್ತುವಿನಿಂದ ಮತ್ತು ಕೈಯಿಂದ ಹೊಡೆಬಡೆ ಮಾಡಿ ಕೊಲೆ ಮಾಡಿ ನಂತರ ನನ್ನ ತಮ್ಮನೆ ತನ್ನ ಮನೆಯಲ್ಲಿಯೇ ತಾನೇ ಉರುಲು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ಬಿಂಬಿಸಿರುತ್ತಾರೆ, ಆದ್ದರಿಂದ ತಮ್ಮನಿಗೆ ಕೊಲೆ ಮಾಡಿದ ಈ ಮೇಲ್ಕಂಡ ನಾಲ್ಕು ಜನರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 229/2018 ಕಲಂ 302 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 206/2018 ಕಲಂ: 279 ಐಪಿಸಿ :- ದಿನಾಂಕ: 13/12/2018 ರಂದು 3 ಪಿಎಮ್ ಕ್ಕೆ ಶ್ರೀ ಮಹ್ಮದ ಅಲ್ತಾಫ ತಂದೆ ಮಹ್ಮದ ಅಕ್ಬರ ಜಗಲಕಟ್ಟಿ, ವ:25, ಜಾ:ಮುಸ್ಲಿಂ, ಉ:ಡ್ರೈವರ ಸಾ:ಲಕ್ಷ್ಮೀಪೂರ (ಅರಕೇರಾ ಜೆ) ತಾ:ಸುರಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಲಾರಿ ಡ್ರೈವರ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಿನ್ನೆ ದಿನಾಂಕ: 12/12/2018 ರಂದು ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸ ಹತ್ತಿರ ಇರುವ ಒಂದು ಹತ್ತಿ ಕಾಟಾ ಇದ್ದು, ಸದರಿ ಹತ್ತಿ ಕಾಟಾದವರು ಖರೀದಿ ಮಾಡಿದ ಹತ್ತಿಯನ್ನು ಮಿಲ್ಲಿಗೆ ಒಯ್ಯುವಂತೆ ಲಾರಿ ಬಾಡಿಗೆ ಹೇಳಿದಾಗ ನನ್ನ ಲಾರಿ ಒಯ್ದು ಹತ್ತಿ ಕಾಟದಲ್ಲಿ ಹಚ್ಚಿದ್ದು, ಲೇಬರ ಜನರು ಹತ್ತಿಯನ್ನು ಲಾರಿಯಲ್ಲಿ ಲೋಡ ಮಾಡುತ್ತಿದ್ದರಿಂದ ನಾನು ಮೇನ ರೋಡಿಗೆ ಬಂದು ನಿಂತುಕೊಂಡಿದ್ದೇನು.  ಮದ್ಯಾಹ್ನ 2 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಸದರಿ ಗುರುಸಣಗಿ ಕ್ರಾಸ ಹತ್ತಿರ ಶಹಾಪೂರ ಕಡೆಯಿಂದ ಒಂದು ಬೂದಿ ಟ್ಯಾಂಕರ ನಂ. ಕೆಎ 36 ಬಿ 4039 ನೇದ್ದನ್ನು ಅದರ ಚಾಲಕ ಅತಿವೇಗ ಮತ್ತು ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಅದೇ ವೇಳೆಗೆ ಯಾದಗಿರಿ ಕಡೆಯಿಂದ ಒಂದು ಲಾರಿ ನಂ. ಕೆಎ 39/6027 ನೇದ್ದನ್ನು ಅದರ ಚಾಲಕನು ಯಾದಗಿರಿ ಕಡೆಯಿಂದ ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಎರಡು ವಾಹನಗಳ ಚಾಲಕರುಗಳು ತಮ್ಮ ವಾಹನಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡರು. ನಾನು ಸಮೀಪ ಹೋಗಿ ನೋಡಲಾಗಿ ಸದರಿ ಎರಡು ವಾಹನಗಳ ಮುಂದಿನ ಶೋಗಳಿಗೆ ಹಾನಿಯಾಗಿದ್ದು, ಬೂದಿ ಟ್ಯಾಂಕರ ನಂ. ಕೆಎ 36 ಬಿ 4039 ನೇದ್ದರ ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ವಿಜಯಕಾಂತ ತಂದೆ ಬಾಲಪ್ಪ ಜಾಧವ ಸಾ:ಮಾರನಾಳ ಬೆಲ್ಲದಗಿಡದ ತಾಂಡಾ ತಾ:ಸುರಪೂರ ಎಂದು ಹೇಳಿದನು. ಲಾರಿ ನಂ. ಕೆಎ 39/6027 ನೇದ್ದರ ಚಾಲಕನಿಗೆ ಕೇಳಲಾಗಿ ಅಹ್ಮೈದ ತಂದೆ ರಾಜ ಅಹ್ಮೈದ ಸಾ:ಹೊತಪೇಠ ತಾ:ಶಹಾಪೂರ ಎಂದು ಹೇಳಿದನು. ಸದರಿ ಎರಡು ವಾಹನಗಳ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತಮ್ಮ ವಾಹನಗಳ ಮೇಲಿನ ನಿಯಂತ್ರಣ ಕಳೆದುಕೊಂಡು ಒಬ್ಬರಿಗೊಬ್ಬರು ಅಪಘಾತಪಡಿಸಿಕೊಂಡು ವಾಹನಗಳ ಮುಂದಿನ ಶೋಗಳಿಗೆ ಹಾನಿಪಡಿಸಿಕೊಂಡಿರುತ್ತಾರೆ. ಎರಡು ವಾಹನಗಳಲ್ಲಿ ಕೇವಲ ಚಾಲಕರು ಇದ್ದು, ಕ್ಲೀನರಗಳು ಇರಲಿಲ್ಲ. ಸದರಿ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯ ವೈಗೆರೆಗಳು ಆಗಿರುವುದಿಲ್ಲ. ಆದ್ದರಿಂದ ಸದರಿ ಅಪಘಾತಪಡಿಸಿದ ಎರಡು ವಾಹನಗಳ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ಹತ್ತಿ ಲೋಡ ಖಾಲಿ ಮಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ  ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 206/2018 ಕಲಂ: 279 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.    

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 482/2018. ಕಲಂಃ 279,337,338 ಐಪಿಸಿ :- ದಿನಾಂಕ: 13/12/2018 ರಂದು ಸಾಯಂಕಾಲ 4-15 ಪಿ,ಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಆರ್,ಟಿ,ಎ ಎಂ,ಎಲ್,ಸಿ ಇದೆ ಅಂತಾ ಮಾಹಿತಿ ಬಂದಿದ್ದು ಆಸ್ಪತ್ರೆಗೆ ಭೇಟಿ ಮಾಡಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿಯರ್ಾದಿ ಯಲ್ಲಪ್ಪ ತಂದೆ ಸಾಬಣ್ಣ ನಾಲವಾರ ಸಾ|| ಹುರುಸಗುಂಡಗಿ ಇತನ ಹೇಳಿಕೆಯನ್ನು 4-30 ಪಿ,ಎಂ ದಿಂದ 5-30 ಪಿ,ಎಂ ದವರೆಗೆ ಪಡೆಯಲಾಗಿ ಹೇಳಿಕೆ ಕೊಟ್ಟಿದ್ದೆನೆಂದರೆ  ನಾನು ಮತ್ತು ನಮ್ಮ ಅಣ್ಣತಮ್ಮಕ್ಕಿಯ ವೆಂಕಟ ತಂದೆ ಮರೆಪ್ಪ ನಾಲವಾರ ಇಬ್ಬರೂ ಕೂಡಿ ನಮ್ಮೂರಿನಿಂದ ಮೋಟಾರ ಸೈಕಲ ನಂ: ಕೆಎ-33 ಇ-5242 ನೇದ್ದರ ಮೇಲೆ ಟೋಕಾಪೂರ ಗ್ರಾಮದಲ್ಲಿ ನಮ್ಮ ಸಂಬಂದಿಕರ ಎಂಗೇಜಮೆಂಟ ಕಾರ್ಯಕ್ರಮಕ್ಕೆ ಡೋರನಳ್ಳಿ ಮಾರ್ಗವಾಗಿ ಹೊರಟೆವು ಹೋಗುವಾಗ ಮೋಟಾರ ಸೈಕಲನ್ನು ವೆಂಕಟ ಈತನು ಚಲಾಯಿಸುತ್ತಿದ್ದನು. ನಾವಿಬ್ಬರೂ ಹೋಗುವಾಗ ಮಾರ್ಗಮದ್ಯದಲ್ಲಿ ಡೋರನಳ್ಳಿ ಗ್ರಾಮದ ಒಬ್ಬ ಹುಡುಗ ನಮ್ಮ ಮೋಟಾರ ಸೈಕಲಕ್ಕೆ ಕೈ ಮಾಡಿ ನಿಲ್ಲಿಸಿ ನಾನು ಡೋರನಳ್ಳಿಗೆ ಬರುತ್ತೆನೆ ಕರದುಕೊಂಡು ಹೊಗಿರಿ ಅಂತ ಕೇಳಿದನು. ಆಗ ಆತನನ್ನು ನಮ್ಮ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು. ಹೊರಟೆವು. ಹೊರಟಾಗ ವೆಂಕಟನು ಮೋಟಾರಸೈಕಲನ್ನು ವೇಗವಾಗಿ ಚಲಾಯಿಸುತ್ತಿದ್ದನು. ಆಗ ನಾನು ವೆಂಕಟನಿಗೆ ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೂಡಾ ಕೇಳದೆ ವೇಗವಾಗಿ ಮತ್ತು ಅಲಕ್ಷತನದಿಂದ ಮೋಟಾರ ಸೈಕಲ ಚಲಾಯಿಸುತ್ತಿದ್ದನು. ಅತೀವೇಗವಾಗಿ ಹೋಗುವಾಗ ಡೋರನಳ್ಳಿ ಗ್ರಾಮ ಇನ್ನೂ ಅರ್ಧ ಕಿಲೋ ಮೀಟರ ಅಂತರದಲ್ಲಿ ತಮ್ಮಣ್ಣಗೌಡ ಜೋಳದ ರವರ ಹೊಲದ ಕವರ್ಿಂಗ ಹತ್ತಿರ ಹೋಗುವಾಗ ಕವರ್ಿಂಗದಲ್ಲಿ ಡೋರನಳ್ಳಿ ಕಡೆಯಿಂದ ಎದುರಿನಿಂದ ಇನ್ನೋಬ್ಬ ಮೋಟಾರ ಸೈಕಲ ಸವಾರನು ಕೂಡಾ ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಎರಡು ಮೋಟಾರ ಸೈಕಲಗಳು ಒಂದಕ್ಕೊಂದು ಮುಖಾ ಮುಖಿ ಡಿಕ್ಕಿಯಾಗಿ ನಾವು ಮೋಟಾರ ಸೈಕಲ ಸಮೇತ ಕೆಳಗಡೆ ಬಿದ್ದೆವು. ಅಫಘಾತವಾದಾಗ ಸಮಯ 3.30 ಪಿ,ಎಂ ಆಗಿತ್ತು. ಎದುರಿಂದ ಬಂದ ಮೋಟಾರ ಸೈಕಲ ನೋಡಲಾಗಿ ಟಿವಿಎಸ್ ನಂ:ಕೆಎ-33 ಆರ್-9800 ಇರುತ್ತದೆ ಅಫಘಾತದಿಂದ ನನಗೆ ಬಲಗಾಲ ಮೊಳಕಾಲ ಕೆಳಗೆ ಮುರಿದು ರಕ್ತಗಾಯವಾಯಿತು. ಮತ್ತು ಅಲ್ಲಲ್ಲಿ ಗುಪ್ತ ಪೆಟ್ಟುಗಳಾಗಿವೆ. ದೋರನಳ್ಳಿ ಸಿಮಾಂತರದಿಂದ ನಮ್ಮ ಮೋಟಾರ ಸೈಕಲ ಮೇಲೆ ಬಂದ ಹುಡುಗನಾದ ಮಲ್ಲಿಕಾಜರ್ುನ ತಂದೆ ಸಾಹೇಬಗೌಡ ಹಳ್ಳದ ವಯ|| 16 ಸಾ|| ದೋರನಳ್ಳಿ ಈತನಿಗೆ ನೋಡಲಾಗಿ ಬಲಗಣ್ಣಿನ ಕೆಳಗೆ, ಹಣೆಗೆ ತರಚಿದ ಘಾಯವಾಗಿ ಮೂಗಿನಿಂದ ರಕ್ತ ಬಂದಿದ್ದು ತಲೆಯ ಹಿಂದೆ ಭಾರಿ ಗುಪ್ತ ಪೆಟ್ಟಾಗಿ ಬಲಗಾಲ ಹಿಂಬಡಿಗೆ ಭಾರಿ ರಕ್ತಗಾಯ, ಎಡಗಾಲ ಪಾದಕ್ಕೆ ತರಚಿದಘಾಯವಾಗಿರುತ್ತವೆ. ಎದರುನಿಂದ ಬಂದ ಮೋಟಾರ ಸೈಕಲ್ ಟಿವಿಎಸ್. ನಂ:ಕೆಎ-33 ಆರ್-9800 ನೇದ್ದರ ಸವಾರನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಅಬಿದ ತಂದೆ ಗಂಗಾಪ್ರಸಾದ ಬಿಹಾರಿ ಸಾ|| ದೊರನಳ್ಳಿ ಅಂತ ತಿಳಿಸಿದ್ದು ಆತನಿಗೆ ನೋಡಲಾಗಿ ಎಡಗಾಲ ತೊಡೆಯಿಂದ ಚಪ್ಪೆಯವರೆಗೆ ಗುಪ್ತ ಪೆಟ್ಟಾಗಿರುತ್ತದೆ. ಹೊಟ್ಟೆಗೆ ಗುಪ್ತಪೆಟ್ಟಾಗಿರುತ್ತದೆ. ಘಾಯಗೊಂಡ ನಾವೆಲ್ಲರೂ 108 ಆಂಬ್ಯುಲೆನ್ಸ ವಾಹನದಲ್ಲಿ ಉಪಚಾರಕ್ಕಾಗಿ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಸೇರಿಕೆಯಾಗಿರುತ್ತೇವೆ. ಕಾರಣ ಎರಡು ಮೋಟಾರ ಸೈಕಲಗಳ ಚಾಲಕರಾದ 1) ವೆಂಕಟ ತಂದೆ ಮರೆಪ್ಪ ನಾಲವಾರ ಮತ್ತು 2) ಅಬಿದ ತಂದೆ ಗಂಗಾಪ್ರಸಾದ ಬಿಹಾರಿ ಇವರಿಬ್ಬರೂ ತಮ್ಮ ತಮ್ಮ ಮೋಟಾರ ಸ್ಯಕಲಗಳನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿ ಮುಖಾ ಮುಖಿ ಡಿಕ್ಕಿ ಪಡಿಸಿ ನಮಗೆ ಭಾರಿ ಮತ್ತು ಸಾದಾಸ್ವರೂಪದ ಗಾಯ ಪಡಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 4-50 ಪಿ,ಎಂ ಕ್ಕೆ ಬಂದು ಹೇಳಿಕೆ ಪಿಯರ್ಾದಿ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ: 482/2018 ಕಲಂ 279.337.338 ಐಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 26/2018 ಕಲಂ: 174 ಸಿ.ಆರ್.ಪಿ.ಸಿ :- ದಿನಾಂಕ: 13/12/2018 ರಂದು 4-15 ಪಿ.ಎಮ್ ಕ್ಕೆ ಶ್ರೀ ಪರಮೇಶ ತಂದೆ ಗಂಗಪ್ಪ ಹಡಪದ ಸಾ: ತಿಂಥಣಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆಯಿಂದ ನಾನು ದಾದಲಾಪೂರ ಸಿಮಾಂತರದಲ್ಲಿರುವ ಹೊಲ ಸವರ್ೆ ನಂ. 38 ರಲ್ಲಿರುವ ಜೋಳದ ಬೆಳೆಯಲ್ಲಿ ನೀರು ಬಿಡುತ್ತಿದ್ದಾಗ, ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಮ್ಮೂರಿನ ಭೀಮಣ್ಣ ಚೊಂಚೋಡಿ ಇತನು ನಮ್ಮ ಹೊಲದಲ್ಲಿರುವ ಕಾಲುವೆ ಪಕ್ಕದ ರಸ್ತೆಯ ಮೇಲೆ ನಿಂತು ಜಾಲಿಕಂಟಿ ನೆರಳಿನಲ್ಲಿ ಒಬ್ಬ ವ್ಯಕ್ತಿ ಮಲಗಿದ್ದು ನೀರು ತಗೆದುಕೊಂಡು ಬರುವಂತೆ ಕೂಗಿ ಹೇಳಿದ್ದರಿಂದ ನಾನು ಒಂದು ಬಾಟಲಿನಲ್ಲಿ ನೀರು ತುಂಬಿಕೊಂಡು ಓಡಿ ಹೋಗಿ ನಾನು  ಮತ್ತು ಭೀಮಣ್ಣ ಇಬ್ಬರೂ ಸದರಿ ವ್ಯಕ್ತಿಯ ಕೈ ಹಿಡಿದು ನೋಡಲಾಗಿ ಮೃತಪಟ್ಟಿದ್ದನು. ಸದರಿ ವ್ಯಕ್ತಿಯು ಅಂದಾಜು 50 ವರ್ಷ ವಯಸ್ಸಿನವನಿದ್ದು, ಅಗಲವಾದ ಮುಖ, ಸಾದಾಗಪ್ಪು ಮೈಬಣ್ಣ, ತಳ್ಳನೆಯ ಮೈಕಟ್ಟು ಉಳ್ಳವನಾಗಿರುತ್ತಾನೆ. ಹಾಗು ಮೈಮೇಲೆ ತಿಳಿಹಳದಿ ಬಣ್ಣದ ಅಂಡರವೇರ ಇರುತ್ತದೆ. ಮೇಲ್ನೋಟಕ್ಕೆ ನೋಡಿದರೆ ಯಾವುದೋ ಒಂದು ಕಾಯಿಲೆಯಿಂದ ಬಳಲಿ ನಿಶ್ಯಕ್ತಿಯಾಗಿ ಅಲೆದಾಡುತ್ತ ಆಹಾರ ನೀರು ಇಲ್ಲದೇ ನರಳಾಡಿ ಇಂದು ಮುಂಜಾನೆ 6 ಗಂಟೆಯಿಂದ 10 ಗಂಟೆಯ ಮದ್ಯದ ಅವಧಿಯಲ್ಲಿ ಮೃತಪಟ್ಟಿರುವಂತೆ ಕಂಡು ಬರುತ್ತಾನೆ. ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ಕಂಡುಬರುವದಿಲ್ಲ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 26/2018 ಕಲಂ. 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!