ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-12-2018

By blogger on ಬುಧವಾರ, ಡಿಸೆಂಬರ್ 12, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-12-2018 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 227/2018 ಕಲಂ: 279, 337 ಐ.ಪಿ.ಸಿ :- ದಿನಾಂಕ 11/12/2018 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಡಿ.ವೈ.ಎಸ್.ಪಿ. ಸಾಹೇಬರು ಇಬ್ಬರೂ ಕೂಡಿ ಸರಕಾರಿ ವಾಹನ ನಂ ಕೆ.ಎ-33-ಜಿ-251 ನೆದ್ದರಲ್ಲಿ ಕುಳಿತು ಪೆಟ್ರೊಲಿಮಘ ಕರ್ತವ್ಯ ಮತ್ತು ಮೋಟಾರ ವಾಹನ ಕಾಯ್ದೆ ಅಡಿ ಕೇಸು ದಾಖಲಿಸುವ ಕುರಿತು ಹತ್ತಿಕುಣಿ ಗ್ರಾಮದ ಕಡೆಗೆ ಹೋಗುವಾಗ ಮಾರ್ಗ ಮಧ್ಯ ಹತ್ತಿಕುಣಿ-ಸೆಡಂ ರೋಡಿನ ಮೇಲೆ ಹೋಗುವಾಗ ಹಿಂದುಗಡೆಯಿಂದ ಮೋಟಾರ ಸೈಕಲ ನಂ ಎಮ್.ಎಚ್.-04-ಜೆಡಬ್ಲ್ಯೂ-4021 ನೆದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುತ್ತಾ ಲಾರಿಯನ್ನು ಓವರಟೇಕ ಮಾಡಿ ಹೋಗಿ ಸರಕಾರಿ ವಾಹನ ನಂ ಕೆ.ಎ-33-ಜಿ-251 ನೆದ್ದರ ಮುಭಾಗದ ಬಲಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು  ಅಪಘಾತ ಮಾಡಿದ್ದರಿಂದ ಆರೋಪಿತನಿಗೆ ಮತ್ತು ಹಿಂಬದಿಗೆ ಕುಳಿತ ಇನ್ನೊಬ್ಬನಿಗೆ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಆಗಿದ್ದು ಇರುತ್ತದೆ.

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 200/2018 ಕಲಂ 279,337,338, ಐಪಿಸಿ ಮತ್ತು 187 ಐಎಮವಿ ಕಾಯ್ದೆ :- ದಿನಾಂಕ: 10/12/2018 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಮ್ಮೂರಿನಿಂದ ನಾನು ಮತ್ತು ನಮ್ಮೂರಿನ ಭೀಮರಾಯ ತಂದೆ ಯಲ್ಲಪ್ಪ ನಾಚವಾರ, ಮಲ್ಲಪ್ಪ ತಂದೆ ಚಂದ್ರಪ್ಪ ಪಲ್ಲಿಮನಿ ಇವರ ಕವಳಿ ಮತ್ತು ನಮ್ಮ ಕವಳಿ ಜೀನ್ ಗೆ ಹಾಕಿಸಿಕೊಂಡು ಬರಲು ಸಾಬಣ್ಣ ತಂದೆ ಶಿವಪ್ಪ ಇವರ ಟ್ರ್ಯಾಕ್ಟರ ತೆಗೆದುಕೊಂಡು   ನಾರಾಣಪೇಠಗೆ ಹೋಗಿ ನಾರಯಣಪೆಟದಲ್ಲಿ ನಮ್ಮೇಲ್ಲರ ಕವಳಿಗಳನ್ನು ಜಿನ್ ಗೆ ಹಾಕಿಸಿಕೊಂಡು ವಾಪಸ ನಮ್ಮೂರಿಗೆ ಯಲಸತ್ತಿ ಮಾರ್ಗವಾಗಿ ಬರುತಿದ್ದು. ನಮ್ಮೂರಿಗೆ ತೋರಣತಿಪ್ಪ ಗೇಟಿನ ಹತ್ತಿರ ರಾತ್ರಿ 10.30 ಗಂಟೆಯ ಸುಮಾರಿಗೆ ಬರುವಾಗ ಎದರುರಿನಿಂದ ಅಂದರೆ ಮಾದ್ವಾರ ಕಡೆಯಿಂದ ಬೊರವೇಲ್ ಗಾಡಿಯ ಚಾಲಕನು  ಅತೀ ವೇಗ ಮತ್ತು ನಿಸ್ಕಾಳಿಜಿನದಿಂದ ಚೆಲಾಯಿಸಿಕೊಂಡು ಬಂದು ನಾವು ಕುಳಿತು ಬರುತ್ತಿರುವ ಟ್ರ್ಯಾಕ್ಟರಿಗೆ ಬಂದು ಡಿಕಿ ಪಡಿಸಿದನು ಆಗ ನಾವು ಟ್ರ್ಯಾಕ್ಟರದಿಂದ ಎಲ್ಲರು ಕೆಳಗೆ ಬಿದ್ದೆವು ನಾವು ಬಿದ್ದಾಗ ನನಗೆ ನೋಡಲಾಗಿ ಎಡ ಭಾಗದ ಗಲ್ಲಕ್ಕೆ ರಕ್ತಗಾಯ ಮತ್ತು ಎರಡು ಕೈಗಳಿಗೆ ತರಚಿದ ರಕ್ತಗಾಗಳಾಗಿದ್ದವು. ಭೀಮರಾಯ ತಂದೆ ಯಲ್ಲಪ್ಪ ನಾಚವಾರ ಇತನಿಗೆ ನೋಡಲಾಗಿ ತಲೆಯ ಎಡ ಭಾಗಕ್ಕೆ ರಕ್ತಗಾಯ ಬಲಗಾಲಿನ ಮೊಳಕಾಲಿನ ಹತ್ತಿರ ಮತ್ತು ಕಾಲಿನ ಬೆರಳುಗಳಿಗೆ ರಕ್ತ ಗಾಯ ಮತ್ತು ಗುಪ್ತಗಾಯವಾಗಿದ್ದವು. ಟ್ರ್ಯಾಕ್ಟರ ಚಲಾಯಿಸುತ್ತಿದ್ದ ಸಾಬಣ ತಂದೆ ಶಿವಪ್ಪ ಬಡಿಗೇರ ಇತನಿಗೆ ಬಲಕಣ್ಣಿನ ಉಬ್ಬಿಗೆ ಮತ್ತು ಕುತ್ತಿಗೆಯ ಎಡಗಡೆ ಬಾರಿ ರಕ್ತಗಾಯವಾಗಿತ್ತು, ಗದ್ದದ ಎಡಭಾಗಕ್ಕೆ ತರಚಿದ ರಕ್ತಗಾಯವಾಗಿತ್ತು. ಮತ್ತು ಮಲ್ಲಪ್ಪ ತಂದೆ ಚಂದ್ರಪ್ಪ ಪಲ್ಲಮನಿ, ಚಂದ್ರಪ್ಪ ತಂದೆ ಮಲ್ಲಪ್ಪ ಇವರಿಗೆ ನೋಡಲಾಗಿ ಯಾವುದೆ ಗಾಯಗಳು ಆಗಿರಲಿಲ್ಲ. ಆಗ ನಾವು ಬೋರವೆಲ್ ಗಾಡಿ ಪರಿಶಿಲಿಸಿ ನೊಡಲಾಗಿ ಎ.ಪಿ. 22 ಎಡಿ 3069 ಅಂತಾ ಇತ್ತು ಅದರ ಚಾಲಕನು ಗಾಡಿಯನ್ನು ಬಿಟ್ಟು ಹೋಡಿ ಹೋಗಿದ್ದನು. ಓಡಿ ಹೋದ ಚಾಲಕನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಆಗ ನಮಗೆ ಅಪಘಾತವಾದದನ್ನು ನೋಡಿ ಯಾರೋ 108 ಅಂಬುಲೆನ್ಸಗೆ ಪೊನ್ ಮಾಡಿದ್ದರಿಂದ ಸ್ಥಳಕ್ಕೆ ಅಂಬುಲೆನ್ಸ ಬಂದಿದ್ದರಿಂದ ನಾವೆಲ್ಲರು 108 ಅಂಬುಲೇನ್ಸದಲ್ಲಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಬಂದು ಸೇರಿಕೆ ಆಗಿರುತ್ತೇವೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 324/2018 ಕಲಂ 379 ಐಪಿಸಿ :- ದಿನಾಂಕ 11.12.2018 ರಂದು ಸಮಯ ಬೆಳಿಗಿನ ಜಾವ 5:45 ಗಂಟೆಗೆ ಆರೋಪಿತನು ಟಿಪ್ಪರ ನಂ: ಒಊ-05-ಆಏ-1972 ನೇದ್ದರಲ್ಲಿ ಅಕ್ರಮಮಾವಿ ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾಗ ಸಿಪಿಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳೀ ಮಾಡಿ ಮರಳು ತುಂಬಿದ ಟಿಪ್ಪರನ್ನು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಓಡಿ ಹೋದ ಆರೊಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ  ಮೂಲ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ನಂ: 324/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 325/2018 ಕಲಂ: 341, 323, 324, 354,504,506 ಸಂಗಡ 34 ಐಪಿಸಿ :- ದಿನಾಂಕ 11.12.2018 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಗಾಯಾಳು ಭೀಮಪ್ಪ ಈತನು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿತರು ಸದರಿಯವನಿಗೆ ತಡೆದು ನಿಲ್ಲಿಸಿದ್ದು ಆಗ ಫಿರ್ಯಾದಿ ಮತ್ತು ಗಾಯಾಳು ಶ್ರೀಶೈಲ ಇವರು ಅಲ್ಲಿಗೆ ಹೋಗಿ ಅವರ ನಡುವೆ ಜಗಳವಾಡಿದ್ದು ಆಗ ಆರೋಪಿತರು ಕೈಯಿಂದ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಫಿರ್ಯಾದಿಗೆ ಅವಾಚ್ಯವಾಗಿ ಬೈದಿದ್ದು ಅಲ್ಲದೇ ಜೀವದ  ಬದರಿಕೆ ಹಾಕಿದ ಬಗ್ಗೆ ವಗೈರೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ:325/2018 ಕಲಂ: 341, 323, 324, 354,504,506 ಸಂಗಡ 34 ಐಪಿಸಿ ಅಡಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 326/2018 ಕಲಂ: 323, 324, 504, 506 ಸಂಗಡ 34 ಐಪಿಸಿ :- ದಿನಾಂಕ 10.12.2018 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಆರೋಪಿ ಸಾಬಣ್ಣ ಮಡಿವಾಳ ಈತನ ಕುಡಿದು ಫಿರ್ಯಾದಿಗೆ ಬೈದ ವಿಷಯಕ್ಕೆ ಸಂಬಂಧಿಸಿದಂತೆ ಫಿರ್ಯಾದಿ ಇಂದು ದಿನಾಂಕ 11.12.2018 ರಂದು ಬೆಳಿಗ್ಗೆ 7:30 ಗಂಟೆಗೆ ಪಂಚಾಯಿತಿ ಸೇರಿಸಿದ ನಂತರ ಆರೋಪಿತರೆಲ್ಲಾರು ಫಿರ್ಯಾದಿಯ ಮನೆಗೆ ಬಂದು ಅವಾಚ್ಯವಾಗಿ ಬೈದು ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ಹಿರಿಯರೊಂದಿಗೆ ವಿಚಾರಿಸಿದ ನಂತರ ತಡವಾಗಿ ಠಾನೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 326/2018 ಕಲಂ: 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 208/2018 ಕಲಂ. 279 337 338 ಐಪಿಸಿ :- ದಿನಾಂಕ:10/12/2018 ರಂದು ಪಿಯರ್ಾದಿ ಮಾವ ಗಾಯಾಳುದಾರರು ಹುಣಸಗಿಯಲ್ಲಿ ತಮ್ಮ ಸಂಭಂದಿಕರ ಮದುವೆ ಹಾಗೂ ದವಾಖಾನೆಗೆಂದು ಹುಣಸಗಿಗೆ ಬಂದು ಹುಣಸಗಿ ಚನ್ನಮ್ಮ ಚೌಕ್ ಹತ್ತಿರ ಹುಣಸಗಿ-ತೋಳಿಕೊಟಿ ರೋಡನ್ನು ದಾಟಿ 12.00 ಗಂಟೆಯ ಸುಮಾರಿಗೆ ಹುಣಸಗಿ ಅಗಸಿಯೊಳಗೆ ಹೊರಟಾಗ ಆರೋಪಿತನು ಹುಣಸಗಿ ಬಸ್ ನಿಲ್ದಾಣದ ಕಡೆಯಿಂದಾ ತನ್ನ ಮೋಟಾರ್ ಸೈಕಲ ನಂ. ಕೆಎ-33 ಕೆ-0084 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಗಾಯಾಳುವಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಗಾಯಳುವಿಗೆ ಬಲಗಾಲ ಗುಡಗಿಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು, ಬಲಗೈಯ ಮೊಳಕೈಗೆ ಹಾಗೂ ಮೂಗಿಗೆ ತರಚಿದ ಗಾಯವಾಗಿದ್ದು ಇರುತ್ತದೆ. ನಿನ್ನೆ ಗಾಯಳುವಿಗೆ ಹೆಚ್ಚನ ಉಪಚಾರಕ್ಕೆಂದು ವಿಜಯಪುರ ದವಾಖಾನೆಗೆ ತೆಗೆದುಕೊಂಡು ಹೋಗುವ ಅವಸರದಲ್ಲಿ ಯಾವುದೇ ದೂರು ಕೊಟ್ಟಿರುವದಿಲ್ಲಾ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ ಅಂತಾ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 287/2018 ಕಲಂ 403, 409, 420 ಐಪಿಸಿ :-ದಿ: 11/12/18 ರಂದು 2.30 ಪಿಎಮ್‌ಕ್ಕೆ ಶ್ರೀ ಮಹಾಂತಗೌಡ ಪಾಟೀಲ ಅದ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುನೀರ ಬೊಮನಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಆರೋಪಿತನು ಪ್ರಾಥಮಿಕ ಕೃಷು ಪತ್ತಿನ ಸಹಕಾರ ಸಂಘ ಮುನೀರ ಬೊಮನಳ್ಳಿ ನೇದ್ದರಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅಂದರೆ 2002-03, 2012-13 ಹಾಗೂ 2014-15 ನೇದ್ದರ ಸಾಲಿನಲ್ಲಿ ರೈತರಿಗೆ ಮಂಜೂರಾಗಿರುವ ಬೆಳೆ ವಿಮೆ ಹಾಗೂ ರೈತರಿಂದ ಪಡೆದಿರುವ ಠೇವಣಿ ಸಂಬಂದಪಟ್ಟ ಬ್ಯಾಂಕಿಗೆ ಹಾಗೂ ರೈತರಿಗೆ ನೀಡದೆ ಹಣ ದುರ್ಬಳಕೆ ಮಾಡಿಕೊಂಡಿದ್ದು ಕಾರಣ ಸರಕಾರಕ್ಕೆ ಹಾಗೂ ಸಾವಜನಿಕರಿಗೆ ಮೋಸ ಮಾಡಿ ಹಣ ದುರುಪಯೋಗ ಪಡಿಸಿಕೊಂಡು ಆರೋಪಿ ಭೀಮನಗೌಡ ಗೋಪಾಳಪುರ ಈತನ ವಿರುದ್ದ ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 287/18 ಕಲಂ: 403, 409, 420 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. .

ಭೀ.ಗುಡಿ ಪೊಲೀಸ್ ಠಾಣೆ :- 142/2018 ಕಲಂ 78[3] ಕೆಪಿ ಯ್ಯಾಕ್ಟ :- ದಿನಾಂಕ 11/12/2018 ರಂದು 6.15 ಪಿ.ಎಮ್ ಕ್ಕೆ ಸಲಾದಪೂರ ಗ್ರಾಮದ ಸೈಯ್ಯದ ಪೀರ ದಗರ್ಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ದಪ್ಪ ತಂದೆ ಬಸಣ್ಣ ಹೊಸಮನಿ ವ:45 ಜಾ:ಕುರುಬರ ಉ:ಒಕ್ಕಲುತನ ಸಾ:ಸಲಾದಪೂರ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2070=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 6.30 ಪಿಎಮ್ ದಿಂದ 7.30 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 8-15 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 9.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 142/2018 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!