ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-12-2018

By blogger on ಮಂಗಳವಾರ, ಡಿಸೆಂಬರ್ 11, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-12-2018 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 174/2018 ಕಲಂ 457, 380, 511 ಐಪಿಸಿ :- ದಿನಾಂಕ 10/12/2018 ರಂದು ಮಧ್ಯಾಹ್ನ 01-30 ಗಂಟೆಗೆ ಫಿಯರ್ಾದಿ ಠಾಣೆಗೆ ಬಂದು ಗಣಕೀಕರಿಸಿದ ದೂರು ನೀಡಿದ್ದ ಸಾರಾಂಶವೇನೆಂದರೆ, ನಾನು ಯಾದಗಿರಿಯ ಎ.ಪಿ.ಎಂ.ಸಿ ಗಂಜ್ದಲ್ಲಿ ಇರುವ ಎಸ್.ಬಿ.ಐ ಬ್ಯಾಂಕ್ನಲ್ಲಿ ಸುಮಾರು 10 ತಿಂಳುಗಳಿಂದ ಬ್ಯಾಂಕ್ ಮ್ಯಾನೇಜರ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಬ್ಯಾಂಕ್ದಲ್ಲಿ ವಿನಯಕುಮಾರ ತಂದೆ ಸಿದ್ರಾಮರೆಡ್ಡಿ ಸಾ|| ಯಲ್ಹೇರಿ ಇವರು ಕ್ಯಾಶಿಯರ ಅಂತಾ ಹಾಗೂ ಕುಮಾರಿ ಜ್ಯೋತಿ ಸೆಂಡಿಗಿ ಇವರು ಗುಮಾಸ್ತಳಾಗಿ ಮತ್ತು ಸಾಬಣ್ಣ ತಂದೆ ಮಲ್ಲಯ್ಯ ಸಾ|| ಕೊಯಿಲೂರು ಇವರು ಸ್ವೀಪರ ಅಂತಾ ಕೆಲಸ ಮಾಡುತ್ತಾರೆ. ಪ್ರತಿ ನಿತ್ಯದಂತೆ ದಿನಾಂಕ 07/12/2018 ರಂದು ಕರ್ತವ್ಯಕ್ಕೆ ಬೆಳಿಗ್ಗೆ 10 ಗಂಟೆಗೆ ಬಂದು ಸಾಯಂಕಾಲ 07-30 ಗಟೆಯ ಸುಮಾರಿಗೆ ಬ್ಯಾಂಕ್ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋಗಿರುತ್ತೇವೆ. ಆದರೆ ನಾನು ದಿನಾಂಕ 08/12/2018 ರಂದು ನಾನು ಮತ್ತು ಸ್ವೀಪರ ಸಾಬಣ್ಣ ಇಬ್ಬರು ಮಧ್ಯಾಹ್ನ 02-00 ಗಂಟೆಗೆ ಬ್ಯಾಂಕಿಗೆ ಬಂದು ಕರ್ತವ್ಯ ಮುಗಿಸಿಕೊಂಡು ಸಾಯಂಕಾಲ 05-00 ಗಂಟೆಯ ಸುಮಾರಿಗೆ ಬ್ಯಾಂಕ್ ಬೀಗ ಹಾಕಿಕೊಂಡು ಹೋಗಿರುತ್ತೇವೆ. ನಂತರ ಇಂದು ದಿನಾಂಕ 10/12/2018 ರಂದು ಬೆಳಿಗ್ಗೆ 10-15 ಗಂಟೆಗೆ ನಾವೆಲ್ಲ ಬ್ಯಾಂಕ್ ಸಿಬ್ಬಂದಿ ಜನರು ಒಟ್ಟಿಗೆ ಬಂದು ಬ್ಯಾಂಕ್ ಬಾಗಿಲು ತೆಗೆದು ಒಳಗೆ ಹೋದೆವು. ಸ್ವೀಪರ ಸಾಬಣ್ಣ ಈತನು  ಬ್ಯಾಂಕಿನ ಹಿಂದುಗಡೆಯ ಎಡಗಡೆ ಸೈಡಿನ ಕಿಡಕಿ ರಾಡ್ ಬೆಂಡ್ಆಗಿದ್ದು ಕಂಡು ನಮಗೆಲ್ಲ ಹೇಳಿದಾಗ ನಾವು ಕೂಡ ನೋಡಲಾಗಿ ಕಿಡಕಿಯ 2-3 ರಾಡ್ಗಳು ಬೆಂಡ್ಆಗಿದ್ದು ಮತ್ತು ಸೇಫರ್ ರೂಮಿನ ಕೀಲಿ ಮುರಿದಿದ್ದು ಕಂಡು ಬಂತು. ಕೂಡಲೆ ನಾನು, ನಮ್ಮ ಬ್ಯಾಂಕಿಗೆ ಅಳವಡಿಸಿದ ಸಿ.ಸಿ.ಟಿವ್ಹಿ & ಅಲರಾಮ ಅಳವಡಿಸಿದ್ದು ನೋಡಿದಾಗ ಯಾರೋ ಒಬ್ಬ ಕಳ್ಳ ದಿನಾಂಕ 10/12/2018 ರಂದು ಮಧ್ಯ ರಾತ್ರಿ 01-35 ಗಂಟೆಯ ಸುಮಾರಿಗೆ ಬ್ಯಾಂಕ್ ಒಳಗಡೆ ಬಂದು ಕಬ್ಬಿಣದ ರಾಡ್ನಿಂದ ಬ್ಯಾಂಕ್ ಸೇಫ್ ರೂಮ ತೆಗೆಯುವದು ಕಂಡು ಬಂತು. ನಂತರ ಅವನು ಸೇಫರ್ ರೂಮಿನ ಬಾಗಿಲು ತೆಗೆಯುವಾಗ ಬ್ಯಾಂಕಿಗೆ ಅಳವಡಿಸಿದ ಅಲರಾಮ ಸೌಂಡ್ ಮಾಡಿದ್ದರಿಂದ ಕಳ್ಳ ಕಳ್ಳತನ ಮಾಡದೆ ಹಾಗೆಯೇ ಓಡಿ ಹೋಗಿರುವುದು ಕಂಡು ಬಂದಿರುತ್ತದೆ. ನಾವು ಕೂಡ ಪರಿಶೀಲಿಸಿ ನೋಡಲಾಗಿ ಬ್ಯಾಂಕದಲ್ಲಿ ಹಣ ಅಥವಾ ಯಾವುದೇ ವಸ್ತುಗಳು ಕಳ್ಳತನ ವಾಗಿರುವುದಿಲ್ಲ.       ಕಾರಣ ದಿನಾಂಕ 10/12/2018 ರಂದು ಮಧ್ಯ ರಾತ್ರಿ 01-30 ಗಂಟೆಯಿಂದ 02-00 ಎ.ಎಂ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಈ ಕೂಡ ಸಿ.ಸಿ.ಟಿವ್ಹಿ ಪುಟೇಜ್ ಸಿ.ಡಿ ಯನ್ನು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು, ಘಟನೆಗೆ ಕಾರಣವಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.  

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 199/2018 ಕಲಂ. 323.324.341.504.506. ಸಂ 149 ಐ ಪಿ ಸಿ :-  ದಿನಾಂಕ 10-12-2018 ರಂದು 12-30 ಪಿ ಎಂ ಕ್ಕೆ ಪಿಯರ್ಾದಿ ಶ್ರೀ ತಾಯಪ್ಪ ತಂದೆ ಬಸವರಾಜ ಉಜ್ಜೇಲಿ ವಯಾ|| 32 ವರ್ಷ ಜಾ|| ಕಬ್ಬಲಿಗೇರ ಉ|| ಒಕ್ಕಲುತನ ಸಾ|| ಗುಡ್ಲಗುಂಟಾ ತಾ|| ಗುರುಮಟ್ಕಲ ಜಿಲ್ಲಾ|| ಯಾದಗಿರಿ  ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಪಿಯರ್ಾದಿಯನ್ನು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ ದಿನಾಂಕ  08-12-2018 ರಂದು ಮುಂಜಾನೆ  10 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರ ಇದ್ದಾಗ ಅದೇ ವೇಳಗೆ ನನ್ನ ಅತ್ತೆಯಾದ ಬನ್ನಮ್ಮ ಗಂಡ ಶಿವಪ್ಪ. ಮತ್ತು ನನ್ನ ತಮ್ಮನಾದ ಅಂಜಪ್ಪ ತಂದೆ ಬಸವರಾಜ ಇವರು ತರಕಾರಿ ಮಾರಿಕೊಂಡು ಮನಗೆ ಬರುತ್ತಿರುವಾಗ ಆಗ 1) ಮಲ್ಲಿಕಾಜರ್ುನ ತಂದೆ ನಾಗರೆಡ್ಡಿ ಕುರಬ 2) ಸಾಬಪ್ಪ ತಂದೆ ಅಯ್ಯಪ್ಪ ಕುರಬ 3) ಬನ್ನಪ್ಪ ತಂದೆ ನಾಗರೆಡ್ಡಿ ಕುರಬ 4) ಬೀಮಪ್ಪ ತಂದೆ ಸಿದ್ದಲಿಂಗಪ್ಪ ಕುರಬ 5) ಅಯ್ಯಪ್ಪ ತಂದೆ ದೊಡ್ಡ ಸಾಬಣ್ಣ ಕುರಬ ಇವರು  ಎಲ್ಲಾರು ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ನನ್ನ ಅತ್ತೆಯಾದ ಬನ್ನಮ್ಮ. ಮತ್ತು ತಮ್ಮನಾದ ಅಂಜಪ್ಪ ಇವರಿಗೆ ತಡೆದು ನಿಲ್ಲಿಸಿ ಏ ಬೋಸಡಿ ಮಗಳೆ ನಿಮಗೇನು ಮಾಡಿದ್ದೀವಿ ನಾವು ನೀವೆ ನಮ್ಮ ಸಂಗಡ ಜಗಳ ತೆಗೆದು ನಿಮ್ಮ ಹುಡಿಗಿನೇ ನಮ್ಮ ತಮ್ಮ ಅಂಜಪ್ಪನಿಗೆ ಮೇಸೇಜ ಮಾಡಿದ್ದಾಳೆ ಆದರೆ ನೀವೆ ನಮಗೆ ಹೆದರಿಸುತ್ತೀರಿ ಎಂದು ಕೇಳಿದರೆ ಆಗ ಅವರು 5 ಜನರು ಕೂಡಿ ಏ ಬೋಸಡಿ ಮಕ್ಕಳೆ ನಿಮ್ಮದು ಏನಾಗಿದೆ ಈಗ ಅಂತಾ ಅವಾಚ್ಚವಾಗಿ ಬೈಯ್ದು. 5 ಜನರು ಕೂಡಿ ಕೈಯಿಂದ ನನಗೆ ಮತ್ತು ತಮ್ಮನಾದ ಅಂಜಪ್ಪನಿಗೆ ಹೊಡೆ ಬಡೆ ಮಾಡಿದರು.ಆಗ ನಾನು ಬಿಡಿಸಿಕೊಳ್ಳುವಾಗ  ನನಗೆ ಮಲ್ಲಿಕಾಜರ್ುನ ತಂದೆ ನಾಗರೆಡ್ಡಿ ಇವನು ಒಂದು ಬಡಿಗೆಯನ್ನು ತೆಗೆದುಕೊಂಡು ನನಗೆ ಬಲಬುಜಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ನನ್ನ ಅತ್ತೆ ಬಿಡಿಸಿಕೊಲ್ಳು ಬಂದಾಗ ಅವಳಿಗೆ ಉಳೀದ ನಾಲ್ಕು ಜನರು ಕೂಡಿ ನೂಕಿಸಿಕೊಟ್ಟರು. ಹಾಗೂ ಅವರರೆಲ್ಲಾರು ಕೂಡಿ ನಮಗೆ ಬೋಸಡಿ ಮಕ್ಕಳೆ ನೀವು ಏನಾದರೆ ಪೊಲೀಸ ಕೇಸ ಮಾಡಲು ಹೋದರೆ ನಿಮ್ಮ ಜೀವ ಸಹಿತ ಹೊಡೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿದಾಗ ಆಗ ನಾನು ಅವರು ಮತ್ತೆ ಹೊಡೆಯುತ್ತಾರೆ ಅಂತಾ ಚಿರಾಡಿದಾಗ ಅಲ್ಲೆ ಇದ್ದ ನಮ್ಮೂರ 1) ಭದ್ರಪ್ಪ ತಂದೆ ಚಂದ್ರಾಮಪ್ಪ ಮಾಲಿಪಾಟಿಲ. 2) ಬೀಮರಾಯ ತಂದೆ ರಾಮುಲು ಮ್ಯಾಕಲ್ ಇವರು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು. ಒಂದು ವೇಳೆ ಅವರು ಬಿಡಿಸದಿದ್ದರೆ. ನಮಗೆ ಜೀವಕ್ಕೆ ಅಪಾಯ ಇತ್ತು ಜೀವ ಸಹಿತ ಹೊಡೆಯುತ್ತಿದ್ದರು.ಜಗಳ ಬಇಡಿಸಿದ ನಂತರ ಅವರು ನನಗೆ ಕೇಸ ಮಾಡಲು ಹೋದರೆ ಜೀವಂತ ಬಿಡದಿಲ್ಲಾ ಅಂತಾ ಬೆದರಿಕೆ ಹಾಕಿದರು  ಆಗ ನಾನು ಕೇಸ ಮಾಡಲು ಬರಬೇಕಂದರೆ ಊರಲ್ಲಿ ಹಿರಿಯರು ಇರಲಿ ಬಿಡು ಊರ ಮಾತ ಇದೆ ಅಂತಾ ತಿಳಿಸಿದಾಗ ನಾನು ಸುಮ್ಮನಿದ್ದು ಆದರೆ ಇಂದು ದಿನಾಂಕ 10-12-2018 ರಂದು ಬೆಳೆಗ್ಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ಅಗ ಈ ಮೇಲ್ಕಂಡ 5 ಜನರು ಕೂಡಿ ಬಂದು ಏ ಬೋಸಡಿ ಮಗನೆ ಇನ್ನು ಏನಾಗಿಲ್ಲಾ ನಿಮ್ಮ ಸೊಕ್ಕು ಮುರಿಬೇಕಾಗಿದೆ. ನೋಡುತ್ತೇವೆ ಊರಲ್ಲಿ ನೀವು ಕಬ್ಬಲಿಗೇರ ಎಷ್ಟು ಜನ ಇದ್ದೀರಿ ನೋಡುತ್ತೇವೆ ಅಂತಾ ನನಗೆ ಮತ್ತೆ ಜೀವದ ಬೆದರಿಕೆಯನ್ನು ಹಾಕಿದ್ದರಿಂದ ನಾನು ಅವರಿಗೆ ಅಂಜಿ ಇಂದು ತಡವಾಗಿ ಠಾಣೆಗೆ ಬಂದಿದ್ದು ಕಾರಣ ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಈ ಅಜರ್ಿಯ  ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 199-2018 ಕಲಂ 323.324.341.504.506. ಸಂ 149 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.   

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 286/2018 ಕಲಂ 279 ಐಪಿಸಿ :- ದಿ: 10/12/18 ರಂದು 7ಎಎಮ್ಕ್ಕೆ ಎಎಸ್ಎಮ್ ಆಸ್ಪತ್ರೆ ಕಲಬುರಗಿಯಿಂದ ಆರ್ಟಿಎ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಹೇಳೀಕೆ ಪಡೆದುಕೊಂಡಿದ್ದರ ಸಾರಾಂಶವೇನಂದರೆ, ದಿನಾಂಕ 08/12/2018 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಯಾರೋ ನಮ್ಮ ಮನೆಗೆ ಪೋನ ಮಾಡಿ ನನ್ನ ಗಂಡನು ಪತ್ತೆಪೂರ ಗ್ರಾಮದ ಪಕ್ಕದ ಕೆನಾಲ ರೋಡಿನಲ್ಲಿ ತನ್ನ ಮೋಟರ ಸೈಕಲ ಸ್ಕಿಡ್ಡಾಗಿ ಬಿದ್ದಿರುತ್ತಾನೆ ಅಂತ ತಿಳಿಸಿದಾಗ ನಾನು ನಮ್ಮ ಸಂಬಂದಿಕರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ನೋಡಲು ಪತ್ತೆಪೂರ ಮೂರನೇ ಗೇಟಿನ ಹತ್ತಿರ ಕೆನಾಲ ರೋಡಿನಲ್ಲಿ ನನ್ನ ಗಂಡನು ಬಿದ್ದಿದ್ದು ಸದರ ನನ್ನ ಗಂಡನಿಗೆ ನೋಡಲು ತಲೆಗೆ ರಕ್ತಗಾಯವಾಗಿ ಅಲ್ಲಲ್ಲಿ ಕಾಲಿಗೆ ತರಚಿದ ಗಾಯಗಳಾಗಿದ್ದು ಆದರೆ ತಲೆಗೆ ಭಾರೀ ಒಳಪೆಟ್ಟಾಗಿ ಮಾತನಾಡುತ್ತಿರಲಿಲ್ಲ ಕೂಡಲೇ ಸದರಿಯವನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡನು ಕೂಲಿಕೆಲಸಕ್ಕೆಂದು ಪತ್ತೆ ಸೀಮಾಂತರದಲ್ಲಿ ಹೋಗಿ ಕೆನಾಲ ಪಕ್ಕದ ರೋಡಿನಲ್ಲಿ ತನ್ನ ಮೋಟರ ಸೈಕಲ ನಂಬರ ಕೆಎ-33 ಆರ್-3614 ನೇದ್ದನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸದರಿ ರೋಡಿನಲ್ಲಿದ್ದ ರೋಡ್ ಬ್ರೆಕ್ ನೋಡದೆ ವೇಗವಾಗಿ ಓಡಿಸಿದ್ದರಿಂದ ಆಯತಪ್ಪಿ ಸ್ಕಿಡ್ಡಾಗಿ ಬಿದ್ದು ತಲೆಗೆ ಹಾಗು ಇತರೆ ಕಡೆ ಗಾಯ ಹೊಂದಿದ್ದು ಇರುತ್ತದೆ ಅಂತ ಇತ್ಯಾದಿ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 286/18 ಕಲಂ: 279 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 480 ಕಲಂ 78[3] ಕೆ.ಪಿ ಆಕ್ಟ :- ದಿನಾಂಕ 10/12/2018 ರಂದು ಸಾಯಂಕಾಲ 19-00 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ  ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 10/12/2018 ರಂದು ಸಾಯಂಕಾಲ 16-15 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಗಾಂಧಿ ಚೌಕ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ  ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಗೆ  ಅಂಗಶೋಧನೆ ಮಾಡಿದಾಗ ನಗದು ಹಣ 520=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 39/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ರಾತ್ರಿ 20-15 ಗಂಟೆಗೆ  ಠಾಣೆ ಗುನ್ನೆ ನಂಬರ 480/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 207/2018 ಕಲಂ.379 ಐಪಿಸಿ :- ದಿ:10/12/2018 ರಂದು 20.30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:29/11/2018 ರಂದು ರಾತ್ರಿ 11.30 ಗಂಟೆಯಿಂದಾ ದಿ:30/11/2018 ರಂದು ಬೆಳಿಗ್ಗೆ 6.00 ಗಂಟೆಯ, ಮದ್ಯದ ಅವಧಿಯಲ್ಲಿ ಹೆಬ್ಬಾಳ(ಕೆ) ಗ್ರಾಮದ ಸೀಮೆಯ ಮಾನಪ್ಪ ತಂದೆ ಬಸಪ್ಪ ಶೇಖಸಿಂಧಿ ಇವರ ಹೊಲದಲ್ಲಿ ನಿಲ್ಲಿಸಿದ ನಮ್ಮ ಕುರಿಗಳಲ್ಲಿ  12 ಕುರಿಗಳು ಹಾಗೂ 1 ಟಗರು ಇವುಗಳ ಒಟ್ಟು ಅಕಿ:48000-00 ರೂ  ನೇದ್ದನ್ನು ಯಾರೋ ಅಪರಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂತಾ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.      

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 175/2018 ಕಲಂ 363,323,324,504,506,,ಸಂ.149 ಐಪಿಸಿ:- ದಿನಾಂಕ; 10/12/2018 ರಂದು 6-45 ಪಿಎಮ್  ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಕರೆ ಬಂದಿದ್ದು ಒಂದು ಎಮ್.ಎಲ್.ಸಿ ಇರುವ ಬಗ್ಗೆ ಮಾಹಿತಿ ನೀಡಿದ್ದು ನಂತರ ನಾನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಪಡೆಯುತ್ತಿದ್ದ  ಗಾಯಾಳು ಪಿರ್ಯಾದಿ ಶ್ರೀ ನವೀದ ತಂದೆ ಯುನುಸ ಕಚ್ಚಿ ವ;26 ಜಾ; ಮುಸ್ಲಿಂ ಉ; ವ್ಯಾಪಾರ ಸಾ; ಅಜೀಜ ಕಾಲೋನಿ ಯಾದಗಿರಿ ರವರು ಒಂದು ಹೇಳಿಕೆಯನ್ನು ನೀಡಿದ್ದು, ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನಾನು ಮತ್ತು ನಮ್ಮ ಅಣ್ಣಂದಿರಾದ ಅಬ್ದುಲ ಕರೀಂ, ನದೀಮ ಅಹ್ಮದ ನಾವು ಮೂರು ಜನರು ಕೂಡಿಕೊಂಡು ಯಾದಗಿರಿ ನಗರದ ಗಂಜ ಏರಿಯಾದಲ್ಲಿ ಹೋಲಸೆಲ ಜನರಲ ಸ್ಟೋರ ವ್ಯಾಪಾರ ಮಾಡಿಕೊಂಡು ಇರುತ್ತೇವೆ. ಹಿಗಿದ್ದು ನಾವು ಸುಮಾರು 2 ವರ್ಷಗಳ ಹಿಂದೆ ಯಾದಗಿರಿ ನಗರದ ಡಿಗ್ರಿ ಕಾಲೇಜು- ಕನಕ ಸರ್ಕಲ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕಾಡ್ಲೂರು ಪೆಟ್ರೋಲ ಬಂಕ ಹತ್ತಿರ ಇರುವ ನಿರೂಪ ತಂದೆ ರಾಜಶೇಖರ ಚಾಮನಳ್ಳಿ ಇವರ  ಹತ್ತಿರ ಫ್ಲಾಟನ್ನು ಖರಿದಿಸಿದ್ದು ಇರುತ್ತದೆ. ಸದರಿ ಫ್ಲಾಟ ಕೊಡುವ ವಿಷಯ ಅಫ್ಜಲ ಹಾಗೂ ಅವನ ಗೆಳೆಯ ಮುನ್ನ @ ಮುನೀರ ತಂದೆ ಇಫ್ತೀಕಾರ ಹುಸೇನ ಸಾ; ಮದನಪೂರಗಲ್ಲಿ ಯಾದಗಿರಿ ಇವರು ನನಗೆ ತಿಳಿಸಿದ್ದು ಇರುತ್ತದೆ.  ಫ್ಲಾಟ ಖರೀದಿಸಿದ ನಂತರ  ಅಫ್ಜಲ ಹಾಗೂ ಅವನ ಗೆಳೆಯ ಮುನ್ನ @ ಮುನೀರ ಇವರು ನಮ್ಮ ಹತ್ತಿರ ಬಂದು ನೀವು ಖರೀದಿಸಿದ ಫ್ಲಾಟ ಬಗ್ಗೆ ನಾವು ಮಾಹಿತಿ ನೀಡಿದ್ದು ಅದಕ್ಕಾಗಿ ನಮಗೆ ನೀವು 1,00,000=00 ರೂ.ಗಳು ಕಮೀಷನ ಕೊಡಬೇಕು ಅಂತಾ ಅಂದರು. ಆಗ ನಾವು ಇರಲೀ ಬಿಡು ಸುಮ್ಮನೆ ಯಾಕೆ ತಕರಾರು ಮಾಡಿಕೊಳ್ಳುವುದು ಅಂತಾ ಅವರಿಗೆ ಆಗ 25,000=00 ರೂ. ಗಳನ್ನು ಕೊಟ್ಟೆವು. ಅಲ್ಲಿನಿಂದ ಇಲ್ಲಿಯವರೆಗೆ ಅವರು ಆಗಾಗ ನಮಗೆ ಕಣ್ಣಿಗೆ ಬಿದ್ದಲ್ಲಿ  ಇನ್ನುಳಿದ 75,000=00 ರೂ. ಗಳು ಕಮಿಷನ ಕೊಡಬೇಕು ಅಂತಾ ಅನ್ನುತ್ತಾ ಬಂದಿದ್ದರು. ಹಿಗೀದ್ದು ನಿನ್ನೆ ದಿನಾಂಕ; 09/12/2018 ರಂದು ಮಧ್ಯಾಹ್ನ 1-00 ಪಿಮ್ ಸುಮಾರಿಗೆ ನಾನು ನಮ್ಮ ಅಣ್ಣಂದಿರಾದ ಅಬ್ದುಲ ಕರೀಂ, ನದೀಮ ಅಹ್ಮದ ಇವರೊಂದಿಗೆ ನಮ್ಮ ಮನೆಯಲ್ಲಿದ್ದಾಗ ಮುನ್ನ @ ಮುನೀರ ಈತನು ನನ್ನ ಮೊಬೈಲ ನಂ.9019090901 ನೇದ್ದಕ್ಕೆ ಕರೆಮಾಡಿ ನಾನು ಮತ್ತು ಅಫ್ಜಲ ಒಟ್ಟಿಗೆ ಇದ್ದು ನೀನು ಫ್ಲಾಟ ಸಂಬಂಧ ಕೊಡಬೇಕಾದ ಹಣದ ವಿಚಾರವಾಗಿ ಮಾತನಾಡುವುದಿದೆ ಸ್ಟೇಷನ ರೋಡನಲ್ಲಿ ಇರುವ ಭಾರತ ಹೊಟೇಲಗೆ ಬಾ ಎಂದು ಹೇಳಿದರು. ಆಗ ನಾನು ಎಲ್ಲಿಗೂ ಬರುವುದಿಲ್ಲ ಅಂತಾ ಅಂದೆನು. ಅವನು ಸ್ವಲ್ಪ ಸಮಯದ ನಂತರ ಮತ್ತೆ ಕರೆಮಾಡಿ ನಾವು ನಿಮ್ಮ ಮನೆಯ ಮುಂದೆ ಇದ್ದೆವೆ ಮನೆಯಿಂದ ಹೊರಗಡೆ ಬಾ ಅಂದಾಗ ನಾನು ಹೊರಗಡೆ ಹೊಗಲಿಲ್ಲ. ಸದರಿ ಇವರು ಮತ್ತೆ ನನಗೆ ಪದೇ ಪದೇ ಫೋನ ಮಾಡಿ ನೀನು ನಮಗೆ ಹಣ ಕೊಡದೇ ಇದ್ದರೆ ಬೇರೆಯವರ ಕಡೆಯಿಂದ ನಿನಗೆ ಕಿಡ್ನಾಪ ಮಾಡಿ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ಇವರು ಹಿಗೆಯೇ ಹೇಳುತ್ತಾರೆ ಅಂತಾ ನಾನು ಅಷ್ಟಕ್ಕೇ ಸುಮ್ಮನಾದೆನು. ಇಂದು ದಿನಾಂಕ;10/12/2018 ರಂದು ಮಧ್ಯಾಹ್ನ 12-00 ಪಿಎಮ್ ಸುಮಾರಿಗೆ ನಾನು ನಮ್ಮ ಮೋ.ಸೈಕಲ ಮೇಲೆ  ಗಂಜನಲ್ಲಿರುವ ನಮ್ಮ ಜನರಲ ಸ್ಟೋರನಿಂದ ಹೊಸಳ್ಳಿ ಕ್ರಾಸ ಮೂಲಕ ನಮ್ಮ ಮನೆಯ ಕಡೆಗೆ ಬರುತ್ತಿರುವಾಗ  ಮಲ್ಲಣ್ಣ ನಿವೃತ್ತ ಎ.ಎಸ್.ಐ ರವರ ಮನೆಯ ಹತ್ತಿರ ಬಂದಾಗ ನನ್ನ ಎದುರುಗಡೆಯಿಂದ ಒಂದು ಬಿಳಿ ಬಣ್ಣದ ಬುಲೆರೋ ವಾಹನ ಬಂದು ಒಮ್ಮೇಲೆ ನನ್ನ ಮೋ.ಸೈಕಲ ಮುಂದೆ ನಿಲ್ಲಿಸಿ ದಿಡಿರನೇ ವಾಹನದಿಂದ 3-4 ಜನರು ಕೆಳಗೆ ಇಳಿದು ಬಂದವರೇ ಇಬ್ಬರು ನನಗೆ ಹಿಡಿದುಕೊಂಡು ಒಬ್ಬನು ವಾಹನದ ಬಾಗಿಲ ಹತ್ತಿರ ನಿಂತುಕೊಂಡು ಬಂಗಾರದ ಹಿಡಿಕೆಯುಳ್ಳ ಡ್ರ್ಯಾಗನ ತೋರಿಸಿ ಸುಮ್ಮನೆ ಗಾಡಿ ಹತ್ತು ಇಲ್ಲವಾದರೆ ನಿನಗೆ ಹೊಟ್ಟೆಗೆ ಚುಚ್ಚುತ್ತೇವೆ ಅಂತಾ ಅನ್ನುತ್ತಾ ಇನ್ನೊಬ್ಬನು ನನಗೆ ಗಾಡಿಯಲ್ಲಿ ನುಕಿದನು. ನಂತರ ವಾಹನದಲ್ಲಿ ಕುಳಿತು ಮುಂದೆ ಹೋಗುವಾಗ ನನಗೆ ಮೂಗಿಗೆ ದಸ್ತಿಯಿಂದ ವಾಸನೆ  ತೋರಿಸಿ  ಮೂಛರ್ೆ ಹೋಗುವಂತೆ ಮಾಡಿದರು. ಸದರಿಯವರ ಹೆಸರು, ವಿಳಾಸ ಹಾಗೂ ಬುಲೆರೋ ವಾಹನದ ನಂಬರ ಕೂಡಾ ನನಗೆ ಗೊತ್ತಾಗಿರುವುದಿಲ್ಲ. ಮುಂದೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ನನಗೆ 3-30 ಪಿಎಮ್ ಸುಮಾರಿಗೆ ಪ್ರಜ್ಞೆ ಬಂದು ನೋಡಿದಾಗ ನನ್ನ ಎಗಡೈ ರಟ್ಟೆಗೆ ಒಂದು ಚಾಕುವಿನಿಂದ ಹಾಕಿದ ರಕ್ತದ ಗಾಯ, ತೆಲೆಯ ಮೇಲೆ ಬಾಟಲಿಗಳಿಂದ ಹೊಡೆದ ರಕ್ತದ ಗಾಯ ಹಾಗೂ ಬೆನ್ನಿಗೆ ಅಲ್ಲಲ್ಲಿ ಹೊಡೆದಿದ್ದರಿಂದ ಗುಪ್ತಗಾಯಗಳಾಗಿದ್ದವು. ಹಾಗೂ  ನನ್ನ ಮೋ.ಸೈಕಲ ಕೂಡಾ  ನಾನು ಬಿದ್ದ ಪಕ್ಕದಲ್ಲಿಯೇ ಬಿದ್ದಿದ್ದು ಸುತ್ತಮುತ್ತ ನೋಡಲಾಗಿ ನಾನು ಎಲ್ಲಿರುವೆ ಎಂಬುದು ನನಗೆ ಗೊತ್ತಾಗಲಿಲ್ಲ. ನಂತರ ನಾನು ನನ್ನ ಮೋ.ಸೈಕಲನ್ನು ತೆಗೆದುಕೊಂಡು ಸಮೀಪದಲ್ಲಿರುವ ಸೈದಾಪುರ ಕಡೆಗೆ ಬರುವ ಕೊಂಚಿ ಗ್ರಾಮಕ್ಕೆ ಬಂದು ಅಲ್ಲಿ ಬೇರೆಯವರ ಮೋಬೈಲ ತೆಗೆದುಕೊಂಡು ಯಾದಗಿರಿಯಲ್ಲಿರುವ  ನನ್ನ ತಮ್ಮನಾದ ಫೈಸಲ ಕಚ್ಚಿ ಈತನ ಮೋ.ನಂ.9900129245 ನೇದ್ದಕ್ಕೆ ಫೋನ ಮಾಡಿ ನಡೆದ ವಿಷಯ ತಿಳಿಸಿದೆನು. ನಂತರ ನನ್ನ ತಮ್ಮ ಫೈಸಲ ಮತ್ತು ನದೀಮ ಕಚ್ಚಿ ಇವರು ಸೈದಾಪೂರದಲ್ಲಿರುವ ಅವನ ಗೆಳೆಯ ರಿಜ್ವಾನ ತಂದೆ ಖಲೀಲ ಅಹ್ಮದ ಸಾ; ಸೈದಾಪೂರ ರವರಿಗೆ ವಿಷಯ ತಿಳಿಸಿದಾಗ ಅವನು  ನಾನಿರುವಲ್ಲಿಗೆ ಬಂದನು. ಅಲ್ಲದೇ ಯಾದಗಿರಿಯಿಂದ ಫೈಸಲ ಕಚ್ಚಿ ಮತ್ತು ಅಜೀಜ ಶೇಖ ಸಾ; ಆಸರ ಮೊಹಲ್ಲಾ ಈತನು ಕೂಡಾ ವಿಷಯ ತಿಳಿದು ಅಲ್ಲಿಗೆ ಬಂದು ಎಲ್ಲರೂ ಕೂಡಿ ನನಗೆ ಸಾಯಂಕಾಲ 6-30 ಪಿಎಮ್ ಸುಮಾರಿಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಫ್ಲಾಟ ಕಮಿಷನ ಹಣದ ವಿಷಯವಾಗಿ ವೈಮನಸ್ಸಿದ್ದ ಅಫ್ಜಲ ಮತ್ತು ಮುನ್ನಾ @ ಮುನೀರ ಇವರು ನಿನ್ನೆ ನನಗೆ ಫೋನ ಮಾಡಿ ಅಪಹರಿಸುವುದಾಗಿ ಹೇಳಿದಂತೆ ಅವರೇ ಇಂದು ಅವರ ಕಡೆಯವರಿಂದ ಇಂದು ನನಗೆ ಅಪಹರಿಸಿ ಗುಪ್ತ ಹಾಗೂ ರಕ್ತಗಾಯಪಡಿಸಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಠಾಣೆಗೆ 8-15 ಪಿಎಮ್ ಕ್ಕೆ  ಬಂದು ಸದರಿ ಹೇಳಿಕೆಯ ದೂರಿನ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ.175/2018 ಕಲಂ; 363,323,324,504,506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ :-99/2018 ಕಲಂ 279, 336  ಐಪಿಸಿ :-ದಿನಾಂಕ 10/12/2018 ರಂದು 6-15 ಪಿ.ಎಂ.ಕ್ಕೆ ಶ್ರೀಮತಿ ಭೀಮರತ್ನ ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಬಂದು ಒಂದು ವರದಿ, ಮೋಟಾರು ಸೈಕಲ್  ನಂ.ಕೆಎ-33, ಯು-1588  ಹಾಗೂ ಅದರ ಸವಾರನನ್ನು ಹಾಜರುಪಡಿಸಿದ್ದು ವರದಿಯ ಸಾರಾಂಶವೇನೆಂದರೆ   ನಾನು ಭೀಮರತ್ನ ಸಜ್ಜನ್ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮಗೆ ಸೂಚಿಸುವದೆನೆಂದರೆ ಇಂದು ದಿನಾಂಕ: 10/12/2018 ರಂದು  ಸಾಯಂಕಾಲ 5-30 ಪಿ.ಎಂ.ಸುಮಾರಿಗೆ ಯಾದಗಿರಿ ನಗರದ ಉಳ್ಳೆಸೂಗರು ಕಾಫ್ಲೆಕ್ಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ನಾನು ಮತ್ತು ಸಿಬ್ಬಂದಿಯವರು ಕರ್ತವ್ಯದಲ್ಲಿರುವಾಗ  ಯಾದಗಿರಿ ಹಳೆ ಬಸ್ ನಿಲ್ದಾಣದ ಕಡೆಯಿಂದ ಶಾಸ್ತ್ರಿ ವೃತ್ತದ ಕಡೆಗೆ ಹೊರಟಿದ್ದ  ಒಂದು ಮೋಟಾರು ಸೈಕಲ್ ಸ್ಕೂಟಿ ವಾಹನ ನೇದ್ದರ ಸವಾರನು ತನ್ನ ಮೋಟಾರು ಸೈಕಲ್ ಹಿಂಬದಿ ಒಬ್ಬರನ್ನು ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವುದನ್ನು ಕಂಡು ಮೋಟಾರು ಸೈಕಲ್ ನೇದ್ದಕ್ಕೆ ಸಿಬ್ಬಂದಿಯವರು ಕೈ ಮಾಡಿ ನಿಲ್ಲಿಸಲು ಸೂಚಿಸಿದ್ದರು ಕೂಡ ಮೋಟಾರು ಸೈಕಲನ್ನು ನಿಲ್ಲಿಸದೇ ಹಾಗೇ ಅದೇ  ವೇಗದಲ್ಲಿ ಮುಂದೆ ಹೋಗಿ ನಿಲ್ಲಿಸಿದಾಗ ಸಿಬ್ಬಂದಿಯವರು ಆತನಿಗೆ ಕರೆದುಕೊಂಡು ನನ್ನ ಹತ್ತಿರ ಕರೆದುಕೊಂಡು ಬಂದಾಗ ಮೋಟಾರು ಸೈಕಲ್ ನಂಬರ ಕೆಎ-33, ಯು-1588 ನೇದ್ದು ಇದ್ದು, ಅದನ್ನು ನಡೆಸುತ್ತಿದ್ದ ವ್ಯಕ್ತಿಯು ಕಾಲಿನಿಂದ  ಅಂಗವಿಕಲನಾಗಿದ್ದು, ಆತನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಶೋಕ ತಂದೆ ಮೋನಪ ಐಕೂರ  ವಯ;29 ವರ್ಷ, ಜಾ;ವಿಶ್ವಕರ್ಮ, ಉ;ರಾಜಕೀಯ, ಸಾ;ಐಕೂರ ತಾ;ವಡಗೇರಾ ಅಂತಾ ತಿಳಿಸಿದ್ದು ಆತನಿಗೆ ಚಾಲನ ಪರವಾನಿಗೆ ಪ್ರಮಾಣ ಪತ್ರ ಕೇಳಲು ತಾನು ಚಾಲನೆ ಪ್ರಮಾಣ ಪತ್ರ ಹೊಂದಿರುವುದಿಲ್ಲ ಅಂತಾ ತಿಳಿಸಿದ್ದು, ಮೋಟಾರು ಸೈಕಲ್ ನೇದ್ದರ ದಾಖಲಾತಿಗಳನ್ನು ಕೇಳಲಾಗಿ ಯಾವುದೂ ಕೂಡ ತನ್ನ ಹತ್ತಿರ ಇರುವುದಿಲ್ಲ ಅಂತಾ  ತಿಳಿಸಿರುತ್ತಾನೆ.  ಸದರಿ ಮೋಟಾರು ಸೈಕಲ್ ಸ್ಕೂಟಿ ನಂಬರ ಕೆಎ-33, ಯು-1588 ನೇದ್ದನ್ನು  ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ. ಸದರಿ ಮೋಟಾರು ಸೈಕಲ್ ಮತ್ತು ಸವಾರನ ಸಮೇತ ಠಾಣೆಗೆ ತಂದು  ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ   ಅಂತಾ ಕೊಟ್ಟ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 99/2018 ಕಲಂ 279, 336 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.           


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!