ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-12-2018

By blogger on ಶನಿವಾರ, ಡಿಸೆಂಬರ್ 8, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-12-2018 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 173/2018 ಕಲಂ 435 ಐ.ಪಿ.ಸಿ:- ದಿನಾಂಕ 07/12/2018 ರಂದು 6-30 ಪಿಎಮ್ ಕ್ಕೆ ಅಜರ್ಿದಾರರಾದ ಶ್ರೀ ಮುನ್ನಾ ಪಟೇಲ ತಂದೆ ಎಮ್ ಪಟೇಲ @ ರಾಜಾ ಪಟೇಲ ವ;43 ಜಾ; ಮುಸ್ಲಿಂ ಉ; ಎಲೆಕ್ಟ್ರಿಶನ್ ಕೆಲಸ ಸಾ; ಮುಸ್ಲಿಂಪುರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿ ಸಾರಾಂಶವೆನೆಂದರೆ, ದಿನಾಂಕ; 04/12/2018 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯವರೆಲ್ಲರು ಊಟ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದೆವು. ನಂತರ ಬೆಳೆಗ್ಗೆ ದಿನಾಂಕ; 05/12/2018 ರಂದು ಬೆಳೆಗ್ಗೆ 4-00 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ಜನರು ಚಿರಾಡುವ ಸಪ್ಪಳ ಕೇಳಿ ಎದ್ದು ಮನೆಯ ಬಾಗಿಲು ತೆರೆದು ಹೊಗಡೆ ಬರಬೇಕು ಅಂತಾ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಬಾಗಿಲು ತೆರೆಯಲಿಲ್ಲ. ಯಾರೋ ನಮ್ಮ ಮನೆಯ ಬಾಗಿಲಿಗೆ ಹೊರಗಡೆಯಿಂದ ಕೊಂಡಿ ಹಾಕಿದ್ದರು. ನಂತರ ಮನೆಯ ಪಡಸಾಲೆಯ ಬಾಗಿಲಿನಿಂದ ಕೆಳಗೆ ನೋಡಲಾಗಿ ನನ್ನ ಮನೆಯ ಮುಂದೆ ನಿಲ್ಲಿಸಿದ ನನ್ನ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋ.ಸೈಕಲ ನಂ.ಕೆಎ.33 ಆರ್.5601 ಅ.ಕಿ.30,000=00 ಮತ್ತು ನನ್ನ ಮೋ.ಸೈಕಲ ಬಾಜು ನಿಲ್ಲಿಸಿದ  ಫರೀದ ತಂದೆ ಮೊಹ್ಮದ ಅಲೀ ಶೇಖ  ಈತನ ಟಿ.ವಿ.ಎಸ್. ವಿಕ್ಟರ ಮೋ.ಸೈಕಲ ನಂ. ಕೆಎ.33. ಹೆಚ್. 4809  ಅ.ಕಿ. 15,000=00 ನೇದ್ದನ್ನು ಯಾರೋ ಬೆಂಕಿ ಹಚ್ಚಿದ್ದು ನಮ್ಮ ಮನೆಯ ಕೆಳಗಡೆ ಇರುವ ಜಹೀರ ಅಹ್ಮದ ತಂದೆ ಸಲಾಂಸಾಬ ಹಾಗೂ ಫರೀದ, ಬುರಾನ ತಂದೆ ರಜ್ಜುದ್ದೀನ್ ರವರು ಕೂಡಿಕೊಂಡು ನೀರು ಹಾಕಿದರು. ನಾನು ಮತ್ತು  ನನ್ನ ಹೆಂಡತಿ ರಜೀಯಾ ಬೇಗಂ ಮನೆಯ ಮೇಲಿನಿಂದ ನೀರು ಹಾಕಿ ಎಲ್ಲರೂ ಕೂಡಿಕೊಂಡು ಬೆಂಕಿ ಆರಿಸಿದೆವು.  ನಂತರ  ಮನೆಯ  ಬಾಗಿಲ ಕೊಂಡಿ ತೆಗೆದಾಗ ಕೆಳಗೆ ಬಂದು ನೋಡಲಾಗಿ ಎರಡು ಮೋ.ಸೈಕಲಗಳು ಸುಟ್ಟು ಕರಕಲಾಗಿದ್ದವು. ದಿನಾಂಕ; 05/12/2018 ರಂದು ರಾತ್ರಿ 2-30 ಎಎಮ್ ದಿಂದ 3-30 ಎಎಮ್ ದ ಮಧ್ಯದ ಅವಧಿಯ ಒಳಗಡೆ ಯಾರೋ ಅಪರಿಚಿತ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು ಈ ಬಗ್ಗೆ ಎಲ್ಲಾಕಡೆ ವಿಚಾರಿಸಿ ಆರೋಪಿತರ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದಿದ್ದು ಸದರಿಯವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.173/2018 ಕಲಂ; 435 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 388/2018 ಕಲಂ: 498(ಎ) 323,504, 506 ಐಪಿಸಿ ದಿನಾಂಕಃ 07/12/2018 ರಂದು 9-45 ಪಿ.ಎಮ್ ಕ್ಕೆ ಶ್ರೀಮತಿ ಶ್ರೀದೇವಿ ಗಂಡ ಧರ್ಮಣ್ಣ ದೇವಕರ್ ಸಾ: ಶಾಂತಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಕಳೆದ 6 ವರ್ಷಗಳ ಹಿಂದೆ ನನಗೆ ಶಾಂತಪೂರ ಗ್ರಾಮದ ಧರ್ಮಣ್ಣ ತಂದೆ ಪರಮಣ್ಣ ದೇವಕರ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದು ನಮಗೆ ಇಲ್ಲಿಯವರೆಗೆ ಮಕ್ಕಳಾಗಿರುವದಿಲ್ಲ. ಮದುವೆಯಾದ ಬಳಿಕ ನನ್ನ ಗಂಡನು ಸುಮಾರು 2 ವರ್ಷಗಳ ಕಾಲ ನನ್ನೋಂದಿಗೆ ಅನೋನ್ಯವಾಗಿ ಸಂಸಾರ ಮಾಡಿದ್ದು ಬಳಿಕ ಆತನು ಮದ್ಯಪಾನ ಮಾಡುವ ಚಟಕ್ಕೆ ದಾಸನಾಗಿ ದಿನಾಲು ಕುಡಿದು ಮನೆಗೆ ಬಂದು ವಿನಾಕಾರಣ ಜಗಳ ತಗೆದು ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದಿರುತ್ತಾನೆ. ಕಳೆದ 4 ವರ್ಷಗಳಿಂದ ದಿನಾಲು ಮನೆಯಲ್ಲಿ ಸೂಳೆ ಮದುವೆಯಾಗಿ ಇಷ್ಟು ದಿವಸಗಳಾದರೂ ನಿನಗೆ ಮಕ್ಕಳಾಗುತ್ತೀಲ್ಲ, ನೀನು ಬಂಜೆ ಇದ್ದಿ ಸೂಳೆ ಮನೆಬಿಟ್ಟು ಹೋಗು ನಾನೇ ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೊಡೆಬಡೆ ಮಾಡುತ್ತ ನಾನು ಮನೆಯಲ್ಲಿ ಎಷ್ಟೆ ಸರಿಯಾಗಿ ಅಡಿಗೆ ಮಾಡಿದರೂ ಸಹ ನನಗೆ ಮನೆ ಬಿಟ್ಟು ಓಡಿಸಬೆಕೆಂದು ರೊಟ್ಟಿ ಸರಿಯಾಗಿಲ್ಲಾ, ಪಲ್ಲೆಯಲ್ಲಿ ಉಪ್ಪು ಖಾರ ಇಲ್ಲ ಅಂತ ನೆಪ ಮಾಡಿ ಹೊಡೆಯುತ್ತಾನೆ. ಆತನು ನನಗೆ ಕಿರುಕುಳ ಕೊಡುತ್ತಿರುವ ವಿಷಯವನ್ನು ನಾನು ನಮ್ಮ ತಂದೆಯವರಿಗೆ ಹಲವಾರು ಬಾರಿ ಮನೆಗೆ ಹೋಗಿ ಹೇಳಿದ್ದೂ, ಅವರು ನಿನಗೆ ಮಕ್ಕಳಾದರೆ ಎಲ್ಲವೂ ಸರಿ ಹೋಗುತ್ತದೆ, ಹೆಣ್ಣಾದವಳೂ ಎಲ್ಲವನ್ನು ತಾಳಿಕೊಂಡು ಹೋಗಬೇಕು, ಮುಂದೆ ಎಲ್ಲವೂ ಸರಿ ಹೋಗುತ್ತದೆ ಅಂತ ಬುದ್ದಿವಾದ ಹೇಳುತ್ತ ಬಂದಿದ್ದರಿಂದ ನಾನು ನನ್ನ ಗಂಡನು ಕೊಡುವ ಕಿರುಕಳವನ್ನು ಸಹಿಸುತ್ತ ಬಂದಿರುತ್ತೇನೆ. ಅಲ್ಲದೇ ದಿನಾಂಕಃ 25-11-2018 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ನನ್ನ ಗಂಡನು ಕುಡಿದು ಬಂದು ನನಗೆ ಭೋಸಡಿ, ಸೂಳೆ ನೀನು ಮನೆ ಬಿಟ್ಟು ಅಂದರೂ ಬಿಡುತ್ತೀಲ್ಲಾ, ಇವತ್ತು ಹೋಗುತ್ತೀಯಾ ಖಲಾಸ ಮಾಡಲೇ ನಿನಗೆ ಅನ್ನುತ್ತ ತಲೆಯ ಕೂದಲು ಹಿಡಿದು ಹೊಡೆಯುತ್ತಿದ್ದಾಗ ನಾನು ಚಿರಾಡುವ ಸಪ್ಪಳ ಕೇಳಿ ನನ್ನ ತಂದೆ-ತಾಯಿಯವರು ಬಂದು ನನಗೆ ಹೊಡೆಯುವದನ್ನು ಬಿಡಿಸಿ ನನಗೆ ತವರು ಮನೆಗೆ ಕರೆದುಕೊಂಡು ಹೋಗಿದ್ದು, ಆಗ ಆತನು ಇನ್ನೊಮ್ಮೆ ನಮ್ಮ ಮನೆಗೆ ಬಂದರೆ ಜೀವಂತವಾಗಿ ಉಳಿಸುವದಿಲ್ಲ ಸೂಳೆ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 388/2018 ಕಲಂ 498(ಎ), 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 285/2018 ಕಲಂ 279,337 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್:- ದಿ: 07/12/2018 ರಂದು 7.30 ಪಿಎಮ್ಕ್ಕೆ ಪಿರ್ಯಾಧಿ ಶ್ರೀ ಬಸವರಾಜ ಪಾಟೀಲ ಸಾ|| ಏವೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 07/12/2018 ರಂದು ನಾನು ಹಾಗೂ ನಮ್ಮ ಸಂಬಂದಿ ಆನಂದರೆಡ್ಡಿ ತಂದೆ ಗುರುನಾಥರೆಡ್ಡಿ ಕಾಮನಟಗಿ ಇಬ್ಬರು ಕೂಡಿ ಖಾಸಗಿ ಕೆಲಸದ ನಿಮಿತ್ಯ ನಮ್ಮ ಸ್ವಿಫ್ಟ್ ಕಾರ್ ನಂ. ಕೆಎ 33 ಎಮ್ 4712 ನೇದ್ದರಲ್ಲಿ ಕೆಂಭಾವಿಗೆ ಬರುವ ಕುರಿತು ಮಲ್ಲಾ ಸಮೀಪ ಮುಖ್ಯ ರಸ್ತೆಯ ಮೇಲೆ ಬರುತ್ತಿರುವಾಗ 8.30 ಎಎಮ್ ಸುಮಾರಿಗೆ ನಮ್ಮ ಹಿಂದುಗಡೆ ಅಂದರೆ ಏವೂರ ಕಡೆಯಿಂದ ಒಂದು ಕಾರ್ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರ್ನ ಹಿಂಬದಿಗೆ ಡಿಕ್ಕಿಪಡೆಸಿದಾಗ ನಮ್ಮ ಕಾರ್ ರೋಡಿನ ಎಡಭಾಗಕ್ಕೆ ಜಾಲಿ ಕಂಟಿಯಲ್ಲಿ ಹೋಗಿ ಬಿದ್ದಿದ್ದು ಇರುತ್ತದೆ. ನನಗೆ ತಲೆಗೆ ರಕ್ತಗಾಯವಾಗಿದ್ದು ಹಾಗೂ ನನ್ನ ಜೊತೆ ಕಾರಿನಲ್ಲಿ ಇದ್ದ ಆನಂದರೆಡ್ಡಿ ಈತನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ. ಸದರಿ ನಮ್ಮ ಕಾರಿಗೆ ಡಿಕ್ಕಿಪಡೆಸಿದ ಕಾರ್ ನಂಬರ ನೋಡಲಾಗಿ ಕೆಎ 36 ಎನ್ 3626 ನೇದ್ದು ಇದ್ದು, ಸದರಿ ಕಾರ್ನ ಚಾಲಕನು ತನ್ನ ಕಾರನ್ನು ಅಪಘಾತಪಡೆಸಿದ ತಕ್ಷಣ ಅಲ್ಲಿಯೆ ನಿಲ್ಲಿಸಿ ಓಡಿಹೋಗಿದ್ದು ಇರುತ್ತದೆ ಅಂತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 282/18 ಕಲಂ: 279, 337 ಐಪಿಸಿ ಸಂ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.  

 ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 387/2018 ಕಲಂ 498 (ಎ)323,504,506  ಸಂ.149ಐಪಿಸಿಮತ್ತು ಕಲಂ.3&4 ಡಿಪಿ ಕಾಯ್ದೆ 1961:- ದಿನಾಂಕ:07-12-2018 ರಂದು8-30 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗಶ್ರೀಮತಿ ರೇಖಾಗಂಡ ಭಿಮರಾಯ ಸಂಗಾನೋರ ಸಾ||ಬಾಪೂಗೌಡ ನಗರಅಯ್ಯಪ್ಪಸ್ವಾಮಿಗುಡಿಯ ಹತ್ತಿರ ಶಹಾಪೂರ ನನ್ನ ವಿವಾಹವು ಶಹಾಪೂರತಾಲೂಕಿನ ಭಿಮರಾಯ ಎಂಬ ಯುವಕನೊಂದಿಗೆ ಹಿಂದೂ ಸಂಪ್ರದಾಯದಂತೆ ನನ್ನ ವಿವಾಹವಾಗಿರುತ್ತದೆ. ನನ್ನ ಮದುವೆಯಾಗಿಎಂಟು ವರ್ಷಗಳಾಗಿವೆ ನಾವುಗಳು ಮದುವೆಯಾದಗಿನಿಂದ ಕೆಲವು ದಿವಸಗಳು ವೈವಾಹಿಕ ಜೀವನ ನಡೆದುತ್ತಿದ್ದೇವೆ. ನನ್ನ ಪತಿಯೂ ನನಗೆ ನಿನ್ನತವರು ಮನೆಯಿಂದ ವರದಕ್ಷಣೆತಗೆದುಕೊಂಡು ಬಾ ಇಲ್ಲವಾದರೆ ನಾನು ನಿನ್ನನ್ನು ಮನೆಯಿಂದ ಹೊರಗೆ ಹಾಕುತ್ತೇನೆ. ಮತ್ತುಎರಡನೆ ಮದುವೆ ಮಾಡಿಕೊಳ್ಳುತ್ತೇನೆ, ನಾನು ಕೊಲೆ ಮಾಡಿದರೂಕೂಡಾ ನಿನಗೆ ಹೇಳುವವರು ಕೇಳುವವರು ಯಾರುಇಲ್ಲಾಎಂದು ಆಗಾಗ ನನಗೆ ಹೊಡೆ ಬಡೆ ಮಾಡುತ್ತಿದ್ದರು. ಆದರೂಇವತ್ತೇಲ್ಲಾ ನಾಳೆ ತಿಳಿದುಕೊಂಡು ಸಂಸಾರ ನಡೆಸಬಹುದುಎಂದು ನಾನು ಸುಮ್ಮನಾಗುತ್ತಿದ್ದೆ. ಈತನ ಕಿರುಕುಳ ತಾಳಲಾರದೆ ನನ್ನತವರು ಮನೆಯಾದಕುಂಬಾರಪೇಟೆಯಲ್ಲಿ ಬಂದುಇದ್ದೆ ದಿನಾಂಕ:26-11-2018 ರಂದು ಬೆಳಿಗ್ಗೆ 7 ಗಂಟೆಗೆ  ಮನ ಬಂದಂತೆ ಹೊಡೆದು ಪರಾರಿಯಾಗಿರುತ್ತಾನೆ. ಸದರಿ ವಿಷಯದ ಬಗ್ಗೆ ಸುರಪುರ ಪೊಲೀಸ್ಠಾಣೆಗೆ ನಾನು ಮೌಖಿಕವಾಗಿ ತಿಳಿಸಿದಾಗ, ಸದರಿಠಾಣಾ ಅಧಿಕಾರಿಗಳು ನಾವು ಹುಡುಕುತ್ತೇವೆ ನೋಡೊಣಎಂದು ಹೇಳಿದರು ಆಗ ನಾನು ಸುಮ್ಮನಾಗಿ ಮನೆಗೆ ಬಂದೆಇವತ್ತು ನಾನು ಡಿಪ್ಲಮ್ ನಸರ್ಿಂಗ್ ಪರೀಕ್ಷೆ ಬರೆಯುವದಕ್ಕೆಯಾದಗಿರಿಗೆ ಹೋಗಿದ್ದೆ. ನನ್ನ ಪತಿ ಮತ್ತು ನನ್ನ ಪತಿಯಕುಟುಂಬದವರುಯಾದಗಿರಿಯಲ್ಲಿ  ಮದ್ಯಾಹ್ನ 1 ಗಂಟೆಗೆ ಸಾಯಿ ಹೋಟೆಲ ಹತ್ತಿರ ಸಿಕ್ಕರು ನಾನು ಅವರಿಗೆ ನೀನು ಈ ರೀತಿ ಏಕೆ ಮಾಡುತ್ತಿಎಂದು ಪ್ರಶ್ನೆ ಮಾಡಿದೆ. ಅವರುಏಕಾಏಕಿಯಾಗಿ ನೀನು ಯಾರೂ ನನಗೆ ಗೊತ್ತಿಲ್ಲಎಂದು ನನ್ನ ಕೊರಳಿನಲ್ಲಿರುವ ಮಾಂಗಲ್ಯಕ್ಕೆ ಕೈ ಹಾಕಿ ಹರಿದುಕೊಂಡು ಮಗಳೇ ನಿನ್ನನ್ನು ಖಲಾಸ ಮಾಡಿಬಿಡುತ್ತೇನೆ. ನಿನ್ನನ್ನುಇಡುವದಿಲ್ಲ. ನಿನಗೆ ನಿನ್ನತವರು ಮನೆಯಿಂದ 1 ಲಕ್ಷರೂಪಾಯಿ 10 ತೊಲೆ ಬಂಗಾರತಗೆದುಕೊಂಡು ಬಾ ಎಂದು ಹೇಳಿದರೂ ನೀನು ನಿನ್ನತವರು ಮನೆಯಲ್ಲಿ ಇದ್ದಿ ಎಂದು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ಅಲ್ಲೆ ನಿಂತಿರುವಅವರ ಸಾಕು ತಾಯಿಯಾದಅನ್ನಪೂರ್ಣಗಂಡ ದಿ. ಮಲ್ಲಿನಾಥ ಸಂಗಾನೋರ ಈ ಸೂಳಿಗೆ ಬಿಡಬೇಡ ಖಲಾಸ ಮಾಡಿಬಿಡು ಇವಳಿಗೆ ಎಷ್ಟು ಸಲ ನಾವು ವರದಕ್ಷಣೆತಗೆದುಕೊಂಡು ಬಾ ಅಂತಾ ಹೇಳಿದರೂ ಕೇಳದೆ ತನ್ನತವರು ಮನೆಯಲ್ಲಿ ಇದ್ದಾಳೆ ಎಂದು ಅವಳು ಕೂಡಾ ನನಗೆ ಬಾಯಿಗೆ ಬಂದಂತೆ ನಿಂದಿಸಿದಳು, ನಂತರಅಲ್ಲೆಇದ್ದಅವರಅಪ್ಪನಾದ ಮಲ್ಲಪ್ಪಕಜರ್ಿಗಿಈತನುಕೂಡಾ ಕಾಲಿನಲ್ಲಿರುವಚಪ್ಪಲೆತಗೆದುಕೊಂಡು ನನಗೆ ಹೊಡೆಯುವದಕ್ಕೆ ಬಂದನು. ಅವರ ಸ್ವಂತತಾಯಿಯಾದಗುಂಡಮ್ಮ ಇವಳು ಕೂಡಾ ನನ್ನತಲೆಯ ಮೇಲೆ ಹಿಡಿದುಕೊಂಡು ನನ್ನ ಬೆನ್ನಿಗೆ ಬಲವಾಗಿ ಹೊಡೆದಿರುತ್ತಾಳೆ. ನನಗೆ ಯಾಕೆ ಹೊಡೆಯುತ್ತಿಎಂದು ಕೇಳಿದರೆ ನನ್ನ ಮಾವನಾದ ಮಲ್ಲಪ್ಪಕಜರ್ಿಗಿಈತನು ನನ್ನಎರಡು ಕೈಗಳನ್ನು ಹಿಡಿದುಕೊಂಡು ನನ್ನಅತ್ತೆಯಾದ ಬಲವಾಗಿ ಹೊಡೆದಿರುತ್ತಾಳೆ. ಇದಲ್ಲದೆ ನನ್ನಗಂಡನಅಣ್ಣನಾದ ಸಿದ್ದು ತಂದೆ ಮಲ್ಲಪ್ಪಕರ್ಜಗಿಈತನು ಬೆಂಗಳೂರಿನಿಂದ ದೂರವಾಣಿ ಮುಖಾಂತರ ಪೊನ ಮಾಡಿ ಆ ಸೂಳಿನ ಇಷ್ಟೆ ಬಿಡಬೇಡ್ರಿ ಖಲಾಸ ಮಾಡಿಬಿಡ್ರಿತಮ್ಮನ್ನಿಗೆ ನನ್ನ ಹೆಂಡತಿಯ ತಂಗಿದ್ದಾಳೆ ಅವಳನ್ನು ಕೊಟ್ಟು ಮದುವೆ ಮಾಡುತ್ತೇನೆ. ಎಂದುಅವರಿಗೆ ಪ್ರಚೋದನೆ ನಿಡುತ್ತಿದ್ದನು. ನಾನು ಇವರಿಂದ ತಪ್ಪಿಸಿಕೊಂಡು ಸುರಪುರ ಪೊಲೀಸ್ಠಾಣೆಗೆ ಪೋನ  ಮುಖಾಂತರ ತಿಳಿಸುತ್ತಿರುವಾಗ ಸದರಿಯವರೆಲ್ಲರೂ ಸೇರಿ ನನ್ನಕೈಯಲ್ಲಿರುವ ಮೊಬೈಲ್ ಕಸಿದುಕೊಂಡು ಕಾಲಲ್ಲಿ ಹಾಕಿ ತುಳಿಯುವುದಕ್ಕೆ ಪ್ರಯತ್ನ ಮಾಡಿದರು. ಸದರಿಯವರು ನನ್ನನ್ನು ಬಿಡುವುದಿಲ್ಲ ಎಂದು ತಪ್ಪಿಸಿಕೊಂಡು ಸುರಪುರಕ್ಕೆ ಬರುವ ಬಸ್ಸನ್ನು ಹಿಡಿದುಕೊಂಡು ಸುರಪುರಕ್ಕೆ ಬಂದೆ ನಾವು ಬಿಡುವದಿಲ್ಲ ನೀನು ಎಲ್ಲಿಗೆ ಹೋಗು ಸುರಪುರಕ್ಕೆ ಹೋಗು ಸುರಪುರ ಪೊಲೀಸ್ಠಾಣೆಗೆ ಹೋಗು ನಿನ್ನಇವತ್ತುಖಲಾಸ್ ಮಾಡಿಬಿಡುತ್ತೆವೆಎಂದು ನನಗೆ ಜೀವ ಬೇದರಿಕೆ ಹಾಕಿರುತ್ತಾರೆ ಸದರಿ ನನ್ನಗಂಡನುಅದರ ಬಗ್ಗೆ ನಾನು ಮೌಖಿಕವಾಗಿ ಸುರಪುರ ಪೊಲೀಸ್ಠಾಣೆಗೆ ತಿಳಿಸಿದ್ದೆನೆ ನಾವು ವಿಚಾರ ಮಾಡುತ್ತೇವೆ. ತನಿಖೆ ಮಾಡುತ್ತೇವೆಎಂದು ತಿಳಿಸಿದ್ದರಿಂದ ನಾನು ಸಮ್ಮನಾಗಿ ಮನೆಗೆ ಹೋದೆ. ಇವತ್ತು ಸದರಿಯವರುಏಕಾಏಕಿಯಾಗಿಯಾದಗಿರಿಯಲ್ಲಿ ಸಿಕ್ಕಿರುತ್ತಾರೆ. ಸಿಕ್ಕಾಗ ಸದರಿಘಟನೆ ನಡೆದಿರುತ್ತದೆ. ಈತನು ಶಹಾಪೂರಕೆಇಬಿಯಲ್ಲಿಜುನಿಯರ್ ಲೈನ್ಮ್ಯಾನ್ಎಂದುಕರ್ತವ್ಯ ನಿರ್ವಹಿಸುತ್ತಿದ್ದಾನೆ.ಆದ್ದರಿಂದ ದಯಾಳುಗಳಾದ ತಾವುಗಳು ಸದರಿಯವರ ಮೇಲೆ ಕಾನೂನು ಕ್ರಮತಗೆದುಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 476/2018.ಕಲಂ 78(3).ಕೆ.ಪಿ.ಯಾಕ್ಟ:- ದಿನಾಂಕ 07/12/2018 ರಂದು ಸಾಯಂಕಾಲ 5.30 ಪಿ.ಎಂ ಕ್ಕೆ ಶ್ರೀ ನಾಗರಾಜ.ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ನಂದೆಳ್ಳಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನಿಗೆ ವಿಚಾರಿಸಲಾಗಿ ಅವನ ಹೆಸರು ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಬಾವರ ವ|| 35 ವರ್ಷ ಜಾ|| ಕಬ್ಬಲಿಗ ಉ|| ಚಾಲಕ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ನಂದೆಳ್ಳಿ ತಾ|| ಶಹಾಪೂರ ಈತನ ಹತ್ತಿರ ನಗದು ಹಣ 550/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಇನ್ನೊಬ್ಬ ನಂಬರ ಬರೆದುಕೊಳ್ಳುವ ವ್ಯಕ್ತಿ ಓಡಿ ಹೋಗಿದ್ದು ಓಡಿ ಹೋದ ವ್ಯಕ್ತಿಯ ಬಗ್ಗೆ ಸಿಕ್ಕ ವ್ಯಕ್ತಿಗೆ ವಿಚಾರಿಸಲಾಗಿ ಅವನ ಹೆಸರು ರಾಜಶೇಖರ ತಂದೆ ಲಿಂಗನಗೌಡ ಮಾಲಿ ಪಾಟೀಲ ವ|| 45ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ನಂದೆಳ್ಳಿ ತಾ|| ಶಹಾಪೂರ ಅಂತಾ ತಿಳಿಸಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸಿಕ್ಕ ವ್ಯಕ್ತಿ ಮತ್ತು ಓಡಿ ಹೋದ ವ್ಯಕ್ತಿಯ ಮೇಲೆ ಮುಂದಿನ ಕ್ರಮಕ್ಕಾಗಿ ದಿನಾಂಕ 07/12/2018 ರಂದು 7.30 ಪಿಎಂ ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 35/2018 ನೇದ್ದರಂತೆ ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ 9.00 ಪಿ.ಎಂಕ್ಕೆ ಠಾಣೆಗೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 476/2018 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.                                                                                    

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:-98/2018 ಕಲಂ 279, 336  ಐಪಿಸಿ :-ದಿನಾಂಕ 07/12/2018 ರಂದು 9-45 ಎ.ಎಂ.ಕ್ಕೆ ಶ್ರೀಮತಿ ಭೀಮರತ್ನ ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಬಂದು ಒಂದು ವರದಿ, ಆಟೋ ನಂ.ಕೆಎ-33, ಎ-5559  ಆಟೋ ಹಾಗೂ ಅದರ ಚಾಲಕನನ್ನು ಹಾಜರುಪಡಿಸಿದ್ದು ವರದಿಯ ಸಾರಾಂಶವೇನೆಂದರೆ   ನಾನು ಭೀಮರತ್ನ ಸಜ್ಜನ್ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮಗೆ ಸೂಚಿಸುವದೆನೆಂದರೆ ಇಂದು ದಿನಾಂಕ: 07/12/2018 ರಂದು 9 ಎ.ಎಂ.ಸುಮಾರಿಗೆ ಯಾದಗಿರಿ ನಗರದ ಆರ್.ಟಿ.ಓ - ಕನಕವೃತ್ತದ ಮುಖ್ಯ ರಸ್ತೆಯ ಕಾಡ್ಲೂರ ಪೆಟ್ರೋಲ್ ಬಂಕ್ ಹತ್ತಿರ ನಾನು ಮತ್ತು ಸಿಬ್ಬಂದಿಯವರು ಕರ್ತವ್ಯದಲ್ಲಿರುವಾಗ  ಯಾದಗಿರಿ ವಾಲ್ಮೀಕಿ ವೃತ್ತದ ಕಡೆಯಿಂದ ಲಕ್ಷ್ಮೀನಗರ ಕಡೆಗೆ ಹೊರಟಿದ್ದ  ಒಂದು ಆಟೋ ವಾಹನ  ನಂಬರ ಕೆಎ-33, ಎ-5559 ನೇದ್ದರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯ ಮಕ್ಕಳನ್ನು ತನ್ನ ಆಟೋದಲ್ಲಿ ತುಂಬಿಕೊಂಡು ಬರುವುದನ್ನು ಕಂಡು ನಿಲ್ಲಿಸಿ ನೋಡಲು ಆಟೋದ  ಒಳಗಡೆ  ಮತ್ತು ಆಟೋದ ಚಾಲಕನ ಪಕ್ಕದ ಮುಂಭಾಗದಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 11 ಜನ ಶಾಲೆಯ ಮಕ್ಕಳನ್ನು ಆಟೋದಲ್ಲಿ ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿದ್ದು  ವಾಹನದ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಮಲ್ಲಪ್ಪ ತಂದೆ ಶರಣಪ್ಪ ಪ್ಯಾಟಿ ವಯ;21 ವರ್ಷ, ಜಾ; ಪ.ಜಾತಿ, ಉ;ಆಟೊ ನಂ.ಕೆಎ-33, ಎ-5559 ನೇದ್ದರ ಚಾಲಕ,   ಸಾ;ಬನ್ನೆಟ್ಟಿ,  ತಾ;ಚಿತ್ತಾಪುರ ಅಂತಾ ತಿಳಿಸಿದ್ದು ಸದರಿ ಆಟೋ ಚಾಲಕನು ತನ್ನ ವಾಹನದಲ್ಲಿ ಪರಮಿಟ ಉಲ್ಲಂಘನೆ ಮಾಡಿ ಶಾಲಾ ಮಕ್ಕಳನ್ನು ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ. ಸದರಿ ವಾಹನವನ್ನು  ಚಾಲಕನ ಸಮೇತ ಠಾಣೆಗೆ ತಂದು  ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ   ಅಂತಾ ಕೊಟ್ಟ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 98/2018 ಕಲಂ 279, 336 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!