ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-12-2018

By blogger on ಶುಕ್ರವಾರ, ಡಿಸೆಂಬರ್ 7, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-12-2018 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 172/2018 ಕಲಂ.317 ಐಪಿಸಿ :- ದಿನಾಂಕ.06/12/2018 ರಂದು 6-15 ಪಿಎಂಕ್ಕೆ ಶ್ರೀ ಶರಬಯ್ಯ ತಂದೆ ಸಾಬಯ್ಯ ಕಲಾಲ ವ;29  ಜಾ; ಕಲಾಲ ಉ; ಸಂಯೋಜಕರು ಮಕ್ಕಳ ಸಹಾಯವಾಣಿ ಕೇಂದ್ರ 1098 ಡಾನಬಾಸ್ಕೋ ಯಾದಗಿರಿ ರವರು ಠಾಣೆಗೆ ಬಂದು ಒಂದು ಅಜರ್ಿಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು ಮಕ್ಕಳ ಸಹಾಯವಾಣಿ ತಂಡದ ಸದಸ್ಯರಾದ ಮಲ್ಲಪ್ಪ ಮಾನೇಗಾರ ಇದ್ದು, ದಿನಾಂಕ; 05/12/2018 ರಂದು ಯಾದಗಿರಿ ನಗರದ ಗಾಂಧಿವೃತ್ತದಲ್ಲಿ ಒಂದು ಅನಾಥ ಮೂಕ ಗಂಡು ಮಗು (ಅಂ.ವಯಸ್ಸು.10-11 ವರ್ಷ) ಇರುತ್ತಾನೆಂದು ಸಾರ್ವಜನಿಕರಾದ ಶ್ರೀಮತಿ ಮಾಣಿಕಮ್ಮ ಗಂಡ ಹುಸೇನಪ್ಪ ಮೈಲಾಪೂರ ಅಗಸಿ ಯಾದಗಿರಿ, ಲಕ್ಷ್ಮಣ ತಂದೆ ಹುಸೇನಪ್ಪ ಕಂಚಗಾರಹಳ್ಳಿ, ವೆಂಕಟೇಶ ತಂದೆ ಹಣಮಂತ ಕಂಚಗಾರಹಳ್ಳಿ ಎಂಬುವವರು ಈ ಮೇಲಿನ ಸದರಿ ಮಗುವನ್ನು ನಗರದ ಪೊಲೀಸ ಠಾಣೆ ಯಾದಗಿರಿಗೆ ಕರೆದುಕೊಂಡು ಬಂದು ಒಪ್ಪಿಸಿರುತ್ತಾರೆ. ಠಾಣೆಗೆ ಒಪ್ಪಿಸಿರುವ ಸಮಯ 2-45 ಪಿಎಮ್ ಇರುತ್ತದೆ. ನಂತರ ಠಾಣೆಯ ಸಿಬ್ಬಂದಿಯವಾದ ಶ್ರೀ ಸಂಜುಕುಮಾರ ಜಮಾದಾರ ರವರು ನೀಡಿದ ಮಾಹಿತಿಯ ಮೇರೆಗೆ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರು ಪೊಲೀಸ ಠಾಣೆಗೆ ಭೇಟಿ ನೀಡಿ ಆ ಮಗುವನ್ನು ವಶಕ್ಕೆ ಪಡೆದುಕೊಂಡ ಸಮಯ 4-15 ಪಿಎಮ್ ಸರಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಸೂಕ್ತ ವ್ಯವಸ್ಥೆಗಾಗಿ ಒಪ್ಪಿಸಲಾಗಿದೆ. ಆದ ಕಾರಣ ಈ ಮೇಲಿನ ಅನಾಥ ಗಂಡು ಮಗುವಿನ ಪಾಲಕರ-ಪೋಷಕರ ಪತ್ತೆಗಾಗಿ ಹಾಗೂ ಮುಂದಿನ ವ್ಯವಸ್ಥೆಗಾಗಿ ಸೂಕ್ತವಾದ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.172/2018 ಕಲಂ.317 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 197/2018 ಕಲಂ 323,324,341,504 506 ಸಂಗಡ 149 ಐಪಿಸಿ:-ನಾನು ಈ ಮೇಲಿನ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವನ ಮಾಡಿಕೊಂಡು ಇರುತ್ತೇನೆ ನಮ್ಮ ಎಲ್ಲ ಅಣ್ಣತಮ್ಮಂದಿರ ಮನೆಗಳು ಆಜು ಬಾಜು ಇರುತ್ತವೆ ನಮ್ಮ ಚಿಕ್ಕಪ್ಪನ ಮಗಳಾದ ಸಿದ್ದಮ್ಮ ಈಕೆಗೆ ತೊರಣತಿಪ್ಪ ಗ್ರಾಮಕ್ಕೆ ಕೊಟ್ಟಿದ್ದು ಆಕೆಗೆ ನಿರ್ಮಲಾ ಅಂತಾ 16 ವರ್ಷದ ಮಗಳು ಇರುತ್ತಾಳೆ ಅವರು ಬಾಂಬೆಯಲ್ಲಿ ಇದ್ದು ಈಗ 15 ದಿಗಳಿಂದೆ ನಮ್ಮ ಅಕ್ಕನ ಮಗಳು ನಿರ್ಮಲಾ ಈಕೆಯು ನಮ್ಮೂರಿಗೆ ಬಂದಿರುತ್ತಾಳೆ, ನಮ್ಮ ಅಣ್ಣತಮ್ಮಂದಿರ ಮನೆಗಳು ಶಾಲೆಯ ಪಕ್ಕದಲ್ಲಿ ಇರುತ್ತವೆ. ನಮ್ಮೂರಿನ ಅಂಜಪ್ಪ ತಂದೆ ಬಸವರಾಜ ಇತನು ಮಕ್ಕಳಿಗೆ ಪಾಠ ಹೇಳಲು ದಿನಾಲು ಶಾಲೆಗೆ ಬರುತಿದ್ದನು ಆಗ ಆತನು ನಮ್ಮ ಹುಡಗಿಯನ್ನು ನೋಡಿ ಹೇಗೋ ಆಕೆಯ ಪೊನ್ ನಂಬರ ತೆಗೆದುಕೊಂಡು ನಮ್ಮ ಹುಡಗಿಗೆ ಪೊನ್ ಮಾಡುವ, ಮೇಸೆಜ್ ಮಾಡುವ ವಿಷಯ ನಮಗೆ ಗೊತ್ತಾಗಿ ಆತನಿಗೆ ನಾವು  8 ದಿನಗಳಿಂದೆ ಆತನಿಗೆ ಒಂದು ದಿನ ಕರೆದು ನಮ್ಮ ಹುಡಗಿಗೆ ಪೊನ್ ಮಾಡಬೇಡ ಮೇಸೇಜ್ ಮಾಡಬೇಡ ನಾವು ಬೇರೆ ನಿವು ಬೇರೆ ಅಂತಾ ತಿಳಿಸಿ ಹೇಳಿರುತ್ತೇವೆ ಆಗ ಆತನು ಆಯಿತು ಇನ್ನು ಮುಂದೆ ಮಾಡುವದಿಲ್ಲ ಅಂತಾ ಹೇಳಿದನು. ದಿನಾಂಕ: 06-12-2018 ರಂದು ರಾತ್ರಿ 07-30 ಗಂಟೆಗೆ ನಮ್ಮ ಮನೆಯ ಮುಂದೆ ನಾವೆಲ್ಲರು ಕುಳಿತುಕೊಂಡಾಗ ನಮ್ಮೂರಿನ 1) ಅಂಜಪ್ಪ ತಂದೆ ಬಸವರಾಜ 2) ರಮೇಶ ತಂದೆ ಯಂಕಪ್ಪ 3) ತಾಯಪ್ಪ ತಂದೆ ತಿಪ್ಪರೆಡ್ಡಿ 4) ನಾಗಪ್ಪ ತಂದೆ ಪೊಲಪ್ಪ 5) ನರಸಪ್ಪ ತಂದೆ ಪೋಲಪ್ಪ ಇವರೆಲ್ಲರು ಬಂದು ಅವರಲ್ಲಿ ಅಂಜಪ್ಪ ಇತನು ನಮ್ಮನ್ನು ಉದ್ದೇಶಿಸಿ ಲೇ ಸೂಳೆ ಮಕ್ಕಳೆ ನಿಮ್ಮ ಹುಡಗಿಗೆ ಏನ  ಮೇಸೆಜ್ ಮಾಡಿನಲೆ ಯಾವಾಗ ಪೊನ್ ಮಾಡಿನಲೆ ಆವತ್ತು ನನಗೆ ಏನ ಹೇಳಿದರಲ್ಲಾ ಈಗ ಬರ್ರಿಲೆ ಸೂಳೆ ಮಕ್ಕಳೆ ಅಂತಾ ಬೈಯುತ್ತ  ಬಂದನು ಆಗ ನಾನು ಏನಾಗಿದೆ ಯಾಕೆ ಹೊದರಾಡುತಿ ಅಂತಾ ಅಂದಿದಕ್ಕೆ ನನಗೆ ಹೊದರಾಡುತಿ ಅಂತೆನಲೆ ಸೂಳೆ ಮಗನೆ ಅಂದವನೆ ಅಲ್ಲೆ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎಡಗಣ್ಣಿನ ಮೇಲೆ ಹೊಡೆದು ರಕ್ತಗಾಯ ಮಾಡಿದನು, ನನಗೆ ಹೊಡೆಯುತ್ತಿರುವಾಗ ನನ್ನ ಅಣ್ಣ ಬನ್ನಪ್ಪ ಇತನು ಅಡ್ಡ ಬಂದಾಗ  ಆತನಿಗೆ ರಮೇಶ ಇತನು ಕೈಯಿಂದ ಕಪಾಳಕ್ಕೆ ಹೊಡೆದನು ಆಗ ನಮ್ಮ ಕಾಕ ಅಯ್ಯಪ್ಪ ಇತನು ಅಡ್ಡ ಬಂದಾಗ ಆತನಿಗೆ ತಾಯಪ್ಪ ಇತನು ಕುತ್ತಿಗೆ ಹಿಡಿದು ದಬ್ಬಿ ಕೆಳಗೆ ಬಿಳಿಸಿದನು, ಆಗ ನಮ್ಮ ತಮ್ಮ ನರಸಪ್ಪ ಇತನು ಅಡ್ಡ ಬಂದಾಗ  ನಾಗಪ್ಪ ಇತನು ನಮ್ಮ ತಮ್ಮನಿಗೆ ಕೈಯಿಂದ ಎದೆಗೆ ಹೊಟ್ಟೆಗೆ ಗುದ್ದಿದನು ಆಗ ನನಗೆ ರಕ್ತ ಬರುತಿದ್ದರಿಂದ ನಮ್ಮ ಅಣ್ಣ ನನಗೆ ಮನೆಯ ಒಳಗೆ ಕರೆದುಕೊಂಡು ಹೋಗವಾಗ ನರಸಪ್ಪ ಇತನು ನಮಗೆ ಅಡ್ಡಗಟ್ಟಿ ಲೇ ಸೂಳೆ ಮಕ್ಕಳೆ ನಮ್ಮನ್ನ ಏನ ತಿಳಿದುಕೊಂಡಿರಿಲೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕುತ್ತಿರುವಾಗ  ನಮ್ಮ ಕಾಕನವರಾದ ಸಿದ್ದಲಿಂಗಪ್ಪ ಮತ್ತು ಸಿದ್ರಾಮಪ್ಪ ಇವರು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನಮಗೆ ಇನ್ನೂ ಹೊಡೆ ಬಡೆ ಮಾಡುತಿದ್ದರು ಅಂತಾ ದೂರುನ ಸಾರಂಶ

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 206/2018 ಕಲಂ. 279 337 338 ಐಪಿಸಿ & 187 ಐಎಂವಿ ಕಾಯ್ದೆ :- ದಿನಾಂಕ:06/12/2018 ರಂದು ಪಿಯರ್ಾದಿ ಮತ್ತು ಗಾಯಾಳುದಾರರು ಕೂಡಿ ಅಟೋ ನಂ. ಕೆಎ-33 ಎ-2288 ನೇದ್ದರಲ್ಲಿ ಕುಳಿತಕೊಂಡು ತಮ್ಮ ಖಾಸಗಿ ಕೆಲಸ ಹಾಗೂ ಕನ್ನಳ್ಳಿಯಲ್ಲಿ ಸಂತೆಗೆ ಹೋಗುತ್ತಿದ್ದಾಗ ಹುಣಸಗಿ-ದೇವಾಪುರ ರೋಡಿನ ಮೇಲೆ ಕಲ್ಲದೇನಹಳ್ಳಿ ಸೀಮ ಸರಕಾರಿ ದವಾಖಾನೆಯ ಹತ್ತಿರ ಅಟೋವನ್ನು ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿ ಒಮ್ಮೇಲೆ ರೋಡಿನ ಎಡಭಾಗಕ್ಕೆ ಕಟ್ ಹೊಡೆದಾಗ ಅಟೋ ಪಲ್ಟಿಯಾಗಿ ರೋಡಿನ ಎಡಭಾಗದ ದಂಡೆಗೆ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ ಪಿಯರ್ಾದಿಗೆ ಹಾಗೂ ಗಾಯಾಳುದಾರರಿಗೆ ಭಾರಿ ಗುಪ್ತಗಾಯವಾಗಿದ್ದು, ಅಪಘಾತ ಮಾಡಿದ ಅಟೋ ಚಾಲಕನು ಅಟೋವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಅಂತಾ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.

ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 384/2018 ಕಲಂ: 279,337 ಐಪಿಸಿ :- ದಿನಾಂಕಃ 06/12/2018 ರಂದು 12-15 ಪಿ.ಎಮ್ ಕ್ಕೆ ಶ್ರೀ ಭೀಮಣ್ಣ ತದೆ ಬಸಪ್ಪ ದೊರಿ ಸಾ: ಮುಷ್ಟಳ್ಳಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 05-12-2018 ರಂದು ಸಾಯಂಕಾಲ ನಮ್ಮೂರಿನ ಮೌನೇಶ ತಂದೆ ದೇವಿಂದ್ರಪ್ಪ ಅಂಬಿಗೇರ ಇತನು ತಾನು ನಡೆಸುವ ಕಾರ ನಂಬರ ಕೆ.ಎ 33 ಎಮ್ 6730 ನೇದ್ದನ್ನು ತಗೆದುಕೊಂಡು ತನ್ನ ಗೆಳೆಯನಾದ ಬಸವರಾಜ ಚಲವಾದಿ ಎಂಬಾತನೊಂದಿಗೆ ಮುಷ್ಟಳ್ಳಿ ಗ್ರಾಮಕ್ಕೆ ಬಂದಿದ್ದನು. ರಾತ್ರಿ ಅವರು ತಮ್ಮ ಮನೆಯಲ್ಲಿ ಊಟ ಮಾಡಿದ ಬಳಿಕ ಮರಳಿ ದೇವಿಕೇರಾ ಗ್ರಾಮಕ್ಕೆ ಕಾರಿನಲ್ಲಿ ಹೊರಟಾಗ ನಾನು ಮೌನೇಶನಿಗೆ ಕೆಲಸದ ನಿಮಿತ್ಯ ನಾನು ನಮ್ಮ ಅತ್ತೆಯವರ ಮನೆಗೆ ಹೋಗಬೇಕಾಗಿದ್ದು ಸುರಪೂರ ವರೆಗೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದರಿಂದ ಮೌನೇಶ ಆಯ್ತು ಬಾ ಅಂತ ಹೇಳಿ ಕಾರಿನಲ್ಲಿ ತನ್ನ ಸೀಟಿನ ಪಕ್ಕದಲ್ಲಿ ಕುಡಿಸಿಕೊಂಡನು. ಬಳಿಕ ಮೌನೇಶನು ಮುಷ್ಟಳ್ಳಿಯಿಂದ ಸುರಪೂರ ಕಡೆಗೆ ಬರುವಾಗ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರಾತ್ರಿ 8-30 ಗಂಟೆ ಸುಮಾರಿಗೆ ಶೆಳ್ಳಗಿ ಸಿಮಾಂತರದ ಮಾಣಿಕರಾವ ಕುಲಕಣರ್ಿ ಇವರ ಹೊಲದ ಹತ್ತಿರ ರಸ್ತೆಗೆ ಒಮ್ಮೆಲೆ ಒಂದು ನಾಯಿ ಅಡ್ಡಬಂದಿದ್ದರಿಂದ ನಾಯಿಗೆ ಡಿಕ್ಕಿಯಾಗುವದನ್ನು ತಪ್ಪಿಸುವ ಸಲುವಾಗಿ ವೇಗದಲ್ಲಿ ಒಮ್ಮೆಲೆ ಬ್ರೇಕ್ ಹಾಕಿ ರಸ್ತೆಯ ಬಲಕ್ಕೆ ತಿರುಗಿಸಿದ್ದರಿಂದ ಕಾರ ಆತನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿ ಪಲ್ಟಿಯಾಗಿ ಬಿದ್ದಿತು. ಇದರಿಂದ ನನಗೆ ಮತ್ತು ನನ್ನ ಜೊತೆಗಿದ್ದ ಇಬ್ಬರಿಗೂ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 384/2018 ಕಲಂ: 279, 337 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 283/2018 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್:- ದಿನಾಂಕ 06/12/2018 ರಂದು 1-30 ಪಿ ಎಮ್ ದವರಗೆ ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಗಾಯಾಳು ಬಲವಂತ್ರಾಯ ತಂದೆ ಲಕ್ಷ್ಮಣ ದೇಸಾಯಿ ವ|| 50 ಜಾ|| ಬೇಡರ ಉ|| ಒಕ್ಕಲುತನ ಸಾ|| ಕೋಳಿಹಾಳ ತಾ|| ಸುರಪೂರ ಇವರ ಹೇಳಿಕೆಯನ್ನು ಪಡೆದುಕೊಮಡು ಮರಳಿ ಠಾಣೆಗೆ 1-45 ಪಿ ಎಮ್ ಕ್ಕೆ ಬಂದಿದ್ದು ಸದರ ಹೇಳಿಕೆ ಸಾರಾಂಶವೇನಂದರೆ ಇಂದು ದಿನಾಂಕ 06/12/2018 ರಂದು 11-30 ಎಎಮ್ ಕ್ಕೆ ನಾವಿಬ್ಬರೂ ಕೆಂಭಾವಿ ದಾಟಿ ಕೆಂಬಾವಿ ಹುಣಸಗಿ ಮುಖ್ಯ ರಸ್ತೆಯ ಅಗ್ನಿ ದಾಬಾದ ಮುಂದುಗಡೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ರೋಡಿನ ಎಡಮಗ್ಗಲಿನಿಂದ ಒಂದು ಟ್ರ್ಯಾಕ್ಟರ ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಒಮ್ಮಲೇ ರೋಡಿಗೆ ಅಡ್ಡ ಬಂದಿದ್ದು ಆಗ ನಮ್ಮ ಮೋಟರ ಸೈಕಲ ಅದಕ್ಕೆ ಬಡಿದು ನಾವಿಬ್ಬರೂ ಕೆಳಗೆ ಬಿದ್ದಿದ್ದು ಸದರ ಅಪಘಾತದಲ್ಲಿ ನನಗೆ ಎಡಗಾಲ ಮೊಳಕಾಲಿಗೆ ಭಾರೀ ರಕ್ತಗಾಯವಾಗಿ ಕಾಲು ಮುರಿದು ಕತ್ತರಿಸಿದಂತಾಗಿದ್ದು ಅಲ್ಲದೇ ನಮ್ಮ ಮೋಟರ ಸೈಕಲ ಸವಾರ ಪರಮಣ್ಣ ಪೂಜಾರಿ ಈತನಿಗೂ ಸಹ ಎಡಗಾಲ ಮೊಳಕಾಲಿಗೆ ಹಾಗು ಮುಖಕ್ಕೆ ತರಚಿದ ರಕ್ತಗಾಯಗಳಾಗಿ ಎಡಗಾಲ ತೊಡೆಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತಾಗಿದ್ದು ಅಲ್ಲದೇ ಬಲಭಾಗದ ಎದೆಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಟ್ರ್ಯಾಕ್ಟರ ನಂಬರ ನೋಡಲು ಕೆಎ-33 ಟಿಎ-8521 ಅಂತ ಇದ್ದು ಅದರ ಚಾಲಕನ ಬಗ್ಗೆ ವಿಚಾರಿಸಲಾಗಿ ಶ್ರೀನಿವಾಸರಾವ ಸಾ|| ಲಕ್ಷ್ಮೀನಗರ ಕ್ಯಾಂಪ ಕೆಂಭಾವಿ ಅಂತ ತಿಳಿದು ಬಂದಿದ್ದು ಇರುತ್ತದೆ. ನಂತರ ನಮ್ಮಿಬ್ಬರಿಗೂ ಯಾರೋ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಟ್ರ್ಯಾಕ್ಟರ ನಂಬರ ಕೆಎ- 33 ಟಿಎ-8521 ನೇದ್ದರ ಚಾಲಕ ಶ್ರೀನಿವಾಸರಾವ ಸಾ|| ಲಕ್ಷ್ಮೀನಗರ ಕ್ಯಾಂಪ ಕೆಂಭಾವಿ  ಈತನ ಅತೀ ವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 283/2018 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 385/2018 ಕಲಂ: 323,324,504 ಸಂ 34 ಐಪಿಸಿ :- ದಿನಾಂಕಃ 06/12/2018 ರಂದು 4-30 ಪಿ.ಎಮ್ ಕ್ಕೆ ಶ್ರೀ ನಿಂಗಣ್ಣ ತಂದೆ ದ್ಯಾವಪ್ಪ ಮಾಲಗತ್ತಿ  ಸಾ: ಬೋನಾಳ ಇವರು ಠಾಣೆಗೆ ಬಂದು ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ಆತನ ತಂದೆಯಾದ ಶ್ರೀ ದ್ಯಾವಪ್ಪ ತಂದೆ ಮಲ್ಲಯ್ಯ ಮಾಲಗತ್ತಿ ಇವರು ಕಳುಹಿಸಿರುವ ಫಿಯರ್ಾದಿ ಅಜರ್ಿಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶವೆಂದರೆ, ದಿನಾಂಕಃ 04-12-2018 ರಂದು ಬೋನಾಳ ಗ್ರಾಮದಲ್ಲಿ ದೇವಿ ಜಾತ್ರೆ ಇದ್ದ ಕಾರಣ ರಾತ್ರಿ 8-30 ಗಂಟೆಯ ಸುಮಾರಿಗೆ ದೇವಿ ದರ್ಶನಕ್ಕೆಂದು ಹೋಗಿದ್ದೇನು. ಆಗ ನಮ್ಮೂರಿನ ಕೂಡ್ಲಿಗೆಪ್ಪ ತಂದೆ ಮಲ್ಲಪ್ಪ ಮಾಳಳ್ಳಿ ಇತನು ಬಂದು ಎಲೆ ಬೋಸಡಿ ಸೂಳೆ ಮಗನೇ, ನೀನ್ಯಾಕೆ ಬಂದಿಲೇ ಈ ಕಡೆ ಎಂದು ಮನಬಂದಂತೆ ಬೈದು ಹೊಡೆಬಡೆ ಮಾಡಿರುತ್ತಾನೆ. ಕೂಡ್ಲಿಗೆಪ್ಪ ತಂದೆ ತಂದೆ ಅಮ್ಮಣ್ಣ ಮಾಳಳ್ಳಿ ಇವನು ಈ ಸೂಳೆ ಮಗನದು ಬಾಳ ಆಗ್ಯಾದ, ಇವತ್ತು ಇವನಿಗೆ ಖಲಾಸ ಮಾಡಿಬಿಡಮ ಎಂದು ಅಲ್ಲೆ ಇದ್ದ ಬಡಿಗೆಯನ್ನು ತಗೆದುಕೊಂಡು ತಲೆಗೆ ಹೊಡೆದನು. ಕೂಡ್ಲಿಗೆಪ್ಪ ತಂದೆ ಮಲ್ಲಯ್ಯ ಇತನು ರಾಡಿನಿಂದ ಹೊಡೆದಿರುತ್ತಾನೆ. ಅವರ ಸಂಬಂಧಿಕರಾದ ಸಿದ್ದಪ್ಪ ತಂದೆ ಮಲ್ಲಪ್ಪ ಮಾಳಳ್ಳಿ ಹಾಗು ಜೆಟ್ಟೆಪ್ಪ ತಂದೆ ಮಾಳಪ್ಪ ಮಾಳಳ್ಳಿ ಇಬ್ಬರೂ ಬಂದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದಿರುತ್ತಾರೆ. ಆಗ ಜಗಳದ ಸುದ್ದಿ ಕೇಳಿ ನನ್ನ ಮಗನು ಓಡಿ ಬಂದು ನನ್ನನ್ನು ಸುರಪೂರ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 385/2018 ಕಲಂ: 323, 324, 504 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 174/2018 ಕಲಂ, 78(3) ಕೆ.ಪಿ.ಆ್ಯಕ್ಟ್ :- ದಿನಾಂಕ: 06/12/2018ರಂದು4.15 ಪಿಎಮ್ ಕ್ಕೆ ಠಾಣೆಯಎಸ್.ಹೆಚ್.ಡಿಕರ್ತವ್ಯದಲ್ಲಿದ್ದಾಗ ಶ್ರೀ ಸುರೇಶ ಬಾಬು ಪಿ.ಎಸ್.ಐ ಸಾಹೇಬರುಒಬ್ಬಆರೋಪಿ ಮತ್ತುಜಪ್ತಿಪಂಚನಾಮೆ ಮುದ್ದೇಮಾಲುದೊಂದಿಗೆಠಾಣೆಗೆ ಬಂದುಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: ದಿನಾಂಕ: 06/12/2018 ರಂದು13.05 ಪಿಎಮ್ ಕ್ಕೆ ಹೋಸ್ಕೆರಾಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಸ್ತೆಯ ಮೇಲೆ ಆರೋಪಿತನಾಧವೆಂಕಟೇಶತಂದೆ ಭೀಮಯ್ಯ ಇಳಿಗೇರ ವಯಾ: 41 ಜಾ:ಇಳಿಗೇರ ಉ: ವ್ಯಾಪಾರ ಸಾ: ಹೋಸ್ಕೇರಾತಾ: ಶಹಾಪೂರ ಜಿ:ಯಾದಗಿರಿಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ1780/- ರೂ. ಹಾಗೂ ಒಂದು ಮಟಕಾಚೀಟಿ ಮತ್ತುಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣದಾಖಲಿಸಲು ಸೂಚಿಸಿದ ವರದಿಯಸಾರಂಶದಮೇಲಿಂದ ಮಾನ್ಯ ನ್ಯಾಯಾಲಯದಅನುಮತಿ ಪಡೆದುಕೊಂಡು04.15 ಪಿಎಮ್ ಕ್ಕೆ ಠಾಣೆಗುನ್ನೆ ನಂ: 174/2018 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 175/2018 ಕಲಂ, 87 ಕೆ.ಪಿ.ಆ್ಯಕ್ಟ್ :- ದಿನಾಂಕ: 06/12/2018 ರಂದು 3.20 ಪಿಎಮ್ ಕ್ಕೆ ಮಾನ್ಯ ಶ್ರೀ. ಸುರೇಶಬಾಬು ಪಿಎಸ್ಐ ಗೋಗಿ ಪೊಲೀಸ್ಠಾಣೆರವರುಜನರು 05 ಜನಆರೋಪಿತರನ್ನು ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದುಒಂದುಜಪ್ತಿ ಪಂಚನಾಮೆ, ಒಂದು ವರದಿ ನೀಡಿ ಮುಂದಿನ ಕ್ರಮಕುರಿತು ಸೂಚಿಸಿದ್ದು ಸದರಿ ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 06/12/2018 ರಂದು ಗೋಗಿ ಪೊಲೀಸ್ಠಾಣೆಯಲ್ಲಿಇದ್ದಾಗ 3.20 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಾಗನಟಗಿಗ್ರಾಮದ ಹನಮನ ದೇವರಗುಡಿಯಹತ್ತಿರಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಹಾರ್ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 04.15 ಪಿಎಮ್ ಕ್ಕೆ  ದಾಳಿ ಮಾಡಿದ್ದು, ದಾಳಿಯಲ್ಲಿ 05 ಜನಆರೋಪಿತರು ಮತ್ತುಒಟ್ಟು 1230=00 ರುಪಾಯಿ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 4-15 ಪಿಎಮ್ ದಿಂದ 05.15 ಪಿಎಮ್ದವರೆಗೆಜಪ್ತಿಕೈಕೊಂಡಿದ್ದು ಮುಂದಿನ ಕ್ರಮಕುರಿತು 06.10 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟುಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿಜೆಎಮ್ಎಪ್ ಸಿ ನ್ಯಾಯಾಲಯ ಶಹಾಪೂರರವರಅನುಮತಿ ಪಡೆದುಕೊಂಡು 07.10 ಪಿಎಮ್ ಕ್ಕೆ ಠಾಣೆಗುನ್ನೆ ನಂ: 175/2018 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.
   
ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:- 284/2018 ಕಲಂ: 87 ಕೆಪಿ ಆಕ್ಟ :- ದಿನಾಂಕ: 06.12.2018 ರಂದು 03.45 ಪಿ.ಎಮ್.ಕ್ಕೆ ಪಿರ್ಯಾದಿದಾರರು ಸಲ್ಲಿಸಿದ ವರದಿ ಸಾರಾಂಶವೆನೆಂದರೆ ಗೊಡ್ರಿಹಾಳ ಸೀಮಾಂತರದಲ್ಲಿ ಕೆಲವು ಜನರು ಕೋಳಿ ಪಂದ್ಯದಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದೆ ಅಂತಾ ತಿಳಿಸಿದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗಿ 03.45 ಪಿ.ಎಮ್.ಕ್ಕೆ ದಾಳಿ ಮಾಡಲಾಗಿ ಒಟ್ಟು 15 ಜನರು ಸಿಕ್ಕಿದ್ದು ಹಾಗೂ 05 ಜನರು ಓಡಿ ಹೋಗಿದ್ದು ಹೆಸರು ಮತ್ತು ವಿಳಾಸ ಗೊತ್ತಾಗಿದ್ದು ಇರುತ್ತದೆ. ಹಾಗೂ ಇನ್ನೂ ಕೆಲವು 40-50 ಜನರು ಓಡಿ ಹೋಗಿದ್ದು ಸದರಿ ಓಡಿ ಹೋದವರ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸ್ಥಳದಲ್ಲಿ ಒಟ್ಟು ನಗದು ಹಣ 3090-00 ಹಾಗೂ ಕಣದಲ್ಲಿ 5 ಹುಂಜಗಳು ಇದ್ದು ಅವುಗಳ ಅ.ಕಿ.1000/-ರೂ ಆಗುತ್ತದೆ. ಸದರಿ ಸ್ಥಳದಲ್ಲಿ ಮೊಟಾರ ಸೈಕಲಗಳು ನಿಂತಿದ್ದು ಒಟ್ಟು 10 ಮೊಟಾರ ಸೈಕಲಗಳು ಅಕಿ 2,10,000/-ರೂ. ಹೀಗೆ ಒಟ್ಟು ಒಟ್ಟು 2,14090=00 ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಜಪ್ತಿಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
 ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ ಆರ್ ನಂ 31/2018 ಕಲಂ 174  ಸಿ ಆರ್ ಪಿ ಸಿ:-ದಿನಾಂಕ: 05/12/2018 ರಂದು 07:30 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀ ಇಕ್ಬಾಲ ತಂ. ಶಮರ್ುದ್ದಿನ ಪಠಾಣ ವ|| 30 ಜಾ|| ಮುಸ್ಲಿಂ ಉ|| ಅಟೋಚಾಲಕ ಸಾ|| ದೇವಿನಗರ ಶಹಾಪೂರ ತಾ|| ಶಹಾಪೂರ  ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ ಸಾರಾಂಶವೆನೆಂದರೆ ದಿನಾಂಕ 05/12/2018 ರಂದು ಸಾಯಂಕಾಲ 05.30 ಗಂಟೆಯ ಸುಮಾರಿಗೆ ಹಳೆ ಬಸ್ ನಿಲ್ದಾಣದ ಕಡೆಗೆ ನನ್ನ ಅಟೋ ಬಾಡಿಗೆ ತೆಗೆದುಕೊಂಡು ಹೋಗುತ್ತಿರುವಾಗ ಶಹಾಪೂರ ನಗರದ ಹಳೆ ಬಸ್ ನಿಲ್ದಾಣದ ಎದುರುಗಡೆ ಒಬ್ಬ ವಯಸ್ಸಾದ ಅಂದಾಜು 60 ವರ್ಷದ ಮನುಷ್ಯ ಬೋರಲಾಗಿ ಬಿದ್ದಿದ್ದನ್ನು ನಾನು ಗಮನಿಸಿ ಅವನ ಹತ್ತಿರ ಹೋಗಿ ನೋಡಲಾಗಿ ಒಂದು ನೀಲಿ ಬಣ್ಣದ ಬಿಳಿಗೆರೆಯ ಅಂಗಿ ಮತ್ತು ಬಿಳಿ ಬಣ್ಣದ ಕಾಪಿ ಬಣ್ಣದ ಚೌಕಡಿಯ ಅಂಗಿ ಹಾಕಿದ್ದು ಕೆಳಗಡೆ ಬೂದು ಬಣ್ಣದ ಕರಿ ಮತ್ತು ನೀಲಿ ಗೆರೆಯ ಲುಂಗಿ ಇದ್ದು ಬೋರಲಾಗಿ ಬಿದ್ದಿದ್ದನ್ನು ನೋಡಿ ನಾನು ಅವನಿಗೆ ಕೂಗಲಾಗಿ ಅವನು ಏಳಲಿಲ್ಲ ಮತ್ತು ಅವನಿಗೆ ಕೈ ಹಿಡಿದು ನೋಡಲಾಗಿ ಅವನು ಏಳದೇ ಇದ್ದಾಗ ಸದರಿ ವ್ಯಕ್ತಿಯ ಬಗ್ಗೆ ನಾನು ಅಲ್ಲೇ ಇದ್ದ ಕಲವು ಜನರಿಗೆ ವಿಚಾರಿಸಲಾಗಿ ಈ ವ್ಯಕ್ತಿ ಯಾರು ಏನು ಅಂತ ವಿಚಾರಿಸಲಾಗಿ ಸದರಿಯವನ ಬಗ್ಗೆ ಯಾರೂ ಏನು ಹೇಳಲಿಲ್ಲ,  ನಂತರ ನಾನು ನಮ್ಮ ಅಟೋ ನಡೆಸುವ ಕೆಲವು ಜನರನ್ನು ಕರೆದು ವಿಚಾರಿಸಲಾಗಿ ಸದರಿ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ ಅವನನ್ನು ನನ್ನ ಅಟೋದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ವೈದ್ಯರ ಹತ್ತಿರ ತಪಾಸಣೆ ಮಾಡಿಸಿದಾಗ ಸದರಿಯವನು  ಮೃತ ಪಟ್ಟಿರುತ್ತಾನೆ ಅಂತ ವೈದ್ಯರು ತಿಳಿಸಿದ ಮೇರೆಗೆ ಸದರಿಯವನು ಮೃತ ಪಟ್ಟಿದ್ದನ್ನು ಖಚಿತ ಪಡಿಸಿಕೊಂಡು ಮೃತನು ಅಂದಾಜು 60 ವರ್ಷ ಆಸು ಪಾಸಿನವನಾಗಿದ್ದು ಅವನನ್ನು ನೋಡಲಾಗಿ ಬಿಕ್ಷೆ ಬೇಡುವ ಹಾಗೆ ಕಾಣುತ್ತಿತ್ತು, ಸದರಿಯವನ ಮೈ ಮೇಲೆ ಒಂದು ನೀಲಿ ಬಣ್ಣದ ಬಿಳಿಗೆರೆಯ ಅಂಗಿ ಮತ್ತು ಬಿಳಿ ಬಣ್ಣದ ಕಾಪಿ ಬಣ್ಣದ ಚೌಕಡಿಯ ಅಂಗಿ ಹಾಕಿದ್ದು ಕೆಳಗಡೆ ಬೂದು ಬಣ್ಣದ ಕರಿ ಮತ್ತು ನೀಲಿ ಗೆರೆಯ ಲುಂಗಿ ಇರುತ್ತದೆ ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗದೇ ಇರುವದರಿಂದ ಸದರಿ ಘಟನೆಯು ಸುಮಾರು 4.30 ಪಿ ಎಮ್ ದಿಂದ  5.30 ಪಿ ಎಮ್ ಅವದಿಯಲ್ಲಿ ನಡೆದಿದ್ದು ಇರುತ್ತದೆ ಕಾರಣ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕೆಂದು ವಿನಂತಿ ಅದೆ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್.ನಂ.31/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 96/2018 ಕಲಂ 279, 336  ಐಪಿಸಿ :- ದಿನಾಂಕ 06/12/2018 ರಂದು 10-30 ಎ.ಎಂ.ಕ್ಕೆ ಶ್ರೀಮತಿ ಭೀಮರತ್ನ ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಬಂದು ಒಂದು ವರದಿ, ಕ್ರೂಜರ್ ನಂ ಕೆಎ33 ಎ3802  ಒಂದು ಕ್ರೂಜರ್  ಹಾಗೂ ಚಾಲಕನನ್ನು ಹಾಜರುಪಡಿಸಿದ್ದು ನೀಡಿದ ವರದಿ ಸಾರಾಂಶವೇನೆಂದರೆ ನಾನು ಭೀಮರತ್ನ ಸಜ್ಜನ್ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮಗೆ ಸೂಚಿಸುವದೆನೆಂದರೆ ಇಂದು ದಿನಾಂಕ: 06/12/2018 ರಂದು 10 ಎ.ಎಂ.ಸುಮಾರಿಗೆ ಯಾದಗಿರಿ ನಗರದ ರೈಲ್ವೆ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಬರುವ ವಿದ್ಯಾ ಕಾಂಪ್ಲೇಕ್ಸ್ ಮುಂದೆ    ನಾನು ಮತ್ತು ಸಿಬ್ಬಂದಿಯವರಾದ ಜಗದೀಶ ಹೆಚಸಿ 144  ರವರು  ಕರ್ತವ್ಯದಲ್ಲಿರುವಾಗ  ಯಾದಗಿರಿ ನಗರದ ಶಾಸ್ತ್ರೀ ವೃತ್ತದ ಕಡೆಯಿಂದ  ರೈಲ್ವೆ ನಿಲ್ದಾಣದ ಕಡೆಗೆ  ಹೊರಟಿದ್ದ  ಒಂದು ಕ್ರೂಜರ್ ನಂ ಕೆಎ33 ಎ3802 ನೇದ್ದರ ವಾಹನ   ಒಳಗಡೆ ಮತ್ತು ವಾಹನದ ಮೇಲೆ ಕೂಡಿಸಿಕೊಂಡು  ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 20 ಜನ ಪ್ರಯಾಣೀಕರನ್ನು ಕೂಡಿಸಿಕೊಂಡು  ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಶ್ರೀಕಾಂತ ತಂದೆ ಚಂದ್ರು ಪವಾರ ವಯ:19 ವರ್ಷ ಜಾತಿ: ಲಮಾಣಿ ಉ:ಕೂಲಿ ಕೆಲಸ ಸಾ:ಅಶೋಕನಗರ (ಮುಂಡರಗಿ) ತಾಂಡಾ    ತಾ:ಜಿ:ಯಾದಗಿರಿ ಅಂತಾ ತಿಳಿಸಿದ್ದು ಸದರಿ ಚಾಲಕನು ತನ್ನ ವಾಹನದ ಪರಮಿಟ ಉಲ್ಲಂಘನೆ ಮಾಡಿದ್ದು ಅಲ್ಲದೆ ಪ್ರಯಾಣಿಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ. ಸದರಿ ವಾಹನವನ್ನು  ಚಾಲಕನ ಸಮೇತ ಠಾಣೆಗೆ ತಂದು  ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ಪಿ.ಎಸ್.ಐ ಸಾಹೇಬರು ನೀಡಿದ    ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2018 ಕಲಂ 279, 336 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 364/2018 ಕಲಂ: 279, 304(ಎ) ಐಪಿಸಿ :-ದಿನಾಂಕಃ 15/11/2018 ರಂದು 7-00 ಪಿ.ಎಮ್ ಕ್ಕೆ ಶ್ರೀಮತಿ ಶಶಿಕಲಾ ಗಂಡ ನಾಗರಾಜ ಗುಳಬಾಳ ಸಾಃ ಸಿದ್ದಾಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ದಾಪೂರ ಗ್ರಾಮದಿಂದ ತವರೂರು ಆದ ದೇವತಕಲ್ ಗ್ರಾಮಕ್ಕೆ ಬಂದಿದ್ದು, ದಿನಾಂಕಃ 13-11-2018 ರಂದು ಮದ್ಯಾಹ್ನ ನನ್ನ ಗಂಡನಾದ ನಾಗರಾಜ ತಂದೆ ತಿಮ್ಮಯ್ಯ ಗುಳಬಾಳ ಇವರು ಸಹ ದೇವತಕಲ್ ಗ್ರಾಮಕ್ಕೆ ಬಂದಿದ್ದರು. ನಂತರ ಸಾಯಂಕಾಲ 4-30 ಗಂಟೆಯ ಸುಮಾರಿಗೆ ನನ್ನ ಗಂಡನಾದ ನಾಗರಾಜ ಹಾಗು ಆತನ ಸ್ನೇಹಿತನಾದ ನಮ್ಮೂರಿನ ಲಕ್ಷ್ಮಣ ತಂದೆ ಹಣಮಂತರಾಯ ಡೊಣ್ಣಗೇರಿ ಇಬ್ಬರೂ ಭತ್ತದ ಬೆಳೆಗೆ ಸಿಂಪರಣೆ ಮಾಡಲು ಕ್ರಿಮಿನಾಶಕ ಔಷಧ ತಗೆದುಕೊಂಡು ಬರುವದಕ್ಕಾಗಿ ಸುರಪೂರಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಲಕ್ಷ್ಮಣ ಈತನ ಮೋಟರ ಸೈಕಲ್ ನಂಬರ ಕೆ.ಎ 33 ಘ  1475 ನೇದ್ದರ ಮೇಲೆ ಹೋದರು. ನಂತರ ನಾವು ಮನೆಯಲ್ಲಿದ್ದಾಗ ನಮ್ಮೂರಿನ ಪ್ರಭು ತಂದೆ ರಂಗಣ್ಣ ಮಾಲಿಪಾಟೀಲ್ ಎಂಬುವವರು ನನ್ನ ಅಣ್ಣನಾದ ಸಾಹೇಬಗೌಡ ಇವರ ಮೊಬೈಲಿಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಮ್ಮೂರಿನ ಲಕ್ಷ್ಮಣ ಡೊಣ್ಣಗೇರಿ ಇತನು ತನ್ನ ಮೋ.ಸೈಕಲ್ ಮೇಲೆ ಹಿಂದುಗಡೆ ನಿಮ್ಮ ತಂಗಿಯ ಗಂಡನಾದ ನಾಗರಾಜನಿಗೆ ಕೂಡಿಸಿಕೊಂಡು ದೇವಾಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿಕೊಂಡು ಬರುವಾಗ ಈಗ್ಗೆ 7-45 ಪಿ.ಎಮ್ ಸುಮಾರಿಗೆ ನಮ್ಮೂರಿನ ಸಮೀಪದಲ್ಲಿರುವ ಚನ್ನಪಟ್ಟಣ ದವರ ದಾಬಾ ಹತ್ತಿರ ವೇಗದಲ್ಲಿ ಮೋ.ಸೈಕಲ್ ನಿಯಂತ್ರಣ ತಪ್ಪಿ ಸ್ಕ್ರೀಡ್ ಆಗಿ ಡಾಂಬರ ರಸ್ತೆಯ ಮೇಲೆ ಬಿದ್ದಿದ್ದರಿಂದ ಅಪಘಾತದಲ್ಲಿ ನಿಮ್ಮ ತಂಗಿಯ ಗಂಡ ನಾಗರಾಜನ ತಲೆಗೆ ಭಾರಿ ರಕ್ತಗಾಯಗಳಾಗಿರುವದಲ್ಲದೇ, ಎಡಗಣ್ಣಿನ ಮೇಲೆ ಹುಬ್ಬಿಗೆ, ಗದ್ದಕ್ಕೆ, ಭುಜದ ಮೇಲೆ ಅಲ್ಲಲ್ಲಿ ಗಾಯಗಳಾಗಿ ಪ್ರಜ್ಞೆ ತಪ್ಪಿರುತ್ತಾನೆ ಅಂತ ತಿಳಿಸಿದನು. ಆಗ ಗಾಬರಿಯಾಗಿ ನಾನು ಮತ್ತು ನನ್ನ ಅಣ್ಣ ಇಬ್ಬರೂ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ನನ್ನ ಗಂಡನಿಗೆ ಭಾರಿ ರಕ್ತಗಾಯಗಳಾಗಿ ರಕ್ತಸ್ರಾವ ಆಗುತ್ತಿದ್ದು, ಅಪಘಾತ ಪಡಿಸಿದ ಲಕ್ಷ್ಮಣ ಇತನಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಂತರ ನಾವು ನನ್ನ ಗಂಡನಿಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೇವೆ ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿ ನನ್ನ ಗಂಡನಿಗೆ ಅಪಘಾತ ಪಡಿಸಿ ಭಾರಿ ರಕ್ತಗಾಯ ಪಡಿಸಿರುವವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿರ್ಯದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 364/2018 ಕಲಂಃ 279, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 ಸದರಿ ಪ್ರಕರಣದಲ್ಲಿ ಗಾಯಹೊಂದಿ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದ ಗಾಯಾಳು ನಾಗರಾಜ ತಂದೆ ತಿಮ್ಮಯ್ಯ ಗುಳಬಾಳ ಸಾ|| ಸಿದ್ದಾಪೂರ ಇತನು  ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಲ್ಲಿ ಆಗಿರುವ ಗಾಯಗಳಿಂದಾಗಿ ಇಂದು ದಿನಾಂಕಃ 07/12/2017 ರಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಈ ಮೇಲ್ 10-00 ಎ.ಎಮ್ ಕ್ಕೆ ಠಾಣೆಗೆ ಡೆತ್ ಎಮ್.ಎಲ್.ಸಿ ವಸೂಲಾಗಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ. 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ಮಾನ್ಯರವರಲ್ಲಿ ವಿನಂತಿ 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!