ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-12-2018

By blogger on ಗುರುವಾರ, ಡಿಸೆಂಬರ್ 6, 2018



ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-12-2018 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 475/2018 ಲಂ 380 ಐ.ಪಿ.ಸಿ :- ದಿನಾಂಕ 05/12/2018 ರಂದು ಮದ್ಯಾಹ್ನ 13-00 ಗಂಟೆಗೆ ಪಿಯರ್ಾದಿ ಶ್ರೀ ರಮೇಶ ತಂದೆ ಸಿದ್ದಪ್ಪ ಮೇಲಿನಮನಿ ವ|| 30 ಜಾ|| ಪ.ಜಾತಿ ಉ|| ಅಗ್ನಿಶಾಮಕ ಸಾ|| ಸುಂಗಠಾಣ ತಾ|| ಸಿಂದಗಿ ಹಾ|| ವ|| ಅಗ್ನಿಶಾಮಕ ಠಾಣೆ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಲು ನಾನು ಬೆಳಿಗ್ಗೆ ಕರ್ತವ್ಯಕ್ಕೆ ಹೊಗಿ ಊಟಕ್ಕೆ ಮದ್ಯಾಹ್ನ ಬರುತ್ತಿದ್ದೆನು. ಕರ್ತವ್ಯಕ್ಕೆ ಹೋಗುವಾಗ ನಮ್ಮ ಮನೆಯ ಬಾಗಿಲು ಕಿಲಿ ಹಾಕುತ್ತಿರಲಿಲ್ಲಾ. ಹೀಗಿದ್ದು ನಮ್ಮ ಮನೆಗೆ ಜಾಸ್ತಿ ಬರುವದು ಹೋಗುವದು ನಮ್ಮ ಅಗ್ನಿಶಾಮಕ ಠಾಣೆಯ ವಸತಿ ಗೃಹದಲ್ಲಿ ಇರುವ ಸಚಿನ ತಂದೆ ಹಣಮಂತ, ಮತ್ತು ನೇತ್ರಾವತಿ ತಂದೆ ಹಣಮಂತ, ಇವರು ಮಾಡುತ್ತಿದ್ದರು. ನನ್ನ ಹೆಂಡತಿ ಮೈತ್ರಾ ಇವರು ದಿನಾಂಕ 21/11/2018 ರಂದು ತವರು ಮನೆಗೆ ಹೋಗಿದ್ದರು. ನಾನು ದಿನಾಂಕ 22/11/2018 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ನಮ್ಮ ಮನೆಯಿಂದ ಕರ್ತವ್ಯಕ್ಕೆ ಹೊಗಿದ್ದೆನು. ನಂತರ ಕರ್ತವ್ಯ ಮುಗಿಸಿ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದಾಗ ಆಲಮಾರಿಯಲ್ಲಿ ಕಿಲಿಹಾಕದೆ ಹೋರಗಡೆ ಇಟ್ಟಿದ್ದ ಬಂಗಾರದ ಸಾಮಾನುಗಳಾದ 5 ಗ್ರಾಂನ 2 ಚೈನಗಳು ಅ: ಕಿ: 23000/- ರೂ ಮತ್ತು 10 ಗ್ರಾಂ ಒಂದು ಚೈನ ಅ:ಕಿ: 23000/- ರೂ ಸಾಮಾನುಗಳು ಕಾಣಲಿಲ್ಲ ನಂತರ ಹುಡುಕಾಡಿದರು ಸಿಗಲಿಲ್ಲ. ಬಾಜು ಮನೆಯವರಾದ ರಾಮಶೇಟ್ಟಿ ತಂದೆ ವೈಜುನಾಥ ಇವರಿಗೆ ವಿಚಾರ ಮಾಡಲಾಗಿ ನಮಗೆ ಗೊತ್ತಿರುವದಿಲ್ಲಾ ಅಂತ ತಿಳಿಸಿದರು. ಸಚಿನ ಮತ್ತು ನೇತ್ರಾವತಿ ಇವರೆ ನಮ್ಮ ಮನೆಗೆ ಬಂದು ಮನೆಯಲ್ಲಿ ಇಟ್ಟಿದ 5 ಗ್ರಾಂನ 2 ಚೈನಗಳು ಅ: ಕಿ: 23000/- ರೂ ಮತ್ತು 10 ಗ್ರಾಂ ಒಂದು ಚೈನ ಅ:ಕಿ: 23000/- ರೂ ನೇದ್ದವುಗಳು ದಿನಾಂಕ 22/11/2018 ರಂದು ಬೆಳಿಗ್ಗೆ 7-30 ಗಂಟೆಯಿಂದ 14-00 ಗಂಟೆಯ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಂಶಯ ಇರುತ್ತದೆ. ನನ್ನ ಹೆಂಡತಿ ಮೈತ್ರಾ ಇವರು ಊರಿಗೆ ಹೋಗಿದ್ದು. ನನ್ನ ಹೆಂಡತಿ ಬಂದ ನಂತರ ಇನ್ನೂ ಯಾವ ಸಾಮಾನುಗಳು ಹೊಗಿರುತ್ತವೆ ಎಂದು ವಿಚಾರಿಸಿ ನಂತರ ವಿವರಸಲ್ಲಿಸುತ್ತನೆ. ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ನಮ್ಮ ಮನೆಯಲ್ಲಿ ಇಟ್ಟಿದ್ದ ಒಟ್ಟು ಅ:ಕಿ: 46000/- ರೂ ಬಂಗಾರದ ಸಾಮಾನುಗಳನ್ನು ಸಚಿನ ಮತ್ತು ನೇತ್ರಾವತಿ ಇವರೆ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತ ಸಂಶಯವಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ. ಅಂತ ಅಜರ್ಿಯ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 475/2018 ಕಲಂ 380, ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 472/2018.ಕಲಂ 279.338 ಐ.ಪಿ.ಸಿ.187 ಐ.ಎಂ.ವಿ.ಯಾಕ್ಟ :- ದಿನಾಂಕ 02/12/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾದಿ ಶ್ರೀ ಯಮನಪ್ಪ ತಂದೆ ಭೀಮರಾಯ ಅರಕೇರಿ ವಯ|| 38 ಉ|| ಒಕ್ಕಲತನ  ಜಾ|| ಕುರುಬರ ಸಾ|| ಅಗಸ್ತಿಹಾಳ ತಾ|| ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ: 02/12/2018 ರಂದು ಮುಂಜಾನೆ 5-30 ಗಂಟೆ ಸುಮಾರಿಗೆ ನಾನು ಸಂಡಸಕ್ಕೆ  ಹೊರಟಿದ್ದೆನು. ನಾನು ಹೊಗುವಾಗ ಸುರಪೂರ -ಯಾದಗೀರ ಮುಖ್ಯ ರಸ್ತೆಯ ಮೇಲೆ ನಮ್ಮೂರ ಕ್ರಾಸನಿಂದ ಅಂದಾಜು 500 ಮೀಟರ ಅಂತರದಲ್ಲಿ ಯಾದಗೀರ ಕಡೆಗೆ ಹೋಗುವ ರಸ್ತೆಯಲ್ಲಿ ನಮ್ಮೂರ ಹಣಮಂತ ತಂದೆ ಸಿದ್ದಪ್ಪ ಹೊಸಮನಿ ಈತನು ವಾಕಿಂಗ ಮಾಡುತ್ತಿದ್ದನು, ನಾನು ಆತನಿಗೆ ಏನು ಹಣಮಂತ ವಾಕಿಂಗ ಮಾಡುತ್ತಿದ್ದಿಯಾ ಅಂತ ಕೇಳಿದಾಗ ಹೌದು ಸ್ವಲ್ಪ ವಾಕಿಂಗ ಮಾಡಿದರಾಯಿತು ಅಂತ ಬೇಗನೆ ಎದ್ದು ಬಂದಿದ್ದೆನೆ ಅಂತ ಹೇಳಿದನು. ಆಯಿತು ಅಂತ ಹೇಳಿ ನಾನು ರೋಡಿನ ಹತ್ತಿರ ಪೂಲಿನ ಪಕ್ಕದಲ್ಲಿ  ನಾನು ಸಂಡಾಸಕ್ಕೆ ಹೋಗಿ ಸಂಡಾಸ ಕುಳಿತಾಗ ನಮ್ಮೂರ ಹಣಮಂತ ಈತನು ಎಪ್ಪೋ ಸತ್ಯೆನೊ ಅಂತ ಚೀರಾಡಿದನು ನಾನು ಏನಾಯಿತು ಅಂತ ಎದ್ದು ನೋಡುವಷ್ಟರಲ್ಲಿ ಕತ್ತಲಲ್ಲಿ ಒಂದು ವಾಹನ ಅತೀ ವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದವನೆ ಅದರ ಚಾಲಕನು ಹಣಮಂತನಿಗೆ ಡಿಕ್ಕಿ ಪಡಿಸಿ ಯಾದಗಿರ ಕಡೆಗೆ ಹೊದನು. ಕತ್ತಲಲ್ಲಿ ಅದರ ನಂಬರ ಮತ್ತು ನಮೂನೆ ಗೊತ್ತಾಗಲಿಲ್ಲ. ನಾನು ಸಂಡಾಸದಿಂದ ಎದ್ದು ರೋಡಿನ ಮೇಲೆ ಬಂದು ನೋಡಲಾಗಿ  ಹಣಮಂತ ಈತನು ಯಾದಗಿರ ಕಡೆಗೆ ಹೋಗುವ ರೋಡಿನ ಎಡಗಡೆ ಬಿದ್ದಿದ್ದನು. ಅವನಿಗೆ ನೋಡಲಾಗಿ ಹಣಮಂತನ ತೆಲೆಗೆ ಹಿಂದೆ ಭಾರಿ ರಕ್ತಗಾಯವಾಗಿತ್ತು, ಬಲಗೈ ಮೊಳಕೈ ಕೆಳಗೆ ಮುರಿದ್ದಿದ್ದು, ಮುಖಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತವು ಬೆಳಗ್ಗಿನಜಾವ 5-35 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನಂತರ 108 ಆಂಬ್ಯೂಲೇನ್ಸಕ್ಕೆ ಪೋನ ಮಾಡಿದೆನು ಹಾಗು ಅವರ ಮನೆಯವರಿಗೆ ವಿಷಯ ತಿಳಿಸಿ 108 ವಾಹನ ಸ್ಥಳಕ್ಕೆ ಬಂದ ನಂತರ ನಾನು ಮತ್ತು ಹಣಮಂತನ ಹೆಂಡತಿ ಶರಣಮ್ಮ ಮತ್ತು ಮಗ ಮಹೇಶ ಚಿಕ್ಕಪ್ಪ ಬಸಪ್ಪ ತಂದೆ ಹೊನ್ನಪ್ಪ ಹೊಸಮನಿ ಎಲ್ಲರೂ ಕೂಡಿ ಹಣಮಂತನನ್ನು 108 ಆಂಬ್ಯುಲೆನ್ಸನಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ  ಶಹಾಪೂರದ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಶಹಾಪೂರದ ವೈದ್ಯಾಧಿಕಾರಿಗಳು ಹಣಮಂತನಿಗೆ ಉಪಚಾರ ಮಾಡಿ ಹೆಚ್ಚಿನ ಉಪಚಾರ್ಕಾಗಿ ಕಲಬುರಗಿಗೆ ಕರೆದುಕೊಂಡು ಹೊಗಲು ತಿಳಿಸಿದ ಮೇರೆಗೆ ಹಣಮಂತನ ಮಗ ಮಹೇಶ ಮತ್ತು ಹೆಂಡತಿ ಶರಣಮ್ಮ ಚಿಕ್ಕಪ್ಪ ಬಸಪ್ಪ ಮೂವರು ಕೂಡಿ ಹಣಮಂತನಿಗೆ ಹೆಚ್ಚಿನ ಉಪಚಾರಕ್ಕಾಗಿ ಗಡಿಬಿಡಿಯಲ್ಲಿ ಎಲ್ಲರೂ ಕಲಬುರಗಿಗೆ ಆಂಬೂಲೆನ್ಸದಲ್ಲಿ ಕರೆದುಕೊಂಡು ಹೊದರು. ಕಾರಣ ಸುರಪೂರ-ಯಾದಗಿರ ಮುಖ್ಯ ರಸ್ತೆಯ ನಮೂರ ಕ್ರಾಸದಿಂದ 500 ಮೀಟರ ಅಂತರ ಪೂಲಹತ್ತಿರ ವಾಕಿಂಗ ಮಾಡುತ್ತಿದ್ದ ನಮ್ಮೂರ ಹಣಮಂತ ತಂದೆ ಸಿದ್ದಪ್ಪ ಹೋಸಮನಿ ಸಾ|| ಅಗಸ್ತಿಹಾಳ ಈತನಿಗೆ ಅಪಗಾತ ಪಡಿಸಿ ನಿಲ್ಲಿಸದೆ ಹೋದ ಯಾವುದೋ ಒಂದು ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 472/2018 ಕಲಂ 279. 338. ಐ.ಪಿ.ಸಿ.187. ಐ.ಎಂ.ವಿ.ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು. ನಂತರ ದಿನಾಂಕ 05/12/2018 ರಂದು 9-30 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಡೆತ್ತ ಎಂ.ಎಲ್.ಸಿ. ವಸುಲಾಗಿದ್ದು ಏನೆಂದರೆ ಗಾಯಾಳು ಹಣಮಂತ ತಂದೆ ಸಿದ್ದಪ್ಪ ಹೊಸಮನಿ ವ|| 45 ಜಾ|| ಪ,ಜಾತಿ ಉ|| ಒಕ್ಕಲುತನ ಸಾ|| ಅಗಸ್ತಾಳ ತಾ|| ಶಹಾಪೂರ ಇವರು ದಿನಾಂಕ 05/12/2018 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ಎಂ.ಎಲ್.ಸಿ. ಮಾಹಿತಿ ನಿಡಿದ್ದರಿಂದ ಪ್ರಕರಣದಲ್ಲಿ ಕಲಂ 304(ಎ) ಐ.ಪಿ.ಸಿ. ನೇದ್ದನ್ನು ಅಳವಡಿಸಿಕೊಂಡಿದ್ದು ಇರುತ್ತದೆ.  

ಸ್ಶೆದಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 196/2018 ಕಲಂ. 498(ಎ) 323.504.506.ಸಂ 34 ಐ ಪಿ ಸಿ :- ದಿನಾಂಕ 05-12-2018 ರಂದು 4-30 ಪಿ ಎಂ ಕ್ಕೆ ಪಿಯರ್ಾದಿ ಶ್ರೀಮತಿ ಶಾಂತಮ್ಮ  ಗಂಡ ಮಹಾದೇವಪ್ಪ @ ಮಾದೇಶ ವಯಾ|| 20 ವರ್ಷ ಜಾ|| ಕಬ್ಬಲಿಗೇರ ಉ|| ಮನೆಗೆಲಸ ಸಾ|| ದೊಡ್ಡ ಅಲ್ಲೂರ ತಾ|| ಚಿತಾಪೂರ ಜಿ|| ಕಲಬುಗರ್ಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಹೇಳಿಕೆ ಪಿಯರ್ಾದಿಯನ್ನು ನಿಡಿದ್ದು ಅದರ ಸಾರಾಂಶವೇನಂದರೆ.  ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತಳಿದ್ದು. ನನ್ನ ತವರು ಊರು ನೀಲಹಳ್ಳಿ ಗ್ರಾಮವಿದ್ದು. ನನಗೆ ದಿನಾಂಕ 13-06-2017 ರಂದು ನನ್ನ ತಂದೆ ತಾಯಿಯವರು ಕೂಡಿ ಚಿತಾಪೂರ ತಾಲೂಕಿನ ದೊಡ್ಡ ಅಲ್ಲೂರ ಗ್ರಾಮದ ಮಹಾದೇವಪ್ಪ @ ಮಾದೇಶ ತಂದೆ ದುರ್ಗಪ್ಪ ದೇಸಿ ಇವರಿಗೆ ಕೊಟ್ಟು ಮದುವೆಯನ್ನು ಮಾಡಿದ್ದು. ನಾನು ಮದುವೆಯಾದ ನಂತರ 5 ತಿಂಗಳು ಗಂಡನ ಮನೆಯಲ್ಲಿ ಎಲ್ಲಾರೊಂದಿಗೆ ಚೆನ್ನಾಗಿ ಇದ್ದೆ. ನಂತರ ನನಗೆ ನನ್ನ ಗಂಡನಾದ 1) ಮಹಾದೇವಪ್ಪ @ ಮಾದೇಶ ತಂದೆ ದುರ್ಗಪ್ಪ ದೇಸಿ . 2) ನನ್ನ ಮಾವನಾದ ದುರ್ಗಪ್ಪ  3) ಅತ್ತೆಯಾದ ನರಸಮ್ಮ ಗಂಡ ದುರ್ಗಪ್ಪ. 4) ಭಾವನಾದ ಮಲ್ಲಪ್ಪ ತಂದೆ ದುರ್ಗಪ್ಪ ಇವರು ನನಗೆ ದಿನಾಲು ನಿನಗೆ ಮಕ್ಕಳಾಗಲ್ಲಾ. ನಿನಗೆ ರೋಗ ಇದೆ ನೀನು ಸರಿಯಾಗಿಲ್ಲಾ. ನೀನು ನಿನ್ನ ತವರು ಮನೆಗೆ ಹೋಗು ನಾವು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇವೆ ಅಂತಾ ಮಾನಸಿಕ  ದೈಹಿಕ ಕಿರಕೂಳ ನೀಡುತ್ತಾ ಬಂದಿದ್ದು. ನಾನು ಅವರ ಮಾನಸಿಕ ದೈಹಿಕ ಕಿರಕೂಳ ತಾಳದೆ 5 ತಿಂಗಳ ಹಿಂದೆ  ತವರು ಊರಿಗೆ ನೀಲಹಳ್ಳಿಗೆ ಬಂದಿದ್ದು. ಈ ವಿಷಯ ನನ್ನ ತಂದೆ ತಾಯಿಗೆ ತಿಳಿಸಿದೆ. ಆಯಿತು ನೋಡೋಣ ಅಂತಾ ನನ್ನ ತಂದೆಯವರು ತಿಳಿಸಿದ್ದು ನಾನು ತವರು ಮನೆಯಲ್ಲಿ ಇದ್ದೆ. ದಿನಾಂಕ 20-11-2018 ರಂದು ಮದ್ಯಾನ 12 ಗಂಟೆಯ ಸುಮಾರಿಗೆ ನನ್ನ ಗಂಡನಾದ 1) ಮಹಾದೇವಪ್ಪ @ ಮಾದೇಶ ತಂದೆ ದುರ್ಗಪ್ಪ ದೇಸಿ . 2) ನನ್ನ ಮಾವನಾದ ದುರ್ಗಪ್ಪ  3) ಅತ್ತೆಯಾದ ನರಸಮ್ಮ ಗಂಡ ದುರ್ಗಪ್ಪ. 4) ಭಾವನಾದ ಮಲ್ಲಪ್ಪ ತಂದೆ ದುರ್ಗಪ್ಪ ಇವರು ನೀಲಹಳ್ಳಿ ಗ್ರಾಮಕ್ಕೆ ಬಂದು ನನಗೆ ಏ ರಂಡಿ ಬೋಸಡಿ ಗಂಡನ ಮನೆಗೆ ಯಾಕ ಬರಲಿಲ್ಲಾ. ತವರು ಮನೆಯಲ್ಲಿ ಕುಂತರೆ ಮಕ್ಕಳಾಗುತ್ತವೇನು ಬೋಸಡಿ  ನೀನು ಇಲ್ಲಿಯೆ ಇದ್ದರೆ ಹೇಗೆ ಅಂತಾ ಎಲ್ಲಾರು ಕೂಡಿ ನನಗೆ ಕೈಯಿಂದ ಹೊಡೆದರು ಅಷ್ಟರಲ್ಲಿ  ನನ್ನ ತಂದೆ ತಾಯಿಯವರು ಬಿಡಿಸಿದರು. ಆಗ ನನಗೆ ನೀನು ಪೊಲೀಸ ಕೇಸ ಮಾಡಿದರೆ ನೋಡಿ ನಿನಗೆ ಜೀವ ಸಹಿತ ಹೊಡೆಯುತ್ತೇನೆ ಹುಷಾರ ಅಂತಾ ಜೀವದ ಬೆದರಿಕೆಯನ್ನು ಹಾಕಿ ಹೋದರು ನಾನು ನಿಧಾನವಾಗಿ ನನ್ನ ತಂದೆ ತಾಯಿಯವರಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಪಿಯರ್ಾದಿಯನ್ನು ನಿಡಿದ್ದು. ಕಾರಣ ನನಗೆ ಮಾನಸಿಕ ದೈಹಿಕ ಕಿರಕೂಳ ನೀಡಿ ಅವಾಚ್ಚವಾಗಿ ಬೈಯ್ದಾಡಿದ ಜೀವದ ಬೆದರಿಕೆಯನ್ನು ಹಾಕಿದ ಕೈಯಿಂದ ಹೊಡೆ ಬಡೆ ಮಾಡಿದವರ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಗಣಕೀಕರಣ ಮಾಡಿಸಿದ ಪಿಯರ್ಾದಿ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 196/2018 ಕಲಂ. 498(ಎ) 323.504.506.ಸಂ 34 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 321/2018 ಕಲಂ: 78() ಕೆ.ಪಿ. ಆಕ್ಟ್ ಮತ್ತು 420 ಐಪಿಸಿ :- ದಿನಾಂಕ 05.12.2018 ರಂದು ಸಂಜೆ 4:55 ಗಂಟೆಗೆ ಆರೋಪಿ ಕಿಷ್ಟಪ್ಪ ಈತನು ಗುರುಮಠಕಲ್ ಬಸ್ ನಿಲ್ದಾಣದ ಹತ್ತಿರ ಯಲ್ಲಮ್ಮ ದೇವಸ್ಥಾನದ ಮುಂದಿನ ಸಿಸಿ ರಸ್ತೆಯ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಜನರಿಂದ ಹಣ ಸಂಗ್ರಹಿಸುತಿತದ್ದಾಗ ಫೀರ್ಯಾದಿದಾರರಾದ ಶ್ರೀ ಬಸವೆರಾಜ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ವಿಚಾರಿಸಿದಾಗ ತಾನು ಯುನೂಸ್ ಈತ ಹೇಳಿದಂತೆ ಆತನಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಮತ್ತು ಮಟಕಾ ಚೀಟಿಯನ್ನು ಕೊಡುತ್ತಿರುವುದಾಗಿ ತಿಳಿಸಿದ್ದು ಅಲ್ಲದೇ ಅಲ್ಲಿಯ ಸಾರ್ವಜನಿಕರಿಗೆ ವಿಚಾರಿಸಿದಾಗ ಸದರಿ ಆರೋಪಿತನು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿ ಅವರಿಗೆ ಹಣ ಕೊಡದೇ ವಂಚಿಸುತ್ತಿರುವುದಾಗಿ ತಿಳಿಸಿದ್ದು ಸದರಿ ಆರೋಪಿತನ ವಶದಲ್ಲಿದ್ದ 1] ಮೊಬೈಲ್ ಪೋನ್, 2] ಬಾಲ್ ಪೆನ್, 3]ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 4] ನಗದು ಹಣ ಹೀಗೆ ಒಟ್ಟು 2510/-ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 321/2018 ಕಲಂ: 78() ಕೆಪಿ ಆಕ್ಟ್ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.  

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 322/2018 ಕಲಂ 379 ಐಪಿಸಿ:-ದಿನಾಂಕ 05.12.2018 ರಂದು ಸಮಯ ರಾತ್ರಿ 8:40 ಗಂಟೆಗೆ ಆರೋಪಿತನು ಟ್ರ್ಯಾಕ್ರರ ಇಂಜಿನ್ ನಂ: 39.1358/ಖಚಐ11397 ಮತ್ತು ಟ್ರ್ಯಾಲಿಗೆ ನಂಬರ್ ಇರುವುದಿಲ್ಲ. ನೇದ್ದರಲ್ಲಿ ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಸಿಪಿಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳೀ ಮಾಡಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಪಡಿಸಿಕೊಂಡು ಒಬ್ಬ ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಆರೊಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ  ಮೂಲ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ನಂ: 322/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!