ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-12-2018

By blogger on ಬುಧವಾರ, ಡಿಸೆಂಬರ್ 5, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-12-2018 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 382/2018 ಕಲಂ: 78(3) ಕನರ್ಾಟಕ ಪೊಲೀಸ್ ಆಕ್ಟ್ 1963:- ದಿನಾಂಕ: 04/12/2018 ರಂದು 3-15 ಪಿ.ಎಮ್ ಕ್ಕೆ ಶ್ರೀ ಸೋಮಲಿಂಗ ಒಡೇಯರ ಪಿ.ಎಸ್.ಐ ಸಾಹೇಬರು ಒಬ್ಬ  ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 1-00 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಸುರಪೂರ ನಗರದ ರುಕ್ಮಾಪೂರ ಗ್ರಾಮದ ಗ್ರಾಮ ಪಂಚಾಯತ ಕಾರ್ಯಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದು ಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.176, ಪಿ.ಸಿ.366, ಪಿ.ಸಿ 218, ಪಿ.ಸಿ 235 ಹಾಗು ಇಬ್ಬರೂ ಪಂಚರೊಂದಿಗೆ ರುಕ್ಮಾಪೂರ ಗ್ರಾಮಕ್ಕೆ  ಹೋಗಿ ಹರಿಜನವಾಡದಲ್ಲಿ  ಜೀಪ ನಿಲ್ಲಿಸಿ ಸ್ವಲ್ಪ ನಡೆದುಕೊಂಡು ಹೋಗಿ ಕೇರಿ ಲಕ್ಷ್ಮಣ ಇವರ ಮನೆಗೆ ಮರೆಯಾಗಿ ನಿಂತು ನೋಡಲಾಗಿ ಗ್ರಾಮ ಪಂಚಾಯತ ಕಾರ್ಯಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಬ್ಬ ವ್ಯಕ್ತಿಯು ನಿಂತು ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೊಯಿಂಟ್ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತ ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿತನಿಗೆ ಹಿಡಿದು, ಸದರಿಯವನಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 2670-00 ರೂ.ಗಳು 2) ಒಂದು ಬಾಲ್ ಪೆನ್ನ ಅ||ಕಿ|| 00-00 ರೂ.ಗಳು. 3) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ|| 00-00, ರೂ.ಗಳು ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 382/2018 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 141/2018 ಕಲಂ 78[3] ಕೆಪಿ ಯ್ಯಾಕ್ಟ:- ದಿನಾಂಕ 04/12/2018 ರಂದು 5.10 ಪಿ.ಎಮ್ ಕ್ಕೆ ಭೀ.ಗುಡಿಯ ಯು.ಕೆ.ಪಿ ಕೋರಿಕೆ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿಜಯ ತಂದೆ ತಿಪ್ಪಣ್ಣ ರಾಠೋಡ ಸಾ:ಹೊತಪೇಟ ಮುಂದಿನ ತಾಂಡಾ ತಾ:ಶಹಾಪುರ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1610=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 5.15 ಪಿಎಮ್ ದಿಂದ 6.15 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 6.30 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 141/2018 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಶಹಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 474 ಕಲಂ 78[3] ಕೆ.ಪಿ ಆಕ್ಟ :- ದಿನಾಂಕ 04/12/2018  ರಂದು ಸಾಯಂಕಾಲ 19-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 04/12/2018 ರಂದು ಸಾಯಂಕಾಲ 16-00  ಗಂಟೆಗೆ ಠಾಣೆಯಲ್ಲಿದ್ದಾಗ ಸಗರ[ಬಿ] ಗ್ರಾಮದ ಚೌಡಿ ಕಟ್ಟಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ  ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಸಗರ[ಬಿ] ಗ್ರಾಮಕ್ಕೆ ಹೋಗಿ ಚೌಡಿ ಕಟ್ಟೆಯ ಹತ್ತಿರ ಸಾರ್ವಜನಿಕಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 17-20 ಗಂಟೆಗೆ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 630=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಸಾಯಂಕಾಲ 17-25 ಗಂಟೆಯಿಂದ 18-25 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 34/2018 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ರಾತ್ರಿ 21-00 ಗಂಟೆಗೆ ಠಾಣೆ ಗುನ್ನೆ ನಂಬರ 474/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 173/2018  ಕಲಂ: 279, 304(ಎ), ಐಪಿಸಿ:- ದಿನಾಂಕ: 04/12/2018 ರಂದು11.15ಎಎಂ ಕ್ಕೆ ಪಿಯರ್ಾದಿ ಶ್ರೀಮತಿ.ಈರಮ್ಮಗಂಡದೇವಿಂಧ್ರಪ್ಪಗುಡಿಮನಿ ವಯಸ್ಸು 60 ಜಾತಿ ಹೋಲೆಯಉದ್ಯೋಗ ಮನೆ ಕೇಲಸ ಸಾ|| ಏವೂರುತಾ: ಸುರಪೂರಇವರುಠಾಣೆಗೆ ಹಾಜರಾಗಿಅಜರ್ಿ ನೀಡಿದ್ದರ ಸಾರಂಶವೇನಂದೆ, ನನ್ನ ಮಗನಾದ ಬಸವರಾಜಇತನುಒಂದು ಸ್ವಂತಅಟೋವನ್ನುಇಟ್ಟುಕೊಂಡು ಉಪ ಜೀವನ ಮಾಡುತ್ತಿದ್ದು ಹಿಗಿದ್ದು ನಿನ್ನೆ ದಿನಾಂಕ 03/12/2018 ರಂದು 4:30 ಪಿ.ಎಂ ಕ್ಕೆ ನಾನು ಮತ್ತು ನನ್ನ ಮಕ್ಕಳಾದ ಮಲ್ಲಿಕಾಜರ್ುನ ಹಾಗೂ ಬಸವರಾಜಇವರೋಂದಿಗೆ ಮನೆಯಲ್ಲಿಇದ್ದಾಗ, ಆಗ ನಮ್ಮೂರಿನ ನನ್ನ ಮಗ ಬಸವರಾಜಈತನ ಗೇಳಯರಾದ 1] ಸುರೆಶತಂದೆ ಪಂಪಣ್ಣ ಹೋಸ್ಮನಿ, 2] ಮಲ್ಕಪ್ಪತಂದೆ ಭೀಮರಾಯ ಸಂದಿಮನಿ 3] ಪ್ರಶಾಂತತಂದೆಜೇಟ್ಟಪ್ಪ ಬಡಿಗೇರ ಹಾಗೂ ಚಾಮನಾಳ ತಾಂಡದ ಶಂಕರರಾಠೋಡ ಹಾಗೂ ಟಮ,ಟಮ ಚಾಲಕ ನಮ್ಮ ಮನೆಯ ಹತ್ತಿರ ಬಂದು ಚಾಮನಾಳದಲ್ಲಿ ಸಂತೆ ಮಾಡಿಕೊಂಡು ಬರೋಣಅಂತ ನನ್ನ ಮಗ ಬಸವರಾಜಈತನಿಗೆಕರೆದರು ಆಗ ನನ್ನ ಮಗ ಆಯಿತುಅಂತ ಹೇಳಿ ಸದರಟಮ,ಟಮಅಟೋ ನಂ. ಕೆ.ಎ 33 ಎ.6476 ರಲ್ಲಿ ಅವನ ಗೇಳೆಯರೊಂದಿಗೆ ಹೋದರು. ನಂತರ ನಾನು ನನ್ನಕುಟಂಬದವರೊಂದಿಗೆ ನಮ್ಮ ಮನೆಯಲ್ಲಿದ್ದಾಗ ನಿನ್ನೆ 8:15 ಪಿ.ಎಂ ಕ್ಕೆ ನನ್ನ ಮಗನ ಗೇಳೆಯನಾದ ಸುರೇಶ ಹೋಸ್ಮನಿ ಈತನು ಪೋನ ಮಾಡಿ ತಿಳಿದ್ದೇನಂದರೆ ನಡಿಹಾಳ ಶ್ರೀ ಯಲ್ಲಮ್ಮಗುಡಿಯ ಮುಂದೆರೋಡಿನ ಮೇಲೆ ಹೋಗುತ್ತಿದ್ದಾಗಟಮಟಮಅಟೋ ನಂ. ಕೆ.ಎ 33 ಎ 6476 ರ ಚಾಲಕ ಅಟೋವನ್ನುಅತಿ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ರೋಡಿನತಿರುವಿನಲ್ಲಿಒಮ್ಮಲೇಕಟ್ ಹೊಡಿದ್ದರಿಂದಅಟೋದಬಲಗಡೆಕುಳಿತ ಬಸವರಾಜತಂದೆದೇವಿಂದ್ರಪ್ಪಗುಡಿಮನಿ ವಯಸ್ಸು 22 ಈತನು ಕೇಳಗಡೆ ಬಿದ್ದು ಮೇಲಿಕಿಗೆ ಹಾಗೂ ಹಣೆಗೆ ಮೂಗಿಗೆ ಗಾಯವಾಗಿ ಮೃತ ಪಟ್ಟಿದ್ದು ಅವನಿಗೆ ಆಸ್ಪತ್ರೆ ಸೇರಿತ್ತಿದೇನೆ. ಅಂತಾ ವಿಷಯ ತಿಳಿಸಿದನು. ಆಗ ವಿಷಯ ತಿಳಿದ ನಾನು ನನ್ನಕುಟುಂಬದವರುಕೂಡಿ ಹಾಗೂ ನಮ್ಮೂರಿನವರುಕೂಡಿ ಸರಕಾರಿಆಸ್ಪತ್ರೆ ಶಹಾಪೂರಕ್ಕೆ ಬಂದು ನೋಡಿದಾಗ ಆಗ ನನ್ನ ಮಗ ಬಸವರಾಜನಿಗೆಅಟೊಅಫಘಾತದಲ್ಲಿಗಾಯವಾಗಿ ಮೃತಪಟ್ಟಿದ್ದು ನಿಜವಿರುತ್ತದೆ. ಅಲ್ಲಿ ನನ್ನ ಮಗನ ಗೆಳೆಯರಿಂದ ಅಪಘಾತ ಮಾಡಿದ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಾಗಲಾಗಿ ಮಲ್ಲಿಕಾಜರ್ುನತಂದೆ ನಿಂಗಪ್ಪ ಹಾಲಬಾವಿ ಸಾ: ದೋರನಳ್ಳಿ ಅಂತಾ ತಿಳಿಯಿತು. ಅಪಘಾತ ಮಾಡಿದಅಟೋ ನಂ; ಕೆಎ-33 ಎ-3476 ರ ಚಾಲಕ ಮಲ್ಲಿಕಾಜರ್ುನತಂದೆ ನಿಂಗಪ್ಪ ಹಾಲಬಾವಿ ಈತನ ಮೇಲೆ ಕಾನೂನು ಕ್ರಮಜರುಗಿಸಲು ಮನೆಯಲ್ಲಿ ಹಾಗೂ ನಮ್ಮೂರಿನ ಹಿರಿಯರೊಂದಿಗೆ ಚಚರ್ಿಸಿ ನನ್ನ ಮಗನಾದ ಮಲ್ಲಿಕಾಜರ್ುನಗುಡಿಮನಿ ಇವನೊಂದಿಗೆ ಗೋಗಿ ಠಾಣೆಗೆತಡವಾಗಿ ಬಂದುಅಜರ್ಿ ನೀಡಿದ್ದು ಮುಂದಿನ ಕ್ರಮ ಕಯಕೊಳ್ಳಲು ವಿನಂತಿ. ಅಂತಾಪಿಯರ್ಾದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 173/2018 ಕಲಂ:279, 304 (ಎ) ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!