ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-11-2018

By blogger on ಶುಕ್ರವಾರ, ನವೆಂಬರ್ 30, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-11-2018 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 318/2018 ಕಲಂ : 363 ಐಪಿಸಿ :- ದಿನಾಂಕ 24.11.2018  ರಂದು ಸಂಜೆ 4:00 ಗಂಟೆಯ ಸುಮಾರಿಗೆ ಕುಮಾರ.ಶಿವಕುಮಾರ ತಂದೆ ಮಲ್ಲಿಕಾಜರ್ುನಯ್ಯ ಸ್ವಾಮಿ ಪ್ರಚಂಡಿ ವ|| 16 ವರ್ಷ ಜಾ||ಲಿಂಗಾಯತ ಉ||ವಿದ್ಯಾಥರ್ಿ ಸಾ||ಮುಷ್ಟಳ್ಳಿ ತಾ||ಸೇಡಂ ಜಿ||ಕಲಬುರಗಿ ಈತನ ತಾನು ವಿದ್ಯಾಭ್ಯಾಸ ಮಾಡುತ್ತಿರುವ ಮುರಾಜರ್ಿ ದೇಸಾಯಿ ಶಾಲೆಯ ಪ್ರಾಂಶುಪಾಲರ ಮತ್ತು ನಿಲಯ ಪಾಲಕರ ಅನುಮತಿ ಪಡೆಯದೇ ತಾನು ಅವರಿಂದ ಅನುಮತಿ ಪಡೆದಿರುವುದಾಗಿ ತನ್ನ ಸ್ನೇಹಿತರಲ್ಲಿ ಮತ್ತು ಗೇಟ್ ವಾಚಮನ್ ರವರಿಗೆ ತಿಳಿಸಿ ಶಾಲೆಯಿಂದ ಹೊರಗೆ ಹೋಗಿದ್ದು ಮರಳಿ ಶಾಲೆಗೆ ಬಾರದೇ ಇರುವುದರಿಂದ ಕುಮಾರ. ಶಿವಕುಮಾರ ಈತನ ತಂದೆ-ತಾಯಿ ಹಾಗೂ ದೊಡ್ಡಪ್ಪ ಮತ್ತು ಶಿಕ್ಷರೆಲ್ಲಾರು ಸೇರಿ ಎಲ್ಲಾ ಕಡೆಗೆ ಫೋನ್ ಮಾಡಿ ವಿಚಾರಿಸಿದ್ದು ಎಲ್ಲಿಯೂ ಇಲ್ಲದೇ ಇರುವ ಬಗ್ಗೆ ದೃಢಪಟ್ಟಿದ್ದರಿಂದ ಕುಮಾರ ಶಿವಕುಮಾರ ಈತನನ್ನು ಯಾರೋ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಇಂದು ದಿನಾಂಕ 29.11.2018 ರಂದು ಬೆಳಿಗ್ಗೆ 11:00 ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 318/2018 ಕಲಂ: 363 ಐಪಿಸಿ ಪ್ರಕರಣ ದಾಖಲಿಸಿಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 195/2018 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:-ದಿನಾಂಕ: 29-11-2018 ರಂದು ಸಾಯಂಕಾಲ 05-20 ಗಂಟೆಗೆ ಮಾನ್ಯ ಶ್ರೀ ಎನ್.ವೈ.ಗುಂಡುರಾವ ಪಿ.ಎಸ್.ಐ ಸಾಹೇಬರು ಜ್ಞಾಪನ ಪತ್ರದೊಂದಿಗೆ ಸಿಂಧಿ ಜಪ್ತಿಪಂಚನಾಮೆ ಮತ್ತು 38 ಲೀಟರ ಸಿಂಧಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ.195/2018 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 447/2018 .ಕಲಂ 279,337,338,304(ಎ) ಐ.ಪಿ.ಸಿ :- ದಿನಾಂಕ: 10/11/2018 ರಂದು ಬೆಳಿಗ್ಗೆ 10-00 ಪಿ.ಎಂ.ಕ್ಕೆ ಶ್ರೀ ಭೀಮಪ್ಪ ತಂದೆ ಸಾಯಬಣ್ಣ ಚೌಡೇಶ್ವರಹಾಳ ಸಾ|| ಅರಕೆರಾ(ಕೆ) (ಲಕ್ಮಿಪೂರ) ಸುರಪೂರ ಇವರು ಠಾಣೆಗೆ ಹಾಜರಾಗಿ ದಿನಾಂಕ 09/11/2018 ರಂದು ಮದ್ಯಾಹ್ನ 1-00 ಗಂಟೆಗೆ ಶಾಂತಪ್ಪ ತಂದೆ ಚಂದಪ್ಪ ಈತನು ತನ್ನ ಮಗಳ ಮನಿಶಾಂತಿ ಯಾದಗಿರಿ ಹತ್ತಿರದ ಚಾಮನಾಳ ಗ್ರಾಮದಲ್ಲಿ ಇರುವದರಿಂದ ನನಗೆ ಮತ್ತು ನಮ್ಮೂರ ಶಾಂತಮ್ಮ ಗಂಡ ಶರಣ ಬಸವೇಶ್ವರ ದೋಡ್ಮಮನಿ, ಮಲ್ಲಮ್ಮ ಗಂಡ ಅಡಿವೆಪ್ಪ ಯಮನೂರ, ಶಾಂತಪ್ಪ ಸಂಬದಿಕನಾದ ಗೋಪಾಲಪ್ಪ ತಂದೆ ಯಂಕಪ್ಪ ದಿಗ್ಗಿ ಎಲ್ಲರನ್ನು ಕರೆದುಕೊಂಡು ಟಾಟಾ ಎ.ಸಿ. ನಂ ಕೆಎ-36 ಬಿ-0355 ನೇದ್ದರಲ್ಲಿ ಕೂಳಿತುಕೊಂಡು ನಮ್ಮೂರಿಂದ ಹೋರಟು ಸದರಿ ಟಾಟಾ ಎಸಿಯನ್ನು ನಮ್ಮೂರ ಸಣ್ಣ ಯಲ್ಲಪ್ಪ ತಂದೆ ಗಜಪ್ಪ ಈತನು ಚಲಾಯಿಸುತ್ತಿದ್ದನು. ಸದರಿ ಟಾಟಾ ಎ.ಸಿ. ಯಲ್ಲಿ ಸುರಪೂರಕ್ಕೆ ಬರುತ್ತಿರುವಾಗ ಯಾದಗಿರಿ-ಸುರಪೂರ ಮುಖ್ಯ ರಸ್ತೆ ಮೇಲೆ ಅನ್ವರ ಗ್ರಾಮ ಮತ್ತು ಬೋಮ್ಮನಳ್ಳಿ ಕ್ರಾಸ ದಾಟಿ 7-30 ಗಂಟೆಗೆ ಹತ್ತಿಗುಡೂರ ಕಡೆಯಿಂದ ಬರುತ್ತಿದ್ದ ಒಂದು ಮೋಟರ್ ಸೈಕಲ್ ಚಾಲಕನಿಗೆ ಗುದ್ದಿ ಅಪಘಾತ ಮಾಡಿದ್ದರಿಂದ ಮೋಟರ್ ಸೈಕಲ್ ನಂ. ಎಂ.ಎಹ್.12ಪಿಜೆ-0334 ನೇದ್ದರ ಚಾಲಕ ಮತ್ತು ಟಾಟಾ ಎಸಿ ಯಲ್ಲಿದ್ದ ಇತರರಿಗೆ ಬಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ. ಆರೋಪಿತನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 447/2018 ಕಲಂ 279, 337, 338 ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ: 29/11/2018 ರಂದು 02:30 ಪಿಎಂ ಸುಮಾರಿಗೆ ಮಹ್ಮದ ಹುಸೇನ ತಂದೆ ನಬಿಚಾಂದ ಕೊರಬ ಸಾ|| ಐಕೂರ ರವರು ಠಾಣೆಗೆ ಹಾಜರಾಗಿ ಯುನೈಟೆಡ್ ಆಸ್ಪತ್ರೆಯಲ್ಲಿದ್ದ ನನ್ನ ಅಣ್ಣ ಸೈಯ್ಯದ ಅಲಿ ಈತನು ಇಂದು  ಬೇಳಗಿನ ಜಾವ 06:35 ಎಎಂ ಸುಮಾರಿಗೆ ಮತೃ ಪಟ್ಟಿರುತಾನೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 470/2018 ಕಲಂ 454, 457, 380 ಐಪಿಸಿ :- ದಿನಾಂಕ: 29/11/2018 ರಂದು ಮಧ್ಯಾಹ್ನ 2.30 ಪಿ.ಎಂ.ಕ್ಕೆ ಶ್ರೀಮತಿ ಜಗದೇವಿ ಗಂಡ ಸಂಗಣ್ಣ ಸಾಣಿ ಸಾ|| ದೋರನಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಾರಾಂಶವೇನೆಂದರೆ, ನಾನು ದಿನಾಂಕ:24/11/2018 ರಂದು ಬೆಳಿಗ್ಗೆ 9.00 ಎ.ಎಂ.ಕ್ಕೆ ಕಲಬುಗರ್ಿಯಲ್ಲಿರುವ ನನ್ನ ಮಗನ ಹತ್ತಿರ ಹೋಗಿ ನಿನ್ನೆ ದಿನಾಂಕ:28/11/2018 ರಂದು ಬೆಳಿಗ್ಗೆ 11.30 ಎ.ಎಂ. ನಮ್ಮ ಮನೆಯಗೆ ಬಂದಾಗ ಯಾರೋ ಕಳ್ಳರು ನನ್ನ ಮನೆಯ ಮಾಳಿಗೆಯಿಂದ ಮನೆಯೊಳಗೆ ಪ್ರವೇಶ ಮಾಡಿ ಹಾಲಿನ ಕೀಲಿ ಮುರಿದು ದೇವರ ಕೋಣೆಯಲ್ಲಿದ್ದ ಅಲಮಾರಿಯ ಕೊಂಡಿ ಕಿತ್ತಿ ಅಲಮಾರಿಯಲ್ಲಿದ್ದ ಒಟ್ಟು 86,000=00 ರೂಪಾಯಿ ಮೌಲ್ಯದ 22 ಗ್ರಾಂ.ಬಂಗಾರ ಮತ್ತು 1.5 ಕಿಲೋ ಗ್ರಾಂ. ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಘಟನೆ ವಿಷಯವನ್ನು ಕೇಳಿ ಸಂಗಣ್ಣ ತಂ/ ಕಲ್ಯಾಣಪ್ಪ ಮಲಗೊಂಡ, ಸಂಗಣ್ಣ ತಂ/ ಮಾಂತಪ್ಪ ಸಾಣಿ ಇವರು ಬಂದು ನೋಡಿರುತ್ತಾರೆ ನಂತರ ಅವರು ಮತ್ತು ನಾವು ಅಕ್ಕ ಪಕ್ಕ ಹುಡುಕಾಡಿ ನೋಡಲಾಗಿ ಕಳ್ಳತನವಾದ ಯಾವುದೇ ವಸ್ತುಗಳು ಸಿಕ್ಕಿರುವುದಿಲ್ಲ ನನ್ನ ಮಗ ಪ್ರದೀಪ್ ಮತ್ತು ನಮ್ಮ ಹಿತೈಷಿಗಳೊಂದಿಗೆ ಚಚರ್ೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ.
ಕಾರಣ ದಿನಾಂಕ:24/11/2018 ರಂದು 9.00 ಎ.ಎಂ ಇಂದ ದಿನಾಂಕ: 28/11/2018 ರಂದು ಬೆಳಿಗ್ಗೆ 11.30 ಎ.ಎಂ. ಮಧ್ಯದ ಅವಧಿಯಲ್ಲಿ ಪ್ರವೇಶ ಮಾಡಿ ನಮ್ಮ ಹಾಲಿನ ಕೀಲಿ ಮುರಿದು ದೇವರ ಕೋಣೆಯಲ್ಲಿದ್ದ ಅಲಮಾರಿಯ ಕೊಂಡಿ ಕಿತ್ತಿ ಅದರಲ್ಲಿದ್ದ ಒಟ್ಟು 86,000=00 ರೂಪಾಯಿ ಮೌಲ್ಯದ 22 ಗ್ರಾಂ. ಬಂಗಾರದ ಆಭರಣಗಳು ಮತ್ತು 1.5 ಕಿಲೊಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಅಪರಿಚಿತ ಕಳ್ಳರ ವಿರುದ್ದ ಕ್ರಮ ಕೈಕೊಂಡು ಕಳ್ಳತನವಾದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.470/2018 ಕಲಂ 454, 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 471/2018.ಕಲಂ 78(3).ಕೆ.ಪಿ.ಯಾಕ್ಟ :- ದಿನಾಂಕ 29/11/2018 ರಂದು ಸಾಯಂಕಾಲ 2-00 ಪಿ.ಎಂ ಕ್ಕೆ ಶ್ರೀ ರಾಜಕುಮಾರ  ಪಿ.ಎಸ್.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಮದರಕಲ ಗ್ರಾಮದ ದ್ಯಾವಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಠಾಣಾ ಸಿಬ್ಬಂದಿ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಕೃಷ್ಣ ತಂದೆ ಸಿತಾರಾಮ ಬೋಸಲೆ ವಯ|| 60 ವರ್ಷ ಉ|| ಮಟಕಾ ಬರೆದುಕೊಳ್ಳುವದು ಜಾ|| ಮರಾಠಾ ಸಾ|| ಮದರಕಲ್ ತಾ|| ಶಹಾಪೂರ ಈತನಿಂದ ನಗದು ಹಣ 520/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ, ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 29/11/2018 ರಂದು 6-15 ಪಿಎಂ ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ 7-15 ಪಿ.ಎಂಕ್ಕೆ ಠಾಣೆಗೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 471/2018 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:-171/2018 ಕಲಂ: 498(ಎ),323,324, 504, 506ಸಂಗಡ 34ಐಪಿಸಿ :- ದಿನಾಂಕ: 29/11/2018 ರಂದು 06.45 ಪಿಎಂ ಕ್ಕೆ ಪಿಯರ್ಾದಿ ಶ್ರೀಮತಿ ಸುನಿತಾ ಗಂಡ ರಮೇಶ ರಾಠೋಡ ವಯಸ್ಸು 26 ವರ್ಷ ಜಾ|| ಲಂಬಾಣಿ ಸಾ|| ನಾಗನಟಗಿ ದಾಮಲೂನಾಯಕ ತಾಂಡ ತಾ|| ಶಹಾಪೂರ ಜಿ|| ಯಾದಗಿರಇವರು ಠಾಣೆಗೆ ಹಾಜರಾಗಿ ಈ ದೂರು ಅಜರ್ಿ ನೀಡಿದ್ದು ಸದರಿ ಅಜರ್ಿ ಸಾರಂಶ ಏನಂದರೆ, ನಾನು ಶ್ರೀಮತಿ ಸುನಿತಾ ಗಂಡ ರಮೇಶ ರಾಠೋಡ ವಯಸ್ಸು 28 ವರ್ಷ ಉ: ಕೂಲಿ ಜಾ|| ಲಂಬಾಣಿ ಸಾ|| ನಾಗನಟಗಿ ದಾಮಲೂನಾಯಕ ತಾಂಡ ತಾ|| ಶಹಾಪೂರ ಜಿ|| ಯಾದಗಿರ ಆದ ನಾನು ಈ ಮೂಲಕ ದೂರು ಸಲ್ಲಸುವದೆನಂದರೆ ನನ್ನ ಮದುವೆ ಸೂಮಾರು 9 ವರ್ಷಗಳ ಹಿಂದೆ ಮದುವೆಯಾಗಿರುತ್ತದೆ. ನನ್ನಗೆ 2 ಜನ ಗಂಡು ಮಕ್ಕಳು ಒಂದು ಹೆಣ್ಣು ಮಗವು ಕೂಡಾ ಇರುತ್ತದೆ. ಆದರೆ ನನ್ನ ಗಂಡನಾದ ರಮೇಶ ತಂದೆ ನೂರಸಿಂಗ ರಾಠೋಡ ವಯ್ಯಸ್ಸು 30 ಜಾತಿ ಲಂಬಾಣಿ ಸಾ|| ದಾಮಲ್ಲು ನಾಯಕ ತಾಂಡ ನಾಗನಟಗಿ ತಾ|| ಶಹಾಪೂರ ಜಿ|| ಯಾದಗಿರ ಇವರು ನನಗೆ ಮದುವೆಯಾದ 02-03 ವರ್ಷ ಸರಿಯಾಗಿ ನೋಡಿಕೊಂಡು ನಂತರ ಇತ್ತಿಚೆಗೆ ನನಗೆ ಅಡುಗೆ ಮಾಡಲು ಬರುವದಿಲ್ಲ, ನಿನು ಹೊರಗೆ ಯಾಕೆ ನೋಡುತ್ತಿ ಸೂಳೆ ಅಂತಾ ಅವಾಶ್ಚಾವಾಗಿ ಬೈಯುತ್ತಾ ವಿನಾಃ ಕಾರಣ ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಆದರೂ ನಾನು ನಮ್ಮ ಸಂಸಾರ ಹಾಳು ಆಗಬಾರದು ಅಂತಾ ಸಹಿಸಿಕೊಂಡು ಬಂದಿರುತ್ತೇನೆ. ನನಗೆ ಹೊಡೆ ಬಡೆ ಮಾಡಿದ ವಿಷಯವನ್ನು ನಾನು ನಮ್ಮ ತವರು ಮನೆ ಇರುವ ಹೋಸ್ಕೆರಾ ಮೇಲಿನ ತಾಂಡಾಕ್ಕೆ ಬಂದಾಗ ನಮ್ಮ ಅಣ್ಣ ತಾರಾಸಿಂಗ, ಮತ್ತು ರಾಮದಾಸ ಹಾಗೂ ನಮ್ಮ ತಂದೆಯಾದ ಶರಣಪ್ಪ, ತಾಯಿಯಾದ ಚಾಂದಿಬಾಯಿ ಇವರಿಗೆ ಹೇಳಿದ್ದೆನು. 
ಹೀಗಿದ್ದು ದಿನಾಂಕ:21/11/2018 ರಂದು ರಾತ್ರಿ 9:30 ಸುಮಾರಿಗೆ ನನಗೆ ಸಾಯಿಸಲೇಂದು ನನ್ನ ಗಂಡ 1) ರಮೇಶ ತಂದೆ ನೂರಸಿಂಗ್ ರಾಠೋಡ, ಮೈದುನನಾದ 2)  ಕಿರಣ ತಂದೆ ನೂರಸಿಂಗ್ ರಾಠೋಡ, 03) ನೂರಸಿಂಗ ತಂದೆ ಕಸನು ಇವರೆಲ್ಲರೂ ಜೋತೆಗೂಡಿ ನನ್ನನ್ನು ಮನ ಬಂದಂತೆ ಬಡಿದು ನನ್ನ ಹಲ್ಲಗಳಿಗೆ ರಕ್ತ ಬರುವ ಹಾಗೆ ಮತ್ತು ಕಣ್ಣಿಗೆ ಹೊಡೆದಿರುತ್ತಾರೆ. ಅದೆ ದಿನ ನಾನು ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ತೋರಿಸಿರುತ್ತೇನೆ. ನಾವು ಎಷ್ಟು ಹೆಣ್ಣುಮಕ್ಕಳನ್ನು ಸಾಯಿಸಿ ದಕ್ಕಿಸಿಕೊಂಡಿದ್ದೇವೆ ಕೇವಲ ನಿನ್ನಂತ ಹೆಣ್ಣಿಗೆ ಹೋಡೆದು ದಕ್ಕಸಿಕೊಳ್ಳುವದು ನಮಗೇನು ಕಷ್ಠವೆನಲ್ಲಾ, ನಮ್ಮನ್ನು ಯಾರ ಏನು ಮಾಡೋಕ್ಕಾಗಲ ಎಂದು ನಿನ್ನನ್ನು ಸಾಯಿಸಿ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿದ್ದಾರೆ. ಆಗ ನಾನು ತವರು ಮನೆಗೆ ಬಂದು ನನ್ನ ಅಣ್ಣಂದಿರಗೆ ವಿಷಯ ತಿಳಿಸಿದೆನು. ಎಲ್ಲರೂ ಕೂಡಿ ನನಗೆ ಸಮಾದಾನ ಹೇಳಿದ್ದರು.
ಹೀಗಿದ್ದು ಇಂದು ದಿನಾಂಕ:29/11/2018 ರಂದು 11.30 ಎಎಂ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣ ರಾಮದಾಸ ಇಬ್ಬರು ನನಗೆ ಅಪೆಂಡೆಕ್ಸ ಇದ್ದ ಕಾರಣ ನಾನು, ನನ್ನ ದಾಖಲಾತಿಗಳನ್ನು ತರಲು ನಾಗನಟಗಿ ದಾಮಲೂನಾಯಕ ತಾಂಡಕ್ಕೆ ಹೋದಾಗ ನನ್ನ ಗಂಡನ ಮನೆಯ ಮುಂದೆ ನನ್ನ ಗಂಡ ಮೈದುನ ಮತ್ತು ಮಾವ ಈ ಮೂರು ಜನರು ಸೂಳೆ ಮತ್ತೆ ಯಾಕೆ ಬಂದಿದಿ ಅಂತಾ ಅವಾಶ್ಚವಾಗಿ ಬೈಯ್ದು, ನನ್ನ ಗಂಡ ಕೈಯಿಂದ ನನ್ನ ಬೆನ್ನಿಗೆ ಹೊಡೆದಿರುತ್ತಾನೆ. ಕಿರಣ ಮತ್ತು ನೂರಸಿಂಗ ಈ ಸೂಳೆಗೆ ಮನೆಯಲ್ಲಿ ಬಿಡಬೇಡ ಅಂತಾ ಬೈಯ್ದಿರುತ್ತಾರೆ. ಅಂಗವಿಕಲನಾದ ನನ್ನ ಅಣ್ಣನಿಗೂ ಹೊಡೆಯಲು ಬಂದಿರುತ್ತಾರೆ ಆಗ ಶಂಕರ ತಂದೆ ದೇಸು ರಾಠೋಡ ಮತ್ತು ಥಾನು ರಾಠೋಡ ಇವರುಗಳು ನೋಡಿ ಬಿಡಿಸಿಕೊಂಡಿರುತ್ತಾರೆ. ಆಗ ಮೂರು ಜನರು ಮಕ್ಕಳೆ ನೀವು ಮತ್ತೆ ಈ ಕಡೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನನಗೆ ಸದ್ಯ ಯಾವುದೆ ಗಾಯಗಳಾಗಿರುವದಿಲ್ಲ ಕಾರಣ ನಾನು ಆಸ್ಪತ್ರೆಗೆ ಹೋಗುವದಿಲ್ಲ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಅಜರ್ಿ ಕೊಟ್ಟಿದ್ದು ಇರುತ್ತದೆ. ಕಾರಣ ನನಗೆ ಮಾನಸಿಕವಾಗಿ ದೈಹಿಕವಾಹಿ ಹಿಂಸೆ ಮಾಡಿ ವಿನಾಃ ಕಾರಣ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ  ಜೀವ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮಲ್ಲಿ ವಿನಂತಿ.ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 171/2018 ಕಲಂ:498(ಎ),323,324,504, 506 ಸಂ: 34 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!