ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-11-2018

By blogger on ಮಂಗಳವಾರ, ನವೆಂಬರ್ 27, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-11-2018 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:-223/2018 ಕಲಂ 323, 341, 504, 506 ಸಂ: 34 ಐಪಿಸಿ:-ದಿನಾಂಕ 26-11-2018 ರಂದು 12 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಭೀಮರಾಯ ತಂದೆ ಹಣಮಂತ ಯಡ್ಡಳ್ಳೇರ ವಯಾ:40 ಉ:ಒಕ್ಕಲುತನ ಜಾ:ಮಾದರ (ಎಸ್.ಸಿ)  ಸಾ; ಬಾಚವಾರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ 25-11-2018 ರಂದು ನಮ್ಮ ಗ್ರಾಮಕ್ಕೆ ಮೌನೇಶ್ವರ ಗುಡಿಯ ಉದ್ಘಾಟನೆ ಸಲುವಾಗಿ ಶಹಾಪೂರದ ಗುರುಗಳು ಹಾಗೂ ಇತರೇ ಸಾಧು ಸಂತರು ಬಂದಿದ್ದರು. ಸಾಯಂಕಾಲ 4 ಗಂಟೆ ಸುಮಾರಿಗೆ ಮೌನೇಶ್ವರ ಗುಡಿಯ ಹತ್ತಿರ ಪೆಂಡಾಲ ಹೊಡೆದು ಕಾರ್ಯಕ್ರಮ ನಡೆದಿತ್ತು. ಆಗ ನಮ್ಮ ಗ್ರಾಮದ ಸುಮಾರು ಜನರು ವೇದಿಕೆ ಮೇಲೆರಿ ಗದ್ದಲ ಮಾಡುತ್ತಿದ್ದಾಗ ಆಗ ನಾನು ಅವರ ಹತ್ತಿರ ಹೋಗಿ ಮಾಹಾ ಗುರುಗಳು ಬಂದಿದ್ದಾರೆ ಅವರ ಹಿತವಚನ ಕೇಳಲಿಕ್ಕೆ  ಅವರನ್ನು ನಮ್ಮೂರಿಗೆ ಬರಮಾಡಿಕೊಂಡಿದ್ದೆವೆ ಹೀಗೆಲ್ಲಾ ಗದ್ದಲ ಮಾಡಿದರೇ ಹೇಗೆ ಅಂತಾ ಕೇಳಿದಾಗ ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ 1) ಭೀಮರಾಯ ತಂದೆ ಮಲ್ಲಪ್ಪ ಡೊಂಕನೋರ 2) ಮರೆಪ್ಪಾ ತಂದೆ ಮಲ್ಲಪ್ಪಾ ಡೊಂಕನೋರ ಮತ್ತು 3) ತಿಮ್ಮಣ್ಣಾ ತಂದೆ ಚನ್ನಬಸಪ್ಪಾ ಡೊಂಕನೋರ ಈ ಮೂರು ಜನರು ಬಂದವರೇ ನನಗೆ ಸುತ್ತುಗಟ್ಟಿ ಎಲೇ ಭೋಸಡಿ ಮಗನೇ ನಿನಾರು ನನಗೆ ಕೇಳುವವ ಇದ್ದು ನಿಮ್ಮಪ್ಪನ ಜ್ಯಾಗೆಯಲ್ಲಾ ಅಂತಾ ನನಗೆ ಬೈಯ್ಯುತ್ತಿದ್ದಾಗ ಆಯ್ತು ನಿಮಗೆ ಅಂದಿದ್ದು ತಪ್ಪಾಯಿತು ಅಂತಾ ನಾನು ನನ್ನಷ್ಟಕ್ಕೆ ನಮ್ಮ ಮನೆಯ ಕಡೆಗೆ ಹೊರಟಾಗ ಆ ಮೂರು ಜನರು ನನಗೆ ಮುಂದೆ ಹೋಗದಂತೆ ಅಡ್ಡಗಟ್ಟಿದರು. ಆಗ ನಾನು ನನ್ನದು ತಪ್ಪಾಗಿದೆ ಅಂತಾ ಹೊರಟಾಗ ಅವರು ಈ ಹಿಂದೆ ಎಲ್ಲಮ್ಮ ದೇವಿಯ ಗುಡಿಯ ಲೆಕ್ಕ ಪತ್ರ ಕೇಳಿ ನಮ್ಮ ಸಮಜಾದ ಮಾನ ಮರ್ಯಾರೆ ಕಳೇದಿದ್ದಿ ಸೂಳೇ ಮಗನೇ ಅಂತಾ ಅಂದವರೇ ಅವರಲ್ಲಿ ಭೀಮರಾಯ ತಂದೆ ಮಲ್ಲಪ್ಪಾ ಇತನು ಕೈಮುಷ್ಟಿ ಮಾಡಿ ನನ್ನ ತೆಲೆ ಹಿಂಬದಿಗೆ ಹೊಡೆದನು. ಮರೆಪ್ಪಾ ತಂದೆ ಮಲ್ಲಪ್ಪಾ ಡೊಂಕನೋರ ಕೈಯಿಂದ ಕಪಾಳದ ಮೇಲೆ ಹೊಡೆದನು.  ಮತ್ತು ತಿಮ್ಮಣ್ಣಾ ತಂದೆ ಚನ್ನಬಸಪ್ಪಾ ಡೊಂಕನೋರ ಇತನು ಕೈಮುಷ್ಟಿ ಮಾಡಿ ನನ್ನ ಬಲಪಕ್ಕೆಗೆ ಹೊಡೆದನು. ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ ದೇವಪ್ಪಾ ತಂದೆ ಯಲ್ಲಪ್ಪಾ ಜಕನಳ್ಳೇರ, ಯಲ್ಲಪ್ಪಾ ತಂದೆ ಭೀಮರಾ ಹೆಳವರ ಹಾಗೂ ನರಸಪ್ಪಾ ತಂದೆ ಭೀಮರಾಯ ಚಿಂಚವಾರ ಇತನು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರು ಇನ್ನೊಮ್ಮೆ ಸಿಗು ರಂಡಿ ಮಗನೇ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿದರು.  ಈ ಘಟನೆಯ ಬಗ್ಗೆ ನಾನು ಹಿರಿಯರೊಂದಿಗೆ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದು ಹೇಳಿಕೆ ನೀಡಿದ್ದು ಈ ಬಗ್ಗೆ ಮೇಲ್ಕಂಡ ಮೂರು ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 223/2018 ಕಲಂ 323, 341, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು,

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:-136/2018 279,337,338,304(ಎ)ಐಪಿಸಿ & 187ಐಎಂವಿ ಆ್ಯಕ್ಟ್:-ದಿನಾಂಕ:26/11/2018 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಫಿಯರ್ಾದಿ ಹಾಗು ಆಕೆಯ ಮಗಳಾದ ಸೋಪಿಮಾ @ ಹಸೀನಾ ಗಂಡ ಬಶೀರ ಮಟ್ಟಿಬಾಯಿ, ಸಂಗಡ ಇತರರು ಕೂಡಿ ಕೂಲಿ ಕೆಲಸಕ್ಕೆ ಅಂತಾ ತಿಪ್ಪಣ್ಣ ತಂದೆ ಅಯ್ಯಣ್ಣ ಮಾಲಿಬಿರಾದಾರ ಈತನ ಅಟೋ ಟಂಟಂ ನಂ:ಕೆಎ-33, 9112 ನೇದ್ದರಲ್ಲಿ ಕುಳಿತು ಧರಿಯಾಪುರದಿಂದ ಮುಡಬೂಳ ಕಡೆಗೆ ಹೊರಟಿದ್ದು, ಮುಂಜಾನೆ 9.30 ಗಂಟೆ ಸುಮಾರಿಗೆ ಸಾದ್ಯಾಪುರ ಕ್ರಾಸ್ ಇನ್ನು ಸ್ವಲ್ಪ ಮುಂದೆ ಇದ್ದು ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಹೊರಟಾಗ ಎದುರಿನಿಂದ ಒಬ್ಬ ಅಟೋ ಟಂಟಂ ನಂ: ಕೆಎ-33, ಎ-5474 ನೇದ್ದರ ಚಾಲಕನು ತನ್ನ ಎದುರಿಗೆ ಹೊರಟ ಒಂದು ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಅದಕ್ಕೆ ಸೈಡ್ ಹೊಡೆಯಲು ಅಂತಾ ತನ್ನ ಅಟೋ ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಫಿಯರ್ಾದಿ ಕುಳಿತ ಅಟೋ ಎದುರಿಗೆ ಬಂದಾಗ ನಮ್ಮ ಅಟೋ ಚಾಲಕ ಅಟೋವನ್ನು ಸ್ವಲ್ಪ ಎಡಕ್ಕೆ ತಗೆದುಕೊಂಡಾಗ ಎದುರಿನ ಅಟೋ ಚಾಲಕನು ನಮ್ಮ ಅಟೋ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಅಟೋ ನಿಲ್ಲಿಸಿ ಅಲ್ಲಿಂದ ಓಡಿ ಹೋದನು. ಅಪಘಾತದಲ್ಲಿ ಅಟೋ ರಸ್ತೆಯ ಎಡಪಕ್ಕದಲ್ಲಿ ಪಲ್ಟಿಯಾಗಿದ್ದರಿಂದ ಅಟೋದಲ್ಲಿದ್ದ ಸೋಪಿಮಾ @ ಹಸೀನಾ ಇವಳ ತಲೆಯ ಮೇಲೆ ಬಿದ್ದು ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಬಾಯಿಂದ ರಕ್ತ ಬಂದಿದ್ದು, ದೇವಕಿ ಇವಳ ತಲೆಗೆ, ಎಡ ಮುಖಕ್ಕೆ ರಕ್ತಗಾಯವಾಗಿದ್ದು, ಬಲ ಸೊಂಟಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ. ಇನ್ನುಳಿದವರಿಗೆ ಸಣ್ಣಪುಟ್ಟಗಾಯಗಳಾಗಿರುತ್ತವೆ. ನಂತರ ಫಿಯರ್ಾದಿಯ ಮಗಳಾದ ಸೋಫಿಯಾ ಹಾಗು ಗಾಯಾಳುಗಳಿಗೆ ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಹೊರಟಾಗ ಮಾರ್ಗ ಮಧ್ಯದಲ್ಲಿ ಮುಂಜಾನೆ 9.45 ಗಂಟೆ ಸುಮಾರಿಗೆ ಸೋಫಿಯಾ ಮೃತಪಟ್ಟಿರುತ್ತಾಳೆ. ಸದರಿ ಅಪಘಾತಕ್ಕೆ ಅಟೋ ಟಂಟಂ ನಂ: ಕೆಎ-33, ಎ-5474 ನೇದ್ದರ ಚಾಲಕ ಕಾರಣನಿದ್ದು,  ಈತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

 ಗೋಗಿ ಪೊಲೀಸ್ ಠಾಣೆ. ಗುನ್ನೆ ನಂ:-170/2018 ಕಲಂ:323, 325, 308, 504, 506 ಸಂಗಡ 34 ಐಪಿಸಿ:- ದಿನಾಂಕ: 25/11/2018 ರಂದು 09.00 ಪಿಎಂ ಕ್ಕೆ ಶಹಾಪುರ ಸರಕಾರಿ ಆಸ್ಪತ್ರೆ ಶಹಾಪುರದಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ. ಬಾಬುಸಾಬ ತಂದೆ ದಾವಲಸಾಬ ಖುರೇಷಿ ವಯಾ:45 ವರ್ಷ ಉ: ಗೌಂಡಿ ಕೆಲಸ ಜಾ: ಮುಸ್ಲಿಂ ಸಾ: ಸುರಪೂರ ಹಾ:ವ; ಗೋಗಿ ಕೆ ತಾ: ಶಹಾಪೂರ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು ಸದರಿಯವರ ಹೇಳಿಕೆ ಸಾರಂಶ ಏನಂದರೆ, ನನ್ನ ಸಣ್ಣ ಮಗನಾದ ಅಲೀಮ ಈತನು ಗೋಗಿ ಕೆ ಗ್ರಾಮದ ಚಂದಾಸಬ ಇವರ ಮಗಳಾದ ಅಪ್ಸಾನ ಬೇಗಂ ಇವರೊಂದಿಗೆ ಪ್ರೀತಿಸಿ ಮದುವೆ ಆಗಿರುತ್ತಾನೆ. ಈಗ ನನ್ನ ಮಗ ಅಲೀಮ ಮತ್ತು ಸೋಸೆ ಅಪ್ಸಾನ ಬೇಗಂ ಇಬ್ಬರು ಬೆಂಗಳೂರಿನಲ್ಲಿ ಇರುತ್ತಾರೆ. 
ಹೀಗಿದ್ದು, ಇಂದು ದಿನಾಂಕ:25/11/2018 ರಂದು ನಾನು ನಮ್ಮ ಮಾವನಾದ ಮಲಿಕಸಾಬ ತಂದೆ ನಬಿಸಾಬ ಇವರ ಮನೆಯಲ್ಲಿ ಸಾಯಂಕಾಲ 07 ಪಿಎಂ ಸುಮಾರಿಗೆ ಊಟ ಮಾಡುತ್ತಾ ಮಾಳಗಿಯ ಕುಂಬಿ ಮೇಲೆ ಏರಿದ್ದೆನು. ಅದೆ ಸಮಯಕ್ಕೆ ನಮ್ಮ ಸೋಸೆ ಅಣ್ಣ-ತಮ್ಮಂದಿರಾದ 1) ಬಾಷಾಸಾಬ ತಂದೆ ಸೋಪಿಸಾಬ ಖುರೇಷಿ 2) ಲಾಲನಸಾಬ ತಂದೆ ಸೋಪಿಸಾಬ ಖುರೇಷಿ 3) ಬಡೆಸಾಬ ತಂದೆ ಸೋಪಿಸಾಬ ಖುರೇಸಿ 4) ಅಲ್ಲಾಭಕ್ಷ ತಂದೆ ಗೌವುಸ್ ಖುರೇಷಿ ಇವರು ನಾಲ್ಕು ಜನರು ಏ ಬೋಸಡಿಕೆ ನಮ್ಮ ತಂಗಿಗೆ ಬೆಂಗಳೂರಿಗೆ ದುಡಿಯಲು ಕಳುಹಿಸಿ ಇಲ್ಲ ನಮ್ಮ ಮುಂದೆ ಆರಾಮಾಗಿ ಕುಂತು ಊಟ ಮಾಡುತ್ತೇನಲೆ ಸೂವರ್ ಅಂತಾ ಅವಾಚ್ಚವಾಗಿ ಬೈಯುತ್ತಾ, ಬಡೆಸಾಬ ಈತನು ನಾನು ಕುಳಿತಲ್ಲಿಗೆ ಬಂದು ಕೈಯಿಂದ ಕಪಾಳಕ್ಕೆ ಹೊಡೆದು, ನಾನು ಕೆಳಗೆ ಬಿದ್ದರೆ ಸಾಯುತ್ತೇನೆ ಅಂತಾ ಗೋತ್ತಿದ್ದರು ಕೂಡ ನನಗೆ ಮಾಳಗಿಯ ಮೇಲಿಂದ ದಬ್ಬಿಸಿಕೊಟ್ಟಿನು ನಾನು ಕೆಳಗೆ ಬಿದ್ದಾಗ ನನ್ನ ಬಲಗಾಲಿನ ತೋಡೆಯ ಹತ್ತಿರ ಭಾರಿಗಾಯ ಪೆಟ್ಟಾಗಿ ನನಗೆ ವೀಪರೀತ ನೋವು ಆಗುತ್ತಿತ್ತು. ಆಗ ಬಾಷಾಸಾಬ, ಲಾಲನಸಾಬ ಮತ್ತು ಅಲ್ಲಾಭಕ್ಷ ಇವರೆಲ್ಲರೂ ನನಗೆ ಕಾಲಿನಿಂದ ಒದೆಯುತ್ತಾ ಬೋಸಡಿ ಮಗನೆ ನಾಮ್ಮ ತಂಟೆಗೆ ಬಂದರೆ ನಿನಗೆ ಖಲಾಸ್ ಮಾಡಿ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿದರು. ಆಗ ನನಗೆ ಏನು ತೋಚದೆ ನೆಲದಲ್ಲಿ ಬಿದ್ದಾಗ ಅಲ್ಲೆ ಇದ್ದ ಅಲ್ಲಿಸಾಬ ತಂದೆ ನಬಿಸಾಬ ಖೂರೇಷಿ, ನಮ್ಮ ಮಾವನಾದ ಮಲಿಕಸಾಬ ತಂದೆ ನಬಿಸಾಬ ಮತ್ತು ನನ್ನ ದೊಡ್ಡ ಮಗ ಸಲಿಂಸಾಬ ತಂದೆ ಬಾಬುಸಾಬ ಖುರೇಷಿ ಎಲ್ಲರೂ ನೋಡಿ ಬಿಡಿಸಿಕೊಂಡಿರುತ್ತಾರೆ. ನಂತರ ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದುಸೇರಿಕೆ ಮಾಡಿರುತ್ತಾರೆ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ ಇಂದು ದಿ:26/11/2018 ರಂದು 00.25 ಎಎಂ ಕ್ಕೆ ಬಂದು ಠಾಣೆ ಗುನ್ನೆ ನಂ: 170/2018 ಕಲಂ:323, 325, 308, 504, 506 ಸಂಗಡ 34 ಐಪಿಸಿನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.    

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 94/2018  ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್:- ದಿನಾಂಕ 26/11/2018 ರಂದು ಸಾಯಂಕಾಲ 6 ಪಿ.ಎಂ. ಸುಮಾರಿಗೆ ಯಾದಗಿರಿ-ಶಹಾಪುರ  ಮುಖ್ಯ ರಸ್ತೆಯ ಮೇಲೆ  ಬರುವ ಬೀಮಾ ಬ್ರಿಜ್ ಹತ್ತಿರ  ಮುಖ್ಯ ರಸ್ತೆ ಮೇಲೆ ಫಿಯರ್ಾದಿಯವರ ತಂದೆಯಾದ ಗಾಯಾಳು ಶ್ರೀ ರಾಮಪ್ಪ ತಂದೆ ಚಂದ್ರಾಮಪ್ಪ ವಯ;68 ವರ್ಷ ಇವರು ವಾಕಿಂಗ್ ಕುರಿತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಯಾವುದೊ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳು ನೇರವಾಗಿ ಡಿಕ್ಕಿಕೊಟ್ಟು  ಅಪಗಾತ ಮಾಡಿದ್ದರಿಂದ ಸದರಿ ಅಪಗಾತದಲ್ಲಿ ಫಿಯರ್ಾದಿಗೆ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿದ್ದು,  ಬೆನ್ನಿಗೆ ತರಚಿದ ಗಾಯಗಳಾಗಿದ್ದು ಅಪಘಾತ ಪಡಿಸಿ ಓಡಿ ಹೋದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಆತನ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಬಗ್ಗೆ ಫಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ. 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 95/2018  ಕಲಂ 279, 337, 338 ಐಪಿಸಿ:-ದಿನಾಂಕ 26/11/2018 ರಂದು ರಾತ್ರಿ 10 ಪಿ.ಎಂ. ಸುಮಾರಿಗೆ ಯಾದಗಿರಿ ನಗರದ ಡಿಡಿಪಿಐ ಕಚೇರಿ  ಮುಂದೆ ಮುಖ್ಯ ರಸ್ತೆಯ ಮೇಲೆ  ಫಿಯರ್ಾದಿಯವರ ಗಂಡನಾದ ಗಾಯಾಳು ಶ್ರೀ ನಾಗಪ್ಪ ತಂದೆ ಸಾಬಣ್ಣ ಚಡಬೋ ವಯ;45 ವರ್ಷ ಇವರು ವಾಕಿಂಗ್ ಕುರಿತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-41, ಕ್ಯೂ-7213 ನೇದ್ದನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟು  ಅಪಗಾತ ಮಾಡಿದ್ದರಿಂದ ಸದರಿ ಅಪಗಾತದಲ್ಲಿ ಗಾಯಾಳು ನಾಗಪ್ಪ ಇವರ ಬಲಗಾಲಿನ ಮೊಣಕಾಲಿನ ಕೆಳಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಇರುತ್ತದೆ ಆರೋಪಿತನಿಗೆ ಕೂಡ ತಲೆಗೆ, ಸೊಂಟಕ್ಕೆ ರಕ್ತಗಾಯವಾಗಿದ್ದು ಇರುತ್ತದೆ ಆರೋಪಿತ ಅಮೀನರೆಡ್ಡಿ ಈತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!