ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-11-2018

By blogger on ಶನಿವಾರ, ನವೆಂಬರ್ 24, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-11-2018 

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 135/2018 ಕಲಂ 338, 304(ಎ) ಐಪಿಸಿ:-ದಿನಾಂಕ:23/11/2018 ರಂದು ಮುಂಜಾನೆಯಿಂದ ಕೆಲಸ ಮಾಡುತ್ತಾ ಮದ್ಯಾಹ್ನ 12.30 ಗಂಟೆ ಸುಮಾರಿಗೆ ಫಿಯರ್ಾದಿ ಹಾಗೂ ಲೇಬರ್ ಜನರು ಕೂಡಿ ಭೀ.ಗುಡಿಯ ಬಿ.ಎಸ್.ಎನ್.ಎಲ್ ಆಫಿಸ್ ಹತ್ತಿರ ಬಂದಾಗ ಅದರ ಮುಂದಿನ ರೋಡಿನ ಪಕ್ಕದಲ್ಲಿರುವ ಕೆ.ಇ.ಬಿ ಕಂಬಗಳ ಸವರ್ಿಸ್ ವೈರ್ನ್ನು ಬದಲಾಯಿಸಿ ಫೈಬರ್ ಕೇಬಲ್ ಅಳವಡಿಸಲು ಅಂತಾ ಮೃತ ರಫಿಯುಲ್ ಮೋಮಿನ್ ಹಾಗೂ ಸಾಜಿಮ್ ಶೇಖ್ ಇವರಿಗೆ ಲೇಬರ್ ಹೆಡ್ ಜಹೀರಖಾನ್, ಸುಪರವೈಜರ್ ಮನೋಜಕುಮಾರ ಇವರು ಕರೆದು ಕಂಬ ಹತ್ತಲು ಹೇಳಿದ್ದರಿಂದ ಸದರಿಯವರು ಎಂದಿನಂತೆ ಕೆ.ಇ.ಬಿ ಯವರಿಂದ ಎಲ್.ಸಿ ತೆಗೆದುಕೊಂಡಿರಬಹುದು ಅಂತಾ ಭಾವಿಸಿ ಯಾವುದೇ ಸುರಕ್ಷಾ ಸಲಕರಣೆ ಇಲ್ಲದೇ ಕಂಬ ಹತ್ತಿದಾಗ ಹೈ ಟೆನ್ಷನ್ ಸವರ್ಿಸ್ ವೈರ ರಫಿಯುಲ್ ಮೋಮಿನ ಈತನ ಎಡ ತಲೆಗೆ ತಾಗಿ ಕರೆಂಟ್ ಶಾಕ್ ಹೊಡೆದು ಎಡ ತಲೆಗೆ, ಎಡ ಮುಖಕ್ಕೆ, ಕುತ್ತಿಗೆಗೆ, ಎರಡೂ ಅಂಗೈಗಳಿಗೆ, ಎರಡೂ ಅಂಗಾಲುಗಳಿಗೆ ಭಾರಿ ಸುಟ್ಟಗಾಯಗಳಾಗಿ ಕೆಳಗೆ ಬಿದ್ದನು. ಅದರಂತೆಯೇ ಸಾಜಿಮಶೇಖ್ ಈತನ ಬಲಗಾಲ ತೊಡೆಗೆ ಕರೆಂಟ್ ಶಾಕ್ ಹೊಡೆದು ಭಾರಿ ರಕ್ತಗಾಯವಾಗಿ ಕೆಳಗೆ ಬಿದ್ದನು. ಆಗ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ವೈದ್ಯಕೀಯ ಉಪಚಾರ ಕುರಿತು ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ರಫಿಯುಲ್ ಮೋಮಿನ್ ಈತನು ಉಪಚಾರ ಹೊಂದುತ್ತಾ ಮದ್ಯಾಹ್ನ 12.45 ಗಂಟೆ ಸುಮಾರಿಗೆ ಮೃತಪಟ್ಟನು. ಸಾಜಿಮಶೇಖ್ ಈತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಒಯ್ಯಲು ಹೇಳಿದ್ದರಿಂದ ಇತರೆ ಲೇಬರ್ ಜನರು ಕೂಡಿ ಸಾಜಿಮ್ ಶೇಖ್ ಈತನಿಗೆ ಕಲಬುರಗಿಗೆ 108 ಅಂಬುಲನ್ಸ್ ವಾಹನದಲ್ಲಿ ಕರೆದುಕೊಂಡು ಹೋದರು. ಕಾರಣ ಲೇಬರ್ ಹೆಡ್ ಜಹೀರಖಾನ್, ಸುಪರವೈಜರ್ ಮನೋಜಕುಮಾರ ಇವರು ಕೆ.ಇ.ಬಿ ಇಲಾಖೆಯವರಿಂದ ಎಲ್.ಸಿ ಪಡೆಯುವದನ್ನು ಲಕ್ಷಿಸದೇ, ಸೈಟ್ ಇಂಜಿನಿಯರ್ ಹಸನ್ ಹಾಗೂ ಪ್ರೊಜೆಕ್ಟ್ ಮ್ಯಾನೇಜರ್ ಕಲ್ಯಾಣ ಹುಂಡೆಲಕರ್ ಇವರು ಯಾವುದೇ ಸುರಕ್ಷತಾ ಸಲಕರಣೆಗಳನ್ನು ನೀಡದೇ ನಿರ್ಲಕ್ಷವಹಿಸಿ ರಫಿಯುಲ್ ಮೋಮಿನ್ ಹಾಗೂ ಸಾಜಿಮ್ ಶೇಖ್ ಇವರಿಗೆ ಕೆ.ಇ.ಬಿ ಕಂಬ ಹತ್ತಿಸಿ ವೈರ್ ಬದಲಾವಣೆ ಮಾಡುವ ಕೆಲಸ ಹಚ್ಚಿದ್ದರಿಂದ ಇಬ್ಬರಿಗೂ ಕರೆಂಟ್ ಶಾಕ್ ಹೊಡೆದು ರಫಿಯುಲ್ ಮೋಮಿನ್ ಈತನು ಮೃತಪಟ್ಟಿದ್ದು, ಸಾಜಿಮ್ ಶೇಖ್ ಈತನು ಭಾರಿ ರಕ್ತಗಾಯಗೊಂಡಿದ್ದು ಇರುತ್ತದೆ.
    
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:-91/2018  ಕಲಂ 279,  337, 338 ಐಪಿಸಿ:- ದಿನಾಂಕ 23/11/2018 ರಂದು ಸಾಯಂಕಾಲ 3 ಪಿ.ಎಂ. ಸುಮಾರಿಗೆ ಯಾದಗಿರಿ-ನಗರದ ಶಾಸ್ತ್ರಿ ವೃತ್ತ-ಗಾಂಧಿಚೌಕ್ ಮುಖ್ಯ ರಸ್ತೆಯ ಮೇಲೆ  ಬರುವ ಮೆಥೋಡಿಸ್ತ್ ಚರ್ಚ ಮುಂದಿನ ಮುಖ್ಯ ರಸ್ತೆ ಮೇಲೆ ಫಿಯರ್ಾದಿಯವರು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮರಳಿ  ತಮ್ಮ ತಾಂಡಾಕ್ಕೆ ಹೋಗುವ ಸಲುವಾಗಿ ಬಸ್ ನಿಲ್ದಾಣದ ಕಡೆಗೆ  ರಸ್ತೆ ಬದಿಯಲ್ಲಿ ನಡೆದುಕೊಂಡು  ಹೊರಟಿದ್ದಾಗ  ಫಿಯರ್ಾದಿ ಎದುರುಗಡೆ ಶಾಸ್ತ್ರಿ ವೃತ್ತದಿಂದ ಬರುತ್ತಿದ್ದ  ಮೋಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-33, ಕೆ-930 ನೇದ್ದರ ಸವಾರನು ತನ್ನ ಮೊಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಫಿಯರ್ಾದಿಗೆ ನೇರವಾಗಿ ಡಿಕ್ಕಿಕೊಟ್ಟು  ಅಪಗಾತ ಮಾಡಿದ್ದರಿಂದ ಸದರಿ ಅಪಗಾತದಲ್ಲಿ ಫಿಯರ್ಾದಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು,  ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಮತ್ತು ಮೋಟಾರು ಸೈಕಲ್ ಸವಾರನಿಗೆ ಕೂಡ ಸದರಿ ಅಪಗಾತದಲ್ಲಿ ಬಲಗಡೆ ಹುಬ್ಬಿಗೆ, ಮುಖಕ್ಕೆ, ಎಡಗೈಗೆ, ಎಡಗಾಲಿಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ.  ಈ ಘಟನೆ ಬಗ್ಗೆ ಆರೋಪಿತರು ಮತ್ತು ಫಿಯರ್ಾದಿಯವರು ರಾಜಿ ಮಾಡಿಕೊಳ್ಳುವ ಸಲುವಾಗಿ ಮಾತನಾಡಿದ್ದು ರಾಜಿ ಪಂಚಾಯತಿ ಬಗೆಹರಿಯದ ಕಾರಣ ಇಂದು ದಿನಾಂಕ 23/11/2018 ರಂದು 9 ಪಿ.ಎಂ.ಕ್ಕೆ ತಡವಾಗಿ ಫಿಯರ್ಾದಿ ನೀಡಿದ್ದು ಮೋ.ಸೈಕಲ್ ನಂ.ಕೆಎ-33, ಕೆ-930 ನೇದ್ದರ ಸವಾರ ಕಲೀಂಬಾಬಾ ಈತನ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಬಗ್ಗೆ ಫಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ. 
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 91/2018  ಕಲಂ 279,  337, 338 ಐಪಿಸಿ:-ದಿನಾಂಕ 23/11/2018 ರಂದು ಸಾಯಂಕಾಲ 3 ಪಿ.ಎಂ. ಸುಮಾರಿಗೆ ಯಾದಗಿರಿ-ನಗರದ ಶಾಸ್ತ್ರಿ ವೃತ್ತ-ಗಾಂಧಿಚೌಕ್ ಮುಖ್ಯ ರಸ್ತೆಯ ಮೇಲೆ  ಬರುವ ಮೆಥೋಡಿಸ್ತ್ ಚರ್ಚ ಮುಂದಿನ ಮುಖ್ಯ ರಸ್ತೆ ಮೇಲೆ ಫಿಯರ್ಾದಿಯವರು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮರಳಿ  ತಮ್ಮ ತಾಂಡಾಕ್ಕೆ ಹೋಗುವ ಸಲುವಾಗಿ ಬಸ್ ನಿಲ್ದಾಣದ ಕಡೆಗೆ  ರಸ್ತೆ ಬದಿಯಲ್ಲಿ ನಡೆದುಕೊಂಡು  ಹೊರಟಿದ್ದಾಗ  ಫಿಯರ್ಾದಿ ಎದುರುಗಡೆ ಶಾಸ್ತ್ರಿ ವೃತ್ತದಿಂದ ಬರುತ್ತಿದ್ದ  ಮೋಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-33, ಕೆ-930 ನೇದ್ದರ ಸವಾರನು ತನ್ನ ಮೊಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಫಿಯರ್ಾದಿಗೆ ನೇರವಾಗಿ ಡಿಕ್ಕಿಕೊಟ್ಟು  ಅಪಗಾತ ಮಾಡಿದ್ದರಿಂದ ಸದರಿ ಅಪಗಾತದಲ್ಲಿ ಫಿಯರ್ಾದಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು,  ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಮತ್ತು ಮೋಟಾರು ಸೈಕಲ್ ಸವಾರನಿಗೆ ಕೂಡ ಸದರಿ ಅಪಗಾತದಲ್ಲಿ ಬಲಗಡೆ ಹುಬ್ಬಿಗೆ, ಮುಖಕ್ಕೆ, ಎಡಗೈಗೆ, ಎಡಗಾಲಿಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ.  ಈ ಘಟನೆ ಬಗ್ಗೆ ಆರೋಪಿತರು ಮತ್ತು ಫಿಯರ್ಾದಿಯವರು ರಾಜಿ ಮಾಡಿಕೊಳ್ಳುವ ಸಲುವಾಗಿ ಮಾತನಾಡಿದ್ದು ರಾಜಿ ಪಂಚಾಯತಿ ಬಗೆಹರಿಯದ ಕಾರಣ ಇಂದು ದಿನಾಂಕ 23/11/2018 ರಂದು 9 ಪಿ.ಎಂ.ಕ್ಕೆ ತಡವಾಗಿ ಫಿಯರ್ಾದಿ ನೀಡಿದ್ದು ಮೋ.ಸೈಕಲ್ ನಂ.ಕೆಎ-33, ಕೆ-930 ನೇದ್ದರ ಸವಾರ ಕಲೀಂಬಾಬಾ ಈತನ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಬಗ್ಗೆ ಫಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 201/2018 ಕಲಂ:279,338 ಐಪಿಸಿ ಸಂ 187 ಐಎಮ್ವಿ ಎಕ್ಟ್:- ದಿನಾಂಕ: 23/11/2018 ರಂದು 7-30 ಪಿಎಮ್ ಕ್ಕೆ ಶ್ರೀ ಧನಸಿಂಗ ತಂದೆ ಭೋಜಪ್ಪ ಚವ್ಹಾಣ, ವ:50 ವರ್ಷ, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಸಂಬಂಧಿಕಳಾದ ಲಕ್ಷ್ಮೀಬಾಯಿ ಗಂಡ ದಾವಜಿ ವ: 60 ವರ್ಷ ಇವಳು ದನಕಾಯುವ ಕೆಲಸ ಮಾಡಿಕೊಂಡು ವಾಸವಾಗಿರುತ್ತಾಳೆ. ಹೀಗಿದ್ದು ದಿನಾಂಕ:13/11/2018 ರಂದು ರಾತ್ರಿ 8-40 ಗಂಟೆ ಸುಮಾರಿಗೆ ನಮ್ಮ ತಾಂಡಾದ ಬಾಷಾ ತಂದೆ ಲಕ್ಷ್ಮಣ ಇತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ಕೆಲಸದ ನಿಮಿತ್ಯ ನಾನು ಮತ್ತು ನನ್ನ ಮಗ ರೆಡ್ಡಿ ಇಬ್ಬರೂ ನಮ್ಮ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಹೋಗಿ ಮರಳಿ ಬರುತ್ತಿರುವಾಗ ಯಾದಗಿರಿ-ಶಹಾಪೂರ ಮೇನ್ ರೋಡ ಮನಗನಾಳ ಹತ್ತಿ ಮಿಲ್ ಹತ್ತಿರ ನಿಮ್ಮ ಸಂಬಂಧಿಕಳಾದ ಲಕ್ಷ್ಮೀಬಾಯಿ ಗುಂಡಳ್ಳಿ ಮಾರೆಮ್ಮಾಯಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದವಳಿಗೆ ಒಂದು ಮೋಟರ್ ಸೈಕಲ್ ನಂ. ಕೆಎ 33 ಡಬ್ಲ್ಯೂ 0794 ನೇದ್ದನ್ನು ಅದರ ಸವಾರ ದೀಪಕಕುಮಾರ ತಂದೆ ಪ್ರಭಾಕರ ಸಾ:ವಿದ್ಯಾನಗರ ಕಲಬುರಗಿ ಈತನು ಮೋಟರ್ ಸೈಕಲನ್ನು ಯಾದಗಿರಿ ಕಡೆಯಿಂದ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಲಕ್ಷ್ಮೀಬಾಯಿಗೆ ಅಫಘಾತಪಡಿಸಿ, ಸ್ವಲ್ಪ ಆ ಕಡೆ ಈ ಕಡೆ ನೋಡುತ್ತಿದ್ದಾಗ ನಾನು ಮತ್ತು ನನ್ನ ಮಗ ರೆಡ್ಡಿ ಇಬ್ಬರೂ ಹೋಗಿ ಅವನಿಗೆ ಕೇಳಿದಾಗ ಅವನು ತನ್ನ ಹೆಸರು ಹೇಳಿ ಗಾಯಾಳುಗೆ ಆಸ್ಪತ್ರೆಗೆ ಒಯ್ಯಲು ಯಾವುದಾದರು ಗಾಡಿ ತರುತ್ತೇನೆ ಎಂದು ನೆಪ ಹೇಳಿ ಮೋಟರ್ ಸೈಕಲ್ ಸಮೇತ ಪರಾರಿಯಾದನು ಎಂದು ಹೇಳಿದರು. ಆಗ ಕೂಡಲೇ ನಾನು ಸ್ಥಳಕ್ಕೆ ಹೋಗಿ ಲಕ್ಷ್ಮೀಬಾಯಿಗೆ ನೋಡಲಾಗಿ ಅಪಘಾತದಲ್ಲಿ ಲಕ್ಷ್ಮೀಬಾಯಿಯ ಎಡಗಾಲಿಗೆ ಭಾರಿ ರಕ್ತಗಾಯವಾಗಿತ್ತು. ನಂತರ ನಾವು ಲಕ್ಷ್ಮೀಬಾಯಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಪ್ರಥಮ ಉಪಚಾರ ಮಾಡಿಸಿ, ತಕ್ಷಣ ಅಲ್ಲಿನ ವೈದ್ಯಾಧಿಕಾರಿಗಳ ಸಲಹೆಯಂತೆ ಕಲಬುರಗಿ ಯುನೈಟೆಡ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೇವೆ. ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದ್ದರಿಂದ ಪೊಲೀಸರು ಬಂದು ನಮಗೆ ವಿಚಾರ ಮಾಡಿಕೊಂಡು ಹೋಗಿದ್ದರು. ಹೀಗಾಗಿ ಪೊಲೀಸ್ ಕೇಸ ಆಗಿರಬಹುದು ಎಂದು ತಿಳಿದುಕೊಂಡು ಸುಮ್ಮನಾಗಿದ್ದೆವು. ಆದರೆ ಅಪಘಾತದ ಬಗ್ಗೆ ಇನ್ನು ಪೊಲೀಸ್ ಕೇಸ ಆಗಿರುವುದಿಲ್ಲ ಅಂತಾ ಈಗ ನನಗೆ ಗೊತ್ತಾಗಿ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇವೆ. ಕಾರಣ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಲಕ್ಷ್ಮೀಬಾಯಿಗೆ ಅಪಘಾತಪಡಿಸಿದ ಮೋಟರ್ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 201/2018 ಕಲಂ: 279,338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!