ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-11-2018

By blogger on ಗುರುವಾರ, ನವೆಂಬರ್ 22, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-11-2018 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 87/2018  ಕಲಂ 279,  304(ಎ) ಐಪಿಸಿ:-ದಿನಾಂಕ 20/11/2018  ರಂದು 11-30 ಪಿ.ಎಂ.ಕ್ಕೆ  ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ  ಆರ್.ಟಿ.ಎ ಡೆತ್ ಎಂ.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ನೀಡಿದ್ದು, ಯಾದಗಿರಿ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಿದ್ದು ಆಸ್ಪತ್ರೆಯಲ್ಲಿ ಮೃತನ ತಂದೆಯಾದ ಶ್ರೀ ಅಬ್ದುಲ್ ರೆಹಮಾನ್ ತಂದೆ ಅಬ್ಬಾ ಸಲಿಂ ಶೇಕ್ ವಯ;47 ವರ್ಷ, ಜಾ;ಮುಸ್ಲಿಂ, ಉ;ಸೆಂಟ್ರಿಂಗ್ ಕೆಲಸದ ಕಾಂಟ್ರ್ಯಾಕ್ಟರ್, ಸಾ;ಮದನಪುರ ಗಲ್ಲಿ, ಯಾದಗಿರಿ  ಇವರು ಹಾಜರಿದ್ದು ತಮ್ಮದೊಂದು ಫಿಯರ್ಾದು ಹೇಳಿಕೆ ನೀಡಿದ್ದನ್ನು ಇಂದು ದಿನಾಂಕ 20/11/2018 ರಂದು 11-45 ಪಿ.ಎಂ. ದಿಂದ ದಿನಾಂಕ 21/11/2018 ರ 00-45 ಎ.ಎಂ. ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಸೆಂಟ್ರಿಂಗ್ ಕೆಲಸದ ಕಾಟ್ರ್ಯಾಂಕ್ಟರ್ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಇಂದು ದಿನಾಂಕ 20/11/2018 ರಂದು ರಾತ್ರಿ 10 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಎರಡನೇ ಮಗನಾದ ಅಬ್ದುಲ್ ನಬೀ ಈತನು ರೇಲ್ವೇ ಸ್ಟೇಷನ್ ಕಡೆಗೆ ತನ್ನ ಕೆಲಸವಿದೆ ಹೋಗಿ ಬರುತ್ತೇನೆಂದು ನಮ್ಮ ಮೋಟಾರು ಸೈಕಲ್ ನಂಬರ ಕೆಎ-25, ಇಟಿ-7038 ನೇದ್ದನ್ನು ತೆಗೆದುಕೊಂಡು ನಮಗೆ ಹೇಳಿ ಹೋಗಿದ್ದು ಇರುತ್ತದೆ.  ಹೀಗಿದ್ದು ಸ್ವಲ್ಪ ಸಮಯದ ನಂತರ ಅಂದಾಜು 11-30 ಪಿ.ಎಂ. ಸುಮಾರಿಗೆ ನನಗೆ ನನ್ನ ತಮ್ಮನಾದ ಶೇಕ್ ಜಿಲಾನಿ ತಂದೆ ಅಬ್ಬಾಸಲಿಂ ಶೇಕ್ ಸಾ;ಮದನಪುರ ಗಲ್ಲಿ ಯಾದಗಿರಿ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನಮ್ಮ ಸಂಬಂಧಿ ಶ್ರೀ ಮಹ್ಮದ್ ದಸ್ತಗಿರಿ ತಂದೆ ಮಹ್ಮದ್ ಯೂಸುಫ್ ಸಾ;ಯಾದಗಿರಿ ಇಬ್ಬರು ಕೂಡಿಕೊಂಡು ಯಾದಗಿರಿ ನಗರದ ಲುಂಬಿನಿ ಗಾರ್ಡನ್ ಹತ್ತಿರದ ಸಭಾ ಕಾಲೇಜು ಮುಂದೆ ಮಾತನಾಡುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ನಿಮ್ಮ ಮಗನಾದ ಅಬ್ದುಲ್ ನಬೀ ಈತನು ಕೋಟರ್ು ರಸ್ತೆ ಕಡೆಯಿಂದ ಗಾಂಧಿ ಚೌಕ್ ಕಡೆಗೆ ಹೊರಟಾಗ ನಮ್ಮನ್ನು ನೋಡಿ ನಾವು ನಿಂತಲ್ಲಿಗೆ ಬಂದು ನಮ್ಮೊಂದಿಗೆ ಮಾತನಾಡುತ್ತಾ ನಿಂತು ಸ್ವಲ್ಪ ಸಮಯದ ನಂತರ ಮನೆಗೆ ಹೋಗುತ್ತೇನೆಂದು ತನ್ನ ಮೋಟಾರು ಸೈಕಲ್ ನಂಬರ ಕೆಎ-25, ಇಟಿ-7038 ನೇದ್ದನ್ನು ಚಾಲು ಮಾಡಿಕೊಂಡು ಸಭಾ ಕಾಲೇಜು ಕಡೆಯಿಂದ ಗಾಂಧಿಚೌಕ್ ಕಡೆಗೆ ಹೊರಟಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ಕೋಟರ್ು ರಸ್ತೆ ಕಡೆಯಿಂದ ಗಾಂಧಿಚೌಕ್ ಕಡೆಗೆ ಹೊರಟಿದ್ದ ಒಂದು ಡಿಸಿಎಂ ಗೂಡ್ಸ್  ಈಚರ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನಿಮ್ಮ ಮಗನ ಮೋಟಾರು ಸೈಕಲ್ ನೇದ್ದಕ್ಕೆ ಓವರ್ ಟೇಕ್ ಮಾಡುವಾಗ ಬಲಗಡೆ ಸೈಡಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಡಿಕ್ಕಿಕೊಟ್ಟ ರಭಸಕ್ಕೆ ನಿಮ್ಮ ಮಗನು ಮೋಟಾರು ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಾಗ  ನಾವಿಬ್ಬರು ಓಡೋಡಿ ಘಟನಾ ಸ್ಥಳಕ್ಕೆ ಬಂದು ನೋಡಲು ಸದರಿ ಅಪಘಾತದಲ್ಲಿ ನಿಮ್ಮ ಮಗ ಅಬ್ದುಲ್ ನಬೀ ಈತನಿಗೆ ತಲೆಗೆ, ಮುಖಕ್ಕೆ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಬೆನ್ನಿಗೆ, ಸೊಂಟಕ್ಕೆ, ಭುಜಗಳಿಗೆ ಭಾರೀ ಗುಪ್ತಗಾಯ ಮತ್ತು ತರಚಿದ ರಕ್ತಗಾಯಗಳಾಗಿದ್ದು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಡಿಸಿಎಂ ಗೂಡ್ಸ್ ಈಚರ್ ವಾಹನವು  ಸ್ಥಳದಲ್ಲಿದ್ದು ಅದರ ನಂಬರ್ ಎಮ್.ಎಚ್-13, ಆರ್-4785 ನೇದ್ದು ಇದ್ದು, ಅದರ ಚಾಲಕನು ಕೂಡ ಸ್ಥಳದಲ್ಲಿದ್ದು ಆತನ ಹೆಸರು, ವಿಳಾಸ ವಿಚಾರಿಸಲು ತನ್ನ ಹೆಸರು ಅಬುಬಕರ್ @ ಬಾಬಾ ತಂದೆ ಅಬ್ದುಲ್ ರಸೂಲ್ ಸಾ;ಆಸರ ಮೊಹಲ್ಲಾ ಯಾದಗಿರಿ ಅಂತಾ ತಿಳಿಸಿರುತ್ತಾನೆ. ಸದರಿ ಘಟನೆಯು ಇಂದು ದಿನಾಂಕ 20/11/2018 ರಂದು ಅಂದಾಜು 11 ಪಿ.ಎಂ.ಕ್ಕೆ  ಸಭಾ ಕಾಲೇಜು ಮುಂದಿನ ಮುಖ್ಯ ರಸ್ತೆ ಮೇಲೆ ಜರುಗಿದ್ದು ನಾವಿಬ್ಬರು ನಿಮ್ಮ ಮಗ ಅಬ್ದುಲ್ ನಬೀ ಈತನಿಗೆ ಉಪಚಾರಕ್ಕಾಗಿ ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಅಬ್ದುಲ್ ನಬೀ ಈತನಿಗೆ ಉಪಚಾರ ನೀಡಲು ಪರಿಶೀಲಿಸಿದಾಗ ರಸ್ತೆ ಅಪಘಾತದಲ್ಲಾದ ಗಾಯದ ಬಾಧೆಯಿಂದ ಸಮಯ 11-30 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ನೀವು ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಬೇಕು ಅಂದಾಗ  ನನಗೆ ಗಾಬರಿಯಾಗಿ ಮನೆಯಲ್ಲಿದ್ದ ಹಿರಿಮಗ ಮಹ್ಮದ್ ಇಮ್ರಾನ್ ಈತನಿಗೆ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನಗೆ ಈ ಮೇಲೆ ನನ್ನ ತಮ್ಮನಾದ ಶೇಕ್ ಜಿಲಾನಿ ಇವರು ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನನ್ನ ಮಗ ಅಬ್ದುಲ್ ನಬೀ ಈತನು ರಸ್ತೆ ಅಪಘಾತದಲ್ಲಾದ ಗಾಯಗಳಿಂದ ಮೃತಪಟ್ಟಿದ್ದು ಇರುತ್ತದೆ. ಆಸ್ಪತ್ರೆಯಲ್ಲಿ ನನ್ನ ಮಗನ ಮೃತ ದೇಹವನ್ನು ಗುತರ್ಿಸಿರುತ್ತೇನೆ.         ಹೀಗಿದ್ದು ಇಂದು ದಿನಾಂಕ 20/11/2018 ರಂದು ರಾತ್ರಿ 11 ಪಿ.ಎಂ.ಕ್ಕೆ ಯಾದಗಿರಿ ನಗರ ಸಭಾ ಕಾಲೇಜು ಹತ್ತಿರ ಮುಖ್ಯ ರಸ್ತೆ ಮೇಲೆ ನನ್ನ ಮಗನ ಮೋಟಾರು ಸೈಕಲ್ ನಂಬರ ಕೆಎ-25, ಇಟಿ-7038  ನೇದ್ದಕ್ಕೆ, ಡಿಸಿಎಂ ಗೂಡ್ಸ್ ಈಚರ್ ನಂ.ಎಮ್.ಎಚ್-13, ಆರ್-4785 ನೇದ್ದರ ವಾಹನದ ಚಾಲಕನಾದ ಅಬುಬಕರ್ @ ಬಾಬಾ ಈತನು  ಅಪಘಾತ ಪಡಿಸಿದ್ದು, ಸದರಿ ಅಪಗಾತದಲ್ಲಿ ನನ್ನ ಮಗನಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಮೃತಪಟ್ಟಿದ್ದು, ಆತನ ಮೇಲೆ ಕಾನೂನಿನ ಸೂಕ್ತ  ಕ್ರಮ ಜರುಗಿಸಬೇಕೆಂದು ಹೇಳಿಕೆ ನೀಡಿದ್ದನ್ನು  ಪಡೆದುಕೊಂಡು ಮರಳಿ ಠಾಣೆಗೆ 01-00 ಎ.ಎಂ.ಕ್ಕೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 87/2018 ಕಲಂ 279, 304(ಎ) ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.       

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 313/2018 ಕಲಂ: 457,380 ಐ.ಪಿ.ಸಿ:- ದಿನಾಂಕ 21.11.2018 ರಂದು ಬೆಳ್ಲಿಗ್ಗೆ 11.00 ಗಂಟೆಗೆ ಪಿಯರ್ಾದಿ ಮಾಳಮ್ಮ ಗಂಡ ತಿಮ್ಮಣ್ಣ ಬೀರೆ ವಯ|| 55 ವರ್ಷ ಜಾ||ಕುರುಬರ ಉ|ಹೊಲಮನೆಕೆಲಸ ಸಾ|| ಅರಕೇರಾ.ಕೆ. ತಾ||ಜಿ||ಯಾದಗಿರಿ ಠಾಣೆಗೆ ಬಂದು ಒಂದು ಗಣಯಂತ್ರದಲ್ಲಿ ಟೈಪ್ ಮಾಡಿದ ದೂರು ಅಜರ್ಿ ನೀಡಿದ್ದು ಸದರಿ ಸಾರಂಶವೆನೆಂದರೆ ದಿನಾಂಕ.19.11.2018 ರಂದು ರಾತ್ರಿ 9-30 ಗಂಟೆಗೆ ನಾನು ನನ್ನ ಮಗಳು ಮಂಜುಳಾ ಮನೆಯ ಕೀಲಿ ಹಾಕಿಕೊಂಡು ನಮ್ಮ ಮನೆಯ ಮ್ಯಾಳಿಗೆ ಮೇಲೆ ಮಲಗಿಕೊಂಡಿದ್ದೆವು, ನಂತರ ದಿನಾಂಕ.20.11.2018 ರಂದು ಬೆಳಿಗ್ಗೆ 05.30 ಗಂಟೆಗೆ ಮನೆಯ ಕೆಲಸ ಮಾಡಲು ಮ್ಯಾಳಿಗೆ ಮೇಲಿನಿಂದ ಕೆಳಗೆ ಇಳಿದು ಮನೆಯ ಬಾಗಿಲು ತೆರೆಯಲು ಹೋದಾಗ ನಮ್ಮ ಮನೆಗೆ ಹಾಕಿದ ಮನೆಯ ಬಾಗಿಲು ಕೀಲಿ ಮುರಿದು ತೆರೆದಿರುವದು ಕಂಡು ಬಂದಿತು, ಅನುಮಾನ ಬಂದು ಮನೆಯಲ್ಲಿ ಹೋಗಿ ನೋಡಿದಾಗ ನಮ್ಮ ಮನೆಯಲ್ಲಿನ ಟ್ರಜರಿ ಮುರಿದು ಅದರಲ್ಲಿ ಇಟ್ಟಿದ್ದ 1,00,000/- ರೂ. ಮತ್ತು 25 ಗ್ರಾಂ. ಬಂಗಾರದ ಆಭರಣ ಅದರಲ್ಲಿ 5 ಗ್ರಾಂ. ಬಂಗಾರದ ಜುಮುಕಿ 20 ಗ್ರಾಂ. ಬಂಗಾರದ ನಾನ ಆಭರಣ ಕಳುವಾಗಿದ್ದು ಕಂಡುಬಂದಿತು ನಂತರ ನಮ್ಮ ಮನೆಯನ್ನು ಯಾರೋ ಕಳವು ಮಾಡಿದ್ದಾರೆ ಅಂತ ತಿಳಿಸಲು ಮನೆಯ ಹೊರಗೆ ಬರುವಷ್ಟರಲ್ಲಿ ನಮ್ಮ ಮನೆಯ ಮುಂದಿರುವ ಮಹಾದೇವಮ್ಮ ಗಂಡ ಮಲ್ಲಪ್ಪ ಜಂಗಳೇರ ಇವಳು ಮನೆಯಿಂದ ಚೀರಾಡುತ್ತ ತನ್ನ ಮನೆ ಕಳುವಾಗಿದೆ ಅಂತ ಜೋರಾಗಿ ಕೂಗಾಡುವದನ್ನು ಕೇಳಿ ಅವರ ಮನೆಗೆ ಹೋಗಿ ನೋಡಲಾಗಿ ಅವರ ಮನೆಗೆ ಹಾಕಿದ್ದ ಬೀಗ ಮುರಿದು ಮಹಾದೇವಮ್ಮ ಇವರ ಮನೆಯಲ್ಲಿನ ಟ್ರಜರಿ ಚಾವಿ ಮತ್ತು ಪೆಟ್ಟಿಗೆ ಮುರಿದು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂದಿತು. ನಂತರ ಸದರಿ ಮಹಾದೇವಮ್ಮ ಇವಳಿಗೆ ಮನೆಯಲ್ಲಿ ಏನೆನು ಇಟ್ಟಿದ್ದಿ ಅಂತ ಕೇಳಲಾಗಿ ಆಕೆ ಟ್ರಜರಿಯಲ್ಲಿ 50,000/- ರೂ. ಮತ್ತು 10 ಗ್ರಾಂ. ಬೋರಮಳ ಸರ, 10 ಗ್ರಾಂ. ಯಡ್ಡಳ್ಳಿ ಗುಂಡ , 10 ಗ್ರಾಂ.ಕಿವಿಯಲ್ಲಿನ ಮುರುವು ಓಲೆ ಒಟ್ಟು 30 ಗ್ರಾಂ. ಬಂಗಾರ ಕಳುವಾಗಿದೆ ಅಂತ ತಿಳಿಸಿದಳು. ದಿನಾಂಕ.19.11.2018 ರಂದು ರಾತ್ರಿ  10.00 ಗಂಟೆಯಿಂದ ಇಂದು ದಿನಾಂಕ.20.11.2018 ರ ಬೆಳಿಗೆ 5.30 ಗಂಟೆವರೆಗಿನ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮತ್ತು ನಮ್ಮ ಪಕ್ಕದ ಮಹಾದೇವಮ್ಮ ಇವರ ಮನೆಯ ಬಾಗಿಲು ಕೀಲಿ ಮತ್ತು ಟ್ರಜಿರಿ, ಪೆಟ್ಟಿಗೆ  ಮುರಿದು, ಮನೆಯಲ್ಲಿ ಬಂಗಾರದ ಆಭರಣಗಳನ್ನು ಮತ್ತು ನಗದು ಹಣವನ್ನು ಯಾರೋ ಕಳ್ಳರು ನಮ್ಮ ಮನೆಯಲ್ಲಿ ಮತ್ತು ನಮ್ಮ ಪಕ್ಕದ ಮನೆಯ ಮಹಾದೇವಮ್ಮ ಇವರ  ಮನೆಯಲ್ಲಿ ಸೇರಿ ಒಟ್ಟ 1,50,000/- ರೂ. ನಗದು ಹಣ ಮತ್ತು 55 ಗ್ರಾಂ.ಬಂಗಾರದ ಆಭರಣ ಕಳುವು ಮಾಡಿಕೊಂಡು ಹೋಗಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಿ ಪತ್ತೆ ಹಚ್ಚಿಕೊಡಬೇಕು ಅಂತ ದೂರು ಅಜರ್ಿ ನೀಡಿದ್ದು ಸದರಿ ಸಾರಂಶದ ಮೇಲಿಂದ ಠಾಣ ಗುನ್ನೆ ನಂ 313/2018 ಕಲಂ 457,380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ. ಗುನ್ನೆ ನಂ:- 220/2018  ಕಲಂ 323, 324, 504, 506 ಸಂ: 34 ಐಪಿಸಿ:-ದಿನಾಂಕ 21-11-2018 ರಂದು 11-50 ಎ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಶ್ರೀ ಡೊಂಗ್ರಿನಾಯಕ ತಂದೆ ಖೀರು ನಾಯಕ ರಾಠೋಡ ವಯಾಃ 53 ವರ್ಷ ಜಾಃ ಲಮಾಣಿ ಉಃ ಒಕ್ಕಲುತನ ಕೆಲಸ ಸಾಃ ಓರುಂಚಾ ನಡುವಿನ ತಾಂಡಾ ಇವರು ಹೇಳಿಕೆ ನೀಡಿದ್ದರ ಸಾರಾಂಸವೆನೆಂದರೆ ನಮ್ಮ ತಾಂಡಾದ ನನ್ನ ಅಕ್ಕಳಾದ ಮಂಗಿಬಾಯಿ ಗಂಡ ರೆಡ್ಡಿ ಚವ್ಹಾಣ ಇವರ ಮನೆಯ ಪಕ್ಕದಲ್ಲಿಯೇ ನಮ್ಮ ತಾಂಡಾದ ನಮ್ಮ ಅಣ್ಣ-ತಮ್ಮಕಿಯವರಾದ ಅನೀಲ್ ತಂದೆ ಬದ್ದು ರಾಠೋಡ ಇವರ ಮನೆ ಇರುತ್ತದೆ, ಈಗ ಸುಮಾರು ದಿವಸಗಳಿಂದ  ಅನೀಲ್ ತಂದೆ ಬದ್ದು ರಾಠೋಡ ಇತನು ನಮ್ಮ ಅಕ್ಕಳ ಜ್ಯಾಗೆಯಲ್ಲಿ ಮನೆ ಕಟ್ಟುವ ವಿಚಾರದಲ್ಲಿ ತಕರಾರು ಆಗಿದ್ದು ಈ ವಿಷಯದಲ್ಲಿಯೇ ಅವನಿಗೂ ಮತ್ತು ನಮಗೂ ವೈಮನಸ್ಸು ಬೆಳೆದಿದ್ದು ಇರುತ್ತದೆ,ಹೀಗಿರುವಾಗ ಇಂದು ದಿನಾಂಕ 21/11/2018 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ ಅಕ್ಕ ಮಂಗಿಬಾಯಿ ನನ್ನ ಹೆಂಡತಿ ಗೋಬಿಬಾಯಿ ಹಾಗೂ ನಮ್ಮ ತಾಂಡಾದ ಶ್ರೀನಿವಾಸ ತಂದೆ ಫತ್ತು ರಾಠೋಡ ಎಲ್ಲರೂ ಕೂಡಿಕೊಂಡು ನಮ್ಮ ಅಕ್ಕ ಮಂಗಿಬಾಯಿ ಇವಳ ಮನೆಯ ಹತ್ತಿರ ಮಾತಾಡುತ್ತಾ ಕುಳಿತ್ತಿದ್ದೆವು. ಅದೇ ಸದರಿ ಅನೀಲ್ ತಂದೆ ಬದ್ದು ರಾಠೋಡ ಇತನು ಈ ಮೊದಲು ತಕರಾರಿನಲ್ಲಿದ್ದ ನಮ್ಮ ಅಕ್ಕ ಮಂಗಿಬಾಯಿ ಇವಳ ಜ್ಯಾಗೆಯಲ್ಲಿ ಮನೆ ಕಟ್ಟುತ್ತಿರುವಾಗ  ಅದೇ ವೇಳೆಗೆ ನಾನು ಸದರಿ ಅನೀಲ್ ತಂದೆ ಬದ್ದು ರಾಠೋಡ ಇತನಿಗೆ ಈ ಜ್ಯಾಗೆ ಈ ಮೊದಲಿನಿಂದಲೂ ತಕರಾರಿನಲ್ಲಿದೇ ತಕರಾರು ಬಗೆಹರಿಸಿಕೊಂಡು ಮನೆ ಕಟ್ಟಿಕೊಳ್ಳಿರಿ ಈ ರೀತಿ ವಿನಾಕಾರಣ ಜಗಳದ ಹಾದಿ ಮಾಡಿಕೊಳ್ಳಬೇಡರಿ ಅಂತಾ ಅನೀಲನಿಗೆ ಸಮುಜಾಯಿಸಿ ಹೇಳುತ್ತಿದ್ದಾಗ  ಒಮ್ಮೇಲೆ ಅದೇ ವೇಳೆಗೆ ಅಲ್ಲಿಯೇ ಇದ್ದ 1) ಅನೀಲ್ ತಂದೆ ಬದ್ದು ರಾಠೋಡ 2) ರೂಪ್ಲಾ ತಂದೆ ಶಿವಾಜಿ ರಾಠೋಡ 3) ಬದ್ದು ತಂದೆ ರೂಪ್ಲಾ ರಾಠೋಡ ಮತ್ತು 4) ನೀಲಿಬಾಯಿ ಗಂಡ ಅನೀಲ ರಾಠೋಡ ಈ ನಾಲ್ಕು ಜನರಲ್ಲಿ ಅನೀಲ್ ತಂದೆ ಬದ್ದು ರಾಠೋಡ ಇತನು ಅಲ್ಲಿಯೇ ಬಿದ್ದ ಕಟ್ಟಿಗೆ ಬಡಿಗೆಯನ್ನು ಎತ್ತಿಕೊಂಡು ನನ್ನ ತೆಲೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿದನು.  ಮತ್ತು ರೂಪ್ಲಾ ತಂದೆ ಶಿವಾಜಿ ಇತನು ಕೈಮುಷ್ಟಿ ಮಾಡಿ ಕಿವಿಯ ಮೇಲೆ ಹೊಡೆದನು ಮತ್ತು ಇನ್ನೂಳಿದ ಬದ್ದು ತಂದೆ ರೂಪ್ಲಾ ರಾಠೋಡ ಮತ್ತು  ನೀಲಿಬಾಯಿ ಗಂಡ ಅನೀಲ ರಾಠೋಡ ಇವರಿಬ್ಬರೂ ನನಗೆ ಕೈಯಿಂದ ಎದೆಗೆ ಮತ್ತು ಹೊಟ್ಟೆಗೆ ಹೊಡೆದರು. ಮತ್ತು ನೆಲಕ್ಕೆ ಹಾಕಿ ಎಲ್ಲರೂ ಕಾಲಿನಿಂದ ಒದ್ದರು. ಆಗ ನಾನು ಚೀರಾಡುತ್ತಿರುವಾಗ ನನ್ನ ನನ್ನ ಅಕ್ಕ ಮಂಗಿಬಾಯಿ ನನ್ನ ಹೆಂಡತಿ ಗೋಬಿಬಾಯಿ ಹಾಗೂ ನಮ್ಮ ತಾಂಡಾದ ಶ್ರೀನಿವಾಸ ತಂದೆ ಫತ್ತು ರಾಠೋಡ ಎಲ್ಲರೂ ಕೂಡಿಕೊಂಡು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ,  ಆಗ ಅವರು ಇನ್ನೊಮ್ಮೆ ಸೀಗು ಸೂಳೆ ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದರು. ಈ ಜಗಳವು ಇಂದು ದಿನಾಂಕ 21/11/2018 ರಂದು ಬೆಳಗ್ಗೆ 9 ಗಂಟೆಗೆ ನಮ್ಮಕ್ಕ ಮಂಗಿಬಾಯಿ ಇವರ ಮನೆಯ ಮುಂದುಗಡೆ ಜರುಗಿದೆ. ನಂತರ ಮೇಲ್ಕಂಡವರು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ ಈ ರೀತಿಯಾಗಿ ನನಗೆ ಹೊಡೆಬಡಿ ಮಾಡಿ ಜೀವದ ಭಯ ಹಾಕಿದ ಮೇಲ್ಕಂಡ 4 ಜನರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ  ನೀಡಿದ ಹೇಳಿಕೆ ಫಿರ್ಯಾಧೀಯನ್ನು ಪಡೆದುಕೊಂಡು ಮರಳಿ 1 ಪಿ.ಎಮ್ ಕ್ಕೆ  ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 220/2018 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 221/2018  ಕಲಂ 323, 341, 504, 506 ಸಂ: 34 ಐಪಿಸಿ:-ದಿನಾಂಕ 21-11-2018 ರಂದು 5 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಅನೀಲ್ ತಂದೆ ಬದ್ದು ರಾಠೊಡ ವಯಾಃ 26 ವರ್ಷ ಜಾಃ ಲಮಾಣಿ ಉಃ ಒಕ್ಕಲುತನ ಕೆಲಸ ಸಾಃ ಓರುಂಚಾ ನಡುವಿನ ತಾಂಡಾ ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸರಾಂಶವೆನೆಂದರೆ ನಮ್ಮ ತಾಂಡಾದಲ್ಲಿ ನಮ್ಮ ಅಣ್ಣತಮಕಿಯವರಾದ ಮಂಗಿಬಾಯಿ ಗಂಡ ರೆಡ್ಡಿ ಚವ್ಹಾಣ ಇವರ ಮನೆಯ ಪಕ್ಕದಲ್ಲಿಯೇ ನಮ್ಮ ಮನೆ ಇರುತ್ತದೆ, ಈಗ ಸುಮಾರು ದಿವಸಗಳ ಹಿಂದೆ ನಾನು ನಮ್ಮ ಜ್ಯಾಗೆಯಲ್ಲಿ ಮನೆ ಕಟ್ಟುವ ಸಮಯದಲ್ಲಿ ಮಂಗಿಬಾಯಿ ಮತ್ತು ಇವರ ತಮ್ಮನಾದ ಡೊಂಗ್ರಿನಾಯಕ ತಂದೆ ಖೀರು ನಾಯಕ ರಾಠೋಡ ಇಬ್ಬರೂ ನಮ್ಮ ಜೋತೆಯಲ್ಲಿ ತಕರಾರು ಮಾಡಿದ್ದು ಈ ವಿಷಯದಲ್ಲಿಯೇ ಅವರಿಗೂ ಮತ್ತು ನಮಗೂ ವೈಮನಸ್ಸು ಬೆಳೆದಿದ್ದು ಇರುತ್ತದೆ, ಹೀಗಿರುವಾಗ ಇಂದು ದಿನಾಂಕ 21/11/2018 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆಯಾದ ಬದ್ದು ರಾಠೊಡ ಇಬ್ಬರೂ ಕೂಡಿ ನಮ್ಮ ಜ್ಯಾಗೆಯಲ್ಲಿ ಮನೆ ಕಟ್ಟಬೆಕೆಂದು ಕಲ್ಲುಗಳು ಎತ್ತಿ ಹಾಕುತ್ತಿರುವಾಗ ಅದೇ ವೇಳೆಗೆ ಮಂಗಿಬಾಯಿ ಇವಳು ಬಂದು ಈ ಜ್ಯಾಗೆಯು ಈ ಮೊದಲಿನಿಂದಲೂ ತಕರಾರಿನಲ್ಲಿದೇ ತಕರಾರು ಬಗೆಹರಿಸಿಕೊಂಡು ಮನೆ ಕಟ್ಟಿಕೊಳ್ಳಿರಿ ಅಂತಾ ಹೇಳಿದಾಗ ನಾವು ತಕರಾರು ಇದ್ದ ಜ್ಯಾಗೆಯಲ್ಲಿ ಮನೆ ಕಟ್ಟುತ್ತಿಲ್ಲಾ ನಮ್ಮ ಜ್ಯಾಗೆಯಲ್ಲಿ ಕಟ್ಟಿಕೊಳ್ಳುತ್ತಿದ್ದೆವೆ ಅವಳಿಗೆ ಹೇಳುತ್ತಿದ್ದಾಗ  ಅದೇ ವೇಳೆಗೆ ಒಮ್ಮೇಲೆ ಅಲ್ಲಿಯೇ ಇದ್ದ  ಮಂಗಿಬಾಯಿಯ ತಮ್ಮನಾದ  1) ಡೊಂಗ್ರಿನಾಯಕ ತಂದೆ ಖೀರು ನಾಯಕ ರಾಠೊಡ 2) ಲಕ್ಷ್ಮಣ ತಂದೆ ಖೂಬ್ಯಾ ರಾಠೋಡ 3) ಬಾಬು ತಂದೆ ರೆಡ್ಡಿ ಚವ್ಹಾಣ ಮತ್ತು 4) ಮಂಗಿಬಾಯಿ ಗಂಡ ರೆಡ್ಡಿ ಚವ್ಹಾಣ ಈ ನಾಲ್ಕು ಜನರು ನಮ್ಮ ಹತ್ತಿರ ಬಂದರು. ಆಗ ನಾವು ಯಾಕೇ ಇವರ ಸಂಗಡ ತಕರಾರು ಅಂತಾ ನಾವು ನಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಈ 4 ಜನರು ನಮ್ಮನ್ನು  ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿದರು. ಆಗ ನಾವು 4 ಜನ ಹಿರಿಯರನ್ನು ಕರೆಯಿಸಿರಿ ಮಾತಾಡೋಣಾ ಅಂತಾ ಅಂದಾಗ ಅವರಲ್ಲಿ ಡೊಂಗ್ರಿನಾಯಕ ಮತ್ತು ಲಕ್ಷ್ಮಣ ತಂದೆ ಖೂಬ್ಯಾ ರಾಠೋಡ ಇಬ್ಬರು ನಮಗೆ ಬುದ್ದಿ ಹೇಳುತ್ತಿರೇನು ಭೋಸಡಿ ಮಕ್ಕಳೇ ಅಂತಾ ಕೈಮುಷ್ಟಿ ಮಾಡಿ ನನಗೆ ಹೊಟ್ಟೆಗೆ ಬೆನ್ನಿಗೆ ಹೊಡೆದರು. ಮತ್ತು ಕಾಲಿನಿಂದ ಒದ್ದರು. ಆಗ ನನ್ನ ತಂದೆಯಾದ ಬದ್ದು ರಾಠೊಡ ಇವರು ಜಗಳಾ ಬಿಡಿಸಲು ಮಧ್ಯ ಬಂದಾಗ ನಮ್ಮ ತಂದೆಗೆ ಬಾಬು ತಂದೆ ರೆಡ್ಡಿ ಚವ್ಹಾಣ ಮತ್ತು ಮಂಗಿಬಾಯಿ ಗಂಡ ರೆಡ್ಡಿ ಚವ್ಹಾಣ ಇಬ್ಬರೂ ನಮ್ಮ ತಂದೆಗೆ ಕೈಯಿಂದ ಕಪಾಳದ ಮೇಲೆ ಹಾಗೂ ಹೊಟ್ಟೆಗೆ ಹೊಡೆದರು. ಮತ್ತು ನೆಲಕ್ಕೆ ಹಾಕಿ ಎಲ್ಲರೂ ಕಾಲಿನಿಂದ ಒದ್ದರು. ಆಗ ನಾವು ಚೀರಾಡುತ್ತಿರುವಾಗ ನನ್ನ ದೊಡ್ಡಪ್ಪನ ಮಗನಾದ ವಸಂತ ತಂದೆ ಶಿವಾಜೀ ರಾಠೋಡ ಇತನು ಮದ್ಯ ಬಂದು ನಮಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ,  ಆಗ ಅವರು ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೇ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದರು. ಈ ಜಗಳವು ಇಂದು ದಿನಾಂಕ 21/11/2018 ರಂದು ಬೆಳಗ್ಗೆ 9 ಗಂಟೆಗೆ ಮಂಗಿಬಾಯಿ ಇವರ ಮನೆಯ ಮುಂದುಗಡೆ ಜರುಗಿದೆ. ಈ ರೀತಿಯಾಗಿ ನಮಗೆ ತಡೆದು ಹೊಡೆಬಡಿ ಮಾಡಿ ಜೀವದ ಭಯ ಹಾಕಿದ ಮೇಲ್ಕಂಡ 4 ಜನರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಮತ್ತು ಜಗಳದಲ್ಲಿ ನಮಗೆ ಅಷ್ಟೊಂದು ಗಾಯವಾಗದ ಕಾರಣ ನಾವು ದವಾಖಾನೆಗೆ ಹೋಗಲು ಇಚ್ಚಿಸುವುದಿಲ್ಲಾ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 221/2018 ಕಲಂ 323, 341, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 464/2018 ಕಲಂ  341 323 324 504 506 ಸಂ 34 ಐ.ಪಿ.ಸಿ:- ದಿನಾಂಕ 21/11/2018 ರಂದು ಸಾಯಂಕಾಲ 16-45 ಗಂಟೆಗೆ ಫಿರ್ಯಾದಿ ಶ್ರೀ ಹಸೇನಸಾಬ ತಂದೆ ಮಹ್ಮದ ಅಲಿ ಚಪ್ರದೊರ ವಯ 35 ವರ್ಷ ಜಾತಿ ಮುಸ್ಲಿಂ ಉಃ ಒಕ್ಕಲುತನ ಸಾಃ ಗುರುಸಣಗಿ ತಾಃ ವಡಗೇರಾ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿರ್ಯಾದಿಯ ತಂದೆಯವರು 4 ಜನ ಅಣ್ಣ-ತಂದಿರರು ಇದ್ದು ಅದರಲ್ಲಿ ಫಿರ್ಯಾದಿಯ ತಂದೆ ಮತ್ತು ಚಿಕ್ಕಪ್ಪ ಮೈನೋದ್ದಿನ್ ಇಬ್ಬರೂ ಮೃತ ಪಟ್ಟಿರುತ್ತಾರೆ. ಗುರುಸಣಗಿ ಸಿಮಾಂತರದ ಹೊಲ ಸವರ್ೇ ನಂ 357 ಆಕಾರ 3 ಎಕರೆ 4 ಗುಂಟೆ ಜಮೀನಿನಲ್ಲಿ  4 ಪಾಲುಗಳು ಮಾಡಿ ಸಮನಾಗಿ ಹಂಚಿಕೊಂಡಿದ್ದು, ನಂತರ ಫಿರ್ಯಾದಿಯ ತಂದೆ ಮಹ್ಮದ ಅಲಿ ಇವರು ತನ್ನ ಅಣ್ಣ ತಮ್ಮಂದಿರರ ಪಾಲಿಗೆ ಬಂದ ಹೊಲವು ಆತನೆ ಖರೀದಿ ಮಾಡಿದ್ದು ಸದರಿ ಹೊಲ ಇನ್ನೂ ಅವರ-ರವರ ಹೆಸರಿನಲ್ಲಿಯೇ ಇರುತ್ತದೆ. ಫಿರ್ಯಾದಿಯ ತಂದೆಯ ಹೆಸರಿಗೆ ಇನ್ನೂ ರಜೀಸ್ಟರ ಮಾಡಿ ಕೊಟ್ಟಿರುವುದಿಲ್ಲ. ಫಿರ್ಯಾದಿಯ ತಂದೆ ಅಂದಾಜು 3 ವರ್ಷಗಳ ಹಿಂದೆ ಮೃತ ಪಟ್ಟ ನಂತರ ಫಿರ್ಯಾದಿ ತನ್ನ ದೊಡ್ಡಪ್ಪನವರಿಗೆ ತನ್ನ ತಂದೆಗೆ ಮಾರಾಟ ಮಾಡಿದ ಜಮೀನು ತನ್ನ ಹೆಸರಿಗೆ ಮಾಡಿಕೊಡಿ ಅಂತ ಕೇಳಿದರು ಮಾಡಿಕೊಡದ ಕಾರಣ ಫಿರ್ಯಾದಿ ಶಹಾಪೂರ ನ್ಯಾಯಾಲಯದಲ್ಲಿ ಕೇಸ್ ಹೂಡಿದ್ದು ಸದರಿ ಕೇಸಿನ ಹಾಜರಾತಿಗೆ ದಿನಾಂಕ 20/11/2018 ರಂದು ಕೋಟರ್ಿಗೆ ಬಂದು ಮರಳಿ  ಊರಿಗೆ ಮದ್ಯಾಹ್ನ 12-40 ಗಂಟೆಗೆ ಹೋಗುತಿದ್ದಾಗ ಆರೋಪಿತರಾದ 1)  ಖಲೀಮ  ತಂದೆ ಜಲಾಲಸಾಬ ಚಪ್ರದೊರ 2) ಚಾಂದಪಾಶಾ ತಂದೆ ಮೈನೋದ್ದಿನ ಚಪ್ರದೊರ 3) ಹುಸೇನಸಾಬ ತಂದೆ ಮೈನೋದ್ದಿನ್ ಚಪ್ರದೊರ ಎಲ್ಲರೂ ಸಾಃ ಗುರುಸಣಗಿ ಇವರು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ  ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಚೂಪಾದ ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಹಾಗೂ ಗುಪ್ತಗಾಯ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 464/2018 ಕಲಂ 341, 323, 324 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
                                            
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 193/2018 ಕಲಂ 323,341,504 506 ಸಂಗಡ 34 ಐಪಿಸಿ:- ಈ ಮೂಲಕ ಮಾನ್ಯರವರಲ್ಲಿ ವಿನಂತಿಸಿಕೊಳುವದೆನೆಂದರೆ ನಾನು ಶ್ರೀಮತಿ ಪಾರ್ವತೆಮ್ಮ ಗಂಡ ನಾಮದೇವ ವ|| 50 ವರ್ಷ ಜಾ|| ಈಳಿಗೇರ ಉ|| ಮನೆಕೆಲಸ ಸಾ|| ನಂದೆಪಲ್ಲಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇದ್ದು. ನಾನು ನನ್ನ ಕುಟುಂಬದೊಂದಿಗೆ ಮನೆಕೆಲಸ ಮಾಡಿಕೊಂಡು ಉಪ ಜೀವನ ಮಾಡಿಕೊಂಡು ಇರುತ್ತೆನೆ ನಾವು 2004 ನೇ ಸಾಲಿನಲ್ಲಿ ಮಲ್ಲಪ್ಪ ತಂದೆ ಗೆಜ್ಜಲಪ್ಪ ಇವರ ಕಡೆಯಿಂದ ಉದ್ದ 40 ಅಗಲ 30 ಪೀಟ್ ಜಾಗ ಖರೀದಿ ಮಾಡಿದ್ದು ಇರುತ್ತದೆ ಖರಿದಿ ಮಾಡಿದ ನಂತರ ನಾವು ಆ ಜಾಗದಲ್ಲಿ ಮನೆ ಕಟ್ಟಿದ್ದು ಇರುತ್ತದೆ ಮನೆಗೆ ಇನ್ನು ಪ್ಲಾಸ್ಟರ ಮಾಡಿರುವದಿಲ್ಲ  ನಮ್ಮ ಮನೆಯ ಪಕ್ಕದ ಮನೆಯವರಾದ ಮಹಾದೇವಪ್ಪ ತಂದೆ ಚಂದ್ರಪ್ಪ ಈತನು ನಾವು ಇರಲಾದರ ಸಮಯದಲ್ಲಿ ನಮ್ಮ ಮನೆಯ ಪಕ್ಕದಲ್ಲಿ ಆಲ್ ಬ್ಲಾಕನಿಂದ ಆಡುಗಳನ್ನು ಕಟ್ಟಲು ರೂಮ್ ಕಟ್ಟಿದ್ದು ಇರುತ್ತದೆ ಆಗ ನಾವು ಆತನಿಗೆ ಯಾಕೆ ರೂಮ್ ಕಟ್ಟಿದೆ ನಾವು ನಮ್ಮ ಮನೆಗೆ ಹೆಂಗ್ ಪ್ಲಾಷ್ಟರ ಮಾಡಬೇಕು ಜಾಗ ಇರಲಾರದಂಗ ಆಗ್ಯಾದ ಅಂತಾ ಕೇಳಿದ್ದೆವು ಅದಕ್ಕೆ ಆತನು ಏನ ಮಾಡುತ್ತಿರಿ ಮಾಡಿರಿ ಅಂತಾ ಹೇಳಿದನು ಅದಕ್ಕೆ ನಾವು ಸುಮ್ಮನಾದ್ದೆವು. ದಿನಾಂಕ: 18-11-2018 ರಂದು ರಾತ್ರಿ 09-00 ಗಂಟೆ ಸುಮಾರಿಗೆ  ನಾನು ನನ್ನ ಗಂಡ ಮತ್ತು ಇಬ್ಬರು ಮಕ್ಕಳು ರಾತ್ರಿ ಊಟ ಮಾಡಿದ ನಂತರ ಮನೆಯ ಮುಂದೆ ಕುಂತಾಗ ಮಹಾದೇವಪ್ಪ ತಂದೆ ಚಂದ್ರಪ್ಪ ಇತನು ಬಂದು ಲೇ ಸೂಳೆ ಮಕ್ಕಳೆ ನಾನು ಆಡು ಕಟ್ಟಲು ರೂಮ್ ಕಟ್ಟಿನೋಡರಲೆ  ನನಗೆ ಕೇಳಲು ನಿವು ಯಾರಲೆ ಅಂತಾ ಮನೆಯ ಮುಂದೆ ಬಂದು ಬೈಯುತ್ತಿರುವಾಗ ನನ್ನ ಮಗ ಸಿದ್ದಾರ್ಥ ಇತನು ಯಾಕೆ ಬೈಯುತಿ ಅಂತಾ ಕೇಳಿದ್ದಕ್ಕೆ ನಮ್ಮ ಜಾದಲ್ಲಿ ನಾವು ಮನೆ ಕಟ್ಟಿದರೆ ನಿವು ಏನ ನನಗೆ ಕೇಳುತರಲೆ ಅಂದೆವನೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಿ ಎದೆಗೆ ಕೈಯಿಂದ ಹೊಡೆದನು ಆಗ ನನ್ನ ಮಗ ಮಹೇಶ ಇತನು ಅಡ್ಡ ಹೊದಾಗ ಭೀಮಾಶಂಕರ ತಂದೆ ಚಂದ್ರಪ್ಪ ಇತನು ಆತನಿಗೆ ಕೈಯಿಂದ ಕಪಾಳಕ್ಕೆ ಹೊಡೆದನು ಆಗ ನನ್ನ ಗಂಡ ನಾಮದೇವ ಇತನು ಅಡ್ಡ ಹೋದಾಗ ನಿಂಗಪ್ಪ ತಂದೆ ಚಂದ್ರಪ್ಪ ಇತನು ನನ್ನ ಗಂಡನಿಗೆ ಕೈಯಿಂದ ಬೆನ್ನಿಗೆ ಹೊಡೆದನು ಆಗ ನಾನು ಅಡ್ಡ ಹೋದಾಗ ನಾರಯಣಮ್ಮ ಗಂಡ ಮಹಾದೇವಪ್ಪ ಈಕೆಯು ನನಗೆ ನೂಕಿಸಿಕೊಟ್ಟು ಕೆಳಗೆ ಬಿಳಿಸಿ ಕೈಯಿಂದ ಎಡಗಾಲಿನ ಮೊಣಕಾಲಿಗೆ ಗುದ್ದಿರುತ್ತಾಳೆ ಆಗ ನನ್ನ ಗಂಡ ಮತ್ತು ಮಕ್ಕಳು ಮನೆಗೆ ಹೋಗುತ್ತಿರುವಾಗ ಭೀಮಶಂಕರ ಇತನು ನನ್ನ ಮಗ ಸಿದ್ದಾರ್ಥ ಇತನಿಗೆ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಇನ್ನೊಂದು ಸಲ ನಮ್ಮ ಜಾಗ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕುತಿದ್ದಾಗ ಜಗಳವನ್ನು ನೋಡಿ ನಮ್ಮ ಮನೆಯ ಪಕ್ಕದವರಾದ  1) ಯಂಕಟ ತಂದೆ ಅಶೋಕ 2) ಗೋಪಾಲ ತಂದೆ ಗೌಡಪ್ಪ ಇವರು ಬಂದು ಜಗಳ ಬಿಡಿಸಿಕೊಂಡರು ಕಾರಣ ನಮಗೆ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದವರ ವಿರುದ್ದ ದೂರು ದಾಖಲಿಸಬೇಕು ಜಗಳದಲ್ಲಿ ನಮಗೆ ರಕ್ತಗಾಯವಾಗದ ಕಾರಣ ಆಸ್ಪತ್ರೆಗೆ ಹೋಗುವದಿಲ್ಲ ಅಂತಾ ಈ ದೂರು ಇರುತ್ತದೆ ಕೇಸು ಮಾಡುವ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಬಂದಿದ್ದರಿಂದ ಠಾನೆಗೆ ಬರಲು ತಡವಾಗಿರುತ್ತದೆ

 ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:-169/2018 ಕಲಂ.353 ಸಂ.149 ಐಪಿಸಿ ಮತ್ತು ಕಲಂ 3 ಪ್ರಿವೆನಶನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪಟರ್ಿ ಆಕ್ಟ್-1984:- ದಿನಾಂಕ; 21/11/2018 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿ ಶ್ರೀ ಡಾ. ಮರಿಲಿಂಗಪ್ಪ ತಂದೆ ಮಲ್ಲಿಕಾಜರ್ುನ ಮದರಕಲ ಉ; ಸರಕಾರಿ ವೈದ್ಯಾಧಿಕಾರಿ ಸಾ; ದೋರನಹಳ್ಳಿ ಹಾ.ವ; ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು 2 ತಿಂಗಳಿನಿಂದ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಸರಕಾರದ ಆದೇಶದ ಪ್ರಕಾರ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೀಗಿದ್ದು ನನ್ನದು ದಿನಾಂಕ; 20/11/2018 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ; 21/11/2018 ರಂದು ಬೆಳೆಗ್ಗೆ 8-00 ಗಂಟೆಯವರೆಗೆ ನನಗೆ ತುತರ್ು ಚಿಕಿತ್ಸಾ ವಿಭಾಗದ ಕರ್ತವ್ಯ ಇದ್ದು ಸದರಿ ಕರ್ತವ್ಯದ ಮೇಲಿದ್ದಾಗ ನಿನ್ನೆ ರಾತ್ರಿ 11-13 ಸಮಯದ ಸುಮಾರಿಗೆ ಯಾದಗಿರಿ ನಗರದಲ್ಲಿ ವಾಹನ ಅಪಘಾತದಲ್ಲಿ ಒಬ್ಬನು ತೀವ್ರಗಾಯ ಹೊಂದಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದಾಗ  ತುತರ್ು ಚಿಕಿತ್ಸಾ ವಿಭಾಗದ ಕರ್ತವ್ಯದಲ್ಲಿದ್ದ ನಾನು ಆ ವ್ಯಕ್ತಿಯನ್ನು ಪರಿಕ್ಷೀಸಿ ನೋಡಲಾಗಿ ಆ ವ್ಯಕ್ತಿಯು ಮೃತಪಟ್ಟಿದ್ದನು. ಮೃತಪಟ್ಟ ವ್ಯಕ್ತಿಯ ಹೆಸರು ಶೇಖನಭೀ ಅಂತಾ ಇರುತ್ತದೆ. ಆಗ ಅವನ ಸಂಗಡ ಇದ್ದ ಇತರೆ ಜನರಿಗೆ ನಾನು, ಗಾಯಾಳು ಈತನಿಗೆ ಕರೆದುಕೊಂಡು ಬರುವಾಗ ದಾರಿಯ ಮಧ್ಯದಲ್ಲೇ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದಾಗ ಅವರು ನೀನು ಸರಿಯಾಗಿ ನೋಡಿರುವುದಿಲ್ಲ. ನಿನಗಿಂತ ದೊಡ್ಡ ಡಾಕ್ಟರನ್ನು ಕರೆಸು ಅಂತಾ ಅಂದಾಗ ನಾನು ಡಾ. ರವಿಕುಮಾರ ಪಾಟೀಲ ರವರಿಗೆ ಕರೆ ಮಾಡಿದೆನು. ನಂತರ ಮೃತನ ಕಡೆಯವರು ನನಗೆ ನೀನು ಡಾಕ್ಟರೇ ಅಲ್ಲ, ನಿನಗೆ ಏನು ಗೊತ್ತಿಲ್ಲ, ಅಂತಾ ನನ್ನ ಕರ್ತವ್ಯದಲ್ಲಿ ಅಡೆತಡೆ ಉಂಟುಮಾಡಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಇನ್ನುಳಿದ ರೋಗಿಗಳಿಗು ಕೂಡಾ ತೊಂದರೆ ಮಾಡಿದಾಗ ನಾನು ಈ ರೀತಿ ಗಲಾಟೆ ಮಾಡುವುದು ಸರಿಯಲ್ಲ ಅಂತಾ ಅಂದಾಗ ಅವರು ಆಸ್ಪತ್ರೆಯ ಬಾಗಿಲಿಗೆ ಅಳವಡಿಸಿದ ಗ್ಲಾಸ ಹೊಡೆದು ಲುಕ್ಸಾನ ಮಾಡಿರುತ್ತಾರೆ. ನಂತರ ಡಾ. ರವಿಕುಮಾರ ಸರ್ ರವರು ಬಂದು ಸದರಿ ವ್ಯಕ್ತಿಯನ್ನು ನೋಡಿ ಮೃತಪಟ್ಟಿರುತ್ತಾನೆ ಅಂತಾ ಅವರು ಕೂಡಾ ತಿಳಿಸಿದರು. ಆಗ ಸ್ಟಾಪ ನರ್ಸ ಲಕ್ಷ್ಮೀ ಮತ್ತು ವಾರ್ಡಬಾಯ ವಿಕ್ರಮ ಇವರು ಕೂಡಾ ಇದ್ದರು. ಆದರು ಕೂಡಾ ಜನರು  ಗಲಾಟೆ ಮಾಡುವುದು ನಿಲ್ಲಿಸಲಿಲ್ಲ.  ನಂತರ ಪೊಲೀಸರು ಬಂದು ಗಲಾಟೆಯನ್ನು ನಿಲ್ಲಿಸಿ, ಜನರನ್ನು ಚದುರಿಸಿ ಕಳಿಸಿದರು. ಗಲಾಟೆ ಮಾಡಿದವರ ಹೆಸರು ಗೊತ್ತಿರುವುದಿಲ್ಲ. ಸುಮಾರು 100 ರಿಂದ 110 ಜನರು ಇದ್ದು ಅವರನ್ನು ನೋಡಿದಲ್ಲಿ ಗುರುತಿಸುತ್ತೇನೆ. ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ  ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸರಕಾರಿ ಕರ್ತವ್ಯದ ಮೇಲಿದ್ದ ನನಗೆ ಕರ್ತವ್ಯಕ್ಕೆ ಅಡೆತಡೆ ಉಂಟು ಮಾಡಿ  ಆಸ್ಪತ್ರೆಯ ಬಾಗಿಲ ಗ್ಲಾಸನ್ನು ಹೊಡೆದು ಲುಕ್ಸಾನ ಮಾಡಿದ ಆರೋಪಿತರನ್ನು ಗುರುತಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 169/2018 ಕಲಂ; 353 ಸಂ.149 ಐಪಿಸಿ ಮತ್ತು ಕಲಂ 3 ಪ್ರಿವೆನಶನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪಟರ್ಿ ಆಕ್ಟ್-1984 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!