ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-11-2018

By blogger on ಸೋಮವಾರ, ನವೆಂಬರ್ 5, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-11-2018 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 212/2018  ಕಲಂ 379 ಐಪಿಸಿ:-ದಿನಾಂಕ 04-11-2018 ರಂದು 11-45 ಎ.ಎಮ್ ಕ್ಕೆ ಶ್ರೀ ಅಂಬಾರಾಯ ಕಮಾನಮನಿ ಪಿ.ಐ ಸಿ.ಇ.ಎನ್ ಪೋಲಿಸ್ ಠಾಣೆ ಯಾದಗಿರಿ ರವರು ಮುದ್ದೆಮಾಲು ಮತ್ತು ಒಬ್ಬ ಆರೋಪಿಯೊಂದಿಗೆ ಜಪ್ತಿಪಂಚನಾಮೆ ಸಮೇತ ವರದಿಯನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಾಂಶವೆನೆಂದರೆ ಇಂದು ದಿನಾಂಕ 04-11-2018 ಬೆಳಗ್ಗೆ 9 ಗಂಟೆಗೆ ತಾವು ಪೋಲಿಸ್ ಠಾಣೆಯಲ್ಲಿ ಇದ್ದಾದ ಆ ವೇಳೆಯಲ್ಲಿ ತಮಗೆ ಮಾಹಿತಿ ಸಿಕ್ಕಿದ್ದೆನೆಂದರೆ ಬಂದಳ್ಳಿ ಹಳ್ಳದ ಕಡೆಯಿಂದ ಯಾರೋ ಟ್ರಾಕ್ಟರದಲ್ಲಿ ಅನಧೀಕೃತವಾಗಿ ಕಳ್ಳತನದಿಂದ ಉಸುಕು ಕಳುವು ಮಾಡಿಕೊಂಡು ಯಾದಗಿರಿ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮೀ ಬಂದಿದ್ದು ಸ್ಥಳಕ್ಕೆ ಹೋಗಿ ದಾಳಿ ಮಾಡುವ ಸಲುವಾಗಿ ಇಬ್ಬರೂ ಪಂಚರು ಹಾಗೂ ಯಾದಗಿರಿ ಗ್ರಾಮೀಣ ಠಾಣೆಯ ಪಿ.ಎಸ್.ಐ (ಕಾಸು) ರವರಾದ ಶ್ರೀ ವೀರಣ್ಣಾ ಎಸ್. ಮಗಿ ಹಾಗೂ ನಮ್ಮ ಸಿಬ್ಬಂದಿಯವರಾದ ಶ್ರೀ ಈರಣ್ಣಾ ಹೆಚ್.ಸಿ-144, ಶ್ರೀ ಶ್ರೀಮಂತ ಹೆಚ್.ಸಿ-141, ಶ್ರೀ ಮಹ್ಮದ್ ಶಫಿಯುದ್ದಿನ ಹೆಚ.ಸಿ-197 ಹಾಗೂ ಜೀಪ ಚಾಲಕರಾದ ಶ್ರೀ ರಾಮಲಿಂಗಪ್ಪಾ ಎಪಿಸಿ-112 ಹಾಗೂ ಎಲ್ಲರನ್ನು ತಮ್ಮ ಸರಕಾರಿ ಜೀಪಿನಲ್ಲಿ ಕೂಡಿಸಿಕೊಂಡು ಬೆಳಗ್ಗೆ 9-30 ಗಂಟೆಗೆ ಯಾದಗಿರಿ ಗ್ರಾಮೀಣ ಹತ್ತಿರದಿಂದ ಮಾಹಿತಿ ಬಂದ ಕಡೆಗೆ ಹೊರಟು ಬಂದಳ್ಳಿ ಗ್ರಾಮ ತಲುಪಿ ಗ್ರಾಮ ತಲುಪಿ ಬಂದಳ್ಳಿ ಹಳ್ಳದಿಂದ ಬಂದಳ್ಳಿ ಗ್ರಾಮದ ಕಡೆಗೆ ಬರುವ ಬರುವ ವಾಹನಗಳನ್ನು  ಗಮನಿಸುತ್ತಾ ನಿಂತೆವು.  ಬೆಳಗ್ಗೆ 10-15 ಗಂಟೆ ಸುಮಾರಿಗೆ ಬಂದಳ್ಳಿ ಹಳ್ಳದ ಕಡೆಯಿಂದ ಎರಡು ಟ್ರ್ಯಾಕ್ಟರಗಳು ಬಂದಾಗ ನಾವು ಸದರಿ ಎರಡು ಟ್ರ್ಯಾಕ್ಟರಗಳಿಗೆ ಕೈ ಮಾಡಿ ನಿಲ್ಲಿಸಲು ಹೇಳಿದಾಗ ಅವುಗಳ ಚಾಲಕರು ಎರಡು ಟ್ರ್ಯಾಕ್ಟರಗಳನ್ನು ನಿಲ್ಲಿಸಿದರು. ಇಬ್ಬರೂ ಚಾಲಕರನ್ನು ಹಿಡಿದುಕೊಳ್ಳುವಷ್ಟರಲ್ಲಿ ಒಬ್ಬ ಚಾಲಕನು ವಾಹನದಿಂದ ಇಳಿದು ನಮ್ಮಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋದನು.  ಇನ್ನೊಬ್ಬ ಚಾಲಕನು ಕೈಗೆ ಸಿಕ್ಕನು, ಕೈಗೆ ಸಿಕ್ಕ ಚಾಲಕನು ನಡೆಸುತ್ತಿದ್ದ ಟ್ರ್ಯಾಕ್ಟರ ನಂ: ಕೆ.ಎ-33/ಟಿ-9857 ಮತ್ತು ಟ್ರ್ಯಾಯಲಿ ನಂ: ಕೆ.ಎ-33/8771 ಅಂತಾ ಇದ್ದು ಟ್ರ್ಯಾಕ್ಟರದಲ್ಲಿ  ಉಸುಕು ತುಂಬಿದ್ದು ಉಸುಕಿನ ಅಂದಾಜ ಕಿಮ್ಮತ್ತು 800-00 ರೂ ಆಗಬುಹುದು. ಮತ್ತು ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ 1) ಮಲ್ಲಿಕಾಜರ್ುನ ತಂದೆ ಮಲ್ಲಯ್ಯಾ ಸಾ: ಮೈಲಾಪೂರ ಅಗಸಿ ಯಾದಗಿರಿ ಮತ್ತು ಅದರ ಚಾಲಕನ ಹೆಸರು 2) ಹಣಮಂತ ಮುಂಡ್ರಗಿ ಸಾಳ ಮೈಲಾಪೂರ ಅಗಸಿ ಯಾದಗಿರಿ ಅಂತಾ ಹೇಳಿದನು. ಇನ್ನೊಂದು ಚಾಲಕನು ಓಡಿ ಹೋದ ಟ್ರ್ಯಾಕ್ಟರ ನಂ: ಕೆ.ಎ-33/ಟಿ.ಎ-1747 ಅಂತಾ ಇದ್ದು ಅದರ ಟ್ರೈಲಿ ನೊಂದಣಿ ನಂಬರ ಅದರ ಚೆಸ್ಸಿ ನಂ: 83/2004 ಅಂತಾ ಇದ್ದು ಸದರಿ ಟ್ರೈಲಿಯಲ್ಲಿ ಉಸುಕು ತುಂಬಿದ್ದು ಉಸುಕಿನ ಅಂದಾಜ ಕಿಮ್ಮತ್ತು 800-00 ರೂ ಆಗಬುಹುದು. ಓಡಿ ಹೋದ ಚಾಲಕನ ಹೆಸರು 3) ತೋಟೇಂದ್ರ ತಂದೆ ಮಲ್ಲಿಕಾಜರ್ುನ ಕಿಲ್ಲನಕೇರಾ ಸಾ: ಬಂದಳ್ಳಿ ಹಾಗೂ ಇದರ ಮಾಲೀಕನ ಹೆಸರು 4) ಮಲ್ಲಿಕಾಜರ್ುನ ತಂದೆ ನಿಂಗಪ್ಪಾ ಕಿಲ್ಲನಕೇರಾ ಸಾ: ಬಂದಳ್ಳಿ ಅಂತಾ ಗೊತ್ತಾಯಿತು. ನಂತರ ಸದರಿ ಎರಡು ಟ್ರ್ಯಾಕ್ಟರದಲ್ಲಿಯ ಉಸುಕಿನಲ್ಲಿ ಶ್ಯಾಂಪಲಿಗಾಗಿ 2 ಕೆ.ಜಿ ಯಷ್ಟು ಉಸುಕನ್ನು ಪ್ರತ್ಯೇಕವಾಗಿ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಎರಡೂ  ಟ್ರ್ಯಾಕ್ಟರ ಚಾಲಕರು ಮತ್ತು ಮಾಲೀಕರು ಸೇರಿಕೊಂಡು  ಟ್ರ್ಯಾಕ್ಟ್ಪರದಲ್ಲಿ ಮರಳು ಸಾಗಾಣಿಕೆ ಮಾಡಲು ಸಕರ್ಾರದಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಪಡಿಸಿಕೊಳ್ಳಲಾಯಿತು. ಸದರಿ ಪಂಚನಾಮೆಯನ್ನು ಇಂದು ದಿನಾಂಕ 04-11-2018 ರಂದು ಬೆಳಗ್ಗೆ 10-15 ಗಂಟೆಯಿಂದ ಬೆಳಗ್ಗೆ 11-15 ಗಂಟೆಯವರೆಗೆ ಸ್ಥಳದಲ್ಲಿಯೇ ಕುಳಿತು ಬರೆದು ಮುಗಿಸಿ ಮುದ್ದೆಮಾಲು ಮತ್ತು ಒಬ್ಬ ಆರೋಪಿಯೊಂದಿಗೆ ಜಪ್ತಿಪಂಚನಾಮೆ ಸಮೇತ ಜ್ಞಾಪನ ಪತ್ರವನ್ನು ಹಾಜರುಪಡಿಸಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಜ್ಞಾಪನ ಪತ್ರದ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ನಂ: 212/2018 ಕಲಂ  379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ. ಗುನ್ನೆ ನಂ:-181/2018 ಕಲಂ 379 ಐಪಿಸಿ:-ದಿನಾಂಕ:04-11-2018 ರಂದು ಬೆಳಗಿನ ಜಾವ 04-00 ಗಂಟೆಗೆ ಮಾನ್ಯ ಶ್ರೀ ಎನ್.ವೈ.ಗುಂಡುರಾವ ಪಿ.ಎಸ್.ಐ ಸಾಹೇಬರು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಟ್ರ್ಯಾಕ್ಟರ ಚಾಲಕನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ.181/2018 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 182/2018 ಕಲಂ 323.341.504.506.ಸಂ34 ಐಪಿಸಿ ಮತ್ತು 3(1) (ಅರ್) (ಎಸ್) ಎಸ್ಸಿ.ಎಸ್ಟಿ. ಪಿ.ಎ ಯ್ಯಾಕ್ಟ 1989:- ದಿನಾಂಕ 04-11-2018 ರಂದು 8-15 ಪಿ ಎಂ ಕ್ಕೆ ಪಿಯರ್ಾದಿ ಶ್ರೀ ಕುಬೇರಪ್ಪ ತಂದೆ ವೀರಪ್ಪ ಯಲಬುಗರ್ಿ ವಯಾ|| 44 ವರ್ಷ ಜಾ|| ಬೇಡ ಉ|| ಪ್ರಭಾರಿ ಶೀಕ್ಷಕ ಸಂಕ್ಲಾಪೂರ ಸಾ|| ಯರೆಹಂಚಿನಾಳ ಹಾ||ವ|| ಕಣೆಕಲ್ ಇವರು ಠಾಣೆಗೆ ಬಂದು ತಮ್ಮ ಒಂದು ಲಿಖಿತ ಪಿಯರ್ಾದಿಯನ್ನು ನೀಡಿದ್ದು ಏನಂದರೆ. ಇಂದು ದಿನಾಂಕ 04-11-2018 ರಂದು ಮದ್ಯಾನ 2 ಗಂಟೆಯ ಸುಮಾರಿಗೆ ನಾನು ಖಾಸಗಿ ಕೆಲಸದ ಸಲುವಾಗಿ ನನ್ನ ಹೆಂಡತಿಯ ಊರಾದ ಕಣೆಕಲ್ದಿಂದ ಯಾದಗಿರಿಗೆ ನನ್ನ ಸೈಕಲ ಮೊಟಾರದ ನಂಬರ ಕೆಎ-33-ಎಸ್-2214 ರ ಮೇಲೆ ಹೊರಟಿದ್ದೆ.ಕಣೆಕಲ್ ಸ್ಮಶಾನದ ಹತ್ತಿರ ರೋಡಿಗೆ ಹೋಗುವಾಗ ಅಲ್ಲಿ ಕಣೆಕಲ್ ಗ್ರಾಮದ ಸೋಮಣ್ಣ ಬಾಡದ.ನಾಗಪ್ಪ ಬಾಡದ.ಸಿದ್ದಪ್ಪ  ಕುರಬ ಜನಾಂಗದವರು  ಕುಳಿತಿದ್ದರು.ನಾನು ಅವರಿಗೆ ನೋಡುತ್ತಾ ಹೊರಟಾಗ ಮೂರು ಜನರು ಕೂಡಿ ಎದ್ದು ಓಡಿ ಬಂದು ಏ ಬ್ಯಾಡ ಸೂಳಿಮಗನೆ ನಮಗೇಕೆ ಈ ರೀತಿ ನೋಡುತ್ತಿ ನಾವೇನು ಹೆಂಗಸರೆ ಎಂದು ನನ್ನನ್ನು ತಡೆದು ನಿಲ್ಲಿಸಿದರು ಆಗ ನಾನು ಅವರಿಗೆ ನಾನು ಸುಮ್ಮನೆ ನೋಡುತ್ತಾ ಹೊರಟಿದ್ದೇನೆ  ನಿಮಗೇನಾಯಿತು ಅಂದಾಗ ಏ ಬೇಡ ಸೂಳೆ ಮಗನೆ ನೀನು ಮಾಸ್ತರ ಆಗಿ ಧಿಮಾಕ ಹಡಿಸುತ್ತಿಯಾ ಎಂದು ಜಾತಿ ನಿಂದನೆ ಮಾಡಿಮೂರು ಜನರು ಕೂಡಿ ಕೈಯಿಂದ ನನಗೆ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಿರುತ್ತಾನೆ. ಅದೇ ವೇಳಗೆ ಕಣೆಕಲ್ ಗ್ರಾಮದ ಸಾಬರೆಡ್ಡಿ ತಂದೆ ಈರಪ್ಪ ಕಬ್ಬಲಿಗ, ಮಲ್ಲರೆಡ್ಡಿ ತಂದೆ ಸಾಬಣ್ಣ ಆರಮೋಳ ಇವರು ಬಂದು ಜಗಳವನ್ನು ನೋಡಿದರು. ಅವರು ಮೂರು ಜನರು ಲೇ ಬ್ಯಾಡ ಸೂಳೆ ಮಗನೆ ಊರಲ್ಲಿದ್ದು ಹೇಗೆ ಬಾಳ್ವೆ ಮಾಡುತ್ತಿ ಎಂದು ಜೀವದ ಬೆದರಿಕೆಯನ್ನು ಹಾಕಿದ್ದಾರೆ. ಕಾರಣ ಮೂರು ಜನರ ಮೇಲೆ ಸೂಕ್ತ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಸಾರಾಂಶದ ಮೇಲೆ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 182/2018 ಕಲಂ 323.341.504.506. ಸಂ 34 ಐ ಪಿ ಸಿ ಮತ್ತು 3(1) (ಅರ್) (ಎಸ್) ಎಸ್ಸಿ.ಎಸ್ಟಿ. ಪಿ.ಎ ಯ್ಯಾಕ್ಟ 1989 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.  

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 183/2017 ಕಲಂ 341,323,504 506 ಸಹಿತ 34 ಐಪಿಸಿ:- ಈ ಮೂಲಕ ಮಾನ್ಯರವರಲ್ಲಿ ವಿನಂತಿಸಿಕೊಳುವದೆನೆಂದರೆ ನಾನು ಸೋಮರೆಡ್ಡಿ ತಂದೆ ಚಂದ್ರಾಯ ಬಾಡದೋರ ವ|| 35 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಕಣೆಕಲ್ ತಾ|| ಗುರಮಿಠಕಲ್ ಜಿ|| ಯಾದಗಿರಿ ಇದ್ದು. ನಾನು ಇಂದು ಮದ್ಯಾಹ್ನ 02-00 ಗಂಟೆ ಸುಮಾರಿಗೆ ನಾನು  ಮನೆಯಲ್ಲಿ ಊಟ ಮಾಡಿ ನಮ್ಮೂರಿನ ಸಾಹೇಬಹುಸೇನ ತಂದೆ ಮೌಲಾನಸಾಬ ಇವರ ಮನೆಯ ಹತ್ತಿರ ಇರುವರ ಆಲದ ಮರದ ಹತ್ತಿರ ಹೋಗಿ ಕುಳಿತುಕೊಂಡಿದ್ದು ಅದೆ ಸಮಯಕ್ಕೆ ನಮ್ಮ ಅಣ್ಣತಮ್ಮರಾದ ನಾಗಪ್ಪ ತಂದೆ ಬಸವಂತಪ್ಪ ಬಾಡದ ಮತ್ತು ಸಿದ್ದಪ್ಪ ತಂದೆ ಮಲ್ಲೇಶಪ್ಪ ಕಾಡಮ್ಮನೋರ ಇವರು ಕೂಡ ಬಂದಿದ್ದು  ನಾವು 3 ಜನರು ಮಾತನಾಡುತ್ತ ಆಲದ ಮರದ ಕೇಳಗೆ ಕುಳಿತುಕೊಂಡಿದ್ದವು  ನಾವು ಮಾತನಾಡುತ್ತ ಕುಳಿತುಕೊಂಡಾಗ  ಇಂದು ದಿನಾಂಕ: 04-11-2018 ರಂದು ಮದ್ಯಾಹ್ನ 03-00 ಗಂಟೆಗೆ 1) ಕುಬೇರಪ್ಪ ಮಾಸ್ತಾರ 2) ಸಾಬರೆಡ್ಡಿ ತಂದೆ ಈರಪ್ಪ 3) ಮಲ್ಲೇಶಪ್ಪ್ಪ ತಂದೆ ಸಾಬಣ್ಣ 4) ರವಿಕುಮಾರ ತಂದೆ ಶರಣಪ್ಪ ಇವರೆಲ್ಲರು ಸೇರಿಕೊಂಡು ಬಂದು  ಅದರಲ್ಲಿ ಕುಬೇರಪ್ಪ ಮಾಸ್ತಾರ ಇತನು ಲೇ ಸೋಮರೆಡ್ಡಿ ಅಡಿಸಿ ಮಗನೆ ಯಾವಾಗ ನೋಡಿದರು ಇಲ್ಲೆ ಕುಳಿತುಕೊಳತಲೆ  ಕಟ್ಟಿಗೆ ಕುಂತು ನ್ಯಾಯಾ ಹೇಳುತ್ತೆನೆಲೆ ಹೋಗರು ಬರರು ನೋಡಲಿ ಅಂತಾ ಲಂಗಾ ಸೂಳೆ ಮಗನೆ, ಬೋಸಡಿ ಸೂಳೆ ಮಗನೆ, ರಂಡಿ ಮಗನೆ ಅಂತಾ ಬೈಯುತ್ತಾ ಬಂದವನೆ ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು  ಸಾಬರೆಡ್ಡಿ ಇತನು  ನನಗೆ ಕೈಯಿಂದ ಬೆನ್ನಿಗೆ ಗುದ್ದಿದನು, ಮಲ್ಲೇಶಪ್ಪ ಇತನು ಈ ಲಂಗಾ ಸೂಳೆ ಮಗನದ್ದು ಊರಲ್ಲಿ ಬಹಳ ಸೊಕ್ಕು ಆಗಿದೆ ಯಾವಾಗ ನೋಡಿದರು ಕಟ್ಟಿಗೆ ಕುಡತಲಲೇ ಲಂಗಾ ಸೂಳೆ ಮಗನೆ ಇನ್ನೊಂದು ಸಲ ಈ ಕಟ್ಟಿಗೆ ಕುಂತರೆ ನಿನಗೆ  ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕುತ್ತಿರುವಾಗ ನಾನು ಅಂಜಿ ಅವರಿಂದ ತಪ್ಪಿಸಿಕೊಳಲು ಹೋಗುತ್ತಿರುವಾಗ ರವಿಕುಮಾರ ಇತನು ಬಂದು ನನಗೆ ಅಡ್ಡಗಟ್ಟಿ ಎಲ್ಲಿ ತಪ್ಪಿಸಿಕೊಂಡು ಹೋಗುತ್ತೆಲೆ ಇವತ್ತು ನಿನಗೆ ಜೀವ  ಸಹಿತ ಬಿಡುವದಿಲ್ಲ ಈವತ್ತು ನಮ್ಮ ಕೈಯಾಗ ಸಿಕ್ಕಿದಿ ಇವತ್ತ ನಿನಗ ಒಂದು ಗತಿ ಕಣಿಸುತ್ತೆವೆ ಅಂತಾ ಜೀವದ ಬೇದರಿಕೆ ಹಾಕುತ್ತಿರುವಾಗ ಅಲ್ಲಿ ಇದ್ದ 1) ಸಿದ್ದಪ್ಪ ತಂದೆ ಮಲ್ಲೇಶಪ್ಪ 2) ನಾಗಪ್ಪ ತಂದೆ ಬಸವಂತಪ್ಪ  3) ಮಲ್ಲಪ್ಪ  ತಂದೆ ತಾಯಪ್ಪ 4) ಸಾಹೇಬಹುಸೇನ ತಂದೆ ಮೌಲಾನಸಾಬ ಎಲ್ಲರು ಸಾ|| ಕಣೆಕಲ್ ಇವರು ಬಂದು ಜಗಳವನ್ನು ಬಿಡಿಸಿದರು ಇಲ್ಲದಿದ್ದರೆ ನನಗೆ ಇನ್ನು ಹೊಡೆಬಡೆ ಮಾಡುತಿದ್ದರು ಕಾರಣ ನನಗೆ ಅವಾಚ್ಯವಾಗಿ ಬೈದು ಅಡ್ಡಗಟ್ಟಿ ಜೀವದ ಬೇದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ನನಗೆ ಯಾವುದೆ ರಕ್ತಗಾಯ ಆಗದ ಕಾರಣ ಆಸ್ಪತ್ರೆಗೆ ಹೋಗುವದಿಲ್ಲ ಅಂತಾ ದೂರು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.:- 266/2018 ಕಲಂ 279,337,338 ಐಪಿಸಿ:-ದಿನಾಂಕ: 04/11/2018 ರಂದು 02-15 ಪಿ ಎಮ್ ಕ್ಕೆ ಪಿರ್ಯಾದಿದಾರರು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಐನಾಪೂರ ಕ್ರಾಸ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ಎದುರಿನಿಂದ ಇನ್ನಿಂದು ಮೋ ಸೈಕಲ ನಂಬರ ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಎರಡು ವಾಹನಗಳು ಮುಖಾ-ಮುಖೀಯಾಗಿ ಡಿಕ್ಕಿಯಾದ ಬಗ್ಗೆ ಅಪರಾಧ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:-267/2018 ಕಲಂ 279,337,338 ಐಪಿಸಿ:-ದಿನಾಂಕ 04/11/2018 ರಂದು 03-30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ತಿಮ್ಮಣ್ಣ ತಂದೆ ನಾಗಪ್ಪ ತಳವಾರ  ಸಾ: ದೇವಿಕೇರಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ದಿನಾಂಕ 01.11.2018 ರಂದು ಮದ್ಯಹ್ನ 03.45 ಘಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಸಂಭಂದಿ ಹಣಮಂತ ಇವರು ಪೋನ ಮಾಡಿ ತಿಳಿಸಿದ್ದೆನಂದರೆ ಮೋಟಾರ ಸೈಕಲ್ ಮೇಲೆ ಕೆಂಭಾವಿಯಿಂದ ಊರಿಗೆ ಬರುತ್ತಿರುವಾಗ ಪರಸನಳ್ಳಿ ಸಮೀಪ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದು ನಮ್ಮ ತಂದೆಯವರಿಗೆ ಪೆಟ್ಟಾಗಿರುತ್ತದೆ. ಸುರಪೂರ ಆಸ್ಪತ್ರೆಗೆ ಬರುತ್ತಿದ್ದೆವೆ ಅಂತಾ ತಿಳಿಸಿದಾಗ ನಾನು ಸುರಪೂರ ಆಸ್ಪತ್ರೆಗೆ ಹೋಗಿ ನಮ್ಮ ತಂದೆಗೆ ನೋಡಲಾಗಿ ಅಫಘಾತದಲ್ಲಿ ಎಡಕಣ್ಣಿನ ಹತ್ತಿರ, ಮೂಗಿನ ಹತ್ತಿರ ಹಾಗೂ ಎರಡು ಕಾಲು ಬೇರಳಿಗೆ ತರಚಿದ ಗಾಯ ಮತ್ತು ತಲೆಗೆ ಗುಪ್ತಗಾಯ ವಾಗಿದ್ದು ನಮ್ಮ ತಂದೆಯವರಿಗೆ ವಿಚಾರಿಸಲಾಗಿ ನಮ್ಮ ಸಂಭಂದಿ ಹಣಮಂತ ಇವರ ಮೋಟಾರ ಸೈಕಲ್ ಹಿಂದುಗಡೆ ಕುಳಿತು ಸುರಪುರ ಕಡೆ ಬರುತ್ತಿದಾಗ ಹಣಮಂತ ಈತನು ಮೋಟಾರ ಸೈಕಲನ್ನು ಸಾವಕಾಶ ನಡೆಸು ಅಂತಾ ಹೇಳಿದರು ಅತೀವೇಗವಾಗಿ ನಡೆಸಿಕೊಂಡು  ಹೋಗಿ ಒಮ್ಮೇಲೆ ಎಡಬಾಗಕ್ಕೆ ಕಟ್ ಮಾಡಿದಾಗ ಇಬ್ಬರೂ ಬಿದ್ದಿದ್ದು ಆದರೆ ನನಗೆ ರಕ್ತ ಗಾಯ ಹಾಗೂ ತಲೆಗೆ ಬಾರಿ ಗುಪ್ತಗಾಯ ಆಗಿರುತ್ತದೆ ಅಂತಾ ತಿಳಿಸಿದರು. ನಂತರ ವೈದ್ದಯರ ಸಲಹೆದಂತೆ ಹೆಚ್ಚಿನ ಉಪಚಾರ ಕುರಿತು ನಮ್ಮ ತಂದೆಯವರನ್ನು ಯುನೈಟೆಡ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿ ಇಂದು ತಡವಾಗಿ ಬಂದು ಅಜರ್ಿ ಸಲ್ಲಿಸಿದ್ದು ಸದರಿ ಅಫಘಾತಕ್ಕೆ ಮೋಟಾರ ಸೈಕಲ್ ನಂ ಕೆ.33/ಕ್ಯೂ-8839 ನೇದ್ದರ ಚಾಲಕ ಹಣಮಂತ ಈತನ ಅತಿವೇಗ ಮತ್ತು ಅಲಕ್ಷತನದ ಚಾಲನವೇ ಕಾರಣವಿದ್ದು ಸದರಿವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 267/2018 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-298/2018 ಕಲಂ 379 ಐಪಿಸಿ:-ದಿನಾಂಕ 04.11.2018 ರಂದು ಬೆಳಗಿನ ಜಾವ 06-30 ಗಂಟೆಗೆ ಟ್ರ್ಯಾಕ್ಟರ ನಂ: ಕೆಎ-33-ಟಿಎ-4722 ಮತ್ತು ಟ್ರ್ಯಾಲಿ ಚಸ್ಸಿ ನಂ: 159 ವರ್ಷ 2013 ನೇದ್ದರ ಚಾಲಕ ತನ್ನ ಟ್ರ್ಯಾಕ್ಟರಲ್ಲಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಗುರುಮಠಕಲ್ ಕಡೆಗೆ ಸಾಗಿಸುತ್ತಿದ್ದಾಗ ಗಾಜರಕೊಟ್ ಕ್ರಾಸ್ನಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿದಾಗ ಅದರ ಚಾಲಕ ಓಡಿ ಹೋಗಿದ್ದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಪಡಿಸಿಕೊಂಡು ಸಂಬಂಧಪಟ್ಟ ಆರೋಪಿತನ ವಿರುದ್ದ ಪಿ.ಎಸ್.ಐ ರವರು ನೀಡಿದ ವರದಿ ಹಾಗೂ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 298/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-299/2018 ಕಲಂ: 143, 147, 323, 324, 504, 506 ಸಂ 149 ಐಪಿಸಿ:-ದಿನಾಂಕ 04.11.2018 ರಂದು 6-30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯ ಮುಂದೆ ತನ್ನ ಗಂಡನಿಗೆ ಕುಡಿಯುವುದು ಬಿಟ್ಟು ಸಂಸಾರ ಮಾಡಿಕೊಂಡು ತಿನ್ನು ಅಂತಾ ಬುದ್ದಿ ಮಾತು ಹೇಳುತ್ತಿದ್ದಾಗ ಆರೋಪಿತನ ಹಿಂದೆ ಪಂಪಸೆಟ್ ನೀರಿನ ವಿಷಯವಾಗಿ ತೆಗೆದ ಜಗಳದ ಹಳೆ ವೈಶಮ್ಯದಿಂದ ಆರೋಪಿತರೆಲ್ಲಾರು ಅಕ್ರಮ ಕೂಟ ರಚಿಸಿಕೊಂಡು  ತಮ್ಮ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಬಂದು ಫಿರ್ಯಾದಿಗೆ ಮತ್ತು ಆಕೆಯ ಗಂಡ ಹಾಗೂ ಮಗನಿಗೆ ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಫಿರ್ಯಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 299/2018 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-300/18 ಕಲಂ 279,337,338 ಐಪಿಸಿ:-ದಿನಾಂಕ 04.11.2018 ರಂದು ಸಂಜೆ 7-30 ಗಂಟೆ ಸುಮರಿಗ ಫಿರ್ಯಾಯು ತನ್ನ ಊರಿನವನಾದ ಆರೋಪಿತನ ಟಂ ಟಂ ನೇದ್ದರಲ್ಲಿ ಗುರುಮಠಕಲ್ದಿಂದ ಜೈಗ್ರಾಮಕ್ಕೆ ಹೋಗುತ್ತಿದ್ದಾಗ ಟಂ ಟಂ ಚಾಲಕ ಮಹಾದೇವಪ್ಪ ಈತನ ತನ್ನ ಟಂ ಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಕೊಂಡು ಹೋಗಿ ಸಮಯ ಸಂಜೆ 7-50 ಗಂಟೆ ಸುಮಾರಿಗೆ ಬೊರಬಂಡಾ ದಾಟಿದ ನಂತರ ಧರ್ಮಪೂರ ಕ್ರಾಸ್ನ ನಡುವೆ ರೋಡಿನ ಮೇಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ರಕ್ತ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಫಿರ್ಯಾದಿ ಮತ್ತು ಆರೋಪಿತರಿಬ್ಬರಿಗೂ ಸಾಧಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ ವಗೈರೆ ಅಂತಾ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 300/2018 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ:-348/2018 ಕಲಂ 504,506 ಐಪಿಸಿ:-ದಿನಾಂಕ:03-11-2018 ರಂದು 7 ಪಿ.ಎಂ.ಕ್ಕೆ ಶ್ರೀ ಶ್ರೀ ಹುಲಿಗೆಪ್ಪತಂದೆ ಬೀಮಣ್ಣ ಸಾ:ದೇವತ್ಕಲ್ಲತಾ||ಸುರಪೂರಇವರುಠಾಣೆಗೆ ಬಂದುಒಂದುಗಣಕಯಂತ್ರದಲ್ಲಿಟೈಪ ಮಾಡಿಅಜರ್ಿ ನಿಡಿದ್ದು, ಸದರಿಅಜರ್ಿಯ  ಸಾರಾಂಶವೆನೆಂದರೆನಾನು ದಲಿತ ಸೇನೆಯತಾಲೂಕಾ ಸಮಿತಿಯಲ್ಲಿ ಪ್ರಧಾನ ಕಾರ್ಯದಶರ್ಿಯಾಗಿದ್ದು, ಸಮಾಜ ಸೇವೆ ಮಾಡುತ್ತಾ ಬಂದಿರುತ್ತೆನೆ. ಹೀಗಿರುವಾಗತುತರ್ು ಪರಿಸ್ಥಿತಿ ನೀರು ನಿರ್ವಹಣಾ ವಿಷಯದಲ್ಲಿ ಕೋಳಿಹಾಳ ಮೂರು ತಾಂಡಾಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ಬಾರಿಅವ್ಯವಹಾರವಾಗಿದ್ದು ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾನ್ಯ ಜಿಲ್ಲಾಧಿಕಾರಿಗಳವರೆಗೆ ದಿನಾಂಕ:23-10-2018 ರಂದು ಮನವಿ ಪತ್ರಕೊಟ್ಟಿದ್ದು ಹೀಗಿರುವಾಗ ದಿನಾಂಕ:25-10-2018 ರಂದು ಸಾಯಂಕಾಲ 5.45 ಸುಮಾರಿಗೆ ಮಾನ್ಯ ಶ್ರೀ ಲಕ್ಷ್ಮಣರಾಠೋಟ ಪೋನಿನ ಮುಖಾಂತರ ಮಾತನಾಡಿಯಾರೂ ನೀನು ಎಂದು ಕೇಳಿ ನಮ್ಮತಾಂಡಾಕ್ಕೆದೂರುಕೊಡುವುದಕ್ಕೆ ನೀವು ಯಾರುಅದಕ್ಕೆ ನಾನು ತಾವುಯಾರೂಎಂದು ಕೇಳಿ ನಮ್ಮತಾಂಡಾಕ್ಕೆದೂರುಕೊಡುವುದಕ್ಕೆ ನೀವು ಉಆರುಅದಕ್ಕೆ ನಾನು ಯಾವುಯಾರುಎಂದು ಕೇಳಿದಾಗ ನಾನು ತಾ.ಪಂ ಸದಸ್ಯನಿದ್ದೆನೆ. ಬೊಸಡಿ ಮಕ್ಕಳೆ ನ್ಮಮತಾಂಡಾಕ್ಕೆದೂರುಕೊಡುವುದಕ್ಕೆ ನಿನ್ನದು ಎಷ್ಟು ದೈರ್ಯಎಂದುಅವಾಚ್ಯ ಶಬ್ದಗಳಿಂದ ಬೈದು ನೀವು ಕೊಟ್ಟಂತದೂರು ವಾಪಸ್ಸು ತಗೆದುಕೊಳ್ಳದೆ ಹೋದರೆ ನಿಮ್ಮಊರುತನ ಬಂದುಜೀವತಗೆಯುತ್ತಿನಿ ಅಂತಾಅವಾಚ್ಯ ಶಬ್ದಗಳಿಂದ ಬೈದು ನನಗೆ ಕೊಲೆ ಬೆದರಿಕೆ ಹಾಕಿದ ಲಕ್ಷ್ಮಣರಾಠೋಡ ಮತ್ತುಇನ್ನಿತರರ ಮೇಲೆ ಕಾನೂನಿನ ಕ್ರಮ ಜರುಗಿಸಿ ನನಗೆ ನ್ಯಾಯ ಮತ್ತುರಕ್ಷಣೆಕೊಡಬೆಕೆಂದುತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆನೆ. ಅಂತಾಇತ್ಯಾಧಿಯಾಗಿಅಜರ್ಿ ನಿಡಿದ್ದು ಸದರಿಅಜರ್ಿಯಅಪರಾಧವುಅಸಂಜ್ಞೆಯಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆಗುನ್ನೆದಾಖಲು ಮಾಡಿಕೊಂಡುತನಿಖೆ ಕೈಕೊಳ್ಳಲು ಅನುಮತಿ ನಿವೇಧಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವುಇಂದುಅನುಮತಿ ಪಡೆದುಕೊಂಡುಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ:-349/2018 ಕಲಂ  87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:04-11-2018 ರಂದು 5-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ.ಐ ಸಾಹೇಬರು 5 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:04-11-2018 ರಂದು 3-15 ಪಿ.ಎಮ್.ಕ್ಕೆಠಾಣೆಯಲ್ಲಿದ್ದಾಗ ಸುರಪುರ ಪಟ್ಟಣದಗಂಜಏರಿಯಾದ ಹತ್ತಿ ಮಿಲ್ಲ ಪಕ್ಕದಲ್ಲಿರುವಡಾ:ಪಟ್ಟಣಶೇಟ್ಟಿಇವರ ಹೊಲದಲ್ಲಿರುವ ಹಾಳುಬಿದ್ದ ಆಲುಬ್ಲಾಕರೂಮಿನ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ  ಕೆಲವು ಜನರುದುಂಡಾಗಿ ಕುಳಿತುಕೊಂಡು ಹಣವನ್ನು ಪಣಕಿಟ್ಟುಅಂದರ-ಬಾಹರ ವೆಂಬ ಜೂಜಾಟಆಡುತ್ತಿದ್ದಾರೆಅಂತಾ ಮಾಹಿತಿ ಬಂದ ಮೇರೆಗೆಇಬ್ಬರು ಪಂಚರಾದ1) ಶ್ರೀ ವಿಜಯಕುಮಾರತಂದೆದತ್ತಾತ್ರೆಯ ತಳವಾರ ವಯಾ:34 ವರ್ಷ ಉ:ಕೂಲಿ ಜಾತಿ:ಕಬ್ಬಲಿಗ ಸಾ:ಕುಂಬಾರಪೇಠ  2) ಶ್ರೀ ಮಾನಪ್ಪತಂದೆ ಹಣಮಂತಅವಿನ್ ವಯಾ:35 ವರ್ಷ ಉ:ಹಮಾಲಿ ಜಾತಿ:ಕುರುಬರ ಸಾ:ಕುಂಬಾರಪೇಠಇವರನ್ನು 3-30 ಪಿ.ಎಂ.ಕ್ಕೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅವರುಅದಕ್ಕೆಒಪ್ಪಿಕೊಂಡಿದ್ದು ಸದರಿ ಪಂಚರೊಂದಿಗೆ ನಾನು ಠಾಣೆಯ ಪಿ.ಎಸ್.ಐ  ಶ್ರೀ ಸೋಮಲಿಂಗ ಒಡೆಯವರ ಹಾಗೂ ಸಿಬ್ಬಂಧಿಯವರಾದ  1) ಮನೋಹರ ಹೆಚ್ಸಿ-105 2) ಮಂಜುನಾಥ ಹೆಚ್ಸಿ-176 3) ಮಂಜುನಾಥ ಸಿಪಿಸಿ-271 4) ಬಸಪ್ಪ  ಸಿಪಿಸಿ-393 5) ದೇವಿಂದ್ರ ಸಿಪಿಸಿ-184 6) ಸೋಮಯ್ಯಾ ಸಿಪಿಸಿ- 235 7) ವಿರೇಶ ಸಿಪಿಸಿ-374 ಎಲ್ಲರೂಕೂಡಿಎರಡು ಖಾಸಗಿ ಕ್ರೊಜರ ವಾಹನದಲ್ಲಿಠಾಣೆಯಿಂದ ಹೊರಟುಗಂಜಏರಿಯಾದಲ್ಲಿರುವ ಹತ್ತಿ ಮಿಲ್ಲ ಹತ್ತಿರ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಡೆದುಕೊಂಡು ಪಟ್ಟಣಶೆಟ್ಟಿಇವರ ಹೊಲದಲ್ಲಿರುವ ಹಾಳು ಬಿದ್ದ ಆಲು ಬ್ಲಾಕರೂಮಿನ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲುರೂಮಿನ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕಿಟ್ಟುಇಸ್ಪೇಟ ಎಲೆಗಳ ಸಹಾಯಂದಿಂದಅಂದರ-ಬಾಹರ ವೆಂಬ ಜೂಜಾಟಆಡುತ್ತಿರುವದನ್ನುಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ 4 ಪಿ.ಎಮ್.ಕ್ಕೆಒಮ್ಮೆಲೆಅವರ ಮೇಲೆ ದಾಳಿಮಾಡಲಾಗಿ ಒಟ್ಟು 5 ಜನರು ಸಿಕ್ಕಿದ್ದು ಅವರ  ಹೆಸರು ವಿಳಾಸ ವಿಚಾರಿಸಿ ಅಂಗಶೋಧನೆ ಮಾಡಲಾಗಿ1) ಸಾಬಣ್ಣತಂದೆ ಭಿಮಣ್ಣ ಹವಲ್ದಾರ ವಯಾ:31 ವರ್ಷಜಾತಿ:ಬೇಡರ ಉ:ಗುಮಾಸ್ತ ಕೆಲಸ ಸಾ:ಕುಂಬಾರಪೇಠಈತನ ಹತ್ತಿರ 720/-ರೂ ನಗದು ಸಿಕ್ಕಿದ್ದು 2) ಮಾನಶಪ್ಪತಂದೆ ಮಾನಯ್ಯಾದೇಸಾಯಿ ವಯಾ:41 ವರ್ಷಜಾತಿ:ಬೇಡರ ಉ:ಹಮಾಲಿ ಕೆಲಸ ಸಾ:ಕುಂಬಾರಪೇಠಈತನ ಹತ್ತಿರ 900/- ರೂ ನಗದು ಸಿಕ್ಕಿದ್ದು 3) ನಂದಪ್ಪತಂ.ಮಲ್ಲಪ್ಪಕರಿಬಾವಯಿ ವಯಾ:35 ಜಾತಿ:ಬೇಡರ ಉ:ಗೌಂಡಿ ಕೆಲಸ ಸಾ:ಕುಂಬಾರ ಪೇಠಈತನ ಹತ್ತಿರ 750/- ನಗದು ಹಣ ಸಿಕ್ಕಿದ್ದು 4) ಇಬ್ರಾಹಿಂತಂದೆಯಕಬಾಲ್ಸಾಬ ದೇವತ್ಕಲ್ ವಯಾ:44 ಜಾ:ಮುಸ್ಲಿಂ ಉ:ಖಾಸಗಿ ಕೆಲಸ ಸಾ:ಕುಂಬಾರ ಪೇಠಈತನ ಹತ್ತಿರ 800/- ನಗದು ಸಿಕ್ಕಿದ್ದು 5) ದಶರಥತಂದೆರಾಮಯ್ಯಾ ಪ್ಯಾಪ್ಲಿ ವಯಾ:55 ಜಾತಿ:ಬೇಡರ ಉ:ಹಮಾಲಿ ಕೆಲಸ ಸಾ:ಸುರಪುರಈತನ ಹತ್ತಿರ 950/- ರೂ ನಗದು ಹಣ ಸಿಕ್ಕಿದ್ದು  ಮತ್ತುಕಣದಲ್ಲಿದ್ದ 880/- ರೂಗಳು ಹಾಗೂ 52 ಇಸ್ಪೇಟ ಎಲೆಗಳು ಅ.ಕಿ 00=00 ಹೀಗೆ ಒಟ್ಟು ನಗದು ಹಣ 5000=00 ರೂಗಳು ದೋರೆತವು.ಸದರಿಯವರೆಲ್ಲರ ಹತ್ತಿರಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5000=00 ರೂಪಾಯಿಗಳನ್ನು, ಮತ್ತು 52 ಇಸ್ಪೇಟ ಎಲೆಗಳನ್ನು  ಪಂಚರ ಸಮಕ್ಷಮಜಪ್ತಿ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 4 ಪಿ.ಎಮ್.ದಿಂದ 5 ಪಿ.ಎಮ್.ದ ವರೆಗೆ ಪಂಚನಾಮೆ ಮಾಡಿ 5 ಜನಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ ಬಂದುತಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಸದರಿಆರೋಪಿತರ ವಿರುದ್ದ ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿಕ್ರಮಜರುಗಿಸಲು ಸೂಚಿಸಿದ ಮೇರೆಗೆಗುನ್ನೆದಾಖಲು ಮಾಡಿಕೊಂಡುತನಿಖೇಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:-200/2018 ಕಲಂ 21(3) (4) ಎಂ.ಎಂ.ಆರ್.ಡಿ ಕಾಯ್ದೆ & 379 ಐಪಿಸಿ:-ದಿನಾಂಕ: 04/11/2018 ರಂದು ಸಾಯಂಕಾಲ 16.15 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ  ಟ್ರ್ಯಾಕ್ಟರ ನಂ. ಕೆಎ-33 ಟಿಎ-4345 & ಟ್ರೇಲರ  ಕೆಎ-33 ಟಿಎ-4346 ನೇದ್ದರಲ್ಲಿ ಅವರ ಮಾಲಿಕ ಹೇಳಿದಂತೆ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಹೊರಟಾಗ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿ ಹೆಚ್.ಸಿ-130, ಪಿಸಿ-290, 288 ರವರು ದಾಳಿಮಾಡಿ ಮಾಡಿದಾಗ ಆರೋಪಿತನು ಸ್ಥಳದಲ್ಲಿ ವಾಹನವನ್ನು ಬಿಟ್ಟು ಓಡಿಹೋಗಿದ್ದು, ನಂತರ ಸ್ಥಳದಲ್ಲಿ ಪಂಚನಾಮೆ ಮಾಡಿಕೊಂಡು ವಾಹನವನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಪಿಯರ್ಾದಿ ನೀಡದ ಲಿಖಿತ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.      

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:-201/2018 ಕಲಂ 21(3) (4) ಎಂ.ಎಂ.ಆರ್.ಡಿ ಕಾಯ್ದೆ & 379 ಐಪಿಸಿ:-ದಿನಾಂಕ: 04/11/2018 ರಂದು ಸಾಯಂಕಾಲ 17.35 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ ನೋಂದಣಿ ನಂಬರ ಇಲ್ಲದ ಟ್ರ್ಯಾಕ್ಟರ  & ಟ್ರೇಲರ  ಕೆಎ-28 ಟಿಎ-9928 ನೇದ್ದರಲ್ಲಿ ಅವರ ಮಾಲಿಕ ಹೇಳಿದಂತೆ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಹೊರಟಾಗ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿ ಹೆಚ್.ಸಿ-130, ಪಿಸಿ-288 ರವರು ದಾಳಿಮಾಡಿ ಮಾಡಿದಾಗ ಆರೋಪಿತನು ಸ್ಥಳದಲ್ಲಿ ವಾಹನವನ್ನು ಬಿಟ್ಟು ಓಡಿಹೋಗಿದ್ದು, ನಂತರ ಸ್ಥಳದಲ್ಲಿ ಪಂಚನಾಮೆ ಮಾಡಿಕೊಂಡು ವಾಹನವನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಪಿಯರ್ಾದಿ ನೀಡದ ಲಿಖಿತ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.      
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:-163/2018 ಕಲಂ: 341 323,504, 506 ಸಂ: 149 ಐಪಿಸಿ:-ದಿನಾಂಕ: 04/11/2018 ರಂದು 07.30 ಪಿಎಂ ಕ್ಕೆ ಪಿಯರ್ಾದಿ ಶ್ರೀ. ಬೀರಲಿಂಗತಂದೆ ಸುಭಾಸಗಚ್ಚಿನಮನಿ ವಯಾ:25 ವರ್ಷ ಉ: ಒಕ್ಕಲುತನಜಾ: ಬೇಡರ ಸಾ: ಚನ್ನಪ್ಪನದೊಡ್ಡಿ ಶೆಟ್ಟಿಕೇರಾತಾ: ಶಹಾಪೂರ ಜಿ: ಯಾದಗಿರಿಇವರುಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಸದರಿಹೇಳಿಕೆ ಸಾರಂಶಏನಂದರೆ, ನಿನ್ನ ದಿ:03/11/2018 ರಂದು ನಾನು ಮತ್ತು ನಮ್ಮ ಮನೆಯವರು ಸೇರಿ ಗೋಗಿ ಪೊಲೀಸ್ಠಾಣೆಗೆ ಹೋಗಿ ನಮ್ಮ ಮೇಲೆ ಕೇಸ್ಆಗಿದ್ದರ ಬಗ್ಗೆ ಜಾಮೀನು ಪಡೆದುಕೊಂಡು ಬಂದಿದ್ದೆವು. ಇಂದು ದಿನಾಂಕ:04/11/2018 ರಂದು ಬೆಳಿಗ್ಗೆ 07.00 ಎಎಂ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನಿಂದ ಸಂಡಾಸಕ್ಕೆ ಹೋಗುವಾಗ ಭೀಮರಾಯತಂದೆರಾಮಣ್ಣ ಹಸನಾಪೂರರಾಮಣ್ಣತಂದೆ ಭೀಮಣ್ಣ ಹಸನಾಪೂರಇವರುಇಬ್ಬರುಕೂಡಿ ನನ್ನನ್ನುದಾರಿಯಲ್ಲಿತಡದು ನಿಲ್ಲಿಸಿ, ಸೂಳೆ ಮಗನೆ ನಿನ್ನ ಹೆಂಡತಿಜೋತೆ ನಾನು ಮಾತನಾಡದಿದ್ದರು ನಮ್ಮಜೋತೆ ಜಗಳಕ್ಕೆ ಬರುತ್ತಿ, ಅವಳೆ ಮಾತನಾಡಿದರೆ ನಾವು ಸುಮ್ಮನಿರಬೇಕು ಏನು ಅಂತಾಅಂದರು. ಆಗ ನಾನು ನಿಮ್ಮ ಹೆಣ್ಣು ಮಕ್ಕಳ ಜೋತೆಯಲ್ಲಿ ಮಾತಾಡುತ್ತಾಕೂಡುತ್ತೇನೆ ನೋಡೋಣಅಂತಾಅಂದಾಗ ಮಗನೆ ನಮ್ಮತಂಟೆಗೆ ಬಂದರೆ ಹೆಂಗ ಆಗತದಅಂತಾ ನಿನ್ನೆಠಾಣೆಗೆ ಹೋದಾಗಗೋತ್ತಾಯಿತಾಇಲ್ಲ ಮಕ್ಕಳೆ, ನಿಮ್ಮನ್ನುಇನ್ನುಊರಲ್ಲಿಇರಲು ಬಿಡುವದಿಲ್ಲ ಅಂತಾಅವಾಚ್ಯವಾಗಿ ಬೈಯತೊಡಗಿದರು. ಆಗ ನಾನು, ನೀವುಗಳು ನಮ್ಮ ಮೇಲೆ ಸುಳ್ಳು ಕೇಸ್ ಮಾಡಿ ನಮಗೆ ಬೈಯುತ್ತಿರೀ ಏನು ಅಂತಾಅಂದಾಗ 1) ಭೀಮರಾಯತಂದೆರಾಮಣ್ಣ ಮತ್ತು 2) ರಾಮಣ್ಣತಂದೆ ಭೀಮಣ್ಣಇವರಅಲ್ಲೆಇದ್ದ 3) ಭೀಮರಾಯತಂದೆ ಬಸ್ಸಣ್ಣ ಮಾಲಿ 4) ಮರೆಪ್ಪತಂದೆ ಭಿಮಣ್ಣ ಹಸನಾಪೂರ 5) ಸುಬಾಸ್ತಂದೆ ಮರೆಪ್ಪ ಹಸನಾಪೂರ 6) ಶಿವಪ್ಪ ತಂದೆ ಭಿಮಣ್ಣ ಹಸನಾಪೂರ 7) ಯಂಕಪ್ಪತಂದೆ ಹಣಮಂತ್ರಾಯ ಮಕಾಶಿ ಎಲ್ಲರೂಜಾ: ಬೇಡರ ಸಾ: ಚನ್ನಪ್ಪನದೊಡ್ಡಿ ಶೆಟ್ಟಿಕೇರಾಇವರೆಲ್ಲರೂಕೂಡಅವಾಚ್ಯವಾಗಿ ಬೈಯುತ್ತಾ ಭೀಮರಾಯತಂದೆರಾಮಣ್ಣಈತನುಕೈಯಿಂದ ನನ್ನ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ. ರಾಮಣ್ಣಈತನು ನನ್ನ ಕಾಲಿಗೆ ಒದ್ದಿರುತ್ತಾನೆ. ನಂತರಎಲ್ಲರೂ ಸೂಳೆ ಮಗನೆ ನಿನ್ನನ್ನು ನಿಮ್ಮ ಮನೆಯವರನ್ನುಖಲಾಸ್ ಮಾಡುತ್ತೇವೆಅಂತಾಜೀವದ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ನಮ್ಮತಂದೆ ಸುಭಾಸ್ತಂದೆ ಹಣಮಂತ್ರಾಯ, ನಮ್ಮದೊಡ್ಡಪ್ಪನ ಮಗ ನಿಂಗಪ್ಪತಂದೆಅಂಬ್ರಪ್ಪ ಹಾಗೂ ಅಲ್ಲೆ ಹೊರಟಿದ್ದಕೊಂಡಯ್ಯತಂದೆಯಂಕಣ್ಣಗೆಜ್ಜಿ ಸಾ: ವನದುಗರ್ಾದೊಡ್ಡಿ ಮತ್ತುದೇವಿಂದ್ರಪ್ಪತಂದೆ ಬಸಣ್ಣ ಜಾಲಳ್ಳಿ ಸಾ: ಮಾಚಗುಂಡಾಳ ದೋಡ್ಡಿ ಇವರುಗಳು ನೋಡಿ ಬಿಡಿಸಿಕೊಂಡರು. ಇಲ್ಲದಿದ್ದೆರೆಇನ್ನು ಹೊಡೆಯುತ್ತಿದ್ದರು.ಕಾರಣ ನನಗೆ ವಿನಾಕಾರಣತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈಯ್ದುಕೈಯಿಂದ ಹೊಡೆದುಜೀವ ಭಯ ಹಾಕಿದ ಮೇಲಿನ ಏಳು ಜನರ ವಿರುದ್ಧ ಕಾನೂನು ಕ್ರಮಜರುಗಿಸಬೇಕುಅಂತಾಪಿಯರ್ಾದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 163/2018 ಕಲಂ:314 323, 504, 506 ಸಂ: 149 ಐಪಿಸಿ  ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.


ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:-128/2018 ಕಲಂ 143, 147, 148, 341, 323, 324, 325, 504, 506 ಸಂ 149 ಐಪಿಸಿ:-ದಿನಾಂಕ: 04/11/2018 ರಂದು ಹಳ್ಳೆಪ್ಪ ನಾಯ್ಕೋಡಿ ಎಂಬುವರು ಮೃತಪಟ್ಟಿದ್ದರಿಂದ ಫಿಯರ್ಾದಿ ಹಾಗೂ ಇತರರು ಕೂಡಿ ಸಾಯಂಕಾಲ ಮೃತನ ಅಂತ್ಯ ಸಂಸ್ಕಾರ ಕುರಿತು ಸ್ಮಶಾನಕ್ಕೆ ಹೊರಟಾಗ ಆರೋಪಿ ಮಹಿಬೂಬಸಾಬ ತಂದೆ ಹುಸೇನಸಾಬ ಚೌದ್ರಿ ಈತನು ಕುಡಿದ ಅಮಲಿನಲ್ಲಿ ಶವದ ಮುಂದೆ ಕುಣಿಯುವದು, ಒದರಾಡುವದು, ಅಡ್ಡಡ್ಡ ಬರುವದು ಮಾಡುತ್ತಿದ್ದರಿಂದ ಸದರಿಯವನಿಗೆ ಬೈದು ಬುದ್ದಿವಾದ ಹೇಳಿ ಮನೆಗೆ ಕಳಿಸಿದ್ದು ಇರುತ್ತದೆ. ಅಂತ್ಯಸಂಸ್ಕಾರ ಮುಗಿಸಿಕೊಂಡು ಫಿಯರ್ಾದಿ ಹಾಗೂ ಇತರರು ಕೂಡಿ ಮರಳಿ ಮನೆಗೆ ಸಾಯಂಕಾಲ 5 ಗಂಟೆ ಸುಮಾರಿಗೆ ಕೆರೆ ಅಂಗಳದಲ್ಲಿ ಹೊರಟಾಗ ಆರೋಪಿತರು ತಡೆದು ನಿಲ್ಲಿಸಿ ಮಹಿಬೂಬಸಾಬ ಈತನು ಎಲೇ ಭೋಸಡಿ ಮಕ್ಕಳೆ ನಾನು ಕುಡಿದು ಕುಣಿದಾಡಿದರೆ ನಿಮಗೇನಾಯ್ತು ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ಹಣಮಂತ ಈತನ ತುಟಿ ಕಚ್ಚಿ ಭಾರಿ ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಮೇಲ್ಕಂಡ 5 ಜನರ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆ ಸಾರಾಂಶದ ಮೇಲಿಂದ .ಠಾಣೆ ಗುನ್ನೆ ನಂ: 128/2018 ಕಲಂ 143, 147, 148, 341, 323, 324, 325, 504, 506 ಸಂ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:-129/2018 ಕಲಂ 143, 147, 148, 323, 324, 504, 506 ಸಂ 149 ಐಪಿಸಿ:-ದಿನಾಂಕ:04/11/2018 ರಂದು ಸಾಯಂಕಾಲ ಫಿಯರ್ಾದಿಯು ಹಳ್ಳೆಪ್ಪ ನಾಯ್ಕೋಡಿ ಎಂಬುವರ ಸಮಕ್ಕೆ ಹೋದಾಗ ಆರೋಪಿತರು ಕುಡಿದ ಅಮಲಿನಲ್ಲಿ ವಿನಾಕಾರಣ ಜಗಳ ಮಾಡಿದ್ದರಿಂದ ಫಿಯರ್ಾದಿ ಮನೆಗೆ ಹೋಗಿ ತನ್ನ ಮಕ್ಕಳಿಗೆ ತಿಳಿಸಿದಾಗ ಯಾಕೆ ಜಗಳ ಮಾಡಿದ್ದಾರೆ ಕೇಳೋನ ನಡಿ ಅಂತಾ ಎಲ್ಲರೂ ಕೂಡಿ ಸಾಯಂಕಾಲ 5 ಗಂಟೆ ಸುಮಾರಿಗೆ ಕೆರೆ ಅಂಗಳದಲ್ಲಿ ಬಂದಾಗ ಆರೋಪಿತರು ಸಹ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಎದುರಿಗೆ ಬಂದಾಗ ಯಾಕೆ ಜಗಳ ಮಾಡಿದ್ದೀರಿ ಅಂತಾ ಕೇಳಿದ್ದಕ್ಕೆ ಆರೋಪಿತರು ಫಿಯರ್ಾದಿ ಮತ್ತು ಅವನ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಮೇಲ್ಕಂಡ 5 ಜನರ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆ ಸಾರಾಂಶದ ಮೇಲಿಂದ .ಠಾಣೆ ಗುನ್ನೆ ನಂ: 129/2018 ಕಲಂ 143, 147, 148, 323, 324, 504, 506 ಸಂ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!