ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-11-2018

By blogger on ಶನಿವಾರ, ನವೆಂಬರ್ 3, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-11-2018 

ಯಾದಗಿರಿ ನಗರ ಪೊಲೀಸ್ ಠಾಣೆ;- ಗುನ್ನೆ ನಂ 161/2018 ಕಲಂ 379 ಐ.ಪಿ.ಸಿ:- ದಿನಾಂಕ.02/11/2018 ರಂದು 6-15 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಟಿ.ಆರ್ ರಾಘೆವೇಂದ್ರ ಪಿ.ಐ ಡಿಎಸ್.ಬಿ ಯಾದಗಿರಿ ರವರು ಠಾಣೆಗೆ ಬಂದು ಜ್ಞಾಪನಾಪತ್ರ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ.02/11/2018 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ  ನಾನು ಮತ್ತು ನಮ್ಮ ಜೀಪ ಚಾಲಕ ಸಿದ್ದಪ್ಪ ಎಪಿಸಿ-96 ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂ.ಕೆಎ-33-ಜಿ.100 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ತೀರುಗಾಡುತ್ತಾ ಗಾಂದಿಚೌಕ, ಹತ್ತಿಕುಣಿ ಕ್ರಾಸ ಮೂಲಕ ಗಂಗಾನಗರದ ಕಡೆಗೆ ಬರುತ್ತಿರುವಾಗ ಗಂಗಾನಗರ-ವಾಡಿ ಬೈಪಾಸದಲ್ಲಿ ಬಂದಾಗ ನಮ್ಮ ಎದುರುಗಡೆ ಒಂದು ಟಿಪ್ಪರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದನ್ನು ಕಂಡು 5-15 ಪಿಎಂಕ್ಕೆ ಸುಮಾರಿಗೆ ಕೈ ಮಾಡಿದಾಗ ಅದರ ಚಾಲಕನು ಟಿಪ್ಪರನ್ನು ನಿಲ್ಲಿಸಿದವನೆ ಓಡಿ ಹೋಗಿದ್ದು ಸದರಿ ಟಿಪ್ಪರನ್ನು ನೋಡಲಾಗಿ ಟಿಪ್ಪರ್ ನಂ ಎಂಹೆಚ್-05-ಡಿಕೆ.3410 ಇದ್ದು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇರುತ್ತದೆ. ಚಾಲಕನು ಓಡಿ ಹೋಗಿದ್ದರಿಂದ ಮರಳನ್ನು ಕದ್ದು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬರುತಿದ್ದು ಖಚಿತವಾಯಿತು. ಸದರಿ ಟಿಪ್ಪರ್ ಚಾಲಕ, ಮತ್ತು ಮಾಲೀಕರ ಹೆಸರು ಗೊತ್ತಾಗಿರುವುದಿಲ್ಲಾ. ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಕದ್ದು ಟಿಪ್ಪರ್ದಲ್ಲಿ  ಸಾಗಾಣಿಕೆ ಮಾಡುತ್ತಿದ್ದುದು ಖಾತ್ರಿಯಾಗಿರುತ್ತದೆ. ನಂತರ ಮರಳು ತುಂಬಿದ ಟಿಪ್ಪರ್ನ್ನು ನಮ್ಮ ಸಿಬ್ಬಂದಿಯ ಸಹಾಯದಿಂದ ನಮ್ಮ ವಶಕ್ಕೆ ಪಡೆದುಕೊಂಡಿದ್ದು ಮರಳಿನ ಅಂದಾಜು ಕಿಮ್ಮತ್ತು 8,000/ರೂ. ದಷ್ಟು ಇರುತ್ತದೆ. ಟಿಪ್ಪರ ನಂ ಎಂಹೆಚ್-05-ಡಿಕೆ.3410 ನೇದ್ದರ ಅಂ.ಕಿ. 3,00,000-00 ಇದ್ದು ಸದರಿ ಟಿಪ್ಪರ್ ನೆದ್ದರ ಚಾಲಕ ಮತ್ತು ಮಾಲೀಕನ ಮೇಲೆ ಮುಂದಿನ ಕ್ರಮಕ್ಕಾಗಿ ಸಿಬ್ಬಂದಿಯವರ ಸಹಾಯದಿಂದ ಮುದ್ದೆಮಾಲು ಸಮೇತ 6-00 ಪಿಎಂಕ್ಕೆ ಠಾಣೆಗೆ ಬಂದು ನನ್ನ ವರದಿಯನ್ನು ಠಾಣೆಯ ಗಣಕಯಂತ್ರದಲ್ಲಿ  ತಯ್ಯಾರಿಸಿ ಪ್ರಿಂಟ ತೆಗೆದು ನನ್ನ ಉಕ್ತ ಲೇಖನದೊಂದಿಗೆ ಸಹಿ ಮಾಡಿ, ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಮುಂದಿನ ಕ್ರಮಕ್ಕಾಗಿ 6-15 ಪಿಎಂಕ್ಕೆ ವರದಿಯನ್ನು ಯಾದಗಿರಿ ನಗರ ಠಾಣೆ ಎಸ್.ಎಚ್.ಓ ರವರಿಗೆೆ ಒಪ್ಪಿಸಿದ್ದು ಮುಂದಿನ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಿದ  ಮೇರೆಗೆ ಠಾಣೆ ಗುನ್ನೆ ನಂ.161/2018 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ. ಗುನ್ನೆ ನಂ:- 210/2018  ಕಲಂ 279, 304 (ಎ) ಐ.ಪಿ.ಸಿ:- ದಿನಾಂಕ: 02-11-2018 ರಂದು 8 ಎ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಎಮ್.ಎಲ್.ಸಿ ವಸೂಲಾಗಿದ್ದರಿಂದ  ಆಸ್ಪತ್ರೆಗೆ ಬೇಟಿ ನೀಡಿ ಮೃತ ಮಲ್ಲಪ್ಪಾ ತಂದೆ ಬುಗ್ಗಪ್ಪ ಸಾ; ಹಳಗೇರಾ ಇತನ ಹೆಂಡತಿಯಾದ ಶ್ರೀಮತಿ ವಿಜಯಲಕ್ಷ್ಮೀ ಗಂಡ ಮಲ್ಲಪ್ಪಾ ಚಿನ್ನಾಕಾರ ವಯಾ: 28 ಉ: ಕೂಲಿ ಕೆಲಸ ಜಾ: ಕುರುಬರ ಸಾ: ಹಳಗೇರಾ ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದು ಅದರ ಸಾರಾಂಶವೆನಂದರೆ ನನ್ನ ಗಂಡನಾದ ಮಲ್ಲಪ್ಪಾ ತಂದೆ ಬುಗ್ಗಪ್ಪಾ ಚಿನ್ನಾಕಾರ ಇತನು ಸುಮಾರು ವರ್ಷಗಳಿಂದ ಟಂಟಂ ನಡೆಸಿಕೊಂಡು ಉಪಜೀವಿಸುತ್ತಾನೆ, ನನ್ನ ಗಂಡನು ದಿನಾಲು ನಮ್ಮೂರಿನಿಂದ ಯಾದಗಿರಿತನಕ ಅಟೋ ಓಡಿಸುತ್ತಾನೆ. ಹೀಗಿದ್ದು ಇಂದು ದಿನಾಂಕ 02-11-2018 ರಂದು ನಮ್ಮ ಗ್ರಾಮದಲ್ಲಿ ಮಲ್ಲಯ್ಯನ ಜಾತ್ರ್ರೆಯಿದ್ದ ಇದ್ದ ಕಾರಣ ಬೆಂಗಳೂರಿನಿಂದ ನಮ್ಮೂರಿನವರು ನಮ್ಮ ಗ್ರಾಮಕ್ಕೆ ರೇಲ್ವೇ ಮುಖಾಂತರ ಬರುವರಿದ್ದ ಕಾರಣ ಆ ಪ್ರಯಾಣಿಕರನ್ನು ತರಲು ಇಂದು ಬೆಳಗ್ಗೆ 5-30 ಗಂಟೆಗೆ ನನ್ನ ಗಂಡನು ನಮ್ಮ ಟಂಟಂ ನಂ: ಕೆ.ಎ-33/4878 ನೆದ್ದನ್ನು ತೆಗೆದುಕೊಂಡು ಯಾದಗಿರಿಗೆ ಹೋಗಿ ಬರುವುದಾಗಿ ಹೇಳಿ ಹೋದನು. ನನ್ನ ಗಂಡನು ಹೋದ ಸುಮಾರು ಅರ್ಧ ಗಂಟೆಯ ನಂತರ ನಮ್ಮ ಗ್ರಾಮದ ನನ್ನ ಗಂಡನಂತೆ ಅಟೋ ನಡೆಸುವವ ಶ್ರೀ ಹನೀಫ್ ತಂದೆ ಖತಾಲ ಹುಸೇನ ಇವರು ನಮ್ಮ ಭಾವನಾದ ಭೋಜಪ್ಪಾ ತಂದೆ ಬುಗ್ಗಪ್ಪಾ ಇವರಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ಮತ್ತು ನನ್ನ ಗಂಡ ಇಬ್ಬರೂ ತಮ್ಮ ತಮ್ಮ ಅಟೋಗಳನ್ನು ನಡೆಸಿಕೊಂಡು ನಮ್ಮೂರಿನಿಂದ ಯಾದಗಿರಿಗೆ ಹೊರಟಾಗ ತಾವು ಮುಂದೆ ಹೊರಟಿದ್ದು ನನ್ನ ಗಂಡನು ಅವರ ಹಿಂದೆ ಹೊರಟಿದ್ದು ಮಸ್ಕನಳ್ಳಿ ಗ್ರಾಮದ ಕ್ರಾಸ ದಾಟಿದ ಕೂಡಲೇ ನನ್ನ ಗಂಡನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಒಮ್ಮೇಲೆ ಸ್ಕೀಡ ಆಗಿ ಬಿದ್ದಾಗ ನಾನು ಅಟೋ ನಿಲ್ಲಿಸಿ ನೋಡಿದಾಗ ನನ್ನ ಗಂಡನಿಗೆ ಎರಡು ಭುಜಕ್ಕೆ ಎದೆಗೆ , ಎಡಪಕ್ಕೆಗೆ ಮತ್ತು ತೆಲೆಗೆ ಗುಪ್ತಗಾಯವಾಗಿದ್ದು ಆತನಿಗೆ ನನ್ನ ಅಟೋದಲ್ಲಿಯೇ ಹಾಕಿಕೊಂಡು ಯಾದದಗಿರಿಗೆ ತೆಗೆದುಕೊಂಡು ಹೋಗುತ್ತಿದ್ದೆನೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ಭಾವಂದಿರರಾದ ಭೋಜಪ್ಪಾ ಮತ್ತು ಯಲ್ಲಾಲಿಂಗ ಎಲ್ಲರೂ ಯಾದಗಿರಿಗೆ ಬಂದೇವು, ನನ್ನ ಗಂಡನಿಗೆ ನೀಲಕಂಠ ಸೈದಾಪೂರ ಆಸ್ಪತ್ರೆಗೆ ತೆಗೆದುಕೊಂಡು ಹೋದ ಬಗ್ಗೆ ಗೋತ್ತಾಗಿ ಅಲ್ಲಿಗೆ ಹೊದೇವು. ಅಲ್ಲಿ ನನ್ನ ಗಂಡ ಉಪಚಾರ ಪಡೆಯುತ್ತಿದ್ದು ನನ್ನ ಗಂಡನಿಗೆ ಘಟನೆಯ ಬಗ್ಗೆ ವಿಚಾರಿಸಿದಾಗ ಆತನು ಮೇಲೆ  ತಿಳಿಸಿದಂತೆ ಹೇಳಿದನು. ಮತ್ತು ಆತನ ಮೈಮೇಲೆ ಮೇಲೆ ತಿಳಿಸಿದಂತೆ ಗಾಯಗಳಾಗಿದ್ದು ಮೂಗಿನಿಂದ ರಕ್ತ ಬರುತ್ತಿತ್ತು. ಅಲ್ಲಿ ನನ್ನ ಗಂಡನಿಗೆ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ವೈಧ್ಯರ ಸಲಹೇ ಮೇರೆಗೆ ನೀಲಕಂಠ ಸೈದಾಪೂರ ಆಸ್ಪತ್ರೆಯಿಂದ  ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ನನ್ನ ಗಂಡನು ಆಸ್ಪತ್ರೆಯ ಆವರಣದಲ್ಲಿ ಬೆಳಗ್ಗೆ 7-50 ಗಂಟೆಯ ಸುಮಾರಿಗೆ ಮೃತಪಟ್ಟನು.   ನನ್ನ ಗಂಡನು ಇಂದು ದಿನಾಂಕ 02-11-2018 ರಂದು ಬೆಳಗ್ಗೆ ನಮ್ಮ ಗ್ರಾಮದಿಂದ ಯಾದಗಿರಿಗೆ ನಮ್ಮ ಟಂಟಂ ಅಟೋ ನಂ: ಕೆ.ಎ-33/4878 ನೆದ್ದನ್ನು ನಡೆಸಿಕೊಂಡು ಹೋಗುವಾಗ ಮಾರ್ಗ ಮಧ್ಯ ಮಸ್ಕನಳ್ಳಿ ಗ್ರಾಮದ ಕ್ರಾಸ ಹತ್ತಿರ  ಟಂಟಂವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗಿ ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಮೇಲೆ ಸ್ಕೀಡ್ ಮಾಡಿ ಅಪಘಾತ ಮಾಡಿದಾಗ ಈ ಘಟನೆಯಲ್ಲಿ ನನ್ನ ಗಂಡನು ಭಾರಿ ಗುಪ್ತಗಾಯಗಳು ಹೊಂದಿದಾಗ ಆತನಿಗೆ ಉಪಚಾರಕ್ಕೆ ಯಾದಗಿರಿಯ ನೀಲಕಂಠ ಸೈದಾಪೂರ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಅಲ್ಲಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ನನ್ನ ಗಂಡನು ಆಸ್ಪತ್ರೆಯ ಆವರಣದಲ್ಲಿ ಬೆಳಗ್ಗೆ 7-50 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಈ ಘಟನೆ ನನ್ನ ಗಂಡನ ನಿಷ್ಕಾಳಜಿತನದಿಂದ ಜರುಗಿಸಿ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು  ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 210/2018 ಕಲಂ 279, 304 (ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 440/2018 ಕಲಂ 379 ಐಪಿಸಿ:-ದಿನಾಂಕ: 02/11/2018 ರಂದು ಸಾಯಂಕಾಲ 6-30 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಮಹಿಬೂಬ ತಂದೆ ಬುಡ್ಡೆಸಾ ಬಾಗವಾನ ವಯ|| 33 ಉ|| ವಿಶೇಷ ಸಂಪನ್ಮೂಲ ಶಿಕ್ಷಕರು (ಬಿ,ಐ,ಇ,ಆರ್,ಟಿ) ಬಿ,ಆರ್,ಸಿ ಕೇಂದ್ರ ಯಾದಗೀರ ಜಾ|| ಮುಸ್ಲಿಂ ಸಾ|| ಆಸರ ಮೊಹಲ್ಲಾ ಶಹಾಪೂರ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ. ದಿನಾಂಕ: 22/10/2018 ರಂದು ಪ್ರತಿ ನಿತ್ಯದಂತೆ ಬೆಳಗ್ಗೆ 8-20 ಎ,ಎಂ ಕ್ಕೆ ನಾನು ಯಾದಗೀರಿಗೆ ಹೊಗುವ ನಿಮಿತ್ಯ ನನ್ನ ಡ್ರೀಮ ನಿಯೋ ಮೋಟಾರ  ಸೈಕಲ ನಂ: ಕೆಎ-33 ಆರ್-3779 ನೇದ್ದರ ಮೇಲೆ ನಮ್ಮ ಮನೆಯಿಂದ ಹೊರಟು ಶಹಾಪೂರದ ಹೊಸ ಬಸ್ ನಿಲ್ದಾಣಕ್ಕೆ 8-40 ಎ,ಎಂ ಕ್ಕೆ ಹೊಗಿ ನನ್ನ ಮೋಟಾರ ಸೈಕಲನ್ನು ಹೊಸ ಬಸ್ ನಿಲ್ದಾಣದ ಮುಂದೆ ನಿಲ್ಲಿಸಿ ಕೆ,ಎಸ್,ಆರ್,ಟಿ,ಸಿ ಬಸ್ಸಿಗೆ ಶಹಾಪೂರದಿಂದ ಯಾದಗೀರಿಗೆ ಹೋದೆನು. ಯಾದಗೀರಿಯಲ್ಲಿ ನನ್ನ ಕರ್ತವ್ಯ ಮುಗಿಸಿಕೊಂಡು ಸಾಯಂಕಾಲ 6-00 ಪಿ,ಎಂ ಕ್ಕೆ ಮರಳಿ ಶಹಾಪೂರದ ಹೊಸ್ ಬಸ್ ನಿಲ್ದಾಣಕ್ಕೆ ಬಂದು ನನ್ನ ಮೋಟಾರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೊಡಲಾಗಿ ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ.್ಲ ಯಾರೋ ಕಳ್ಳರು ಮುಂಜಾನೆ ನಾನು ನಿಲ್ಲಿಸಿ ಯಾದಗೀರಿಗೆ ಹೊದಾಗ ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿದ್ದರು. ನನ್ನ ಮೋಟಾರ ಸೈಕಲ ಅಂದಾಜು ಕಿಮ್ಮತ 20000-00 ರೂಪಾಯಿ ಆಗಬಹುದು, ನನ್ನ ಮೋಟಾರ ಸೈಕಲ ಅಚಿ ಓಠ:ಒಇ4ಎಅ623ಉಆ8014071 ಇಟಿರಟಿಜ ಓಠ: ಎಅ62ಇ81014085 ಅಂತ ಇರುತ್ತದೆ. ಇಲ್ಲಿಯ ವರೆಗೆ ನಾನು ಮತ್ತು ನನ್ನ ಸ್ನೇಹಿರಿಬ್ಬರೂ ಶಹಾಪೂರ ನಗರದಲ್ಲಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲ. ಕಾರಣ ಇಂದು ದಿನಾಂಕ: 02/11/2018 ರಂದು ತಡವಾಗಿ ಠಾಣೆಗೆ  ಬಂದು ಈ ಅಜರ್ಿಯನ್ನು ಕೊಟ್ಟಿದ್ದು ಕಳುವಾದ ನನ್ನ ಹೊಂಡಾ ಡ್ರೀಮ ನಿಯೋ ಮೋಟಾರ  ಸೈಕಲ ನಂ: ಕೆಎ-33 ಆರ್-3779 ನೇದ್ದು ಪತ್ತೆ ಮಾಡಿಕೊಡಬೇಕೆಂದು ಮಾನ್ಯರವರಲ್ಲಿ ವಿನಂತಿ. ಅಂತ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 440/2018 ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:-162/2018 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ:-ದಿನಾಂಕ: 02/11/2018 ರಂದು 07.30 ಪಿಎಂ ಕ್ಕೆ ಪಿಯರ್ಾದಿ ಶ್ರೀಮತಿ. ಚಾಂದಿಬಾಯಿ ಗಂಡದೇಸುರಾಠೊಡ ವಯ:43 ವರ್ಷಜಾ: ಲಂಬಾಣಿ ಸಾ: ಹೋಸ್ಕೇರಾ ಬಾಂಗಲಾ ತಾಂಡಾತಾ: ಶಹಾಪೂರ ಜಿ: ಯಾದಗಿರಿಇವರುಠಾಣೆಗೆ ಹಾಜರಾಗಿಅಜರ್ಿ ನೀಡಿದ್ದು ಸದರಿಅದರ ಸಾರಂಶಏನಂದರೆ, ನಮ್ಮದು ಗಂಗನಾಳ ಗ್ರಾಮದ ಸೀಮಾಂತರದಲ್ಲಿ ಸವೇ ನಂ: 59/4 ಕ್ಷೇತ್ರ 1-00 ಎಕರೆಜಮೀನುಇರುತ್ತದೆ. ನಮ್ಮಜಮೀನಿನಲ್ಲಿತೊಗರಿ ಬೆಳೆಯನ್ನು ಬೆಳೆದಿರುತ್ತೇವೆ. ಆದರೆ ನಮ್ಮಜಮೀನಿನಲ್ಲಿ ಬೆಳೆದ ಬೆಳೆಯನ್ನು ನಿಂಗಪ್ಪತಂದೆ ಸೀತಾರಾಮ ಮತ್ತು ಗೋಪಾಲ ತಂದೆ ಸೀತಾರಾಮ ಇಬ್ಬರುಜಾ: ಲಂಬಾಣಿ ಸಾ: ಗಂಗಾನಾಳ ತಾಂಡಾಇವರು ನಮ್ಮ ಹೊಲದಲ್ಲಿಯಕುರಿ ಮೇಯಿಸಿದ್ದರಿಂದ ತಕರಾರು ಆಗಿ ಶ್ರಿ ಬಸಪ್ಪತಂದೆ ಸೋಮಲುನಾಯಕಜಾಧವ 2) ಶಾಂತಾಬಾಯಿಗಂಡ ವೆಂಕಟೇಶಇವರು ನ್ಯಾಯ ಮಾಡಿ ನಮ್ಮ ಹೊಲದಲ್ಲಿಕುರಿ ಬಿಡಬೇಡರಿಅಂತಾ ಹೇಳಿದ್ದರು. ಆ ನಂತರ ಬಾಳಪ್ಪ ತಂದೆ ಸೀತಾರಾಮ ಇವರು ನಮ್ಮಜಮೀನಿನಲ್ಲಿಇರುವ ಮನೆಯ ಹತ್ತಿರಕುಡಿದು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯದು ನಿಂದಿಸಿರುತ್ತಾರೆ. ಅಷ್ಟಾದರೂ ನಾನು ತಾಳಿಕೋಂಡು ಬಂದಿರುತ್ತೇನೆ. ಆನಂತರ ಸ್ವಲ್ಪ ದಿನದ ನಂತರ ಮತ್ತೆ ನರಸಿಂಗ್ ತಂದೆ ಸೇವು ನಾಯಕಅವರ ಕುರಿಗಳು ನಮ್ಮಜಮೀನಿನಲ್ಲಿ ಬಿಡುತ್ತಿರುವಿರಿಎಂದು ಕೇಳಿದ್ದಕ್ಕೆ ನರಸಿಂಗ್ ತಂದೆ ಸೇವುನಾಯಕಇವರು ನನಗೆ ಅವಾಚ್ಯವಾಗಿ ಬೈಯದು ಮತ್ತೆಕುರಿ ಬಿಡುತ್ತೆವೆ ಏನು ಮಾಡುತ್ತಿಯೋ ಮಾಡಿಕೊ ಹೋಗು ಎಂದುಅವಾಚ್ಯವಾಗಿ ಬೆದರಿಕೆಕಾಹಿರುತ್ತಾರೆ. ಮತ್ತೆ ಸಂಜೆ ಮನೆಯ ಹತ್ತಿರಕುಡಿದು ಬಂದು ಬಾಂಗ್ಲಾತಾಂಡಾದಲ್ಲಿ ಮನೆಯ ಹತ್ತಿರ ಬಂದು ಬಾಯಿಗೆ ಬಂದಂತೆ ಬೈಯ್ದು ಜಗಳ ಮಾಡಿ ಹೋಗಿರುತ್ತಾರೆ. ಸ್ವಲ್ಪ ದಿನದ ನಂತರ ಮತ್ತೆ ನಮ್ಮಜಮೀನಿನಲ್ಲಿ ದಿನಾಂಕ:09/10/2018 ರಂದು ಹೋದಾಗ ಮದ್ಯಾಹ್ನದ 04.00 ಪಿಎಎಂ ಸುಮಾರಿಗೆಅಲ್ಲಿ ಮತ್ತೆ ಕುರಿಗಳನ್ನು ಮೇಯುತ್ತಿರುವದನ್ನು ನೊಡಿ ನಾನು ಅವುಗಳನ್ನು ಹೊಡೆಯಲ್ಲಿಕ್ಕೆ ಹೋಗಿ ಈ ರೀತಿ ಬೆಳೆ ಹಾಳು ಮಾಡಿದರೆ ಹೇಗೆ ಎಂದು ಕೇಳಿದಾಗ ರಾಮಿಬಾಯಿಗಂಡ ಬಾಳಪ್ಪ @ ಬಾಳೆಸಾ ಮತ್ತು ಇಕನಿಬಾಯಿ ಗಂಡ ಶಾಂತಪ್ಪಇವರುಇಬ್ಬರು ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿಕೈಯಿಂದ ಹೊಡೆದರು. ಮತ್ತು ಮನಬಂದಂತೆ ಬೈದು ಥಳಿಸಿರುತ್ತಾರೆ. ಆಗ ನರಸಿಂಗ ತಂದೆ ಸೇವು, ಶಾಂತಪ್ಪತಂದೆ ಸೇವು, ಬಾಳಪ್ಪ @ ಬಾಳೆಸಾ ತಂದೆ ಸೀತಾರಾಮ, ಗೋಪಾಲ ತಂದೆ ಸೀತಾರಾಮ, ವೆಂಕಟೇಶತಂದೆ ಸೆವು, ಗೋವಿಂದತಂದೆ ಸೇವು ಮತ್ತು ಅನೀಲ ತಂದೆ ಸೇವು ಇವರೆಲ್ಲರುಅವರಜೋತೆ ಸೇರಿ ಹಲ್ಲೆ ಮಾಡಿರುತ್ತಾರೆ. ಮತ್ತು ಇಕನಿಬಾಯಿ ಕಲ್ಲುತಗೆದುಕೊಂಡು ಮತ್ತು ಬಾಳೆಸಾ @ ಬಾಳಪ್ಪ ಈತನುಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಗಪ್ತ ಪೆಟ್ಟು ಮಾಡಿದ್ದರು. ನಂತರಇವತ್ತು ನಿನಗೆ ಇಲ್ಲೆ ಸಾಯಿಸಿ ಮಣ್ಣು ಮಾಡುತ್ತೇವೆಯಾರು ಹೇಳೋರು ಕೇಳೋರು ಇಲ್ಲಇಲ್ಲಿ, ಎಂದು ಹಲ್ಲೆ ಮಾಡಿ ಬೈಯ್ದಿರುತ್ತಾರೆ. ನಾವು ಏನು ಮಾಡಿಯಾದರೂ ದಕ್ಕಿಸಿಕೊಳ್ಳುತ್ತೇವೆ. ನಮ್ಮತಂಟೆಗೆ ಬಂದರೆ ನಿನ್ನನ್ನು, ನಿನ್ನಗಂಡನನ್ನು ಸಾಯಿಸಿಬಿಡುತ್ತೇವೆ ಎಂದು ಹೇಳಿ ಹೊಗಿರುತ್ತಾರೆ. ನಂತರ ನಮ್ಮ ಮನೆಗೆ ಬಂದು ನನ್ನಗಂಡನಜೋತೆ ವಿಚಾರ ಮಾಡಿಠಾಣೆಗೆ ಬಂದುದೂರು ನೀಡಿರುತ್ತೇನೆ. ನಾನು ಆವಾಗನೆ ಖಾಸಗಿಯಾಗಿಇಲಾಜ ಮಾಡಿಸಿಕೊಂಡಿದ್ದು ಈಗ ದವಾಖಾನೆಗೆ ಹೋಗುವದಿಲ್ಲ. ಕಾರಣ ನನಗೆ ಅವಾಚ್ಯವಾಗಿ ಬೈದು ಹೊಡೆ-ಬಡೆ ಮಾಡಿ ಥಳಿಸಿ ಜೀವದ ಬೆದರಿಕೆ ಹಾಕಿದ ಮೆಲಿನ ಎಲ್ಲರ ಮೇಲೆ ಕಾನೂನು ಕ್ರಮಜರುಗಿಸಬೆಕುಅಂತಾ ಪಿಯರ್ಾದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 162/2018 ಕಲಂ:143, 147, 148, 323, 324, 354, 504, 506 ಸಂ: 149 ಐಪಿಸಿ  ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.
   
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.:-68/2018 ಕಲಂ: 143, 147, 148, 307, 323, 324, 504, 506, ಖ/ಘ 149 ಕಅ & 3(1)ಡಿ, 3(1). 2(5),  ಖಅ/ಖಖಿ ಕಂ ಂಅಖಿ 1989 :- ಪಿಯರ್ಾದಿಯು ದಿನಾಂಕ:29/10/2018 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ಹಗರಟಗಿ ಗ್ರಾಮದಲ್ಲಿ ಕೊಡೇಕಲ್ ದಿಂದ ತಾಳಿಕೋಟಿಗೆ ಹೋಗುವ ರಸ್ತೆಯ ಮೇಲೆ ಶ್ರೀ ಚನ್ನಮ್ಮ ವೃತ್ತದ ಹತ್ತಿರ ನಿಂತಾಗ ಅಕ್ರಮ ಕೂಟಕಟ್ಟಿಕೊಂಡು ಬಂದ ಹಗರಟಗಿ ಗ್ರಾಮದ ಲಿಂಗಾಯತ ಜನಾಂಗದವರಾದ ಆರೋಪಿತರು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಲೇ ಲಕ್ಷ್ಮಣ ಹೊಲೆ ಸೂಳಿ ಮಗನೇ ನಮ್ಮೂರ ಅರುಣಕುಮಾರ ಮತ್ತು ಡಾ|| ಬಸನಗೌಡ ಇವರ ಹತ್ತಿರ ರಾಜಕೀಯ ಮಾಡುತ್ತಾ ತಿರುಗಾಡತ್ತಿ ಎನಲೇ ನಮಗೆ ಎದುರು ಮಾತನಾಡುತ್ತಿ ಏನಲೇ  ಹೊಲೆ ಸೂಳಿ ಮಗನೇ  ಅಂತಾ ಜಾತಿ ನಿಂದನೆ ಮಾಡಿ ಎಲ್ಲಾರೂ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇವತ್ತು ಈ ಸೂಳಿಮಗನಿಗೆ ಕೊಲೇ ಮಾಡಿಯೇ ಬಿಡೋಣ ಅಂತಾ ಬೈದು ಚಂದ್ರಶೇಖರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆಯಲು ಬಂದಾಗ ಪಿಯಾದಿಯು  ತಪ್ಪಿಸಿಕೊಂಡಿದ್ದು ಬಡಿಗೆಯ ಏಟು ಬಲಭುಜದ ಮೇಲೆ ಬಿದ್ದು ಒಳಪೆಟ್ಟಾಗಿದ್ದು ಮತ್ತು ಶ್ರೀಕಾಂತಗೌಡ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು, ಹಣಮಂತ ಈತನು ಕಾಲಿನಿಂದ ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿದ್ದು ಮಹಾಂತಗೌಡ ಈತನು ಮೊಣಕಾಲ ಕೆಳಗೆ ಹೊಡೆದು ಗುಪ್ತಗಾಯ ಮಾಡಿದ್ದು ಕಾಶಪ್ಪ ಬಿದರಕುಂದಿ ಈತನು ಕೈಯಿಂದ ಬೆನ್ನಿಗೆ ಗುದ್ದಿದ್ದು & ರಮೇಶ, ಬಸವರಾಜ ಪೀರಪೂರ ಹಾಗೂ ಭೀಮಣ್ಣ ಚಿತ್ತಾಪೂರ ಇವರೆಲ್ಲರೂ ಕಾಲಿನಿಂದ ಮೈ ತುಂಬ ಒದ್ದು ಗುಪ್ತಗಾಯ ಪಡೆಸಿದ್ದು ಸಂಗನಬಸಪ್ಪ ಈತನು ಈ ಸೂಳಿ ಮಗನಿಗೆ ಇವತ್ತು ಖಲಾಸ್ ಮಾಡಿಯೇ ಬಿಡುತ್ತೇನೆ ಅಂತಾ ತನ್ನ ಕೈಯಲ್ಲಿದ್ದ ದೊಡ್ಡ ಕಲ್ಲನು ಹಾಕಲಿಕ್ಕೆ ಬಂದಾಗ ಉರುಳಿ ತಪ್ಪಸಿಕೊಂಡು ಹೋಡಿ ಬೇಡರಿ ಅಪ್ಪಾ ಅಂತಾ ಚಿರಾಡುತ್ತಿದ್ದಾಗ ಅಲ್ಲಿಯೇ ರಸ್ತೆಯ ಮೇಲೆ ಹಾದು ಹೋಗುತ್ತಿರುವವರು ಬಂದು ಬಿಡಿಸಿದ್ದು ಅವರು ಜಗಳ ಬಿಡಿಸದಿದ್ದರೇ 20ಜನರು ತನಗೆ ಕೊಲೆ ಮಾಡುತ್ತಿದ್ದರು. ಕಾರಣ ವಿನಾ ಕಾರಣ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ, ಕಲ್ಲಿನಿಂದ, ಕೈಯಿಂದ ಹೊಡೆ ಬಡೆ ಮಾಡಿ ಜಾತಿ ನಿಂದನೆ ಮಾಡಿ ಕೊಲೆಗೆ ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು ನ್ಯಾಯ ಒದಗಿಸಿ ಕೊಡಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.  

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 296/2018 ಕಲಂ: 78() ಕೆ.ಪಿ. ಆಠ್ಟಿ್:- ದಿನಾಂಕ 02.11.2018 ರಂದು ಮಧ್ಯಾಹ್ನ 01-00 ಗಂಟೆಗೆ ಆರೋಪಿ ರಮೆಶ ಈತನು ಗುರುಮಠಕಲ್ ಪಟ್ಟಣದ ಪಂಚಾಯತ ಮೊಹಲ್ಲಾದ ವಿದ್ಯಾ ಜ್ಯೋತಿ ಶಾಲೆಯ ಹತ್ತಿರ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಜನರಿಂದ ಹಣ ಸಂಗ್ರಹಿಸುತಿತದ್ದಾಗ ಫೀರ್ಯಾದಿದಾರರಾದ ಶ್ರೀ ಬಸವೆರಾಜ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ಆತನ ವಶದಲ್ಲಿದ್ದ 1] ಮೊಬೈಲ್ ಪೋನ್,2] ಬಾಲ್ ಪೆನ್, 3] ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 4] ನಗದು ಹಣ ಹೀಗೆ ಒಟ್ಟು 9120/-ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಆರೋಪಿತನ ಮೇಲೆ ಠಾಣಾ ಗುನ್ನೆ ನಂ: 269/2018 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!