ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-11-2018

By blogger on ಶುಕ್ರವಾರ, ನವೆಂಬರ್ 2, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-11-2018 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ;- 81/2018  ಕಲಂ 279,  337, 338 ಐಪಿಸಿ:-ದಿನಾಂಕ 01/11/2018 ರಂದು ಮದ್ಯಾಹ್ನ 3 ಪಿ.ಎಂ.ದ ಸುಮಾರಿಗೆ ಯಾದಗಿರಿ -ಚಿತ್ತಾಪುರ ಮುಖ್ಯ ರಸ್ತೆಯ ಮೇಲೆ ಬರುವ ಮುದ್ನಾಳ ಕ್ರಾಸ್  ಹತ್ತಿರ ಫಿಯರ್ಾದಿಯವರ ಗಂಡನಾದ ಗಾಯಾಳು ಸಾಬಣ್ಣ ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಎಲ್-1507 ನೇದ್ದರ ಮೇಲೆ ಮುದ್ನಾಳ ಕಡೆಯಿಂದ ಯಾದಗಿರಿಗೆ ನಡೆಸಿಕೊಂಡು ಬರುವಾಗ ಅದೇ ಸಮಯಕ್ಕೆ ಆರೋಪಿತ ಲಾರಿ ಟ್ಯಾಂಕರ್ ನಂಬರ ಎಮ್.ಎಚ್.-43, ಯು-1304 ನೇದ್ದನ್ನು ಯಾದಗಿರಿ ಕಡೆಯಿಂದ ಚಿತ್ತಾಪುರ ಕಡೆಗೆ  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳು ಸಾಬಣ್ಣ ಇವರ ಮೋಟಾರು ಸೈಕಲಗೆ  ನೇರವಾಗಿ ಡಿಕ್ಕಿಕೊಟ್ಟು  ಅಪಗಾತ ಮಾಡಿದ್ದರಿಂದ ಸದರಿ ಅಪಗಾತದಲ್ಲಿ ಗಾಯಾಳು ಸಾಬಣ್ಣ ಇವರ ಎರಡು ತೊಡೆಗಳಿಗೆ, ಎರಡು ಮೊಣಕಾಲು ಕೆಳಗೆ, ಎರಡು ಪಾದಗಳಿಗೆ  ಭಾರೀ ಗುಪ್ತಗಾಯವಾಗಿ ಮುರಿದಿದ್ದು, ಮುಖದ ಎಡಗಡೆ ರಕ್ತಗಾಯವಾಗಿದ್ದು ಇರುತ್ತದೆ  ಈ ಬಗ್ಗೆ ಅಪಘಾತ ಪಡಿಸಿದ ಲಾರಿ ಟ್ಯಾಂಕರ್ ನಂಬರ  ಎಮ್.ಎಚ್-43, ಯು-1304 ನೇದ್ದರ ಚಾಲಕನ ಮೇಲೆ  ಸೂಕ್ತ ಕಾನೂನಿನ ಕ್ರಮ ಜರುಗಿಸಲು  ಫಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ. ಗುನ್ನೆ ನಂ:- 209/2018  ಕಲಂ 379 ಐಪಿಸಿ:-ದಿನಾಂಕ 01-11-2018 ರಂದು ಬೆಳಗ್ಗೆ 6-30 ಎ.ಎಮ್ ಸುಮಾರಿಗೆ ತಮಗೆ ಭಾತ್ಮೀ ಬಂದಿದ್ದೆನೆಂದರೆ ಆರೋಪಿತರು ಓರುಂಚಾ ಗ್ರಾಮದ ಸರಕಾರಿ ಹಳ್ಳದಲ್ಲಿ ತಮ್ಮ ಟ್ರ್ಯಾಕ್ಟರ ಮತ್ತು ಟಿಪ್ಪರಗಳಲ್ಲಿ ಅನಧೀಕೃತವಾಗಿ ಕಳ್ಳತನದಿಂದ & ಸರಕಾರದಿಂದ ಪರವಾನಿಗೇ ಪಡೆಯದೇ ಉಸುಕು ಕಳುವು ಮಾಡಿಕೊಂಡು ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿವಾಗ ದಾಳಿ ಮಾಡಿ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ
  
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ;- 197/2018 ಕಲಂ: 78(3) ಕೆ.ಪಿ.ಆಕ್ಟ್:- ದಿನಾಂಕ 31.10.2018 ರಂದು ಸಾಯಂಕಾಲ 7.50 ಗಂಟೆ ಸುಮಾರಿಗೆ ವಡಗೇರಾ ತಾಲ್ಲೂಕಿನ ಮಾಲೀಗೌಡರ ಮನೆ ಹತ್ತಿರ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. 80/- ರೂ. ಗೆಲ್ಲಿರಿ ಬಾಂಬೆ ಮಟ್ಕಾ ಆಡಿರಿ ಎಂದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುವುದನ್ನು ನೋಡಿ, ಖಚಿತಪಡಿಸಿಕೊಂಡು ಪಿರ್ಯಾಧಿಯು ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ದಾಳಿಕಾಲಕ್ಕೆ ನಗದು ಹಣ 1080=00 ರೂ., ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು ಬಾಲ್ ಪಾಯಿಂಟ ಪೆನ್ನು ಜಪ್ತಿಪಡಿಸಿಕೊಂಡು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಆರೋಪಿನ ವಿರುದ್ದ ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದು ಇರುತ್ತದೆ. ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ  ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!