Yadgiri District Reported Crimes Updated on 05-10-2018

By blogger on ಶುಕ್ರವಾರ, ಅಕ್ಟೋಬರ್ 5, 2018


Yadgir District Reported Crimes
ಸ್ಶೆದಾಪೂರ ಪೊಲೀಸ್ ಠಾಣೆ ;- 176/2018 ಕಲಂ:420,409,403 ಐಪಿಸಿ;- ದಿನಾಂಕ: 04-10-2018 ರಂದು ಸಾಯಂಕಾಲ 05-45 ಗಂಟೆಗೆ ಪಿಯರ್ಾಧಿ ದಾರನಾದ ಶ್ರೀ ಬಸವರಾಜಪ್ಪ ತಂದೆ ರಾಮಣ್ಣ ದೊರೆ ವ|| 70 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಗೌಡಿಗೇರಾ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿಯರ್ಾಧಿ ತಂದು ಹಾಜರುಪಡಿಸಿದ ಸಾರಂಶವೆನೆಂದರೆ ನಿಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ನಿಲಹಳ್ಳಿ ಯಲ್ಲಿ 2014 ನೇ ಸಾಲಿನಿಂದ 2018 ನೇ ಸಾಲಿನವರೆಗೆ  ಉಮೇಶ ತಂದೆ ಮಲ್ಲರೆಡ್ಡಿ ಸಾ|| ನಿಲಹಳ್ಳಿ ಇತನು ಸಹಕಾರ ಬ್ಯಾಂಕಿಗೆ ಮತ್ತು ಸದಸ್ಯರಿಗೆ ಒಟ್ಟು ಅಂದಾಜು 1845869 ರೂಪಾಯಿಗಳಷ್ಟು ವಂಚನೆ ಮೋಸ ಮಾಡಿದ್ದು ಬಗ್ಗೆ ಪಿಯಾಧಿ ಸಾರಂಶದ ಮೇಲಿಂದ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ

ಶೋರಾಪೂರ ಪೊಲೀಸ್ ಠಾಣೆ :- 337/2018 ಕಲಂ: 78(3) ಕನರ್ಾಟಕ ಪೊಲೀಸ್ ಆಕ್ಟ್;- ದಿನಾಂಕ: 04-10-2018 ರಂದು 5-30 ಪಿ.ಎಮ್ ಕ್ಕೆ ಶ್ರೀ ಹರಿಬಾ ಜಮಾದಾರ ಪಿ.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 3-30 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಸುರಪೂರ ನಗರದ ಬಸ್ ನಿಲ್ದಾಣದ ಆಚೆ ಇರುವ ಸಾಮ್ರಾಟ ವೈನಶಾಪ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದು ಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-105, 176, 30, ಪಿ.ಸಿ 235 ಹಾಗು ಇಬ್ಬರೂ ಪಂಚರೊಂದಿಗೆ ಬಸ್ ನಿಲ್ದಾಣದ ಹತ್ತಿರ ಹೋಗಿ ಬಸ್ ನಿಲ್ದಾಣದ ಪಶ್ಚಿಮದ ಕಂಪೌಂಡ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ಸಾಮ್ರಾಟ ವೈನಶಾಪ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಬಬ್ಬ ವ್ಯಕ್ತಿಯು ನಿಂತು ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೈಂಟ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು 4-00 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 1450=00 ರೂ.ಗಳು 2) ಒಂದು ಬಾಲ್ ಪೆನ್ನ 3) ಒಂದು ಮಟಕಾ ನಂಬರ ಬರೆದ ಚೀಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 337/2018 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.;- 155/2018 (ಕೋರ್ಟ ರೆಫರ್ಡ):- ದಿನಾಂಕ: 04/10/2018 ರಂದು 07.30 ಪಿಎಂ ಕ್ಕೆ ಗೋಗಿ ಠಾಣೆಯಕೋರ್ಟಕರ್ತವ್ಯ ನಿರ್ವಹಿಸುವ ವಿಠೋಬಾ ಹೆಚ್.ಸಿ-91 ರವರುಕೋರ್ಟಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದಒಂದು ಖಾಸಗಿ ಪಿಯರ್ಾದಿ ಸಂ: 57/2018 ನೇದ್ದನ್ನುತಂದು ಹಾಜರ ಪಡೆಸಿದ್ದು, ಸದರಿ ಖಾಸಗಿ ಪಿಯರ್ಾದಿ ಸಾರಂಶಏನಂದರೆ, ಪಿಯರ್ಾದಿದಾರು ಬಾಣತಿಹಾಳ ಗ್ರಾಮದ ಸವರ್ೇ ನಂ:26 ನೆದ್ದರ ಜಮೀನು ಖರೀದಿ ಮಾಡಿದ್ದು ಎಪ್ರೀಲ್ 2018 ರ ವರೆಗೆ ಅವರೆ ಖಬ್ಜಾದಾರರು ಮತ್ತು ಅನುಭೊಗದಾರರು ಆಗಿದ್ದರು, ದಿನಾಂಕ:01/05/2018 ರಂದು ಆರೋಪಿತರಾದ, 1) ನಾಗಪ್ಪತಂದೆ ಮರಲಿಂಗಪ್ಪ ಪೂಜಾರಿ ವಯಾ: 60 ವರ್ಷ2) ಸಾಯಬಣ್ಣತಂದೆ ಮರಲಿಂಗಪ್ಪ ಪೂಜಾರಿ ವಯಾ: 58 ವರ್ಷ 3) ದೇವಿಂದ್ರಪ್ಪತಂದೆ ಮರಲಿಂಗಪ್ಪ ಪೂಜಾರಿ ವಯಾ: 55 ವರ್ಷ 4) ಬಸಣ್ಣತಂದೆ ಮರಲಿಂಗಪ್ಪ ಪೂಜಾರಿ ವಯಾ: 54 ವರ್ಷ 5) ಮಹಾದೇವಪ್ಪತಂದೆ ಮರಲಿಂಗಪ್ಪ ಪೂಜಾರಿ ವಯಾ: 50 ವರ್ಷಎಲ್ಲರೂ ಸಾ: ಬಾಣತಿಹಾಳ ತಾ: ಶಹಾಪೂರ.ಇವರೆಲ್ಲರೂಕೂಡಿ ಪಿಯರ್ಾದಿದಾರರಿಗೆ ಅವರು ಖರೀದಿಸಿದ ಹೋಲ ಉಳುಮೆ ಮಾಡದಂತೆ ಬೆದರಿಸಿ ಜೀವ ಬೆದರಿಕೆ ಹಾಕಿದ್ದು, ಅಲ್ಲದೆ ಆರೋಪಿತರೆಲ್ಲರೂ ಒಳಸಂಚು ಮಾಡಿ ಸುಳ್ಳು ದಾಖಲೆಗಳನ್ನು ಸುಳ್ಳು ಅಂತಾ ಗೊತ್ತಿದ್ದು ಸೃಷ್ಠಿ ಮಾಡಿ ಪಿಯರ್ಾದಿಗೆ ಮೋಸ ಮಾಡಿದ್ದಾರೆ ಅಂತಾ ಇತ್ಯಾದಿ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 155/2018 ಕಲಂ, 420, 120(ಬಿ), 406, 468, 471, 193, 194, 199, 200, 504, 506 ಸಂ:34 ಐಪಿಸಿನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
  
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ:-145/2018 ಕಲಂ;341, 323, 324, 504, 506, 354, ಸಂಗಡ 34 ಐಪಿಸಿ:-ದಿನಾಂಕ: 04.10.2018 ರಂದು 7:00 ಪಿಎಮ್ ಗಂಟೆಗೆ ಪಿರ್ಯಾಧಿ ಶ್ರೀಮತಿ ನಂದಮ್ಮ ಗಂಡ ಸೋಮಣ್ಣ ಐದಬಾವಿ ವಯ:40, ಉ:ಮನೆಗೆಲಸ, ಜಾ:ಹಿಂದೂ ಕುರುಬರ್, ಸಾ:ಕಾಮನಟಗಿ, ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನ್ನ ತವರೂರು ಗಂಟೇರದೊಡ್ಡಿ ಕಕ್ಕೇರಾ ಇದ್ದು, ನನಗೆ ಈಗ 20-25 ವರ್ಷಗಳ ಹಿಂದೆ ಕಾಮನಟಗಿಯ ಸೋಮಣ್ಣ ಐದಬಾವಿ ರವರಿಗೆ ಕೊಟ್ಟು ಮದುವೆ ಮಾಡಿದ್ದು, ನನ್ನ ಮಗಳಾದ ಶ್ರೀದೇವಿ ಇವಳಿಗೆ ತವರು ಮನೆಗೆ ನನ್ನ ತಮ್ಮನಾದ ದುರಗಪ್ಪ ತಂದೆ ಸೋಮಣ್ಣ ಗಂಟೇರ ಈತನಿಗೆ ಕೊಟ್ಟು ಈಗ ಮೂರು ವರ್ಷಗಳ ಹಿಂದೆ  ಮದುವೆ ಮಾಡಿದ್ದು, ನನ್ನ ಮಗಳನ್ನು ತವರು ಮನೆಗೆ ಕೊಟ್ಟ ನಂತರ ನಾನು ಆಗಾಗ್ಗೆ ಮಗಳ ಹತ್ತಿರ ಗಂಟೇರ ದೊಡ್ಡಿಗೆ ಬಂದು ಹೋಗುವದು ಮಾಡುತ್ತಿರುವೆನು. ನನ್ನ ತಮ್ಮ ದುರಗಪ್ಪನ ಹೊಲದಲ್ಲಿಯ ಕಾಲುವೆಯಿಂದಲೇ ಅವರ ಹೊಲದ ಸಮೀಪ ಇರುವ ತಿಪ್ಪಣ್ಣ ತಂದೆ ಪರಮಣ್ಣ ಬಿಂಗೇರ ಸಾ:ಬಿಂಗೇರ ದೊಡ್ಡಿ ಇವರು ತಮ್ಮಹೊಲಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ದು, ದಿ:22.09.2018 ರಂದು ಶನಿವಾರ ದಿವಸ ನಾನು ಮತ್ತು ನನ್ನ ಮಗಳು ಶ್ರೀದೇವಿ, ನನ್ನ ತಮ್ಮ ದುರಗಪ್ಪನ ಹೊಲದಲ್ಲಿದ್ದಾಗ ತಿಪ್ಪಣ್ಣ ತಂದೆ ಪರಮಣ್ಣ ಬಿಂಗೇರ ಇವರ ಮಗನಾದ ಪರಮಣ್ಣ ತಂದೆ ತಿಪ್ಪಣ್ಣ ಬಿಂಗೇರ ಈತನು ನಮ್ಮ ಹೊಲದಲ್ಲಿಯ ಕಾಲುವೆ ಗುಂಟ ಹೋಗುವಾಗ ನನ್ನ ಮಗಳು ಶ್ರೀದೇವಿಯನ್ನು ನೋಡಿದವನೇ ನಗುವದು ಮಾಡಿದ್ದು, ಆಗ ನಾನುಅವನಿಗೆ ಹೀಗೆಲ್ಲ ಹೆಣ್ಣಮಕ್ಕಳಿಗೆ ಮಾಡುವದುಸರಿಯಲ್ಲ. ಅಂತಾ ಬೈದು ಕಳಿಸಿದ್ದು, ಆಗಿನಿಂದ ಪರಮಣ್ಣ ಮತ್ತು ಅವರ ಮನೆಯವರು ನನ್ನ ತಮ್ಮನ ಮತ್ತು ನನ್ನ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಹೀಗಿರುವಾಗ ನಿನ್ನೆ ದಿ:03.10.2018 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂಗಿ ಪರಮವ್ವ ತಂದೆ ಸೋಮಣ್ಣ ಇಬ್ಬರೂ ಕೂಡಿ ನಮ್ಮ ಗಂಟೇರ ದೊಡ್ಡಿಯಿಂದ ಕ್ಕಕೇರಾಕ್ಕೆ ಸಂತೆಗೆ ಹೋಗಲು ಕಕ್ಕೇರಾ ಮಂಜಲಾಪೂರ ರಸ್ತೆಯ ಪಕ್ಕದಲ್ಲಿ ಇರುವ ಕನಕದಾಸ ಕಟ್ಟೆಯ ಹತ್ತಿರ ವಾಹನಗಳಿಗೆ ಕಾಯುತ್ತ ನಿಂತಾಗ ಬಿಂಗೇರ ದೊಡ್ಡಿಯ ತಿಪ್ಪಣ್ಣ ತಂದೆ ಪರಮಣ್ಣ ಬಿಂಗೇರ ಈತನು ತನ್ನ ಮೋಟಾರು ಸೈಕಲ್ ನಂಬರ ಕೆ.ಎ-33 ಎಲ್-6491 ನೇದ್ದರ ಮೇಲೆ  ತನ್ನ ಮಗ ಪರಮಣ್ಣ ತಂದೆ ತಿಪ್ಪಣ್ಣ ಬಿಂಗೇರ ಈತನಿಗೆ ಕೂಡಿಸಿಕೊಂಡು ಬಂದಿದ್ದು, ಅಲ್ಲದೇ ತಿಪ್ಪಣ್ಣನ ಹಂಡತಿಯಾದ ಪರಮವ್ವ ಗಂಡ ತಿಪ್ಪಣ್ಣ ಮತ್ತು ಮಂಜುನಾಥ ತಂದೆ ತಿಪ್ಪಣ್ಣ ಇವರು ಕೂಡಾ ಅದೇ ವೇಳೆಗೆ ತಮ್ಮ ದೊಡ್ಡಿಯಿಂದ ನಾವು ಕುಳಿತಲ್ಲಿಗೆ ಬಂದವರೇ ನಮಗೆ ಅಡ್ಡಗಟ್ಟಿ ನಿಲ್ಲಿಸಿ ಏ ಬೋಸಡಿ ನಂದಿ ನಿನ್ನ ಮಗಳು ಶ್ರೀದೇವಿಗೆ ನಾವೇನು ಅಂದಿಲ್ಲ ಮತ್ತು ಅವಳ ಜೊತೆಗೆ ಸಲುಗೆಯಿಂದ ನಡೆದುಕೊಂಡಿಲ್ಲ ಸುಳ್ಳೇ ನಮ್ಮ ಮೇಲೆ ಅಪವಾದ ಮಾಡುತ್ತಿ ಏನಲೇ ಅಂತಾ ಅಂದವರೇ ಅವರಲ್ಲಿಯ ಪರಮಣ್ಣ ತಂದೆ ತಿಪ್ಪಣ್ಣ ಬಿಂಗೇರ ಈತನು ನನ್ನ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದು, ಮತ್ತು ತಿಪ್ಪಣ್ಣ ತಂದೆ ಪರಮಣ್ಣ ಬಿಂಗೇರ ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಟೊಂಕದ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು, ಆಗ ಪರಮವ್ವ ಮತ್ತು ಮಂಜುನಾಥ ರವರು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಯ ಮೇಲೆ, ಎದೆಯ ಮೆಲೆ ಒದ್ದು ಗುಪ್ತಗಾಯಪಡಿಸಿದ್ದು, ಆಗ ಇದನ್ನು ನೋಡಿ ನನ್ನ ತಂಗಿ ಪರಮವ್ವಳು ನನ್ನ ಅಕ್ಕನನ್ನು ಉಳಿಸಿರೆಪ್ಪೋ ಅಂತಾ ಚೀರಾಡಹತ್ತಿದಾಗ ಅಲ್ಲಿಂದಲೇ ಹೋಗುತ್ತಿದ್ದ, ಯಲ್ಲಪ್ಪ ತಂದೆ ಸೋಮಣ್ಣ ಗುಡ್ಡಾಕಾಯೇರ, ಮತ್ತು ಪರಮಣ್ಣ ತಂದೆ ನಂದಪ್ಪಕುರಿ ಇವರು ಬಂದು ನೋಡಿ ನನಗೆ ಹೊಡೆಯುವದನ್ನು ಬಿಡಿಸಿದ್ದು, ಹೋಗುವಾಗ ಅವರೆಲ್ಲರೂ ಸೂಳೀ ನಂದಿ ಇವತ್ತು ನಮ್ಮ ಕೈಯಲ್ಲಿ ಉಳಿದೀದಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ನಿನ್ನೆ ದಿನ ನನ್ನ ತಂಗಿ ಪರಮವ್ವಳೊಂದಿಗೆ ಮನೆಗೆ ಹೋಗಿದ್ದು, ಈ ದಿವಸ ನನ್ನ ತಮ್ಮ ದುರಗಪ್ಪನು ಊರಿನಿಂದ ಬಂದ ನಂತರ ಅವನೊಂದಿಗೆ ಈ ಬಗ್ಗೆ ವಿಚಾರ ಮಾಡಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು, ನನಗೆ ಈ ಘಟನೆಯಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲ ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ. ನನಗೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳೆದಾಡಿ, ಕೈಹಿಡಿದು ಜಗ್ಗಾಡಿ ಮಾನಭಂಗಪಡಿಸಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಮೇಲೆ  ನಮೂದಿಸಿದ ನಾಲ್ಕು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾಧಿ ಅಜರ್ಿಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ:145/2018 ಕಲಂ;341, 323, 324, 504, 506, 354, ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!