ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-10-2018 ರಂದು ನವೀಕರಿಸಲಾಗಿದೆ.

By blogger on ಬುಧವಾರ, ಅಕ್ಟೋಬರ್ 17, 2018


Yadgir District Reported Crimes

ವಡಗೇರಾ ಪೊಲೀಸ್ ಠಾಣೆ;- ಗುನ್ನೆ ನಂ: 192/2018 ಕಲಂ: 504,324,307,323 ಸಂ 34 ಐಪಿಸಿ ಮತ್ತು ಕಲಂ: 3(1) (ಜಿ),(ಆರ್),(ಎಸ್) 3(2)(5) ಎಸ್.ಸಿ/ಎಸ್.ಟಿ ಪಿಎ ಎಕ್ಟ್ 1989:- ದಿನಾಂಕ: 16/10/2018 ರಂದು 7-30 ಪಿಎಮ್ ಕ್ಕೆ ಶ್ರೀ ಬಸವರಾಜ ತಂದೆ ಸಿದ್ದಯ್ಯ ನಾಯ್ಕೋಡಿ, ವ:45, ಜಾ:ಬೇಡರ (ಎಸ್.ಟಿ), ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ತಾ:ವಡಗೇರಾ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಐಕೂರು ಸೀಮಾಂತರದಲ್ಲಿ ನಮ್ಮೊಂದು ಹೊಲ ಇದ್ದು, ಈ ವರ್ಷ ಹೊಲದಲ್ಲಿ ಹತ್ತಿ ಬೆಳೆ ಹಾಕಿರುತ್ತೇನೆ. ಹೀಗಿದ್ದು ಈಗ ಮೇಲ್ಗಡೆಯಿಂದ ಕೆನಾಲ ನೀರು ಬಿಟ್ಟಿರುವುದರಿಂದ ಕೆನಾಲ ನೀರನ್ನು ಕಾಲುವೆಯಿಂದ ನಮ್ಮ ಹೊಲಕ್ಕೆ ಬಿಟ್ಟುಕೊಳ್ಳುತ್ತೇವೆ. ನಮ್ಮ ಹೊಲದ ಕೆಳಗಡೆ ನಮ್ಮೂರ ಕಬ್ಬಲಿಗ ಜನಾಂಗದ ಮಲ್ಲಪ್ಪ ತಂದೆ ಮಲ್ಲಪ್ಪ ಯರಗೋಳ ಇವರ ಹೊಲ ಇದ್ದು, ಅವರು ಕೂಡಾ ಕಾಲುವೆ ಮುಖಾಂತರ ನೀರು ತಮ್ಮ ಹೊಲಕ್ಕೆ ಬಿಟ್ಟುಕೊಳ್ಳುತ್ತಾರೆ. ಹೀಗಿದ್ದು ದಿನಾಂಕ: 11/10/2018 ರಂದು ರಾತ್ರಿ ಊಟ ಮಾಡಿದ ನಂತರ 9 ಗಂಟೆ ಸುಮಾರಿಗೆ ನಾನು ಮೇಲ್ಕಂಡ ನಮ್ಮ ಐಕೂರು ಸೀಮಾಂತರದ ಹತ್ತಿ ಹೊಲಕ್ಕೆ ಹೋಗಿ ಕೆನಾಲ ನೀರು ಕಾಲುವೆ ಮುಖಾಂತರ ನಮ್ಮ ಹತ್ತಿ ಬೆಳೆಗೆ ಬಿಟ್ಟುಕೊಂಡಿದ್ದೇನು. ದಿನಾಂಕ: 12/10/2018 ರಂದು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಕೆಳಗಡೆ ಹೊಲದವರಾದ 1) ಮಲ್ಲಪ್ಪ ತಂದೆ ಮಲ್ಲಪ್ಪ ಯರಗೋಳ, 2) ಮಂಜು ತಂದೆ ಮಲ್ಲಪ್ಪ ಯರಗೋಳ, 3) ಶಿವಪ್ಪ ತಂದೆ ಮಲ್ಲಪ್ಪ ಯರಗೋಳ ಎಲ್ಲರೂ ಜಾ:ಕಬ್ಬಲಿಗ ಸಾ:ಕಾಡಂಗೇರಾ (ಬಿ) ಈ ಮೂರು ಜನರು ಬಂದು ನನ್ನ ಹೊಲಕ್ಕೆ ಬಿಟ್ಟುಕೊಂಡಿದ್ದ ನೀರನ್ನು ಬಂದ ಮಾಡಿ ತಮ್ಮ ಹೊಲಕ್ಕೆ ತಿರುಗಿಸಿಕೊಂಡಿದ್ದರು. ಆಗ ನಾನು ಬಂದು ನನ್ನ ಹೊಲಕ್ಕೆ ಬಿಟ್ಟುಕೊಂಡಿನ ನನ್ನ ಹೊಲ ಆದ ಮೇಲೆ ನೀವು ಬಿಟ್ಟುಕೊಳ್ಳಿರಿ ಎಂದು ಹೇಳಿದಾಗ ಅವರು ಅದೆಲ್ಲ ಆಗಲ್ಲ ನಮ್ಮ ಹೊಲಕ್ಕೆ ಈಗ ನಾವು ನೀರು ಬಿಡುತ್ತೇವೆ ನೋಡು ನೀನೆನು ಮಾಡುತ್ತಿ ಅಂದಾಗ ನನ್ನ ಹೊಲ ಓಣಗುತ್ತಿದೆ ಇನ್ನು 2 ತಾಸಿನಲ್ಲಿ ನನ್ನ ಹೊಲ ಪೂತರ್ಿ ಮುಗಿಯುತ್ತದೆ ಆ ಮೇಲೆ ನೀವು ನಿಮ್ಮ ಹೊಲಕ್ಕೆ ತಿರುಗಿಸಿಕೊಂಡು ಹೋಗ್ರಿ ಎಂದು ಹೇಳಿದರೆ, ಎಲೇ ಬ್ಯಾಡ ಸೂಳೆ ಮಗನೆ ನೀನು ಹೇಳಿದಂಗ ಕೇಳಬೇಕೆನಲೇ ಸೂಳೆ ಮಗನೆ ಎಂದು ಜಾತಿ ಎತ್ತಿ ಬೈದು ಜಗಳ ತೆಗೆದವರೆ ಮಂಜು ಮತ್ತು ಶಿವಪ್ಪ ಇಬ್ಬರೂ ನನಗೆ ತೆಕ್ಕೆ ಕುಸ್ತಿಗೆ ಬಿದ್ದು ಹಿಡಿದುಕೊಂಡಾಗ ಮಲ್ಲಪ್ಪನು ನೀರು ಕಟ್ಟಲು ತಂದಿದ್ದ ಸಲಿಕೆಯಿಂದ ಕೊಲೆ ಮಾಡುವ ಉದ್ದೇಶದಿಂದ ಎಡ ಹಣೆಯ ಮೇಲ್ಭಾಗದಲ್ಲಿ ಹೊಡೆದು ಹರಿದ ರಕ್ತಗಾಯ ಮಾಡಿದನು. ಮಂಜು ಮತ್ತು ಶಿವಪ್ಪ ಇವರು ಕೈಯಿಂದ ಮುಷ್ಟಿ ಮಾಡಿ ಗುದ್ದಿದರು. ಆಗ ಜಗಳವನ್ನು ಅಕ್ಕಪಕ್ಕದ ಹೊಲಗಳಲ್ಲಿ ನೀರು ಕಟ್ಟುತ್ತಿದ್ದ ಭೀಮಪ್ಪ ತಂದೆ ಸಾಬಣ್ಣ ಕುರುಕುಂದಿ, ಹೊನ್ನಪ್ಪ ತಂದೆ ಹೈಯಾಳಪ್ಪ ಪೂಜಾರಿ ಮತ್ತು ಮರೆಪ್ಪ ತಂದೆ ಸಿದ್ದರಾಮಪ್ಪ ಬೆಂಡೆಬೆಂಬಳ್ಳಿ ಇವರುಗಳು ಬಂದು ನೋಡಿ ಜಗಳ ಬಿಡಿಸಿದರು. ನಂತರ ನಾನು ಅಲ್ಲಿಂದ ಊರಿಗೆ ಬಂದು ಶಹಾಪೂರ ಮತ್ತು ಕಲಬುರಗಿ ದವಾಖಾನೆಗಳಲ್ಲಿ ತೋರಿಸಿಕೊಂಡು ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ಹೊಲಕ್ಕೆ ನೀರು ಬಿಡುವ ಸಂಬಂಧ ಜಗಳ ತೆಗೆದು ಜಾತಿ ಎತ್ತಿ ಅವಾಚ್ಯ ಬೈದು ಕೊಲೆ ಮಾಡುವ ಉದ್ದೇಶದಿಂದ ಸಲಿಕೆಯಿಂದ ನನ್ನ ತೆಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನಗೆ ರಕ್ಷಣೆ ಒದಗಿಸಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 192/2018 ಕಲಂ: 504,324,307,323 ಸಂ 34 ಐಪಿಸಿ ಮತ್ತು ಕಲಂ: 3(1) (ಜಿ),(ಆರ್),(ಎಸ್) 3(2)(5) ಎಸ್.ಸಿ/ಎಸ್.ಟಿ ಪಿಎ ಎಕ್ಟ್ 1989 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ. ಗುನ್ನೆ ನಂ:- 191/2018 ಕಲಂ: 379 ಐಪಿಸಿ:-ದಿನಾಂಕ: 16/10/2018 ರಂದು ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಮುದ್ದೆಮಾಲು, ವರದಿ ಮತ್ತು ಒಬ್ಬ ಆರೋಪಿತನನ್ನು ಒಪ್ಪಿಸಿ, ವರದಿ ಸಲ್ಲಿಸಿದ್ದೆನಂದರೆ ಇಂದು ದಿನಾಂಕ: 16/10/2018 ರಂದು ನಾನು ಮತ್ತು ನನ್ನ ಸಂಗಡ ರಾಜಕುಮಾರ ಹೆಚ್.ಸಿ 179, ಪ್ರಕಾಶ ಹೆಚ್.ಸಿ 18 ಮತ್ತು ಜೀಪ ಚಾಲಕ ಮಹೇದ್ರ ಪಿ.ಸಿ 254 ರವರೊಂದಿಗೆ ಬೆಳಗ್ಗೆ ಗುರುಸಣಗಿ ಭೀಮಾ ನದಿ ಪುಸ್ಕರ ಬ/ಬ ಕರ್ತವ್ಯದಲ್ಲಿದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ನನಗೆ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿದ್ದೆನಂದರೆ ವಡಗೇರಾ ಕ್ರಾಸ ಕಡೆಯಿಂದ ನಾಯ್ಕಲ್ ಮುಖಾಂತರವಾಗಿ ಅನಧಿಕೃತವಾಗಿ ಸರಕಾರದಿಂದ ಯಾವುದೇ ಪರವಾನಿಗೆ/ಅನುಮತಿ ಇಲ್ಲದೆ ಮರಳು (ಉಸುಕು) ಲಾರಿಯಲ್ಲಿ ತುಂಬಿ ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವ ಬಗ್ಗೆ ದಾಳಿ ಮಾಡುವ ವಿಷಯವನ್ನು ಸಿಬ್ಬಂದಿಯವರಿಗೆ ತಿಳಿಸಿ, ಸಮಯ 6-15 ಗಂಟೆಗೆ ಖಾಸಗಿ ಜೀಪಿನಲ್ಲಿ ಹೊರಟು ನಾಯ್ಕಲ್ ಬೈಪಾಸ ರೋಡಿನಲ್ಲಿ ಕಾದು ಕುಳಿತ್ತಿದ್ದಾಗ ಸಮಯ 7 ಎಎಮ್ ಕ್ಕೆ ಮರಳು ತುಂಬಿಕೊಂಡು ಬರುತ್ತಿದ್ದ ಒಂದು ಲಾರಿಯನ್ನು ನಾವು ತಡೆದು ನಿಲ್ಲಿಸಿ, ಪರಿಶೀಲಿಸಿ ನೋಡಲಾಗಿ ಲಾರಿ ನೊಂದಣಿ ಸಂ. ಎಮ್.ಹೆಚ್ 23/7072 ಇದ್ದು, ಇದರಲ್ಲಿ ಮರಳು ತುಂಬಿದ್ದು, ಲಾರಿ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ದೇವಿಂದ್ರಪ್ಪ ತಂದೆ ಹಣಮಂತ ದೊರೆ, ವ:45, ಜಾ:ಬೇಡರ, ಉ:ಡ್ರೈವರ ಸಾ:ಗುಂಡಗುತರ್ಿ ಎಂದು ಹೇಳಿದ್ದು, ಸದರಿ ಲಾರಿ ಚಾಲಕನಿಗೆ ಮರಳು ಸಾಗಿಸುವ ಬಗ್ಗೆ ದಾಖಲೆಗಳು ಕೇಳಿದಾಗ ಅವನು ಯಾವುದೇ ದಾಖಲೆಗಳು ಹಾಜರಪಡಿಸಿರುವುದಿಲ್ಲ. ಸದರಿ ಲಾರಿ ಚಾಲಕನು ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಅನಧಿಕೃತವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದದ್ದು ಕಂಡುಬಂದಿರುತ್ತದೆ. ಸದರಿ ಲಾರಿಯ ಅಂದಾಜು ಬೆಲೆ 5,00,000=00 ಮರಳಿನ ಅಂದಾಜು ಬೆಲೆ 20,000=00 ರೂ. ಹೀಗೆ ಒಟ್ಟು 5,20,000=00 ರೂ. ಬೆಲೆಯ ಮುದ್ದೆಮಾಲನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವಡಗೇರಾ ಪೊಲೀಸ್ ಠಾಣೆಗೆ ಸಮಯ 9 ಎಎಮ್ ಕ್ಕೆ ಬಂದು ಠಾಣಾಧಿಕಾರಿಗಳಿಗೆ ಮುದ್ದೆಮಾಲು, ವರದಿ ಮತ್ತು ಒಬ್ಬ ಆರೋಪಿತನನ್ನು ಒಪ್ಪಿಸಿದ್ದು, ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಜಪ್ತಿ ಪಂಚನಾಮೆಯನ್ನು 9 ಎಎಮ್ ಕ್ಕೆ ಸ್ವಿಕೃತ ಮಾಡಿಕೊಂಡು ಸದರಿ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 191/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ;- 148/2018 ಕಲಂ: 323, 324, 504, 506 ಸಂಗಡ 34ಐಪಿಸಿ:-ದಿನಾಂಕ::16/10/2018 ರಂದು ಬೆಳಗ್ಗೆ 11.00 ಗಂಟೆಗೆ ಪಿರ್ಯಾಧಿ ಶ್ರೀ. ಮಲ್ಲಪ್ಪ ತಂದೆ ಶಿವಣ್ಣ ಕಂದಗಲ್ಲ ವ:27 ವರ್ಷ ಜಾತಿ: ಹಿಂದು ಬೇಡರ ಉ:ಒಕ್ಕಲುತನ ಸಾ;ರಾಯನಪ್ಯಾಳೆ ತಾ: ಹುಣಸಗಿ  ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಪಿರ್ಯಾಧಿ ಹೇಳಿಕೆಯನ್ನು ಹೇಳಿ ಗಣಕೀಕರಿಸಿದ್ದು ಅದರ ಸಾರಾಂಶವೆನೆಂದರೆ ನಾನು ಈಗ ನಾಲ್ಕು-ಐದು ವರ್ಷಗಳಿಂದ ಕಬ್ಬು ಕಡಿಯವ ಕೂಲಿ ಕೆಲಸಕ್ಕಾಗಿ ಕೊಡತಿ ಕೋಲಾರದ ಕಲ್ಲಪ್ಪ ಅಂಬುವವರ ಹತ್ತಿರ ಕೆಲಸಕ್ಕಾಗಿ ಹೋಗುತ್ತೀರುವೇನು ನನ್ನ ಜೊತೆಗೆ ಹಣಮಸಾಗರ ಗ್ರಾಮದ ನಿಂಗಪ್ಪ ತಂದೆ ಯಮನಪ್ಪ ಹಿರೆಗೌಡರ ಹಾಗೂ ಇತರರು ಬರುತ್ತಿದ್ದ ಪ್ರತಿ ವರ್ಷ ದೀಪಾವಳಿ ಹಬ್ಬ ಮಾಡಿದ ನಂತರ ಕೂಲಿ ಕೆಲಸಕ್ಕೆ ನಾವೆಲ್ಲರೂ ಹೋಗಿ ನಾಲ್ಕು-ಐದು ತಿಂಗಳ ಕೆಲಸ ಮಾಡಿ ಮತ್ತೆ ನಮ್ಮೂರಿಗೆ ಬರುತ್ತೇವೆ ನನಗೆ ಕಲ್ಲಪ್ಪ ಮಾಲಿಕರು ಪರಿಚಯ ಇದ್ದುದರಿಂದ ನನಗೆ 10 ಜೋಡಿ ಜನರಿಗೆ ಈ ವರ್ಷ ದೀಪಾವಳಿ ಆದ ನಂತರ ಕಬ್ಬು ಕಡಿಯುವ ಕೂಲಿ ಕೆಲಸಕ್ಕೆ ಕರೆದುಕೊಂಡು ಬರಲು ತಿಳಿಸಿ ಕೆಲಕ್ಕೆ ಬರುವವರಿಗೆ ಮುಂಗಡವಾಗಿ ಹಣ ಕೊಡುವಂತೆ ನನ್ನ ಹತ್ತಿರ ದೂಡ್ಡು ಕೊಟ್ಟು  ಹೋಗಿದ್ದು ಅದರಂತೆ ನಾನು ನನಗೆ ಪರಿಚಯದ ಪ್ರತಿ ವರ್ಷ ನನ್ನ ಜೊತೆ ಕೂಲಿ ಕೆಲಸಕ್ಕೆ ಬರುವ ಹಣಮಸಾಗರ ಗ್ರಾಮದ ನಿಂಗಪ್ಪ ತಂದೆ ಯಮನಪ್ಪ ಹಿರೇಗೌಡರ, ಬಸಪ್ಪ ತಂದೆ ಯಮನಪ್ಪ ಹಿರೇಗೌಡರ ಹಾಗೂ ದೇವಪ್ಪ ತಂದೆ ಭೀಮಣ್ಣ ಹಿರೇಗೌಡರ ರವರಿಗೆ ಈಗ ಕೆಲವು ದಿವಸಗಳ ಹಿಂದೆ ಕಲ್ಲಪ್ಪ ಮಾಲಿಕರು ಕೊಟ್ಟ 54,000 ರೂಗಳನ್ನು ಮುಂಗಡವಾಗಿ ದೀಪಾವಳಿ ಆದ ನಂತರ ಕಬ್ಬು ಕಡೆಯುವ ಕೂಲಿ ಕೆಲಸಕ್ಕೆ ಹೋಗಲು ಹಣಮಸಾಗರ ಗ್ರಾಮದ ಪರಮಣ್ಣ ತಂದೆ ಯಮನಪ್ಪ ಹಿರೇಗೌಡರ ರವರ ಸಮಕ್ಷಮದಲ್ಲಿ ಕೊಟ್ಟಿದ್ದು ಇರುತ್ತದೆ. ಹೀಗಿರುವಾಗ ನಮ್ಮ ಮಾಲಿಕರಾದ ಕಲ್ಲಪ್ಪರವರು  ಈಗ ಎರಡು-ಮೂರು ದಿವಸಗಳಿಂದೆ ನಮ್ಮೂರಿಗೆ ಬಂದು ನನಗೆ ತಿಳಿಸಿದ್ದೆನೆಂದರೆ ಪ್ರತಿ ವರ್ಷ ನಿಮಗೆ ದೀಪಾವಳಿಗೆ ಆದ ನಂತರ ಕಬ್ಬು ಕಡಿಯಲು ಬರಲು ಹೇಳುತ್ತಿದ್ದೇನು ಆದರೆ ಈ ವರ್ಷ ನಮ್ಮ ಹೊಲದಲ್ಲಿ ಹಚ್ಚಿದ ಕಬ್ಬು ಬೇಗನೇ ಕಡಿಯಲಿಕ್ಕೆ ಬಂದಿದ್ದು ಆದ್ದರಿಂದ ಮಹಾನವಮಿ ಹಬ್ಬ ಮುಗಿದ ನಂತರ ನಿನ್ನ ಜೋತೆಗೆ ಬರುವ ಎಲ್ಲಾ 10 ಜೋಡಿ ಕೆಲಸದವರಿಗೆ ಕರೆದುಕೊಂಡು ಬಾ ಅಂತಾ ತಿಳಿಸಿದ್ದರಿಂದ ನಾನು ಈ ದಿವಸ ದಿನಾಂಕ;16/10/2018 ರಂದು ಬೇಳಗ್ಗೆ 10.00 ಗಂಟೆಯ ಸುಮಾರಿಗೆ ನನ್ನ ತಂದೆಯಾದ ಶಿವಣ್ಣ ತಂದೆ ಮಲ್ಲಪ್ಪ ಕಂದಗಲ್ಲ ರವರರೊಂದಿಗೆ ಹನಮಸಾಗರ ಗ್ರಾಮಕ್ಕ ಹೋಗಿ ನಾನು ಮುಂಗಡವಾಗಿ ಕಬ್ಬು ಕಡಿಯಲು ಕೂಲಿ ಕೆಲಸಕ್ಕೆ ಬರಲು ಹಣ ಕೊಟ್ಟ ಹಣಮಸಾಗರ ಗ್ರಾಮದ ನಿಂಗಪ್ಪ ತಂದೆ ಯಮನಪ್ಪ ಹಿರೇಗೌಡರ, ಬಸಪ್ಪ ತಂದೆ ಯಮನಪ್ಪ ಹಿರೇಗೌಡರ ಹಾಗೂ ದೇವಪ್ಪ ತಂದೆ ಭೀಮಣ್ಣ ಹಿರೇಗೌಡರ ರವರಿಗೆ ದೀಪಾವಳಿ ಹಬ್ಬದ ಬದಲು ಮಾಹನವಮಿ ಹಬ್ಬ ಆದ ನಂತರ ಕೂಲಿ ಕೆಲಸಕ್ಕೆ ಹೋಗಲು ತಿಳಿಸಲು ಹೋದಾಗ ಸದರಿ ಮೂರು ಜನರು ಹಣಮಸಾಗರದಿಂದ ಅಮ್ಮಾಪೂರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಮಾಸ್ತರವರ  ಪಾನ್ ಡಬ್ಬಾದ ಹತ್ತಿರ ಇದ್ದು ನಾನು ಅವರಿಗೆ ಕಲ್ಲಪ್ಪ ಮಾಲಿಕರು ತಿಳಿಸಿದಂತೆ ಮಾಹಾನವಮಿ ಆದ ನಂತರ ಕೂಲಿ ಕೆಲಸಕ್ಕೆ ಹೋಗೋಣ ಅಂತಾ ತಿಳಿಸಿದಾಗ ಆಗ ಅವರೆಲ್ಲರೂ ನನಗೆ ಬೋಸಡಿ ಮಗನೇ ದೀಪಾವಳಿ ಆದ ನಂತರ ಹೋಗೋಣ ಅಂತಾ ಹೇಳಿ ಈಗ ಮಹಾನವಮಿ ಆದ ನಂತರ ಹೋಗೋಣ ಅಂತ ಅನ್ನುತ್ತಿ ಬೋಸಡಿ ಮಗನೇ ಮಲ್ಯಾ ನಿನನ್ನ ಸೋಕ್ಕು ಬಹಳ ಆಗಿದೆ ಅಂತಾ ಅಂದವರೇ ಅವರಲ್ಲಿಯ ನಿಂಗಪ್ಪ ತಂದೆ ಯಮನಪ್ಪ ಹಿರೇಗೌಡರ ಇತನು ನನಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ಜೋರಾಗಿ ನನ್ನ ತೆಲೆಯ ಮೆಲೆ ಹೊಡೆದಿದ್ದು ಇದರಿಂದ ನನ್ನ ತಲೆಯ ಮೇಲೆ ರಕ್ತಗಾಯವಾಗಿದ್ದು. ಬಸಪ್ಪ ತಂದೆ ಯಮನಪ್ಪ ಹಿರೇಗೌಡರ ಹಾಗೂ ದೇವಪ್ಪ ತಂದೆ ಭೀಮಣ್ಣ ಹಿರೇಗೌಡರ ಇಬ್ಬರೂ ನನಗೆ ನೆಲಕ್ಕ ಕೆಡವಿ ಕಾಲಿನಿಂದ ಎದೆಯ ಮೇಲೆ ಬೆನ್ನಿನ ಮೆಲೆ ಒದ್ದು ತುಳಿದು ಗುಪ್ತಗಾಯ ಮಾಡಿದ್ದು ಆಗ ನನ್ನ ತಂದೆಯು  ನನ್ನ ಮಗನನ್ನು  ಉಳಿಸಿರಪ್ಪೊ ಅಂತಾ ಚಿರಾಡ ಹತ್ತಿದಾಗ ಅಲ್ಲಿಯೇ ಇದ್ದ ಹಣಮಸಾಗರ ಗ್ರಾಮದ ಸಿದ್ದಪ್ಪ ತಂದೆ ಹಲವಪ್ಪ ಹಿರೇಗೌಡರ ಸಂಜೀವಪ್ಪ ತಂದೆ ಸಾಮಣ್ಣ ಹಿರೇಗೌಡರ ದೇವಪ್ಪ ತಂದೆ ಹಣಮಂತ್ರಾಯ ಮಾಳೂರು ಸಾ;ಹುಲಿಕೇರಿ  ರವರು ಬಂದು ನೋಡಿ ನನಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಮೂರು ಜನರು ಬೋಸಡಿ ಮಗನ್ಯಾ ಮಲ್ಯಾ ಇವತ್ತು ನೀನು ನಮ್ಮ ಕೈಯಲ್ಲಿ ಉಳಿದಿದಿ ಇನ್ನುಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ವಿನಾ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ  ಗಣಕೀಕರಿಸಿ ಹೇಳಿಕೆಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ:148/2018 ಕಲಂ:323, 324, 504, 506, ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡೇನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!