ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-10-2018 ರಂದು ನವೀಕರಿಸಲಾಗಿದೆ.

By blogger on ಮಂಗಳವಾರ, ಅಕ್ಟೋಬರ್ 16, 2018


Yadgir District Reported Crimes

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ;- ಗುನ್ನೆ ನಂ:199/2018  ಕಲಂ 279 ಐ.ಪಿ.ಸಿ:- ದಿನಾಂಕ: 15-10-2018 ರಂದು 10 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಬುಗ್ಗಪ್ಪಾ ತಂದೆ ಯಶವಂತ ಕಲಾಲ ವಯಾ:30 ಉ: ಖಾಸಗಿ ಕೆಲಸ ಜಾ: ಕಲಾಲ್ ಸಾ: ಹೊಸಳ್ಳಿ ಕ್ರಾಸ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಸವೆನೆಂದರೆ ನಿನ್ನೆ ದಿನಾಂಕ 14-10-2018 ರಂದು ನಮ್ಮ ಗೆಳೆಯನಾದ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ  ಸಾ: ಯಾದಗಿರಿ ಇತನು ತನ್ನ ಖಾಸಗಿ ಕೆಲಸ ನಿಮೀತ್ಯ ಕಲಬುರಗಿಗೆ  ಹೋಗಿ ಬರೋಣ ಅಂತಾ ಹೇಳಿದಾಗ ನಾನು ಅದಕ್ಕೆ ಒಪ್ಪಿದೇನು.  ನಾನು ಮತ್ತು ಸಂತೋಷ ತಂದೆ ಲಕ್ಷ್ಮಣ ಚವ್ಹಾಣ  ಮತ್ತು ಶಿವರಾಜ ತಂದೆ ಅನಂತಯ್ಯಾ ಗುತ್ತೆದಾರ ಮೂವರು ಕೂಡಿ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ  ಇತನ ಕಾರ ನಂ: ಕೆ.ಎ-33/ಎಮ್-4832 ನೆದ್ದರಲ್ಲಿ ರಾತ್ರಿ ಸುಮಾರು 10-30 ಗಂಟೆಗೆ ಕಲಬುರಗಿಗೆ ಹೋಗುವ ಕುರಿತು ಯಾದಗಿರಿ ಬಿಟ್ಟು ಯರಗೋಳ ಮಾರ್ಗವಾಗಿ ಹೋಗಬೇಕೆಂದು ಹೊರಟೇವು. ಕಾರ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ ಇತನೇ ನಡೆಸುತ್ತಿದ್ದನು. ವೆಂಕಟೇಶ ನಗರ ದಾಟಿದ ನಂತರ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ  ಇತನು ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸಹತ್ತಿದನು ಯರಗೋಳ ಗ್ರಾಮ ಇನ್ನೂ ಒಂದು ಅಥವಾ ಒಂದೂವರೇ ಕೀಲೋ ಮೀಟರ ಇರುವಂತೆಯೇ ಹೋಸದಾಗಿ ರಸ್ತೆ ಕೆಲಸ ನಡೆದ ಜ್ಯಾಗೆಯಲ್ಲಿ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ  ಇತನು ತನ್ನ ವಾಹನದ ಮೇಲಿನ ನಿಂಯತ್ರಣ ಕಳೆದುಕೊಂಡು ರೋಡಿನ ಬಲಬದಿಯಲ್ಲಿ ಕಾರನ್ನು ಪಲ್ಟೀ ಮಾಡಿದನು. ಆಗ ಸಮಯ ರಾತ್ರಿ 11-50 ಗಂಟೆಯಾಗಿರಬಹುದು. ನಂತರ ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ ಕಾರಿನಲ್ಲಿದ್ದ ಮೂರು ಜನರಿಗೂ ಯಾವುದೇ ಗಾಯಗಳಾಗಿರಲಿಲ್ಲಾ. ಕಾರಿನ ಹಿಂಬಾಗ ಜಖಂ ಆಗಿರುತ್ತದೆ. ಈ ರೀತಿಯಾಗಿ  ದಿನಾಂಕ 14-10-2018 ರಂದು 10-50 ಪಿ.ಎಮ್ ಕ್ಕೆ ತನ್ನ ಕಾರ ನಂ: ಕೆ.ಎ-33/ಎಮ್-4832 ನೆದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿ ಪಲ್ಟಿ ಮಾಡಿದ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ  ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಈ ವಿಷಯದ ಬಗ್ಗೆ ನಮ್ಮ ಮನೆಯವರ ಸಂಗಡ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸುತ್ತಿದ್ದೆವೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 199/2018 ಕಲಂ 279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 430/2018.ಕಲಂ 279.337.338. ಐ.ಪಿ.ಸಿ.:- ದಿನಾಂಕ 15/10/2018 ರಂದು 9-00 ಎ.ಎಂ.ಕ್ಕೆ ಶ್ರೀ ಮುದಕಪ್ಪ ತಂದೆ ಮಲ್ಲಣ್ಣ ಸನ್ನತ್ತಿ ವ|| 26 ಜಾ|| ಕಬ್ಬಲಿಗ ಉ|| ಗೌಂಡಿ ಸಾ|| ಗುತ್ತಿಪೇಠ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರು ನಿಡಿದ್ದೆನೆಂದರೆೆ ಇಂದು ದಿನಾಂಕ 15/10/2018 ರಂದು ಬೆಳಿಗ್ಗೆ 5-20 ಗಂಟೆಗೆ ನಾನು ಮತ್ತು ನಮ್ಮ ತಂದೆ ಯಾದ ಮಲ್ಲಣ್ಣ ತಂದೆ ಭೀಮರಾಯ ಇಬ್ಬರು ಕೂಡಿ ಕೊಂಡು ಚಹಾ ಕುಡಿಯಲು ನಮ್ಮ ಮನೆಯಿಂದ ನಡೆದು ಕೊಂಡು ಬಸವೇಶ್ವರ ಚೌಕದ ಉಪ್ಪಿನ ಕಾಂಪ್ಲೇಕ್ಸ ಪಕ್ಕದಲ್ಲಿರುವ ಚಾಹಾದ ಬಂಡಿಯಲ್ಲಿ ಚಹಾ ಕುಡಿಯಲು ಬಂದು, ಚಹಾ ಕುಡಿದು ಬೆಳಿಗ್ಗೆ 5-40 ಗಂಟೆಗೆ ಯಾದಗಿರಿಕಡೆಯ ರಸ್ತೆ ದಾಟುತ್ತಿದ್ದಾಗ ನನ್ನ ತಂದೆ ಮುಂದೆ ಹೋರಟಿದ್ದು ನಾನು ಅವರ ಹಿಂದೆ ಹೋರಟಿದ್ದು. ಅದೆ ಸಮಯಕ್ಕೆ ಯಾದಗಿರಿ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿ ಕೊಂಡು ಬಂದು ನನ್ನ ತಂದೆಯಾದ ಮಲ್ಲಣ್ಣನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ. ನನ್ನ ತಂದೆ ಮಲ್ಲಣ್ಣನು ರಸ್ತೆಯ ಮೇಲೆ ಬಿದ್ದನು. ಆಗ ನಾನು ಮತ್ತು ಅಲ್ಲೆ ಆಟೋ ಸ್ಟ್ಯಾಂಡ ಹತ್ತಿರ ನಿಂತಿದ್ದ ಭೀಮರಾಯ ತಂದೆ ನಿಂಗಪ್ಪ ನಾಯ್ಕೋಡಿ ಇವರು ಸದರಿ ಅಪಘಾತವನ್ನು ನೋಡಿ ಹೋಗಿ ಇಬ್ಬರು ನೋಡಲಾಗಿ ಸದರಿ ಅಪಘಾತದಲ್ಲಿ ನನ್ನ ತಂದೆಗೆ ಎಡಕಾಲು ಮೋಣಕಾಲಿನ ಹತ್ತಿರ ಮುರಿದಂತೆ ಆಗಿದ್ದು, ತಲೆಯ ಹಿಂದಿನ ಬಾಗದಲ್ಲಿ ರಕ್ತಗಾಯ, ಬಲಗೈ ಮುಂಗೈ ಹತ್ತಿರ ತರಚಿದ ರಕ್ತಗಾಯ, ಬಲಗಾಲಿನ ತೋಡೆಗೆ ತರಚಿದ ರಕ್ತಗಾಯ ವಾಗಿರುತ್ತದೆ. ಸದರಿ ಅಪಘಾತ ಮಾಡಿದ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ ಸಮೇತೆ ರಸ್ತೆಯ ಮೇಲೆ ಬಿದ್ದಿದ್ದು ಮೋಟರ್ ಸೈಕಲ್ ಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ ರಿಯಾಜ್ ತಂದೆ ಖಾಸಿಂಸಾಬ ಹೋತಪೆಟ್ ಸಾ|| ಹಳಿಸಗರ ಅಂತ ತಿಳಿಸಿದನು ಸದರಿಯವನಿಗೆ ಎಡಗಾಲಿನ ಚೆಪ್ಪಿಗೆ ಗುಪ್ತಗಾಯ, ಬಲಗೈ ಬೆರಳಿಗೆ ತರಚಿದ ರಕ್ತಗಾಯ, ಬಲಗಾಲಿನ ಮೋಣಕಾಲಿನ ಹತ್ತಿರ ತರಚಿದ ರಕ್ತಗಾಯ, ತಲೆಯ ಬಲಗಡೆ ಗುಪ್ತಗಾಯವಾಗಿದ್ದು. ಸದರಿ ಅಪಘಾತಮಾಡಿದ ಮೋಟರ್ ಸೈಕಲ್ ನೋಡಲಾಗಿ ಯಮಹಾ ಕಂಪನಿಯ ಮೋಟರ್ ಸೈಕಲ್ ಅದರ ನಂಬರ ಏಂ-40 ಏ-3748 ನ್ನೇದ್ದು ಇರುತ್ತದೆ. ಸದರಿ ಅಪಘಾತವು ಬೆಳಿಗ್ಗೆ 5-40 ಗಂಟೆಗೆ ಬಸವೇಶ್ವರ ಚೌಕದ ಆಟೋ ಸ್ಟ್ಯಾಂಡದ ಹತ್ತಿರ ಜರುಗಿರುತ್ತದೆ. ನನ್ನ ತಂದೆ ಮಲ್ಲಣ್ಣನಿಗೆ ಮತ್ತು ರಿಯಾಜ್ ಇವರಿಬ್ಬರಿಗೆ. ನಾನು ಮತ್ತು ಭೀಮರಾಯ ತಂದೆ ನಿಂಗಪ್ಪ ನಾಯ್ಕೋಡಿ ಇಬ್ಬರು ಒಂದು ಆಟೋದಲ್ಲಿ ಹಾಕಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಸೇರಿಕೆ ಮಾಡಿದೆವು. ನನ್ನ ಅಕ್ಕ ಬೀಮವ್ವಗೆ ಪೋನ ಮಾಡಿ ತಿಳಿಸಿದ್ದರಿಂದ ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ಅಲ್ಲಿಯ ವೈಧ್ಯಾದಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದು ಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಅಕ್ಕ ಬೀಮವ್ವ ನನ್ನ ತಂದೆಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಆಸ್ಪತ್ರೆಗೆ ಕರೆದು ಕೊಂಡು ಹೋದಳು. ಅಂತ ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 430/2018 ಕಲಂ 279. 337. 338. ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ;-190/2018 ಕಲಂ: 504,447,323,341,506(2) ಸಂ 34 ಐಪಿಸಿ:-ದಿನಾಂಕ: 15/10/2018 ರಂದು 2-05 ಪಿಎಮ್ ಕ್ಕೆ ಶ್ರೀ ಚಾಂದಪಾಷಾ ತಂದೆ ಹುಸೇನಸಾಬ ಮಲ್ಲೆವಾಲೆ, ವ:41, ಜಾ:ಮುಸ್ಲಿಂ, ಉ:ವ್ಯಾಪಾರ ಸಾ:ಗುಲಸರಂ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಗುಲಸರಂ ಸೀಮಾಂತರದಲ್ಲಿ ಹೊಲ ಸವರ್ೆ ನಂ. 89/5 ಮತ್ತು 89/7 ಒಟ್ಟು ವಿಸ್ತೀರ್ಣ 0-36 ಗುಂಟೆ ಜಮೀನಿನ ಮಾಲಿಕನಾಗಿದ್ದು, ಅದರ ಕಬ್ಜೆ ಮತ್ತು ಉಪಭೋಗದಾರನಾಗಿರುತ್ತೇನೆ. ಸದರಿ ಜಮೀನು ನಾನು 01/08/2014 ರಂದು ಶ್ರೀ ಜಲ್ಲಾಗೌಡ ತಂದೆ ಸಿದ್ದಲಿಂಗಪ್ಪ ಸಿದ್ದರೆಡ್ಡಿ ಇವರ ಕಡೆಯಿಂದ ಖರೀದಿ ಮಾಡಿರುತ್ತೇನೆ. ಹೀಗಿದ್ದು ನನ್ನ ಮೇಲ್ಕಂಡ ಜಮೀನಿನಲ್ಲಿ ಸದ್ಯ ಆಲೋಬ್ಲಾಕ ತಯಾರಿಸುವ ಕೆಲಸ ನಡೆದಿರುತ್ತದೆ. ಆದರೆ ನಮ್ಮೂರಿನ ಇಮಾಮಸಾಬ ತಂದೆ ನಬಿಸಾಬ ಬಳಗಾರ ಈತನು ವಿನಾಕಾರಣ ಬಂದು ಈ ಜಮೀನು ನನ್ನದು ಇರುತ್ತದೆ. ಈ ಜಮೀನಿನಲ್ಲಿ ನೀವು ಯಾವುದೇ ಕೆಲಸ ಮಾಡಂಗಿಲ್ಲ. ಮಾಡಿದರೆ ನಿಮಗೆ ಬಿಡುವುದಿಲ್ಲವೆಂದು ನಮ್ಮೊಂದಿಗೆ ತಕರಾರು ಮಾಡುತ್ತಿದ್ದನು. ಆಗ ನಾವು ಇದು ನಾವು ಖರೀದಿ ಮಾಡಿದ ಜಮೀನು ಅದಾ ನಿನ್ನ ಜಮೀನು ಬೇರೆ ಕಡೆ ಇದೆ ಮತ್ಯಾಕೆ ಇಲ್ಲಿ ಬಂದು ತಕರಾರು ಮಾಡುತ್ತಿ ಎಂದು ಹೇಳಿದರು ಕೂಡಾ ಕೇಳದೆ ಪದೇ ಪದೇ ಬಂದು ನಮ್ಮೊಂದಿಗೆ ಜಗಳ ಮಾಡುವುದು ನಾವು ಕೆಲಸ ಮಾಡುವುದನ್ನು ನಿಲ್ಲಿಸುವುದು ಇತ್ಯಾದಿ ಮಾಡುತ್ತಾ ಬಂದಿರುತ್ತಾನೆ. ದಿನಾಂಕ: 13/10/2018 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಾನು ಮೇಲ್ಕಂಡ ನಮ್ಮ ಹೊಲಕ್ಕೆ ಹೋಗಿ ಅಲೋ ಬ್ಲಾಕ ಕೆಲಸ ನೋಡುತ್ತಿದ್ದಾಗ 1) ಇಮಾಮಸಾಬ ತಂದೆ ನಬಿಸಾಬ ಬಳಗಾರ, 2) ಚಂದಾಸಾಬ ತಂದೆ ಇಮಾಮಸಾಬ ಬಳಗಾರ, 3) ಶಾರುಕ ತಂದೆ ಚಂದಾಸಾಬ ಬಳಗಾರ ಎಲ್ಲರೂ ಸಾ:ಗುಲಸರಂ ಈ ಮೂರು ಜನರೂ ಏಕೋದ್ದೇಶದಿಂದ ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದವರೆ ನನಗೆ ಅವಾಚ್ಯ ಶಬ್ದಗಳಿಂದ ಬೈದು ತು ಹಮಾರ ಜಮೀನ ಹಮೆ ಖಾಲಿ ಕರದೆತಾ ಕ್ಯಾ ನಹಿ ಬೊಲ ನಹಿಂ ತೊ ತುಜೆ ಎಹಿಂಜ್ ಮಾರಕೆ ಖಲಾಸ ಕರದೆತೆ ಎಂದು ಜಗಳ ತೆಗೆದು ಇಮಾಮಸಾಬನು ತನ್ನ ಕೈಯಲ್ಲಿದ್ದ ಕೊಡ್ಲಿಯಿಂದ ನನಗೆ ಹೊಡೆಯಲು ಬಂದಾಗ ನಾನು ಆ ಏಟು ತಪ್ಪಿಸಿಕೊಂಡೆನು. ಉಳಿದವರು ಕೂಡಾ ಯೇ ಬೇಟೆ ಕೊ ಛೋಡನಾ ನಹಿ ಆಜ್ ಖಲಾಸ ಕರನಾ ಎಂದು ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದರು. ಆಗ ಜಗಳವನ್ನು ಅಲ್ಲಿಯೇ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಯಿಂ ತಂದೆ ಜಲಾಲಸಾಬ ಮಲ್ಲೆವಾಲೆ ಮತ್ತು ಮಲ್ಲಿಕಾಜರ್ುನ ತಂದೆ ನಾಗಯ್ಯ ಕೊಂಗಿ ಇವರು ಬಂದು ಬಿಡಿಸಿಕೊಂಡರು. ಆಗ ಹೊಡೆಯುವುದು ಬಿಟ್ಟ ಅವರು ಆಜ ಬಚಗಯಾ ಸಾಲೆ ಅಬೆಕ ಬಾರ ಮಿಲಾ ತೊ ತುಜೆ ಯೆಹಿ ಕುಲಾಡಿಸೆ ಖಲಾಸ ಕರತಾ ಹುಂ ಎಂದು ಕೊಡ್ಲಿ ತೋರಿಸಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ನನ್ನ ಸ್ವಾಧಿನದಲ್ಲಿರುವ ಮತ್ತು ನಾನು ಖರೀದಿ ಮಾಡಿರುವ ಜಮೀನಿನಲ್ಲಿ ವಿನಾಕಾರಣ ಅತಿಕ್ರಮ ಪ್ರವೇಶ ಮಾಡಿ ಜಗಳ ತೆಗೆದು ನನಗೆ ಕೊಡ್ಲಿಯಿಂದ ಹೊಡೆಯಲು ಬಂದಿದ್ದಲ್ಲದೆ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 190/2018 ಕಲಂ: 504,447,323,341,506(2) ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

  ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:-69/2018  ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್:- ದಿನಾಂಕ 15/10/2018  ರಂದು ಸಾಯಂಕಾಲ 6-30 ಪಿ.ಎಂ. ಸುಮಾರಿಗೆ ಯಾದಗಿರಿ-ಚಿತ್ತಾಪುರ ಮುಖ್ಯ ರಸ್ತೆ ಮೇಲೆ ಬರುವ ಆರ್.ವಿ.ಕಾಲೇಜು ಹತ್ತಿರ ಮುಖ್ಯ ರಸ್ತೆ ಮೇಲೆ  ಫಿಯರ್ಾದಿ ಮತ್ತು ಗಾಯಾಳುಗಳು  ಇವರು  ಆಟೋ ನಂಬರ ಕೆಎ-33, ಎ-6063 ನೇದ್ದರಲ್ಲಿ ಕುಳಿತುಕೊಂಡು ಯಾದಗಿರಿಯಿಂದ ಹೆಡಗಿಮದ್ರಿ ಗ್ರಾಮಕ್ಕೆ ಹೊರಟಿದ್ದಾಗ  ಮಾರ್ಗ ಮದ್ಯೆ ಚಿತ್ತಾಪುರ ಕಡೆಯಿಂದ ಯಾದಗಿರಿ ಕಡೆಗೆ ಬರುತ್ತಿದ್ದ  ಆರೋಪಿತನು ತನ್ನ  ಜೀಪ್ ಕ್ರೂಜರ್ ನಂಬರ ಕೆಎ-33,  ಎಮ್-0824  ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಆಟೋಕ್ಕೆ ಡಿಕ್ಕಿಕೊಟ್ಟು  ಅಪಘಾತ ಮಾಡಿದ್ದು  ಸದರಿ ಅಪಘಾತದಲ್ಲಿ ಫಿಯರ್ಾದಿಗೆ  ಟೊಂಕ್ಕಕೆ, ಬಲಚಪ್ಪೆಗೆ, ಹೊಟ್ಟೆಗೆ ಭಾರೀ ಗುಪ್ತಗಾಯವಾಗಿದ್ದು ಹಾಗೂ ಆಟೋದಲ್ಲಿದ್ದ ಉಳಿದವರಿಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಪಗಾತ ಪಡಿಸಿದ ಕ್ರೂಜರ್ ಜೀಪ್ ಚಾಲಕನು ಜೀಪನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರ ಬಗ್ಗೆ ಫಿಯರ್ಾದಿ ಅದೆ.           

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ.:-288/2018 ಕಲಂ 379 ಐಪಿಸಿ:-ದಿನಾಂಕ 15.10.2018 ರಂದು ಸಮಯ ರಾತ್ರಿ 9-50 ಗಂಟೆಗೆ ಎ-1 ಇತನು ಎ-2 ಹೆಳಿದಂತೆ ಎ-3 ನೇದ್ದವನು ಮಾರಾಟ  ಕೊಂಕಲ್ ಸಿಮಾಂತರದ ಜಮೀನಲ್ಲಿಯ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತನ್ನ ಟ್ರ್ಯಾಕ್ರನಲ್ಲಿ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಚನ್ನು ಪವ್ಹಾರ ಈತನನ್ನು ಹಿಡಿದು ಆತನ ವಶದಲ್ಲಿದ್ದ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 288/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!