ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-10-2018 ರಂದು ನವೀಕರಿಸಲಾಗಿದೆ.

By blogger on ಗುರುವಾರ, ಅಕ್ಟೋಬರ್ 11, 2018


Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ;- ಗುನ್ನೆ ನಂ.426/2018 ಕಲಂ 279 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯಾಕ್ಟ:- ದಿನಾಂಕ 10/10/2018 ರಂದು ಮದ್ಯಾಹ್ನ 14:15 ಪಿ.ಎಂ ಕ್ಕೆ ಫಿರ್ಯಾದಿ ಸಣ್ಣ ಅಯ್ಯಪ್ಪ ತಂದೆ ಸಣ್ಣ ಮರೆಪ್ಪ ಮುಂಡಾಸ ಸಾ|| ಹಳಿಸಗರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ ನಮ್ಮ ತಂದೆ ಸಣ್ಣ ಮರೆಪ್ಪ ಇಂದು ದಿನಾಂಕ:10/10/2018 ರಂದು ಮುಂಜಾನೆ 10:00 ಎ.ಎಂಕ್ಕೆ ಹಮಾಲಿ ಕೆಲಸಕ್ಕೆ ಹೊಗಿದ್ದಾಗ ಶಹಾಪೂರ ಪಟ್ಟಣದ ಶಹಾಪೂರ-ಹತ್ತಿಗುಡುರ ರೋಡಿನಲ್ಲಿರುವ ರಾಜಧಾನಿ ದಾಬಾ ಹತ್ತಿರ ಇರುವ ಪಾಲ್ಕಿ ಸ್ಟೀಲ್ & ಸಿಮೇಂಟ್ ಡೀಲರ್ಸ ಗೋಡೊನ್ದಲ್ಲಿ ಲಾರಿ ನಂ. ಎಂಹೆಚ್-12 ಹೆಚ್ಡಿ-4868 ನೇದ್ದರ ರಿಂದ ಸಿಮೇಂಟ ಅನ್ ಲೋಡ ಮಾಡಲು ಹೊಗಿದ್ದಾಗ ಲಾರಿ ಚಾಲಕನಾದ ಅಂಬ್ರೇಷ ತಂದೆ ಈರಣ್ಣ ಗಿಜಾ ಸಾ|| ಗೊರವಗುಂಡಗಿ ಇತನು ಲಾರಿಯನ್ನು ರಿವರ್ಸ ಆಗಿ ಹಿಂದೆ ಮುಂದೆ ಮಾಡುತ್ತಾ ಗೋಡೊನ್ ದಲ್ಲಿ ತಗೆದುಕೊಂಡು ಹೋಗುತ್ತಿದ್ದನು 12:40 ಪಿಎಂ ಸುಮಾರಿಗೆ ನನ್ನ ತಂದೆ ಸಣ್ಣ ಮರೆಪ್ಪ ಮುಂಡಾಸ ಇತನು ಗೇಟ್ ಹತ್ತಿರ ನಿಂತಿದ್ದಾಗ ಲಾರಿ ಚಾಲಕನು ತನ್ನ ಲಾರಿಯನ್ನು ಒಮ್ಮೆಲೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನನ್ನ ತಂದೆಗೆ ಡಿಕ್ಕಿ ಪಡಿಸಿದ್ದರಿಂದ ಕಂಪೌಂಡ ಗೋಡೆಗೆ ಡಿಕ್ಕಿಯಾಗಿ ತಲೆಗೆ ಮತ್ತು ಎದೆಗೆ ಬಾರಿ ಒಳಪೆಟ್ಟಾಗಿ ಅಲ್ಲೆ ಕುಸಿದು ಬಿದಿದ್ದು. ಲಾರಿ ಚಾಲಕ ಅಂಬ್ರೇಷನು ಓಡಿ ಹೋಗಿರುತ್ತಾನೆ. ನಂತರ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪವಚಾರ ಫಲಕಾರಿ ಯಾಗದೆ ನನ್ನ ತಂದೆ 1:15 ಪಿಎಂಕ್ಕೆ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ. 426/2018 ಕಲಂ 279, 304[ಎ] ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ. ಗುನ್ನೆ ನಂ:- ಗುನ್ನೆ ನಂ.158/2018 ಕಲಂ. 323,341,504,506 ಸಂ.34 ಐಪಿಸಿ:-ದಿನಾಂಕ;10.10.2018 ರಂದು 11-00 ಎಎಮ್ ಕ್ಕೆ ಪಿರ್ಯಾದಿ ಶ್ರೀ ಸುನೀಲ್ ತಂದೆ ಮಾಲಕರೆಡ್ಡಿ ಅರಿಕೇರಿ ವ;44 ಉ; ಗುತ್ತೆದಾರ ಜಾ; ಲಿಂಗಾಯತರೆಡ್ಡಿ ಸಾ; ಬಸವೇಶ್ವರ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ಕೊಟ್ಟಿದ್ದು ಸದರಿ ದೂರು ಅಜರ್ಿಯ ಸಾರಾಂಸವೆನೆಂದರೆ, ದಿನಾಂಕ;26/07/2018 ರಂದು ನಿಂಗಪ್ಪ ತಂದೆ ದ್ಯಾವಪ್ಪ  ಎಂಬುವವರು ಮೋಬೈಲ ನಂ. 9632409312 ರಿಂದ ನನ್ನ ಮೊಬೈಲ ನಂ.9916334697 ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ  ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಎಂದು ಯಾದಗಿರಿ ಸಿ.ಪಿ.ಐ ಕಛೇರಿಯಲ್ಲಿ ದೂರು ನೀಡಿರುತ್ತೇನೆ. ಈ ದೂರಿಗೆ ಸಂಬಂಧಪಟ್ಟಂತೆ ಸಿ.ಪಿ.ಐ ಕಛೇರಿಯವರು ಸ್ವೀಕೃತಿಯನ್ನು ಸಹ ಕೊಟ್ಟಿರುತ್ತಾರೆ. ಪ್ರಸ್ತುತ ನಿಂಗಪ್ಪ ತಂದೆ ದ್ಯಾವಪ್ಪ ಎನ್ನುವವರು ದಿನಾಂಕ; 26/07/2018 ರಂದು ದೂರು ನೀಡಿದ ಬಗ್ಗೆ ತಿಳಿದು ದಿನಾಂಕ; 02/10/2018 ರಂದು ಬೆಳೆಗ್ಗೆ 11-30 ಗಂಟೆ ಸುಮಾರಿಗೆ ಯಾದಗಿರಿ ನಗರದ ಸುಭಾಷ ವೃತ್ತ ಹತ್ತಿರ ಹೊಗುತ್ತಿರುವಾಗ ನನ್ನನ್ನು ತಡೆದು ನಿಲ್ಲಿಸಿ, ನಮ್ಮ ಮೇಲೆ ದೂರು ಕೊಡುವಷ್ಠು ದೊಡ್ಡವನಾಗಿದ್ದೀಯಾ ಎಂದು ಹೇಳಿ ನಾವು ನಿನಗೆ ಜಮೀನನ್ನು ನೊಂದಣೀ ಮಾಡಿಕೊಡುವುದಿಲ್ಲ.  ನಮ್ಮಪ್ಪ ನಿಮಗೆ ಖರೀದಿ ಕರಾರು ಪತ್ರ 20 ವರ್ಷಗಳ ಹಿಂದೆಯೆ ಮಾಡಿಕೊಟ್ಟಿರಬಹುದು ಆದರೆ ನಾವು ಇವಾಗ ಹೊಲವನ್ನು ನಿನ್ನ ಹೆಸರಿಗೆ ನೊಂದಣಿ ಮಾಡಿಸಿ ಕೊಡುವುದಿಲ್ಲ. ನೀನು ಯಾರಿಗೇ ಬೇಕಾದರು ದೂರು ಕೊಡುತ್ತಿಯೋ ಕೊಡು ನಾವು ನಿನಗೆ ಏನು ಮಾಡಬೇಕೆಂದು ಗೊತ್ತು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಕೊರಳ ಪಟ್ಟಿ ಹಿಡಿದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ. ಇನ್ನೊಂದು ಸಾರಿ ಜಮೀನಿನ ವಿಷಯದಲ್ಲಿ  ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ. ಇನ್ನು ಮುಂದೆ ಎಚ್ಚರಿಕೆಯಿಂದ ಇರು  ಎಂದು ಬೈದಾಡುತ್ತೀದ್ದಾಗ ಅಲ್ಲಿಯೆ ಇದ್ದ ಅಸ್ಗರ ಪಟೇಲ ತಂದೆ ಗುಲಾಮ ದಸ್ತಗಿರಿ ಮತ್ತು ವಾಸುದೇವ ತಂದೆ ಗಣಪತಿರಾವ ಕುಲಕಣರ್ಿ ಇವರು ನೋಡಿ ಬಿಡಿಸಿದ್ದು ಇರುತ್ತದೆ.  ಇವರಿಗೆ ಕಾನೂನಿನ ಮೇಲೆ ಗೌರವವಿಲ್ಲದ ಕಾರಣ ಈ ಮೊದಲು ಯಾದಗಿರಿ ಸಿ.ಪಿ.ಐ ಕಛೇರಿಯಲ್ಲಿ ದೂರನ್ನು ಕೊಟ್ಟರು ಸಹ ಅದಕ್ಕೆ ಬೆಲೆ ಕೊಡದೇ ತಿರುಗ ಬಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ. ಈ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಈಗ ಬಂದು ತಮ್ಮಲ್ಲಿ ಈ ದೂರನ್ನು ನೀಡುತ್ತಿದ್ದೇನೆ. ಆದ ಕಾರಣ ನಾನು ಇವತ್ತಿನ ದಿವಸ ಇನ್ನೊಂದು ದೂರನ್ನು ನಿಂಗಪ್ಪ ತಂದೆ ದ್ಯಾವಪ್ಪ  ಸಾ: ಬಲಕಲ ಮತ್ತು ಭೀಮರಾಯ ತಂದೆ ನಿಂಗಣ್ಣ ಸಾ; ಮರಮಕಲ ವಿರುದ್ದ ಕೊಡುತ್ತಿದ್ದೇನೆ. ಮಾನ್ಯರವರು ನಿಂಗಪ್ಪ ತಂದೆ ದಾವಪ್ಪ ಸಾ: ಬಲಕಲ ಮತ್ತು ಭೀಮರಾಯ ತಂದೆ ನಿಂಗಣ್ಣ ಸಾ; ಮರಮಕಲ ಎಂಬುವವರನ್ನು ಕರೆಸಿ ವಿಚಾರಣೆ ಮಾಡಿ ಸೂಕ್ತ ಕಾನೂನಿನ  ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಲಿಖಿತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.158/2018 ಕಲಂ; 323,341,504,506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ;-146/2018 ಕಲಂ; 323, 324, 504, 506, 354, ಸಂಗಡ 34 ಐಪಿಸಿ:-ದಿನಾಂಕ:10/10/2018 ರಂದು 3.15 ಪಿಎಮ್ ಗಂಟೆಗೆ ಪಿರ್ಯಾದಿ  ಗದ್ದೇಪ್ಪ ತಂದೆ ಸಂಜೀವಪ್ಪ ಹುಡೇದ ವ:60 ವರ್ಷ ಜಾತಿ: ಹಿಂದೂ ಕುರುಬರ ಉ: ಕೂಲಿಕೆಲಸ ಸಾ: ಬರದೇವನಾಳ ತಾ: ಹುಣಸಗಿ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನಂದರೆ ನಮಗೆ ಮೂರು ಜನ ಮಕ್ಕಳಿದ್ದು  ನನ್ನ ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ಮಗನಾದ ಬಸಪ್ಪನನ್ನು ಕೊಲೆ ಮಾಡಿದ್ದು ಈ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ದಿನಾಂಕ;10.10.2018 ರಂದು ಬೆಳಗ್ಗೆ 10.00 ಗಂಟೆಯ ಸುಮಾರಿಗೆ  ನಾನು ನನ್ನ  ಹೆಂಡತಿ ಈರಮ್ಮ ಹಾಗೂ ನಮ್ಮ ಪಕ್ಕದ ಹೊಲದ ಬಸಮ್ಮ ಗಂಡ ಗದ್ದೆಪ್ಪ ಮಾರನಾಳ ಎಲ್ಲರೂ ಕೂಡಿ ನಾವು ನಮ್ಮ ಹೊಲದಲ್ಲಿ ತೊಗರಿ ಬೆಳೆಗೆ ನೀರು ಬಿಡುತ್ತಿರುವಾಗ ನಮ್ಮ ಹೊಲದ ಹತ್ತಿರ ಇರುವ ಕ್ಯಾನಲ್ ರಸ್ತೆಯ ಮೇಲೆ ನಮ್ಮೂರಿನ ರಾಮಣ್ಣ ತಂದೆ ಬಸಪ್ಪ ಹುಡೇದ, ನಿಂಗಪ್ಪ ತಂದೆ ಬಸಪ್ಪ ಹುಡೇದ ಇಬ್ಬರೂ ಕೂಡಿ ನಡೆದುಕೊಂಡು ಹೋಗುತ್ತಿರುವಾಗ ನಮ್ಮನ್ನು ನೋಡಿ ಈ ಸೂಳೆ ಮಕ್ಕಳೆ ನಮ್ಮ ಮೇಲೆ ಸುಳ್ಳು ಕೊಲೆ ಕೇಸು ಮಾಡಿದ್ದಾರೆ ಅಂತಾ ಅನ್ನುವದನ್ನು ಕೇಳಿಸಿಕೊಂಡು ನಾವು ಅವರ ಹತ್ತಿರ ಹೋಗಿ ಸಮ್ಮನೇ ನಮಗೆ ಯಾಕೆ ಬೈಯಿತ್ತಿರಿ ನಮ್ಮ ಮಗನನ್ನು ಕೊಲೆ ಮಾಡಿದ್ದು ನೀವೆ ಅಂತಾ ಅಂದಾಗ ರಾಮಣ್ಣ ತಂದೆ ಬಸಪ್ಪ ಹುಡೇದ ಇತನು ತನ್ನ ಕೈಯಿಂದ ನನಗೆ ಬಲ ಪಕ್ಕಡಿಯ ಮೇಲೆ ಮುಷ್ಠಿಮಾಡಿ ಗುದ್ದಿ ಗುಪ್ತಗಾಯ ಮಾಡಿದನು. ನಿಂಗಪ್ಪ ತಂದೆ ಬಸಪ್ಪ ಹುಡೇದ ಇತನು ನನಗೆ ಹೊಡೆಯಲು ಬಂದಾಗ ನನ್ನ ಹೆಂಡತಿ ಈರಮ್ಮ ಇವಳು ಬಿಡಿಸಲು ಬಂದಾಗ ಅವಳಿಗೆ ರಾಮಣ್ಣ ತಂದೆ ಬಸಪ್ಪ ಹುಡೇದ, ನಿಂಗಪ್ಪ ತಂದೆ ಬಸಪ್ಪ ಹುಡೇದ ಇಬ್ಬರೂ ಕೂಡಿ  ನನ್ನ ಹೆಂಡತಿಯ ಕೈ ಹಿಡಿದು ಜಗ್ಗಾಡಿ ಅವಳ ಬೆನ್ನಿನ ಹಿಂದುಗಡೆಯ ಜಂಪರನ್ನು ಹರಿದು ಮಾನಬಂಗ ಪಡಿಸಲು ಪ್ರಯಯತ್ನಿಸಿದ್ದು  ಆಗ ನಾನು ನನ್ನ ಹೆಂಡತಿಯನ್ನು ಅವರಿಂದ ಬಿಡಿಸಲು ಹೋದಾಗ ಅವರಿಬ್ಬರೂ ಕೂಡಿ ನನಗೆ ತೆಕ್ಕಿಗೆ ಬಿದ್ದು ನೆಲಕ್ಕೆ ಕೆಡವಿ ಕೈಯಿಂದ ಬೆನ್ನಿನ ಮೇಲೆ ಗುದ್ದಿ ನನ್ನ ಮುಂಡಿಚಾಟಿ ಹರಿದು ಹಾಕಿ ಸೂಳೆ ಮಗನೇ ನಾವೇನು ನಿನ್ನ ಮಗನನ್ನು ಕೊಲೆ ಮಾಡಿದನ್ನು ನೋಡಿದೇನೆಲೇ ಸೂಳೆ ಮಗನ್ಯಾ ಗದ್ಯಾ ಅಂತಾ ಅಂದು ಮತ್ತೆ ನನಗೆ ಹೊಡೆಯಲು ಬಂದಾಗ ನಾನು ಚಿರಾಡಲು ನನ್ನ ದ್ವನಿ ಕೇಳಿ ನಮ್ಮ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮೂರಿನ ಲಕ್ಷ್ಮಣ್ ತಂದೆ ಬಸಪ್ಪ ಮಾರನಾಳ, ರಾಮಣ್ಣ ತಂದೆ ಬಸಪ್ಪ ಮಾರನಾಳ, ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸಮ್ಮ ಗಂಡ ಗದ್ದೆಪ್ಪ ಮಾರನಾಳ ಇವರುಗಳು ಬಂದು  ಜಗಳ ಬಿಡಿಸಿದ್ದು ಅವರು ಬಂದು ಬಿಡಿಸದ್ದಿದ್ದರೆ ಇನ್ನೂ ಹೊಡೆಯುತ್ತಿದ್ದರು ಅವರು ಹೋಗುವಾಗ ಸೂಳೆ ಮಗನ್ಯಾ ಗದ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ಈ ಘಟಣೆಯಲ್ಲಿ ನನಗೆ ಮತ್ತು ನನ್ನ ಹೆಂಡತಿಗೆ ಅಷ್ಟೇನು ಗಾಯಗಳು ಆಗಿರುವದಿಲ್ಲಾ ನಾವು ಆಸ್ಪತ್ರೆಗೆ ಹೋಗುದಿಲ್ಲಾ ಕಾರಣ ನನಗೆ  ಮತ್ತು ನನ್ನ ಹೆಂಡತಿಗೆ ಹೊಡೆ-ಬಡೆ ಮಾಡಿ  ನನ್ನ ಹೆಂಡತಿಯ ಕೈ ಹಿಡಿದು ಜಗ್ಗಾಡಿ ಜಂಪರ ಹರಿದು ಮಾನಭಂಗ ಪಡಿಸಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದ ರಾಮಣ್ಣ ತಂದೆ ಬಸಪ್ಪ, ನಿಂಗಪ್ಪ ತಂದೆ ಬಸಪ್ಪ ರವರ ಮೇಲೆ ಕಾನೂನು ಕ್ರಮ  ಜರುಗಿಸಬೇಕು ಅಂತಾ ಪಿರ್ಯಾಧಿ ಗಣಕೀಕೃತ ಹೇಳಿಕೆ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ:146/2018 ಕಲಂ; 323, 324, 504, 506, 354, ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು 
  

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ:147/2018 ಕಲಂ; 143,147,148, 323,324,355,354 447, 504, 506, ಸಂ 149 ಐಪಿಸಿ:-ದಿನಾಂಕ:10/10/2018 ರಂದು 6.00 ಪಿಎಮ್ ಗಂಟೆಗೆ ಪಿರ್ಯಾದಿ  ನಿಂಗಪ್ಪ ತಂದೆ ಬಸಪ್ಪ ಹುಡೇದ ವ:36 ವರ್ಷ ಜಾತಿ: ಹಿಂದೂ ಕುರುಬರ ಉ: ಒಕ್ಕಲುತನ ಸಾ: ಬರದೇವನಾಳ ತಾ:ಹುಣಸಗಿ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನಂದರೆ ನಮಗೆ ಮೂರು ಜನ ಮಕ್ಕಳಿದ್ದು ನಮಗೂ ನಮ್ಮೂರಿನ ಗದ್ದೇಪ್ಪ ತಂದೆ ಸಂಜೀವಪ್ಪ ಹುಡೇದ, ಗದ್ದೆಪ್ಪ ಮಾರನಾಳ ಇವರುಗಳು ತಮ್ಮ ಮಕ್ಕಳಾದ ಬಸಪ್ಪ ಹುಡೇದ, ಬಸಪ್ಪ ಮಾರನಾಳ ಇವರನ್ನು ನಾವು ಕೊಲೆ ಮಾಡಿದ್ದೇವೆ ಅಂತಾ ಸುಳ್ಳು ಕೇಸ್ ಮಾಡಿದ್ದರಿಂದ ಅವರಿಗೂ ನಮಗೂ ವೈಷಮ್ಯೆ ಇರುತ್ತದೆ. ಹೀಗಿದ್ದು ಇಂದು ದಿನಾಂಕ;10.10.2018 ರಂದು ಬೆಳಗ್ಗೆ 11.00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ದೇವಮ್ಮ ನನ್ನ ಅಣ್ಣ ರಾಮಪ್ಪ @ ಪರಸಪ್ಪ, ನನ್ನ ಅಣ್ಣನ ಹೆಂಡತಿ ಕಸ್ತೂರಿಬಾಯಿ, ನಮ್ಮ ಹೊಲಕ್ಕೆ ಕೂಲಿ ಕೆಲಸಕ್ಕೆಂದು ಬಂದ ಶಂಕ್ರೆಪ್ಪ ತಂದೆ ಮೋತಿಲಾಲ ರಾಠೋಡ, ಬಸಪ್ಪ ತಂದೆ ಈರಣ್ಣ ಮದರಿ, ಅನೂಸುಬಾಯಿ ಗಂಡ ರಾಮಪ್ಪ ಅಣಿಮೇಲಿನ ತಾಂಡ ಎಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಸೂರ್ಯಪಾನ ತೆನೆಯ ಚಂಡಿಯಾಡುತ್ತಿದ್ದು ಅದೇ ವೇಳೆಯಲ್ಲಿ ನಮ್ಮೂರಿನ 1) ಗದ್ದೆಪ್ಪ ತಂದೆ ಸಂಜೀವಪ್ಪ ಹುಡೇದ 2) ಈರಮ್ಮ ಗಂಡ ಗದ್ದೆಪ್ಪ ಹುಡೇದ, 3) ಹೊಳೆಮ್ಮ ಗಂಡ ಚಂದ್ರಶೇಖರ ಗೌಡರ, 4) ರಾಮಣ್ಣ ತಂದೆ ಬಸಪ್ಪ ಮಾರನಾಳ 5) ಗದ್ದೆಪ್ಪ ತಂದೆ ಬಸಪ್ಪ ಮಾರನಾಳ 6) ಲಕ್ಷ್ಮಣ್ ತಂದೆ ಬಸಪ್ಪ ಮಾರನಾಳ, 7)ಬಸಮ್ಮ ಗಂಡ ಗದ್ದೆಪ್ಪ ಮಾರನಾಳ 8) ನೀಲಮ್ಮ ಗಂಡ ಲಕ್ಷ್ಮಣ್ ಮಾರನಾಳ ಇವರೆಲ್ಲರೂ  ಗುಂಪು ಕಟ್ಟಿಕೊಂಡು  ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ನಮ್ಮ ಹೊಲವನ್ನು ಅತಿಕ್ರಮ ಪ್ರವೇಶ ಮಾಡಿ ನಮಗೆ  ಎಲೇ ಬೋಸಡಿ ಸೂಳೆ ಮಕ್ಕಳೆ ನೀವು ನಮ್ಮ ಮಕ್ಕಳನ್ನು ಕೊಲೆ ಮಾಡಿ ಈ ಊರಿನಲ್ಲಿ  ಯಾರದು ಅಂಜಿಕೆ ಇಲ್ಲದೆ ಹೊಲ ಬಿತ್ತಿ ಬಳೆತ್ತೀರೇನಲೇ ಅಂತಾ ಅಂದು ಅವರಲ್ಲಿಯ ಈರಮ್ಮ ಗಂಡ ಗದ್ದೆಪ್ಪ ಹುಡೇದ, ಬಸಮ್ಮ ಗಂಡ ಗದ್ದೆಪ್ಪ ಮಾರನಾಳ, ಹೊಳೆಮ್ಮ ಗಂಡ ಚಂದ್ರಶೇಖರ ಗೌಡರ,ಇವರುಗಳು ಬಂದು ನನಗೆ ಕೈಯಿಂದ ಬೆನ್ನಿಗೆ ಮತ್ತು ಎದೆಗೆ ಹೊಡೆದು ಗುಪ್ತಗಾಯ ಪಡಿಸಿದರು, ಹೊಳೆಮ್ಮ ಇವಳು ತನ್ನ ಕಾಲಿನ ಚಪ್ಪಲಿ ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದಳು. ಗದ್ದೆಪ್ಪ ತಂದೆ ಬಸಪ್ಪ ಮಾರನಾಳ ಇತನು ನನ್ನ ಹೆಂಡತಿಗೆ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳಿದಾಡಿ ಮಾನಭಂಗ ಪಡಿಸಲು ಪ್ರಯಯ್ನಿಸಿದ್ದು, ಗದ್ದೆಪ್ಪ ತಂದೆ ಸಂಜೀವಪ್ಪ ಹುಡೇದ, ಲಕ್ಷ್ಮಣ್ ತಂದೆ ಬಸಪ್ಪ ಮಾರನಾಳ, ಇಬ್ಬರೂ ಕೂಡಿ ನನ್ನ ಅಣ್ಣನ ಹೆಂಡತಿಯಾದ ಕಸ್ತೂರಿಬಾಯಿ ಇವಳಿಗೆ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳಿದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು, ರಾಮಣ್ಣ ತಂದೆ ಬಸಪ್ಪ ಮಾರನಾಳ, ನೀಲಮ್ಮ ಗಂಡ ಲಕ್ಷ್ಮಣ್ ಮಾರನಾಳ ಇವರುಗಳು ನನ್ನ ಅಣ್ಣನಾದ ರಾಮಣ್ಣ @ ಪರಸಪ್ಪ ಇತನಿಗೆ ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದ್ದು. ಮತ್ತೆ ಎಲ್ಲರೂ ಕೂಡಿ ನಮಗೆ ಈ ಬೋಸಡಿ ಮಕ್ಕಳನ್ನು ಬಿಡಬ್ಯಾಡರಿ ಸಾಯಿಸಿ ಬಿಡೋಣ ಅಂತಾ ಅನ್ನತ್ತಾ, ನಮ್ಮ ಮೇಲೆ ಏರಿ ಬಂದಾಗ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಂಕ್ರೆಪ್ಪ ತಂದೆ ಮೋತಿಲಾಲ ರಾಠೋಡ, ಬಸಪ್ಪ ತಂದೆ ಈರಣ್ಣ ಮದರಿ ಇವರುಗಳು ಬಂದು ಬಿಡಿಸಿದರು ಆಗ ಅವರೆಲ್ಲರೂ ಹೋಗುವಾಗ ಬೋಸಡಿ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೊಂದು ಸಲ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ನಮಗೆ ಈ ಜಗಳದಲ್ಲಿ ಅಷ್ಟೇನು ಗಾಯಗಳು ಆಗಿರುವದಿಲ್ಲಾ ನಾವು ಆಸ್ಪತ್ರೆಗೆ ಹೋಗುವದಿಲ್ಲಾ ಕಾರಣ ಈ ಮೇಲೆ ನಮೂದಿಸಿದವರು ನನಗೆ ನನ್ನ ಅಣ್ಣನಿಗೆ ಹೊಡೆ-ಬಡೆ ಮಾಡಿ ಗುಪ್ತಗಾಯಗೊಳಿಸಿದ ಮತ್ತು ನನ್ನ ಹೆಂಡತಿಗೆ ಹಾಗೂ ನನ್ನ ಅಣ್ಣನ ಹೆಂಡತಿಗೆ ಕೈ ಕೂದಲು ಹಿಡಿದು ಎಳಿಡಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಪಿರ್ಯಾಧಿ ಗಣಕೀಕೃತ ಹೇಳಿಕೆ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ:147/2018 ಕಲಂ; 143,147,148, 323,324,355,354 447, 504, 506 ಸಂ 149  ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 286/2018 ಕಲಂ 447,427,307,504,506 ಐಪಿಸಿ:-ದಿನಾಂಕ; 10.10.2018  ರಂದ 7-30 ಪಿ.ಎಮ್ ಕ್ಕೆ ಫಿರ್ಯದಿ ನೀಡಿದ ಗಣಕಿಕೃತ ಅಜರ್ಿ  ಸಾರಾಂಶವೇನೆಂದರೆ, ನನಗೆ ಸುಮಾರು 13 ವರ್ಷಗಳ ಹಿಂದೆ ನನ್ನ ತಂದೆ-ತಾಯಿ ಲಿಂಗಾರಡ್ಡಿ ಇವರ ಮಗನಾದ ಜಗನ್ನಾಥರಡ್ಡಿ ಈತನೊಂದಿಗೆ ಹಿರಿಯರ ಸಂಪ್ರದಾಯದಂತೆ ಮದುವೆ ಮಾಡಿದ್ದು ಇರುತ್ತದೆ. ಕಂದಕೂರು ಗ್ರಾಮ ಸಿಮಾಂತರದಲ್ಲಿ ನನ್ನ ತಾಯಿಯ ಹೆಸರಿನಲ್ಲಿ ಜಮೀನು ಸವರ್ೇ ನಂ: 66/1 ನೆದ್ದರ ವಿಸ್ತಿರ್ಣ 2 ಎಕ್ಕರೆ 30 ಗುಂಟೆ ಹಾಗೂ ನನ್ನ ತಂದೆ-ತಾಯಿ ನನ್ನ ಹೆಸರಿನಲ್ಲಿ ಮಾಡಿರುವ ಜಮೀನು ಸವರ್ೇ ನಂ: 68/ಅ ನೇದ್ದರ ವಿಸ್ತೀರ್ಣ 3 ಎಕ್ಕರೆ 15 ಗುಂಟೆ ಜಮೀನು ಹಾಗೂ 68/ಇ ನೇದ್ದರ ಜಮೀನು ವಿಸ್ತಿರ್ಣ 3 ಎಕ್ಕರೆ 20 ಗುಂಟೆ ಜಮೀನು ಇದ್ದು ಹೀಗೆ ಒಟ್ಟು 9 ಎಕ್ಕರೆ 15 ಗುಂಟೆ ಈ ಎಲ್ಲಾ ಜಮೀನನ್ನು ನಾನು ಮತ್ತು ನನ್ನ ತಾಯಿ ಕೂಲಿ ಆಳುಗಳಿಂದ ಬಿತ್ತನೆ ಮಾಡಿಕೊಂಡು ಪ್ರತಿ ವರ್ಷ ನಾವೇ ರಾಶಿ ಮಾಡಿಕೊಂಡು ಅದರಿಂದ ನಮ್ಮ ಉಪ-ಜೀವನ ಮಾಡುತ್ತಿದ್ದೆವು. ಪ್ರತಿ ವರ್ಷದಂತೆ ಈ ವಷರ್ಾ ನಾನು ಮತ್ತು ನನ್ನ ತಾಯಿ ಈ ಮೇಲ್ಕಂಡ ಎಲ್ಲಾ ಜಮೀನುನಲ್ಲಿ ತೊಗರಿ ಮತ್ತು ಸೂರ್ಯಪಾನ ಬೆಳೆಯನ್ನು ಬಿತ್ತನೆ ಮಾಡಿದ್ದೆವು. ದಿನಾಂಕ 08.10.2018 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನನ್ನ ಗಂಡ ನಮ್ಮ ಹೊಲಗಳಲ್ಲಿಯ ಸೂರ್ಯಪಾನ ಬೆಳೆಯನ್ನು ನಾಶನಾಡಿದ ಬಗ್ಗೆ ನಮಗೆ ಮಾಹಿತಿ ಗೊತ್ತಾಗಿ ಇಂದು ದಿನಾಂಕ 10.10.2018 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಚಿಕ್ಕಮ್ಮನ ಮಗಳು ಪುಷ್ಪಾಲತಾರಡ್ಡಿ ಇಬ್ಬರು ಸೇರಿ ನಮ್ಮ ಈ ಹೊಲಗಳಲ್ಲಿಯ ಸೂರ್ಯಪಾನ ಬೆಳೆಯನ್ನು ನೋಡಿಕೊಂಡು ಬರುವ ಸಲುವಾಗಿ ಹೋಗಿದ್ದಾಗ ಅಲ್ಲಿ ಈ ಮೇಲ್ಕಂಡ ಜಮೀನುಗಳಲ್ಲಿಯ ಸೂರ್ಯಪಾನ ಬೆಳೆಯು ಅಡ್ಡದಿಡ್ಡಿಯಾಗಿ ಕತ್ತರಿಸಿ ನಾಶಪಡಿಸಿದ್ದು ಕಂಡುಬಂತು. ನಂತರ ನಾವು ಅಲ್ಲಿಗೆ ಹೋಗಿದ್ದ ವಿಷಯ ಗೊತ್ತಾಗಿ ಬೆಳಿಗ್ಗೆ 9-30 ಗಂಟೆ ಸುಮಾರಿಗೆ ನಾವು ಇದ್ದ ಜಾಗಕ್ಕೆ ಬಂದ ನನ್ನ ಗಂಡ ಜಗನ್ನಾಥರಡ್ಡಿ ತಂದೆ ಲಿಂಗಾರಡ್ಡಿ ಈತನು ಇಲ್ಲೇನ್ ಮಾಡಕತ್ತಿರಿ ಅಂತಾ ಕೇಳೀದನು. ಆಗ ನಾನು ನಮ್ಮ ಹೊಲದಲ್ಲಿಯ ಸೂರ್ಯಪಾನ ಬೆಳೆಯನ್ನು ಏಕೆ ನಾಶಪಡಿಸಿದಿ ಅಂತಾ ಕೇಳಿದಕ್ಕೆ ಆತ ನನಗೆನ್ ಕೇಳತಿಲೇ ಸೂಳೆ ನಿನಗೆ ಮತ್ತು ನಿನ್ನ ತಾಯಿಗೆ ಖಲಾಸ್ ಮಾಡಿ ಈ ಹೊಲಗಳನ್ನು ನನ್ನ ಹೆಸರಿಗೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತ ನಿನಗೆ ಈವಾಗಲೇ ಸಾಯಿಸುತ್ತೇನೆ ಅಂತಾ ಹೇಳುತ್ತ ನನ್ನ ಕುತ್ತಿಗೆ ಹಿಡಿದು ನನ್ನ ಗಂಟಲು ಸರವನ್ನು ಬಿಗಿಯಾಗಿ ಹಿಡಿದು ಒತ್ತಲಾರಂಬಿಸಿದನು. ಆಗ ನಾನು ಕೈಯಿಂದ ಆತನಿಗೆ ದೊಬ್ಬುತ್ತ ಬಿಡಿಸಿಕೊಳ್ಳುತ್ತಿದ್ದಾಗ ನನ್ನ ತಂಗಿ ಪುಷ್ಪಾಲತಾರಡ್ಡಿ ಆಕೆ ನನ್ನ ಗಂಡನನ್ನು ಹಿಂದಿನಿಂದ ಎಳೆದು ನನ್ನ ಗಂಡ ನನ್ನ ಕುತ್ತಿಗೆಗೆ ಹಿಡಿದ ಕೈಗಳನ್ನು ಬಿಡಿಸಿದಳು. ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೆಕು ಅಂತ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ: 286/2018 ಕಲಂ 447,427,307,504,506  ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ..

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- ಯು.ಡಿ ಆರ್ ನಂ 25/2018 ಕಲಂ 174  ಸಿ ಆರ್ ಪಿ ಸಿ:-ದಿನಾಂಕ: 10/10/2018 ರಂದು 08:30 ಎ.ಎಮ್ ಕ್ಕೆ ಪಿಯರ್ಾದಿ ನಿಂಗಪ್ಪ ತಂ. ಭೀಮರಾಯ ಬೇವಿನಳ್ಳಿ ವ|| 24 ಜಾ|| ಹಿಂದು ಲಿಂಗಾತ ಉ|| ಅಟೋಚಾಲಕ ಸಾ|| ಮಂಡಗಳ್ಳಿ  ಹಾ|| ವ|| ಇಂದಿರಾ ನಗರ ಶಹಾಪೂರ ತಾ|| ಶಹಾಪೂರ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಹಾಜರಪಡಿಸಿದ್ದು, ಸದರ ಅಜರ್ಿ ಸಾರಾಂಶವೇನೆಂದರೆ, ದಿನಾಂಕ 09/10/2018 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆಯ ಕಡೆಗೆ ಹೋಗುತ್ತಿರುವಾಗ ಸರಕಾರಿ ಆಸ್ಪತ್ರೆಯ ಮುಂದೆ ಲೈಟ ಕಂಬದ ಹತ್ತಿರ ಒಬ್ಬ ವಯಸ್ಸಾದ ಅಂದಾಜು 60 ವರ್ಷದ ಮನುಷ್ಯ ಬಿದ್ದಿದ್ದನ್ನು ನೋಡಿ ನಾನು ಅವನ ಹತ್ತಿರ ಹೋಗಿ ಅವನಿಗೆ ಎಬ್ಬಿಸಲಾಗಿ ಅವನು ಏಳಲಿಲ್ಲ ಅವನ ಎಡಗೈಗೆ ಸಿರಿಂಜ ಹಚ್ಚಿದ ಸೂಜಿ ಹಾಗೆ ಇದ್ದುದ್ದನ್ನು ನೋಡಿ ಆರೋಗ್ಯ ತಪ್ಪಿ ಬಿದ್ದಿರ ಬಹುದು ಎಂದು ಅವನನ್ನು ಮಾತನಾಡಿಸಲು ಪ್ರಯತ್ನಿಸಿದೇ ಆದರೆ ಅವನು ಮಾತನಾಡದೇ ಇದ್ದುದ್ದನ್ನು ನೋಡಿ ಅವನನ್ನು ಎತ್ತಿಕೊಂಡು ಅಲ್ಲೇ ಇದ್ದ ಸರಕಾರಿ ಆಸ್ಪತ್ರೆಗೆ ತಂದು ಹಾಕಿದೇನು ಅಲ್ಲಿ ವೈದ್ಯಾದಿಕಾರಿ ಸದರಿ ವ್ಯಕ್ತಿಯನ್ನು ನೋಡಿ ಈ ವ್ಯಕ್ತಿ ಮೃತ ಪಟ್ಟಿರುವದಾಗಿ ತಿಳಿಸಿದರು ಈ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ ನಂತರ ಸರಕಾರಿ ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಪೋನ ಮಾಡಿ ವಿಷಯ ತಿಳಿಸಿದರು. ಸರಕಾರಿ ಆಸ್ಪತ್ರೆಗೆ ಪೊಲೀಸರು ಬಂದು ನನಗೆ ವಿಚಾರಿಸಲಾಗಿ ನಡೆದ ವಿಷಯ ತಿಳಿಸಿದೇನು ನಂತರ ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ಇರುವದಿಲ್ಲ ಮತ್ತು ಸದರಿ ವ್ಯಕ್ತಿಯ ಮೇಲೆ ಒಂದು ಬಿಳಿ ಬಣ್ಣದ ಕಮೀಜ ಅಂಗಿ ಒಂದು ಬಿಳಿ ದೋತರ, ಕೆಂಪು ಮತ್ತು ಹಳದಿ ಉಡದಾರ, ಉಡದಾರಕ್ಕೆ ಕೀಲಿ ಕೈ ಇರುತ್ತವೆ ಕಾರಣ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕೆಂದು ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್.ನಂ.25/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!