Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ;- ಗುನ್ನೆ ನಂಬರ 423 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 05/10/2018 ರಂದು ಸಾಯಂಕಾಲ 16-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 05/10/2018 ರಂದು ಮದ್ಯಾಹ್ನ 15-45 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಗಾಂಧಿ ಚೌಕ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 720=00 ರೂಪಾಯಿ ಮತ್ತು ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 29/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 19-00 ಗಂಟೆಗೆ ಠಾಣೆ ಗುನ್ನೆ ನಂಬರ 423 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ :- ಗುನ್ನೆ ನಂ: 157/2018 ಕಲಂ. 363 ಐಪಿಸಿ;- ದಿನಾಂಕ; 05/10/2018 ರಂದು 7-30 ಪಿಎಮ್ ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ಹುಸೇನಪ್ಪ ತಂ. ಹಣಮಂತ ಬೈಲ್ ಪತ್ತಾರ ವಃ 50 ಜಾಃ ಬೈಲ್ ಪತ್ತಾರ ಸಾಃ ನಾಯ್ಕಲ್ ತಾಃ ಶಹಾಪೂರ ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರುಪಡಿಸಿದ್ದು ಸದಿರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ನಾಲ್ಕು ಜನ ಹೆಣ್ಣು, ಎರಡು ಗಂಡು ಮಕ್ಕಳಿದ್ದು ಅದರಲ್ಲಿ ಕೊನೆಯದವನಾದ ಆನಂದ ತಂದೆ ಹುಸೇನಪ್ಪ ವ;13 ವರ್ಷದ ಮಗನಿದ್ದು ಸೊನ್ನದಲ್ಲಿರುವ ಮಠದ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದು ಅಲ್ಲಿ ವಿಧ್ಯಾಭಾಸ ಮಾಡದೇ ಬಿಟ್ಟು ವಾಪಾಸ ಬಂದಿದ್ದನು. ನನ್ನ ಮಗಳಾದ ಶಕುಂತಲ ಗಂಡ ವಿಶ್ವನಾಥ ಬಯಲ ಪತ್ತಾರ ಸಾ; ಕೋಲಿವಾಡ ಇವಳು ಯಾದಗಿರಿಯಲ್ಲಿ ಇರುತ್ತಾಳೆ. ನಾನು ಮತ್ತು ನನ್ನ ಹೆಂಡತಿ ಶಾಂತಮ್ಮ ಹಾಗೂ ನನ್ನ ಮಗ ಆನಂದ ಕೂಡಿಕೊಂಡು ಶನಿವಾರ ದಿನಾಂಕ; 29/09/2018 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಯಾದಗಿರಿಯ ನನ್ನ ಮಗಳಾದ ಶಕುಂತಲ ಇವಳ ಮನೆಗೆ ಮಾತನಾಡಲು ಬಂದಿದ್ದೇವು. ನಂತರ ಎಲ್ಲರೂ ಕೂಡಿಕೊಂಡು ಊಟಮಾಡಿ ರಾತ್ರಿ 10-00 ಗಂಟೆ ಸುಮಾರಿಗೆ ಮಗಳ ಮನೆಯಲ್ಲಿ ಮಲಗಿಕೊಂಡೆವು. ಆನಂದ ಈತನು ನನ್ನ ಪಕ್ಕದಲ್ಲಿಯೇ ಮಲಗಿದ್ದನು. ನಂತರ ದಿನಾಂಕ; 30/09/2018 ರಂದು ಬೆಳೆಗ್ಗೆ 5-00 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿ ನೋಡಲಾಗಿ ನನ್ನ ಮಗ ಆನಂದ ಈತನು ಕಾಣಲಿಲ್ಲ. ಮನೆಯ ಹೊರಗೆ ಬಂದು ನೋಡಿದರು ಕೂಡಾ ಕಾಣಿಸಲಿಲ್ಲ. ನಂತರ ಎಲ್ಲರಿಗೂ ಎಬ್ಬಿಸಿ ಸುತ್ತಮುತ್ತ ಹಡುಕಾಡಲು ಎಲ್ಲಿಯೂ ಕಾಣಿಸಲಿಲ್ಲ. ನಂತರ ಯಾದಗಿರಿಯ ಬಸ ನಿಲ್ದಾಣ, ರೈಲ್ವೆ ನಿಲ್ದಾಣ, ಗಾಂದಿಚೌಕ ಇನ್ನೀತರ ಕಡೆಗೂ ಹುಡುಕಾಡಿದರು ಕಾಣಿಸಲಿಲ್ಲ. ನಮ್ಮ ಸಂಬಂಧಿಕರಿದ್ದ ಕಡೆಗೆಲ್ಲಾ ವಿಚಾರಿಸಿದರು ಕೂಡಾ ಸಿಕ್ಕಿರುವುದಿಲ್ಲ. ಆದ್ದರಿಂದ ಎಲ್ಲಾಕಡೆ ವಿಚಾರಿಸಿ ಇಂದು ದಿನಾಂಕ; 05/10/2018 ರಂದು ತಡವಾಗಿ ಠಾಣೆಗೆ ಬಂದಿದ್ದು ಕಾರಣ ನನ್ನ ಮಗ ಆನಂದ ತಂದೆ ಹುಸೇನಪ್ಪ ವ;13 ವರ್ಷ ಈತನನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು, ಅಪಹರಣಕ್ಕೊಳಗಾದ ನನ್ನ ಮಗನ ಚಹರೆ ಪಟ್ಟಿ :- ಸಾದಾಕಪ್ಪು ಬಣ್ಣ, ದುಂಡನೆಯ ಮುಖ, ಅಂದಾಜು 4 ಪೀಟ್ 2 ಇಂಚು ಎತ್ತರ, ಸಾಧಾರಣ ಮೈಕಟ್ಟು, ಮೈಮೇಲೆ ಕೆಂಪು ಬಿಳಿ ಪಟ್ಟಿಯುಳ್ಳ ಟೀ-ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ, ಜಗನ್ನಾಥಿ ಭಾಷೆ ಮಾತನಾಡುತ್ತಾನೆ. ಕಾರಣ ಸದರಿ ಅಪಹರಣಕ್ಕೊಳಗಾದ ನನ್ನ ಮಗನನ್ನು ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಇಂದು ದಿನಾಂಕ; 05/10/2018 ರಂದು 7-30 ಪಿಎಮ್ ಕ್ಕೆ ಠಾಣೆಯ ಗುನ್ನೆ ನಂ.157/2018 ಕಲಂ.363 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 177/2018 ಕಲಂ: 302.201. ಐಪಿಸಿ:- ದಿನಾಂಕ: 05-10-2018 ರಂದು ಸಾಯಂಕಾಲ 03-00 ಗಂಟೆಗೆ ಅಜರ್ಿದಾರನಾದ ತಾಯಪ್ಪ ತಂದೆ ಮಹಾದೇವಪ್ಪ ಕೊಳಿ ವ|| 28 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಸೈದಾಪೂರ ತಾ|| ಜಿಲ್ಲಾ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ಒಂದು ದೂರ ಸಲ್ಲಿಸಿದ ಸಾರಂಶವೆನೆಂದರೆ ಇಂದು ದಿನಾಂಕ 05-10-2018 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಬಸವಂತ್ರಾಯಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ್ ಇವರ ಬೀಳು ಹೊಲದಲ್ಲಿ ಯಾರೋ ಒಂದು ಗಂಡು ಮನುಷ್ಯನ ಶವ ಸುಟ್ಟಹಾಕಿ ಹೋಗಿರುತ್ತಾರೆ ಅಂತಾ ಮಾತಾಡುತಿದ್ದರು. ಅದೆ ವೇಳೆಗೆ ನಮ್ಮೂರಿನ ಪ್ರಕಾಶಗೌಡ ಇತನು ನನಗೆ ಪೊನ್ ಮಾಡಿ ಹೊಲಕ್ಕೆ ಹೋಗಿ ನೋಡಿ ಬಾ ಯಾವುದೋ ಹೆಣ ಬಿದ್ದಿದೆ ಅಂತಾ ಮಂದಿ ಊರಲ್ಲಿ ಮಾತಾಡುತಿದ್ದಾರೆ ಎಂದು ಹೇಳಿದ್ದರಿಂದ ನಾನು ನೋಡಲು ನನ್ನ ಸೈಕಲ ಮೋಟಾರದ ಮೇಲೆ ಬಸವಂತ್ರಾಯಗೌಡ ಇವರ ಹೊಲಕ್ಕೆ ಹೋಗಿ ನೋಡಲಾಗಿ ಬಸವಂತ್ರಾಯಗೌಡ ಹೊಲದ ಮೂಲಿಗೆ ಜನರು ಹೆಣವನ್ನು ನೋಡುತ್ತಿದ್ದರು. ಆಗ ನಾನು ಹೆಣದ ಹತ್ತಿರ ಹೋಗಿ ನೋಡಲಾಗಿ ಒಂದು ಗಂಡು ಮನುಷ್ಯನ ಶವ ಇತ್ತು. ತಲೆಯಿಂದ ಕಾಲುವರೆಗೆ ಅರೆಬರೆ ಸುಟ್ಟಿದ್ದು ಶವ ನನಗೆ ಗುತರ್ು ಸಿಗಲಿಲ್ಲ. ಸತ್ತವನಿಗೆ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶಕ್ಕೋ ನಿನ್ನೆ ದಿನಾಂಕ 04-10-2018 ರಿಂದ ಇಂದು ಬೆಳಿಗ್ಗೆ ನಮ್ಮೂರವರು ನೋಡುವ ಮುಂಚೆ ಅಂದರೆ ಬೆಳಿಗ್ಗೆ 10-00 ಗಂಟೆ ಒಳಗೆ ಕೊಲೆ ಮಾಡಿ ಸುಟ್ಟು ಹಾಕಿದಂತೆ ಕಂಡು ಬರುತ್ತದೆ. ಸತ್ತವನ ವಯಸ್ಸು ಸುಮಾರು 25-30 ಇರಬಹುದು. ಅಪರಿಚಿತ ಗಂಡು ಮನುಷ್ಯನೊಬ್ಬನಿಗೆ ನಮ್ಮೂರ ಸಿಮೇಯ ಬಸವಂತ್ರಾಯಗೌಡ ಇತನ ಬಿಳು ಹೊಲದಲ್ಲಿ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಸುಟ್ಟು ಹಾಕಿದ ಕೊಲೆಗಡುಕರ ಮೇಲೆ ಕಾನೂನು ಕ್ರಮ ಜರುಗಿಸಲು ಕೊರಿದೆ. ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 177/2018 ಕಲಂ 302.201 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 187/2018 ಕಲಂ: 279,304(ಎ) ಐಪಿಸಿ:-ದಿನಾಂಕ: 05/10/2018 ರಂದು 8-30 ಪಿಎಮ್ ಕ್ಕೆ ಶ್ರೀ ಹಿಮಾನುಶು ಪಟೇಲ್ ತಂದೆ ಅರವಿಂದ ಪಟೇಲ್, ವ:23, ಜಾ:ಹಿಂದೂ ಗುಜರಾತಿ, ಉ: ಸಾಮೀಲ್ ವ್ಯಾಪಾರ ಸಾ:ಹಳೆ ಬಸ್ ನಿಲ್ದಾಣದ ಹಿಂದುಗಡೆ ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ದಿನಾಂಕ: 25/09/2018 ರಂದು ಸಾಯಂಕಾಲ ನಮ್ಮ ತಂದೆಯು ಖಾಸಗಿ ಕೆಲಸದ ನಿಮಿತ್ಯ ಯಾದಗಿರಿಗೆ ಹೋಗಿ ಬರುವುದಾಗಿ ಹೇಳಿ ನಮ್ಮ ಹೊಂಡಾ ಎಕ್ಟೀವಾ ಸ್ಕೂಟಿ ನಂ. ಕೆಎ 33 ಎಸ್ 7938 ನೇದ್ದರ ಮೇಲೆ ಹೋದನು. ನಾನು ಕಟ್ಟಿಗೆ ಅಡ್ಡೆಯಲ್ಲಿದ್ದು ವ್ಯಾಪಾರ ಮಾಡುತ್ತಿದ್ದೇನು. ರಾತ್ರಿ 8 ಪಿ.ಎಮ್ ಸುಮಾರಿಗೆ ನಮ್ಮ ಅಣ್ಣತಮ್ಮಕೀಯ ತಾತನಾದ ಕಾಂತಿಲಾಲ ತಂದೆ ಮೇಕಜಿ ಪಟೇಲ್ ಇವರು ಯಾದಗಿರಿಯಿಂದ ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಿಮ್ಮ ತಂದೆಯು ಯಾದಗಿರಿಗೆ ಬಂದು ವಾಪಿಸ್ ಶಹಾಪೂರಕ್ಕೆ ಹೊಂಡಾ ಎಕ್ಟೀವಾ ಸ್ಕೂಟಿ ಮೇಲೆ ಹೋಗುತ್ತಿದ್ದಾಗ ಯಾದಗಿರಿ-ಶಹಾಪೂರ ಮೇನ್ ರೋಡ ಖಾನಾಪೂರ ಕ್ಯಾಂಪ ಹತ್ತಿರ 7-30 ಪಿ.ಎಮ್ ಸುಮಾರಿಗೆ ಹೊಂಡಾ ಎಕ್ಟೀವಾ ಸ್ಕೂಟಿ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತಾನೆ ಸ್ಕಿಡ್ಡ ಮಾಡಿಕೊಂಡು ಬಿದ್ದಿದ್ದು, ಯಾರೋ ದಾರಿ ಮೇಲೆ ಹೋಗುವವರು ನೋಡಿ ನನಗೆ ಫೋನ ಮಾಡಿದ್ದರಿಂದ ನಾನು ಕೂಡಲೇ ಸ್ಥಳಕ್ಕೆ ಹೋಗುವಷ್ಟರಲ್ಲಿ ನಿಮ್ಮ ತಂದೆಗೆ ಅಂಬ್ಯುಲೇನ್ಸನಲ್ಲಿ ಹಾಕುತ್ತಿದ್ದರು. ನಾನು ಹೋಗಿ ನೋಡಿದಾಗ ನಿಮ್ಮ ತಂದೆಗೆ ಅಪಘಾತದಲ್ಲಿ ಬಲಗಡೆ ತೆಲೆಗೆ ಭಾರಿ ಒಳಪೆಟ್ಟಾಗಿ ಕಿವಿಯಿಂದ ರಕ್ತ ಬರುತ್ತಿತ್ತು. ಬಲಗಡೆ ಪಕ್ಕೆಗೆ ಭಾರಿ ಒಳಪೆಟ್ಟಾಗಿ ಎಲುಬುಗಳು ಮುರಿದಿದ್ದವು. ಆತನಿಗೆ ಅಲ್ಲಿಂದ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ತೋರಿಸಿ, ಅಲ್ಲಿಂದ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ನೀವು ಬರ್ರಿ ಎಂದು ಹೇಳಿದಾಗ ನಾನು ಮತ್ತು ನಮ್ಮ ತಾಯಿ ಕಾಂತಾಬಾಯಿ ಮತ್ತು ಇತರರು ಕೂಡಿ ಕಾಮರೆಡ್ಡಿ ಆಸ್ಪತ್ರೆಗೆ ಹೋಗಿ ನೋಡಿದ್ದು, ನಮ್ಮ ತಂದೆಯು ಹೊಂಡಾ ಎಕ್ಟೀವಾ ಸ್ಕೂಟಿ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ, ಸ್ಕಿಡ್ಡ ಮಾಡಿಕೊಂಡು ಬಿದ್ದು ಮೇಲಿನಂತೆ ಭಾರಿ ಗಾಯಗಳು ಹೊಂದಿ ಉಪಚಾರದಲ್ಲಿದ್ದನು. ನಮ್ಮ ತಂದೆಗೆ ಸುಮಾರು 3 ದಿನ ಅಲ್ಲಿಯೇ ತೋರಿಸಿದೇವು. ಆದರೂ ಕೂಡ ಅಷ್ಟೊಂದು ಗುಣಮುಖವಾಗದ ಕಾರಣ ಅಲ್ಲಿಂದ ನಮ್ಮ ತಂದೆಗೆ ನಮ್ಮ ಚಿಕ್ಕಪ್ಪ ಅಶ್ವಿನ ಪಟೇಲ್ ಮತ್ತು ಇತರರು ಕೂಡಿ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ಯಶೋಧರಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನು ಮತ್ತು ನಮ್ಮ ತಾಯಿ ಶಹಾಪೂರಕ್ಕೆ ಮರಳಿ ಬಂದೆವು. ಹೀಗಿದ್ದು ಇಂದು ದಿನಾಂಕ: 05/10/2018 ರಂದು ಸಂಜೆ 5-30 ಪಿಎಮ್ ಸುಮಾರಿಗೆ ನಮ್ಮ ಚಿಕ್ಕಪ್ಪ ಅಶ್ವಿನ ಪಟೇಲ್ ಇವರು ನನಗೆ ಫೋನ ಮಾಡಿ ಹೇಳಿದ್ದನೇಂದರೆ ನಿಮ್ಮ ತಂದೆಯು ಹೈದ್ರಾಬಾದ ಯಶೋಧರಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಇಂದು ದಿನಾಂಕ: 05/10/2018 ರಂದು ಸಂಜೆ 5 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ನಮ್ಮ ಸ್ಥಳಿಯ ಠಾಣೆಯ ಪೊಲೀಸರು ಬಂದರೆ ಮಾತ್ರ ಆಸ್ಪತ್ರೆಯವರು ಶವವನ್ನು ನಮಗೆ ಕೊಡುತ್ತಾರೆ ಅಂತಾ ಅದಕ್ಕೆ ನೀನು ಪೊಲೀಸ್ ಠಾಣೆಗೆ ಹೋಗಿ ತಿಳಿಸು ಎಂದು ಹೇಳಿದರು. ಅದಕ್ಕೆ ನಾನು ಈಗ ವಡಗೇರಾ ಪೊಲೀಸ್ ಠಾಣೆಗೆ ಬಂದಿರುತ್ತೇನೆ. ನಮ್ಮ ತಂದೆಯವರು ಹೊಂಡಾ ಎಕ್ಟೀವಾ ಸ್ಕೂಟಿ ಅತಿ ವೇಗದಿಂದ ಚಲಾಯಿಸಿಕೊಂಡು ಸ್ಕಿಡ್ಡ ಮಾಡಿಕೊಂಡು ಬಿದ್ದು ಭಾರಿ ಗಾಯಹೊಂದಿದ್ದರಿಂದ ಅದೇ ದುಃಖದಲ್ಲಿ ಗಾಬರಿಯಾಗಿ ಉಪಚಾರ ಮಾಡಿಸುವುದರಲ್ಲಿ ನಿರತರಾಗಿದ್ದರಿಂದ ನಮಗೆ ದೂರು ಕೊಡಲು ಆಗಿರುವುದಿಲ್ಲ. ಕಾರಣ ನಮ್ಮ ತಂದೆಯವರು ಹೊಂಡಾ ಎಕ್ಟೀವಾ ಸ್ಕೂಟಿಯನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾನೇ ಸ್ಕಿಡ್ಡ ಮಾಡಿಕೊಂಡು ಬಿದ್ದು ಭಾರಿ ಗಾಯಪೆಟ್ಟು ಹೊಂದಿ ಹೈದ್ರಾಬಾದ ಯಶೋಧರಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 187/2018 ಕಲಂ: 279,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using