ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-10-2018

By blogger on ಸೋಮವಾರ, ಅಕ್ಟೋಬರ್ 29, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-10-2018 

ಹುಣಸಗಿ ಪೊಲೀಸ್ ಠಾಣೆ;- ಗುನ್ನೆ ನಂ 199/2018 ಕಲಂ. 279 336 ಐಪಿಸಿ:-ದಿನಾಂಕ:28/10/2018 ರಂದು 06.30 ಗಂಟೆಯ ಸುಮಾರಿಗೆ ಪಿಯರ್ಾದಿ  ಪೆಟ್ರೋಲಿಂಗ ಮಾಡುತ್ತಿದ್ದಾಗ ಆರೋಪಿತನ ಹುಣಸಗಿ ಬಸವೇಶ್ವರ ಸರ್ಕಲ್ ಹತ್ತಿರ ಸುರಪುರ ರೋಡಿನ ತನ್ನ ಜೀಪನಲ್ಲಿ ಪ್ರಯಾಣಿಕರನ್ನು ಜೀವಕ್ಕೆ ಅಪಾಯವಾಗು ರೀತಿಯಲ್ಲಿ ಜೀಪನ ಮೇಲಚಾವಣಿ ಮೇಲೆ ಕೂಡಿಸಿಕೊಂಡು  ಜೀಪ ಚಾಲನೆ ಮಾಡುವದನ್ನು ಕಂಡು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಒಪ್ಪಿಸಿ ಸೂಕ್ತ ಕಾನೂನ ಕ್ರಮ ಜರುಗಿಸಲು ವರದಿ ಕೊಟ್ಟದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 

ಕೆಂಭಾವಿ ಪೊಲೀಸ್ ಠಾಣೆ. ಗುನ್ನೆ ನಂ:- 259/2018 ಕಲಂ: 504,506  ಐಪಿಸಿ:-ದಿನಾಂಕ: 28/10/2018 ರಂದು ಶ್ರೀ ಬಂದೇನವಾಜ ತಂದೆ ಖಾದರಭಾಷಾ ನಾಶಿ ವಯಾ|| 37 ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 15/10/2018 ರಂದು ಮುಂಜಾನೆ 10.22 ಗಂಟೆ ಸುಮಾರಿಗೆ ನಾನು ಅಲೀಮುದ್ದಿನ ನಾಶಿ ವಕ್ಪ್ ಅಧಿಕಾರಿ ಯಾದಗಿರಿ ಇವರಿಗೆ ಕೆಂಭಾವಿಯಿಂದ ಅವರ ದೂರವಾಣಿ ನಂಬರ 9480825477 ನೇದ್ದಕ್ಕೆ ಕರೆ ಮಾಡಿ ಕಾಚಾಪುರ ಗ್ರಾಮದ ಆಶಾರಖಾನ ಕುರಿತು ಕಮೀಟಿ ರಚಿಸಲು ಮಾಹಿತಿ ಕೇಳಲು ನನ್ನ ಮೊಬೈಲ್ ಸಂಖ್ಯೆ 9008280738 ರಿಂದ ಕರೆ ಮಾಡಿ ಮಾಹಿತಿ ಕೇಳುತ್ತಿರುವಾಗ ಸದರ ವಕ್ಪ್ ಅಧಿಕಾರಿ ಇವರು ನನಗೆ ಚಪ್ಪಲ್ಸೆ ಮಾರತೂಂ ಅವರ ತೇರಿ ಅಮ್ಮಾ ಕಿ ಚೂತ್ ಅಂತ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದಾನೆ ಸದರ ವಕ್ಪ್ ಅಧಿಕಾರಿಯಾದ ಅಲೀಮುದ್ದಿನ ನಾಶಿ ಇವನು ನನಗೆ ಮೊಬೈಲ್ನಲ್ಲಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಅಜರ್ಿ ನೀಡಿದ್ದು ಸದರಿ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 259/2018 ಕಲಂ: 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ;- 260/2018 ಕಲಂ:  341, 323,324, 504, 506 ಸಂ 34 ಐಪಿಸಿ:-ದಿ: 28/10/18 ರಂದು 5.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಅಲೀಮುದ್ದೀನ ತಂದೆ ಮಹಿಬೂಬಸಾಬ ನಾಶಿ ವಯಸ್ಸು|| 32 ಜಾ|| ಮುಸ್ಲಿಂ ಉ|| ಜಿಲ್ಲಾ ವಕ್ಫ್ ಅಧಿಕಾರಿ ವಕ್ಫ್ ಇಲಾಖೆ ಯಾದಗಿರಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ ನಮ್ಮೂರ ಬಂದೇನವಾಜ ತಂದೆ ಖಾದರಭಾಷಾ ನಾಶಿ ಈತನು ಹಳ್ಳಿಗಳಲ್ಲಿ ಜನರಿಂದ ನಮ್ಮ ವಕ್ಫ್ ಬೋರ್ಡ ವತಿಯಿಂದ ಬರುವಂತಹ ಸೌಲಭ್ಯಗಳ ಪರವಾನಿಗೆ ಕುರಿತು ನನ್ನಲ್ಲಿಗೆ ಆಗಾಗ ಬರುತ್ತಿದ್ದನು. ಮತ್ತು ಹಳ್ಳಿಗಳಲ್ಲಿ ಜನರಿಂದ ಹಣ ಪಡೆದು ನನ್ನಿಂದ ಆಗದ ಕೆಲಸಗಳನ್ನು ನನಗೆ ಮಾಡು ಅಂತ ಪೀಡಿಸುವದು ಮಾಡದೇ ಇದ್ದರೆ ನನ್ನ ವಿರುದ್ದ ಜನರಿಗೆ ಕರೆದುಕೊಂಡು ಹೋರಾಟ ಮಾಡುತ್ತೇನೆ ಅಂತ ಅಂಜಿಸುತ್ತಿದ್ದನು. ಅದಕ್ಕಾಗಿ ದಿನಾಂಕ: 15/10/18 ರಂದು ಅವನಿಗೂ ನನಗು ಫೋನಿನಲ್ಲಿ ವಾದವಿವಾದ ಆಗಿದ್ದು ಇರುತ್ತದೆ. ಅಲ್ಲದೆ ಇಂದು ದಿನಾಂಕ: 28/10/2018 ರಂದು ಸದರಿಯವನು ನನ್ನ ಮೇಲೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಬಂದೇನವಾಜ ಈತನು ಅಜರ್ಿ ಕೊಟ್ಟ ವಿಷಯ ತಿಳಿದು ಠಾಣೆಗೆ ಹೋದರಾಯಿತು ಅಂತ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ಹಾದು ನಡೆದುಕೊಂಡು ಹೋಗುತ್ತಿದ್ದಾಗ ಬಂದೇನವಾಜ ತಂದೆ ಖಾದರಭಾಷಾ ನಾಶಿ ಹಾಗೂ ಆತನ ತಮ್ಮ ಸದ್ದಾಂ ತಂದೆ ಖಾದರಭಾಷಾ ನಾಶಿ ಈ ಎರಡೂ ಜನರು ನನ್ನನ್ನು ತಡೆದು ಏನಲೆ ಬೋಸಡಿ ಮಗನೆ ನಾವು ಹೇಳಿದ ಹಾಗೆ ಕೆಲಸ ಮಾಡುವದಿಲ್ಲ ಅಲ್ಲದೆ ನಮಗೆ ಫೋನಿನಲ್ಲಿ ಬೈಯುತ್ತಿಯಾ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈಯುತ್ತಾ ಇಬ್ಬರೂ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆಯುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಬಂದೇನವಾಜ ತಂದೆ ನಬಿಸಾಬ ಕಾಚಾಪುರ ಹಾಗೂ ಇಲಿಯಾಸ ತಂದೆ ಮಶಾಕಸಾಭ ಸಾಸನೂರ ಇವರು ಬಂದು ಬಿಡಿಸಿಕೊಂಡರು. ನಂತರ ಸದರಿ ಇಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಮಗನೆ ಇನ್ನು ಮುಂದೆ ನಾವು ಹೇಳಿದಂತೆ ಕೆಲಸ ಮಾಡಬೇಕು ಇಲ್ಲದಿದ್ದರೆ ನಿನ್ನ ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 260/18 ಕಲಂ: 341, 323, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!