ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-10-2018

By blogger on ಗುರುವಾರ, ಅಕ್ಟೋಬರ್ 25, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-10-2018 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 435/2018 ಕಲಂ  323, 324, 504, 506, ಸಂ 34 ಐ.ಪಿ.ಸಿ:- ದಿನಾಂಕ 24/10/2018 ರಂದು ಮದ್ಯಾಹ್ನ 15-30 ಗಂಟೆಗೆ ಫಿರ್ಯಾದಿ ಶ್ರೀ ಭೀಮಪ್ಪ ತಂದೆ ರಾಯಪ್ಪ ಹಿರೇ ಕುರುಬ ವಯ 52 ವರ್ಷ ಜಾತಿ ಕುರಬರ ಉಃ ಒಕ್ಕಲುತನ ಸಾಃ ಗುಂಡಗುತರ್ಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನಂದರೆ, ಗುಂಡುಗುತರ್ಿ ಸಿಮಾಂತರದಲ್ಲಿ ಫಿರ್ಯಾದಿಯ ತಂದೆ ರಾಯಪ್ಪ ತಂದೆ ಭೀಮಪ್ಪ ಹಿರೇಕುರಬ ಇವರ ಹೆಸರಿನಲ್ಲಿ ಹೊಲ ಸವರ್ೇ ನಂ 44 ಆಕಾರ 6 ಎಕರೆ 5 ಗುಂಟೆ ಜಮೀನು ಇದ್ದು,  ಸದರಿ ಜಮೀನು ಸುಮಾರು 30 ರಿಂದ 35 ವರ್ಷಗಳಿಗಿಂತ ಪೂರ್ವದಿಂದಲು ನಾವೆ ಸಾಗುವಳಿ ಮಾಡಿಕೊಂಡು ಬಂದಿರುತ್ತೆವೆ. ಇತ್ತಿಚಿಗೆ ಅಂದರೆ ಸುಮಾರು 5-6 ವರ್ಷಗಳಿಂದ ಫಿರ್ಯಾದಿಗೆ ಸಂಬಂಧದಲ್ಲಿ ಅಳಿಯನಾದ ಹೈಯ್ಯಾಳಪ್ಪ ತಂದೆ ಹಣಮಂತ ಪೂಜಾರಿ ಈತನು  ಸದರಿ ಹೊಲ ತನಗೆ ಸೇರಿದ್ದು ಅಂತ ಫಿರ್ಯಾದಿ ಜೊತೆ ತಂಟೆ ತಕರಾರು ಮಾಡಿಕೊಂಡು ಬಂದಿರುತ್ತಾನೆ.  ಈ ಬಗ್ಗೆ ನ್ಯಾಯ ಪಂಚಾಯತಿ ಮಾಡಿದರು ಹೈಯ್ಯಾಳಪ್ಪ ಪಂಚಾಯತಿದಾರರ ಮಾತು ಕೇಳದೆ ಜಬರ್ದಸ್ತಿನಿಂದ ಸಾಗುವಳಿ ಮಾಡುತಿದ್ದರಿಂದ ಫಿರ್ಯಾದಿ ತನ್ನ ತಂದೆಯ ಹೆಸರಿನಲ್ಲಿ ಶಹಾಪೂರ ನ್ಯಾಯಾಲಯದಲ್ಲಿ ದಾವೆ ಹೂಡಿಸಿರುತ್ತಾನೆ. ಹೀಗಿರುವಾಗ ಇಂದು ದಿನಾಂಕ 24/10/2018 ರಂದು ಮುಂಜಾನೆ 10-00 ಗಂಟೆಯ ಸುಮಾರಿ ಫಿರ್ಯಾದಿಯು ತನ್ನ ತಂದೆಯ ಜೊತೆ ಮಾತನಾಡುತ್ತಾ ತಮ್ಮ ಮನೆಯ ಮುಂದೆ ನಿಂತಿದ್ದಾಗ ಆರೋಪಿತರಾದ 1) ಹೈಯ್ಯಾಳಪ್ಪ ತಂದೆ ಹಣಮಂತ ಪೂಜಾರಿ, 2) ತಮ್ಮಣ್ಣ ತಂದೆ ಹಣಮಂತ ಪೂಜಾರಿ, 3) ಬಸಮ್ಮ ಗಂಡ ಹಣಮಂತ ಪೂಜಾರಿ,  4) ಹೊನ್ನಪ್ಪ ತಂದೆ ಹೈಯ್ಯಾಳಪ್ಪ  ಪೂಜಾರಿ ರವರೆಲ್ಲರೂ ಜಗಳ ತೆಗೆಯುವ ಉದ್ದೇಶದಿಂದ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಗೆ ಕೋರ್ಟನಲ್ಲಿ ನಡೆದಿರುವ ಕೇಸ್ ಹಿಂದಕ್ಕೆ ತೆಗೆದುಕೊಳ್ತಿಯಾ ಇಲ್ಲಾ ಅಂತ ಅವಾಚ್ಯ ಶಬ್ದಗಳಿಂದ ಬೈಯುತಿದ್ದಾಗ,  ಫಿರ್ಯಾದಿ ಯಾಕೆ ಕೆಟ್ಟದ್ದಾಗಿ ಮಾತಾಡ್ತಿಯಾ ಕೇಸ್ ನಡೆದಿದೆಯೆಲ್ಲಾ ಈಗ್ಯಾಗ  ಆ ವಿಷಯ ಬಗ್ಗೆ ಮಾತಾಡ್ತಿಯಾ ಅಂತ ಅಂದಾಗ ಏ ಬೋಸ್ಡಿ ಮಗನೇ ನಾವು ಹೊಲ ಮನೆ ಕೆಲಸ ಬಿಟ್ಟು ಎಷ್ಟು ದಿನ ಅಂತ ಕೋಟರ್ಿಗೆ ತಿರುಗಾಡಬೇಕು ಅಂತ ಅಂದವನೆ ತನ್ನ ಕೈಯಲ್ಲಿದ ಬಡಿಗೆಯಿಂದ ಬೆನ್ನಿಗೆ  ಮತ್ತು ಕುಂಡಿಯ ಚಪ್ಪಿಗೆ ಹೊಡೆದು ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾರೆ ಮತ್ತು ಜಗಳ ಬಿಡಿಸಲು ಬಂದ ಫಿರ್ಯಾದಿಯ ತಂದೆಗೆ ಕೈಯಿಂದ ಮತ್ತು ಕಲ್ಲಿನಿಂದ ಭುಜಕ್ಕೆ ಹೊಡೆ ಬಡೆ ಮಾಡಿ ಕೋರ್ಟನಲ್ಲಿ ನಡೆದಿರುವ ಕೇಸ್ ಹಿಂಪಡೆಯದಿದ್ದರೆ ಖಲಾಸ್ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 435/2018 ಕಲಂ 323 324 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 159/2018 ಕಲಂ, 279, 337, 338 ಐಪಿಸಿ:- ದಿನಾಂಕ: 24/10/2018 ರಂದು 09.15 ಎಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಅಮರೇಶ ಈತನು 13 ವರ್ಷದವನಿದ್ದ ಕಾರಣ ಅವರ ದೊಡ್ಡಪ್ಪನಾದ ಮತ್ತು ಆರೋಪಿ&ಗಾಯಾಳು. ರಮೇಶ ಮಾತನಾಡುವ ಸ್ಥಿಯಲ್ಲಿ ಇಲ್ಲದರಿಂದ ಹಾಜರಿದ್ದ ರಮೇಶ ಈತನ ತಂದೆಯಾದ ಸೀತಾರಾಮ ತಂದೆ ಪೋಮು ರಾಠೊಡ ಇವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶ ಏನಂದರೆ, ದಿನಾಂಕ:24/10/2018 ರಂದು ಬೆಳಿಗ್ಗೆ 08.00 ಎಎಂ ಸುಮಾರಿಗೆ ನನ್ನ ಮಗ ರಮೇಶ ಈತನು ತನ್ನ ಚಿಕ್ಕಮ್ಮಳ ಮಗ (ತಮ್ಮನಾದ) ಅಮರೇಶನಿಗೆ ಶಾಲೆಗೆಬಿಡಲು ನಮ್ಮ ಬೀಗರ ಮೋಟಾರ ಸೈಕಲ ನಂ: ಕೆಎ-33-ವಿ-7822 ನೇದ್ದನ್ನು ತಗೆದುಕೊಂಡು ಹೋಗಿದ್ದನು. ಅಮರೇಶನಿಗೆ ಹಿಂದೆ ಕುಳಿತಿದ್ದು ನನ್ನ ಮಗ ಮೋಟಾರ ಸೈಕಲ್ ನಡೆಸುತ್ತಿದ್ದ. ಸ್ವಲ್ಪ ಸಮಯದ ನಂತರ ಅಂದರೆ 08.30 ಎಎಂ ಸುಮಾರಿಗೆ ಅಮರೇಶ ಈತನು ಪೋನ ಮಾಡಿ ಹೇಳಿದ್ದೇನಂದರೆ, ತಾವು ಶಹಾಪೂರಕ್ಕೆ ಹೋಗುವಾಗ ಗೋಗಿ ದಾಟಿದ ನಂತರ ಅಣ್ಣನಾದ ರಮೇಶ ಈತನು ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ರೋಡಿನ ಪಕ್ಕದಲ್ಲಿ ಪಲ್ಟಿಮಾಡಿ ಅಪಘಾತ ಮಾಡಿದ್ದಾನೆ ಅಂತಾ ತಿಳಿಸಿದ ಕೂಡಲೆ ನಾನು ನನ್ನ ಹೆಂಡತಿ ಶಾಣಿಬಾಯಿ ಮತ್ತು ನಮ್ಮ ಸಂಬಂದಿಕರಾದ ಗೇನುಸಿಂಗ್ ಖಾನುನಾಯ್ಕ ಚವ್ಹಾಣ ಸಾ: ಹೋಸ್ಕೇರಾ ಎಲ್ಲರು ಸ್ಥಳಕ್ಕೆ ಹೋಗುವಷ್ಟರಲ್ಲಿ ನಮ್ಮ ಮಗ ರಮೇಶ ಇನಿಗೆ ಶಹಾಪೂರ ಆಸ್ಪತ್ರೆಗೆ ತಗೆದುಕೊಂಡು ಹೊಗಿದ್ದು ಗೊತ್ತಾಗಿ ಶಹಾಪೂರ ಆಸ್ಪತ್ರೆಗೆ ಹೊಗಿ ನೋಡಲಾಗಿ ನಮ್ಮ ಮಗ ರಮೇಶ ಮಾತನಾಡುತ್ತಿರಲಿಲ್ಲ. ನನ್ನ ಹೆಂಡತಿಯ ತಂಗಿ ಮಗನಾದ ಅಮರೇಶ ಈತನಿಗೆ ವಿಚಾರಿಸಲಾಗಿ ಆತನು ತಿಳಿಸಿದ್ದೇನಂದರೆ, ರಮೇಶ ಈತನು ಗೋಗಿ ದಾಟಿದ ನಂತರ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗತೊಡಗಿದ ನಾನು ನಿದಾನ ಅಂತ ಹೇಳಿದರು ಕೇಳದೆ ಅತೀವೇಗವಾಗಿ ಹೋಗುತ್ತಿದ್ದ. ಗೋಗಿಯ ಆಂದ್ರ ಕ್ಯಾಂಪ ಮುಗಿಯುತ್ತಿದ್ದಂತೆಯೇ ಇರುವ ರೋಡ ಕರವಿನಲ್ಲಿ ರಮೇಶ ಈತನಿಗೆ ವಾಹನ ನಿಯಂತ್ರಣ ತಪ್ಪಿ ಮೋಟಾರ ಸೈಕಲನ್ನು ರೋಡಿನಿಂದ ಕೆಳಗೆ ಇಳಿಸಿ ಮುಳ್ಳು ಕಂಟಿ ಇರುವ ತಗ್ಗಿನಲ್ಲಿ ಪಲ್ಟಿಮಾಡಿದ. ಅದರಿಂದ ನನಗೆ ಕೈಗಳಿಗೆ ಮತ್ತು ಬೆನ್ನಿಗೆ ಮುಳ್ಳು ತರಚಿದ ಗಾಯಗಳಾಗಿದ್ದು, ರಮೇಶ ಈತನಿಗೆ ಎಡಗಣ್ಣಿಗೆ ಮುಳ್ಳು ಕಂಟಿ ಮತ್ತು ಗಿಡ ಬಡೆದು ರಕ್ತಗಾಯವಾಗಿದ್ದು ಕೈಗಳಿಗೆ ಕಂಟಿ ತರಚಿದ ಗಾಯಗಳಾಗಿವೆ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 159/2018 ಕಲಂ:279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.:- 256/2018 ಕಲಂ: 78(3) ಕೆಪಿ ಯಾಕ್ಟ:- ದಿನಾಂಕ 24/10/2018 ರಂದು 4.50 ಪಿ.ಎಂಕ್ಕೆ ಸದರಿ ಆರೋಪಿತನು ಮುದನೂರ ಕೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಜನರಿಂದ ಹಣ ಪಡದು ಮಟಕಾ ನಂಬರ ಬರೆದುಕೊಳುತ್ತಿದ್ದಾಗ ಫಿಯರ್ಾದಿದಾರರು, ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿತನನ್ನು ಸಿಕ್ಕ ವ್ಯಕ್ತಿಯನ್ನು ವಶಕ್ಕೆ ಪಡೆದು 3150/- ನಗದು ಹಣ, ಒಂದು ಪೆನ್ನು ಮತ್ತು ಒಂದು ಮಟಕಾ ಚೀಟಿಯನ್ನು ಜಪ್ತಿ ಪಡಿಸಿಕೊಂಡು ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದರಿಂದ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 256/2018 ಕಲಂ 78(3) ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 197/2018  ಕಲಂ: 279, 337, 304(ಎ) ಐಪಿಸಿ:-ದಿನಾಂಕ:23/10/2018 ರಂದು ಪಿಯರ್ಾದಿ ಮಗನಾದ ಮೃತ ಗುಂಡು ಈತನು ಮೋಟಾರ ಸೈಕಲ ನಂ. ಕೆಎ-33 ಡಬ್ಲು-7069 ನೇದ್ದನ್ನು ಹುಣಸಗಿ ಚಂದಾ ಸಾಹುಕಾರ ಪೆಟ್ರೋಲ ಪಂಪ್ ಹತ್ತಿರ ಕೆನಾಲ ರೋಡದಿಂದಾ ಹುಣಸಗಿ-ನಾರಾಯಣಪುರ ರೋಡನ್ನು ದಾಟುತ್ತಿದ್ದಾಗ, ಆರೋಪಿತನು ಹುಣಸಗಿ ಕಡೆಯಿಂದಾ ತನ್ನ ಮೋಟಾರ್ ಸೈಕಲ ನಂ. ಕೆಎ-33 ಡಬ್ಲು-7529 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮೃತನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅಪಘಾತದಲ್ಲಿ ಮೃತನಿಗೆ ತೆಲೆಗೆ ಭಾರಿ ಒಳಪೆಟ್ಟಾಗಿ ಎರಡು ಕಿವಿಯಿಂದಾ ಮತ್ತು ಮೂಗಿನಿಂದಾ ರಕ್ತ ಬಂದಿದ್ದು, ಎಡಗಾಲ ತೊಡೆಯ ಹತ್ತಿರ ಭಾರಿ ಒಳಪೆಟ್ಟಾಗಿ ಮುರಿದಂತೆ ಆಗಿ ಭೇವೋಷಾಗಿದ್ದು, ಅಪಘಾತದ ಮಾಡಿದವರಿಗೂ ಸಣ್ಣಪುಟ್ಟ ತರಚಿದಗಾಯವಾಗಿದ್ದು, ಮೃತ ಗುಂಡು ಈತನಿಗೆ ಉಪಚಾರಕ್ಕೆಂದು ವಿಜಯಪುರ ಸಂಜೀವಿನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚಾರ ಮಾಡಿಸುತ್ತಿದ್ದಾಗ  ದಿನಾಂಕ:23/10/2018 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ಉಪಚಾರ ಫಲಕಾರಿಯಾಗದೇ ಗುಂಡು ಈತನು ಮೃತಪಟ್ಟಿದ್ದು ಇರುತ್ತದೆ ಅಂತಾ ಇಂದು ತಡವಾಗಿ ಪಿಯರ್ಾದಿ ಠಾಣೆಗೆ ಬಂದು ಹೇಳಿಕೆ ಪಿಯರ್ಾದಿ ನೀಡಿದ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!