ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-10-2018

By blogger on ಶನಿವಾರ, ಅಕ್ಟೋಬರ್ 20, 2018

  
ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-10-2018 

ಕೆಂಭಾವಿ ಪೊಲೀಸ್ ಠಾಣೆ;- 255/2018 ಕಲಂ 279, 337, 338, 304 (ಎ) ಐಪಿಸಿ ಮತ್ತು 187 ಐಎಮ್ವಿ ಆಕ್ಟ;- ದಿ: 19/10/18 ರಂದು 20.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗಪ್ಪ ತಂದೆ ಭಿಮಪ್ಪ ಹುರಸಗುಂಡಗಿ ಸಾ|| ಆಲ್ಹಾಳ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ಸಾರಾಂಶವೇನಂದರೆ, ಇಂದು ದಿನಾಂಕ: 19/10/2018 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ತಮ್ಮ ಸಿದ್ದಪ್ಪ ತಂದೆ ಭೀಮಪ್ಪ ಹುರಸಗುಂಡಗಿ ಹಾಗೂ ನಮ್ಮ ಸಂಬಂದಿ ಪರಸಪ್ಪ ತಂದೆ ಬಸಪ್ಪ ಬೊಮನಳ್ಳಿ ಈ ಎರಡು ಜನರು ಕೂಡಿ ನಮ್ಮೂರ ಹಣಮಂತ್ರಾಯ ತಂದೆ ಸಂಜೀವಪ್ಪ ಮೋಪಗಾರ ಇವರ ಮೋಟರ ಸೈಕಲ್ ನಂ ಕೆಎ 33 ಡಬ್ಲೂ 2620 ನೇದ್ದರಲ್ಲಿ ಹಬ್ಬದ ಸಲುವಾಗಿ ಹೂವು ತರಲೆಂದು ಮೂರು ಜನರು ಕೂಡಿ ಕೆಂಭಾವಿಗೆ ಹೋಗುತ್ತೇವೆ ಅಂತ ಹೇಳಿ ಹೋದರು. ಸದರಿ ಮೋಟರ ಸೈಕಲ ಹಣಮಂತ್ರಾಯ ಮೋಪಗಾರ ಈತನದು ಇದ್ದು ಸದರಿಯವನೇ ನಡೆಸಿಕೊಂಡು ಹೋದನು. ಹೀಗಿರುತ್ತಾ ಇಂದು ದಿ: 19/10/2018 ರಂದು 7.30 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಹತ್ತಿರ ಇದ್ದಾಗ ನಮ್ಮೂರ ರಾಮನಗೌಡ ಗೂಗಲ್ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನನ್ನ ತಮ್ಮ ಸಿದ್ದಪ್ಪ, ಸಂಬಂದಿ ಪರಸಪ್ಪ ಹಾಗೂ ಹಣಮಂತ್ರಾಯ ಮೋಪಗಾರ ಈ ಮೂರು ಜನರು ಕುಳಿತು ಕೆಂಭಾವಿಗೆ ಹೋಗುತ್ತಿರುವಾಗ ತಮ್ಮ ಹೊಲದ ಪಕ್ಕದ ರೋಡಿನಲ್ಲಿ ಕೆಂಭಾವಿ ಕಡೆಯಿಂದ ಒಂದು ಕ್ರೂಷರ್ ಜೀಪ್ ನೇದ್ದರ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಲವಾಗಿ ಡಿಕ್ಕಿಪಡೆಸಿದ್ದರಿಂದ ಮೋಟರ ಸೈಕಲ್ ನಡೆಸುವ ಹಣಮಂತ್ರಾಯ ಮೋಪಗಾರ ಹಾಗೂ ತಮ್ಮ ಸಿದ್ದಪ್ಪ ಹುರಸಗುಂಡಗಿ ಈ ಎರಡು ಜನರು ತಲೆಗೆ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಮತ್ತು ಪರಸಪ್ಪ ಬೊಮನಳ್ಳಿ ಈತನಿಗೂ ಸಹ ಭಾರಿ ಗಾಯಗಳಾಗಿರುತ್ತವೆ ಅಂತ ತಿಳಿಸಿದಾಗ ನಾನು ಹಾಗೂ ಸಂಜೀವಪ್ಪ ಮೋಪಗಾರ ಇಬ್ಬರು ಕೂಡಿ ರಾಮನಗೌಡ ಇವರ ಹೊಲದ ಪಕ್ಕದ ರೋಡಿನಲ್ಲಿ ಹೋಗಿ ನೋಡಲಾಗಿ ಅಲ್ಲಿ ನನ್ನ ತಮ್ಮ ಹಾಗೂ ಹಣಮಂತ್ರಾಯ ಮೋಪಗಾರ ಈ ಎರಡು ಜನರು ತಲೆಗೆ ಹಾಗೂ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನೊಬ್ಬ ಸಂಬಂದಿ ಪರಸಪ್ಪ ಬೊಮನಳ್ಳಿ ಈತನಿಗೂ ಸಹ ಬಲಗೈ ಮತ್ತು ಬಲಗಾಲ ಮೊಳಕಾಲಿನ ಹತ್ತಿರ ಭಾರಿ ರಕ್ತಗಾಯಗಳಾಗಿ ಕಾಲು ಮುರಿದಂತಾಗಿದ್ದು ಅಷ್ಟರಲ್ಲಿ 108 ವಾಹನ ಬಂದು ಪರಸಪ್ಪ ಬೊಮನಳ್ಳಿ ಈತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪುರಕ್ಕೆ ಕರೆದುಕೊಂಡು ಹೋಗಿದ್ದು ಇರುತ್ತದೆ. ನಂತರ ನನ್ನ ತಮ್ಮ ಹಾಗೂ ಹಣಮಂತ್ರಾಯ ಮೋಪಗಾರ ಇವರಿಗೆ ಅಪಘಾತಪಡಿಸಿದ ಕ್ರೂಷರ್ ಜೀಪ್ ನಂಬರ ನೋಡಲಾಗಿ ಕೆಎ 27 ಎ 4326 ಅಂತ ಇದ್ದು ಸದರ ಚಾಲಕನು ಅಪಘಾತ ಪಡೆಸಿದ ತಕ್ಷಣ ರಭಸದಲ್ಲಿ ತನ್ನ ಜೀಪನ್ನು ರೋಡಿನ ತೆಗ್ಗಿನಲ್ಲಿ ಇಳಿಸಿ ಜೀಪನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 255/2018 ಕಲಂ 279, 337, 338, 304 (ಎ) ಐಪಿಸಿ ಮತ್ತು 187 ಐಎಮ್ವಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗುರಮಿಠಕಲ ಪೊಲೀಸ್ ಠಾಣೆ. ಗುನ್ನೆ ನಂ:- 290/18 ಕಲಂ 279,337,338 ಐಪಿಸಿ;- ದಿನಾಂಕ 19.10.2018 ರಂದು ಬೆಳಿಗ್ಗೆ ತನ್ನ ಸಂಬಂದಿಕರ ಮಗುವಿನ ಜವಳ ಕಾರ್ಯಕ್ರಮದ ಪ್ರಯುಕ್ತ ಫಿರ್ಯಾದಿ ಮತ್ತು ಗಾಯಾಳುದಾರರು ಗುಂಡೆಪಲ್ಲಿ, ಮೈಬೂಬನಗರ ಜಿಲ್ಲೆ (ಟಿ.ಎಸ್.) ಕ್ಕೆ ಹೋಗಿದ್ದು ಅಲ್ಲಿ ಕಾರ್ಯಕ್ರಮ ಮುಗಿದ ನಂತರ ಆರೋಪಿ ಹಣಮಂತ ಈತನು ಮೋಟಾರು ಸೈಕಲ್ ನಂ: ಕೆಎ-33-ಡಬ್ಲೂ-4165 ನೇದ್ದರ ಮೇಲೆ ಮರಳಿ ಅಲ್ಲಿಂದ ಗೋಪಳಾಪೂರ ಗ್ರಾಮಕ್ಕೆ ಬರುತ್ತಿದ್ದಾಗ ಸಾಬರಡ್ಡಿ ಈತನು ಹಿಂದೆ ಕುಳಿತ್ತಿದ್ದು ಹಣಮಂತ ಮೋಟಾರು ಸೈಕಲ್ನ್ನು ಚಲಾಸಿಸುತ್ತಿದ್ದನು. ಗುರುಮಠಕಲ್ ಪಟ್ಟಣದ ಹೊರವಲಯದಲ್ಲಿರುವ ಯಶೋಧಾ ಪೆಟ್ರೋಲ್ ಪಂಪ್ನಿಂದ ಸ್ವಲ್ಪ ದೂರದಲ್ಲಿ ರಸ್ತೆ ತಿರುವಿನಲ್ಲಿ ಮೋಟಾರು ಸೈಕಲ್ನ್ನು ಒಮ್ಮಿಂದೊಮ್ಮೆಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಸಾಬರಡ್ಡಿ ಮತ್ತು ಹಣಮಂತ ಇಬ್ಬರಿಗೂ ಭಾರಿ ರಕ್ತಗಾಯವಾಗಿದ್ದರ ಬಗ್ಗೆ ಅವರ ಸಂಬಂಧಿ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳೀಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 290/2018 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ;- 343/2018 ಕಲಂ: 279,429 ಐಪಿಸಿ;- ದಿನಾಂಕ:19-10-2018 ರಂದು 10 ಎ.ಎಂ.ಕ್ಕೆ ಶ್ರೀ ಮದನಪ್ಪತಂದೆದುರಗಪ್ಪ ಹಳ್ಳಿ ಸಾ: ಸಾಲವಡಗಿ(ಬಿ) ಇವರುಠಾಣೆಗೆ ಬಂದುಒಂದು ಲಿಖಿತಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನಗೆ ಮರೆಮ್ಮ ಮತ್ತು ನಾಗಮ್ಮಅಂತಾಇಬ್ಬರು ಹಂಡತಿಯವರುಇದ್ದು ಮರೆಮ್ಮಳಿಗೆ ಎರಡು ಹೆಣ್ಣುಎರಡುಗಂಡು ಮಕ್ಕಳಿರುತ್ತಾರೆ. ಹಿರಿಯ ಮಗಳಾದ ದುರಗಮ್ಮಳಿಗೆ ಗೆದ್ದಲಮರಿಯರಾಮಪ್ಪ ಹಂದ್ರಾಳ ಅನ್ನುವರಿಗೆಕೊಟ್ಟು ಮದುವೆ ಮಾಡಿದ್ದುಎರಡನೆ ಮಗನಾದದುರಗಪ್ಪನಿಗೆ ಲಕ್ಷ್ಮಿಬಾಯಿರವರೊಂದಿಗೆ ಮದುವೆ ಮಾಡಿದ್ದು ಸಾಕಮ್ಮ ಮತ್ತು ಮದನಪ್ಪಅಂತಾಇಬ್ಬರು ಮಕ್ಕಳಿರುತ್ತಾರೆ. ನಿನ್ನೆ ದಿನಾಂಕ:18-10-18 ರಂದು ಮುಂಜಾನೆ ನನ್ನ ಮಗನಾದದುರಗಪ್ಪನುಗೆದ್ದಲಮರಿಗೆ ಅಕ್ಕನ ಬಳಿ ಹೋಗಿ ಬರುತ್ತೆನೆಅಂತಾ ಹೇಳಿ ಹೊಗಿದ್ದರಾತ್ರಿ 9 ಗಂಟೆ ಸುಮಾರಿಗೆಗೆದ್ದಲಮರಿಯಿಂದ ನನ್ನ ಮಗಳಾದ ದುರಗಮ್ಮ ನನಗೆ ಪೋನ ಮಾಡಿತಮ್ಮದುರಗಪ್ಪ ಆಲಬಾವಿಯಲ್ಲಿ ಭಜನಕ್ಕೆ ಹೋಗುತ್ತೆನೆಂತ ನನ್ನಗಂಡನ ಮೊಟರ ಸೈಕಲ್ತಗೆದುಕೊಂಡು ಹೋಗಿರುತ್ತಾನೆಅಂತಾ ಹೇಳಿದಳು ಇಂದು ದಿನಾಂಕ:19-10-2018 ರಂದು ನಸುಕಿನಲ್ಲಿ 3 ಎಎಮ್ ಸುಮಾರಿಗೆ ನನ್ನ ಮಗನ ಪೋನಿನಿಂದ ನನಗೆ ಹುಣಸಗಿ ಪೊಲೀಸರು ಪೋನ ಮಾಡಿದೇವತ್ಕಲ್ಲ್ ಸಮೀಪ ಮನಗೂಳಿ -ದೇವಪೂರ ಮುಖ್ಯರೋಡ ಮೇಲೆ ಕುದುರೆಗೆಡಿಕ್ಕಿ ಹೊಡೆದುತನ್ನಷ್ಟಕ್ಕೆತಾನೆರೋಡಿನ ಮೇಲೆ ಬಿದ್ದುಅಪಘಾತ ಮಾಡಿಕೊಂಡಿದ್ದುಉಪಚಾರಕ್ಕೆಂದು ಹುಣಸಗಿದವಾಖಾನೆಗೆತರುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ. ಹೆಣವನ್ನು ಹುಣಸಗಿ ಸರಕಾರಿದವಾಖಾನೆಯಲ್ಲಿಇಟ್ಟಿರುತ್ತೆವೆಂದು ತಿಳಿಸಿದರು. ಈ ಸುದ್ದಿ ತಿಳಿದ ನಾನು ಮತ್ತು ಹೆಂಡತಿ ಮರೆಮ್ಮಊರಿನ ಕೆಲವು ಜನರುಕೂಡಿ ಹುಣಸಗಿ ಸರಕಾರಿದವಾಖಾನೆಗೆ ಬಂದು ನೋಡಿರುತ್ತೆವೆ. ನಿನ್ನೆ ದಿನಾಂಕ:18-10-2018 ರಂದುರಾತ್ರಿ ವೇಳೆ ನನ್ನ ಮಗ ಮೋಟರ ಸೈಕಲ್ ನಂ ಕೆಎ-33 ಆರ್ 8729 ಗಾಡಿ ಮೇಲೆ ಗೆದ್ದಲಮರಿಯಿಂದ ಆಲಬಾವಿಗೆ ಹೊರಟಾಗ ಮಾರ್ಗ ಮದ್ಯೆ 12:30 ಗಂಟೆ ಸುಮಾರಿಗೆದೇವತ್ಕಲ್ಲ ಸಮೀಪ ತನ್ನ ಮೊಟಾರ ಸೈಕಲ್ನ್ನುಅತೀ ವೇಗ ಮತ್ತು ನಿಷ್ಕಾಳಿತನದಿಂದ ನಡೆಯಿಸಿ ರಸ್ತೆ ಮೇಲೆ ಹೊರಟಕುದುರೆಗೆಡಿಕ್ಕಿ ಹೊಡೆದುತನ್ನಷ್ಟಕ್ಕೆತಾನೆಅಪಘಾತ ಮಾಡಿಕೊಂಡುತಲೆಗೆ ಭರಿರಕ್ತಗಾಯವಾಗಿ ಮೃತಪಟ್ಟಿದ್ದುಅಲ್ಲದೆ ಮೃತನುಡಿಕ್ಕಿ ಹೊಡೆದಕುದುರೆಕೂಡ ಸ್ಥಳದಲ್ಲೆ ಮೃತಪಟ್ಟಿದ್ದುಇರುತ್ತದೆ ಈ ಬಗ್ಗೆ ಸೂಕ್ತ ಕಾನೂನು ಕ್ರಮಜರುಗಿಸಬೇಕೆಂದುಅಂತ ವಿನಂತಿ. ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

 ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ;- 344/2018 ಕಲಂ: 143,147,353,504,506 ಸಂಗಡ 149 ಐಪಿಸಿ;-ದಿನಾಂಕಃ 19/10/2018 ರಂದು 11-30 ಎ.ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಶಂಭುರಾವ್, ಹೆಚ್.ಸಿ 66, ಸುರಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಇಂದು ಬೆಳಿಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ಠಾಣಾ ದಿನಚರಿ ಕರ್ತವ್ಯದ ಮೇಲೆ ಇದ್ದಾಗ 9-00 ಎ.ಎಮ್ ಸುಮಾರಿಗೆ ರಾಜಾ ವೇಣುಗೋಪಾಲನಾಯಕ ತಂದೆ ರಾಜಾ ವೆಂಕಟಪ್ಪ ನಾಯಕ, ರಾಜಾ ಸಂತೋಷ ನಾಯಕ ತಂದೆ ರಾಜಾ ವೆಂಕಟಪ್ಪ ನಾಯಕ, ರಾಜಾ ರೂಪಕುಮಾರ ನಾಯಕ ತಂದೆ ರಾಜಾ ರಂಗಪ್ಪ ನಾಯಕ, ರಾಜಾ ಶುಶಾಂತ ನಾಯಕ ತಂದೆ ರಾಜಾ ಶ್ರೀರಾಮ ನಾಯಕ, ರಾಜಾ ಕುಮಾರನಾಯಕ ತಂದೆ ರಾಜಾ ಮೌನೇಶ ನಾಯಕ, ಲಕ್ಷ್ಮಣ ತಂದೆ ಗೋಪಾಲ ದೇವದುರ್ಗ, ಶರಣು ಕಲಬುಗರ್ಿ ಮತ್ತು ಸಂಗಡ 8-10 ಜನರು ಪೊಲೀಸ್ ಠಾಣೆಗೆ ಬಂದು ಲೇ ಸೂಳಿ ಮಕ್ಕಳೇ, ನಿಮ್ಮ ಸಿ.ಪಿ.ಐ ಮತ್ತು ಡಿ.ಎಸ್.ಪಿ ಸೂಳೆ ಮಕ್ಕಳು ಎಲ್ಲಿದ್ದಾರೆ, ಕರೆಸಿರಿ ಅಂತಾ ಅಂದರು. ನಂತರ ಅಂದಾಜು 15 ನಿಮಿಷ ಬಿಟ್ಟು ಮಾಜಿ ಶಾಸಕರಾದ ರಾಜವೆಂಕಟಪ್ಪ ನಾಯಕ ಇವರು ಪೊಲೀಸ್ ಠಾಣೆಗೆ ಬಂದು, ಠಾಣೆಯಲ್ಲಿ ನನಗೆ ಮತ್ತು ಬಸವರಾಜ ಸಿ.ಪಿ.ಸಿ-207, ಶರಣಗೌಡ ಸಿ.ಪಿ.ಸಿ-218 ಮೂವರನ್ನು ಉದ್ದೇಶಿಸಿ ಲೇ ಸೂಳಿ ಮಕ್ಕಳೇ ಏನು ನೌಕರಿ ಮಾಡುತ್ತೀರಿ, ನಿಮ್ಮ ಡಿ.ಎಸ್.ಪಿ, ಸಿ.ಪಿ.ಐ ಭೋಸಡಿ ಮಕ್ಕಳು ಬಂದಿಲ್ಲೇನು, ಅವರು ಇನ್ನು ಯಾಕ ಕಛೇರಿಗೆ ಬಂದಿಲ್ಲ, ನಿವೇನು ಸೆಂಟಾ ಕೆಲಸಾ ಮಾಡುತ್ತಿರಿ ಸೂಳಿ ಮಕ್ಕಳ್ಯಾ ನಿಮ್ಮ ಪೊಲೀಸ್ ಸ್ಟೇಶನ್ಗೆ ಬೆಂಕಿ ಹಚ್ಚಿ ಬಿಡತಿನಿ ಅಂತಾ ಅವಾಚ್ಯವಾಗಿ ಬೈದು ನಮ್ಮ ಸಕರ್ಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಇರುತ್ತದೆ. ನಂತರ ಅವರೆಲ್ಲರೂ ತಾವು ತೆಗೆದುಕೊಂಡು ಬಂದಂತಹ ಎರಡು ವಾಹನಗಳಲ್ಲಿ ಹೊರಟು ಹೋದರು. ನಂತರ ನಾನು ಸದರಿ ವಿಷಯವನ್ನು ಪಿ.ಐ ಸಾಹೇಬರಿಗೆ ತಿಳಿಸಿ ಬಳಿಕ ಡಿ.ಎಸ್.ಪಿ ಸಾಹೇಬರಿಗೆ ಫೋನ್ ಮಾಡಿ ತಿಳಿಸಿದೇನು. ನಂತರ ನನಗೆ ತಿಳಿದು ಬಂದಿದ್ದೆನೆಂದರೆ, ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರು ಸುರಪೂರ ವಿಧಾನ ಸಭೆ ಮತಕ್ಷೇತ್ರ ರವರು ಮೊಬೈಲನಲ್ಲಿ ನಮ್ಮ ಡಿ.ಎಸ್.ಪಿ ಸಾಹೇಬರಿಗೆ ಅವಾಚ್ಯವಾಗಿ ಬೈದಿರುತ್ತಾರೆ, ನಮ್ಮ ಪಿ.ಐ ಸಾಹೇಬರು ಭೇಟಿ ಆದಾಗ ಅವರಿಗೂ ಕೂಡ ಅವಾಚ್ಯವಾಗಿ ನಿಂದಿಸಿರುವ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಕಾರಣ ಒಬ್ಬ ಜನ ಪ್ರತಿನಿಧಿಯಾದ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರು ಸುರಪೂರ ವಿಧಾನ ಸಭೆ ಮತಕ್ಷೇತ್ರ ರವರು ಹಾಗು ಸಂಗಡಿಗರು ನನಗೆ ಮತ್ತು ನಮ್ಮ ಇಲಾಖೆ ಮೇಲಾಧಿಕಾರಿಗಳಿಗೆ ಹಾಗು ಸಿಬ್ಬಂದಿಗಳಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಲ್ಲದೆ ನಮ್ಮ ಕರ್ತವ್ಯಕ್ಕೆ ಅಡೆತಡೆ ಮಾಡಿ ಜೀವದ ಬೆದರಿಕೆ ಹಾಕಿರುವದರಿಂದ ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ವಗೈರೆ ಸಲ್ಲಿಸಿದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 344/2018 ಕಲಂಃ 143, 147, 353, 341, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 431 ಕಲಂ 78[3] ಕೆ.ಪಿ ಆಕ್ಟ;- ದಿನಾಂಕ 19/10/2018 ರಂದು ಮದ್ಯಾಹ್ನ 14-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 19/10/2018 ರಂದು ಮದ್ಯಾಹ್ನ 12-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ ಹತ್ತಿರ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಗಾಂಧಿ ಚೌಕ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಇಬ್ಬರೂ ವ್ಯಕ್ತಿಗಳ  ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಅವರಿಂದ  ಅಂಗಶೋಧನೆ ಮಾಡಿದಾಗ ನಗದು ಹಣ 1010=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 30/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 17-00 ಗಂಟೆಗೆ  ಠಾಣೆ ಗುನ್ನೆ ನಂಬರ 431/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.:- 158/2018 ಕಲಂ, 323, 324, 504, 506 ಸಂ: 34 ಐಪಿಸಿ;- ದಿನಾಂಕ: 19/10/2018 ರಂದು 07.30 ಪಿಎಎಂ ಕ್ಕೆ. ಶ್ರೀ. ರವಿ ತಂದೆದೇಸುನಾಯ್ಕರಾಠೋಡ ಸಾ: ಹೋಸ್ಕೇರಾತಾಂಡಾತಾ: ಶಹಾಪೂರಇವರು. ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆ ಸಾರಂಶಏನಂದರೆ, ದಿನಾಂಕ:17/10/2018 ರಂದು ನಮ್ಮತಂದೆ ಹೊಲಕ್ಕೆ ಹೊದಾಗ ಮದ್ಯಾಹ್ನ 03.00 ಪಿಎಂ ಸುಮಾರಿಗೆ ನಮ್ಮ ಹೊಲದಲ್ಲಿ ಶಾಂತುನಾಯ್ಕತಂದೆ ಸೇವುನಾಯ್ಕರಾಠೋಡ ಸಾ: ಗಂಗನಾಳ ತಾಂಡಾ ಇವರುಗಳ ಕುರಿ ನಮ್ಮ ಹೊಲದಲ್ಲಿ ಬಂದಿದ್ದರಿಂದ ನಮ್ಮತಂದೆ ಕುರಿಗಳಿಗೆ ಓಡಿಸಿದ್ದು, ಆಗ ನಮ್ಮತಂದೆ ಕುರಿಗಳನ್ನು ನಮ್ಮ ಹೊಲದಲ್ಲಿ ಬಿಡಬೇಡರಿಅಂತಾ ಹೇಳಿ ಮನೆಗೆ ಬಂದಿದ್ದರು. ನಂತರ ಸಾಯಂಕಾಲ 04.30 ಪಿಎಂ ಸುಮಾರಿಗೆ 1) ಶಾಂತುನಾಯ್ಕ @ ಶಾಂತುಕುಮಾರತಂದೆ ಸೇವುನಾಯ್ಕರಾಠೋಡ 2) ವೆಂಕಟೇಶತಂದೆ ಸೇವುನಾಯ್ಕರಾಠೋಡ 3) ಭೀಮನಾಯ್ಕತಂದೆ ಸೇವುನಾಯ್ಕರಾಠೋಡ 4) ಗೋವಿಂದತಂದೆ ಸೇವುನಾಯ್ಕರಾಠೋಡಎಲ್ಲರೂ ಸಾ: ಗಂಗನಾಳ ತಾಂಡಾಇವರುಕೂಡಿ ನಮ್ಮ ಮನೆಯ ಮುಂದೆ ಬಂದು ನಮ್ಮತಂದೆಗೆ ಎಲೇ ದೇಸ್ಯಾ ಸೂಳಿ ಮಗನೆ ನಮ್ಮ ಕುರಿಗಳು ಹೊಲದಲ್ಲಿ ಬಂದರೆ ನಮಗೆ ಬೈಯುತ್ತಿಯಾ ಬೋಸಡಿ ಮಗನೆ ನಿನ್ನತಿಂಡಿಇದ್ದರ ಬಾರಲೆಇವತ್ತು ನಿಮ್ಮ ಹೊಲದಾಗ ನಮ್ಮಕುರಿ ನಿಲ್ಲಿಸುತ್ತೇವೆಅಂತಾಅವಾಚ್ಯವಾಗಿ ಬೈಯತೊಡಗಿದರು. ಆಗ ನಮ್ಮತಂದೆ ಹೊರಗೆ ಮನೆಯ ಮುಂದೆ ಬಂದುಯಾಕೆ ಬೈಯುತ್ತಿರಿ. ನಿಮ್ಮ ಹೊಲದಲ್ಲಿಕುರಿ ಬಂದರ ನೀವು ಸುಮ್ಮನೇಇರುತ್ತೀರಿ ಏನು? ಅಂತಾ ಕೇಳಿದ್ದಕ್ಕೆ ಶಾಂತುನಾಯ್ಕ @ ಶಾಂತುಕುಮಾರಈತನು ಸಿಟ್ಟಿಗೇರಿ ಅಲ್ಲೆಇದ್ದಒಂದುಕಲ್ಲನ್ನುತಗೆದುಕೊಂಡು ನಮ್ಮತಂದೆಯ ಬೆನ್ನಿಗೆ ಹೊಡೆದುಗುಪ್ತಗಾಯ ಮಾಡಿದ ನಂತರಅದೆಕಲ್ಲಿನಿಂದ ನಮ್ಮತಂದೆಯತಲೆಗೆ ಹೊಡೆದು ಒಳಪೆಟ್ಟು ಮಾಡಿದ, ಆಗ ಅಲ್ಲೆಇದ್ದ ನಾನು ಮತ್ತು ನಮ್ಮತಮ್ಮ ಕಿಶನ ತಂದೆದೇಸುನಾಯ್ಕ, ಇಬ್ಬರು ಬಿಡಿಸಿಕೊಳ್ಳಲು ಹೋದಾಗ ಶಾಂತುನಾಯ್ಕರಾಠೋಡ, ವೆಂಕಟೇಶರಾಠೋಡ ಭೀಮನಾಯ್ಕರಾಠೋಡ ಮತ್ತುಗೋವಿಂದರಾಠೋಡ ಇವರುಗಳು ಈ ಸೂಳೆ ಮಕ್ಕಳದು ಬಾಳ ಆಗಿದೆಅಂತಾಅವಾಚ್ಯವಾಗಿ ಬೈಯುತ್ತಾ ನಮ್ಮತಂದೆಗೆ ಮತ್ತು ನಮಗೆ ಕೈಯಿಂದ ಹೊಡೆಯತೊಡಗಿದರು. ಅಷ್ಟರಲ್ಲೆಅಲ್ಲೆ ಹೊರಟಿದ್ದ 1) ದೇವರಾಜತಂದೆಗೀರುರಾಠೋಡ 2) ರಾಮುತಂದೆಛತ್ರುನಾಯ್ಕರಾಠೋಡ ಸಾ: ಇಬ್ಬರು ಹೋಸ್ಕೇರಾ ಬಾಂಗ್ಲಾತಾಂಡಾ ಇವರುಗಳು ಬಿಡಿಸಿಕೊಂಡರು ಇಲ್ಲದಿದ್ದರೆಇನ್ನು ಹೊಡೆಯುತ್ತಿದ್ದರು. ಸದರಿಯವರು ಹೊಡೆದು ಹೋಗುವಾಗ ಮಗನೆ ಇನ್ನೊಮ್ಮ ನಮ್ಮಕುರಿತಂಟೆಗೆ ಬಂದರೆ ನಿನಗೆ ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆಅಂತಾ ನಮ್ಮತಂದೆಗೆಜೀವದ ಬೇದರಿಕೆ ಹಾಕಿರುತ್ತಾರೆ. ನನಗೆ ಮತ್ತು ನಮ್ಮತಮ್ಮ ಕಿಶನ ಇಬ್ಬರಿಗೂ ಗಾಯಗಳಾಗಿರುವದಿಲ್ಲ. ನಮ್ಮತಂದೆಗೆ ಬೆನ್ನಿಗೆ, ತಲೆಗೆ ಗುಪ್ತ ಪೆಟ್ಟಾಗಿದ್ದು ನಾವು ಮೊನ್ನೆ ದಿನಾಂಕ:17/10/2018 ರಂದು ನಮ್ಮತಂದೆಗೆ ಶಹಾಪೂರಆಸ್ಪತ್ರಗೆ ತೋರಿಸಿ ಅಲ್ಲಿಂದ ಕಲಬುರಗಿಗೆಕರೆದುಕೊಂಡು ಹೋಗಿ ಉಪಚಾರಕ್ಕೆ ಸೇರಿಕೆ ಮಾಡಿತಡಮಾಡಿಇಂದು ದಿನಾಂಕ:19/10/2018 ರಂದುರಾತ್ರಿ 07.30 ಪಿಎಂ ಕ್ಕೆ ಠಾಣೆಗೆ ಬಂದು ಪಿಯರ್ಾದಿ ನೀಡಿರುತ್ತೇನೆ. ಸದರಿ ಮೇಲಿನ ನಾಲ್ಕು ಜನರು ನಮ್ಮತಂದೆಗೆಅವಾಚ್ಯವಾಗಿ ಬೈಯ್ದುಕಲ್ಲಿನಿಂದ ಹೊಡೆದುಗುಪ್ತಗಾಯ ಮಾಡಿ, ಕೈಯಿಂದ ಹೊಡೆದುಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾ ಪಿಯರ್ಾದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 158/2018 ಕಲಂ: 323, 324, 504, 506, ಸಂ: 34 ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!