Yadgir District Reported Crimes updated on 06-09-2018

By blogger on ಗುರುವಾರ, ಸೆಪ್ಟೆಂಬರ್ 6, 2018


Yadgir District Reported Crimes
ಯಾದಗಿರಿ ಪೊಲೀಸ್ ಠಾಣೆ ಗುನ್ನೆ ನಂ ;- ಗುನ್ನೆ ನಂ: 151/2018 ಕಲಂ 78(3) ಕೆ.ಪಿ ಎಕ್ಟ್ ;- ದಿನಾಂಕ.04/09/2018 ರಂದು 8-15 ಪಿಎಮ್ ಕ್ಕೆ ಮಾನ್ಯ ಮೌನೇಶ್ವರ ಮಾಲೀ ಪಾಟೀಲ್ ಸಿಪಿಐ ಸಾಹೇಬರು ಯಾದಗಿರಿ ವೃತ್ತ ರವರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಗೂ ಜ್ನಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ.04/09/2018 ರಂದು 8-00 ಪಿಎಮ್ ಕ್ಕೆ ಮಾನ್ಯ ಸಿಪಿಐ ಸಾಹೇಬರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಗೂ ಜ್ನಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:04/09/2018 ರಂದು 5-30 ಪಿಎಮ್ ಸುಮಾರಿಗೆ ಯಾದಗಿರಿಯ ಮಾತಾ ಮಾಣಿಕೇಶ್ವರಿ ನಗರದ ಶುಭಂ ಪೆಟ್ರೋಲ ಬಂಕ ಹತ್ತಿರ ಯಾರೋ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ 6-30 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಚಾರಿಲಾಗಿ ಶಿವಶರಣಪ್ಪ ತಂದೆ ಶಾಂತಪ್ಪ ಮಡಿವಾಳ ವ;42 ಜಾ; ಮಡಿವಾಳ ಉ; ಇಸ್ತ್ರೀ ಕೆಲಸ ಸಾಃ ಶಾಂತಿನಗರ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಪೊಲೀಸರು ಚೆಕ್ ಮಾಡಲಾಗಿ ಅವನ ಹತ್ತಿರ 2250-00 ರೂ ನಗದು ಹಣ ಮತ್ತು ಒಂದು ಬಾಲ ಪೆನ್ ಅಂ.ಕಿ.00-00 ಹಾಗೂ ಒಂದು ಮಟ್ಕ ಚೀಟಿ ಅ.ಕಿ.00-00 ಸಿಕ್ಕಿದ್ದು, ಇವುಗಳನ್ನು ಮುಂದಿನ ಪುರಾವೆ ಕುರಿತು ಒಂದು ಕಾಗದದ ಪಾಕೆಟದಲ್ಲಿ ಹಾಕಿ ಕಟ್ಟಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ  ನಮ್ಮ ತಾಬೆಗೆ ತೆಗೆದುಕೊಂಡು. ಜಪ್ತಿ ಪಂಚನಾಮೆಯನ್ನು 6-30 ಪಿಎಂದಿಂದ 7-30 ಪಿಎಂದವರೆಗೆ ಮುಗಿಸಿ ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 8-15 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದು ಇರುತ್ತದೆ. ಇಂದು ದಿನಾಂಕ.05/09/2018 ರಂದು 11-30 ಎಎಮ್ ಕ್ಕೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡಿದ್ದು ಜಪ್ತಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.151/2018 ಕಲಂ.78(3) ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
   ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ :- ಗುನ್ನೆ ನಂ 187/2018 ಕಲಂ 323,324,504,506, 498(ಎ)ಸಂ34 ಐಪಿಸಿ:- ದಿನಾಂಕ 05-08-2018 ರಂದು 5-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ತಾಯಮ್ಮಾ ಗಂಡ ಶಿವಪುತ್ರ ಮೈಲಾಪೂರದೋರ ವಯಾ:26 ಉ:ಕೂಲಿ ಜಾ:ಮಾದರ (ಎಸ್.ಸಿ) ಸಾ: ಎಸ್.ಹೊಸಳ್ಳಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನನ್ನ ತವರು ಮನೆ ರಾಮಸಮುದ್ರವಿದ್ದು, ನನ್ನ ತಂದೆ ಮಹಾದೇವಪ್ಪಾ ತಾಯಿ ಮಾಳಮ್ಮಾ ಇವರು ನನಗೆ ಗುರುಹಿರಿಯರ ಸಮ್ಮುಖದಲ್ಲಿ ಈಗ 5-6 ವರ್ಷಗಳ ಹಿಂದೆ ರಾಮಸಮುದ್ರ ಗ್ರಾಮದಲ್ಲಿಯೇ ಎಸ್.ಹೊಸಳ್ಳಿ ಗ್ರಾಮದ ನಮ್ಮ ಸೋದರತ್ತೆ ಮಗನಾದ ಶಿವಪುತ್ರ ತಂದೆ ಭೀಮರಾಯ ಮೈಲಾಪೂರದೋರ ಇತನ ಸಂಗಡ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ.  ಸಧ್ಯ ನಮಗೆ ಮಾಲಿಂಗ ಅಂತಾ 4 ವರ್ಷದ ಗಂಡು ಮಗ ಮತ್ತು ಆರತಿ ಅಂತಾ 2 ವರ್ಷದ ಹೆಣ್ಣುಮಗಳು ಇರುತ್ತಾರೆ. ನನ್ನ ಗಂಡನ ಮನೆಯಲ್ಲಿ ನಾನು ನನ್ನ ಗಂಡ, ಮಾವ ಭೀಮರಾಯ ತಂದೆ ಸಾಬಣ್ಣಾ ಅತ್ತೆ ಮಲ್ಲಮ್ಮಾ, ಮೈದುನ ಅಂಜಪ್ಪಾ ತಂದೆ ಭೀಮರಾಯ ಇವರೆಲ್ಲರೂ ಇರುತ್ತಾರೆ. ನನ್ನ ಮದುವೆಯಾದ ಸುಮಾರು 4 ವರ್ಷದವರೆಗೆ ನನ್ನ ಜೋತೆ ಮನೆಯಲ್ಲಿ ಎಲ್ಲರೂ ಅನೋನ್ಯವಾಗಿದ್ದರು, ಈಗ ಸುಮಾರು 3-4 ತಿಂಗಳಿಂದ ಮನೆಯಲ್ಲಿ ಕ್ರಮೇಣವಾಗಿ ನನ್ನ ಗಂಡನಾದ 1)ಶಿವಪುತ್ರ  ಅತ್ತೆಯಾದ 2) ಮಲ್ಲಮ್ಮಾ , ಮೈದುನನಾದ 3) ಅಂಜಪ್ಪಾ ತಂದೆ ಭೀಮರಾಯ  ಎಲ್ಲರೂ ನನ್ನ ಜೋತೆ ಮನೆಯಲ್ಲಿ ಯಾವುದಾದರೂ ವಿಷಯದಲ್ಲಿ ಮನೆಯಲ್ಲಿ ಜಗಳ ಮಾಡುತ್ತಾ, ನೀನು ನಮ್ಮ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನಮ್ಮ ಮನೆಯವರಿಗೆ ಮಯರ್ಾದೆ ಕೊಡುತ್ತಿಲ್ಲಾ, ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡುತ್ತಿದ್ದರು, ಅವರಲ್ಲಿ ನನ್ನ ಗಂಡ ದಿನಾಲೂ ಮನೆಯಲ್ಲಿ ತನ್ನ ಮನಸ್ಸಿಗೆ ಬಂದ ಹಾಗೇ ಹೋಡೆಬಡಿ ಮಾಡಿ ವಿಪರಿತವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕೊಳ ನೀಡುತ್ತಾ ಬಂದಿದ್ದು, ಈ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ಹೇಳಿದಾಗ ನಮ್ಮ ತಂದೆ ಮಹಾದೇವಪ್ಪಾ ತಾಯಿ ಮಾಳಮ್ಮಾ ಮತ್ತು ಎಸ್. ಹೊಸಳ್ಳಿ ಗ್ರಾಮದ ಶರಣಪ್ಪಾ ತಂದೆ ಮಾರ್ತಂಡಪ್ಪಾ ಕುಂದಲೋರ ಮತ್ತು ಶರಣಪ್ಪಾ ತಂದೆ ಸಾಬಣ್ಣಾ ಬಡಿಗೇರ  ಇವರಿಗೆ ತಿಳಿಸಿದಾಗ ಇವರು ನನ್ನ ಗಂಡ ಮತ್ತು ಗಂಡನ ಮನೆಯವರೆಗೆ ಬುದ್ದಿಮಾತು ಹೇಳಿ ನನಗೆ ಸರಿಯಾಗಿ ನಡೆಸಿಕೊಂಡು ಹೋಗುವಂತೆ ಹೇಳಿದರೂ ಕೂಡಾ ನನ್ನ ಗಂಡ ಮತ್ತು ಗಂಡನ ಮನೆಯವರು ಎಲ್ಲರೂ ಕೂಡಿ ನನಗೆ ಸರಿಯಾಗಿ ನಡೆಸಿಕೊಂಡು ಹೋಗದೇ ಇತ್ತಿತ್ತಲಾಗಿ ವೀಪರಿತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ ಆದರೂ ಕೂಡಾ ನನ್ನ ಗಂಡ ಮತ್ತು ಆತನ ಸಂಬಂಧಿಕರು ಇವತ್ತಿಲ್ಲಾ ನಾಳೆ ನನ್ನನ್ನು ಚನ್ನಾಗಿ ನಡೆಸಿಕೊಂಡು ಹೋಗಬಹುದು ಅಂತಾ ಎಷ್ಟೇ ತಾಳಿಕೊಂಡು ಸುಮ್ಮನಿದ್ದೇನು. ದಿನಾಂಕ 02-09-2018 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿಯೇ ಇದ್ದಾಗ ನನ್ನ ಗಂಡನಾದ 1) ಶಿವಪುತ್ರ ತಂದೆ ಭೀಮರಾಯ, ಅತ್ತೆಯಾದ 2) ಮಲ್ಲಮ್ಮಾ ಗಂಡ ಭಿಮರಾಯ ಮೈದುನನಾದ ಮತ್ತು 3) ಅಂಜಪ್ಪಾ ತಂದೆ ಭೀಮರಾಯ ಈ ಮೂವರು ನನ್ನೊಂದಿಗೆ ಮನೆಯಲ್ಲಿ ಜಗಳಾ ಮಾಡಿ ಭೋಸಡಿ ನೀನು ನಮ್ಮ ಮನೆಯಲ್ಲಿ ಇರಬೇಡ ನಮ್ಮ ಮಗನಿಗೆ ಮತ್ತೊಂದು ಮದುವೆ ಮಾಡುತ್ತೆವೆ, ನೀನು ನಿನ್ನ ಮಕ್ಕಳಿಗೆ ಕರೆದುಕೊಂಡು ನಿನ್ನ ತವರು ಮನೆಗೆ ಹೋಗು ಅಥವಾ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ಕುತ್ತಿಗೆ ಹಿಡಿದು ಮನೆಯಿಂದ ಹೋರಹಾಕಲು ಪ್ರಯತ್ನಪಟ್ಟಾಗ ನಾನು ಮನೆಯಿಂದ ಹೋರ ಹೋಗಲು ವಿರೋಧ ಮಾಡಿದೇನು. ಆಗ ನನ್ನ ಗಂಡನು ಒಂದು ಕಲ್ಲಿನಿಂದ ನನ್ನ ಗದ್ದದ ಮೇಲೆ ಹೊಡೆದು ರಕ್ತಗಾಯ ಮಾಡಿದನು. ನಂತರ ನಾನು ನನ್ನ ಮಕ್ಕಳನ್ನು ಕರೆದುಕೊಂಡು ನನ್ನ ತವರು ಮನೆಗೆ ಬಂದಿರುತ್ತನೆ. ನನ್ನ ಭವಿಷ್ಯದ ದೃಷ್ಟಿಯಿಂದ ನಾನು ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದಿರುತ್ತೆನೆ. ಈ ರೀತಿಯಾಗಿ ನನಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡಿ ಮಾಡಿ ರಕ್ತಗಾಯಗೊಳಿಸಿ ಜೀವದ ಭಯ ಹಾಕಿದ ನನ್ನ ಗಂಡನಾದ 1) ಶಿವಪುತ್ರ ತಂದೆ ಭೀಮರಾಯ, ಅತ್ತೆಯಾದ 2) ಮಲ್ಲಮ್ಮಾ ಗಂಡ ಭಿಮರಾಯ ಮೈದುನನಾದ 3) ಅಂಜಪ್ಪಾ ತಂದೆ ಭೀಮರಾಯ ಈ ಮೂವರ ವಿರುದ್ದ ಕಾನೂನು ಕ್ರಮ ಜರುಗಿಸಿ ನನಗೆ ಉಪಚಾರಕ್ಕೆ ದವಾಖಾನೆಗೆ ಕಳುಹಿಸಬೇಕು ಅಂತಾ ನೀಡಿದ ಫಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 187/2018 ಕಲಂ 323, 324, 504, 506, 498(ಎ) ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ.;- 63/2017 ಕಲಂ 279, 337, 338 ಐಪಿಸಿ;-  ದಿನಾಂಕ 04/09/2018 ರಂದು ಸಾಯಂಕಾಲ 4 ಪಿ.ಎಂ.ಕ್ಕೆ ಫಿಯರ್ಾದಿಯವರು ಯಾದಗಿರಿ ನಗರದ ಕೋಟರ್ು ಹತ್ತಿರ ಮುಖ್ಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ  ಆರೋಪಿತ ತನ್ನ ಬಜಾಜ್ ಪಲ್ಸರ್ ಮೋಟಾರು  ಸೈಕಲ್ ನಂ.ಕೆಎ-02, ಎಚ್.ಯು-2014 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿ ಫಿಯರ್ಾದಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ  ಎದೆಗೆ ಭಾರೀ ಒಳಪೆಟ್ಟು, ಎರಡು ಮೊಣಕಾಲುಗಳಿಗೆ, ಎರಡು ಮೊಣಕೈಗಳಿಗೆ, ಮೂಗಿಗೆ  ರಕ್ತಗಾಯವಾಗಿದ್ದು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಘಟನೆ ಬಗ್ಗೆ ತಮ್ಮ ಮನೆಯ ಹಿರಿಯರಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಇಂದು ದಿನಾಂಕ 05/09/2018 ರಂದು 3 ಪಿ.ಎಂ.ಕ್ಕೆ ಹಾಜರಾಘಿ ದೂರನ್ನು ನೀಡಿ ಅಪಗಾತ ಪಡಿಸಿದ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.
  ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- ಗುನ್ನೆ ನಂ. 397/2018  ಕಲಂ 279, 338 ಐಪಿಸಿ:- ದಿನಾಂಕ: 05/08/2018 ರಂದು ಮದ್ಯಾಹ್ನ 14;30 ಗಂಟೆಗೆ ಪಿಯರ್ಾದಿದಾರರಾದ ಕುಮಾರ ತಂದೆ ಲಚಮಪ್ಪ ಚವ್ಹಾಣ ವಯ|| 50 ವರ್ಷ ಉ|| ಒಕ್ಕಲತನ ಜಾ|| ಲಂಬಾಣಿ ಸಾ|| ಗುಂಡಳ್ಳಿ ತಾಂಡಾ ತಾ|| ಶಹಾಪೂರ ಜಿ|| ಯಾದಗೀರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ. ಇಂದು ದಿನಾಂಕ: 05/09/2018 ರಂದು ಮುಂಜಾನೆ 10-30 ಗಂಟೆಗೆ ನಾನು ದೇವದುರ್ಗದಿಂದ ಒಂದು ಖಾಸಗಿ ವಾಹನದಲ್ಲಿ ನಮ್ಮೂರಿಗೆ ಬರುತ್ತಿರುವಾಗ ಮಾರ್ಗ ಮದ್ಯ ಅಂದರೆ ಎಂ ಕೊಳ್ಳುರ - ಬೀರನೂರ  ಮುಖ್ಯ ರಸ್ತೆಯಲ್ಲಿ ಒಂದು ಮೋಟಾರ ಸೈಕಲ ಬಿದ್ದಿತ್ತು ಮತ್ತು  ಕೆಲವು ಜನರು ರೋಡಿನಲ್ಲಿ ಗುಂಪಾಗಿ ನಿಂತಿದ್ದರು ಆಗ ನಾನು ನಮ್ಮ ವಾಹನ ನಿಲ್ಲಿಸಿ ಕೆಳಗಿಳಿದು ನೊಡಲಾಗಿ ರೋಡಿನ ಮೇಲೆ ಒಂದು ಹೀರೋ ಸ್ಪಲೆಂಡರ ಪ್ಲಸ್ ಮೋಟಾರ ಸೈಕಲ ನಂಬರ ಕೆಎ-33 ಯು-8588 ನೇದ್ದು ಬಿದ್ದತ್ತು ಅದರ ಪಕ್ಕದಲ್ಲಿ ಹುಡುಗನ ಮೊಳಕಾಲ ಕತ್ತರಿಸಿ ಬಿದ್ದಿತ್ತು ಸ್ವಲ್ಪ ದೂರದಲ್ಲಿ ರೋಡಿನ ಕೆಳಗೆ ಹೊಲದಲ್ಲಿ ಒಬ್ಬ ವ್ಯಕ್ತಿ ಬಿದ್ದಿದ್ದನು ಅವನ ಸುತ್ತಲು ಜನರು ನಿಂತು ನೋಡುತ್ತಿದ್ದರು ನಾನು ಕೂಡಾ ಹೋಗಿ ನೊಡಲಾಗಿ ಆ ವ್ಯಕ್ತಿ ನಮ್ಮ ಸಂಬಂದಿಕನಾದ ಗೊವಿಂದ ತಂದೆ ಛತ್ರಪತಿ ರಾಠೋಡ ವಯ|| 25 ವರ್ಷ ಸಾ|| ವೇಗಳಾಪೂರ ತಾಂಡಾ ತಾ|| ದೇವದುರ್ಗ ಜಿ|| ರಾಯಚೂರ ಇದ್ದನು ನಂತರ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ನಮ್ಮ ಸಂಬಂದಿ ಗೊವಿಂದ ಈತನು ತನ್ನ ಹೀರೋ ಸ್ಲೆಂಡರ ಪ್ಲಸ್ ಮೋಟಾರ ಸೈಕಲ ನಂಬರ ಕೆಎ-33 ಯು- 8588  ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ ನಿಯಂತ್ರಣ ತಪ್ಪಿ ರೊಡಿನ ದಂಡೆಗೆ ಹಾಕಿದ ಪ್ರೋಟೆಕ್ಟರ ತಗಡಿಗೆ ಡಿಕ್ಕಿ ಹೋಡೆದು ರೋಡಿನ ಪಕ್ಕದ ಹೊಲವಾದ ಬಸವರಾಜಪ್ಪ ತಂದೆ ಮಲ್ಲಿಕಾಜರ್ುನ ಮಾಲಿ ಪಾಟೀಲ ಸಾ|| ಎಂ ಕೊಳ್ಳುರ ಇವರ ಹೊಲದ ಹತ್ತಿರ ರೊಡಿನಲ್ಲಿ ಬಿದ್ದಿರುತ್ತಾನೆ ಅಂತ ತಿಳಿಸಿದರು. ಗೊವಿಂದನಿಗೆ ನೋಡಲಾಗಿ ಅವನ ಎಡಗಾಲ ಮೊಳಕಾಲ ಪೂತರ್ಿ ಕತ್ತರಿಸಿ ಶರೀರದಿಂದ ಬೇರ್ಪಟಿರುತ್ತದೆ, ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು, ಬಲಗೈ ಮುಂಗೈ ಹತ್ತಿರ ಮುರಿದು ರಕ್ತ ಬಂದಿರುತ್ತದೆ ನಂತರ ಅಪಘಾತವಾದ ಸ್ಥಳಕ್ಕೆ 108 ಆಂಬ್ಯುಲೆನ್ಸ ಬಂದ ನಂತರ ನಾನು ಮತ್ತು ಅಲ್ಲಿದ್ದ ಜನರು ಕೂಡಿ ಗೊವಿಂದನನ್ನು ಉಪಚಾರಕ್ಕಾಗಿ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆಮಾಡಿ ಉಪಚಾರ ಕೊಡಿಸಿದೆವು ಅಲ್ಲಿನ ವ್ಯದ್ಯರು ಗೊವಿಂದನಿಗೆ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಕರೆದುಕೊಂಡು ಹೊಗಲು ತಿಳಿಸಿದ ಮೆರೆಗೆ ಅಪಗಾತವಾದ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದ ನಮ್ಮ ಸಂಬಂದಿಕನಾದ  ಬಾಬು ತಂದೆ ಧರ್ಮಣ್ಣ ಚವ್ಹಾಣ ಸಾ|| ಬಿರನಕಲ್ ತಾಂಡಾ ತಾ||  ಶಹಾಪೂರ ಈತನು ಗೊವಿಂದನನ್ನು ಕಲಬುರಗಿಗೆ 108 ಆಂಬ್ಯುಲೆನ್ಸನಲ್ಲಿ ಕರೆದುಕೊಂಡು ಹೊದನು. ಅಪಘಾತವಾದಾಗ ಸಮಯ ಬೆಳಗ್ಗೆ 11-00 ಗಂಟೆ ಆಗಿತ್ತು.ಕಾರಣ ಹಿರೋ ಸ್ಪಲೆಂಡರ ಪ್ಲಸ್ ಮೋಟಾರ ಸೈಕಲ ನಂಬರ: ಕೆಎ-33 ಯು-8588 ನೇದ್ದರ ಚಾಲಕ ಗೊವಿಂದ ತಂದೆ ಛತ್ರಪತಿ ರಾಠೋಡ ವಯ|| 25 ವರ್ಷ ಸಾ|| ವೇಗಳಾಪೂರ ತಾಂಡಾ ತಾ|| ದೇವದುರ್ಗ ಜಿ|| ರಾಯಚೂರ ಈತನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ ನಿಯಂತ್ರಣ ತಪ್ಪಿ ಒಮ್ಮೆಲೆ ರೋಡಿನ ಪಕ್ಕದಲ್ಲಿರುವ ಪ್ರೋಟಕ್ಟರ ತಗಡಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ: 397/2018  ಕಲ: 279.338 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನುನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!