Yadgir District Reported Crimes updated on 05-09-2018

By blogger on ಬುಧವಾರ, ಸೆಪ್ಟೆಂಬರ್ 5, 2018

                                                    
                                         Yadgir District Reported Crimes 

ಮಹಿಳಾ ಪೊಲೀಸ್ ಠಾಣೆ ;- ಕಲಂ 498(ಎ) 323 504 354 ಸಂಗಡ 149 ಐಪಿಸಿ ಮತ್ತು ಕಲಂ 3 & 4 ಡಿ.ಪಿ ಎಕ್ಟ ;- ದಿನಾಂಕ 04/09/2018 ರಂದು 6-30 ಪಿ.ಎಂಕ್ಕೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳು ಯಾದಗಿರಿ ರವರ ಮುಖಾಂತರ ಕಲಬುಗರ್ಿ ಮಹಿಳಾ  ಪೊಲೀಸ್ ಗುನ್ನೆ ನಂ 54/2018 ಕಲಂ 498(ಎ) 323 504 354 ಸಂಗಡ 149 ಐಪಿಸಿ ಮತ್ತು ಕಲಂ 3 & 4 ಡಿ.ಪಿ ಎಕ್ಟ ನೆದ್ದು ಹದ್ದಿ ಆಧಾರದ ಮೇಲಿಂದ ಮುಂದಿನ ತನಿಖೆಗಾಗಿ ನಮ್ಮ ಠಾಣೆಗೆ ವಸೂಲಾಗಿದ್ದು ಸದರಿ ಕೇಸಿನಲ್ಲಿ ಪಿಯರ್ಾದಿದಾರರಾದ ಶ್ರೀಮತಿ ಸೈದಾ ಆಪ್ರೀನ್ ಪರಾತ್ ಗಂಡ ಸೈಯದ್ ಅರಿಸಿಲ್ ಅಜೀಮ್ ಪಟೇಲ್ ವ-20 ಜಾ- ಮುಸ್ಲಿಂ ಸಾ- ಮುಸ್ಲಿಂಪೂರ ಯಾದಗಿರಿ ಸದ್ಯ ಶಹಾಬಾಜ ಕಾಲೋನಿ ರಹಮತ ನಗರ ಕಲಬುಗರ್ಿ ಇವರು ದಿನಾಂಕ 19/07/2018 ರಂದು 11 ಎ.ಎಂಕ್ಕೆ ಕಲಬುಗರ್ಿ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಪಿಯರ್ಾದಿ ಸಲ್ಲಿಸಿದ್ದು ಅದರ ಸಾರಂಶವೆನಂದರೆ ನನಗೆ ಶ್ರೀ ಸೈಯ್ಯದ್ ಖಾದರ ಪಟೇಲ (ನಿವೃತ್ತಿ ಶಿಕ್ಷಕರು ) ಯಾದಗಿರಿ ಜಿಲ್ಲೆ ಇವರ ಮಗನಾದ ಶ್ರೀ ಸೈಯ್ಯದ್ ಅಸರ್ಿಲ್ ಅಜೀಮ್ ಪಟೇಲ ಇವರ ಜೋತೆ ನನ್ನ ವಿವಾಹ 23/04/2017 ರಂದು ಸಂಜೆ 5 ಗಂಟೆಗೆ ಮಾಡಲಾಯಿತು ದಿನಾಂಕ20/05/2017 ರಂದು 8 ಪಿ.ಎಮ್ ಕ್ಕೆ ಮದುವೆಯು ಸ್ಥಳ ಎಮ್ .ಎಸ್.ಏಜುಕೇಷನಲ್ ಪಂಕ್ಷನ್ ಹಾಲ್ ಮೊಹಲ್ಲಾ ಅಸರ್ ಶರೀಫ್ ಯಾದಗಿರಿ ಕುಟುಂಬದ ಸದಸ್ಯರಲ್ಲರಾದ ಅತ್ತೆ ಮಾವ ನಾದಿನಿ ಮೈದುನ ಇವರೆಲ್ಲರೂ ಕೂಡಿ ವರದಕ್ಷಣೆ ಕಿರುಕುಳ ಮತ್ತು ಮಾನಸಿಕ ಚಿತ್ರ ಹಿಂಸೆ ಕೋಡುತ್ತಾರೆ ಮತತು ಮೈದುನನಾದ ಅಸೀಮ್ ಪಟೇಲ ಹಾಗೂ ಅತ್ತೆ ಶ್ರೀಮತಿ ದುಗರ್ಾನ ಬೇಗಂ ಸಕರ್ಾರಿ ಶಕ್ಷಕರು ಮಾವನಾದ ಸೈಯದ ಖಾದರ ಪಟೇಲ ನಾದಿನಿಯರಾದ ಶ್ರೀಮತಿ ಸಾಬೇರಾಬೇಗಂ ಸಕರ್ಾರಿ ಶಿಕ್ಷಕರು ಮಾವನಾದ ಸೈಯದ ಖಾದರ ಪಟೇಲ ನಾದಿನಿಯರಾದ ಶ್ರೀ ಮತಿ ಸಾಬೇರಾಬೇಗಂ ಇವರುಗಳು ನನಗೆ ದಿನನಿತ್ಯ ವರದಕಷಿಣೆ ಸಲುವಾಗಿ ಚಿತ್ರ ಹಿಂಸೆ ನೀಡಿ ಹೋಡಿ ಬಡಿ ಮಾಡುತ್ತಿದ್ದರು ಹಗೂ ದಿನ ನನ್ನನ್ನು ಕೋಣೆಯಲ್ಲಿ ಹಾಕಿ ಹೋಡಿಬಡಿ ಮಾಡುತ್ತಿದ್ದರು ನನ್ನ ತಂದೆಯವರಿಗೆ ಹೇಳಬೇಕೆಂದರೆ ಫೋನನ್ನ ಸಹ ಕೋಡುತ್ತಿರಲಿಲ್ಲ . ನನ್ನ ತಂದೆಯವರು ನನ್ನ ವಿವಾಹಕ್ಕೆ 50 ಗ್ರಾಂ ಚಿನ್ನ ಗಾಗೂ 1 ಲಕ್ಷ ರೂಪಾಯಿ ನಗದು ಹಣ ಕೊಟ್ಟಿದ್ದಾರೆ.ಮತ್ತು ಅವರ ಬೇಡಿಕೆಯ ಪ್ರಕಾರ ಯಾದಗಿರಿಯಲ್ಲಿಯೇ ಲಗ್ನಮಾಡಿಕೊಡಬೇಕೆಂದು  ಹೇಳಿದ್ದರು.ಅದೆ ಪ್ರಕಾರ ಯಾದಗಿರಿಯಲ್ಲಿಯೇ ಮಾಡಿಕೊಟ್ಟಿರುತ್ತಾರೆ . ಅದಕ್ಕೆ ಲಗ್ನಕ್ಕೆ ಸುಮಾರು 5 ಲಕ್ಷಕಿಂತ ಹೇಚ್ಚು ಖಚರ್ಾಗಿರುತ್ತದೆ. ವಿವಾಹವಾದ ಮೇಲೆ ನನ್ನ ಗಂಡ ನನ್ನ ಜೋತೆ 3 ತಿಂಗಳ ಜೊತೆಯಲಿದ್ದರು ಇವರು ವೃತ್ತಿಯಲ್ಲಿ ಆ .ಓ.ಖಿ ಟಿಠಿಜಛಿಣಠಟಿ ಇಟಿರಟಿಜಜಡಿ ಏಣತಿಚಿಣ ಆಗಿದ್ದು ನನಗೆ ಅತ್ತೆ ಮಾವ ಮೈದುನ ನಾದಿನಿ ಇವರ ಜೊತೆಯಲ್ಲಿಯೇ ಇರಬೇಕೆಂದು ಕಡ್ಡಾಯವಾಗಿ ಆದೇಶ ಮಾಡಿ ಹೊರದೇಶಕ್ಕೆ ಹೊರಟರು . ನನ್ನನ್ನು ನನ್ನ ತಂದೆ ತಾಯಿಯವರ ಮನೆಗೆ ಹೋಗಬಾರದು ಮತ್ತು ಮೋಬೈಲ್ ಮುಖಾಂತರ ಮಾತನಾಡಬಾರದು ಎಂದು ಹೇಳಿದ್ದರು ಮತ್ತೆ ನನ್ನ ಗಂಡ ತಾನು ಹೊರದೇಶದಿಂದ ಬರುವಷ್ಟರಲ್ಲಿ ತನ್ನ ತಮ್ಮನಾದ ಆಸೀಮ್ ಪಟೇಲನ ಕೈಯಲ್ಲಿ ಮತ್ತೊಮ್ಮೆ 50 ಗ್ರಾಂ ಚಿನ್ನವನ್ನು ನನ್ನ ಗಂಡ ಹೊರದೇಶಕ್ಕೆ ಹೋದ ನಂತರ ಪ್ರತಿದಿನವೂ ತಪ್ಪದೇ ಕೆಟ್ಟದೃಷ್ಟಿಯಿಂದ ನನ್ನ ಮೈದುನನಾದ ಅಸೀಮ್ ಪಟೇಲ ಲೈಂಗಿಕ ಕಿರುಕುಳ ನೀಡುತ್ತಿದ್ದ. ನನ್ನ ಅತ್ತೆಯವರು ಸಕರ್ಾರಿ ಶಿಕ್ಷಕಿಯಾಗಿದ್ದಾರೆ. ಅವರು ಬೆಳಿಗ್ಗೆ 9-30 ಕ್ಕೆ ತನ್ನಕೆಲಸಕ್ಕೆ ಹೋಗುತ್ತಾರೆ. ಮಾವ ಮನೆಯ ಕೆಳಮಹಡಿಯಲ್ಲಿರುತ್ತಿದ್ದರು. ನಾನು ನನ್ನ ಕಿರುಕುಳದ ಬಗ್ಗೆ ಅತ್ತೆ ಮಾವ ನಾದಿನಿ ಇವರಿಗೆ ತಿಳಿಸಿದರೂ ಅವರು  ತಮ್ಮಮಗನದ ಅಸೀಮ್ ಪಟೇಲನ ಪರವಾಗಿಯೇ ವಾದ ಮಾಡುತ್ತಿದ್ದರು. ನನ್ನ ಗಮಡ ಮತ್ತು ತಮದೆ ತಾಯಿಯವರಿಗೆ ತಿಳಿಸಬೇಕೆಂದರೆ ದೂವಾಣಿಯ ಕೊರತೆ ಮಾಡಿಟ್ಟಿದ್ದರು. ನನ್ನ ಗಮಡ ಬರುವತನಕ ನನ್ನ ತಂದೆ ತಾಯಿಯವರು ನನ್ನನ್ನು ಬೇಟಿಯಾಗಲು ಮನೆಗೆ ಯಾರು ಬರಬಾರದೆಂದು ಮೈದುನ ಅತ್ತೆ ಮಾವ ನಾದಿನಿಯವರೆಲ್ಲರು ಕಟ್ಟಪ್ಪಣೆ ಮಾಡಿದ್ದರು. ನನ್ನ ಗಂಡ ಹೊರದೇಶದಿಂದ ಬಂದು 1 ವಾರವಾಯಿತು.ಬಂದನಂತರ ಈ ಎಲ್ಲಾ ವಿಷ್ಯಗಳನ್ನು ತಿಳಿಸಿದಾನನ್ನ ವಿಷಯಗಳೆಲ್ಲಾ ಸುಲ್ಲೂಎಂದೇ ವಾದ ಮಾಡಿದ್ದರು. 50 ಗ್ರಾಂ ಚಿನ್ನ ಕೊಡಬೇಕಾಗುತ್ತದೆ ಎಂಬ ಕಾರಣದಿಂದ ನಾನು ಸುಳ್ಳುಹೇಲುತ್ತಿದ್ದೇನೆ. ಎಂದು ಭಾವಿಸಿ ನನ್ನ ಗಂಡನೂವಿರೋಧವಾಗಿಯೇ ವಾದಿಸಿದರು. ಸತತವಾಗಿ 5 ದಿವಸ ಕೋಣೆಯಲ್ಲಿ ಕೈ ಕಾಲುಗಳನ್ನು ಕಟ್ಟಿ ಹೊಡೆದಿದ್ದರು. ನನ್ನ ಕಾಕನವರು ಯಾದಗಿರಿಯಲ್ಲಿಯೇ ನನ್ನ ಮನೆಯ ಓಣಿಯಲ್ಲಿ ಇರುತ್ತಾರೆ. ಅವರಿಗೆ ನನ್ನ ಈ ವಿಷಯ ತಿಳಿದಾಗ ನನ್ನ ತಂದೆ ತಾಯಿಯವರಿಗೆ ತಿಳಿಸಿದರು. ನನ್ನ ತಮದೆ ತಾಯಿಯವರು 14-10-2017 ರಂದು ವಿಷಯ ತಿಳಿದು ವಿಚಾರಿಸಲು ಬಂದರು ವಿಚಾರಿಸುವಾಗ ನನ್ನ ಗಂಡ ಮತ್ತು ಸದಸ್ಯರೆಲ್ಲರೂ ಕೂಡಿ .ನನ್ನ ತಮದೆ ತಾಯಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತೆ ನನ್ನ ಪೊಷಕರು ಸ್ವ ಗ್ರಾಮಕ್ಕೆ ತೆರಳಿದರು .ಇದಾದ ನಂತರ ಅದೇ ದಿನ ಶನಿವಾರ 14/01/2017 ರಂದು ರಾತ್ರಿ 11 ವೇಳೆಯಲ್ಲಿ  ನನಗೆ ಮನೆ ಹೊರಗೆ ಹಾಕಿದರು ಮತ್ತೆ ಅತ್ಮಹತ್ಯೆ ಮಾಡಿಕೊಳ್ಳಲು ಉತ್ಸಾಹಿಸಿದರು ಮತ್ತು ನಾನು ರೈಲ್ವೆ ಸ್ಟೇಷನಿಗೆ ಬಂದು ಕಲಬುರಗಿಗೆ ಬಂದು ಬಿಟ್ಟೆ  ಆಗ ನಾನು ತಂದೆ ತಾಯಿಯವರಲ್ಲಿ ಬಂದು  ಸೇರಿದೆನನಗೆ ಜೀವದ ಭಯವಿದೆ ನನ್ನ ಮುಂದಿನ ಸಂರಕ್ಷನೆ ಬದುಕಿಗಾಗಿ ಕಾನೂನು ಕ್ರಮ ಜರುಗಿಸಿ  ಅಂತಾ ಲಿಖಿತ ಪಿಯರ್ಾದಿ ಸಲ್ಲಿಸಿದರ ಸಾರಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಕಲಬುಗರ್ಿರವರು ತಮ್ಮ ಠಾಣೆ ಗುನ್ನೆ ನಂ 54/2018 ಕಲಂ 498(ಎ) 323 504 354 ಸಂಗಡ 149 ಐಪಿಸಿ ಮತ್ತು ಕಲಂ 3 & 4 ಡಿ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲಿಸಿ ಹದ್ದಿ ಆಧಾರದ ಮೇಲೆ ಕಡತವನ್ನು ಮುಂದಿನ ತನಿಖೆಗಾಗಿ ನಮ್ಮಗೆ ಕಳುಹಿಸಿದ್ದು ಸದರಿ ವಗರ್ಾವಣೆ ಕಡತದ ಆದಾರದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ 17/2018 ಕಲಂ 498(ಎ) 323 504 354 ಸಂಗಡ 149 ಐಪಿಸಿ ಮತ್ತು ಕಲಂ 3 & 4 ಡಿ.ಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಂಡೆನು .

ಯಾದಗಿರಿ ಪೊಲೀಸ್ ಠಾಣೆ ಗುನ್ನೆ ನಂ ;- ಗುನ್ನೆ ನಂ 150/2018 ಕಲಂ 454, 380 ಐಪಿಸಿ;- ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಸಕರ್ಾರಿ ಪ್ರಾಥಮಿಕ ಶಾಲೆ ಆರ್. ಹೊಸಳ್ಳಿಯಲ್ಲಿ ಮುಖ್ಯೋಪದ್ಯಾಯಕನಾಗಿ ಕೆಲಸ ಮಾಡುತ್ತೇನೆ. ನನ್ನ ಹೆಂಡತಿಯಾದ ಶ್ರೀಮತಿ ಕಲಾವತಿ ಇವರು ಸಕರ್ಾರಿ ಪ್ರಾಥಮಿಕ ಶಾಲೆ ಮೈಲಾಪೂರದಲ್ಲಿ ಮುಖ್ಯೋಪದ್ಯಾಯಕರು ಅಂತಾ ಕೆಲಸ ಮಾಡುತ್ತಾರೆ. ಪ್ರತಿ ನಿತ್ಯ ನಾವು ಕರ್ತವ್ಯಕ್ಕೆ ಹೋಗಿ ಬಂದು ಮಾಡುತ್ತೇವೆ. ಪ್ರತಿ ನಿತ್ಯದಂತೆ ನಾನು ಮತ್ತು ನನ್ನ ಹೆಡಂತಿ ಇಬ್ಬರು ದಿನಾಂಕ 28/08/2018 ರಂದು ಬೆಳಿಗ್ಗೆ 09-00 ಗಂಟೆಗೆ ನಮ್ಮ ಮನೆಯ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದೆವು. ನಂತರ ನಾನು ಮನೆಯಲ್ಲಿ ಕೆಲವಿದ್ದ ಕಾರಣ ದಿನಾಂಕ 28/08/2018 ರಂದು ಮಧ್ಯಾಹ್ನ 02-30 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬೀಗ ಮುರಿದಿದ್ದು, ಬಾಗಿಲು ಸ್ವಲ್ಪ ಮುಚ್ಚಿದಂತೆ ಕಂಡು ಬಂತು. ನಂತರ ನಾನು ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯ ಬೆಡ್ ರೂಮಿನಲ್ಲಿ ಇದ್ದ ಅಲಮರಿ ಮುರಿದು ಅದರಲ್ಲಿ ಇಟ್ಟಿದ್ದ 1) ಸುಮಾರು 10 ಗ್ರಾಂ. ಬಂಗಾರ 5 ಜೊತೆ ಹುಡುಗರ ಕಿವಿಯಲ್ಲಿಯ ಓಲೆಗಳು, ಅ.ಕಿ 28,000/ ರೂ||, 2) 10 ಗ್ರಾಂ, ಬಂಗಾರದ 02 ಲಾಕೇಟ್ಗಳು, ಅ.ಕಿ 28,000/ ರೂ||, ಮತ್ತು 3) 03 ಗ್ರಾಂ. ಬಂಗಾರದ 2 ಜೊತೆ ಸಾಕಳೆ, ಅ.ಕಿ 8,400/ ರೂ||, ನೇದ್ದವುಗಳು ಕಾಣಲಿಲ್ಲ. ಹೀಗೆ ಒಟ್ಟು 64,400/ ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಈ ವಿಷಯವನ್ನು ನಾನು ನನ್ನ ಹೆಂಡತಿ ಹಾಗೂ ನನ್ನ ಗೆಳೆಯರಾದ ಶಿವಕುಮಾರಸ್ವಾಮಿ ತಂದೆ ಬಸವರಾಜ ಮತ್ತು  ಶಿವು ತಂದೆ ಶರಣಪ್ಪ ಆವಂಟಿ ಸಾ|| ಇಬ್ಬರು ಯಾದಗಿರಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಕಾರಣ ದಿನಾಂಕ 28/08/2018 ರಂದು ಬೆಳಿಗ್ಗೆ 09 ಗಂಟೆಯಿಂದ ಅಂದೇ 2-30 ಪಿ.ಎಂ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೀಗ ಮುರಿದು ಮನೆ ಒಳಗೆ ಬಂದು ಮನೆಯ ಬೆಡ್ ರೂಮಿನಲ್ಲಿ ಇದ್ದ ಸುಮಾರು 64,400/ ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು, ನಮ್ಮ ಮನೆಯಲ್ಲಿಯ ಸಾಮಾನುಗಳು ಪತ್ತೆ ಮಾಡಿಕೊಡಲು ವಿನಂತಿ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 150/2018 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
   
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 170/2018 ಕಲಂ 279,304(ಎ) ಐಪಿಸಿ. ಮತ್ತು 187 ಐಎಮ್.ವಿ ಕಾಯ್ದೆ ದಿನಾಂಕ: 04-09-218 ರಂದು ಮದ್ಯಾಹ್ನ 01-45 ಗಂಟೆಗೆ ಪಿಯರ್ಾಧಿದಾರನಾದ ಶ್ರೀ ಹುಸೇನಪ್ಪ ತಂದೆ ಬಸಣ್ಣ ವ|| 36 ವರ್ಷ ಜಾ|| ಬುಡಗ ಜಂಗಮ ಉ|| ಕೂಲಿಕೆಲಸ ಸಾ|| ಹೊಸಳ್ಳಿಕ್ರಾಸ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು. ಕೂಲಿ ಕೆಲಸ & ವ್ಯಾಪಾರ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪ ಜೀವನ ಮಾಡಿಕೊಂಡಿರುತ್ತೇನೆೆ.  ನನಗೆ 5 ಜನ ಮಕ್ಕಳಿದ್ದು 1) ಮಾದರಮ್ಮ ವ|| 14 ವರ್ಷ 2) ಸುರೇಶ ವ|| 11 ವರ್ಷ 3) ವಿಜಯ ವ|| 5 ವರ್ಷ 4) ಅನ್ನಪೂರ್ಣ ವ|| 3 ವರ್ಷ 5) ಸೌಭಾಗ್ಯ ವ|| 7 ತಿಂಗಳು ಅಂತಾ ಮಕ್ಕಳಿರುತ್ತಾರೆ ನನ್ನ ಮಗ ಸುರೇಶ ಇತನನ್ನು ಸೈದಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಓದಲು ಬಿಟ್ಟಿರುತ್ತೇನೆ ಮತ್ತು ಆತನು ಅಲ್ಲೆ ಸೈದಾಪೂರ ಹಾಸ್ಟಲ್ ದಲ್ಲಿ ಇರುತ್ತಾನೆ. ನಾನು ನನ್ನ ಹೆಂಡತಿ ಮತ್ತು ಇನ್ನುಳಿದ ನನ್ನ ಮಕ್ಕಳು ಹೊಸಳ್ಳಿ ಕ್ರಾಸ ಯಾದಗಿರಿಯಲ್ಲಿ ಇರುತ್ತೇವೆ. 
  ಇಂದು ನಾನು ಬೆಳಿಗ್ಗೆ 06-00 ಗಂಟೆಗೆ ನಾನು ಸಾಬೂನ ವ್ಯಾಪಾರ ಮಾಡಲು ಚಿಗಾನೂರ ಕಡೆಗೆ ಬಂದಿದ್ದು ನಾನು ಹಿರೆನೂರದಲ್ಲಿ ಸಾಬೂನ ವ್ಯಾಪಾರ ಮಾಡುವಾಗ ಯಾರೊ ನನಗೆ ಪೋನ್ ಮಾಡಿ ನಿನ್ನ ಮಗನಿಗೆ ಅಪಘಾತವಾಗಿದೆ ಅಂತಾ ತಿಳಿಸಿದರು. ಆಗ ನಾನು ವ್ಯಾಪಾರ ಮಾಡುವದು ಬಿಟ್ಟು ನನ್ನ ಮೋಟರ ಸೈಕಲ್ ಮೇಲೆ ಸೈದಾಪೂರಕ್ಕೆ ಬಂದೆನು. ಸೈದಾಪೂರದಲ್ಲಿ ವಿಚಾರಿಸಲಾಗಿ  ನನ್ನ ಮಗನಿಗೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಅಂತಾ ಗೊತ್ತಾದಾಗ ನಾನು ಸೈದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ನನ್ನ ಮಗನಿಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ ಮೆದಳು ಹೊರ ಬಂದಿತ್ತು, ಹೆಗಾಯಿತು ಅಂತಾ ಅಲ್ಲಿದ್ದ ಜನರಿಗೆ  ವಿಚಾರಿಸಲಾಗಿ ನಿನ್ನ ಮಗ ಹಾಸ್ಟಲ್ ದಿಂದ ಶಾಲೆಗೆ ಬರುವಾಗ ಆಟೋಕ್ಕೆ ಕೈ ಮಾಡಿದ್ದು ಆಟೋ ನಿಲ್ಲಿಸಿದಾಗ ಆತನು ಆಟೋದಲ್ಲಿ ಕುಳಿತು ಶಾಲೆಗೆ ಬರುವಾಗ ಸೈದಾಪೂರದ ಪರ್ವತರೆಡ್ಡಿ ಕೊಂಡಪೂರ ಇವರ ಮನೆಯ ಮುಂದೆ ಸೈದಾಪೂರ-ನಾರಯಣಪೆಟ್ ಮುಖ್ಯ ರಸ್ತೆಯ ಮೇಲೆ  ಆಟೋ ಚಾಲಕನು ತನ್ನ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿದ್ದು ಆಟೋ ನಂಬರ ಕೆಎ-33-ಎ-6581 ನೇದ್ದು ಇದ್ದು ಆಟೋ ಚಾಲಕ ಅಟೋ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಸೈದಾಪೂರದ ಕೊಂಡಪೂರ ಪರ್ವತರೆಡ್ಡಿ ಇವರ ಮನೆಯ ಮುಂದೆ ಇದ್ದ ರಸ್ತೆಯ ಮೇಲೆ ಇಂದು ದಿನಾಂಕ 04.09.2018 ರಂದು ಬೆಳಿಗ್ಗೆ 08-45 ಗಂಟೆಗೆ ಆಟೋ ಚಾಲಕನು ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೆ ಬ್ರೆಕ್ ಹಾಕಿದ್ದರಿಂದ ಆಟೋ ಪಲ್ಟಿಯಾಗಿರುತ್ತಾದೆ. ಆಕಾಲಕ್ಕೆ ಆಟೋದಲ್ಲಿದ್ದ ನನ್ನ ಮಗನ ತಲೆಗೆ ಬಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ನನಗೆ ಗೊತ್ತಾಯಿತು.
   ಕಾರಣ ಮಾನ್ಯರವರು ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಆಟೋ ಪಲ್ಟಿ ಮಾಡಿ ನನ್ನ ಮಗನ ಸಾವಿಗೆ ಕಾರಣನಾದ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರಿಗಿಸಲು ಕೋರಿದೆ. ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.17/2018 ಕಲಂ. 279, 304(ಎ) ಐಪಿಸಿ ಮತ್ತು 187 ಐಎಮವಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.;- 238/2018 ಕಲಂ: 143,147,341, 323, 324, 504, 506, ಸಂ 149ಐಪಿಸಿ ದಿನಾಂಕ 04/09/2018 ರಂದು 07-15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಭೀಮು ತಂದೆ ವಸಂತ ರಾಠೋಡ ಸಾ|| ಯಾಳಗಿ ತಾಂಡಾ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಿನ್ನೆ ದಿ: 03/09/2018 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನಾನು ನಮ್ಮೂರ ಶಿವಾಜಿ ಗುಡಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ತಾಂಡಾದ 1) ರಮೇಶ ತಂದೆ ತಿಪ್ಪಣ್ಣ ರಾಠೋಡ 2) ಅಶೋಕ ತಂದೆ ತಿಪ್ಪಣ್ಣ ರಾಠೋಡ 3) ಪಾಪು ತಂದೆ ತಿಪ್ಪಣ್ಣ ರಾಠೋಡ 4) ಅರುಣ ತಂದೆ ತಿಪ್ಪಣ್ಣ ರಾಠೊಡ 5) ಗುಂಡು ತಂದೆ ತಿಪ್ಪಣ್ಣ ರಾಠೋಡ 6) ರಾಮು ತಂದೆ ಪೂರುನಾಯಕ ಪವಾರ 7) ಸಂತೋಷ ತಂದೆ ತಿಪ್ಪಣ್ಣ ರಾಠೋಡ 8) ಲಚ್ಚಿಬಾಯಿ ತಂದೆ ತಿಪ್ಪಣ್ಣ ರಾಠೋಡ ಸಾ|| ಎಲ್ಲರೂ ಯಾಳಗಿ ತಾಂಡಾ ಇವರು ನನ್ನನ್ನು ತಡೆದು ಏನಲೆ ಮಗನೆ ಭೀಮ್ಯಾ ನಮ್ಮ ಫೋನ್ಲೆ ನಮಗೆ ಬೇಕಾದವರ ಜೊತೆ ಮಾತನಾಡುತ್ತೇವೆ ನಮಗೆ ಕೇಳುವವನು ನೀನ್ಯಾರು ಅಂತ ಅಂದಾಗ ನಾನು ನಮ್ಮ ಸಂಬಂದಿಕರ ಜೊತೆ ನಮ್ಮ ಸಂಸಾರದ ಬಗ್ಗೆ ಮಾತನಾಡಬೇಡ ಅಂತ ಅಂದಾಗ ಸದರಿಯವರು ಎಲ್ಲರು ಈ ಸೂಳೆಮಗನ ಸೊಕ್ಕು ಬಾಳ ಆಗಿದೆ ಅಂತ ಎಲ್ಲರು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಹಾಕಿ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನನ್ನ ತಾಯಿ ಶಾರದಾಬಾಯಿ, ತಂದೆ ವಸಂತ, ತಮ್ಮ ನಾಗೇಶ ಇವರು ಬಿಡಿಸಲು ಬಂದಾಗ ನನ್ನ ತಾಯಿಗೆ ಬಡಿಗೆಯಿಂದ ಹಣೆಯ ಎಡಭಾಗಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ತಂದೆ ವಸಂತ ಇವರಿಗೆ ರಮೇಶ ಈತನು ಕಲ್ಲಿನಿಂದ ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ಗುಪ್ತಗಾಯ ಪಡಿಸಿದನು ಆಗ ಮತ್ತೆ ಎಲ್ಲರು ನಮಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ ನಾವು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ತೇಜು ಜಾಧವ, ಸೋಮು ರಾಠೋಡ ಇವರು ಬಂದು ಬಿಡಿಸಿಕೊಂಡರು ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಮಕ್ಕಳೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು 
      ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 238/2018 ಕಲಂ 143,147,341,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 237/2018 ಕಲಂ: 87 ಕೆಪಿ ಆಕ್ಟ ;- ದಿ: 04/09/2018 ರಂದು 04.00 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಕೆಂಭಾವಿ ಠಾಣೆ ರವರು ಒಂದು ವರದಿ, ಮುದ್ದೆಮಾಲು ಮತ್ತು 15 ಜನರನ್ನು ತಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ದಿನಾಂಕ: 04/09/2018 ರಂದು 01-00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಏವೂರ ಗ್ರಾಮದ ಲಕ್ಷ್ಮೀ ದೇಗುಲದ ಒಳಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ರಾಜಶೇಖರ ಎ.ಎಸ್.ಐ 2) ಶಿವಕುಮಾರ ಪಿಸಿ 131 3) ಚಂದಪ್ಪ ಪಿಸಿ 316 4) ಮಹೇಶ ಪಿಸಿ 309 5)ಬೀರಪ್ಪ ಪಿಸಿ 195 ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 36 ಜಾ|| ಪ.ಜಾತಿ  ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಯ ಚಂದಪ್ಪ ಪಿಸಿ 316 ಇವರ ಮುಖಾಂತರ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಖಾಸಗಿ ಕ್ರೋಸರ್ ಜೀಪ ನೇದ್ದರಲ್ಲಿ ಠಾಣೆಯಿಂದ 01.30 ಪಿಎಮ್ಕ್ಕೆ ಹೊರಟು 02-00 ಪಿಎಮ್ ಕ್ಕೆ ಏವೂರ ಗ್ರಾಮದ ಲಕ್ಷ್ಮೀ ದೇಗುಲದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಏವೂರ ಗ್ರಾಮದ ಲಕ್ಷ್ಮೀ ದೇಗುಲದ ಒಳಗಡೆ  ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಅದರಲ್ಲಿ ಒಬ್ಬನು ರಾಣಿ ಹೊರಗೆ ಅಂತ ಇನ್ನೊಬ್ಬ ರಾಣಿ ಒಳಗೆ ಅಂತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 02-10 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 15 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ತಿಪ್ಪಯ್ಯ ತಂದೆ ಶಂಕ್ರೆಪ್ಪ ಟಣೆಕೆದಾರ ವಯಾ|| 40 ಜಾ||ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1090/- ರೂ ಸಿಕ್ಕಿದ್ದು ಅದರಂತೆ 2) ಕಾಡಪ್ಪ ತಂದೆ ಚಂದ್ರಾಮಪ್ಪ ಜಕ್ಕಪ್ಪಗೊಳ ವಯಾ|| 36 ಜಾ|| ಕುರುಬರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 570/- ರೂ ಸಿಕ್ಕಿದ್ದು ಅದರಂತೆ 3)ಶರಣಪ್ಪ ತಂದೆ ಬಸಪ್ಪ ಜಕ್ಕಪ್ಪಗೊಳ ವಯಾ|| 53 ಜಾ|| ಕುರುಬ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 340/- ರೂ ಸಿಕ್ಕಿದ್ದು ಅದರಂತೆ 4) ಚಂದ್ರಶೇಖರ ತಂದೆ ಸೋಮರಾಯ ಪೂಜಾರಿ ವಯಾ|| 30 ಜಾ|| ಕುರುಬರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 610/- ರೂ ಸಿಕ್ಕಿದ್ದು 5) ಬಸವರಾಜ ತಂದೆ ನಾಗಣ್ಣ ನಗನೂರ ವಯಾ|| 31 ಜಾ|| ರೆಡ್ಡಿ ಉ|| ಖಾಸಗಿ ಡ್ರೈವರ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 820/- ರೂ ಸಿಕ್ಕಿದ್ದು  ಅದರಂತೆ 6) ಮಲ್ಲಪ್ಪ ತಂದೆ ದೇವಿಂದ್ರಪ್ಪ ನಗನೂರ ವ|| 30 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 440/- ರೂ ಸಿಕ್ಕಿದ್ದು ಅದರಂತೆ 7) ಬಸವರಾಜ  ತಂದೆ ಶಿವಪ್ಪ ಟಣಕೆದಾರ ವಯಾ|| 40 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 380/- ರೂ ಸಿಕ್ಕಿದ್ದು 8) ಮಲ್ಲಪ್ಪ ತಂದೆ ಭೀಮರಾಯ ಗೋಗಡಿಹಾಳ ವಯಾ|| 31 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 250/- ರೂ ಸಿಕ್ಕಿದ್ದು  ಅದರಂತೆ 9) ಸಂತೋಷ ತಂದೆ ನಿಂಗಪ್ಪ ಜಕ್ಕಪ್ಪಗೊಳ ವಯಾ|| 26 ಜಾ|| ಕುರುಬರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 510/- ರೂ ಸಿಕ್ಕಿದ್ದು 10) ಜೆಟ್ಟೆಪ್ಪ ತಂದೆ ಸಂಗಪ್ಪ ಲಕ್ಕಾಗೋಳ ವಯಾ|| 34 ಜಾ|| ಕುರುಬರ ಉ|| ಕೂಲಿ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 320/- ರೂ ಸಿಕ್ಕಿದ್ದು  ಅದರಂತೆ 11) ಹೆಳ್ಳೆಪ್ಪ ತಂದೆ ಕನಕಪ್ಪ ನಗನೂರ ವಯಾ|| 50 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 290/- ರೂ ಸಿಕ್ಕಿದ್ದು ಅದರಂತೆ 12) ಹಣಮಂತ್ರಾಮ ತಂದೆ ಭೀಮರಾಯ ಟಣಕೇದಾರ ವಯಾ|| 40 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 430/- ರೂ ಸಿಕ್ಕಿದ್ದು ಅದರಂತೆ 13) ತಿಪ್ಪಣ್ಣ ತಂದೆ ರಾಯಪ್ಪ ಕಕ್ಕೇರಿ ವಯಾ|| 28 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 410/- ರೂ ಸಿಕ್ಕಿದ್ದು ಅದರಂತೆ 14) ಭೀಮರಾಯ ತಂದೆ ಬಸವರಾಜ ಟಣಕೇದಾರ ವಯಾ|| 32 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 250/- ರೂ ಸಿಕ್ಕಿದ್ದು ಅದರಂತೆ 15) ಭೀಮರಾಯ ತಂದೆ ಸಂಗಯ್ಯ ಕಕ್ಕೇರಿ ವಯಾ|| 49 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 190/- ರೂ ಸಿಕ್ಕಿದ್ದು ಹೀಗೆ ಒಟ್ಟು 6900/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳನ್ನು  02-10 ಪಿ.ಎಂ ದಿಂದ 03-30 ಪಿ.ಎಂ ದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಮತ್ತು ಮೇಲೆ ನಮೂದಿಸಿದ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 4-00 ಪಿ.ಎಂಕ್ಕೆ ಠಾಣೆಗೆ ಬಂದು ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 237/2018 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!