Yadgir District Reported Crimes
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ ;- 235/2018 ಕಲಂ: 143, 147, 148, 341, 323, 324, 504, 506 ಸಂಗಡ 149 ಐಪಿಸಿ & 3 (1) (ಆರ್) (ಎಸ್) (ಡಬ್ಲೂ) ಎಸ್ಸಿ/ಎಸ್ಟಿ ಪಿಎ ಆಕ್ಟ 1989;- ದಿ: 03/09/2018 ರಂದು 12.30 ಪಿಎಮ್ಕ್ಕೆ ಸರಕಾರಿ ಆಸ್ಪತ್ರೆ ಸುರಪುರದಿಂದ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳು ರುದ್ರಪ್ಪ ತಂದೆ ರಾಮನಿಂಗಪ್ಪ ಹುಬ್ಬಳ್ಳಿ ಜಾ|| ಮಾದರ ಸಾ|| ಕಿರದಳ್ಳಿ ಈತನು ಒಂದು ಲಿಖಿತ ಅಜರ್ಿ ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಪಿರ್ಯಾದಿ ಈ ಹಿಂದೆ ನಾಗರಪಂಚಮಿ ಹಬ್ಬದಲ್ಲಿ ಚೀಲ ಎತ್ತುವ ಸ್ಪದರ್ೆಯಲ್ಲಿ ಕುರುಬ ಜನಾಂಗದವರ ವಿರುದ್ದ 5000 ರಊ ಬಹುಮಾನ ಗೆದ್ದಿದ್ದು ಅದೇ ವೈಷಮ್ಯದಿಂದ ನಿನ್ನೆ ದಿ: 02/09/18 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಪಿರ್ಯಾಧಿದಾರರನು ನಡೆದುಕೊಂಡು ಮನೆಗೆ ಹೋಗುವ ಕುರಿತು ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಪಕ್ಕದ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲರು ಕೈಯಲ್ಲಿ ಕಲ್ಲು ಬಡಿಗೆ ಹಾಗೂ ಕಬ್ಬಿಣದ ರಾಡು ಹಿಡಿದುಕೊಂಡು ಬಂದವರೇ ಪಿರ್ಯಾದಿಗೆ ಏನಲೆ ಮಾದಿಗ ಸೂಳೆಮಗನೆ ನಮ್ಮ ಎದುರು ಜಿದ್ದು ಗೆದ್ದಾಗಿನಿಂದ ಊರಲ್ಲಿ ನಿನ್ನ ಸೊಕ್ಕು ಬಾಳ ಆಗಿದೆ ಅಂದಾಗ ಪಿರ್ಯಾದಿ ನಾನೇನು ಮಾಡಿದ್ದೇನೆ ಅಂತ ಕೇಳಿದ್ದಕ್ಕೆ ಆರೋಪಿತರೆಲ್ಲರು ಕೈಯಿಂದ ಬಡಿಗೆಯಿಂದ ಹಾಗೂ ಕಲ್ಲಿನಿಂದ ಮತ್ತು ಕಬ್ಬಿಣದ ರಾಡಿನಿಂದ ಎದೆಗೆ ಟೊಂಕಕ್ಕೆ ಹಾಗೂ ಬಲಗಾಲ ಪಾದಕ್ಕೆ & ತಲೆಗೆ ಹೊಡೆದು ಗುಪ್ತಗಾಯಪಡಿಸಿದ್ದು ಬಿಡಿಸಲು ಬಂದ ತಾಯಿ ಹಣಮವ್ವ ಹೆಂಡತಿ ದೇವಮ್ಮ, ಅಣ್ಣನ ಹೆಂಡತಿ ಶಾಂತಮ್ಮ ಇವರಿಗೂ ಸಹ ಆರೋಪಿತರು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿಯನ್ನು ಸ್ವೀಕರಿಸಿಕೊಂಡು ಮರಳಿ ಠಾಣೆಗೆ 3 ಪಿಎಮಕ್ಕೆ ಬಂದು ಸದರ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 235/18 ಕಲಂ: 143, 147, 148, 341, 323, 324, 504, 506, 149 ಐಪಿಸಿ & 3(1) (ಆರ್) (ಎಸ್) (ಡಬ್ಲೂ) ಎಸ್ಸಿ ಎಸ್ಟಿ ಪಿಎ ಆಕ್ಟ 1989 ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 62/2017 ಕಲಂ 279, 337, 338 ಐಪಿಸಿ ;- ದಿನಾಂಕ 03/09/2018 ರಂದು ಸಾಯಂಕಾಲ 4-30 ಪಿ.ಎಂ.ಕ್ಕೆ ಫಿಯರ್ಾದಿಯವರು ನಡೆಸಿಕೊಂಡು ಹೊರಟಿದ್ದ ಮೋಟಾರು ಸೈಕಲ್ ಸ್ಕೂಟಿ ನಂ.ಎಮ್.ಎಚ್-12, ಜೆ.ಡಿ-7515 ನೇದ್ದಕ್ಕೆ ಆರೋಪಿತ ತನ್ನ ಲಾರಿ ನಂಬರ ಕೆಎ-33, 8388 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಯ ತಂದೆ ಗಾಯಾಳು ನಾಗರೆಡ್ಡಿ ಇವರಿಗೆ ಬಲಗೈ ಮೊಣಕೈಗೆ ಭಾರೀ ರಕ್ತಗಾಯ, ಬಲಭುಜಕ್ಕೆ ಭಾರೀ ಗುಪ್ತಗಾಯ, ಮುಖದ ಬಲಭಾಗಕ್ಕೆ, ಬಲ ಹುಬ್ಬಿಗೆ ರಕ್ತಗಾಯವಾಗಿದ್ದು, ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಈ ಬಗ್ಗೆ ಲಾರಿ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.
Hello There!If you like this article Share with your friend using