Yadgir District Reported Crimes Updated on 01-09-2018

By blogger on ಶನಿವಾರ, ಸೆಪ್ಟೆಂಬರ್ 1, 2018

Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 186/2018  ಕಲಂ 279, 337, 338, 304 (ಎ) ಐ.ಪಿ.ಸಿ;- ದಿನಾಂಕ 31-08-2018 ರಂದು ಮೃತಳು ಮತ್ತು ಇತರೇ ಗಾಯಾಳುಗಳಾದ 1) ಶಂಕರ ತಂದೆ ಬಸಪ್ಪಾ ಕೊಕಲೋರ ವಯಾ:35  ಜಾ: ಕಬ್ಬಲಿಗೇರ ಸಾ: ಕಟಗಿ ಶಹಾಪೂರ 2)ಮರೆಮ್ಮಾ ಗಂಡ ಶರಣಪ್ಪಾ ಕೋಟ್ರಕಿ ವಯಾ:60 ಜಾ: ಕಬ್ಬಲಿಗೇರ ಸಾ: ಕಟಗಿ ಶಹಾಪೂರ ಇವರೆಲ್ಲರೂ ಸಂತೆ ಮಾಡುವ ಸಲುವಾಗಿ ಯಾದಗಿರಿ ಬರುವ ಕುರಿತು ತಮ್ಮ ಗ್ರಾಮದ ಆರೋಪಿ ಗಂಗಪ್ಪಾ ತಂದೆ ಮಹಾದೇವಪ್ಪ ಇತನ ಟಂಟಂ ಕೆ.ಎ-33/9665 ನೆದ್ದರಲ್ಲಿ ಕುಳಿತು ಹತ್ತಿಕುಣಿ ಮಾರ್ಗವಾಗಿ ಯಾದಗಿರಿ ಕಡೆಗೆ ಬರುವಾಗ ಆರೋಪಿ ಗಂಗಪ್ಪಾ ತಂದೆ ಮಹಾದೇವಪ್ಪ ಇತನು ತನ್ನ ಟಂಟಂ ಕೆ.ಎ-33/9665 ನೆದ್ದನ್ನು ಯಡ್ಡಳ್ಳಿ ಗ್ರಾಮದಲ್ಲಿ ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಯಡ್ಡಳ್ಳಿ ಗ್ರಾಮದಲ್ಲಿ ಆರೋಪಿತನು ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು 10-15 ಎ.ಎಮ್ ಕ್ಕೆ ರಸ್ತೆಯ ಮೇಲೆ ನಡೆದುಕೊಂಡು  ಗಾಯಾಳು ಸಾಯಿಕುಮಾರ ತಂದೆ ಶರಣಪ್ಪಾ ಎಂಪಾಡೋರ ವಯಾ:6 ಸಾ: ಯಡ್ಡಳ್ಳಿ ಇತನಿಗೆ ಡಿಕ್ಕಿಪಡಿಸಿ ಅಲ್ಲೇ ಟಂಟಂ ಪಲ್ಟಿ ಮಾಡಿದ್ದರಿಂದ  ಈ ಘಟನೆಯಲ್ಲಿ ಮೃತಳಾದ  ಶ್ರೀಮತಿ ಈರಮ್ಮಾ ಗಂಡ ರಾಮಣ್ಣಾ ನಾಟೇಕಾರ ವಯಾ:38 ಉ:ಕೂಲಿ ಜಾ: ಕಬ್ಬಲಿಗೇರ ಸಾ: ಕಟಗಿ ಶಹಾಪೂರ ತಾಜಿ:ಯಾದಗಿರಿ ಮತ್ತು ತನ್ನ ಚಾಲಕ ಸಾ: ಕಟಗಿ ಶಹಾಪೂರ ಇವಳು ಮತ್ತು ಇತರೇ 4 ಜನರ ಗಾಯಾಳುಗಳು ಬಾರಿ ಮತ್ತು ಸಾದಾ ಗಾಯಗಳು ಹೊಂದಿದಾಗ ಅವರಿಗೆ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಮೃತ ಶ್ರೀಮತಿ ಈರಮ್ಮಾ ಗಂಡ ರಾಮಣ್ಣಾ ನಾಟೇಕಾರ 11-40 ಎ.ಎಮ್ ಕ್ಕೆ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತಪಟ್ಟಿದ್ದು ಇರುತ್ತದೆ ಅಂತಾ ವಗೈರೆ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 186/2018  ಕಲಂ 279, 337, 338, 304 (ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 319/2017 ಕಲಂ: ಕಲಂ..143,147,148,323,324,354,504,506 ಸಂ. 149 ಐಪಿಸಿ;-ದಿನಾಂಕ:31-08-2018 ರಂದು 3-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ದೇವಮ್ಮ ಗಂಡ ಅಯ್ಯಪ್ಪ ಕುರಕುಂದಿ ವಯಸ್ಸು:30 ವರ್ಷ, ಉದ್ಯೋಗ:ಒಕ್ಕಲುತನ ಜಾತಿ:ಕುರುಬ ಸಾ||ದೇವತ್ಕಲ್ ನಾನು ನನ್ನ ಪತಿ ಅಯ್ಯಪ್ಪ ನಿನ್ನೆ ದಿನಾಂಕ:30-08-2018 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ದೇವತ್ಕಲ್ ಗ್ರಾಮದ ಸೀಮಾಂತರದಲ್ಲಿರುವ ಜಮೀನು ಸವರ್ೆ ನಂ.64 ರಲ್ಲಿ ಹತ್ತಿಯ ಬೆಳೆಗೆ ಕಾಲುವೆ ನೀರು ಬಿಡಲು ಹೋಗಿದ್ದು ನನ್ನ ಮೇಲ್ಬಾಗದ ಜಮೀನಿನ ಲೀಸದಾರರಾದ ಮಾನಪ್ಪ ತಂದೆ ಭೀಮಪ್ಪ ತಳವಾರ ಈತನು ಲೀಸ ಪಡೆದ ಜಮೀನಿನಿಂದ ನನ್ನ ಜಮೀನಿಗೆ ಬರುವ ಕಾಲುವೆ ನೀರನ್ನು ಬರದಂತೆ ಬಂದ ಮಾಡಿ ಹೊಸದಾಗಿ ಅಕ್ರಮವಾಗಿ ಕಾಲುವೆ ನಿಮರ್ಿಸಿಕೊಂಡು ಲೀಸ್ಗೆ ಪಡೆದ ಜಮೀನಿಗೆ ನೀರು ಬಿಡುತ್ತಿರುವದನ್ನು ನೋಡಿ ನಾನು ನನ್ನ ಪತಿ ನಮ್ಮ ಜಮೀನಿಗೆ ಬರುವ ಕಾಲುವೆ ನೀರನ್ನು ಯಾಕೆ ಬಂದ ಮಾಡಿರಿ ಎಂದು ನಾನು ಮತ್ತು ನನ್ನ ಪತಿ ಕೇಳಲು ಹೋದಾಗ ಮಾನಪ್ಪ ತಂದೆ ಭೀಮಪ್ಪ ತಳವಾರ, ರಾಮಪ್ಪ ತಂದೆ ಭೀಮಪ್ಪ ತಳವಾರ, ಮಲ್ಲಪ್ಪ ತಂದೆ ಬೀಮಪ್ಪ ತಳವಾರ ಮತ್ತು ಬಸವರಾಜ ತಂದೆ ಭೀಮಪ್ಪ ತಳವಾರ, ಭೀಮಪ್ಪ ತಂದೆ ರಾಮಪ್ಪ ತಳವಾರ ಎಲ್ಲರೂ ಸಾ||ದೇವತ್ಕಲ್ ಇವರೆಲ್ಲರೂ ಕೂಡಿಕೊಂಡು ನನಗೆ ಲೇ ಬೊಸಡಿ ನೀರು ಬಂದ ಮಾಡಿವಿ ನೋಡು ಏನು ಮಾಡಿಕೊಳ್ಳುತ್ತಿ ಮಾಡಿಕೊ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಪ್ಪ ತಂದೆ ಭೀಮಪ್ಪ ತಳವಾರ, ತಾಮಪ್ಪ ತಂದೆ ಭೀಮಪ್ಪ ತಳವಾರ ಇವರು ನನ್ನ ತಲೆಗೂದಲು ಹಿಡಿದು ಎಳೆದಾಡಿ ನನ್ನನ್ನು ದಬ್ಬಿ ನೆಲಕ್ಕೆ ಕೆಡವಿ ಪುನ: ನನಗೆ ತಮ್ಮ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಕೈ ಕಾಲುಗಳಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಸದರಿಯವರು ಮತ್ತು ಮಲ್ಲಪ್ಪ ತಂದೆ ಭೀಮಪ್ಪ ತಳವಾರ, ಬಸವರಾಜ ತಂದೆ ಭೀಮಪ್ಪ ತಳವಾರ, ಭೀಮಪ್ಪ ತಂದೆ ರಾಯಪ್ಪ ತಳವಾರ ಇವರೆಲ್ಲರೂ ನನ್ನ ಪತಿ ನನಗೆ ಹೊಡೆಯುವದನ್ನು ಬಿಡಿಸಿಕೊಳ್ಳುತ್ತಿರುವಾಗ ಇವರೆಲ್ಲರೂ ಸೇರಿ ನನ್ನ ಪತಿಗೆ ಕೈಯಿಂದ, ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ಬೀಮಪ್ಪ ತಂದೆ ರಾಮಪ್ಪ ಮತ್ತು ಬಸವರಾಜ ತಂದೆ ಭೀಮಪ್ಪ ಇವರು ನನಗೆ ನೆಲಕ್ಕೆ ಕೆಡವಿ ತಮ್ಮ ಕೈ ಕಾಲುಗಳಿಂದ ಹೊಡೆದು ಒದ್ದು ಒಳಪೆಟ್ಟು ಮಾಡಿರುತ್ತಾರೆ. ಈ ಜಗಳವನ್ನು ಬಾಜು ಜಮೀನಿನ ಮಾಲಿಕರಾದ 1) ಹಣಮಂತ್ರಾಯ ತಂದೆ ಯಂಕಪ್ಪ ಹುದ್ದಾರ ಮತ್ತು 2) ಹಣಮಂತ್ರಾಯ ತಂದೆ ಭಿಮಣ್ಣ ನಾಯ್ಕೋಡಿ ಸಾ:ದೇವತ್ಕಲ್ ಇವರು ಬಂದು ಜಗಳ ಬಿಡಿಸಿರುತ್ತಾರೆ. ಇಲ್ಲಿದ್ದಿದ್ದರೆ ಮೇಲಿನವರು ನಮ್ಮನ್ನು ಜೀವ ಸಹಿತ ಉಳಿಸುತ್ತಿರಲಿಲ್ಲ ನಂತರ ಕೆ ಕೆ ಹಾಕುತ್ತಾ ನೀರು ಬಂದ ಮಾಡವಿ ನೋಡಲೆ ಮಗನೇ ನೀರಿನ ವಿಷಯಕ್ಕೆ ಬಂದರೆ ನಿಮ್ಮನ್ನು ಖಲಾಸ ಮಾಡಿಬಿಡುತ್ತಿವಿ ಎಂದು ಎಲ್ಲರೂ ಬೆದರಿಕೆ ಹಾಕಿ ಕೆಕೆ ಹಾಕುತ್ತಾ ಊರ ಕಡೆ ಹೋಗಿರುತ್ತಾರೆ. ಆದ್ದರಿಂದ ತಾವು ಮೇಲಿನವರ ವಿರುದ್ದ ಪ್ರಕರಣ ದಾಖಲಿಸಿ ಸೂಕ್ರ ಕಾನೂನಿನ ಕ್ರಮ ಕೈಗೊಳ್ಳಲು ವಿನಂತಿ ನಿನ್ನೆ ಗ್ರಾಮದ ಹಿರಿಯರು ಪ್ರಕರಣ ದಾಖಲಿಸಬೇಡಿ ತಿಳಿಸಿ ಹೇಳಿದ್ದರಿಂದ ನಾನು ಮೇಲಿನವರ ವಿರುದ್ದ ಪ್ರಕರಣ ದಾಖಲಿಸಿರಲಿಲ್ಲ. ಇಂದು ನಾನು ತಡವಾಗಿ ಈ ಪ್ರಕರಣ ದಾಖಲಿಸಿರುತ್ತೆನೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 152/2018 ಕಲಂ, 279,  338,  ಐಪಿಸಿ ಸಂ. 187 ಐ.ಎಂ.ವ್ಹಿ ಆಕ್ಟ್;- ದಿನಾಂಕ: 31/08/2018 ರಂದು 5-30 ಪಿಎಮ್ಕ್ಕೆ ಠಾಣೆಯಲ್ಲಿದ್ದಾಗ ಶ್ರೀ. ಶರಣಗೌಡ ಹೆಚ್.ಸಿ-155 ರವರು ಕಲಬುರಗಿಯ  ಬಸವೇಶ್ವರ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ವಸೂಲಾದ ಮೇರೆಗೆ ಸದರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ತಂದೆಯಾದ ಪಿಯರ್ಾದಿದಾರನ ಹೆಳಿಕೆಯ ಸಾರಂಶವೆನಂದರೆ ನಿನ್ನೆ ದಿನಾಂಕ:30/08/2018 ರಂದು ಉಕ್ಕನಾಳ ಗ್ರಾಮದ ನಮ್ಮ ಸಂಬಂದಿಕರ ಮನೆಯಲ್ಲಿ ಪಂಕ್ಷಶ್ನ್ ಇದ್ದ ಕಾರಣ ನನ್ನ ಹೀರಿಯ ಮಗನಾದ ನಾಗರಾಜ ತಂದೆ ಮಲ್ಲಪ್ಪ @ ಮಲ್ಲಣ್ಣ ವ|| 29 ಈತನು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ಉಕ್ಕನಾಳಕ್ಕೆ ಹೋಗಿದ್ದನು.
        ಹೀಗಿದ್ದು ದಿನಾಂಕ:30/08/2018 ರಂದು 05:30 ಪಿ.ಎಂ ಸುಮಾರಿಗೆ ನಮ್ಮ ಅಳಿಯ ಶ್ರೀ ಶಂಬುಲಿಂಗ ತಂದೆ ಸಿದ್ದಣ್ಣ ಅಂಗಡಿ ಸಾ|| ಉಕ್ಕನಾಳ ಇವರು ಪೋನ ಮಾಡಿ, ನಾಗರಾಜ ಈತನಿಗೆ ಉಕ್ಕನಾಳ ಕ್ರಾಸ ಹತ್ತಿರ 05:00 ಪಿ.ಎಂ ಸುಮಾರಿಗೆ ರಸ್ತೆ ಅಪಘಾತವಾಗಿದೆ, ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದೇವೆ. ಬಾ ಅಂತ ಹೇಳಿದ ಮೆರೆಗೆ. ನಾನು ಮತ್ತು ನನ್ನ ಹೆಂಡತಿ ದೇವಕ್ಕೆಮ್ಮಾ ಹಾಗೂ ನಮ್ಮೂರಿನ ರಮೇಶ ತಂದೆ ಕಾಶಿರಾಯ ಕೋಳಕೂರ ಎಲ್ಲರೂ ಕೂಡಿ ದಿನಾಂಕ 30/08/2018 ರಂದು ಸಾಯಂಕಾಲ ಶಹಾಪೂರಕ್ಕೆ ಬರುವಷ್ಟರಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗಿದ್ದು ಗೋತ್ತಾಗಿ ರಾತ್ರಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಬಂದು ಶಂಬುಲಿಂಗ ರವರಿಗೆ ವಿಚಾರಿಸಲಾಗಿ. ಶಂಬುಲಿಂಗ ಇವರು ತಿಳಿಸಿದ್ದೆನಂದರೆ, ನಿನ್ನೆ ದಿನಾಂಕ 30/08/2018 ರಂದು ಮದ್ಯಾಹ್ನ 01:00 ಪಿ.ಎಂ ಸುಮಾರಿಗೆ ಶಹಾಪೂರಕ್ಕೆ ಎಂಗೇಜಮೆಂಟಿಗೆ ನಾನು ಮತ್ತು ಶಿವಶರಣಪ್ಪ ತಂದೆ ಬಸಪ್ಪ ಅಂಗಡಿ ಸಾ|| ಉಕ್ಕನಾಳ, ಇಬ್ಬರೂ ಕೂಡಿ ಒಂದು ಮೋಟಾರ ಸೈಕಲ ಮೇಲೆ ಮತ್ತು ನಾಗರಾಜ ಈತನು ಮೋಟಾರ ಸೈಕಲ ನಂ. ಕೆ.ಎ-33 ಎಸ್-9123 ನೇದ್ದರ ಮೇಲೆ ಶಹಪೂರಕ್ಕೆ ಹೋಗಿದ್ದೇವು. ನಂತರ ಶಹಾಪೂರದಿಂದ ಉಕ್ಕನಾಳ ಗ್ರಾಮಕ್ಕೆ ಬರುವಾಗ, 05:00 ಪಿ.ಎಂ ಸುಮಾರಿಗೆ ಉಕ್ಕನಾಳ ಕ್ರಾಸ ದೊರಿಗುಡ್ಡದ ಹತ್ತಿರ ನಾಗರಾಜ ಇತನು ತನ್ನ ಮೋಟಾರ ಸೈಕಲ ನಂ.ಕೆ.ಎ-33-ಎಸ್-9123 ನೇದ್ದನ್ನು ತೆಗಿದುಕೊಂಡು ನಮ್ಮಕಿಂತಲು ಸ್ವಲ್ಪ ಮುಂದೆ ಹೋಗುತ್ತಿದ್ದ, ನಾನು ಮತ್ತು ಶಿವಶರಣಪ್ಪ ಇಬ್ಬರು ಹಿಂದೆ ಹೋಗುತ್ತಿದ್ದೆವು. ನಾಗರಾಜ ಈತನು ಉಕ್ಕನಾಳ ಊರಲ್ಲಿ ಹೋಗಲು ಕ್ರಾಸ್ದಲ್ಲಿ ಹೋಗುವಾಗ ಚಾಮನಾಳ ಕಡೆಯಿಂದ ಒಂದು ಟಿಪ್ಪರು ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ನಾಗರಾಜನ ಬೈಕಗೆ ಡಿಕ್ಕಿ ಪಡಿಸಿದ್ದರಿಂದ ಬೈಕ ಮತ್ತು ನಾಗರಾಜ ಈತನು ಟಿಪ್ಪರಿನ ಕೇಳಗೆ ಬಿದ್ದಿದ್ದು ಇರುತ್ತದೆ, ಅಲ್ಲೇ ಕ್ರಾಸ ಹತ್ತಿರ ಹಿಂದೆ ಹೊಗುತ್ತಿದ್ದ ನಾವು ಅಂದರೆ ಶಂಬುಲಿಂಗ ಮತ್ತು ಶಿವಶರಣಪ್ಪ ತಂದೆ ಬಸಪ್ಪ ಅಂಗಡಿ ಸಾ|| ಉಕ್ಕನಾಳ, ಇಬ್ಬರೂ ಕೂಡಿ ಹೋಗಿ ಎಬ್ಬಸಿದ್ದು ನಾಗರಾಜನಿಗೆ ತಲೆಗೆ ಭಾರಿ ರಕ್ತಗಾಯ, ಗುಪ್ತಗಾಯವಾಗಿ ಕಿವಿಯಿಂದ ರಕ್ತ ಬರುತ್ತಿತ್ತು. ನಂತರ ಟಿಪ್ಪರ ವಾಹನವನ್ನು ನೋಡಲಾಗಿ ಅದರ ನಂ. ಕೆ.ಎ-33 ಎ.8853 ಇದ್ದು ಅಲ್ಲೆ ಇದ್ದ ಅದರ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸುರೇಶ ತಂದೆ ಬಾಬುಗೌಡ ಬಿರೆದಾರ ಸಾ: ನೀರಲಗಿ ಅಂತಾ ತಿಳಿಸಿದ, ನಾವು ಗಾಯಾಳುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಸದರಿ ವಾಹನ ಚಾಲಕ ಸುರೇಶ ಈತನು ವಾಹನವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಯಾರೋ ಪೋನ ಮಾಡಿದ್ದರಿಂದ 108 ಅಂಬೂಲೆನ್ಸ ವಾಹನ ಬಂದಿದ್ದು ನಾವು ಸದರ ಗಾಯಳು ನಾಗರಾಜ ಇತನನ್ನು ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿದೇವು, ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ತಿಳಿಸಿದ್ದು. ನಾನು ನನ್ನ ಮಗನ್ನು ನೋಡಲಾಗಿ ನನ್ನ ಮಗನಿಗೆ ತಲೇಯ ಹಿಂಬಾಗದಲ್ಲಿ ಭಾರಿ ರಕ್ತ ಗಾಯವಾಗಿದ್ದು, ತಲೆಯ ಮೇಲೆ ಭಾರಿಗುಪ್ತ ಪೆಟ್ಟಾಗಿ, ಕೀವಿಯಲ್ಲಿ ರಕ್ತ ಸ್ರಾವವಾಗಿದ್ದು ಮತ್ತು ಎಡಗಣ್ಣಿನ ಕೇಳಗೆ, ಹಣೆಗೆ ತರಚಿದ ಗಾಯವಾಗಿದ್ದು, ನನ್ನ ಮಗ ಮಾತಾನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ.  

       ಕಾರಣ ನನ್ನ ಮಗ ನಾಗರಾಜನ ಮೇಲೆ, ಟಿಪ್ಪರ ನಂ. ಕೆ.ಎ-33-ಎ-8853 ನೇದ್ದರ ಚಾಲಕ ಸುರೇಶ ತಂದೆ ಬಾಬುಗೌಡ ಬಿರೆದಾರ ಸಾ: ನೀರಲಗಿ ಈತನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ, ನನ್ನ ಮಗ ನಡೆಸಿಕೊಂಡು ಬರುತ್ತಿದ್ದ ಮೋಟಾರ ಸೈಕಲ ನಂ.ಕೆ.ಎ-33-ಎಸ್-9123 ನೇದ್ದೆಕ್ಕೆ ಡಿಕ್ಕಿ ಪಡಿಸಿ, ಅಪಘಾತ ಪಡಿಸಿ ಟಿಪ್ಪರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿರ್ಯಾಧಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 05-30 ಪಿಎಮ್ ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 152/2018 ಕಲಂ, 279, 338 ಐಪಿಸಿ ಸಂಗಡ 187 ಐ.ಎಂ.ವ್ಹಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.   



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!