Yadgir District Reported Crimes Updated on 13-07-2018

By blogger on ಶುಕ್ರವಾರ, ಜುಲೈ 13, 2018


                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 134/2018 ಕಲಂ. 363 IPC;- ದಿನಾಂಕ; 12/07/2018 ರಂದು 6-00 ಪಿಎಮ್ ಗಂಟೆ ಸುಮಾರಿಗೆ  ಪಿರ್ಯಾದಿ ಶ್ರೀ ಮನೋಹರ ತಂದೆ ಪಾಂಡು ಪವಾರ ವ;45 ಜಾ; ಲಂಬಾಣಿ ಉ; ಒಕ್ಕಲುತನ ಸಾ; ಖಾನಳ್ಳಿ ತಾಂಡಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರುಪಡಿಸಿದ್ದು ಸದಿರಿ ಅಜರ್ಿಯ ಸಾರಾಂಶವೆನೆಂದರೆ ನಾನು ಮನೋಹರ ತಂದೆ ಪಾಂಡು ಪವಾರ ವ;45 ಜಾ; ಲಂಬಾಣಿ ಉ; ಒಕ್ಕಲುತನ ಸಾ; ಖಾನಳ್ಳಿ ತಾಂಡಾ ಯಾದಗಿರಿ ಅರಿಕೆ ಮಾಡಿಕೊಳ್ಳುವುದೇನೆಂದರೆ ನನಗೆ ಎರಡು ಹೆಣ್ಣು, ಎರಡು ಗಂಡು ಮಕ್ಕಳಿದ್ದು ಅದರಲ್ಲಿ ಒಬ್ಬ ಸಚಿನ್ ತಂದೆ ಮನೋಹರ ಪವಾರ ವ;16 ವರ್ಷ ಅಂತಾ ಗಂಡು ಮಗನಿದ್ದು ಸದರಿಯವನು 3 ವರ್ಷಗಳಿಂದ ಯಾದಗಿರಿ ನಗರದ ಲಕ್ಷ್ಮೀ ನಗರದಲ್ಲಿರುವ ನನ್ ಅಳಿಯನಾದ ಮೌನೇಶ ತಂದೆ ಶಂಕರ ಚವ್ಹಾಣ  ಇವರ ಮನೆಯಲ್ಲಿದ್ದು ಈಗ ಯಾದಗಿರಿ ನಗರದ ಆರ್.ವಿ ಫ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ಹಿಗೀದ್ದು ದಿನಾಂಕ; 09/07/2018 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ಅಳಿಯ ಮೌನೇಶ ಈತನು ನನಗೆ ಫೋನಮಾಡಿ ತಿಳಿಸಿದ್ದೆನೆಂದರೆ ನಿನ್ನ ಮಗ ಸಚಿನ್ ಈತನು ಇಂದು ಬೆಳೆಗ್ಗೆ ಶಾಲೆಗೆ ಹೋಗಿ ಸಾಯಂಕಾಲ 5-00 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಬ್ಯಾಗ್ ಇಟ್ಟು ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದನು. ನಂತರ ನಾನು ಮತ್ತು ನನ್ನ ಹೆಂಡತಿ ಕವಿತಾ ಗಂಡ ಮನೋಹರ ಪವಾರ ಮರುದಿನ ದಿನಾಂಕ; 10/07/2018 ರಂದು ಬೆಳೆಗ್ಗೆ  ಯಾದಗಿರಿಗೆ ಬಂದು ನಮ್ಮ ಅಳಿಯ ಮೌನೇಶ ಈತನಿಗೆ ಸಚಿನ್ ಈತನ ಬಗ್ಗೆ ವಿಚಾರಿಸಿ ನಾನು ಮತ್ತು ಅಳಿಯ ಮೌನೇಶ ಕೂಡಿಕೊಂಡು ನಗರದ, ಬಸ್ ನಿಲ್ದಾಣ, ರೈಲ್ವೇಸ್ಟೇಷನ್ ಹಾಗೂ ಸಂಬಂಧಿಕರ ಊರುಗಳಲ್ಲಿ, ಇನ್ನಿತರೆ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಮಗ ಸಚಿನ್ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಎಲ್ಲಾಕಡೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದಿದ್ದು ಕಾರಣ ನನ್ನ ಮಗ ಸಚಿನ್ ತಂದೆ ಮನೋಹರ ಪವಾರ ವ;16 ವರ್ಷ ಈತನನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು, ಅಪಹರಣಕ್ಕೊಳಗಾದ ನನ್ನ ಮಗನ ಚಹರೆ ಪಟ್ಟಿ :- ಗೋಧಿ ಬಣ್ಣ, ಉದ್ದನೆಯ ಮುಖ, ಅಂದಾಜು 4 ಪೀಟ್ 5 ಇಂಚು ಎತ್ತರ ಸಾಧಾರಣ ಮೈಕಟ್ಟು, ಮೈಮೇಲೆ ತಿಳಿನೀಲಿ ಬಣ್ಣದ.ಉದ್ದನೆಯ ತೋಳಿನ ಟೀ-ಶರ್ಟ, ಬಿಳಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದು ಇರುತ್ತದೆ. ಕಾರಣ ಸದರಿ ಅಪಹರಣಕ್ಕೊಳಗಾದ ನನ್ನ ಮಗನನ್ನು ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಇಂದು ದಿನಾಂಕ; 12/07/2018 ರಂದು 6-00 ಪಿಎಮ್ ಕ್ಕೆ ಠಾಣೆಯ ಗುನ್ನೆ ನಂ.134/2018 ಕಲಂ.363 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 133/2018 ಕಲಂ 498(ಎ), 323, 324, 504, 506 ಸಂ: 34 ಐಪಿಸಿ;- ದಿನಾಂಕ 12/07/2018 ರಂದು 06.40 ಪಿಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಪೋನ್ ಮೂಲಕ ಹರ್ಟ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀಮತಿ ರೇಣುಕಾ ಇವಳ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನನಗೆ ಸುಮಾರು 13 ವರ್ಷಗಳ ಹಿಂದೆ ನಮ್ಮ ನಡಿಹಾಳ ತಾಂಡಾದವರೆ ಆದ ಶಂಕರ ತಂದೆ ಭೀಮಾನಾಯಕ ರಾಠೊಡ ಇವರೊಂದಿಗೆ ಮದುವೆ ಆಗಿದ್ದು 01 ಗಂಡು 5 ಜನ ಹೆಣ್ಣು ಮಕ್ಕಳು ಇರುತ್ತಾರೆ. ನಮ್ಮ ಮದುವೆ ಆದಾಗಾಗಿನಿಂದ ನನ್ನ ಗಂಡ ಶಂಕರ, ನಮ್ಮ ಮಾವ ಭೀಮಾನಾಯಕ, ನಮ್ಮ ಅತ್ತೆ ತಿಪ್ಪಮ್ಮ ಮತ್ತು ಬಾವ ಗುರುನಾಥ ಇವರುಗಳು ನನಗೆ, ಇದ್ದೂರಲ್ಲಿಯೇ ಇರುವ ನಮ್ಮ ತವರು ಮನೆಗೆ ಹೋಗಬೇಡ ಅಂತಾ ಹೇಳಿದರು. ಆವಾಗಿನಿಂದ ನಾನು ನನ್ನ ಗಂಡನ ಮನೆಯಲ್ಲಿಯೇ ಇದ್ದು ಸಂಸಾರ ಮಾಡಿಕೊಂಡು ಬಂದಿರುತ್ತೇನೆ. ನನ್ನ ಗಂಡ ಪ್ರತಿ ದಿನ ನನಗೆ ಅಡುಗೆ ಮಾಡಲು ಬರುವದಿಲ್ಲ, ಕೆಲಸ ಮಾಡಲು ಬರುವದಿಲ್ಲ ಅಂತಾ ಮತ್ತು ನನ್ನ ಅತ್ತೆ, ಮಾವ ಹಾಗೂ ಬಾವ ಇವರುಗಳು ಮನೆಗೆಲಸ ಮಾಡಲು ಬರುವದಿಲ್ಲ ಅಂತಾ ಬೈಯುತ್ತಿದ್ದರು, ನಾನು ಇರಲಿ ಅಂತಾ ಅನುಸರಿಸಿಕೊಂಡು ಬಂದಿರುತ್ತೇನೆ. ನನಗೆ ಆರು ಜನ ಮಕ್ಕಳಾದರೂ ನನ್ನ ಹೆರಿಗೆಗೆ ಅಂತ ಒಂದು ಸಲವು ನನಗೆ ತವರುಮನೆಗೆ ಹೋಗಲು ಬಿಡದೆ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡಿರುತ್ತಾರೆ. ಇತ್ತಿಚಗೆ ನನ್ನ ಗಂಡ ಕುಡಿದು ಬಂದು ಕೈಯಿಂದ ಹೋಡೆವುವದು ಮತ್ತು ಒದೆಯುವದು ಮಾಡುತ್ತಿದ್ದನು. ಇಷ್ಟೆಲ್ಲ ಆದರೂ ನಾನು ನನ್ನ ಮಕ್ಕಳ ಭವಿಶ್ಯ ಮತ್ತು ಸಂಸಾರ ಹಾಳಾಗಬಾರದು ಅಂತಾ ಎಲ್ಲ ನೋವು ಅನುಭಿಸುತ್ತಾ ಸಹಿಸಿಕೊಂಡು ಬಂದಿರುತ್ತೇನೆ. 
        ಹಿಗೀದ್ದು ಇಂದು ದಿನಾಂಕ:12/07/2018 ರಂದು ನಾನು, ನನ್ನ ಗಂಡ 1) ಶಂಕರ ತಂದೆ ಭೀಮಾನಾಯಕ ರಾಠೋಡ, ಅತ್ತೆಯಾದ 2) ತಿಪ್ಪಮ್ಮ ಗಂಡ ಗಂಡ ಭೀಮಾನಾಯ್ಕ ರಾಠೋಡ, ಮಾವನಾದ 3) ಭೀಮಾನಾಯ್ಕ ತಂದೆ ತುಳಜಾರಾಮ ರಾಠೋಡ ಮತ್ತು ಬಾವನಾದ 4) ಗುರುನಾಥ ತಂದೆ ಭೀಮಾನಾಯಕ ರಾಠೋಡ ಸಾ: ನಡಿಹಾಳ ತಾಂಡಾ ಇವರೆಲ್ಲರೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದಾಗ ಅಂದಾಜು 03.30 ಪಿಎಂ ಸುಮಾರಿಗೆ ಮಳೆ ಬರುತ್ತಿತ್ತು ಆಗ ಸದರಿಯವರೆಲ್ಲರು ನಮ್ಮ ಹೊಲದಲ್ಲಿಯ ಗುಡಿಸಲದಲ್ಲಿ ಹೊದರು. ನಾನು ಮಳೆ ನಿಲ್ಲುವ ವರೆಗೆ ಗುಡಿಸಲಲ್ಲಿ ಹೋದರಾಯಿತು ಅಂತಾ ಹೋದಾಗ ನನ್ನ ಗಂಡ ಶಂಕರ ಈತನು ನೀನು ಯಾಕೆ ಬಂದಿ ಬೊಸಡಿ ಅಂತಾ ಅವಾಚ್ಯವಾಗಿ ಬೈಯತೊಡಗಿದ ಆಗ ನಾನು, ನಾನೂ ಮನುಷ್ಯಳು ಅಲ್ಲ ಏನು ಅಂತಾ ಅಂದಾಗ ಒಮ್ಮಿಗೆ ಸಿಟ್ಟಿಗೆ ಬಂದು ರಂಡಿ ನನಗೆ ಏದಿರು ಮಾತನಾಡುತ್ತಿ ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ನನ್ನ ಎದೆಗೆ, ತಲೆಗೆ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನಂತರ ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಮತ್ತು ಕಾಲುಗಳಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಆಗ ನಮ್ಮ ಅತ್ತೆ, ಮಾವ ಮತ್ತು ಬಾವ ಗುರುನಾಥ ಇವರುಗಳು ಕೂಡ ರಂಡಿ ಬೋಸಡಿ ಅಂತಾ ಅವಾಚ್ಯವಾಗಿ ಬೈಯ್ದಿರುತ್ತಾರೆ, ಆಗ ನಾನು ಅಳುವದನ್ನು ಕೇಳಿ ಕಿಶನ ತಂದೆ ಭೀಮಾನಾಯಕ ಚವ್ಹಾಣ ಮತ್ತು ದನಶಟ್ಟಿ ತಂದೆ ಹಣಮಂತ ರಾಠೋಡ ಇವರುಗಳು ಬಂದು ನೋಡಿ ಬಿಡಿಸಿಕೊಂಡಿರುತ್ತಾರೆ. ಆಗ ನನ್ನ ಗಂಡನು ಸೂಳಿ ನೀನು ಈ ವಿಷಯವನ್ನು ನಿನ್ನ ತಂದೆಗೆ ಹೆಳಿದರೆ ನಿನ್ನನ್ನು ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ನಂತರ ನಾನು ಮನೆಗೆ ಬಂದು ಹೆದರಿ ಸುಮ್ಮನೆ ಕುಳಿತಾಗ ಸುದ್ದಿಗೊತ್ತಾಗಿ ಬಂದ ನನ್ನ ತಂದೆಯಾದ ಮಿಠ್ಠು ತಂದೆ ತಿಪ್ಪಣ್ಣ ಚವ್ಹಾಣ, ಮತ್ತು ತಾಯಿಯಾದ ಶಾಣಿಬಾಯಿ ಗಂಡ ಮಿಠ್ಠು ಚವ್ಹಾಣ ಇಬ್ಬರಿಗೂ ನಡೆದ ವಿಷಯ ತಿಳಿಸಿದಾಗ ನನಗೆ ಆಸ್ಪತ್ರಗೆ ಕರೆದುಕೊಂಡು ಬಂದಿರುತ್ತಾರೆ.
     ನನಗೆ ಮದುವೆ ಆದಾಗಿನಿಂದ ವಿನಾಃಕಾರಣ ಬೈಯುತ್ತಾ, ಹೊಡೆಯುತ್ತಾ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಾ ಬಂದು ಇಂದು ಅವಾಚ್ಯವಾಗಿ ಬೈಯ್ದು, ಕೈಯಿಂದ ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿರುವ ಮೇಲಿನ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ 08.45 ಪಿಎಂ ಕ್ಕೆ ಬಂದು ಠಾಣಾ ಗುನ್ನೆ ನಂ: 133/2018 ಕಲಂ: 498(ಎ) 323, 324, 504, 506 ಸಂ: 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!