Yadgir District Reported Crimes Updated on 008-06-2018

By blogger on ಶುಕ್ರವಾರ, ಜೂನ್ 8, 2018


                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 125/2018 ಕಲಂ 379 ಐ.ಪಿ.ಸಿ;- ದಿನಾಂಕ;07/06/2018 ರಂದು 4-00 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ಸಿದ್ರಾಮರೆಡ್ಡಿ ತಂದೆ ಸಕ್ರೆಪ್ಪ ಸಕ್ರೆಪ್ಪನೊರ, ವಯ:56 ವರ್ಷ, ಜಾತಿ:ಲಿಂಗಾಯತ, ಉ||ಒಕ್ಕಲುತನ, ಸಾ||ಯಲ್ಹೇರಿ, ಜಿ||ಯಾದಗಿರಿ ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವುದೇನೆಂದರೆ, ನನ್ನ ಅಳಿಯನಾದ ರಾಚಪ್ಪ ತಂದೆ ಶೇಖರಪ್ಪ ಪಾಟೀಲ್, ಸಾ||ಕೊಂಕಲ್ ಹಾ||ವ||ಪುಣೆ ಈತನು ನನಗೆ ಸಾಲದ ಹಣ ಅಂತಾ ರೂ.180000/- ಹಣವನ್ನು ನನ್ನ ಯಾದಗಿರಿ ಶಾಖೆಯ ಕಾಪರ್ೋರೇಶನ್ ಬ್ಯಾಂಕ್ ಖಾತೆ ಸಂ:520101052416700 ನೇದ್ದಕ್ಕೆ ನಿನ್ನೆ ದಿನಾಂಕ:06/06/2018 ರಂದು ಹಾಕಿದ ಬಗ್ಗೆ ನನಗೆ ಫೋನ್ಮಾಡಿ ತಿಳಿಸಿದ್ದರು. ಇಂದು ದಿನಾಂಕ:07/06/2018 ರಂದು ಸದರಿ ಹಣವನ್ನು ಡ್ರಾ ಮಾಡಿಕೊಂಡುಬರುವ ಕುರಿತು ನಾನು ಮತ್ತು ನನ್ನ ಮಗನಾದ ಸತೀಶ ಕೂಡಿಕೊಂಡು ಯಾದಗಿರಿಗೆ ಬಂದು ಕಾಪರ್ೋರೇಶನ್ ಬ್ಯಾಂಕಿನಿಂದ ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ನನ್ನ ಖಾತೆಯಿಂದ ರೂ.180000/- ಹಣವನ್ನು ವಿಡ್ರಾ ಮಾಡಿಕೊಂಡು ಹಣವನ್ನು ಕೈಚೀಲದಲ್ಲಿ ಇಟ್ಟುಕೊಂಡು ಬ್ಯಾಂಕಿನಿಂದ ಯಾದಗಿರಿಯ ತಹಸಿಲ್ದಾರ ಕಾಯರ್ಾಲಯಕ್ಕೆ ಹೋಗಿ ಪಹಣಿ ಪತ್ರಿಕೆ ಪಡೆದುಕೊಂಡು ನಂತರ ತರಕಾರಿ ಮಾಕರ್ೇಟ್ಗೆ ಹೋಗಿ ತರಕಾರಿ ತೆಗೆದುಕೊಂಡು ಊರಿಗೆ ಹೋಗುವ ಕುರಿತು ಯಾದಗಿರಿ ಹೊಸಾ ಬಸ್ ನಿಲ್ದಾಣಕ್ಕೆ ಬಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಯೆಲ್ಹೇರಿಗೆ ಹೋಗುವ ಬಸ್ನಲ್ಲಿ ನಾನು ಮತ್ತು ನನ್ನ ಮಗ ಇಬ್ಬರು ಕುಳಿತಿದ್ದು, ಬಸ್ಸಿನ ಮುಂಭಾಗದ ಡ್ರೈವರ್ ಪಕ್ಕದಲ್ಲಿ ಇರುವ ಸಿಂಗಲ್ ಸೀಟಿನಲ್ಲಿ ನನ್ನ ಮಗ ಸತೀಶ್ ಕುಳಿತಿದ್ದು, ಅವನ ಹಿಂದಿನ ಸೀಟಿನಲ್ಲಿ ನಾನು ಕುಳಿತಾಗ ನನ್ನ ಮಗನು ಏಕಿಮಾಡಲು ಕೆಳಗೆ ಇಳಿದುಹೋದನು. ಆಗ ನಾನು ನನ್ನ ಹತ್ತಿರ ಇದ್ದ ಹಣದ ಚೀಲವನ್ನು ನನ್ನ ಮಗನು ಕುಳಿತಿದ್ದ ಮುಂದಿನ ಸಿಂಗಲ್ ಸೀಟಿನಲ್ಲಿ ಇಟ್ಟಿದ್ದೆನು. ನಂತರ ನನ್ನ ಮಗ ಬಸ್ಸಿನ ಹತ್ತಿರ ಬಂದು ಬಸ್ಸನ್ನು ಹತ್ತುತ್ತಿರುವಾಗ ನಾನು ಬೀಡಿಸೇದುವ ಕುರಿತು ಬಸ್ಸಿನಿಂದ ಕೆಳಗೆ ಇಳಿದೆನು. 5-10 ನಿಮಿಷದ ನಂತರ ನನ್ನ ಮಗ ಕೆಳಗೆ ಇಳಿದುಬಂದು ನನಗೆ ಹಣದ ಚೀಲ ಕಾಣಿಸುತ್ತಿಲ್ಲಾ ಅಂತಾ ತಿಳಿಸಿದಾಗ ಇಬ್ಬರು ಕೂಡಿ ಬಸ್ಸಿನಲ್ಲಿ ಹುಡುಕಾಡಿದ್ದು, ನಾನು ಇಟ್ಟಿದ್ದ ಹಣದ ಕೈಚೀಲ ಕಾಣಿಸಲಿಲ್ಲಾ. ಆಗ ನನ್ನ ಮಗ ತಿಳಿಸಿದ್ದೇನೆಂದರೆ, ನಾನು ಬಸ್ಸಿನಲ್ಲಿ ಹತ್ತುವಾಗ ನನಗಿಂತ ಮುಂದೆ ಒಬ್ಬ ಪ್ಯಾಂಟ ಶರ್ಟ ಧರಿಸಿದ ವ್ಯಕ್ತಿ ಬಸ್ಸಿನಲ್ಲಿ ಹತ್ತಿ ಡ್ರೈವರ್ ಪಕ್ಕದ ಇಂಜಿನ್ ಮೇಲೆ ಇಟ್ಟಿದ್ದ ನೀರಿನ ಬಾಟಲಿಯನ್ನು ತೆಗೆದುಕೊಂಡು ನಾನು ಕುಳಿತ ಸಿಂಗಲ್ ಸೀಟಿನ ಪಕ್ಕದಲ್ಲಿ ನಿಂತುಕೊಂಡು ನೀರನ್ನು ಕುಡಿಯುತ್ತ ನಿಂತಿದ್ದರಿಂದ ಅವನು ಇಳಿದ ನಂತರ ಮುಂದಿನ ಸೀಟಿಗೆ ಹೋದರಾಯಿತು ಅಂತಾ ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತೆನು. ನೀರು ಕುಡಿಯುತ್ತಿದ್ದ ವ್ಯಕ್ತಿಗೆ ಇವು ಕುಡಿಯುವ ನೀರು ಅಲ್ಲ ಅಂತಾ ಅಂದಾಗ ಆ ವ್ಯಕ್ತಿ ನೀರಿನ ಬಾಟಲಿಯನ್ನು ಅಲ್ಲಿಯೇ ಇಟ್ಟು ಕೆಳಗೆ ಇಳಿದು ಹೋದನು. ನಂತರ ಮುಂದಿನ ಸೀಟ್ ಹತ್ತಿರ ಹೋಗಲಾಗಿ ಹಣದ ಕೈಚೀಲ ಕಾಣಿಸಲಿಲ್ಲಾ ಅಂತಾ ತಿಳಿಸಿದನು. ನಂತರ ಇಬ್ಬರು ಕೂಡಿ ಗಾಭರಿಯಿಂದ ಬಸ್ಸಿನಿಂದ ಇಳಿದು ಸದರಿ ವ್ಯಕ್ತಿಯನ್ನು ಹುಡುಕಾಡಲಾಗಿ ಎಲ್ಲಿಯೂ ಕಾಣಿಸಲಿಲ್ಲಾ. ಸದರಿಯವನೇ ನಮ್ಮ ಕೈಚೀಲದಲ್ಲಿದ್ದ ಹಣವನ್ನು ದೂರದಿಂದ ನೋಡಿ ಹಣ ಕಳ್ಳತನಮಾಡಿಕೊಂಡು ಹೋಗುವ ಕುರಿತು ನಮ್ಮನ್ನು ಹಿಂಬಾಲಿಸಿ ಬಸ್ಸಿನಲ್ಲಿ ನೀರು ಕುಡಿಯುವ ನೆಪಮಾಡಿ ಬಸ್ಸಿನ ಮುಂದಿನ ಸೀಟಿನಲ್ಲಿಟ್ಟಿದ್ದ ನನ್ನ ಹಣವನ್ನು ಕೈಚೀಲದ ಸಮೇತ ಕಳ್ಳತನ ಮಾಡಿಕೊಂಡು ಹೋಗಿರಬಹುದು. ಈ ಘಟನೆಯು 2:40 ಗಂಟೆಯ ಸುಮಾರಿಗೆ ಆಗಿರಬಹುದು. ಸದರಿ ವ್ಯಕ್ತಿಯನ್ನು ನೋಡಿದಲ್ಲಿ ಗುತರ್ಿಸುತ್ತೇವೆ. ಕಾರಣ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಕಳುವಾದ ನನ್ನ ರೂ.180000/- ಹಣವನ್ನು ಪತ್ತೆಮಾಡಿಕೊಡಲು ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ;125/2018 ಕಲಂ;379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 313/2018 ಕಲಂ 279, 304(ಎ) ಐ.ಪಿ.ಸಿ  ಸಂಗಡ 187 ಐ.ಎಂ.ವಿ ಯಾಕ್ಟ ;- ದಿನಾಂಕ: 07/06/2018 ರಂದು 9.00.ಎಂ.ಕ್ಕೆ ಫಿಯರ್ಾದಿ ಶ್ರೀ ದತ್ತಾತ್ರಾಯ ತಂದೆ ದಯಾನಂದ ರಜಪೂತ್ ಸಾ|| ಗಣೇಶ ನಗರ ಶಹಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 07/06/2018 ರಂದು ಬೆಳಿಗ್ಗೆ 07:00 ಎ.ಎಂ ಸುಮಾರಿಗೆ ನಮ್ಮ ಮಾವ ಜೇವಗರ್ಿಗೆ ಹೋಗಿ ಬರುತ್ತೇನೆ ಅಂತ ಹೇಳಿ ನಮ್ಮ ಮೋಟರ ಸೈಕಲ್ ನಂ.ಕೆಎ-38 ಜೆ-5559 ನೇದ್ದನ್ನು ನಡೆಸಿಕೊಂಡು ಮನೆಯಿಂದ ಹೋದರು, ನಂತರ 07:20 ಎ.ಎಂ ಸುಮಾರಿಗೆ ಪರಿಚಯದ ಸುಧಾಕರ ತಂದೆ ಶಾಂತಪ್ಪ ಚಿಲ್ಲಾಳ ಸಾ|| ಶಹಾಪೂರ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದೆನಂದರೆ, ಇಂದು ಬೆಳಿಗ್ಗೆ ವಾಕಿಂಗ್ ಕುರಿತು ಮೋಟಗಿ ಲಾಡ್ಜವರೆಗೆ ಹೋಗಿ ಮರಳಿ ಬರುವಾಗ 07:15 ಎ.ಎಂ ಸುಮಾರಿಗೆ ಶಹಾಪೂರ-ಭೀ.ಗುಡಿ ಮುಖ್ಯೆ ರಸ್ತೆಯ ಶಹಾಪೂರ ನಗರದ ಅಲ್ಲಮಪ್ರಭು ಪೆಟ್ರೋಲ್ ಪಂಪ ಮುಂದೆ ಇದ್ದಾಗ ಶಹಾಪೂರ ಕಡೆಯಿಂದ ಒಂದು ಮೋಟರಸೈಕಲ್ಕ್ಕೆ ಹಿಂದಿನಿಂದ ಅಂದರೆ ಶಹಾಪುರ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಮೋಟರ ಸೈಕಲ್ ಸವಾರನು ಮೋಟರ ಸೈಕಲ್ ಸಮೇತ ರೋಡಿನಲ್ಲಿ ಬಿದ್ದನು ಹತ್ತಿರ ಹೋಗಿ ನೋಡಲಾಗಿ ರೋಡಿನಲ್ಲಿ ಬಿದ್ದಿದ್ದ ವ್ಯಕ್ತಿ ನಿಮ್ಮ ಮಾವ ಗೋರಕ್ ಬೂಯಿ ಇವರು ಇದ್ದು ಅವರ ತಲೆಯ ಹಿಂದೆ ಬಾರಿ ಒಳಪೆಟ್ಟು ಆಗಿದ್ದು, ಎಡ ಹಣೆಯ ಮೇಲೆ ತರಚಿದ ಗಾಯ, ಮೂಗಿನಿಂದ ಬಾರಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಮೋಟರ ಸೈಕಲ್ ನಂ.ಕೆಎ-38 ಜೆ-5559 ಇದ್ದು, ಅಲ್ಲಿಯೇ ಇದ್ದ ಕಾರನ್ನು ನೋಡಲಾಗಿ ಅದು ಮಾರುತಿ ರಿಟ್ಜ ಕಾರ ಇದ್ದು ಅದರ ನಂ. ಕೆಎ-33 ಎಂ-3128 ಇರುತ್ತದೆ. ಅದರ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಪ್ರಮೋದ ತಂದೆ ಗಂಟೆಪ್ಪ ಭಾಸುತ್ಕರ್ ಸಾ|| ಶಹಾಪೂರ ಅಂತ ಹೇಳಿ ಜನ ಸೇರುವದನ್ನು ನೋಡಿ ಅಲ್ಲಿಂದ ಓಡಿ ಹೋದನು ಅಂತ ಹೇಳಿದಾಗ ನಾನು ಮತ್ತು ನಮ್ಮ ಅತ್ತೆ ಅನಸೂಯಾ ಹಾಗೂ ನನ್ನ ಹೆಂಡತಿ ಮೋಹನ್ಬಾಯಿ ಮೂರು ಜನರು ಕೂಡಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ, ಮೇಲೆ ಹೇಳಿದಂತೆ ನಮ್ಮ ಮಾವನಿಗೆ ಗಾಯ ಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 313/2018 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 127/2018 ಕಲಂ, 147, 148, 323, 324, 504, 506 ಸಂ: 149 ಐಪಿಸಿ;- ದಿನಾಂಕ: 07/06/2018 ರಂದು 06.30 ಪಿಎಂ ಕ್ಕೆ ಪಿಯರ್ಾದಿ ಶಿವಪ್ಪ ತಂದೆ ಸಿದ್ರಾಮ ಇಂಗಳಗಿ ವಯಾ: 58 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ಕಾಡಂಗೇರಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೆಳಿಕೆ ಸಾರಂಶ ಏನಂದರೆ, ನಮ್ಮ ಮಗಳಾದ ನೀಲಮ್ಮ ಇವಳಿಗೆ ನಮ್ಮೂರಿನ ಈರಪ್ಪ ತಂದೆ ಯಮನಪ್ಪ ಕೊಡಂನಳ್ಳಿ ಇವನಿಗೆ ಕೊಟ್ಟು ಮದುವೆ ಮಾಡಿದ್ದು, ಸುಮಾರು 4-5 ವರ್ಷಗಳ ಹಿಂದೆ ನಮ್ಮ ಮಗಳಿಗೂ ನಮ್ಮ ಅಳಿಯನಿಗೂ ಸಂಸಾರ ನಡೆಯದ ಕಾರಣ ನಮ್ಮ ಮಗಳು ನಮ್ಮ ಮನೆಯಲ್ಲಿಯೇ ಇರುತ್ತಾಳೆ. ಹೀಗಿದ್ದು ಇಂದು ದಿನಾಂಕ: 07/06/2018 ರಂದು ನಮ್ಮ ಮಗಳು 03.45 ಗಂಟೆಯ ಸುಮಾರಿಗೆ ನಮ್ಮ ಹೊಸ ಮನೆಗೆ ನೀರು ಹೊಡೆದು ಬರುವಾಗ ನಮ್ಮೂರಿನ ಟಾವರ ಹತ್ತಿರ ಶಾಂತಮ್ಮ ಗಂಡ ಮಲ್ಕಪ್ಪ ಇವಳು ರಂಡಿ ಬೋಸಡಿ ಅಂತಾ ಬೈಯುತ್ತಾಳೆ ಅಂತಾ ಹೇಳಿದ್ದರಿಂದ ನಾನು 04.15 ಪಿಎಂ ಸುಮಾರಿಗೆ ನಮ್ಮೂರಿನ ಚಾಮನಾಳ ರಸ್ತೆಯಲ್ಲಿ ಇರುವ ಮೋಬೈಲ್ ಟಾವರ ಹತ್ತಿರ ಹೋಗಿ ಯಮನಪ್ಪ ತಂದೆ ಹಣಮಂತ್ರಾಯ ಕೊಡಂನಳ್ಳಿ ಇವರಿಗೆ ನಿಮ್ಮ ಹೆಣ್ಣುಮಕ್ಕಳಿಗೆ ಸುಮ್ಮನೆ ಬೈಯಬೇಡ ಅಂತ ಹೇಳು ಅಂತಾ ಹೇಳಿದ್ದಕ್ಕೆ, ಆರೋಪಿತರೆಲ್ಲರೂ ಅವಾಚ್ಯವಾಗಿ ಬೈಯ್ದು, ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ, ಕಾಲಿನಿಂದ ಒದ್ದು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಾರಂಶದ ಮೇಲಿಂದ ಗೋಗಿ ಪೊಲಿಸ್ ಠಾಣೆ ಗುನ್ನೆ ನಂ: 127/2018 ಕಲಂ: 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಮಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!