Yadgir District Reported Crimes Updated on 02-06-2018

By blogger on ಶನಿವಾರ, ಜೂನ್ 2, 2018


                                              Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 151/2017 ಕಲಂ: 379 ಐಪಿಸಿ.;- ದಿನಾಂಕ: 01/06/2018 ರಂದು ಬೆಳಗ್ಗೆ 7-30 ಗಂಟೆಗೆ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ನೀಡಿದ್ದೇನಂದರೆ ಇಂದು ದಿನಾಂಕ: 01/06/2018 ರಂದು ಬೆಳಗ್ಗೆ 6-30 ಗಂಟೆ ಸುಮಾರಿಗೆ ಅಜರ್ುಣಗಿ ಹಳ್ಳದಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಟ್ರ್ಯಾಕ್ಟರಗಳಲ್ಲಿ ಸಾಗಿಸುತ್ತಿದ್ದಾರೆ ಎಂದು ಖಚಿತ ಬಾತ್ಮಿ ಮೇಲಿಂದ ನಾನು ಮತ್ತು ಸಿಬ್ಬಂದಿಯವರಾದ ಪ್ರಕಾಶ ಹೆಚ್.ಸಿ 18, ಮಲ್ಲಿಕಾಜರ್ುನ ಪಿಸಿ 277 ರವರೊಂದಿಗೆ ಹೋಗಿ ದಾಳಿ ಮಾಡಿ ಎರಡು ಟ್ರ್ಯಾಕ್ಟರಗಳನ್ನು ಹಿಡಿದು ನಿಲ್ಲಿಸಲಾಗಿ, ಚಾಲಕರು ಓಡಿ ಹೋಗಿರುತ್ತಾರೆ. ಟ್ರ್ಯಾಕ್ಟರಗಳು ಮರಳು ತುಂಬಿದ್ದು ಇರುತ್ತದೆ. ಮುಂದೆ ನಿಲ್ಲಿಸಿದ ಟ್ರ್ಯಾಕ್ಟರ ನೊಂದಣಿ ನಂ. ಇಲ್ಲ ಇಂಜನ ನಂ. 006505439ಡಿಆರ್077ಎ ಟ್ರ್ಯಾಲಿ ನಂ. ಕೆಎ 33 ಟಿ 5040 ಇರುತ್ತದೆ. ಇನ್ನೊಂದು ಟ್ರ್ಯಾಕ್ಟರ ನೊಂದಣಿ ನಂ. ಇಲ್ಲ ಇಂಜನ ನಂ. ಎಮಿಎ.908ಎಎಸಜೆಜಿ2108150 ಇದ್ದು ಟ್ರ್ಯಾಲಿಗೆ ನಂಬರ ಇರುವುದಿಲ್ಲ. ಸದರಿ ಟ್ರ್ಯಾಕ್ಟರಗಳ ಚಾಲಕರಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಕಾರಣ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಯಾವುದೇ ರಾಜಧನ ಪಾವತಿಸದೆ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಿಸುತ್ತಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಈ ವರದಿ ನೀಡಲಾಗಿದೆ ಎಂದು ಕೊಟ್ಟ ಸರಕಾರಿ ತಫರ್ೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 151/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;-. 152/2018 ಕಲಂ: 366 (ಎ),109 ಸಂ 34 ಐಪಿಸಿ ಕಲಂ: 8 ಪೊಕ್ಸೊ ಎಕ್ಟ್ 2012;- ದಿನಾಂಕ: 01/06/2018 ರಂದು 4-30 ಪಿಎಮ್ ಕ್ಕೆ ಶ್ರೀಮತಿ ಹುಸೇನಬೀ ಗಂಡ ಚಾಂದಪಟೇಲ್, ವ:36, ಜಾ:ಮುಸ್ಲಿಂ, ಉ:ಕೂಲಿ ಕೆಲಸ ಸಾ:ಮನಗನಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನಂದರೆ ನನಗೆ 1) ನಾಜಮೀನ ವ:16 ವರ್ಷ, 2) ಯಾಸ್ಮೀನ ವ:14 ವರ್ಷ ಹೀಗೆ ಇಬ್ಬರೂ  ಹೆಣ್ಣುಮಕ್ಕಳಿರುತ್ತಾರೆ. ನನಗೆ ಬಬಲಾದ ಗ್ರಾಮಕ್ಕೆ ಲಗ್ನ ಮಾಡಿಕೊಟ್ಟಿದ್ದು, ಈಗ ಸುಮಾರು 10 ವರ್ಷಗಳ ಹಿಂದೆ ನನ್ನ ಗಂಡ ನನಗೆ ಬಿಟ್ಟು ಬೇರೆ ಲಗ್ನ ಮಾಡಿಕೊಂಡಿರುತ್ತಾನೆ. ಆಗಿನಿಂದ ನಾನು ನನ್ನ ತವರು ಮನೆ ಮನಗನಾಳ ಗ್ರಾಮದಲ್ಲಿ ನಮ್ಮ ತಾಯಿ ಖಾಜಾಬೀ ಗಂಡ ವಜೀರ ಪಟೇಲ್ ಮತ್ತು ತಮ್ಮನಾದ ಇಮಾಮಪಟೇಲ್ ತಂದೆ ವಜೀರ ಪಟೇಲ್ ಇವರೊಂದಿಗೆ ಅವರದೆ ಮನೆಯಲ್ಲಿ ವಾಸ ಇರುತ್ತೇನೆ. ನನ್ನ ಹಿರಿಮಗಳಾದ ನಾಜಮೀನ ಇವಳು ಖಾನಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ 2018 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರುತ್ತಾಳೆ. ನನ್ನ ಮಗಳು ಈ ಹಿಂದೆ ಶಾಲೆಗೆ ಹೋಗುತ್ತಿದ್ದಾಗ ಖಾನಾಪೂರ ಗ್ರಾಮದ ಸಾಬರೆಡ್ಡಿ ತಂದೆ ದೇವಿಂದ್ರಪ್ಪ ಯೆಲ್ಹೇರಿ ಜಾ: ಉಪ್ಪಾರ ಈತನು ಬಂದು ನನಗೆ ಪ್ರೀತಿ ಮಾಡು ಎಂದು ಪೀಡಿಸುತ್ತಿರುವುದಾಗಿ ನಮಗೆ ಹೇಳಿದಾಗ ನಾವು ಆಯಿತಮ್ಮ ಇನ್ನು ಕೆಲವೆ ದಿನಗಳಲ್ಲಿ ನಿನ್ನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರುತ್ತೇವೆ ಪರೀಕ್ಷೆ ಆದ ನಂತರ ನೀನು ಆ ಶಾಲೆಗೆ ಹೋಗುವುದೆ ಇಲ್ಲಲ್ಲ ಅದಕ್ಕೆ ಪರೀಕ್ಷೆ ಆಗುವವರೆಗೆ ಅವನೊಂದಿಗೆ ಯಾವುದೇ ಮಾತಾಡಬೇಡ ಎಂದು ತಿಳಿ ಹೇಳಿದ್ದೇವು. ಹೀಗಿದ್ದು ದಿನಾಂಕ: 29/05/2018 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನನ್ನ ಮಗಳು ನಾಜಮೀನ ನಮ್ಮ ಮನೆಯ ಎಡಗಡೆ ಭಾಗದಲ್ಲಿರುವ ಸರಕಾರಿ ಜಾಲಿ ಕಂಠಿಯಲ್ಲಿ ಸಂಡಾಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು. ಸಂಡಾಸಕ್ಕೆ ಹೋಗಿ ಸ್ವಲ್ಪ ಹೊತ್ತಾದರು ಅವಳು ಮರಳಿ ಬರದ ಕಾರಣ ನಾನು ಮತ್ತು ನಮ್ಮ ತಾಯಿ ಖಾಜಾಬೀ ಇಬ್ಬರೂ ನೋಡಲು ಹೋದಾಗ ಅಲ್ಲಿ 1) ಸಾಬರೆಡ್ಡಿ ತಂದೆ ದೇವಿಂದ್ರಪ್ಪ ಯೆಲ್ಹೇರಿ ಜಾ: ಉಪ್ಪಾರ, 2) ಅರುಣಕುಮಾರ ತಂದೆ ಭೀಮಣ್ಣ ಹೊರಮನಿ, ಜಾ: ಉಪ್ಪಾರ, 3) ಶಿವಶಂಕರ ತಂದೆ ಯಂಕಪ್ಪ ತಿಪ್ಪನಟ್ಟಗಿ, ಜಾ: ಉಪ್ಪಾರ ಎಲ್ಲರೂ ಸಾ:ಖಾನಾಪೂರ ಈ ಮೂರು ಜನರು ಇದ್ದು, ನನ್ನ ಮಗಳಿಗೆ ಸಾಬರೆಡ್ಡಿಯು ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಬಾ ಹೋಗೊಣ ಎಂದು ಅವನ ಗೆಳೆಯರ ಸಹಕಾರದಿಂದ ನನ್ನ ಮಗಳಿಗೆ ಪುಸಲಾಯಿಸುತ್ತಿದ್ದಾಗ ನನ್ನ ಮಗಳು ನಾಜಮೀನ ನಾನು ಬರುವುದಿಲ್ಲ, ನಾನು ಇನ್ನು ಚಿಕ್ಕವಳಿದ್ದೇನೆ ಎಂದು ಹೇಳುತ್ತಿದ್ದಾಗ 3 ಜನ ಸೇರಿ ನನ್ನ ಮಗಳಿಗೆ ಜಬರಸ್ತಿಯಿಂದ ಎರಡು ಕೈಗಳು ಹಿಡಿದುಕೊಂಡು ಅಪಹರಿಸಿಕೊಂಡು ಹೋಗುತ್ತಿದ್ದರು. ಆಗ ನಾವಿಬ್ಬರೂ ನೋಡಿ ಚೀರಾಡುವಾಗ ನಮ್ಮಣ್ಣ ಖಾಜಾಪಟೆಲ್ ತಂದೆ ವಜೀರ ಪಟೇಲ ಮತ್ತು ಸಂಬಂಧಿಕ ಅಹ್ಮೈದ ಪಟೇಲ್ ತಂದೆ ಸಲಿಂ ಪಟೇಲ್ ಇಬ್ಬರೂ ಬಂದು ಅವರಿಗೆ ಬೆನ್ನಹತ್ತಿದರು ಕೂಡಾ ಸಿಗದೆ ನನ್ನ ಮಗಳಿಗೆ ಜೋರಾವರಿಯಿಂದ ಅಪಹರಿಸಿಕೊಂಡು ಹೋದರು. ಆಗ ನಾನು ಮತ್ತು ನಮ್ಮ ಅಣ್ಣ ಖಾಜಾಪಟೆಲ್ ತಂದೆ ವಜೀರ ಪಟೇಲ ಮತ್ತು ಇತರರು ಕೂಡಿ ಸಾಬರೆಡ್ಡಿ ಗ್ರಾಮವಾದ ಖಾನಾಪೂರ ಮತ್ತು ಅವನ ಸಂಬಂಧಿಕರ ಗ್ರಾಮಗಳಾದ ಯಾದಗಿರಿ, ತಿಪ್ಪನಟಗಿ ಮುಂತಾದ ಕಡೆ ಹುಡುಕಾಡಿದರು ನನ್ನ ಮಗಳು ಮತ್ತು ಅಪಹರಿಸಿಕೊಂಡು ಹೋದವರು ಸಿಕ್ಕಿರುವುದಿಲ್ಲ. ನನ್ನ ಮಗಳ ಜನ್ಮ ದಿನಾಂಕ: 11/09/2002 ಇರುತ್ತದೆ. ಅವಳ ಚಹರೆಪಟ್ಟಿ ಈ ಕೆಳಗಿನಂತೆ ಇರುತ್ತದೆ. ಎತ್ತರ 5'-2, ಸಾಧಾರಣ ಮೈಕಟ್ಟು, ಕೆಂಪು ಬಣ್ಣ, ದುಂಡು ಮುಖ, ನೇರವಾದ ಮೂಗು, ಅಗಲವಾದ ಹಣೆ, ಕುತ್ತಿಗೆಯ ಕೆಳಗಡೆ ಚಿಕ್ಕ ಮಚ್ಛೆಯ ಗುರುತು ಇರುತ್ತದೆ. ಕಾರಣ ಅಪ್ರಾಪ್ತ ವಯಸ್ಕಳಾದ ನನ್ನ ಮಗಳು ನಾಜಮೀನ ಇವಳಿಗೆ ಸಾಬರೆಡ್ಡಿಯು ತಾನು ಲಗ್ನ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ಗೆಳೆಯರೊಂದಿಗೆ ಸೇರಿ ಅವರ ಪ್ರಚೋದನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಕೊಟ್ಟ ದೂರು ಅಜರ್ಿ ಇರುತ್ತದೆ. ನನ್ನ ಮಗಳಿಗೆ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 152/2018 ಕಲಂ: 366(ಎ),109 ಸಂ 34 ಐಪಿಸಿ ಮತ್ತು ಕಲಂ: 8 ಪೊಕ್ಸೊ ಎಕ್ಟ್ 2012 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 101/2018 ಕಲಂ 406, 420 ಐಪಿಸಿ;- ದಿನಾಂಕ:09/04/2018 ರಂದು 10 ಎಎಮ್ ಸುಮಾರಿಗೆ ಫಿರ್ಯಾದಿ ಸಂಗಡ 4 ಜನರು ತಮ್ಮ ತಮ್ಮ ಹೊಲದಲ್ಲಿ ಬೆಳೆದ ಒಟ್ಟು 194 ಕ್ವಿಂಟಲ್ ಒಣ ಮೆಣಸಿನಕಾಯಿಗಳನ್ನು ಪ್ರತಿ ಕ್ವಿಂಟಲ್ಗೆ 9,200 ರೂಗಳಂತೆ ಒಟ್ಟು 17,84,800 ರೂ ಗಳಿಗೆ ಆರೋಪಿತನು ಅವರಿಂದ ಖರೀದಿ ಮಾಡಿ ಸದರಿ ಹಣವನ್ನು 5-6 ದಿನಗಳಲ್ಲಿ ಅವರವರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮಾ ಮಾಡುತ್ತೇನೆ ಅಂತಾ ನಂಬಿಸಿ ಫಿರ್ಯಾದಿ ಸಂಗಡ 4 ಜನರ ಒಣ ಮೆಣಸಿನಕಾಯಿಗಳನ್ನು ಎರಡು ಲಾರಿಗಳಲ್ಲಿ ಲೋಡ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಹಣ ಜಮಾ ಮಾಡದೇ ನಂಬಿಕೆ ದ್ರೋಹ, ಮೋಸ ಮಾಡಿದ ಬಗ್ಗೆ ದೂರು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 54/2018 ಕಲಂ: 143, 147, 148, 323, 324, 504, 506 ಸಂ 149 ಐ.ಪಿ.ಸಿ.;- ದಿನಾಂಕ:30/05/2018ರಂದು ರಾತ್ರಿ ದೊಡ್ಡ ಚಾಪಿ ತಾಂಡಾದ ಬಾಲಪ್ಪ ತಂದೆ ಕೃಷ್ಣಪ್ಪ ಪವ್ಹಾರ ಇವರ ಮನೆಯ ಹತ್ತಿರ ಇದ್ದ ಪಿಯರ್ಾದಿಯ ತಮ್ಮನ ಮಗನಾದ ಪ್ರೇಮನಾಥ ತಂದೆ ಶಿವಪ್ಪ ಪವ್ಹಾರ ಇವರಿಗೆ ತಾಂಡಾದ ಮಹಾಂತೇಶ ಪವ್ಹಾರ, ಸಂತೋಷ ಪವ್ಹಾರ ಇವರು ಲೇ ನೀವು ದನಕ್ಕೆ ಹುಟ್ಟಿದ ಸೂಳಿ ನನ್ನ ಮಕ್ಕಳು ಅಂತಾ ಅಲ್ಕಾ ಶಬ್ದಗಳಿಂದ ಬೈದು ಜಗಳ ತೆಗೆದಾಗ ಬಾಲಪ್ಪ ಪವ್ಹಾರ ಈತನು ಪ್ರೇಮನಾಥ ಪವ್ಹಾರನಿಗೆ ನೀವು ಇಲ್ಲಿ ಜಗಳ ಮಾಡಿಕೊಳ್ಳಬೇಡಿ ನಿಮ್ಮ ಮನೆಗೆ ಹೋಗಿ ಅಂತಾ ಹೇಳಿದಾಗ ಪ್ರೇಮನಾಥನು ಆಯಿತು ಹೋಗುತ್ತೇನೆ ಅಂತಾ ಹೇಳಿ ತಾಂಡಾದ ಶ್ರೀ ಹುಲಿಗೆಮ್ಮ ದೇವಿಯ ಗುಡಿಯ ಮುಂದೆ ರಾತ್ರಿ 9:00 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಬಂದ ಬಾಲಪ್ಪ ಪವ್ಹಾರ ಈತನು ಪ್ರೇಮನಾಥನಿಗೆ ಲೇ ಸೂಳಿ ನನ್ನ ಮಗನೆ ನಿಮ್ಮದು ತಿಂಡಿ ಜಾಸ್ತಿ ಆಗೆದ ಅಂತಾ ಜಾಡಿಸಿ ದಬ್ಬಿಸಿಕೊಟ್ಟು ತಕ್ಕಡಿ ಕಲ್ಲಿನಿಂದ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲಿಯೇ ಇದ್ದ ಮಹಾಂತೇಶ ಪವ್ಹಾರ, ಸಂತೋಷ ಪವ್ಹಾರ, ತಿರುಪತಿ ಪವ್ಹಾರ, ಕಸ್ತೂರಿಬಾಯಿ ಪವ್ಹಾರ, ಕೃಷ್ಣಪ್ಪ ಪವ್ಹಾರ ಇವರುಗಳು ಪ್ರೇಮನಾಥನೊಂದಿಗೆ ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡಿದ್ದು ತಿರುಪತಿ ಪವ್ಹಾರ ಈತನು ಸೂಳಿ ಮಗನೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವಬೇದರಿಕೆ ಹಾಕಿದ್ದು ಇರುತ್ತದೆ ಅವರ ವಿರುದ್ಧ ಕಾನೂನು ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ಲಿಕೀತ ದೂರಿನ ಸಾರಾಂಶದ ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!