Yadgir District Reported Crimes Updated on 11-06-2018

By blogger on ಸೋಮವಾರ, ಜೂನ್ 11, 2018


                                                   Yadgir District Reported Crimes
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ ;- 105/2018 ಕಲಂ 143,147,148,323,324,504,506,354, ಸಂಗಡ 149ಐಪಿಸಿ;- ದಿನಾಂಕ 09.06.2018 ರಂದು 3:30 ಪಿ ಎಂ ಕ್ಕೆ ನಾನು ಪಿ ಎಸ್ ಐ ಸಾಹೇಬರ ಆದೇಶದ ಮೇರೆಗೆ ನೀಲಪ್ಪ ತಂದೆ ಯಲ್ಲಪ್ಪ ಬಾಚಿಹಾಳ , ಯಲ್ಲಪ್ಪ ತಂದೆ ನಿಂಗಪ್ಪ ಬಾಚಿಹಾಳ , ರಾಯಮ್ಮ ಗಂಡ ಯಲ್ಲಪ್ಪ ಬಾಚಿಹಾಳ ಸಾ: ಎಲ್ಲರೂ ಜುಮಾಲಪೂರ ರವರ ಎಂ ಎಲ್ ಸಿ ವಿಚಾರಣೆಗಾಗಿ ಲಿಂಗಸೂರ ಪೊಲೀಸ್ ಠಾಣೆಗೆ ಹೋಗಿ ಎಸ್ ಹೆಚ್ ಒ ರವರಿಂದ ಸದರಿ ಗಾಯಾಳುಗಳ ಎಂ ಎಲ್ ಸಿ ಯಾದಿ ಪಡೆದುಕೊಂಡು ನಂತರ ಆಸ್ಪತ್ರೆಗೆ ಬೇಟಿ ನಿಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳಿಗೆ ವಿಚಾರಿಸಿದ್ದು ಗಾಯಾಳುಗಳ ಪೈಕಿ ಒಬ್ಬನಾದ ನೀಲಪ್ಪ ತಂದೆ ಯಲ್ಲಪ್ಪ ಬಾಚಿಹಾಳ ಈತನು ತಮಗೆ ಹೊಡೆಬಡೆ ಮಾಡಿದ ಬಗ್ಗೆ ಹಿರಿಯರೊಂದಿಗೆ ವಿಚಾರಿಸಿ ನಾಳೆ ದಿನ ಪಿಯರ್ಾದಿ ಕೊಡುವದಾಗಿ ತಿಳಿಸಿದ್ದರಿಂದ ನಾನು ಲಿಂಗಸೂರದಲ್ಲಿಯೇ ಉಳಿದುಕೊಂಡು ಈ ದಿವಸ ಬೇಳಿಗ್ಗೆ ಪುನಃ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ನೀಲಪ್ಪ ತಂದೆ ಯಲ್ಲಪ್ಪ ಬಾಚಿಹಾಳ ವ: 35 ವರ್ಷ ಜಾ: ಕುರಬರ ಉ:ಒಕ್ಕಲುತನ ಸಾ:ಜುಮಾಲಪೂರ ಈತನಿಗೆ ವಿಚಾರಿಸಿ ಬೇಳಿಗ್ಗೆ 9:00 ಗಂಟೆಯಿಂದ 10:00 ಗಂಟೆಯ ವರೆಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಸದರಿಯವನ ಹೇಳಿಕೆಯೊಂದಿಗೆ ಮದ್ಯಾಹ್ನ 12:00 ಪಿ ಎಂ ಕ್ಕೆ ಠಾಣೆಗೆ ಬಂದಿದ್ದು ಸದರ ಪಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿ ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ ನನಗೆ ನಮ್ಮೂರ ಬೇಡರ ಜಾತಿಯ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಹಾಗೂ ಅವರ ಸಂಬಂದಿಕರ ಪರಿಚಯ ಗುರುತು ಇರುತ್ತದೆ ದಿನಾಂಕ 08.06.2018 ರಂದು ಶುಕ್ರವಾರ ದಿವಸ ಮದ್ಯಾಹ್ನ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಈತನು ನಮ್ಮಮನೆಯ ಮುಂದಿನ ರಸ್ತೆಯ ಮೇಲೆ ಅವಾಚ್ಯವಾಗಿ ಒದರಾಡುತ್ತಾ ಎರಡು ಮೂರು ಸಲ ತಿರುಗಾಡಿದ್ದು ಇದರಿಂದ ನಾನು ಅವನಿಗೆ ಯಾಕೆ ಒದರಾಡುತ್ತಾ ನಮ್ಮ ಮನೆಯ ಮುಂದೆ ತಿರುಗಾಡುತ್ತಿ ಅಂತಾ ಕೇಳಿದ್ದಕ್ಕೆ ಅವನು ನನಗೆ ಮಗನೆ ನಾನು ಮನಸ್ಸಿಗೆ ಬಂದಹಾಗೆ ಒದರಾಡುತ್ತಾ ತಿರುಗಾಡುತ್ತೇನೆ ನೀ ಯಾವನೇ ನನಗೆ ಕೇಳಲಿಕ್ಕೆ ಅಂತಾ ಅಂದಿದ್ದು ಅದಕ್ಕೆ ನಾನು ಸುಮ್ಮನಾಗಿ ನಮ್ಮ ಮನೆಯೊಳಗೆ ಹೊದೇನು.
       ಹೀಗಿರುವಾಗ ದಿನಾಂಕ 08.06.2018 ರಂದು ಶುಕ್ರುವಾರ ದಿನ ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿ ರಾಯಮ್ಮ ತಂದೆ ಯಲ್ಲಪ್ಪ ಮೂರು ಜನರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಿದ್ದಾಗ ನಮ್ಮೂರ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಹಾಗೂ ಅವರ ಸಂಬಂದಿಕರಾದ ಮಾಂತೇಶ ತಂದೆ ಅಂಬ್ರೇಶ ಗಡ್ಡೇರ , ಅಂಬ್ರಪ್ಪ ತಂದೆ ಬಸಪ್ಪ ಗಡ್ಡೇರ , ಲವಾ ತಂದೆ ಅಮರಪ್ಪ ಗಡ್ಡೇರ, ಕುಶಾ ತಂದೆ ಅಮರಪ್ಪ ಗಡ್ಡೇರ, ಬಸಮ್ಮ ಗಂಡ ಅಮರಪ್ಪ ಗಡ್ಡೇರ , ರೇಣುಕಾ ತಂದೆ ಹಣಮಂತ್ರಾಯ ಗಡ್ಡಿ, ಛಾಯಮ್ಮ ತಂದೆ ಅಮರಪ್ಪ ಗಡ್ಡಿ, ಗುಬ್ಬಮ್ಮ ತಂದೆ ಅಮರಪ್ಪ ಗಡ್ಡಿ, ಇವರೆಲ್ಲರೂ ಗುಂಪಾಗಿ ನಮ್ಮಮನೆಯ ಮುಂದೆ ರಸ್ತೆಯ ಮೇಲೆ ಬಂದವರೆ ನನಗೆ ಬೊಸುಡಿ ಮಗನೆ ನಾನು ಊರಲ್ಲಿ ತಿರುಗಾಡಿದರೇ ನನಗೆ ಏಕೆ ತಿರುಗಾಡುತ್ತಿ ಅಂತಾ ಕೇಳುತ್ತಲೇ ಸುಳಿಮಗನೇ ಇವತ್ತು ನಿನಗೆ ಬಿಡುವದಿಲ್ಲ ಒಂದು ಗತಿ ಕಾಣಿಸುತ್ತೇವೆ ಅಂತಾ ಅಂದವರೆ ಅವರಲ್ಲಿಯ ಹಲವಪ್ಪನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದು ಮಾಂತೇಶನು ತನ್ನ ಕೈಯಲ್ಲಿಯ ಕಲ್ಲಿನಿಂದ ಜೋರಾಗಿ ನನ್ನ ಬಾಯಿಯ ಮಲೆ ಹೊಡೆದಿದ್ದು ಇದರಿಂದ ನನ್ನ ಮೇಲಿನ ತುಟಿಗೆ ರಕ್ತಗಾಯವಾಗಿದ್ದು ಬಸಮ್ಮ ಗಂಡ ಅಮರಪ್ಪ ಇವರು ನನಗೆ ಕೈಯಿಂದ ಕಪಾಳದ ಮೇಲೆ ಹೊಡೆದಿದ್ದು ಆಗ ಬುಡಿಸಲು ಬಂದು ನನ್ನ ತಾಯಿ ರಾಮಮ್ಮ ಗಂಡ ಯಲ್ಲಪ್ಪ ಬಾಚಿಹಾಳ ಮತ್ತು ನನ್ನ ತಂದೆ ಯಲ್ಲಪ್ಪ ತಂದೆ ನಿಂಗಪ್ಪ ಬಾಚಿಹಾಳ ಇವರಿಗೆ ಸುಳೆ ಮಕ್ಕಳೆ ಬಿಡಿಸಲಿಕ್ಕೆ ಬಂದಿರೇನು ಅಂತಾ ಅಂದವರೇ ಅವರಲ್ಲಿಯ ರೇಣುಕಾ ಮತ್ತು ಗುಬ್ಬಮ್ಮ ರವರು ತಮ್ಮ ಕೈಯಲ್ಲಿಯ ಬಡಿಗೆಯಿಂದ ನನ್ನ ತಾಯಿಯ ಬಲಗಣ್ಣಿನ ಉಬ್ಬಿನ ಮೇಲೆ ಮತ್ತು ಹಣೆಗೆ ಹಾಗೂ ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಮತ್ತು ಬಸಮ್ಮ ಗಂಡ ಅಮರಪ್ಪ ಇವರು ನನ್ನ ತಾಯಿಯ ಬೆನ್ನಿನ ಮೇಲೆ ಬಾಯಿಯಿಂದ ಕಚ್ಚಿ ರಕ್ತಗಾಯ ಪಡಿಸಿದ್ದು ಅಲ್ಲದೆ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಈತನು ನನ್ನ ತಾಯಿಯ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು ನನ್ನ ತಂದೆ ಯಲ್ಲಪ್ಪನಿಗೆ ಅಂಬ್ರಪ್ಪ ತಂದೆ ಬಸಪ್ಪ ಗಡ್ಡೇರ ಈತನು ಬೆನ್ನಿನ ಮೇಲೆ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ಹೊಡೆದು ಗಾಯ ಪಡಿಸಿದ್ದು ಮತ್ತು ಲವ ಹಾಗೂ ಕುಶಾ ರವರು ನನ್ನ ತಂದೆಗೆ ಬಾಯಿಯಿಂದ ಕಚ್ಚಿ ಕೈಗಳಿಗೆ ಗಾಯಪಡಿಸಿದ್ದು ಆಗ ನಾವುಮೂರು ಜನರು ಚಿರಾಡಲು ಮನೆಯಲ್ಲಿ ಇದ್ದ ನನ್ನ ತಮ್ಮ ಮಲ್ಲೇಶಿ ತಂದೆ ಯಲ್ಲಪ್ಪ ಬಾಚಿಹಾಳ ಹಾಗೂ ನಮ್ಮೂರ ಪರಮಣ್ಣ ತಂದೆ ಬಸಪ್ಪ ಕಕ್ಕೇರಿ, ಮತ್ತು ಮಕಳೆಮ್ಮ ಗಂಡ ನಂದಪ್ಪ ಬಾಚಿಹಾಳ ರವರು ಬಂದು ನೋಡಿ ಬಿಡಿಸಿದ್ದು ಇವರು ಬಿಡಿಸದಿದ್ದರೆ ಅವರೆಲ್ಲರೂ ನಮಗೆ ಇನ್ನು ಹೊಡೆಯುತ್ತಿದ್ದರು ಹೋಗುವಾಗ ಅವರೆಲ್ಲರೂ ಸುಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳದಿರಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ರಾತ್ರಿ ಇದ್ದುದರಿಂದ ಮನೆಯಲ್ಲಯೇ ಉಳಿದು ನಿನ್ನೆ ದಿನ ಇಲ್ಲಿಗೆ ಬಂದು ಮೂರು ಜನರು ಉಪಚಾರಕ್ಕಾಗಿ  ಸೇರಿಕೆಯಾಗಿದ್ದು ಕಾರಣ ನಮಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 9 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 105/2018 ಕಲಂ 143,147,148,323,324,504,506,354, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 57/2018 ಕಲಂ: 143, 147, 148, 323, 324, 354, 504, 506 ಸಂ 149 ಐ.ಪಿ.ಸಿ. ಯಣ್ಣಿವಡಗೇರಾ ಸೀಮಾಂತರದ ಹೊಲದ ಸವರ್ೆ ನಂ:80ನೇದ್ದಕ್ಕೆ ಸಂಬಂದಿಸಿದಂತೆ ಪಿಯರ್ಾದಿ ಮತ್ತು ಸಂಗಪ್ಪ ಧರೆಣ್ಣವರ ಇವರ ನಡುವೆ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರದಲ್ಲಿ ಪ್ರಕರಣವು ವಿಚಾರಣೆಯಲ್ಲಿರುತ್ತದೆ ಇದರಿಂದ ಆರೋಪಿಯು ವೈಮನಸ್ಸು ಬೆಳೆಸಿಕೊಂಡಿದ್ದು ಪಿಯರ್ಾದಿ ಅಳಿಯನ ಮನೆಗೆ ಪಿಯರ್ಾದಿ ಮತ್ತು ಪಿಯರ್ಾದಿ ಮಗ ಬಸಪ್ಪನು ಕೂಡಿ ದಿನಾಂಕ:09/06/2018ರಂದು 07-00 ಗಂಟೆಯ ಸುಮಾರಿಗೆ ತಮ್ಮ ಗ್ರಾಮದ ಬಸವರಾಜ ತಂದೆ ಈರಬಸಪ್ಪ ಪ್ಯಾಟಿ ಇವರ ಚಹದ ಅಂಗಡಿ ಮುಂದೆ ಹೋಗುತ್ತಿದ್ದಾಗ ಬಂದ ಆರೋಪಿತರು ಪಿಯರ್ಾದಿಗೆ  ಲೇ ಭೋಸ್ಮಡಿ ನನ್ನ ಮಕ್ಕಳೆ ನೀವು ನಮ್ಮ ಜಮೀನು ಬಿಟ್ಟು ಕೊಡುತ್ತಾ ಇಲ್ಲ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಬೈದು ಜಗಳ ತೆಗೆದು ಪಿಯರ್ಾದಿಗೆ ಆರೋಪಿತರಾದ ಸಂಗಪ್ಪ, ಸಾಬಣ,್ಣ ಹಣಮಪ್ಪ ಕೂಡಿ ಪಿಯರ್ಾದಿಗೆ ಜಾಡಿಸಿ ದಬ್ಬಿ ಸೀರೆ ಜಗ್ಗಾಡಿ ಕೈಯಿಂದ ಹೊಡೆದಿದ್ದು ಪಿಯರ್ಾದಿಯ ಮಗನಿಗೆ ಅಬಲೆಪ್ಪ ಈತನು ತಕ್ಕೆ ಕುಸ್ತಿಗೆ ಬಿದ್ದು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿಯ ಸಾರಾಂಶ ಇರುತ್ತದೆ.
 ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 206/2018 ಕಲಂ341, 323, 504, 506 ಐಪಿಸಿ;- ದಿನಾಂಕ 10/06/2018 ರಂದು 2-30 ಪಿ ಎಮ್ ಕ್ಕೆ ಶಾಂತಗೌಡ ತಂದೆ ಯಮನಪ್ಪಗೌಡ ಪಾಟೀಲ ವ|| 50 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ದೋರನಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮ ಮನೆ ಹಾಗು ಪ್ರಭುಗೌಡ ತಂದೆ ಮಲ್ಲಪ್ಪಗೌಡ ಪಟೀಲ ಇವರ ಮನೆ ಆಜು ಬಾಜು ಇದ್ದು ಸುಮಾರು 10 ವರ್ಷಗಳ ಹಿಂದೆ ನಾನು ಮನೆ ಕಟ್ಟಿದ್ದು ಆಗ ನಮ್ಮ ಮನೆಯ ಹಿಂದೆ ಬಚ್ಚಲ ಮೋರಿ ಬಿಟ್ಟಿದ್ದು ಆದರೆ ಇಲ್ಲಿಯವರೆಗೆ ಸುಮ್ಮನಿದ್ದ ಪ್ರಭುಗೌಡ ಈಗ ನಮ್ಮ ಮನೆಯ ಹಿಂದನ ಬಚ್ಚಲ ಮೋರಿ ತಮ್ಮ ಜಾಗದಲ್ಲಿರುತ್ತದೆ ತೆಗೆಯಿರಿ ಅಂತ ದಿನಾಲು ನನ್ನೊಂದಿಗೆ ತಕರಾರು ಮಾಡುತ್ತಾ ಇದ್ದನು ಹೀಗಿದ್ದು ಇಂದು ದಿನಾಂಕ 10/06/2018 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಾನು ಬಚ್ಚಲ ಮೋರಿ ಸ್ವಚ್ಚ ಮಾಡು ಹೋಗುತ್ತಿದ್ದಾಗ ಸದರ ಪ್ರಭುಗೌಡ ತಂದೆ ಮಲ್ಲಪ್ಪಗೌಡ ಪಾಟೀಲ ಈತನು ನನಗೆ ತಡೆದು ಏನಲೇ ಬೋಸಡಿ ಮಗನೇ ಶಾಂತ್ಯಾ ನಿಮ್ಮ ಬಚ್ಚಲ ಮೋರಿ ನಮ್ಮ ಜಾಗದಲ್ಲಿದೆ ತೆಗೆ ಅಂದರೆ ಹಾಗೆಯೇ ಇಟ್ಟಿರುವಿಯಲ್ಲ ಮಗನೆ ಅಂತ ಅವಾಚ್ಯವಾಗಿ ಬೈಯುತ್ತಾ ಇದ್ದಾಗ ನಾನು ಸುಮಾರು ಹತ್ತು ವರ್ಷಗಳಿಂದ ಹಾಕಿದ ಬಚ್ಚಲು ಮೋರಿ ಹೇಗೆ ತೆಗೆಯಲಿ ಅಂತ ಅಂದಾಗ ಸೂಳೆ ಮಗನೇ ನಿಮ್ಮ ಜಾಗದಲ್ಲಿ ಸಂಡಾಸ ರೂಮ ಮಾಡುತ್ತೇನೆ ಏನು ಮಾಡಿಕೊಳ್ಳುತ್ತಿ ಮಾಡಿಕೋ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ ಹಾಗು ಬೆನ್ನಿಗೆ ಹೊಡೆದು ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದ್ದು ನನ್ನ ಮೈ ಮೇಲಿರುವ ಅಂಗಿ ಹರಿದು ಹಾಕುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಅಲ್ಲಿಸಾಬ ಮುಲ್ಲಾ ಹಾಗು ಶಿವನಗೌಡ ಪಾಟೀಲ ಇವರು ಬಂದು ಸದರಿಯವನು ಹೊಡೆಯುವದನ್ನು ನೋಡಿ ಬಿಡಿಸಿಕೊಂಡನು. ನಂತರ ಸದರಿಯವನು ಹೊಡೆಯುವದನ್ನು ಬಿಟ್ಟು ಮಗನೇ ನಮ್ಮ ಜಾಗದಲ್ಲಿಯ ಬಚ್ಚಲು ಮೋರಿ ತೆಗೆದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭೆದರಿಕೆ ಹಾಕಿ ಹೋಗಿದ್ದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 206/2018 ಕಲಂ 341,323,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!