Yadgir District Reported Crimes Updated on 01-06-2018

By blogger on ಶುಕ್ರವಾರ, ಜೂನ್ 1, 2018


                                        Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 265/2018 ಕಲಂ 143,147,148,323,324,355,504,506  ಸಂ 149  ಐಪಿಸಿ ಮತ್ತು ಕಲಂ. 3(1)(ಡಿ), 3(1)() ಖಅ ಖಖಿ ಕಂ ಂಅಖಿ 1989;- ದಿನಾಂಕ:31-05-2018 ರಂದು ಪಿ.ಎಂ.ಕ್ಕೆ ಶ್ರೀ ರೇವಣೆಪ್ಪ ತಂದೆ ಬಸಪ್ಪ ಚಲುವಾದಿ ಜಾತಿ:ಹೊಲೆಯ ವಯಸ್ಸು:24 ಉದ್ಯೋಗ: ಕೂಲಿ ಸಾ:ಕೋನಾಳ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:30-05-2018 ರಂದು ಸಮಯ 5-30 (ಸಾಯಂಕಾಲ) ಕ್ಕೆ ನಮ್ಮ ಊರಾದ ಕೋನಾಳದ ಅಂಬೇಡ್ಕರ ಚೌಕ ಹತ್ತಿರ ನಾನು ಕುಳಿತಿದ್ದಾಗ ನಮ್ಮ ಊರಿನವರೆ ಆದ 1) ಈರಣ್ಣಗೌಡ ತಂದೆ ಈರಪ್ಪ ಗುಡಿಮನಿ 2) ಬಸವಣಗೌಡ ತಂದೆ ವಿರುಪಣಗೌಡ 3) ಮಲ್ಲಣಗೌಡ ತಂದೆ ಪರಪ್ಪಗೌಡ 4) ಮುತ್ತಣಗೌಡ ತಂದೆ ಈರಣ್ಣಗೌಡ ಗುಡಿಮನಿ 5) ಮುದಕಣ್ಣಗೌಡ ತಂದೆ ಪರಪ್ಪಗೌಡ ಎಲ್ಲರೂ ಸಾ:ಕೋನಾಳ ಇದ್ದು, ಇವರೆಲ್ಲಾ ಬಂದವರೇ ಲೇ ಹೊಲೆಯ ಸೂಳಿ ಮಗನೆ ಕ್ರಿಕೇಟ ಆಡುವಾಗ ನಮ್ಮ ಹುಡಗನಿಗೆ ಬೈದಿಯಾ ಮಗನೇ ಅಂದವರೆ ಜಾತಿ ನಿಂದನೆ ಮಾಡುತ್ತಾ ಬಡಿಗೆ ಕಲ್ಲು ಚಪ್ಪಲಿಗಳಿಂದ ಹೊಡೆಯಲು ಪ್ರಾರಂಬಿಸಿದರು. ನಾನು ಅದೇಷ್ಟು ಗೋಗರೆದು ಇಲ್ಲಾ ಗೌಡ್ರೆ ನಾನು ನಿಮ್ಮ ಮಗನಿಗೆ ಏನು ಅಂದಿಲ್ಲಾ ಆತನೇ ನನಗೆ ಒದ್ದು ಹೊಲೆಯ ಸುಳಿ ಮಗನೇ ಅಂತಾ ಬೈದಿದ್ದಾರೆ ಅಂತ ಹೇಳಿದರು ಕೇಳಲಿಲ್ಲಾ ಸದರಿಯವರೆಲ್ಲಾ ನೆಲಕ್ಕೆ ಹಾಕಿ ಎದೆಗೆ ಒದ್ದರು ಚಪ್ಪಲಿಂದ ಹೊಡೆದರು ಈರಣ್ಣಗೌಡ ಜೋರಾಗಿ ಬೈಯುತ್ತಾ ಈ ಹೊಲೆಯ ಸೂಳಿ ಮಗನನ್ನು ಬಿಡಬ್ಯಾಡ್ರಿ ಅಂತ ಬಡಿಗೆಯಿಂದ ಹೊಡೆದನು. ಅಷ್ಟರಲ್ಲಿಯೆ ನನ್ನೆರಡು ಕೈಗಳನ್ನು ಹಿಡಿದುಕೊಂಡು ಮಲ್ಲಣಗೌಡ ಮತ್ತು ಮುದುಕಪ್ಪ ಹಾಗೂ ಮುತ್ತಣಗೌಡ ಬಡಿಗೆ ಕಲ್ಲುಗಳಿಂದ ಹೊಡೆದರು. ಅಲ್ಲಿಯೇ ಇದ್ದ ನನ್ನ ಕಾಕನವರಾದ ಶ್ರೀ ಯಮನಪ್ಪ ತಂದೆ ರಾಮಪ್ಪ ಗೌಂಡಿ ಸಾ:ಕೋನಾಳ ಹಾಗೂ ಶ್ರೀಮತಿ ಪವಿತ್ರ ಗಂಡ ಬೀಮಪ್ಪ ಹರಿಜನ ಇವರುಗಳು ಓಡಿ ಬಂದು ಬಿಡಿಸಿದರು. ಬಿಟ್ಟು ಹೋಗುವಾಗ ಲೇ ಹೊಲೆಯ ಸೂಳಿ ಮಗನೇ ಇಂದು ನೀನು ಬದಿಕಿಕೊಂಡೆ ಮುಂದೆ ನಿನ್ನ ಜೀವ ನಾವುಗಳೆಲ್ಲಾ ತಗೆಯದಿದ್ರೆ ನಾವುಗಳು ಜಾತಿ ಲಿಂಗಾಯತ ರಡ್ಡಿಗಳೆ ಅಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೊರಟು ಹೋದರು.  ಕಾರಣ ದಯಾಳುಗಳಾದ ತಾವುಗಳು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳಬೇಕೆಂದು ಕೆಳಿಕೊಳ್ಳುತ್ತೆನೆ ನಮ್ಮ ಹಿರಿಯರಿಗೆ ವಿಚಾರ ಮಾಡಿ ಇಂದು ಠಾಣೆಗೆ ಬಂದು ಅಜರ್ಿ ನಿಡಿದ್ದು ಇರುತ್ತದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 266/2018 ಕಲಂ 323,324,354,504,506 ಸಂ.34 ಐಪಿಸಿ;- ದಿನಾಂಕ:31-05-2018 ರಂದು 08-30 ಪಿ.ಎಂ.ಕ್ಕೆ ಶ್ರೀಮತಿ ಸಿದ್ದಮ್ಮ ಗಂ/ ಪರಪ್ಪಗೌಡ ಜಾಗಟಗಲ್ ವಯಸ್ಸು: 60 ಉದ್ಯೋಗ: ಹೊಲ ಮನೆ ಕೆಲಸ ಜಾತಿ: ಲಿಂಗಾಯತ ಸಾ|| ಕೋನ್ಹಾಳ ಕೋನ್ಹಾಳ ಗ್ರಾಮದಲ್ಲಿ ನಾನು ಮತ್ತು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಉಪಜೀವನ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ: 30-05-2018ರಂದು ಸಾಯಂಕಾಲ: 5:30 ಮನೆಯಲ್ಲಿ ಇದ್ದಾಗ ಕೋನ್ಹಾಳ ಗ್ರಾಮದ ಗೌಡ್ರ ಹೊಲದಲ್ಲಿ ಊರಿನ ಹುಡಗರು ಹಾಗೂ ನನ್ನ ಮಗಳ ಮಗನಾದ ಈರೇಶ ತಂ/ ಈರಣ್ಣ ಕ್ರೀಕೆಟ್ ಆಟವನ್ನು ಹಾಡುತ್ತಿದ್ದನು, ನಾನು ಆ ಸಮಯದಲ್ಲಿ ಮನೆಯಲ್ಲಿ  ಮನೆಕೆಲಸವನ್ನು ಮಾಡುತ್ತಿದ್ದಾಗ ನಮ್ಮ ಊರಿನ ರಾಜು ತಂ/ ಗೌಡಪ್ಪಗೌಡ ದೇಸಾಯಿ ಇತನು ಒಡುತ್ತಾ ನನ್ನ ಮನೆಗೆ ಬಂದು ನಿನ್ನ ಮೊಮ್ಮಗನ ಜೊತೆ ಗೌಡ್ರ ಹೊಲದಲ್ಲಿ ಕ್ರೀಕೆಟ್ ಹಾಡುವ ಸಮಯದಲ್ಲಿ ಮೇಲತೊರಿಸಿದ ರೇಣಪ್ಪ ಹಾಗೂ ಪ್ರಭು, ಬಸಪ್ಪ ಇವರ ನಿನ್ನ ಮೊಮ್ಮಗನಿಗೆ ಹೊಡೆಬಡೆ ಮಾಡುತ್ತಿದ್ದಾರೆಂದು ಈ ವಿಷಯವನ್ನು ತಿಳಿಸದನು ಅವಾಗ ನಾನು ಮನೆಕೆಲಸವನ್ನು ಬಿಟ್ಟು ಗೌಡ್ರ ಹೊಲ ಕಡೆ ಒಡಿಹೊದೆನು ಆವಾಗ ನನ್ನ ಮೊಮ್ಮಗನಿಗೆ ಈರೇಶ ಇತನಿಗೆ 1) ರೇಣಪ್ಪ ತಂ/ ಬಸಪ್ಪ ಕಾಮನಟಗಿ, 2) ಪ್ರಭು ತಂ/ ಬಸಪ್ಪ ಕಾಮಟನಗಿ 3) ಬಸಪ್ಪ ತಂ/ ರಾಮಪ್ಪ ಕಾಮನಟಗಿ ಇವರುಗಳು ನನ್ನ ಮೊಮ್ಮಗನಿಗೆ ನೆಲಕ್ಕೆ ಕೆಡವಿ ಹೊಡೆಬಡೆ ಮಾಡುತ್ತಿದ್ದರು ಸದರಿ ರೇಣಪ್ಪ ನನ್ನ ಮೊಮ್ಮಗನಿಗೆ ಕುತ್ತಿಗೆಯನ್ನು ಹಿಡಿದು ಲೇ ಹೊಕ್ಕಲಿಗ ಜಾತಿಯವನು ಎಷ್ಟು ತಿಂಡಿ ಅಂತ ಹೆಳಿ ಎದೆಗೆ ಮುಷ್ಟಿ ಕಟ್ಟಿ ಹೊಡೆದನು ಆವಾಗ ನನ್ನ ಮೊಮ್ಮಗ ನೆಲಕ್ಕೆ ಬಿದ್ದನು ನೆಲಕ್ಕೆ ಬಿದ್ದಾಗ ಪ್ರಭು ತಂ/ ಬಸಪ್ಪ ಕಾಮನಟಗಿ ಇತನು ನನ್ನ ಮೊಮ್ಮನಿಗೆ ಕಾಲಿನಿಂದ ಹೊಟ್ಟೆಗೆ ಹೊದ್ದನು ಆವಾಗ ನನ್ನ ಮೊಮ್ಮಗ ಚಿರಾಡುತ್ತಿರುವಾಗ ಬಸಪ್ಪ ಇತನು ಕುದಲವನ್ನು ಹೇಳೆದು ನೆಲದಿಂದ ಮೆಲಕ್ಕೆ ಎತ್ತಿ ದಬ್ಬಿಕೊಟ್ಟನು ಅವಾಗ ನನ್ನ ಮೊಮ್ಮಗ ನೆಲಕ್ಕೆ ಬಿದ್ದನು ನಾನು ನನ್ನ ಮೊಮ್ಮಗನ ಜೀವವನ್ನು ಇವರ ಕೈಯಿಂದ ಉಳಿಸಿಕೊಳ್ಳಲು ಒಡಿಹೊದೆನು ನಾನು ಎಕೆ ನನ್ನ ಮೊಮ್ಮಗನಿಗೆ ಹೊಡೆ ಬಡೆ ಮಾಡುತ್ತಿದ್ದಿರೆಂದು ಕೇಳಿದಾಗ ರೇಣಪ್ಪನು ಲೇ ಹೊಕ್ಕಲಿಗ ಸುಳೆ ಮಕ್ಕಳೆ ನಿಮ್ಮದು ಬಹಳಯಾಗಿದೆ ಎಂದು ನನಗೆ ಕಪಾಳಕ್ಕೆ ಒಡೆದನು ಅವಾಗ ನಾನು ಚಿರಾಡಿದೆ ಹಿಂದಿನಿಂದ ಪ್ರಭು ಬಂದು ಲೇ ಸುಳಿ ಮಕ್ಕಳೆ ಊರಗ ನಿಮ್ದು ಬಹಳವಾಗಿದೆ ಎಂದು ಅವಾಚ್ಯ ಶಬ್ಧಗಳಿಂದ ಇತನು ನನ್ನ ಕೈಯನ್ನು ಹಿಡಿದು ಜಗ್ಗಾಡಿ ನನ್ನ ಸೀರೆಯನ್ನು ಎಳೆದಾಡಿ ಅವಮಾನ ಮಾಡಿ ತನ್ನ ಕೈಯಲ್ಲಿ ಹಿಡಿದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು ಬಸಪ್ಪ ಇತನು ಕುದಲ ಹಿಡಿದು ಎಳೆದಾಡಿ ನೆಲಕ್ಕೆ ನುಗಿಸಿಕೊಟ್ಟಾಗ ನಾನು ನೆಲಕ್ಕೆ ಬಿದ್ದೆನು ಆವಾಗ ಎಲ್ಲರು ಸೇರಿಕೊಂಡು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆಯನ್ನು ಹಾಕುತ್ತಿದ್ದಾಗ ಅದೇ ಸಮಯಕ್ಕೆ ನಮ್ಮ ಊರಿನವರಾದ ರಾಮನಗೌಡ ತಂ/ ಶರಣಪ್ಪಗೌಡ ನಗನೂರ, ಪರಮಣ್ಣಗೌಡ ತಂ/ ಬಸಲಿಂಗಪ್ಪಗೌಡ ಸಜರ್ಾಪೂರ ಇಬ್ಬರು ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ. ನಂತರ ನಮ್ಮ ಮನೆಯಲ್ಲಿ ಬಂದು ನನ್ನ ಮಕ್ಕಳಿಗೆ ಹಾಗೂ  ಗ್ರಾಮದ ಹಿರಿಯರಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿಯನ್ನು ನಿಡಿದ್ದು ಇರುತ್ತದೆ. ನನಗೆ ಮತ್ತು ನನ್ನ ಮೊಮ್ಮಗನಿಗೆ ಹೊಡೆ ಬಡೆ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ಸೀರೆ ಎಳೆದು ಅವಮಾನ ಮಾಡಿ ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿದ, ಮೇಲೆ ಹೇಳಿದ ಮೂರು ಜನರ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 218/2018 ಕಲಂ 323, 324, 504, 506 ಸಂ. 34 ಐಪಿಸಿ;- ದಿನಾಂಕ 30.05.2018 ರಂದು ರಾತ್ರಿ 10.00 ಪಿ.ಎಂ ಸುಮಾರಿಗೆ ಮನೆ ಮುಂದೆ ತನ್ನ ಹೆತ್ತ ತಾಯಿಗೆ ತನ್ನ ತಮ್ಮ ಆರೋಪಿ ನಾರಾಯಣ ಈತನು ಅವಾಚ್ಯವಾಗಿ ಬೈಯುತ್ತಿದ್ದಾಗ ಆಗ ಪಿರ್ಯಾಧಿ ಮತ್ತು ಪಿರ್ಯಾಧಿಗೆ ಹೆಂಡತಿ ಆತನಿಗೆ ಬುದ್ದಿ ಮಾತು ಹೇಳಲು ಹೋದಾಗ ಪಿರ್ಯಾಧಿ ಇನ್ನೊಬ್ಬ ತಮ್ಮ ಆರೋಪಿ ದೇವ್ಯಾ ಮತ್ತು ಆತನ ಹೆಂಡತಿ ಅಡ್ಡಾ ಬಂದು ಪಿರ್ಯಾಧಿ ಜೊತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಕಪಾಳಕ್ಕೆ ಹೊಡೆದು ಕಲ್ಲಿನಿಂದ ಪಿರ್ಯಾಧಿಗೆ ತಲೆಗೆ ಹೊಡೆದು ರಕ್ತಗಾಯಪಡಿಸಿ ಪಿರ್ಯಾಧಿ ಹೆಂಡತಿ ಜಗಳ ಬಿಡಿಸಲು ಹೋದಾಗ ಆಕೆಗೂ ಸಹ ಕಟ್ಟಿಗೆ ಬಡಿಗೆಯಿಂದ ಬಲಗೈ ಹಸ್ತದ ಮೇಲೆ ಹೊಡೆದ ರಕ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 308/2018.ಕಲಂ 279.338. ಐ.ಪಿ.ಸಿ. ಮತ್ತು 187 ಐ.ಎಂ.ವಿ.ಯಾಕ್ಟ;- ದಿನಾಂಕ: 31-05/2018 ರಂದು 7-30 ಪಿ,ಎಂ ಕ್ಕೆ ಪಿಯರ್ಾದಿ ಮಹ್ಮದ ಶಕಿಲ್ ತಂದೆ ಮಹ್ಮದ ರಸಿದ ಉಲ್ ಹಸನ್ ವ|| 34 ಹೆಚ್,ಡಿ,ಎಫ್,ಸಿ,ಬ್ಯಾಂಕ ಮ್ಯಾನೆಂಜರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡಲ್ಲಿ ಬರೆದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ. ನಮ್ಮ ಬ್ಯಾಕಿನಲ್ಲಿ ಸೇಲ್ಸ ಆಫೀಸ್ರ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜಪ್ಪ ತಂದೆ ಹಣಮಂತ ಇವರು ದಿನಾಂಕ 30/05/2018 ರಂದು ಸಾಯಂಕಾಲ 7-40 ಗಂಟೆಯಗೆ ಕರ್ತವ್ಯ ಮುಗಿದ ನಂತರ ರಾಜಪ್ಪನು ತನ್ನ ಮೋಡರ್ ಸೈಕಲ್ ನಂ ಕೆಎ-33ಎಸ್-6081 ನೇದ್ದರ ಮೇಲೆ ಹೋದರು 7-50 ಪಿ.ಎಂ ಗಂಟೆಯ ಸುಮಾರಿಗೆ ವಿರೇಶ ತಂದೆ ವಿಶ್ವರಾದ್ಯ ಇವರು ನಮ್ಮ ಬ್ಯಾಂಕ ಮ್ಯಾನೇಂಜರ ಆದ ರವಿಂದ್ರ ರೆಡ್ಡಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ರಾಜಪ್ಪನು ತನ್ನ ಮೋಟರ್ ಸೈಕಲ್ ನಂ. ಕೆಎ-33ಎಸ್-6081 ನೇದ್ದರ ಮೇಲೆ ತನ್ನ ರೂಮಿಗೆ ಹೋಗುವಾಗ ಶಹಾಪೂರ- ಭೀ,ಗುಡಿ ಮುಖ್ಯರಸ್ತೆಯ ಮೇಲೆ 7-45 ಪಿ,ಎಂ ಕ್ಕೆ ಗೋಗಿ ಸ್ವಾಮೀ ಹೋಟೆಲ್ ಮುಂದೆ ರಾಜಪ್ಪನ ಮೋಟರ್ ಸೈಕಲ್ಕ್ಕೆ  ಶಹಾಪೂರ ಕಡೆಯಿಂದ ಯಾವದೊಂದು ಟಾಟಾ ಎಸಿ ವಾವನ ರಾಜಪ್ಪನ ಮೋಟರ್ ಸೈಕಲ್ಕ್ಕೆ ಅಪಘಾತಮಾಡಿ ವಾಹನ ನಿಲ್ಲಿಸದೆ ಬೀ,ಗುಡಿ ಕಡೆಗೆ ಹೋದನು ಅದರ ನಂಬರ ನೋಡಿರುವದಿಲ್ಲಾ ಅದರ ಚಾಲಕನಿಗೆ ನೋಡಿದರೆ ಗುತಿಸುತ್ತೆನೆ. ಸದರಿ ಅಪಘಾತದಲ್ಲಿ ರಾಜಪ್ಪ ತನ್ನ ಮೋಟರ್ ಸೈಕಲ್ ಹಾಕಿಕೊಂಡು ಬಿದ್ದನು ಅಲ್ಲಿ ಇದ್ದ ನಾನು ನೋಡಿ ಹೋಗಿ ರಾಜಪ್ಪನನ್ನು ನೋಡಿದಾಗ ತಲೆಗೆ, ಕಣ್ಣಿಗೆ, ಮತ್ತು ಮೂಗಿಗೆ, ಗಂಭಿರ ಸ್ವರೂಪವಾಗಿ ಪೆಟ್ಟುಬಿದ್ದು ಮೂಗು ಮತ್ತು ಬಾಯಿಯಲ್ಲಿ ರಕ್ತಬಂದಿದ್ದು ನಂತರ ಭೀ,ಗುಡಿ ಕಡೆಯಿಂದ ಒಂದು ಅಂಬುಲೆನ್ಸ ಬಂದ್ದಿದ್ದು ಅದರಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಶಹಾಪೂರ ಹೋರಟಿರುತ್ತೆನೆ ಅಂತ ಪೋನ ಮಾಡಿ ತಿಳಿಸಿದ್ದು ಆಗ ಬ್ಯಾಂಕಿನಲ್ಲಿ ರವಿಂದ್ರ ರೆಡ್ಡಿ ಮತ್ತು ನಾನು, ಚಂದ್ರಶೇಖರ ಎಲ್ಲರು ಕೂಡಿಕೊಂಡು ಸರಕಾರಿ ಆಸ್ಪತ್ರೆಗೆ ಹೋಗಿ ನೋಡಿ ವಿಚಾರಿಸಿ ವೈಧ್ಯಾದಿಕಾರಿಗಳು ಹೆಚ್ಚಿನ ಉಪಚಾರಕುರಿತು ಕಲಬುರಗಿಯ ಆಸ್ಪತ್ರೆಗೆ ಕರೆದು ಕೊಂಡು ಹೋಗಲು ತಿಳಿಸಿದ್ದರಿಂದ ನಾನು, ರವಿಂದ್ರರೆಡ್ಡಿ, ವಿರೇಶ, ಚಂದ್ರಶೇಖರ್ ಎಲ್ಲರು ಕುಡಿ ಅಂಬುಲೆನ್ಸನಲ್ಲಿ ಕಲಬುರಗಿಯ ಯುನೈಟೇಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ರಾಜಪ್ಪನ ತಂದೆ ತಾಯಿಗೆ ತಿಳಿಸಿದ್ದರಿಂದ ಅವರು ಕಲಬುರಗಿ ಆಸ್ಪತ್ರೆಗೆ ಬಂದ್ದಿದ್ದು ಅವರೊಂದಿಗೆ ವಿಚಾರಮಾಡಿ ತಡವಾಗಿ ಠಾಣೆಗೆ ಬಂದು ಅಜರ್ಿಸಲ್ಲಿಸುತ್ತಿದ್ದು ಇರುತ್ತದೆ. ರಾಜಪ್ಪ ತಂದೆ ಹಣಮಂತನಿಗೆ  ಅಪಘಾತ ಮಾಡಿದ ಯಾವುದೊಂದು ಟಾಟಾ ಎಸಿ ನಂಬರ ಗೋತ್ತಿರುವದಿಲ್ಲಾ ಸದರಿ ಟಾಟಾ ಎಸಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 308/2018 ಕಲಂ 279.338. ಐ.ಪಿ.ಸಿ. ಮತ್ತು 187 ಐ.ಎಂ.ವಿ.ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಕೆ ಕೈಕೊಂಡೆನು
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 40/2018 ಕಲಂ 279, 337, 338, 304(ಎ) ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 31-05-2018 ರಂದು ರಾತ್ರಿ 11.30 ಗಂಟೆಗೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಗಾಯಾಳು ಎಮ್ ಎಲ್ ಸಿ ಫೊನ್ ಮಾಹಿತಿ ನೀಡಿದ್ದು 11.45 ಪಿಎಮ್ ಕ್ಕೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಹೊಂದುತ್ತಿದ್ದ ಗಾಯಾಳು ಫಿರ್ಯಾದಿ ಶ್ರೀಮತಿ ಜ್ಯೋತಿ ಗಂಡ ಜಾನ್ ಪಾಲ್ ವಯ:25 ವರ್ಷ ಜಾತಿ: ಕ್ರಿಶ್ಚಿಯನ್ ಉದ್ಯೋಗ: ಮನೆಗೆಲಸ ಸಾ|| ನಜರತ್ ಕಾಲೋನಿ ಯಾದಗಿರಿ ಇವರ ಹೇಳಿಕೆಯನ್ನು 11.45 ಪಿಎಮ್ ದಿಂದ ಇಂದು ದಿನಾಂಕ 01-06-2018 ರಂದು ರಾತ್ರಿ 01.00 ಎಎಮ್ ದ ವರೆಗೆ ಪಡೆದುಕೊಂಡ ಹೇಳಿಕೆ ಸಾರಾಂಶವೇನೆಂದರೆ, ಮೇಲ್ಕಂಡ ವಿಳಾಸದ ನಿವಾಸಿಯಾದ ನಾನು ಮನೆಗೆಲಸ ಮಾಡಿಕೊಂಡು ಇರುತ್ತೇನೆ. ಹೀಗಿದ್ದು ಇಂದು ದಿನಾಂಕ 31-05-2018 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ಮತ್ತು ಸಂಬಂಧಿಕರು ಕೂಡಿಕೊಂಡು ಗಾಜರಕೋಟ್ ಗ್ರಾಮಕ್ಕೆ ಚಚರ್್ ಗೆ ಪ್ರಾರ್ಥನೆ ಸಲುವಾಗಿ ಒಂದು ಕಮಾಂಡರ್ ಜೀಪ ನಂ ಕೆಎ 36 ಎಮ್ 1306 ನೇದ್ದರಲ್ಲಿ ನಾನು ಮತ್ತು ನ್ನ ಗಂಡನಾದ ಪಾಸ್ಟರ್ ಜಾನ್ ಪಾಲ್, ಮಕ್ಕಳಾದ ಸ್ಟೀಫನ್ ಪೀಟರ್, ಸ್ಟೀಫನ್ ಪಾಲ್ ಮಗಳಾದ ಬ್ಲೆಸಿ ಹಾಗೂ ಸಂಬಂಧಿಕರಾದ ಸುಮಲತಾ ತಂದೆ ಸುನಿಲ್ ಕುಮಾರ, ವನಿತಾ ತಂದೆ ನರಸಪ್ಪ, ಶಿಲ್ಪಾರಾಣಿ ತಂದೆ ಮೋಹನ್ ರಾಜ್ ಶ್ವೇತಾ ತಂದೆ ಮೋಹನರಾಜ್, ಚಂದ್ರಕಲಾ ಗಂಡ ಸುನಿಲಕುಮಾರ, ದೇವರಾಜ ತಂದೆ ಪಿಳ್ಳೆಪ್ಪ, ಎಲಿಜ್ ಬೆತ್ ಗಂಡ ದೇವರಾಜ ಕೂಡಿಕೊಂಡು ಮೇಲ್ಕಂಡ ಕಮಾಂಡರ್ ಜೀಪ ಚಾಲಕನಾದ ಬಸವರಾಜ ತಂದೆ ಸಣ್ಣತಾಯಪ್ಪ ಈತನೊಂದಿಗೆ ಜೀಪಿನಲ್ಲಿ ಗಾಜರಕೋಟ್ ಗ್ರಾಮದ ಚಚರ್್ಗೆ ಸುಮಾರಿಗೆ ತಲುಪಿ, ಎಲ್ಲರೂ ಕೂಡಿ ಪ್ರಾರ್ಥನೆ ಮುಗಿಸಿಕೊಂಡು ಮರಳಿ ಅದೇ ಜೀಪಿನಲ್ಲಿ ಯಾದಗಿರಿಗೆ ಬರುತ್ತಿದ್ದಾಗ ಆಶನಾಳ ಗೇಟ್ ದಾಟಿ ಮುಂಡರಗಿ ಸಮೀಪ ಬರುತ್ತಿದ್ದಾಗ ನಮ್ಮ ಎದುರುಗಡೆ ಯಾದಗಿರಿ ಕಡೆಯಿಂದ ಒಬ್ಬ ಬೂದಿ ಟ್ಯಾಂಕರ್ ಚಾಳಕನು ತನ್ನ ಟ್ಯಾಂಕರ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ತನ್ನ ಸೈಡ್ ಅನ್ನು ಬಿಟ್ಟು ರಸ್ತೆಯ ಬಲಗಡೆಗೆ ಬಂದು ನಾವು ಹೊರಟಿದ್ದ ಕಮಾಂಡರ್ ಜೀಪಿಗೆ ಜೋರಾಗಿ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಯಾದಗಿರಿ ಕಡೆ ಹೊರಟಿ ನಮ್ಮ ಜೀಪ ನಮ್ಮ ಜೀಪ ತಿರುಗಿ ನಿಂತಿದ್ದು  ಸದರಿ ಅಪಘಾತದಲ್ಲಿ ನನಗೆ ಎಡಗೈ ಬಲಗೈಗೆ ತರಚಿದ ಗಾಯಗಳಾಗಿದ್ದು ಎದೆಗೆ ಗುಪ್ತ ಗಾಯಗಳಾಗಿದ್ದು, ನನ್ನ ಗಂಡನಾದ ಫಾಸ್ಟರ್ ಜಾನ್ ಪಾಲ ತಂದೆ ರಾಜರತ್ನ ವಯ:35 ವರ್ಷ, ಹಾಗೂ ಎಲಿಜ್ ಬೆತ್ ಗಂಡ ದೇವರಾಜ ವಯ:43 ವರ್ಷ ಮತ್ತು ಜೀಪ ಚಾಲಕ ಬಸವರಾಜ ತಂದೆ ಸಣ್ಣ ತಾಯಪ್ಪ ಸಾ: ಕೋಟಗೇರಾ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನುಳಿದು ಸ್ಟೀಫನ್ ಪಾಲ ಬ್ಲೆಸಿ, ಸುಮಲತಾ, ವನಿತಾ, ಶಿಲ್ಪಾರಾಣಿ, ಶ್ವೇತಾ, ಚಂದ್ರಕಲಾ, ದೇವರಾಜ ಹಾಗೂ ಸ್ಟೀಫನ್ ಪೀಟರ್ ಇವರಿಗೂ ಅಪಘಾತದಲ್ಲಿ ಭಾರಿ ಮತ್ತು ಸಣಪುಟ್ಟ ಗಾಯಗಳಾಗಿದ್ದು, ಸದರಿ ಘಟನೆ ಇಂದು ರಾತ್ರಿ 10 ಗಂಟೆ ಸುಮಾರಿಗೆ ಮುಂಡರಗಿ ಗೇಟ್ ದಾಟಿ ಗ್ರಾಮ ಪಂಚಾಯತಿ ಕಾಯರ್ಾಲಯದ ಮುಂದುಗಡೆ ರಸ್ತೆಯ ಮೇಲೆ ಜರುಗಿದ್ದು ಅಪಘಾತಪಡಿಸಿದ ಬೂದಿ ಟ್ಯಾಂಕರ್ ನಂ ಕೆಎ 22 ಬಿ 7049 ಇದ್ದು ಅದರ ಚಾಲಕನು ಓಡಿ ಹೋಗಿದ್ದನು ನಂತರ 108 ಅಂಬುಲೆನ್ಸ್ ನಲ್ಲಿ ಗಾಯಗೊಂಡ ನಮ್ಮೆಲ್ಲರಿಗೂ ಉಪಚಾರಕ್ಕಾಗಿ ಯದಗಿರಿ ಸರಕಾರಿ ಆಸ್ಪತ್ರೆಗೆ ಬರುತ್ತಿರುವಾಗ ದಾರಿ ಮಧ್ಯೆ 10.30 ಪಿಎಮ್ ದ ಸುಮಾರಿಗೆ ಭಾರಿಗಾಯಗೊಂಡಿದ್ದ ನನ್ನ ಮಗ ಸ್ಟೀಫನ್ ಪೀಟರ್ ಈತನು ಮೃತಪಟ್ಟಿರುತ್ತಾನೆ. ಕಾರಣ ಅಪಘಾತಪಡಿಸಿದ ಬೂದಿ ಟ್ಯಾಂಕರ್ ನಂ ಕೆಎ 22 ಬಿ 7049 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 01.15 ಎಎಮ್ ಕ್ಕೆ ಬಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 40/2018 ಕಲಂ 279,337,338,304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿ ಕ್ರಮ ಕೈಗೊಂಡಿದ್ದು ಇರುತ್ತದೆ.   
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!