Yadgir District Reported Crimes Updated on 26-06-2018

By blogger on ಮಂಗಳವಾರ, ಜೂನ್ 26, 2018


                                            Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 45/2018 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ;- ದಿನಾಂಕ 25/06/2018 ರಂದು ಸಮಯ ಮದ್ಯಾಹ್ನ 2-30 ಪಿ.ಎಂ. ದ ಸುಮಾರಿಗೆ ಯಾದಗಿರಿ -ವರ್ಕನಳ್ಳಿ  ಮುಖ್ಯ ರಸ್ತೆಯ ಮೇಲೆ ಫಿಯರ್ಾದಿಯವರು ಮೋಟಾರು ಸೈಕಲ್ ನಂ.ಕೆಎ-33, ಕ್ಯೂ-5433 ನೇದ್ದರಲ್ಲಿ ಹೊರಟಿದ್ದಾಗ .ಆರೋಪಿತನು ತನ್ನ ಅಶೋಕ್ ಲೆಲ್ಯಾಂಡ್ ದೋಸ್ತ್ ಗೂಡ್ಸ್  ಟಿಪಿ ನಂ. ಕೆಎ-35, ಟಿ.ಆರ್-0852 ಅದರ ಚೆಸ್ಸಿ ನಂಬರ ಆಔಖಖಿ+ಕ13226-18ಈ01ಃ037 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯವರು ಹೊರಟಿದ್ದ್ ಮೋಟಾರು ಸೈಕಲಗೆ ಹಿಂದಿನಿಂದ  ಡಿಕ್ಕಿಕೊಟ್ಟು ಅಪಗಾತ ಮಾಡಿದ್ದರಿಂದ ಫಿಯರ್ಾದಿಗೆ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯ, ಎಡ ತೊಡೆಗೆ ತರಚಿದ ಗಾಯ, ಎಡ ಮತ್ತು ಬಲ ಮೊಣಕೈಗಳಿಗೆ ತರಚಿದ ಗಾಯವಾಗಿರುತ್ತವೆ  ಮತ್ತು ಮೋಟಾರು ಸೈಕಲ್ ಸವಾರನಿಗೆ ಎಡಮೊಣಕಾಲು  ಕೆಳಗೆ  ಭಾರೀ ರಕ್ತಗಾಯವಾಗಿದ್ದು ಕಾಲು ಮುರಿದಂತೆ ಕಾಣುತ್ತಿದ್ದು, ತಲೆಯ ಹಿಂಬದಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ ಅಪಘಾತ ಪಡಿಸಿದ ವಾಹನದ ಸವಾರನು ಸ್ತಳದಲ್ಲಿ ವಾಹನವನ್ನು ಬಿಟ್ಟು ಓಡಿ ಹೋಗಿದ್ದರ ಬಗ್ಗೆ ಮುಂದಿನ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ 276/2018 ಕಲಂ: 279 337 338 ಐಪಿಸಿ;-ದಿ: 25/06/2018 ರಂದು 10-15 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ತಾಯಮ್ಮ ತಂದೆ ಶಿವಪ್ಪ ಚವಲ್ಕರ ಸಾ: ಸುರಪೂರ ಇವರ ಹೇಳಿಕೆ ಫಿರ್ಯದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ನಮ್ಮ ಓಣಿಯ ನಾಗಮ್ಮ ಕುದರಿಮನಿ ಇವರ ಮಗಳ ಮದುವೆ ಕಾರ್ಯಕ್ರಮವು ರಾಯಚೂರ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇರುವದರಿಂದ ನಾನು ಮತ್ತು ನನ್ನ ತಾಯಿ 2) ಚಂದಮ್ಮ, ತಂಗಿಯಾದ 3) ಮರೆಮ್ಮ ಹಾಗು ನಮ್ಮ ಓಣಿಯ 4) ತಾಯಮ್ಮ ತಂದೆ ಸುಕ್ಕಪ್ಪ ಕುಂಕುಮದೋರ 5) ಗೀತಾ ಗಂಡ ಅಯ್ಯಪ್ಪ ಪೂಜಾರಿ 6) ಲಕ್ಷ್ಮೀಬಾಯಿ ಗಂಡ ಸಾಯಬಣ್ಣ ಕುಲಕಣರ್ಿ 7) ಮಲ್ಲಮ್ಮ ಗಂಡ ಈರಪ್ಪ ಬಡಿಗೇರ 8) ಮಲ್ಲಮ್ಮ ಗಂಡ ಶರಣಪ್ಪ ಬಡಿಗೇರ 9) ಅಕ್ಕಮ್ಮ ಗಂಡ ಲಕ್ಷ್ಮಣ ಪ್ಯಾರಸೇಲರ 10) ಶಂಕ್ರಮ್ಮ ಗಂಡ ಪರಶುರಾಮ ಚಾಮನಾಳ 11) ಯಲ್ಲಮ್ಮ ಗಂಡ ಅಂಬ್ರಪ್ಪ ಚವಲ್ಕರ 12) ತಿಪ್ಪಮ್ಮ ಗಂಡ ಮಲ್ಲಪ್ಪ ಚಾಮನಾಳ ಹಾಗು ಮೂರು ಜನ ಸಣ್ಣ ಮಕ್ಕಳು 13) ಗಣೇಶ ತಂದೆ ಹಣಮಂತ ಕುದರಿಮನಿ, 14) ಶ್ಲೋಕ ತಂದೆ ಕಾಶಿನಾಥ 15) ಅನುಶಾ ತಂದೆ ಯಂಕಪ್ಪ ಎಲ್ಲರೂ ಸದರಿ ಮದುವೆ ಕಾರ್ಯಕ್ರಮಕ್ಕೆ ಕೃಷರ ಜೀಪ ನಂಬರ ಕೆ.ಎ 36 ಎ 3696 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ ಸದರಿ ಜೀಪ ಚಾಲಕನಾದ ಪ್ರಭು ತಂದೆ ಮುದಕಪ್ಪ ಸಾ: ಪೈದೊಡ್ಡಿ ಇತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ, 9-30 ಎ.ಎಮ್ ಸುಮಾರಿಗೆ ಕುಂಬಾರಪೇಟ ಅಂಬೇಡ್ಕರ ಸರ್ಕಲ್ ಹತ್ತಿರ ಪಲ್ಟಿ ಮಾಡಿದ್ದರಿಂದ ನನಗೆ ಹಾಗು ಜೀಪಿನಲ್ಲಿ ಕುಳಿತಿದ್ದ ಎಲ್ಲರಿಗೂ ಸಾದಾ ಹಾಗು ತೀವೃ ಸ್ವರೂಪದ ರಕ್ತಗಾಯ, ಗುಪ್ತಗಾಯಗಳಾಗಿರುವದಲ್ಲದೇ, ಜೀಪ ಚಾಲಕನಿಗೂ ಸಹ ಭಾರಿ ಗಾಯಗಳಾಗಿರುತ್ತವೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 276/2018 ಕಲಂಃ 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!