Yadgir District Reported Crimes Updated on 23-05-2018

By blogger on ಬುಧವಾರ, ಮೇ 23, 2018

                                          Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 298/2018.ಕಲಂ 78(3).ಕೆ.ಪಿ.ಯಾಕ್ಟ ;- ದಿನಾಂಕ 22/05/2018 ರಂದು ಮದ್ಯಾಹ್ನ 14-30 ಗಂಟೆಗೆ ಶ್ರೀ ವೆಂಕಣ್ಣ ಎ,ಎಸ್,ಐ, ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ 22/05/2018 ರಂದು ಬೆಳಿಗ್ಗೆ 11-00 ಗಂಟೆಗೆ ಠಾಣೆಯಲ್ಲಿದ್ದಾಗ ಮುನುಮುಟಿಗಿ ಗ್ರಾಮದ ಈಶ್ವರ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಸಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಬಾತ್ಮೀಬಂದ್ದಿದ್ದರ ಮೇರೆಗೆ ಮಾಹಿತಿ ವಿಷಯ ತಿಳಿಸಿದ್ದು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಲಕ್ಕಪ್ಪ ಪಿ.ಸಿ.198, ಬಸವರಾಜ ಪಿ.ಸಿ.346, ಇವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಲಕ್ಕಪ್ಪ ಪಿ.ಸಿ.198, ರವರ ಮುಖಾಂತರ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ 11-10 ಗಂಟೆಗೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ್ದರ ಮೇರೆಗೆ ಸದರಿಯವರಿಗೆ ಖಚಿತ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
             ಮಾನ್ಯ ಡಿ.ವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು ಒಂದು ಖಾಸಗಿ ಜೀಪ ನ್ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ 11-20 ಗಂಟೆಗೆ ಹೊರಟು ಮುನುಮುಟಿಗಿ ಗ್ರಾಮದ ಈಶ್ವರ ಗುಡಿಯ ಹತ್ತಿರ 12-00 ಗಂಟೆಗೆ ಹೋಗಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಈಶ್ವರ ಗುಡಿಯ ಕಡೆಗೆ ನಡೆದು ಕೊಂಡು 12-10 ಗಂಟೆಗೆ ಹೋಗಿ ಮನೆಗಳ ಗೊಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಒಬ್ಬ ವ್ಯೆಕ್ತಿ ಈಶ್ವರ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು ಆಗ ನಾವು ಸದರಿಯವನು ಇದು ಬಾಂಬೆ ಮಟಕಾ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಸುತ್ತುವರೆದು 12-20 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದವನು ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರವಿ ತಂದೆ ಬಸಣ್ಣ ಕೆಂಚನರ ವ|| 36 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಮುನಮುಟಿಗಿ ತಾ|| ಶಹಾಪೂರ ಅಂತ ತಿಳೀಸಿದನು ಸದರಿಯವನ ಅಂಗಶೋಧನೆ ಮಾಡಿದಾಗ 1] ನಗದು ಹಣ 480/- ರೂಪಾಯಿ, 2] ಒಂದು ಬಾಲ್ ಪೆನ್ ಅ:ಕಿ: 00=00 ರೂ 3] ಎರಡು ಮಟಕಾ ಅಂಕಿಸಖ್ಯೆಗಳನ್ನು ಬರೆದುಕೊಂಡ ಚೀಟಿಗಳು ಅ:ಕಿ: 00=00 ರೂ ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 12-30 ಗಂಟೆಯಿಂದ 13-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮಾಡಿ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ಒಬ್ಬ ವ್ಯೆಕ್ತಿಯೊಂದಿಗೆೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಮದ್ಯಾಹ್ನ  14-0 ಗಂಟೆಗೆ ಬಂದು ವರದಿ ತಯ್ಯಾರಿಸಿ. ಒಬ್ಬ ಆರೋಪಿ, ಮತ್ತು ಜಪ್ತಿ ಪಂಚನಾಮೆ, ಮುದ್ದೆಮಾಲು, ಹಾಜರಪಡಿಸಿ 14-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳಲು ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 298/2018 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 145/2017 ಕಲಂ: 379 ಐಪಿಸಿ ;- ದಿನಾಂಕ: 22/05/2018 ರಂದು 7-30 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ನೀಡಿದ್ದೇನಂದರೆ ಇಂದು ದಿನಾಂಕ: 22/05/2018 ರಂದು ಸಾಯಂಕಾಲ ನಾನು ಮತ್ತು ಸಂಗಡ ಪ್ರಕಾಶ ಹೆಚ್.ಸಿ 18, ಭಗವಂತ್ರಾಯ ಹೆಚ್.ಸಿ 169 ಮತ್ತು ವೆಂಕಟೇಶ ಪಿಸಿ 143 ರವರೊಂದಿಗೆ ಠಾಣೆಯಲ್ಲಿದ್ದಾಗ ಕೋಡಾಲ ಬೀಟ ಪಿಸಿ ವೆಂಕಟೇಶ ರವರಿಗೆ ಸದರಿ ಕೋಡಾಲ ಸೀಮಾಂತರದ ಕೃಷ್ಣಾ ನದಿ ದಡದಿಂದ ಯಾರೋ ಕೆಲವರು ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳನ್ನು ಟಿಪ್ಪರನಲ್ಲಿ ಸಾಗಿಸುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದಿರುವುದಾಗಿ ನನಗೆ ತಿಳಿಸಿದಾಗ ನಾನು ಮೇಲ್ಕಂಡ ಸಿಬ್ಬಂದಿಯವರನ್ನು ಸರಕಾರಿ ಜೀಪ ನಂ. ಕೆಎ 33 ಜಿ 0115 ನೇದ್ದರಲ್ಲಿ ಕರೆದುಕೊಂಡು ಹೊರಟು ಕೋಡಾಲ ಗ್ರಾಮ ದಾಟಿ ಕೃಷ್ಣಾ ನದಿ ಸಮೀಪ ಹೋಗುತ್ತಿದ್ದಾಗ ಕೃಷ್ಣಾ ನದಿ ದಡದ ಕಡೆಯಿಂದ ಒಂದು ಟಿಪ್ಪರದಲ್ಲಿ ಅದರ ಚಾಲಕನು ಮರಳು ತುಂಬಿಕೊಂಡು ಬರುತ್ತಿದ್ದು, ನಮ್ಮ ಪೊಲೀಸ್ ಜೀಪನ್ನು ನೋಡಿದ ಕೂಡಲೇ ಸದರಿ ಚಾಲಕನು ತನ್ನ ಟಿಪ್ಪರನ್ನು ಅಲ್ಲಿಯೇ ಕೃಷ್ಣಾ ನದಿ ದಡದ ಪಕ್ಕದಲ್ಲಿ ನಿಲ್ಲಿಸಿ, ಇಳಿದು ಓಡಿ ಹೋದನು. ನಾವು ಬೆನ್ನಹತ್ತಿದರು ಕೂಡ ಸಿಗಲಿಲ್ಲ. ಆಗ ಸಮಯ ಸಾಯಂಕಾಲ ಅಂದಾಜು 5-30 ಗಂಟೆಯಾಗಿತ್ತು. ಟಿಪ್ಪರ ನಂಬರ ನೋಡಲಾಗಿ ಕೆಎ 03 ಎಬಿ 2526 ಭಾರತಬೆಂಜ್ ಕಂಪನಿಯದಿರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಟಿಪ್ಪರ ಚಾಲಕನ ಹೆಸರು ವಿಳಾಸ ಹಣಮಂತ ತಂದೆ ದೇವಿಂದ್ರಪ್ಪ ಸಾ:ಐಕೂರು ಎಂದು ಬಾತ್ಮಿದಾರರಿಂದ ಗೊತ್ತಾಗಿರುತ್ತದೆ. ಕಾರಣ ಸದರಿ ಟಿಪ್ಪರದ ಚಾಲಕ ಮತ್ತು ಮಾಲಿಕ ಇಬ್ಬರೂ ಕೃಷ್ಣಾ ನದಿಯಿಂದ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ಸಾಗಿಸುತ್ತಿರುವಾಗ ನಾವು ದಾಳಿ ಮಾಡಿದಾಗ ಮರಳು ತುಂಬಿದ ಟಿಪ್ಪರ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 145/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 102/2018 ಕಲಂ 143,147,148,323, 324,504, 506 ಖ/ಘ 149 ಕಅ;- ದಿನಾಂಕ 21/05/2018 ರಂದು ಪಿ ಎಸ್ ಐ ಸಾಹೇಬರ ಆದೇಶದ ಮೇರೆಗೆ ನಾನು ಪರಮಣ್ಣ ತಂದೆ ಹಣಮಂತ ಲಿಂಗದಳ್ಳಿ ರವರ ಎಂ ಎಲ್ ಸಿ ವಿಚಾರಣೆಗಾಗಿ ರಾಯಚೂರ ರಿಮ್ಸ ಆಸ್ಪತ್ರೆಗೆ ಹೋಗಿ  ವೈದ್ಯಾಧಿಕಾರಿಗಳಿಂದ ಎಮ್ ಎಲ್ ಸಿ ಯಾದಿ ಪಡೆದುಕೊಂಡು ಗಾಯಾಳು ಪರಮಣ್ಣ ಇವನಿಗೆ ಪಿಯರ್ಾದಿ ಕೊಡುವ ಬಗ್ಗೆ ವಿಚಾರಿಸಲಾಗಿ ತಾನು ನಾಳೆ ದಿನ ಪಿಯರ್ಾದಿ ಕೊಡುವದಾಗಿ ಹೇಳಿದ್ದರಿಂದ ನಾನು ಆಸ್ಪತ್ರೆಯಲ್ಲಿಯ ಉಳಿದುಕೊಂಡು ಈ ದಿವಸ ಸದರಿ  ಪರಮಣ್ಣ ತಂದೆ ಹಣಮಂತ ಲಿಂಗದಳ್ಳಿ ವ:45 ವರ್ಷ ಉ:ಕೂಲಿಕೆಲಸ ಜಾ:ಕಬ್ಬಲಿಗ ಸಾ:ನಿಂಗಾಪೂರ ಕಕ್ಕೇರಾ ಈತನಿಗೆ ವಿಚಾರಿಸಿ ಬೇಳಿಗ್ಗೆ 8:00 ಗಂಟೆಯಿಂದ 9:00 ಗಂಟೆಯ ವರೆಗೆ ಸದರಿಯವನ ಹೇಳಿಕೆಯನ್ನು ರಿಮ್ಸ ಆಸ್ಪತ್ರೆ ರಾಯಚೂರದಲ್ಲಿ ಪಡೆದುಕೊಂಡಿದ್ದು ಸದರ ಪಿಯರ್ಾದಿಯ ಹೇಳಿಕೆಯೊಂದಿಗೆ ಈ ದಿವಸ ಮದ್ಯಾಹ್ನ 2:30 ಗಂಟೆಗೆ ಠಾಣೆಗೆ ಬಂದಿದ್ದು  ಪಿಯರ್ಾದಿಯ ಹೇಳಿಕೆ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ಮಾನಪ್ಪ, ಮಹಾದೇವ, ನಾನು ಮತ್ತು ಚಿದಾನಂದ ಅಂತಾ ನಾಲ್ಕು ಜನ ಮಕ್ಕಳಿದ್ದು ನಮ್ಮೇಲರದ್ದು ಮದುವೆಯಾಗಿದ್ದು ನಾವು ನಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಇರುತ್ತೇವೆ. ಈಗ ಸುಮಾರು ಮೂರು ವರ್ಷಗಳ ಹಿಂದೆ ನನ್ನ ಮಗಳಾದ ಮಹಾದೇವಿಗೆ ನನ್ನ ಅಕ್ಕನ ಮಗನಾದ ಸಾದೇವ ಈತನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಬಗ್ಗೆ ನಾವು ಆತನ ಮೇಲೆ ಕೇಸು ಮಾಡಿದಾಗಿನಿಂದ ನನ್ನ  ಅಣ್ಣ ಮಾದೇವ ಮತ್ತು ತಮ್ಮ ಚಿದಾನಂದ ರವರು ನಮ್ಮ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಹೀಗಿದ್ದು ಮೊನ್ನೆ ರವಿವಾರ ದಿನಾಂಕ 20.05.2018 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನಾನು ನಮ್ಮೂರ ಹಣಮಂತ ದೇವರ ಗುಡಿಯ ಮುಂದಿನ ಕಟ್ಟೆಯ ಮೇಲೆ ನಮ್ಮ ಊರ ನಂದಪ್ಪ ತಂದೆ ಜೆಡೆಪ್ಪ , ಬಸಪ್ಪ ತಂದೆ ಸಾಬಣ್ಣ ತಾಳಿಕೋಟಿ, ಹಣಮಂತ ತಂದೆ ನಾಗಪ್ಪ ಬೇವೂರ, ಇವರೊಂದಿಗೆ ಮಾತನಾಡುತ್ತಾ ಕುಳಿತ್ತಿದ್ದಾಗ ನನ್ನ ಅಣ್ಣ ಮಾದೇವ ತಂದೆ ಹಣಮಂತ ಲಿಂಗದಳ್ಳಿ, ತಮ್ಮ ಚಿದಾನಂದ ತಂದೆ ಹಣಮಂತ ಲಿಂಗದಳ್ಳಿ, ದುರ್ಗಪ್ಪ ತಂದೆ ಪರಮಣ್ಣ ಲಿಂಗದಳ್ಳಿ, ರಾಮಣ್ಣ ತಂದೆ ಮಲ್ಲಪ್ಪ ಲಿಂಗದಳ್ಳಿ, ಗೌರಮ್ಮ ಗಂಡ ದುರ್ಗಪ್ಪ ಲಿಂಗದಳ್ಳಿ, ಯಲ್ಲಮ್ಮ ಗಂಡ ಮಾದೇವ ಲಿಂಗದಳ್ಳಿ, ಗಂಗಮ್ಮ ಗಂಡ ಹಣಮಂತ ಲಿಂಗದಳ್ಳಿ, ಇಜ್ಜಮ್ಮ ಗಂಡ ಚಿದಾನಂದ ಲಿಂಗದಳ್ಳಿ, ಇವರೆಲ್ಲರೂ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಗುಂಪಾಗಿ ಬಂದವರೇ ನನಗೆ ಸುಳಿಮಗನೆ ಪರಮ್ಯಾ ನಿನ್ನ ಸೊಕ್ಕು  ಬಹಳ ಆಗಿದೆ ಅಕ್ಕನ ಮಗನ ಮೇಲೆ ಕೇಸು ಮಾಡಿಸಿದಿ ಸುಳೆಮಗನೇ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಬೈದವರೇ ಅವರಲ್ಲಿಯ ಮಾದೇವನು ಕಲ್ಲಿನಿಂದ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ದುರ್ಗಪ್ಪನು ಬಡಿಗೆಯಿಂದ  ಎದೆಯ ಮೇಲೆ ಹೊಡೆದು, ರಾಮಣ್ಣ ಮತ್ತು ಗೌರಮ್ಮ ರವರು ತಮ್ಮ ಕೈಯಲ್ಲಿಯ ಕಲ್ಲಿನಿಂದ ನನ್ನ ಬಲಗಣ್ಣಿನ ಕೆಳಗೆ ಬೆನ್ನಿಗೆ ಹೊಡೆದು ಗಾಯಪಡಿಸಿದ್ದು, ಉಳಿದವರು ನನಗೆ ನೆಲಕ್ಕೆ ಕೆಡುವಿ ಮನಸ್ಸಿಗೆ ಬಂದಹಾಗೆ ಕಾಲಿನಿಂದ ತುಳಿದು ಕೈಯಿಂದ ಹೊಡೆದು ಮೈಮೆಲೆಲ್ಲಾ ಗುಪ್ತಗಾಯಪಡಿಸಿದ್ದು ಆಗ ನಾನು ಚೀರಾಡಲು ನನ್ನ ಜೊತೆ ಕುಳಿತಿದ್ದ ನಂದಪ್ಪ ಬಾಕಲಿ, ಬಸಪ್ಪ ತಾಳಿಕೋಟಿ, ಹಣಮಂತ ಬೇವೂರ ರವರು ನೋಡಿ ಬಿಡಿಸಿದ್ದು ಹೋಗುವಾಗ ಅವರೇಲ್ಲರೂ ಸುಳೆ ಮಗನೆ ಇವತ್ತು ನಮ್ಮ ಕೈಯಲ್ಲಿ ಉಳದಿದಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ  ಹಾಕಿ ಹೋಗಿದ್ದು ನಂತರ ನನ್ನ ಹೆಂಡತಿ ಲಕ್ಷ್ಮಿ, ಮಗ ಮಲ್ಲಪ್ಪ ಹಾಗೂ ನಮ್ಮೂರ ನಂದಪ್ಪ ತಂದೆ ಜೆಡೆಪ್ಪ ಉಪಚಾರಕ್ಕಾಗಿ ಲಿಂಗಸೂರ  ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಇಲ್ಲಿಗೆ ನಿನ್ನೆ ದಿನ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಾನು ಉಪಚಾರ ಹೊಂದುತ್ತಿದ್ದು ನನಗೆ ಹೊಡೆಬಡೆ ಮಾಡಿದ ಮೇಲೆ ನಮೂದಿಸಿದ 8 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ  ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 102/2018 ಕಲಂ 143,147,148,323, 324,504, 506, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 103/2018 ಕಲಂ 143,147,148,323, 324,504, 506 ಖ/ಘ 149 ಕಅ ;- ದಿನಾಂಕ 21/05/2018 ರಂದು ಪಿ ಎಸ್ ಐ ಸಾಹೇಬರ ಆದೇಶದ ಮೇರೆಗೆ ನಾನು ಮಹಾದೇವಪ್ಪ ತಂದೆ ಹಣಮಂತ ಲಿಂಗದಳ್ಳಿ ಸಾ:ನಿಂಗಾಪೂರ ರವರ ಎಂ ಎಲ್ ಸಿ ವಿಚಾರಣೆಗಾಗಿ ರಾಯಚೂರ ರಿಮ್ಸ ಆಸ್ಪತ್ರೆಗೆ ಹೋಗಿ  ವೈದ್ಯಾಧಿಕಾರಿಗಳಿಂದ ಎಮ್ ಎಲ್ ಸಿ ಯಾದಿ ಪಡೆದುಕೊಂಡು ಗಾಯಾಳು ಮಹಾದೇವಪ್ಪ ತಂದೆ ಹಣಮಂತ ಲಿಂಗದಳ್ಳಿ ಇವನಿಗೆ ಪಿಯರ್ಾದಿ ಕೊಡುವ ಬಗ್ಗೆ ವಿಚಾರಿಸಲಾಗಿ ತಾನು ನಾಳೆ ದಿನ ಪಿಯರ್ಾದಿ ಕೊಡುವದಾಗಿ ಹೇಳಿದ್ದರಿಂದ ನಾನು ಆಸ್ಪತ್ರೆಯಲ್ಲಿಯ ಉಳಿದುಕೊಂಡು ಈ ದಿವಸ ಸದರಿ  ಮಹಾದೇವಪ್ಪ ತಂದೆ ಹಣಮಂತ ಲಿಂಗದಳ್ಳಿ ವ:47 ವರ್ಷ ಉ: ಕೂಲಿ ಕೆಲಸ ಜಾ:ಕಬ್ಬಲಿಗ ಸಾ:ನಿಂಗಾಪೂರ ಕಕ್ಕೇರಾ ಈತನಿಗೆ ವಿಚಾರಿಸಿ ಬೇಳಿಗ್ಗೆ 9:30 ಗಂಟೆಯಿಂದ 10:30 ಗಂಟೆಯ ವರೆಗೆ ಸದರಿಯವನ ಹೇಳಿಕೆಯನ್ನು ರಿಮ್ಸ ಆಸ್ಪತ್ರೆ ರಾಯಚೂರದಲ್ಲಿ ಪಡೆದುಕೊಂಡಿದ್ದು ಸದರ ಪಿಯರ್ಾದಿಯ ಹೇಳಿಕೆಯೊಂದಿಗೆ ಈ ದಿವಸ ಮದ್ಯಾಹ್ನ 3:30 ಪಿ ಎಂ ಕ್ಕೆ ಠಾಣೆಗೆ ಬಂದಿದ್ದು  ಪಿಯರ್ಾದಿಯ ಹೇಳಿಕೆ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ಮಾನಪ್ಪ, ನಾನು ಪರಮಣ್ಣ, ಮತ್ತು ಚಿದಾನಂದ ಅಂತಾ ನಾಲ್ಕು ಜನ ಮಕ್ಕಳಿದ್ದು ನಮ್ಮೇಲರದ್ದು ಮದುವೆಯಾಗಿದ್ದು ನಾವು ನಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಇರುತ್ತೇವೆ. ಈಗ ಸುಮಾರು ಮೂರು ವರ್ಷಗಳ ಹಿಂದೆ ನನ್ನ ತಮ್ಮನಾದ ಪರಮಣ್ಣ ಈತನ ಮಗಳಾದ ಮಹಾದೇವಿಗೆ ನಮ್ಮ ಅಕ್ಕನ ಮಗನಾದ ಸಾದೇವ ಈತನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಲು ನಾನು ಅವನಿಗೆ ಸಹಾಯ ಮಾಡಿದ್ದೆನೆ ಎಂದು ನನ್ನ ತಮ್ಮ ಪರಮಣ್ಣ ಹಾಗೂ ಅವನ ಮನೆಯವರು ನನ್ನ ಮೇಲೆ ವಿನಾಕಾರಣ ಸಿಟ್ಟಾಗಿದ್ದು ಇರುತ್ತದೆ
       ಹೀಗಿದ್ದು ಮೊನ್ನೆ ರವಿವಾರ ದಿನಾಂಕ 20.05.2018 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನಾನು ನಮ್ಮೂರ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಮೇಲೆ ನಮ್ಮೂರ ಚಿದಾನಂದ ತಂದೆ ದುರ್ಗಪ್ಪ ಲಿಂಗದಳ್ಳಿ , ದುರ್ಗಪ ತಂದೆ ಪರಮಣ್ಣ ಲಿಂಗದಳ್ಳಿ, ಇವರೊಂದಿಗೆ ಮಾತನಾಡುತ್ತಾ ಕುಂತಿದ್ದಾಗ ನನ್ನ ತಮ್ಮ ಪರಮಣ್ಣ ತಂದೆ ಹಣಮಂತ ಲಿಂಗದಳ್ಳಿ , ಮಲ್ಲಪ್ಪ ತಂದೆ ಪರಮಣ್ಣ ಲಿಂಗದಳ್ಳಿ , ಮಾನಪ್ಪ ತಂದೆ ಹಣಮಂತ ಲಿಂಗದಳ್ಳಿ, ಲಕ್ಷ್ಮಿ ಗಂಡ ಪರಮಣ್ಣ ಲಿಂಗದಳ್ಳಿ, ದೇವಮ್ಮ ಗಂಡ ಮಾನಪ್ಪ ಲಿಂಗದಳ್ಳಿ , ಮಹಾದೇವಿ ತಂದೆ ಪರಮಣ್ಣ ಲಿಂಗದಳ್ಳಿ, ಇವರೆಲ್ಲರೂ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಾಗೂ ಕಬ್ಬಿಣದ ರಾಡನ್ನು ಹಿಡಿದುಕೊಂಡು ಗುಂಪಾಗಿ ಬಂದವರೇ ನನಗೆ ಸುಳೆಮಗನೆ ಮಾದ್ಯಾ ನನ್ನ ಮಗಳು ಮಾದೇವಿಯನ್ನು ಅಕ್ಕನ ಮಗ ಸಾದೇವನು ಓಡಿಸಿಕೊಂಡುಹೋಗಲು ನೀನೆ ಕಾರಣನಾಗಿದ್ದು ಸುಳೆ ಮಗನೇ ಇವತ್ತು ಸಿಕ್ಕಿದಿ ನಿನಗೆ ಸುಮ್ಮನೆ ಬಿಡುವದಿಲ್ಲ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಬೈದವರೆ ಅವರಲ್ಲಿಯ ನನ್ನ ತಮ್ಮ ಪರಮಣ್ಣ ಈತನು ತನ್ನ ಕೈಯಲ್ಲಿಯ ಕಬ್ಬಿಣದ ರಾಡಿನಿಂದ ನನ್ನ ಎಡಬುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಮಲ್ಲಪ್ಪನು ಕಲ್ಲಿನಿಂದ ನನ್ನ ಬೆನ್ನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಲಕ್ಷ್ಮಿ ಗಂಡ ಪರಮಣ್ಣ , ದೇವಮ್ಮ ಗಂಡ ಮಾನಪ್ಪ ಇವರಿಬ್ಬರು ತಮ್ಮ ಕೈಯಲ್ಲಿಯ ಬಡಿಗೆಗಳಿಂದ ನನ್ನ ಹೊಟೆಯ ಮೇಲೆ ಬೆನ್ನಿಗೆ ಎಡಪಕ್ಕಡಿಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಮತ್ತು ಮಹಾದೇವಿಯು ಕಲ್ಲಿನಿಂದ ಜೋರಾಗಿ ನನ್ನ ಎಡಗಾಲ ಪಾದದ ಮೇಲ್ಬಾಗದಲ್ಲಿ ಹೊಡೆದು ಗಾಯಗೊಳಿಸಿದ್ದು ಮಾನಪ್ಪ ತಂದೆ ಹಣಮಂತ ಈತನು ನನಗೆ ನೆಲಕ್ಕೆ ಕೆಡುವಿ ಕಾಲಿನಿಂದ ಎದೆಯ ಮೇಲೆ ಹೊಟ್ಟೆಯ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು ಆಗ ನಾನು ನನ್ನ ಉಳಿಸಿರಪ್ಪೊ ಅಂತಾ ಚೀರಾಡಲು ನನ್ನ ಜೊತೆಗೆ ಕುಳಿತಿದ್ದ ಚಿದಾನಂದ ತಂದೆ ದುರ್ಗಪ್ಪ ಮತ್ತು ದುರ್ಗಪ್ಪ ತಂದೆ ಪರಮಣ್ಣ ರವರು ನೋಡಿ ಬಿಡಿಸಿದ್ದು ಹೋಗುವಾಗ ಮೇಲೆ ನಮೂದಿಸಿದ 6 ಜನರು ನನಗೆ ಸುಳೆಮಗನೇ ಇವತ್ತು ನಮ್ಮ ಕೈಯಲ್ಲಿ ಉಳದಿದಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಕೊಲೆ ಬೆದರಿಕೆ ಹಾಕಿ ಹೋಗಿದ್ದು ನಂತರ ಅದೆ ದಿನ ನನ್ನ ಹೆಂಡತಿ ಯಲ್ಲಮ್ಮ ಹಾಗೂ ನನ್ನ ತಮ್ಮನ ಹೆಂಡತಿ ವಿಜಯಲಕ್ಷ್ಮಿ ರವರು ಉಪಚಾರಕ್ಕಾಗಿ ನನಗೆ ಲಿಂಗಸೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ನಾನು ಇನ್ನು ಉಪಚಾರ ಹೊಂದುತ್ತಿದ್ದು ನನಗೆ ಹೊಡೆಬಡೆ ಮಾಡಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 103/2018 ಕಲಂ 143,147,148,323, 324,504, 506, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!