Yadgir District Reported Crimes Updated on 06-04-2018

By Yadgir District Police on ಶುಕ್ರವಾರ, ಏಪ್ರಿಲ್ 6, 2018


Yadgir District Reported Crimes  

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 67/2018 ಕಲಂ 323, 324, 326, 504, 506, 307, 302 ಸಂ34 ಐ.ಪಿ.ಸಿ;- ದಿನಾಂಕ 05/04/2018 ರಮದು ರಾತ್ರಿ 8-10 ಪಿ.ಎಂ. ಕ್ಕೆ ಯಾದಗಿರಿ ಸರಕಾರೀ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಂ.ಎಲ್.ಸಿ. ದೂರವಾಣಿ ಮೂಲಕ ವಸೂಲಾಗಿದ್ದರಿಂದ 8-20 ಪಿ.ಎಂ. ಕ್ಕೆ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ನಿಂಗಪ್ಪ ತಂದೆ ಹಣಮಂತ ಜೊಗೇರ ವಯಾಃ 22 ವರ್ಷ ಜಾಃ ಕಬ್ಬಲೀಗ ಉಃ ಒಕ್ಕಲುತನ ಸಾಃ ಲಿಂಗಸನಳ್ಳಿ ತಾಂಡಾ ಇವರ ಹೇಳಿಕೆಯನ್ನು ವೈಧ್ಯಾಧಿಕಾರಿಗಳ ಸಮಕ್ಷಮ ಪಡೆದುಕೊಂಡಿದ್ದ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವಿಸುತ್ತೇನೆ ನಮ್ಮ ಮತ್ತು ನಮ್ಮ ಅಣ್ಣ ತಮಕಿಯವರಾದ ಶರಣಪ್ಪ ತಂದೆ ಮರೆಪ್ಪ ಜೋಗಿ ಇಬ್ಬರೂ ಮದ್ಯ ನಮ್ಮ ಮನೆಯ ಹಿಂದುಗಡೆಯಿರುವ ಖುಲ್ಲಾ ಜಾಗೆಯ ಸಂಬಂಧ ಈಗ ಸುಮಾರು 4-5 ವರ್ಷಗಳ ಹಿಂದೆ ತಕರಾರುಗಳಾಗಿದ್ದು ಆ ವೇಳೆಯಲ್ಲಿ ನಮ್ಮ ಗ್ರಾಮದ ಕೆಲವು ಹಿರಿಯರು ನಮಗೆ ಮತ್ತು ಅವರಿಗೆ ಕೂಡಿಸಿ ಈ ಹಿಂದೆ ಹಾಕಿದ ಬುನಾದಿಯನ್ನು ಬಿಟ್ಟು ಬೇರೆ ಬುನಾದಿ ಹಾಕಿಕೊಂಡು ಮನೆಗಳು ಕಟ್ಟಿಕೊಳ್ಳಬೇಕು ಅಂತಾ ಹೇಳಿದಾಗ ಆ ನ್ಯಾಯಕ್ಕೆ ಎಲ್ಲರೂ ಒಪ್ಪಿಕೊಂಡಿದ್ದೇವು. ಹೀಗಿರುವಾಗ ಇಂದು ದಿನಾಂಕ 05/04/2018 ರಂದು ಬೆಳಗ್ಗೆ ಹೊಲಕ್ಕೆ ಹೋಗಿ ಸಾಯಂಕಾಲ 5-00 ಗಂಟೆಗೆ ನಮ್ಮ ಮನೆ ಹತ್ತಿರ ಬಂದಾಗ ನಮ್ಮ ಮನೆ ಹತ್ತಿರ ಶರಣಪ್ಪ ತಂದೆ ಮರೆಪ್ಪ ಜೋಗಿ ಲಕ್ಷ್ಮಣ ತಂದೆ ಮರೆಪ್ಪ ಜೋಗಿ ಮತ್ತು ಮಲ್ಲಪ್ಪ ತಂದೆ ದೇವಿಂದ್ರಪ್ಪ ಭೀಮನಳ್ಳಿ ಈ ಮೂವರು ಅಲ್ಲಿಯೇ ಇದ್ದ ನನ್ನ ಅಣ್ಣನಾದ ಅಶೋಕನಿಗೆ ಏ ಬೋಸಡಿ ಮಕ್ಕಳ್ಯಾ ನಾವು ಮನೆಯ ಕಟ್ಟುವ ಬುನಾದಿ ಹಾಕುವದಕ್ಕೆ ಯಾಕೆ ತಕರಾರು ಮಾಡುತ್ತಿದ್ದಿರಿ ಸೂಳೇ ಮಕ್ಕಳೇ ಇವತ್ತು ಎಷ್ಟಾದರೂ ಹೆಣಗಳು ಬಿಳಲಿ ಒಂದು ಕೈ ನೊಡೇ ಬಿಡುತ್ತೇವೆ ಅಂತಾ  ಬೈಯುತ್ತಿದ್ದರು, ಆಗ ಅಣ್ಣ ಅಶೋಕ, ಲಕ್ಷ್ಮಣ ಮತ್ತು ತಮ್ಮ ಚಂದ್ರು ಮೂವರು ಕೂಡಿ ಅವರಿಗೆ ಈ ರೀತಿ ಬೈಯ್ಯುವದು ಸರಿಯಲ್ಲ ಈ ಹಿಂದೆ ಹಿರಿಯರು ಹೇಳಿದ ಹಾಗೆ ಇರೋಣ ಮತ್ತು ನಾಳಿಗೆ ಹಿರಿಯರಿಗೆ ಕರೆಯಿಸಿ ಅವರು ಹೇಳಿದಂತೆ ಕೇಳೋಣ ಅಂತಾ ಸಮಧಾನ ಪಡಿಸುತ್ತಿದ್ದಾಗ ಒಮ್ಮಲೇ ಆ ಮೂರು ಜನರು ಕೂಡಿ ಇವರಿಗೆ ಇವತ್ತು ಖಲಾಸ ಮಾಡೋಣ ಅಂತಾ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿ ಲಕ್ಷ್ಮಣ ತಂದೆ ಮರೆಪ್ಪ ಈತನು ಕೈಯಲ್ಲಿರುವ ಚಾಕುವಿನಿಂದ ತೆಲೆ ಹಿಂದೆ ಎಡಗಡೆ ಹೊಡೆದು ಭಾರಿ ರಕ್ತಗಾಯ ಮಾಡಿದನು ಮತ್ತು ಬಲರಟ್ಟಿಗೆ ಹೊಡೆದು ರಕ್ತಗಾಯ ಮಾಡಿದನು ಮತ್ತು ಶರಣಪ್ಪನು ಕೊಡಲಿಯಿಂದ ಅಶೋಕನ ತೆಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿದನು. ಆಗ ನಾನು ಬಿಡಿಸಲು ಹೋದಾಗ ಮಲ್ಲಪ್ಪ ತಂದೆ ದೇವಿಂದ್ರಪ್ಪ ಭೀಮನಳ್ಳಿ ಇತನು ಚಾಕುವಿನಿಂದ ನನ್ನ ಹೊಟ್ಟೆಗೆ ಚುಚ್ಚಿದನು. ಆಗ ನನ್ನ ತಮ್ಮ ಚಂದ್ರಪ್ಪ ಈತನು ಬಿಡಿಸಲು ಬಂದಾಗ ಶರಣಪ್ಪ ಇತನು ಚಾಕುವಿನಿಂದ ಬಲಗಡೆ ಕುತ್ತಿಗೆಗೆ ಹೊಡೆದನು. ಲಕ್ಷ್ಮಣ ತಂದೆ ಮರೆಪ್ಪ ಈತನು ಚಾಕುವಿನಿಂದ ಚಂದ್ರುನ ಬೆನ್ನಿಗೆ ಚುಚ್ಚಿ ಭಾರಿ ರಕ್ತಗಾಯ ಮಾಡಿದನು. ಆಗ ಅಲ್ಲಿಯೇ ಇದ್ದ ನನ್ನ ಹಿರಿಯ ಅಣ್ಣ ಲಕ್ಷ್ಮಣ ತಂದೆ ಹಣಮಂತ, ನನ್ನ ಅತ್ತಿಗೆಯಾದ ನಾಗಮ್ಮ, ಶರಣಮ್ಮ ಮತ್ತು ನನ್ನ ತಂಗಿ ಇಂದ್ರಮ್ಮ ಇವರೆಲ್ಲರೂ ಬಿಡಿಸಲು ಅಡ್ಡ ಬಂದಾಗ ಅಣ್ಣ ಲಕ್ಷ್ಮಣನಿಗೆ ಅವರು ಮೂವರು ಕೂಡಿ ಕೈಮುಷ್ಠಿ ಮಾಡಿ ಎದೆಗೆ ಹೊಟ್ಟೆಗೆ ಗುದ್ದಿರುತ್ತಾರೆ ಮತ್ತು ಹೆಣ್ಣು ಮಕ್ಕಳಿಗೂ ಕೂಡಾ ಕೂದಲು ಹಿಡಿದು ಜಗ್ಗಾಡಿ ದಬ್ಬಿಕೊಟ್ಟಿರುತ್ತಾರೆ ಆಗ ಅಲ್ಲಿಯೇ ಇದ್ದ ಮಲಕಪ್ಪ  ಜೊಗೇರ ಮತ್ತು ರೆಡ್ಡೆಪ್ಪಾ ಗುಳೇದೊರ ಇವರಿಬ್ಬರೂ ಬಂದು ಜಗಳ ಬಿಡಿಸಿರುತ್ತಾರೆ. ನಂತರ ಗಾಯ ಹೊಂದಿದ್ದ ನಾವೆಲ್ಲರೂ ಅಂಬುಲೆನ್ಸ ಮತ್ತು ಟಂಟಂದಲ್ಲಿ ಯಾದಗಿರ ಸರಕಾರಿ ಆಸ್ಪತ್ರೆಗೆ ಬರುವಾಗ ಆಸ್ಪತ್ರೆ ಆವರಣದಲ್ಲಿ ಚಂದ್ರು ಈತನು 8 ಪಿ.ಎಮ ಗಂಟೆಯ ಸುಮಾರಿಗೆ ಮತ್ತು ಅಶೋಕನಿಗೆ ಟಂಟಂದಿಂದ ಇಳಿಸುವಾಗ 8-20 ಪಿ.ಎಮಕ್ಕೆ ಸತ್ತಿರುತ್ತಾನೆ. ಈ ರೀತಿಯಾಗಿ ನಮ್ಮ ಮನೆ ಹಿಂದೆ ಇದ್ದ ಖುಲ್ಲಾ ಜಾಗೆ ಸಂಬಂಧ ಮೇಲ್ಕಂಡ ಮೂವರು ನನ್ನ ಇಬ್ಬರೂ ಸಹೋದರರಿಗೆ ಕೊಲೆ ಮಾಡಿ ನನಗೆ ಮಾರಣಾಂತಿಕ ಗಾಯಗೊಳಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ರಾತ್ರಿ 9-40 ಪಿ.ಎಂ. ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 67/2018 ಕಲಂ 323, 324, 326, 504, 506, 307, 302 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ 68/2018 ಕಲಂ 498(ಎ),306 ಐ.ಪಿ.ಸಿ;- ದಿನಾಂಕ 05-04-2018 ರಂದು 9-10 ಪಿ.ಎಮ ಕ್ಕೆ ಸರಕಾರಿ ಆಸ್ಪತ್ರೆ ಯಾದಗಿರಯಿಂದ ದೂರವಾಣಿ ಮುಖಾಂತರ ಎಮ.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಂದ ಉಪಚಾರ ಪಡೆಯುತ್ತಿದ್ದು ಶ್ರೀಮತಿ ಹಣಮಂತಿ ಗಂಡ ಲೋಕಪ್ಪ ಚಾಟೇಕರ ಸಾ; ಹತ್ತಿಕುಣಿ ಇವಳ ತಾಯಿಯಾದ ಶ್ರೀಮತಿ ದ್ಯಾವಮ್ಮ ಗಂಡ ಮಾಳಪ್ಪ ಬಬಲಾದಿಯೊರ ವಯಃ 60 ಜಾಃ ಕುರಬರು ಉಃ ಕೂಲಿಕೆಲಸ ಸಾಃ ಕೊಯಿಲೂರ ಇವರು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನನ್ನ ಗಂಡನು ಈಗ ಸುಮಾರು 3-4 ವರ್ಷಗಳ ಹಿಂದೆ ತಿರಿಕೊಂಡಿರುತ್ತಾನೆ. ನನಗೆ ಒಟ್ಟು 3 ಜನ ಮಕ್ಕಳಿದ್ದು ಹಿರಿಯವ ಮಾಳಪ್ಪ, ಎರಡನೇಯವಳು ಹಣಮಂತಿ ಮೂರನೇಯವ ಹಣಮಂತ ಅಂತಾ ಇರುತ್ತಾರೆ. ಎಲ್ಲರಿಗೂ ಮದುವೆಯಾಗಿದ್ದು, ಹೆಣ್ಣುಮಗಳಾದ ಹಣಮಂತಿ ವಯ: 37 ಇವಳಿಗೆ ಸುಮಾರು 18-20 ವರ್ಷಗಳ ಹಿಂದೆ ಹತ್ತಿಕುಣಿ ಗ್ರಾಮದ ಲೋಕಪ್ಪ ತಂದೆ ಯಂಕಪ್ಪ ಚಾಟೇಕರ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ ರೇಣಮ್ಮ ಅಂತಾ 16 ವರ್ಷದ ಹೆಣ್ಣು ಮಗಳು ಮತ್ತು ಮಹೇಶ ಅಂತಾ 12 ವರ್ಷದ ಗಂಡು ಮಗನಿರುತ್ತಾನೆ. ನನ್ನ ಮಗಳು ಹಣಮಂತಿ ಮತ್ತು ಆಕೆಯ ಗಂಡ ಲೋಕಪ್ಪ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಾರೆ. ನನ್ನ ಅಳಿಯನಾದ ಲೋಕಪ್ಪ ಈತನ ದೊಡ್ಡಪ್ಪನ ಮಗನಾದ ಕೆಂಪಣ್ಣ ತಂದೆ ಭೀಮಣ್ಣ ಚಟೇಕರ ಈತನು ಈಗ ಸುಮಾರು 2-3 ತಿಂಗಳಿಂದ ನನ್ನ ಮಗಳಾದ ಹಣಮಂತಿ ಇವಳಿಗೆ ನೀನು ನಮ್ಮೂರ ಮೌಲಾನಸಾಬ ಮುಲ್ಲನೋರ ಇತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಿ ನೀನು ನಮ್ಮ ಮನೆತನದಲ್ಲಿ ಇರಲಿಕ್ಕೆ ಯೋಗ್ಯಳಲ್ಲ ಎಲ್ಲಾದರೂ ಹೋಗಿ ಸಾಯಿ ಅಂತಾ ಮಾನಸಿಕ ಹಿಂಸೆ ನೀಡುತ್ತಾ ಬಂದಿರುತ್ತಾನೆ, ಅದರಂತೆ ಅದೇ ಮೌಲಾನಸಾಬ ತಂದೆ ದಾವತಸಾಬ ಮುಲ್ಲನೋರ ಈತನು ಕೂಡಾ ಅದೇ ರೀತಿ ನೀನು ನಿನ್ನ ಭಾವನಾದ ಕೆಂಪಣ್ಣನೊಂದಿಗೆ ಇದ್ದಿ ಈ ವಿಷಯ ನಿಮ್ಮ ಮನೆಯವರ ಮುಂದೆ ಹೇಳಿ ನಿನ್ನ ಮಾನ ಮಯರ್ಾದೆ ಕಳೆಯುತ್ತೇನೆ ಅಂತಾ ಅವರಿಬ್ಬರೂ ನನ್ನ ಮಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದರಿಂದ ಅವಳು ಈ ವಿಷಯ ಒಂದು ವಾರದ ಹಿಂದೆ ನಮ್ಮೂರ ಜಾತ್ರಗೆ ಬಂದಾಗ ನಮ್ಮ ಮುಂದೆ ಹೇಳಿ ಅವರಿಬ್ಬರ ತೊಂದರೆ ನನಗೆ ಸಾಕಾಗಿ ಹೋಗಿದೆ ನಾನು ಏನಾದರೂ ಮಾಡಿಕೊಂಡು ಸಾಯುತ್ತೇನೆ ಅಂತಾ ಬೆಸರ ಮಾಡಿಕೊಂಡು ಹೇಳಿದಾಗ ನಾವು ಅವಳಿಗೆ ಸಮದಾನ ಪಡಿಸಿ ಬುದ್ದಿವಾದ ಹೇಳಿ ದಿನಾಂಕ 02-04-2018 ರಂದು ಮರಳಿ ಹತ್ತಿಕುಣಿ ಗ್ರಾಮಕ್ಕೆ ಕಳಿಸಿಕೊಟ್ಟಿದ್ದೇವು. ನಂತರ ನಾನು ನನ್ನ ಮಕ್ಕಳು ಹಾಗೂ ನನ್ನ ಸಂಬಂಧಿಕರು ಹತ್ತಿಕುಣಿ ಗ್ರಾಮಕ್ಕೆ ಹೋಗಿ ನನ್ನ ಮಗಳ ಭಾವ ಕೆಂಪಣ್ಣ ಹಾಗೂ ಮೌಲಾನಸಾಬ ಇಬ್ಬರಿಗೆ ಬುದ್ದಿವಾದ ಹೇಳಿ ಇನ್ನೊಮ್ಮೆ ಈ ರೀತಿ ತೊಂದರೆ ನೀಡದಂತೆ ತಾಕೀತು ಮಾಡಿ ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 05-04-2018 ರಂದು ಸಾಯಂಕಾಳ 7-30 ಗಂಟೆ ಸುಮಾರಿಗೆ ನನಗೆ ಹತ್ತಿಕುಣಿ ಗ್ರಾಮದಿಂದ ನನ್ನ ಮೊಮ್ಮಗಳಾದ ರೇಣಮ್ಮಾ ಇವಳು ಪೋನ ಮಾಡಿ ತಿಳಿಸಿದ್ದೇನೆಂದರೆ ತನ್ನ ತಾಯಿಯಾದ ಹಣಮಂತಿ ಇವಳು  ಈಗ ಅರ್ದ ತಾಸಿನ ಹಿಂದೆ ಮನೆಯಲ್ಲಿ ಅಳುತ್ತಾ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾಳೆ. ಅವಳಿಗೆ ಮೈತುಂಬಾ ಪೂತರ್ಿ ಸುಟ್ಟಗಾಯಗಳಾಗಿದ್ದು ಯಾದಗಿರಿ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಅಂತಾ ತಿಳಿಸಿದಾಗ ಗಾಬರಿಕೊಂಡು ನಾನು ಮತ್ತು ನನ್ನ ಮಕ್ಕಳು ಹಾಗೂ ನನ್ನ ಸಂಬಂಧಿಕರು ಯಾದಗಿರ ಸರಕಾರಿ ಆಸ್ಪತ್ರೆಗೆ ಬಂದಾಗ ನನ್ನ ಮಗಳಿಗೂ ಕೂಡಾ ರಾತ್ರಿ 9 ಗಟೆಯ ಸುಮಾರಿಗೆ ಆಸ್ಪತ್ರೆಗೆ ತೆಗೆದುಕೊಂಡು ಬಂದರು. ಅವಳಿಗೆ ಮೈ ಪೂತರ್ಿ ಸುಟ್ಟಗಾಯಗಳಾಗಿದ್ದು ಮೈಮೇಲೆ ಚರ್ಮ ಸುಲಿದಂತಾಗಿತ್ತು.ಅವಳಿಗೆ ಮಾತಾಡಿಸಿ ನೋಡಲಾಗಿ ಅವಳು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.ನಂತರ ಸ್ವಲ್ಪ ಸಮಯದ ನಂತರ ರಾತ್ರಿ 9-30 ಗಂಟೆ ಸುಮಾರಿಗೆ ನನ್ನ ಮಗಳು ಉಪಚರ ಹೊಂದುತ್ತಾ ಮೃತಪಟ್ಟಳು. ನನ್ನ ಅಳಿಯನಾದ ಲೋಕಪ್ಪ ಈತನಿಗೆ ವಿಚಾರಿಸಲಾಗಿ ತಾನು ಮನೆಯ ಹೊರಗಡೆ ಇದ್ದು ಚಿರಾಡುವ ಶಬ್ದ ಕೇಳಿ ನೋಡಿ ನಾನು ಮತ್ತು ತಿಮ್ಮಣ್ಣ ತಂದೆ ಭೀಮಶಪ್ಪ ,ಯಂಕಪ್ಪ ತಂದೆ ಸಾಬಣ್ಣ ಚಾಟೇಕರ ಎಲ್ಲರೂ ಕೂಡಿ ಬೆಂಕಿ ಆರಿಸಿರುತ್ತೇವೆ ಅಂತಾ ತಿಳಿಸಿದನು. ನನ್ನ ಮಗಳಾದ ಹಣಮಂತಿ  ಇವಳಿಗೆ ನನ್ನ ಮಗಳ ಗಂಡನ ಸಂಬಂಧಿಯಾದ ಕೆಂಪಣ್ಣ ತಂದೆ ಭೀಮಶಪ್ಪ ಚಾಟೇಕರ ಮತ್ತು ಮೌಲಾನಸಾಬ ತಂದೆ ದಾವತಸಾಬ  ಇಬ್ಬರೂ ಕೂಡಿ ಹಣಮಂತಿ ಇವಳಿಗೆ ವಿನಾಃ ಕಾರಣ ವಿಪರೀತ ಮಾನಸಿಕ ಹಿಂಸೆ ನೀಡಿದ್ದು ಅವರು ಕೊಡುವ ಕಿರುಕುಳ ತಾಪ ತಾಳಲಾರದೇ ಹಣಮಂತಿ ಇವಳು ಮೈಮೇಲೆ ಸೀಮೆ ಎಣ್ಣೆಹಾಕಿಕೊಂಡು ಬೆಂಕಿಹಚ್ಚಿಕೊಂಡು ಮೈತುಂಬಾ ಸುಟ್ಟಗಾಯಗಳು ಹೊಂದಿ ಮೃತಪಟ್ಟಿರುತ್ತಾಳೆ. ನನ್ನ ಮಗಳ ಸಾವಿಗೆ ಕಾರಣರಾದ ಕೆಂಪಣ್ಣ ತಂದೆ ಭೀಮಶಪ್ಪ ಚಾಟೇಕರ ಮತ್ತು ಮೌಲಾನಸಾಬ ತಂದೆ ದಾವತಸಾಬ  ಸಾ: ಇಬ್ಬರೂ ಹತ್ತಿಕುಣಿ ಇವರ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಪಿರ್ಯಾಆಈಯನ್ನು ಪಡೆದುಕೊಂಡು 10 ಪಿ.ಎಮ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2018 ಕಲಂ 498(ಎ), 306 ಐ.ಪಿ.ಸಿ  ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 177/2018 ಕಲಂ 379  ಐ.ಪಿ.ಸಿ;- ದಿನಾಂಕ 05/04/2018 ರಂದು ಸಾಯಂಕಾಲ 16-00 ಗಂಟೆಗೆ ಫಿರ್ಯಾದಿ ಶ್ರೀ ಬಸವರಾಜಯ್ಯ ತಂದೆ ಸೂಗಯ್ಯ ಹಿರೇಮಠ ವಯ 29 ವರ್ಷ ಜಾತಿ ಜಂಗಮ ಸಾಃ ಇಟಗಾ[ಎಸ್] ಹಾಲಿವಸತಿ ಬಾಪುಗೌಡ ನಗರ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿರ್ಯಾದಿಯವರ ಹೆಸರಿನಲ್ಲಿ ಒಂದು ಹಿರೋ ಹೊಂಡಾ ಸ್ಪ್ಲೆಂಢರ್ ಪ್ಲಸ್ ಮೋಟರ ಸೈಕಲ್ ನಂಬರ ಕೆಎ-33-ಎಸ್-6642 ನೇದ್ದು ಇಂಜಿನ್ ನಂ ಊಂ10ಇಖಈಊಒ66515 & ಚೆಸ್ಸಿ ನಂ ಒಃಐಊಂ10ಅಉಈಊಒ18181 ಅಂ.ಕಿ 20,000=00 ಕಿಮ್ಮತ್ತಿನದು ತನ್ನ ದಿನನಿತ್ಯದ ಹುಂಡಿ ಕಲೇಕ್ಷನಗೆ ಉಪಯೋಗ ಮಾಡಿಕೊಂಡಿದ್ದು, ದಿನಾಂಕ 19/03/2018 ರಂದು ತನ್ನ ಹುಂಡಿ ಕಲೇಕ್ಷನಗೆ ಉಪಯೋಗಿಸಿಕೊಂಡು  ರಾತ್ರಿ 9-00 ಗಂಟೆಗೆ ಬಾಪುಗೌಡ ನಗರದಲ್ಲಿರುವ ತನ್ನ ಚಿಕ್ಕಪ್ಪನ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ 20/03/2018 ರಂದು ಬೆಳಗಿನ ಜಾವ 04-00 ಗಂಟೆಗೆ ಫಿರ್ಯಾಧಿ ನೈಸಗರ್ಿಕ ಕ್ರಿಯೇಗೆ ಎದ್ದಾಗ ಮೋಟರ ಸೈಕಲ್ ಮನೆಯ ಮುಂದೆ ಇದ್ದು, ನೈಸಗರ್ಿಕ ಕ್ರೀಯೇ ಮಾಡಿ ಪುನಃ ರೂಮಿನಲ್ಲಿ ಹೋಗಿ ಮಲಗಿಕೊಂಡು ಬೆಳಗಿನ ಜಾವ 06-00 ಗಂಟೆಗೆ ಎದ್ದು ನೋಡಿದಾಗ ತನ್ನ ಮೋಟರ ಸೈಕಲ್ ಇರಲಿಲ್ಲ. ಹುಡಕಾಡಿದರು ಸಿಕ್ಕಿರುವುದಿಲ್ಲ ಯಾರೋ ಕಳ್ಳರು ದಿನಾಂಕ 20/03/2018 ರಂದು ಬೆಳಗಿನ ಜಾವ 04-00 ಗಂಟೆಯಿಂದ 06-00 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 177/2018 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.Know Your Officers

SP Yadgir District

Iada Martin Marbaniang IPS

Officer Name Contact Number
ASP Shorapur Sub Division 9480803637
DSP Yadgir Sub Division 9480803526
Police Control Room Yadgir 9480803600

Important Links

Photo Gallery

Popular Posts

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!