Yadgir District Reported Crimes Updated on 23-03-2018

By blogger on ಶುಕ್ರವಾರ, ಮಾರ್ಚ್ 23, 2018

                                   

                                              Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 85/2018 ಕಲಂ 279,337, 338 ಐಪಿಸಿ ಸಂ. 134(ಎ)&(ಬಿ), 187 ಐ.ಎಂ.ವಿ ಆಕ್ಟ್;- ದಿನಾಂಕ 22.03.2018 ರಂದು ಬೆಳಿಗ್ಗೆ 11.15 ಗಂಟೆ ಸುಮಾರಿಗೆ ಪಿರ್ಯಾದಿಯು ತನ್ನ ಮೋಟರ ಸೈಕಲ ನಂ. ಕೆಎ-32-ಈಕೆ-9048 ನೆದ್ದರ ಮೇಲೆ ಗಾಯಾಳು ಸುರೇಖಾ ಇವಳಿಗೆ ಕೂಡಿಸಿಕೊಂಡು ಸೇಡಂ ತಾಲ್ಲೂಕಿನ ಮುಕಂಪಲ್ಲಿ ಗ್ರಾಮಕ್ಕೆ ಹೋಗುತ್ತಿದ್ದಾಗ ಯಾದಗಿರಿ-ಗುರುಮಠಕಲ ಮೇಲೆ ಬರುವ ಧರ್ಮಪೂರ ಕ್ರಾಸ ಹತ್ತಿರ ಗುರುಮಠಕಲ ಕಡೆಯಿಂದ ಒಬ್ಬ ಟಾಟಾ ಎ.ಸಿ.ಇ ನಂ. ಟಿ.ಎಸ-06-ಯುಎ-7537 ನೆದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾಧಿ ಹೋಗುತ್ತಿದ್ದ ಮೋಟರ ಸೈಕಲದ ಬಲಭಾಗಕ್ಕೆ ಡಿಕ್ಕಿಪಡಿಸಿದ್ದರಿಂದ ಸದರಿ ಅಪಘಾತದಲ್ಲಿ ಮೋಟರ ಸೈಕಲ ಹಿಂದೆ ಕುಳಿತ ಸುರೇಖಾ ಇವಳಿಗೆ ಹಣೆಗೆ, ತಲೆಗೆ, ತುಟಿಗೆ, ಗದ್ದಕ್ಕೆ ರಕ್ತಗಾಯವಾಗಿ, ಬಾಯಿಯ ಒಳಗಡೆ ರಕ್ತಗಾಯವಾಗಿ ಹಲ್ಲುಗಳು ಮುರಿದಂತೆ ಕಂಡು ಬಂದಿದ್ದು, ಸದರಿಯವಳು 9 ತಿಂಗಳ ತುಂಬು ಗಭರ್ೀಣಿ ಇದ್ದು ಅವಳ ಹೊಟ್ಟೆಗೆ ಗುಪ್ತಪೆಟ್ಟಾಗಿದ್ದು ಇರುತ್ತದೆ. ಟಾಟಾ ಎ.ಸಿ.ಇ ಚಾಲಕ ಡಿಕ್ಕಿಕೊಟ್ಟು ತನ್ನ ವಾಹನ ನಿಲ್ಲಿಸದೆ ಓಡಿ ಹೋದ ಬಗ್ಗೆ ಅಪರಾಧ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 88/2018 ಕಲಂ 279, 337, 338 ಐಪಿಸಿ;- ದಿನಾಂಕ 22.03.2018 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಡಿ.ಸಿ.ಎಮ್ ಗಾಡಿ ನಂ: ಜಿಎ-09-ಯು-5035 ನೇದ್ದರಲ್ಲಿ ಸಿಲಿಂಗ್ ಫ್ಯಾನ್ಗಳ ಬಿಡಿ ಭಾಗಗಳನ್ನು ಲೋಡ್ ಮಾಡಿಕೊಂಡು ಗೋವಾದ ಕಡೆಗೆ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿಯ ಮುಖಾಂತರ ಹೋಗುತ್ತಿದ್ದಾಗ ಇಂದು ದಿನಾಂಕ 23.03.2018 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಸದರಿ ಲಾರಿ ಚಾಲಕ ಜಟ್ಟೆಪ್ಪ ಈತನು ತನ್ನ ಡಿ.ಸಿ.ಎಮ್ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕಂದಕೂರು-ಗಣಪೂರ ಕ್ರಾಸ್ನ ನಡುವೆ ಮುಖ್ಯ ರಸ್ತೆಯ ಮೇಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಡಿ.ಸಿ.ಎಮ್ ವಾಹನವನ್ನು ಎಡಗಡೆಗೆ ಪಲ್ಟಿಯಾಗಿದ್ದು ಸದರಿ ಅಪಘಾತಕಾಲಕ್ಕೆ ಫಿರ್ಯಾದಿಗೆ ಎಡಗೈಗೆ ಒಳಪೆಟ್ಟಾಗಿ ಬಲಗಾಲು ಮುರಿದಂತೆ ಆಗಿ ಭಾರಿ ಪೆಟ್ಟಾಗಿ ಬಾವುಬಂದಿರುತ್ತದೆ. ನನ್ನ ಮಾವನಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಸದರಿ ಡಿ.ಸಿ.ಎಮ್ ವಾಹನದ ಗಾಜು ಹೊಡೆದು ಪುಡಿ-ಪುಡಿಯಾಗಿದ್ದು ಅಲ್ಲದೆ ಕ್ಯಾಬಿನ್ ಹಾಗೂ ಡಿ.ಸಿ.ಎಮ್ನ ಕೆಲ ಭಾಗವು ಜಖಂಗೊಂಡಿರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 88/2018 ಕಲಂ: 279, 337

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 50/2018  ಕಲಂ 323, 324, 504, 506 ಐಪಿಸಿ;- ದಿನಾಂಕ 22-03-2018 ರಂದು 8-15 ಎ.ಎಮ್ ಕ್ಕೆ ಫಿರ್ಯಾಧಿ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದವನಿದ್ದು ನನ್ನ ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ನಡೆಸಿಕೊಂಡು ಉಪಜೀವಿಸುತ್ತೆನೆ. ಈಗ ಸುಮಾರು ವರ್ಷಗಳಿಂದ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಚಾಮನಳ್ಳಿ ರೋಡಿನ ಪಕ್ಕದಲ್ಲಿರುವ ನಮ್ಮ ಹೋಲದಲ್ಲಿಯೇ ಮನೆ ಮಾಡಿಕೊಂಡು ಅಲ್ಲಿಯೇ ಇರುತ್ತೆವೆ. ನನ್ನಂತೆ ನಮ್ಮ ಸಹೋದರರು ಹೋಲದಲ್ಲಿಯೇ ಇರುತ್ತಾರೆ. ನಮ್ಮ ಗ್ರಾಮದ ಕಬ್ಬಲಿಗ ಸಮಾಜದ ಶರಣಮ್ಮಾ ತಂದೆ ಬಸಣ್ಣಾ ಕೊಂಡಾ ಎನ್ನುವ ಹೆಣ್ಣುಮಗಳು ಮತ್ತು ನಾನು ಈಗ ಬಹಳ ದಿವಸಗಳಿಂದ ಪ್ರೀತಿ ಮಾಡುತ್ತಿದ್ದೆವು. ಈ ವಿಷಯ ಶರಣಮ್ಮಳ ಮನೆಯವರಿಗೆ ಗೊತ್ತಾಗಿ ಅವರ ಮನೆಯವರು ಹಲವಾರು ಸಲ ನನ್ನ ಜೊತೆಗೆ ಜಗಳಾ ಮಾಡುತ್ತಾ ಬಂದಿರುತ್ತಾರೆ.  ನಂತರ  ಅವಳಿಗೆ ನಮ್ಮೂರಲ್ಲಿಯೇ ಒಬ್ಬ ಹುಡುಗನಿಗೆ ಕೊಟ್ಟು ಮದುವೆ ಮಾಡಿದರು. ಕೆಲವು ವರ್ಷಗಳ ನಂತರ ಶರಣಮ್ಮಾ ಮತ್ತು ಅವಳ ಗಂಡನಿಗೆ ಹೊಂದಾಣಿಕೆ ಆಗದ ಕಾರಣ ಅವಳ ಗಂಡನು ಶರಣಮ್ಮಳನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾದನು. ನಂತರ ಶರಣಮ್ಮಳು ತನ್ನ ತಂದೆ-ತಾಯಿ ಮನೆಯಲ್ಲಿಯೇ ಇದ್ದಳು. ನಂತರ ಇತ್ತಿತ್ತಲಾಗಿ ಶರಣಮ್ಮಳು ನನಗೆ ಮದುವೆ ಮಾಡಿಕೊಳ್ಳು ಅಂತಾ ಕೇಳಿಕೊಂಡಾಗ ನಾನು ಹಾಗೇ ಮುಂದೆ ಮುಂದೆ ಹಾಕುತ್ತಾ ಹೋದವರ್ಷ ಅಂದರೆ 2017 ನೇ ಸಾಲಿನಲ್ಲಿ ಡಿಸೆಂಬರ 1 ನೇ ತಾರಿಖಿನಂದು ಶರಣಮ್ಮಳಿಗೆ ರಜೀಷ್ಟರ ಮ್ಯಾರೆಜ್ ಮಾಡಿಕೊಂಡೆನು. ಆ ವೇಳೆಯಲ್ಲಿಯೂ ಕೂಡಾ ಶರಣಮ್ಮಳ ಮನೆಯವರೂ ಸಮಯ ಬರಲಿ ನಿನಗೆ ಒಂದು ಕೈ ನೋಡಿಕೊಳ್ಳುತ್ತೆವೆ ಅಂತಾ ಹೆದರಿಸುತ್ತಾ ಬಂದಿದ್ದರು.
    ಇಂದು ದಿನಾಂಕ 22-03-2018 ರಂದು ನಮ್ಮ ಹೋಲದಲ್ಲಿ ಕೆಲಸ ಮಾಡುವ ಒಬ್ಬ ಮನುಷ್ಯ ಬೇಕಾಗಿದ್ದರಿಂದ ನಮ್ಮೂರ ಸಾಬಣ್ಣಾ ತಂದೆ ಮಲ್ಲಪ್ಪಾ ಚಾಮನಳ್ಳಿ ಇತನಿಗೆ ಕರೆದುಕೊಂಡು ಹೋಗುವ ಸಲುವಾಗಿ ನಮ್ಮುರಿಗೆ ಬಂದು ಸೇಡಂ ಮುಖ್ಯ ರಸತೆಯ ಪಕ್ಕದಲ್ಲಿದ್ದ ಅನಂತಮ್ಮಾ ಇವರ ಹೊಟೇಲದಲ್ಲಿ ಸಾಬಣ್ಣನು ಚಹಾ ಕುಡಿತ್ತಿದ್ದನು. ಆಗ ನಾನು ಮತ್ತು ಸಿದ್ದಪ್ಪಾ ತಂದೆ ರಾಯಪ್ಪಾ ಸಿದ್ದಣ್ಣನೋರ ಹಾಗೂ ರೆಡ್ಡೆಪ್ಪಾ ತಂದೆ ಮಲ್ಲಪ್ಪಾ ಕಾವಿಲೇರ ಮೂವರು ಮಾತಾಡುತ್ತಾ ಅಲ್ಲಿಯೇ ಹೋಟೇಲ್ ಮುಂದೆ ಮಾತಾಡುತ್ತಾ ನಿಂತಾಗ ಅದೇ ವೇಳೆಗೆ ನಾನು ಮದುವೆ ಮಾಡಿಕೊಂಡ ಶರಣಮ್ಮಾ ಇತನ ತಮ್ಮನಾದ ಸಣ್ಣಮೀರಾ ತಂದೆ ಬಸಣ್ಣಾ ಕೊಂಡಾ ಇತನು ಬಂದವನೇ ಒಮ್ಮೇಲೆ ಭೊಸಡಿ ಮಗನೇ ನೀನು ನಮ್ಮ ಅಕ್ಕ ಶರಣಮ್ಮಳಿಗೆ ಮದುವೆ ಮಾಡಿಕೊಂಡು ನಮ್ಮ ಮನೆಯೆ ಮಾನ ಮರ್ಯಾದೆ ಕಳೇದಿದ್ದಿ ಇವತ್ತ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೊಲಸು ಶಬ್ದಗಳಿಂದ ಬೈಯುತ್ತಾ ಅಲ್ಲಿಯೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಜೋರಾಗಿ ನನ್ನ ಎಡಗಣ್ಣಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಮತ್ತು ಕಾಲಿನಿಂದ ನನ್ನ ಟೊಂಕದ ಮೇಲೆ ಜೋರಾಗಿ ಒದ್ದಾಗ ನಾನು ಕೆಳಗೆ ಬಿದ್ದೆನು. ಆಗ ಅಲ್ಲಿಯೇ ನನ್ನ ಜೋತೆಯಲ್ಲಿ ಮಾತಾಡುತ್ತಾ ನಿಂತಿದ್ದ  ಇದ್ದ ಸಿದ್ದಪ್ಪಾ ತಂದೆ ರಾಯಪ್ಪಾ ಸಿದ್ದಣ್ಣನೋರ ಹಾಗೂ ರೆಡ್ಡೆಪ್ಪಾ ತಂದೆ ಮಲ್ಲಪ್ಪಾ ಕಾವಿಲೇರ ಇವರಿಬ್ಬರೂ ನನಗೆ ಹೊಡೆಬಡಿ ಮಾಡುತ್ತಿದ್ದ ಸಣ್ಣಮೀರಾ ತಂದೆ ಬಸಣ್ಣಾ ಸಮುಜಾಯಿಸಿ ಜಗಳಾ ಬಿಡಿಸಿ ಆತನಿಗೆ ಅಲ್ಲಿಂದ ಕಳುಹಿಸಿದರು. ನನಗೆ ಹೊಡೆಬಡಿ ಮಾಡಿದ ಸಣ್ಣಮೀರಾ ತಂದೆ ಬಸಣ್ಣಾ ಕೊಂಡಾ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿ  ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಡಬೇಕು ಅಂತಾ ಹೇಳಿಕೆ ನೀಡಿದ್ದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2018 ಕಲಂ 323, 324, 504, 506 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 24/2018  ಕಲಂ 279, 338 ಐಪಿಸಿ;- ದಿನಾಂಕ 22/03/2018 ರಂದು  ಸಾಯಂಕಾಲ 5-30 ಪಿಎಮ ಸುಮಾರಿಗೆ ಫಿಯರ್ಾದಿಯವರ ಮಗಳಾದ ಗಾಯಾಳು ಶರಣಮ್ಮ  ಇವರು ತಮ್ಮ ಸಂಬಂಧಿಕರ ಮೋಟಾರು ಸೈಕಲ್ ನಂಬರ ಕೆಎ-33, ಯು-7174 ನೇದ್ದರ ಮೇಲೆ ತಮ್ಮ ಸಂಬಂಧಿ ವೆಂಕಟೆಶ ಈತನೊಂದಿಗೆ ಹೊಸಳ್ಳಿ ಕ್ರಾಸ್ನಿಂದ ಡಾನ್ ಬೋಸ್ಕೋ ಶಾಲೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಶ್ರೀ ಬಸವೆಶ್ವರ ಕಲ್ಯಾಣಮಂಟಪದ ಎದುರುಗಡೆ ಮುಖ್ಯ ರಸ್ತೆಯ ಮೇಲೆ ಮೋಟಾರು ಸೈಕಲ್ ನಂಬರ ಕೆಎ-33, ಯು-7174 ನೇದ್ದನ್ನು ನಡೆಸುತ್ತಿದ್ದ ವೆಂಕಟೆಶ ಈತನು ಮೋಟಾರು ಸೈಕಲನ್ನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ ಹಠಾತ್ತನೆ ರಸ್ತೆಯ ಮೇಲೆ ಹಂದಿಯು ಅಡ್ಡ ಬಂದಾಗ ಒಮ್ಮೊಲೆ ಬ್ರೇಕ್ ಹಾಕಿದಾಗ ಸ್ಕಿಡ್ಡಾಗಿ ಅಪಘಾತವಾಗಿದ್ದು ಇರುತ್ತದೆ.  ಅಪಗಾತದಲ್ಲಿ ಫಿಯರ್ಾದಿಯ ಮಗಳಾದ ಗಾಯಾಳು ಶರಣಮ್ಮ ಇವಳಿಗೆ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯ, ಬಲಭುಜಕ್ಕೆ ಬಾರೀ ಗುಪ್ತಗಾಯವಾಗಿದ್ದು  ಗಾಯಾಳು ಇವರಿಗೆ ಪ್ರಜ್ಞೆ ಇರುವುದಿಲ್ಲ ಮೋಟಾರು ಸೈಕಲ್ ಚಾಲಕನ ಮೇಲೆ ಕ್ರಮ ಜರುಗಿಸಲು ಫಿಯರ್ಾದಿ ಅದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 67/2018 ಕಲಂ: 323.420.495.498(ಎ) 504.506.ಐ ಪಿ ಸಿ. ಮತ್ತು 3 ಡಿ.ಪಿ.ಯ್ಯಾಕ್ಟ. ಮತ್ತು 3 (1) ಅರ್.ಎಸ್.ಡಬ್ಲ್ಯೂ.(2) ಎಸ್ಸಿ/ಎಸ್ಟಿ. ಕಾಯ್ದೆ 1989.;- ದಿನಾಂಕ 22-03-2018 ರಂದು 6 ಪಿ ಎಂ ಕ್ಕೆ ಪಿಯರ್ಾದಿ ಶ್ರೀಮತಿ ರಾಜೇಶ್ವರಿ ತಂದೆ ವೆಂಕಪ್ಪ ವಯಾ|| 31 ವರ್ಷ ಜಾ|| ಪರಿಶಿಷ್ಟ ಜಾತಿ. (ಮಾದಿಗ) ಉ|| ಅತೀಥಿ ಶೀಕ್ಷಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜಲಾಪೂರ ಸಾ|| ಬದ್ದೆಪಲ್ಲಿ. ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆದ ಪಿಯರ್ಾದಿಯನ್ನು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ. ನಾನು 2015 ರಲ್ಲಿ ಅತೀಥಿ ಶೀಕ್ಷಕಿಯಾಗಿ ಅಜಲಾಪೂರ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು. 2016 ನೇಯ ಸಾಲಿನಲ್ಲಿ ಮಾರ್ಚನಲ್ಲಿ ಕೊಪ್ಪಳ ಜಿಲ್ಲೆಯಿಂದ ಕೃಷ್ಣ ತಂದೆ ಕೋನಪ್ಪ ಶೆಟ್ಟರ ಸಹಶೀಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜಲಾಪೂರ ತಾ|| ಜಿಲ್ಲಾ|| ಯಾದಗಿರಿ ವಯಾ|| 31 ವರ್ಷ ಜಾ|| ಕೊಮಟಿಗ ಸಾ|| ಉಚ್ಚಲಕುಂಟಾ .ವಂಕಲಕುಂಟಾ. ಜಿಲ್ಲಾ|| ಕೊಪ್ಪಾಳ ಇವರು ಸಹ ಶೀಕ್ಷಕರಾಗಿ ಸದರಿ ಶಾಲೆಗೆ ಬಂದಿರುತ್ತಾರೆ.ನಂತರ ದಿನಗಳಲ್ಲಿ ಪರಿಚಯವಾಗಿದ್ದು. ಸ್ನೇಹದಿಂದ ಪ್ರೀತಿಯಾಗಿ ಬೆಳೆದು ಮದುವೆಯಾಗುತ್ತೇನೆಂದು ನನ್ನಲ್ಲಿ ನಂಬಿಕೆಹುಟ್ಟಿಸಿದರು ನಾನು ನಿನ್ನನ್ನು ಪ್ರೀತಿಸುತ್ತೇನೆ ಯಾರು ಏನೆ ಅಂದರು ನಾನು ನಿನ್ನನ್ನು ಮದುವೆಯಾಗುತ್ತೇನೆಂದು ನೀನನು ನನ್ನವಳು ನನ್ನ ಬಿಟ್ಟು ಬೇರೆಯಾರನ್ನು ಮದುವೆಯಾಗಬೇಡ ನಾನು ನಿನ್ನನ್ನು ಮದುವೆಯಾಗುತ್ತೇನೆಂದು ದೃಢನಂಬಿಕೆ ನನ್ನಲ್ಲಿ ಬೆಳೆಸಿ ಮುಂದೆ 17 ತಿಂಗಳ ಕಾಲ ನನ್ನಜೊತೆ ಸಲುಗೆಯಿಂದ ಇದ್ದು. ಮುಂದೆ ದಿನಾಂಕ 02-02-2018 ರಂದು ಯಾದಗಿರಿಯಲ್ಲಿ ಇಬ್ಬರ ಒಪ್ಪಿಗೆಯ ಮೇರೆಗೆ ಉಪನೊಂದಾಣಿ ಅಧಿಕಾರಿಗಳ ಕಛೆರಿಯಲ್ಲಿ ಮದುವೆಯಾಗಿರುತ್ತೇವೆ ಹೀಗಿದ್ದು ನನ್ನ ಗಂಡನು ನನಗೆ ಸ್ವಲ್ಪ ದಿನ ನಿನ್ನ ತವರು ಮನೆಯಲ್ಲಿ ಇರು ನಾನು ಮನೆನೋಡುವ ತನಕ ಎಂದು ತಿಳಿಸಿ ನನ್ನ ತಾಯಿಗೆ ಆರೋಗ್ಯ ತೊಂದರೆ ಇದೆ ಎಂದು ಹೇಳಿ ತನ್ನ ಸ್ವಂತ ಊರಿಗೆ ಹೋಗಿರುತ್ತಾನೆ ಮತ್ತೆ ನಡುವೆ ಶಾಲೆಗೆ ಬಂದು ಹೋಗಿರುತ್ತಾನೆ. ಆದರೆ ನನಗೆ ಯಾವುದೆ ವಿಷಯ ತಿಳಿಸಿರುವದಿಲ್ಲಾ.ನನಗೆ ಸಮಾಜದಲ್ಲಿ ಚುಚ್ಚುಮಾತುಗಳನ್ನು ಕೇಳಿ ಸಹಿಸಲಾಗದೆ ನನ್ನ ಗಂಡ ಬಂದ ವಿಷಯ ತಿಳಿದ ಮೇಲೆ ದಿನಾಂಕ 20-02-2018 ರಂದು ಶಾಲೆಗೆ ಹೋಗಿ ಇವರನ್ನು ಬೇಟಿಯಾಗಿ ನನ್ನನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ತಿಳಿಸಿದಾಗ ಆಗಲು ಮನೆ ನೋಡಿಲ್ಲಾ ಎಂದು ಸುಳ್ಳು ಹೇಳಿ ಮೂರು ದಿವಸ ನಾವಿಬ್ಬರು ನಿಮ್ಮ ಸಹೋದರನ ಮನೆಯಲ್ಲಿಯೇ ಇರೋಣ ನಾನು ಮನೆಯನ್ನು ನೋಡುವ ತನಕ ಇಲ್ಲಿಯೇ ಇರೋಣ ಎಂದು ಹೇಳಿದರು. ಆಗ ನಾನು ನನ್ನ ಗಂಡನ ಮಾತನ್ನು ಕೇಳಿ ನಾಬಿಬ್ಬರು ಸೇರಿಕೊಂಡು ನನ್ನ ಸಹೋದರನ ಮನೆಯಲ್ಲಿಯೇ ಬದ್ದೆಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದೇವು. ಮರುದಿನ ದಿನಾಂಕ 21-02-2018 ರಂದು ನನ್ನ ಗಂಡನು ಸಾಯಂಕಾಲ ಸಮಯದಲ್ಲಿ ನನಗೆ ಹೊರಗಡೆ ಹೋಗೋಣ ನಿನ್ನ ಜೊತೆ ಮುಖ್ಯ ವಿಷಯ ಮಾತನಾಡಬೇಕೆಂದು ಹೇಳಿ ನನ್ನನ್ನು ಅಜಲಾಪೂರ ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ಕರೆದುಕೊಂಡು ಹೋಗಿರುತ್ತಾನೆ. ನಾವಿಬ್ಬರು ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ರಸ್ತೆಯ ಮದ್ಯದಲ್ಲಿ ಸೀಮೆ ಮಾರೆಮ್ಮ ದೇವಸ್ತಾನವಿದ್ದು. ಸದರಿ ದೇವಸ್ತಾನದಲ್ಲಿ ನಾವಿಬ್ಬರು ಕುಳಿತುಕೊಂಡು ದೇವಸ್ತಾನಕ್ಕೆ ನಮಿಸಿರುತ್ತೇವೆ. ನಂತರ ಅಲ್ಲಿಯೇ ಕುಳಿತುಕೊಂಡಿರುವಾಗ ನನ್ನ ಗಂಡನು ನನಗೆ ನೀನು ಮಾದಿಗ ಜಾತಿಗೆ ಸೇರಿದವಳಾಗಿದ್ದು. ನಿಮ್ಮ ಜಾತಿಯವರು ಚಪ್ಪಲಿ ಮಾಡುವ ಕೆಲಸವನ್ನು ಮಾಡುತ್ತಿದ್ದು ನಿಮ್ಮ ಜಾತಿಯವರು ಮಾಂಸತಿನ್ನುತ್ತಿದ್ದು. ಇದು ನಮ್ಮ ತಂದೆ ತಾಯಿಯವರಿಗೆ ಹಾಗೂ ಕುಟುಂಬದವರಿಗೆ  ಹಿಡಿಸಿರುವದಿಲ್ಲಾ. ಆದ ಕಾರಣ ನೀನು ನನ್ನಿಂದ ದೂರವಾಗು ನೀನು ನಿಮ್ಮ ಜಾತಿಯವರ ಜೊತೆ ಇನ್ನೊಂದು ಮದುವೆ ಮಾಡಿಕೋ ಅಂತಾ ಹೇಳುತ್ತಿರುವಾಗ ನಾನು ಅದಕ್ಕೆ ವಿರೋಧವ್ಯಕ್ತಪಡಿಸಿದಾಗ ಆಗ ನನ್ನ ಗಂಡನು ನನಗೆ ಈರೀತಿ ಹೇಳುತ್ತಾ ತನ್ನ ಕಿಸೆಯಿಂದ ಒಂದು ಪೋಟೊವನ್ನು ತೆರೆದುತೋರಿಸುತ್ತಾ  ಈ ಹಿಂದೆ ನಿನಗೆ ಮದುವೆಯಾಗುವದಕ್ಕಿಂತ ಮುಂಚಿತನಾನು ಇನ್ನೊಬ್ಬಳನ್ನು ನಮ್ಮ ಜಾತಿಯವಳ ಜೊತೆ ಮದುವೆಯಾಗಿರುತ್ತೇನೆ. ಎಂಬ ವಿಷಯವನ್ನು ನನಗೆ ತಿಳಿಸಿದಾಗ ನಾನು ಅಘಾತಗೊಂಡು ನನ್ನ ಗಂಡನಿಗೆ ನೀನು ಯಾಕೆ ಮೋಸ ಮಾಡಿದಿ ಎಂಬು ಕೇಳಿದಾಗ ಲೇ ರಂಡಿ ಲೇ ಬೋಸಡಿ ಲೇ ಮಾದಿಗ ಸೂಳಿ ಮಗಳೆ ಏನ್ ನಿಮ್ಮ ಕುಲ ಕೀಳ ಜಾತಿಯಾಗಿದ್ದು. ಒಂದು ವೇಳೆ ನೀನೇನಾದರು ನನ್ನ ಜೊತೆಯಲ್ಲಿ ಇರಬೇಕಾದರೆ. ನಿನ್ನ ಪಗಾರು ಮತ್ತು ನಿಮ್ಮ ತಂದೆಯವರ ಹತ್ತಿರ ರೂಪಾಯಿ. 28 ಲಕ್ಷ ರುಪಾಯಿಗಳನ್ನು ತೆಗೆದುಕೊಂಡು ಭಾ ಆ ಹಣದಿಂಧ ನಾನು ಸ್ವಲ್ಪ ಸಾಲ ತೀರಿಸಿಕೊಂಡು ಉಳಿದ ಹಣದಲ್ಲಿ ನಿನಗೆ ಮನೆ ಖರೀದಿ ಮಾಡಿ ಅದರಲ್ಲಿ ನಿನಗೆ ಇಡುತ್ತೇನೆ ಎಂದು ನನಗೆ ತಿಳಿಸಿದಾಗ ನಾನು ಕೋಪಗೊಂಡು ನನ್ನ ಗಂಡನಿಗೆ ನೀನು ನನಗೆ ಮೋಸ ಮಾಡಿದಿ ಎಂದು ನನಗೆ ಹೇಳಿದಾಗ ನಾನು ಕೋಪಗೊಂಡು ನನ್ನ ಗಂಡನಿಗೆ ನೀನು ನನಗೆ ಮೋಸಮಾಡಿದಿ ಎಂದು ಬೈಯುತ್ತಿರುವಾಗ ಆಗ ನನ್ನ ಗಂಡನು ನನಗೆ ಕಪಾಳಕ್ಕೆ ಹೊಡೆದು ತನ್ನ ಎರಡು ಕೈಯಿಂದ ನನ್ನ ಕುತ್ತಿಗೆಯನ್ನು ಹಿಸುಕಿ ನನ್ನ ಮಾತನ್ನು ಕೇಳದಿದ್ದರೆ. ನಿನ್ನನ್ನು  ಖಲಾಸ ಮಾಡುತ್ತೇನೆಂದು ಕುತ್ತಿಗೆಯನ್ನು ಹಿಸುಕಿಕೊಲ್ಲಲ್ಲು ಪ್ರಯತ್ನಿಸುತ್ತಾನೆ. ನಾನು ಪ್ರಾಣಭಯದಲ್ಲಿ ತಪ್ಪಿಸಿಕೊಂಡು ಮನೆಗೆ ಬಂದಿರುತ್ತೇನೆ.ತದನಂತರ ನನ್ನ ಗಂಡನು ಅಲ್ಲಿಂದ ಓಡಿಹೋಗಿ ಇಲ್ಲಿಯವರೆಗೆ ನಮ್ಮ ಮನೆಗೆ ಮತ್ತು ಶಾಲೆಗೆ ಕೂಡ ಬಂದಿರುವದಿಲ್ಲಾ. ನನ್ನ ಗಂಡನು ಇವತ್ತು ಬರಬಹುದು ಮತ್ತು ನಾಳೆ ಬರಬಹುದು ಎಂದು ಇಲ್ಲಿಯವರೆಗೆ ಕಾಯುತ್ತಿರುವದರಿಂದ ನಾನು ತಮ್ಮ ಠಾಣೆಗೆ ಬಂದು ತಡವಾಗಿ ಪಿಯರ್ಾದಿ ಸಲ್ಲಿಸಲು ವಿಳಂಭವಾಗಿರುತ್ತದೆ. ಆದ ಕಾರಣ ಮಾನ್ಯರಾದ ತಾವುಗಳು ನನ್ನ ಗಂಡನು ನನಗೆ ಪ್ರೀತಿಸಿ ಮದುವೆ ಮಾಡಿಕೊಂಡು ನನ್ನ ಮದುವೆಯಾಗುವದಕ್ಕಿಂತ ಮುಂಚೆ ಇನ್ನೊಬ್ಬಳನ್ನು ಮದುವೆಮಾಡಿಕೊಂಡು ನನಗೆ ತಿಳಿಸದೆ ಮೋಸ ಮಾಡಿ ಮದುವೆಯಾಗಿದ್ದು. ಜಾತಿ ನಿಂದನೆ ಮಾಡಿ ವರದಕ್ಷಣೆ ಕಿರಕೂಳ ನೀಡಿ ನನಗೆ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡನಾದ ಕೃಷ್ಣ ತಂದೆ ಕೋನಪ್ಪ ಶೆಟ್ಟರ ಇವರ ಮೇಲೆ ಸೂಕ್ತ ಕಾನೂನ ಕ್ರಮ ಕೈಗೊಂಡು ನನಗೆ ಜೀವ ರಕ್ಷಣೆ ನೀಡಿ ನ್ಯಾಯೊದಗಿಸಿಕೊಡಬೇಕೆಂದು ತಮ್ಮಲ್ಲಿ ಪ್ರಾಥರ್ಿಸಿಕೊಳ್ಳುತ್ತೇನೆ ಅಂತಾ ಸಾರಾಂಶದ ಮೇಲಿಂದ. ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ. 67/2018 ಕಲಂ: 323.420.495.498(ಎ) 504.506.ಐ ಪಿ ಸಿ. ಮತ್ತು 3 ಡಿ.ಪಿ.ಯ್ಯಾಕ್ಟ. ಮತ್ತು 3 (1) ಅರ್.ಎಸ್.ಡಬ್ಲ್ಯೂ.(2) ಎಸ್ಸಿ/ಎಸ್ಟಿ. ಕಾಯ್ದೆ 1989. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.           ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 110/2018 ಕಲಂ 15(ಎ), 32,(3) ಕನರ್ಾಟಕ ಅಬಕಾರಿ ಕಾಯ್ದೆ ;- ದಿನಾಂಕ 22/03/2018 ರಂದು ಮದ್ಯಾಹ್ನ 13-30 ಗಂಟೆಗೆ ಶ್ರೀ ನಾಗರಾಜ.ಜಿ.,ಪಿ.ಐ. ಶಹಾಪೂರ ಪೊಲೀಸ್  ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 22/03/2018 ರಂದು ಬೆಳಿಗ್ಗೆ 10-00 ಗಂಟೆಗೆ  ನಾನು  ಠಾಣೆಯಲ್ಲಿದ್ದಾಗ ಹೋಸ ಬೀಟ್ ನಂ 21 ಬಸಂತಪೂರ ಶರಣಪ್ಪ ಹೆಚ್,ಸಿ,164, ರವರಿಗೆ ಹಂಚಿಕೆಯಾಗಿದ್ದು ಸದರಿ ಯವರಿಗೆ ಮಾಹಿತಿ ಬಂದಿದ್ದೆನೆಂದರೆ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಸಂತಪೂರ ಗ್ರಾಮದ ಆಟೋ ಸ್ಟ್ಯಾಟ್ಯಾಂಡ ಹತ್ತಿರ ಸಣ್ಣ ಅಂಗಡಿಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯ ಜಾಲಿ ಕಂಟಿಯ ಮರೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಬಾಬು ಹೆಚ್,ಸಿ, 162, ಶರಣಪ್ಪ ಹೆಚ್,ಸಿ,164, ಲಕ್ಕಪ್ಪ ಪಿ,ಸಿ, 198, ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169 ಇವರಿಗೆ ಬಾತ್ಮೀ ವಿಷಯ ತಿಳಿಸಿ ಬಾಬು ಹೆಚ್.ಸಿ. 162 ರವರಿಗೆ ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಬಸವರಾಜ ತಂದೆ ತಿಪ್ಪಣ್ಣ ಮುಸ್ತಾಜೀರ ವ|| 28 ಜಾ|| ಇಳಿಗೇರ ಉ|| ಒಕ್ಕಲುತನ ಸಾ|| ಹೈಯಾಳ (ಬಿ) 2] ಶ್ರೀ ಮಲ್ಲಪ್ಪ ತಂದೆ ನಿಂಗಪ್ಪ ನಸಲ್ವ್ವಾಯಿ ವ|| 35 ಜಾ|| ಕುರುಬುರ ಉ|| ಒಕ್ಕಲುತನ ಸಾ|| ಬಸಂತಪೂರ ಇವರನ್ನು 10-10 ಎ.ಎಂ.ಕ್ಕೆ ಕರೆದುಕೊಂಡು ಬಂದು ಹಾಜರಪಡಿಸಿದ್ದು, ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಕಾಲಕ್ಕೆ ಪಂಚರಾಗಿ ಪಂಚನಾಮೆಯನ್ನು ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿ ಕೊಂಡಿದ್ದು. ಎಲ್ಲರು ಕೂಡಿ ದಾಳಿ ಕುರಿತು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 10-20 ಎ.ಎಂಕ್ಕೆ ಠಾಣೆಯಿಂದ ಹೊರಟೆವು ಸದರಿ ವಾಹನವನ್ನು ಅಮಗೊಂಡ ಎ.ಪಿ.ಸಿ 169 ಇವರು ಚಲಾಯಿಸುತ್ತಿದ್ದರು, ನೇರವಾಗಿ ಬಸವಂತಪೂರ ಆಟೋ ಸ್ಟ್ಯಾಂಡ ಹತ್ತಿರ 11-10 ಎ.ಎಂಕ್ಕೆ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಂದ  ನಡೆದುಕೊಂಡು ಅಲ್ಲಿದ್ದ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ, ಅಲ್ಲಿ ಒಬ್ಬ ವ್ಯಕ್ತಿ ಕಿರಾಣಿ ಅಂಗಡಿಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯ ಜಾಲಿ ಕಂಟಿಯ ಮರೆಯಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚಿಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 11-20 ಎ.ಎಂಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಒಬ್ಬ ವ್ಯೆಕ್ತಿ ಸಿಕ್ಕಿದ್ದು ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಶರಣಪ್ಪ ತಂದೆ ಮಲ್ಲಪ್ಪ ಅಚ್ಚಕೇರಿ ವ|| 38 ಜಾ|| ಮಾದಿಗ ಉ|| ಕೂಲಿಕೆಲಸ ಸಾ|| ಬಸಂತಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಬಸಂತಪೂರ ಗ್ರಾಮದ ಆಟೋಸ್ಟ್ಯಾಂಡ ಹತ್ತಿರ ಕಿರಾಣಿ ಅಂಗಡಿಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯ ಜಾಲಿ ಕಂಟಿಯ ಮರೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 90 ಎಂ.ಎಲ್.ನ ಒಟ್ಟು 52 ಓರಿಜಿನಲ್ ಜಾಯ್ಸ  ಡಿಲಕ್ಸ ವಿಸ್ಕಿ ಮದ್ಯದ ಪಾಕೇಟ್ಗಳು ಇದ್ದು ಒಂದು ಪಾಕೇಟ್ನ ಕಿಮ್ಮತ್ತು 28.13 ರೂ ಅಂತಾ ಇದ್ದು, 52 ಮದ್ಯ ಪಾಕೇಟಗಳ ಕಿಮ್ಮತ್ತು 1462.76 ರೂ ಗಳಾಗುತ್ತಿದ್ದು ಮತ್ತು 03  ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಸದರಿ ಗ್ಲಾಸಗಳು ಮದ್ಯ ಕುಡಿಯಲು ಉಪಯೋಗಿಸಿದಂತೆ ಕಂಡು ಬಂದಿದ್ದು ಮತ್ತು ಮದ್ಯಕುಡಿಯಲು ಉಪಯೋಗಿಸಿದ 3 ಓರಿಜಿನಲ್ ಜಾಯ್ಸ  ಡಿಲಕ್ಸ ವಿಸ್ಕಿ ಮದ್ಯದ ಖಾಲಿ ಪಾಕೇಟಗಳು ಇದ್ದವು. 52 ಮದ್ಯದ ಪಾಕೇಟಗಳಲ್ಲಿ  ಒಂದು 90 ಎಂ.ಎಲ್ ನ 01 ಓರಿಜಿನಲ್ ಚಾಯ್ಸ  ಡಿಲಕ್ಸ ವಿಸ್ಕಿ ಮದ್ಯದ ಪಾಕೇಟ್ನ್ನು ಪಂಚರ ಸಮಕ್ಷಮದಲ್ಲಿ ಎಪ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರನ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 11-30 ಗಂಟೆಯಿಂದ 12-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 13-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯ್ಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 13-30 ಗಂಟೆಗೆ  ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 110/2018 ಕಲಂ 15(ಎ) 32 ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.


ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 47/2018 ಕಲಂ 324, 354, 504, 506 ಸಂಗಡ 34 ಐಪಿಸಿ;-ದಿನಾಂಕ:22/03/2018 ರಂದು 12.30 ಪಿ.ಎಮ್ ಸುಮಾರಿಗೆ ತನ್ನ ಸಂಗಡಿಗರ ಜೊತೆಗೆ ಕೂಡಿಕೊಂಡು ಮುಡಬೂಳ ಸೀಮಾಂತರದಲ್ಲಿ ಆರೋಪಿತನ ಹೊಲದಲ್ಲಿ ಕಟ್ಟಿಗೆಯನ್ನು ಆರಿಸುವ ಸಮಯದಲ್ಲಿ ಆರೋಪಿ ಭೀಮಣ್ಣ ಈತನು ಬಂದು ಕಟ್ಟಿಗೆಯನ್ನು ಏಕೆ ಆರಿಸುತ್ತೀರಿ ಲೇ ಮಾದಿಗ ಸೂಳೇರೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಸೀರೆ ಸೆರಗನ್ನು ಎಳೆದಾಡಿ ಬಡಿಗೆಯಿಂದ ಎಡಗೈಗೆ ಹೊಡೆದು ಗಾಯಪಡಿಸಿದ್ದು ಸಂಗಡಿಗರ ಮೇಲೆ ಸಹ ಹಲ್ಲೆ ಮಾಡಿದ್ದು ಫಿಯರ್ಾದಿಯು ಊರಿಗೆ ಬಂದು ಗಂಡಸರಿಗೆ ವಿಷಯ ತಿಳಿಸಿ ಠಾಣೆಗೆ ದೂರು ಕೊಡಲು ಹೋಗುವ ಸಮಯದಲ್ಲಿ ಭೀಮಣ್ಣನ ತಮ್ಮನಾದ ತಿಮ್ಮಣ್ಣ ತಂದೆ ತಿರುಪತಿ ಈತನು ಸಹ ಫಿಯರ್ಾದಿಗೆ ಅವಾಚ್ಯ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!