Yadgir District Reported Crimes Updated on 22-03-2018

By blogger on ಗುರುವಾರ, ಮಾರ್ಚ್ 22, 2018

                                          
                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 67/2018 ಕಲಂ 32, 34 ಕೆ ಇ ಆಕ್ಟ;- ದಿನಾಂಕ.21/03/2018 ರಂದು 2-10 ಪಿಎಂಕ್ಕೆ ಶ್ರೀಮತಿ ಮಂಜುಳಾ ಮ.ಪಿ.ಎಸ್.ಐ (ಅ.ವಿ) ಯಾದಗಿರಿ ನಗರ ಠಾಣೆಯರವರ ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.21.03.2018 ರಂದು 12-15 ಪಿ.ಎಂಕ್ಕೆ  ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಡಿಗ್ರಿ ಕಾಲೇಜ್ ಕ್ರಾಸಿನಲ್ಲಿ  ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರು ತೀರುಗಾಡುವ ರಸ್ತೆಯ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು ದಾಳಿ ಕುರಿತು ನಾನು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಹೊಗಿ 12-45 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಿದಾಗ ತನ್ನ ಹೆಸರು ಪ್ರೇಮಸಿಂಗ್ ತಂದೆ ರಾಜು ರಾಠೋಡ್ ವ;35 ಜಾ; ಲಂಬಾಣಿ ಉ; ಒಕ್ಕಲುತನ ಸಾ; ಠಾಣಗುಂದಿ ಠಾಣಾ ತಾ;ಜಿ; ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಒಂದು ಪ್ಲಾಸ್ಟಿಕ ಚೀಲದಲ್ಲಿ ಒಟ್ಟು 48 ಯುಎಸ್ ವಿಸ್ಕಿ 90 ಎಂಎಲ್ದ ಬಾಟಲ್ ಗಳಿದ್ದು ಒಂದಕ್ಕೆ 28.13 ರೂ.ದಂತೆ ಒಟ್ಟು 1350=24 ರೂ. ಕಿ ,ಮತ್ತಿನವುಗಳ ಬಾಟಲ್ಗಳಿದ್ದು ಸದರಿಯವನಿಗೆ ಕ್ವಾರ್ಟರಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೆ ಹಾಜರುಪಡಿಸು ಅಂತಾ ವಿಚಾರಿಸಲೂ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದನು. ನಂತರ 48 ಯುಎಸ್ ವಿಸ್ಕಿ 90 ಎಂಎಲ್. ಬಾಟಲ್ಗಳಲ್ಲಿ ಶ್ಯಾಂಪಲ್ಗಾಗಿ ಒಂದು ವಿಸ್ಕಿಯನ್ನು  ಎಫ್.ಎಸ್.ಎಲ್. ಪರೀಕ್ಷೇ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ನಾವು ಉಳಿದ ಎಲ್ಲಾ ಮಧ್ಯದ ಬಾಟಲಿಗಳನ್ನು ಮುಂದಿನ ಪುರಾವೆ ಕುರಿತು ಪ್ಲಾಸ್ಟಿಕ ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡರು.  ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 21/03/2018 ರಂದು 12-45 ಪಿಎಂ ದಿಂದ 1-45 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟ್ಯಾಪನಲ್ಲಿ ಗಣಕೀಕರಣ ಮಾಡಿ ನಂತರ 2-10 ಪಿಎಂಕ್ಕೆ ಠಾಣೆಗೆ  ಜಪ್ತಿ ಪಂಚನಾಮೆಯನ್ನು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ಠಾಣೆಗುನ್ನೆ ನಂ.67/2018 ಕಲಂ.32, 34 ಕೆ.ಇ ಆಕ್ಟ ಪ್ರಕರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 23/2018  ಕಲಂ 279, 338 ಐಪಿಸಿ;- ದಿನಾಂಕ 21/03/2018 ರಂದು  ಬೆಳಿಗ್ಗೆ 9 ಎ.ಎಂ. ದ ಸುಮಾರಿಗೆ ಯಾದಗಿರಿ ನಗರದ ಯಾದಗಿರಿ-ಮುಸ್ಟೂರ ಮುಖ್ಯ ರಸ್ತೆಯ ಮೇಲೆ ಬರುವ ಯಾದಗಿರಿ ಜೆಸ್ಕಾಂ ಕೆಪಿಟಿಸಿಎಲ್ ಕ್ವಾಟರ್ಸ ಮುಂದೆ ಫಿಯರ್ಾದಿಯು ತಮ್ಮ ಮೋಟಾರು ಸೈಕಲ್ ನಂ.ಕೆಎ-33, ಜೆ-6002 ನೇದ್ದರ ಮೇಲೆ ಶ್ರೀ ಗುರು ಶಾಲೆಯ ಕಡೆಯಿಂದ ಬರುವಾಗ ಆರೋಪಿತನು ತನ್ನ ಲಾರಿ ನಂ.ಎಮ್.ಪಿ.-09, ಎಚ್.ಜಿ-1244 ನೇದ್ದನ್ನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ಫಿಯರ್ಾದಿ ಮೋಟಾರು ಸೈಕಲಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು,  ಅಪಗಾತದಲ್ಲಿ ಫಿಯರ್ಾದಿಗೆ ಭಾರೀ ರಕ್ತಗಾಯ ಮತ್ತು ಭಾರೀಗುಪ್ತಗಾಯವಾಗಿದ್ದು ಇರುತ್ತದೆ  ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಲು ಫಿಯರ್ಾದಿ ಅದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 50/2018 ಕಲಂ: 504,324,326,354,506 ಸಂ 34 ಐಪಿಸಿ;- ದಿನಾಂಕ: 20/03/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿತರು ಮನೆಯ ಮುಂದಿನ ದಾರಿ ಸಂಬಂಧ ಜಗಳ ತೆಗೆದು ಫಿರ್ಯಾಧಿ ಮತ್ತು ಇತರರಿಗೆ ಹೊಡೆಬಡೆ ಮಾಡಿ ಭಾರಿ ಗಾಯಪಡಿಸಿದ್ದು, ಲಕ್ಷ್ಮೀ ಎಂಬುವಳಿಗೆ ಹೊಡೆಬಡೆ ಮಾಡಿ ಸೀರೆ ಸೆರಗು ಹಿಡಿದು ಜಗ್ಗಿ ಅವಾಚ್ಯ ಬೈದು ಜೀವ ಬೆದರಿಕೆ ಹಾಕಿದ ಬಗ್ಗೆ ಈ ಮೇಲ್ಕಂಡಂತೆ ಪ್ರಕರಣ ದಾಖಲಾಗಿರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 56/2018 ಕಲಂ: 32,34 ಕೆ.ಇ ಎಕ್ಟ್ 1965;- ಸದರಿ ಆರೋಪಿತನು ಗುಂಡಳ್ಳಿ ಸೀಮಾಂತರದ ಸೀಮೆ ಮಾರೆಮ್ಮ ದೇವಸ್ಥಾನದ ಹತ್ತಿರ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾಧಿದಾರರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಓಲ್ಡ ಟವರೇನ 10 ಪೌಚುಗಳು ಮತ್ತು ಓರಿಜಿನಲ್ ಚಾಯ್ಸ್ನ 35 ಪೌಚುಗಳನ್ನು ಜಪ್ತಿ ಮಾಡಿಕೊಂಡು ಬಂದು ಸರಕಾರಿ ತಫರ್ೆಯಿಂದ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 95/2018 ಕಲಂ 143 147 148 323 324 307 504 506 ಸಂಗಡ 149 ಐಪಿಸಿ;- ದಿ:15/03/2018 ರಂದು ರಾತ್ರಿ 07.30 ಗಂಟೆಯ ಸುಮಾರಿಗೆ ಫಿರ್ಯಾಧಿ ಮಗ ಆರೋಫಿತರ ಮನೆಯ ಮುಂದೆ ಹಾದು ಹೋಗುವಾಗ ಆರೋಪಿತರು ಪಿಯರ್ಾದಿ ಮಗ ಹೋಗುವದನ್ನು ಎಲ್ಲರೂ ಕೂಡಿ ಕಾಯ್ದು ಏಕಾಏಕಿ ಬಸಪ್ಪನು ಪಿಯರ್ಾದಿ ಮಗ ಪರಮಣ್ಣನ ಟೋಂಕ್ಕಕ್ಕೆ ಕಲ್ಲು ಹಾಕಿದಾಗ ಆಪೆಟ್ಟಿನಿಂದಾ ಪರಮಣ್ಣ ನೆಲಕ್ಕೆ ಉರಳಿದಾಗ ನಂದಪ್ಪ ಮತ್ತು ಯಮನಪ್ಪ ಇಬ್ಬರೂ ಕೂಡಿ ರಾಡಿನಿಂದಾ ಪರಮಣ್ಣ ತೆಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ್ದು ಉಳಿದವರೆಲ್ಲರೂ ಬಡಿಗೆ ಹಾಗೂ ಕಲ್ಲಿನಿಂದಾ ಪರಮಣ್ಣನಿಗೆ ಹೊಡೆಯುತ್ತಿದ್ದಾಗ ನೆಲಕ್ಕೆ ಉರಳಿದ್ದು ಆಗ ಪಿಯರ್ಾದಿ ಬಡಿಸಲು ಬಂದಾಗ ನಿನ್ನ ಮಗನನ್ನು ಸಾಯಿಸಿದ್ದೇವೆ ಮುಂದೆ ನಿನ್ನನ್ನು ಸಾಯಿಸುತ್ತೇವೆ ಅಂತಾ ಜೀವ ಭಯವನ್ನು ಹಾಕಿ ಹೋಗಿದ್ದು, ಆರೋಪಿತರು ಎಲ್ಲರೂ ಕೂಡಿ ನನ್ನ ಮಗನಾದ ಪರಮಣ್ಣಿನಿಗೆ ಕೊಲೆ ಪ್ರಯತ್ನ ಮಾಡಿ ಸಾಯಿಸಲು ಪ್ರಯತ್ನಪಟ್ಟವರ ಮೇಲೆ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 70/2018 ಕಲಂ 504, 509 ಸಂ.34 ಐಪಿಸಿ;-ದಿನಾಂಕ:21-03-2018 ರಂದು 10 ಪಿ ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ರಾಯಚೂರ ರಿಮ್ಸ ಬೋದಕ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುಮಾರಿ ಸುಪ್ರಿಯಾ ತಂದೆ ಗುರುಸ್ವಾಮಿ ಹಿರೇಮಠ ವಯಾ:18 ವರ್ಷ ಉ:ವಿಧ್ಯಾಥರ್ಿ ಜಾತಿ:ಹಿಂದೂ ಜಂಗಮ ಸಾ:ತಿಂಥಣಿ ತಾ:ಸುರಪುರ ಇವಳ ಹೇಳಿಕೆಯನ್ನು ಶ್ರೀ ನಾಗರಾಜ ಪಿ.ಐ ಸಾಹೇಬರು ಶಹಾಪೂರವರು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಯ ಚಂದ್ರಶೇಖರ ಹೆಚ್ಸಿ-134 ರವರೊಂದಿಗೆ ಕೊಟ್ಟು ಕಳಿಸಿದ್ದನ್ನು ಚಂದ್ರಶೇಖರ ಹೆಚ್ಸಿರವರಿಂದ ಸ್ವಿಕರಿಸಿಕೊಂಡಿದ್ದು  ಸಾರಾಂಶವೆನೆಂದರೆ  ನನ್ನ ಹೆಸರು ಸುಪ್ರಿಯಾ ಮೊದಲವರ್ಷ ಪಿಯುಸಿ ಪರೀಕ್ಷೆ ಬರೆದಿದ್ದು ಎರಡನೇ ವರ್ಷ ಪಿಯುಸಿ ಹೋಗುವಳು ಇದ್ದೆನೆ. ದಿನಾಂಕ: 19-03-2018 ರಂದು 11 ಎ.ಎಂ.ಸುಮಾರಿಗೆ ಮನೆಯಲ್ಲಿ ನಾನು ನನ್ನ ತಾಯಿ ಇಬ್ಬರು ಇದ್ದೆವು. ನಾನು ಒಂದು ಸಲಾ ಹಳ್ಳಕ್ಕೆ ಹೋಗಿ ಬಟ್ಟೆ ತೊಳೆದುಕೊಂಡು ಬರಲು ಹೋದಾಗ ಹಳ್ಳದಲ್ಲಿ ಇಬ್ಬರು ಹುಡುಗರು ಬಂದರು ಅವರು ಏಕೆ ಮಾತಾಡಿಸಲ್ಲಾ ಚಿಲ್ಲರೆ ನಾಯಿನಾ ಅಂತಾ ಕೆಟ್ಟದಾಗಿ ಬೈದರು ನಾನು ಸುಮ್ಮನಿದ್ದೆನು. ಅಲ್ಲಿರುವ ಅಕ್ಕನವರು ನನ್ನ ಬಕೀಟ ಬಚ್ಚಿಟ್ಟದ್ದರು ನಾನು ಬಕೇಟ ಹುಡುಕಾಡುವಾಗ ಮೂವರು ಅಕ್ಕರು ನಗುತ್ತಿದ್ದರು, ಗದ್ದೆಯಲ್ಲಿ ಕೆಲವರು ಕೆಲಸ ಮಾಡುತ್ತಿದ್ದರು. ನಾನು ಮನೆಗೆ ಹೋಗಿ ನಮ್ಮ ಮಮ್ಮಿಗೆ ಕರೆದುಕೊಂಡು ಬಂದೆನು. ಮಮ್ಮಿ ಅವರಿಗೆ ಕೇಳಿದಾಗ  ನಿಮ್ಮ ಬಕೇಟ ತಗೆದುಕೊಂಡು ಹೋಗು ಅಂತಾ ಕೊಟ್ಟರು. ನಾವು ಬಕೇಟ ತಗೆದುಕೊಂಡು ಮನೆಗೆ ಹೋದೆವು ಆಗ ಮನೆಯಲ್ಲಿ ಇದಕ್ಕೆ ಎಷ್ಟು ಹೊತ್ತು ಅಂತಾ ಕೇಳಿದರು ಎದಕ್ಕು ಇಲ್ಲಾ ಅಂತಾ ಹೇಳಿದೆನು. ಮತ್ತೆ ಅದು ಎಲ್ಲಾ ಹೇಳಿದರನು ನನಗೆ ಹೊಡಿತ್ತಾರೆ ಅಂತಾ ಹೇಳಿ, ಎದಕ್ಕು ಇಲ್ಲಾ ಬಂಡಿ ಕಾಲಿ ಇರಲಿಲ್ಲ ಅಂತಾ ಹೇಳಿದೆನು ಸುಮ್ಮನೆ ಆದರು. ನಮ್ಮ ಮನೆಯಲ್ಲಿ ಎಲ್ಲರೂ ಬೈಯಾಕತ್ತರು. ಹಿಂಗೆ ಮಾಡತಿ ಹಂಗೆ ಮಾಡತಿ ಅಂತಾ ಹೇಳಿ ಸುಮ್ಮನಾದೆ ಏನು ಮಾಡಲಿಲ್ಲ. ಅವರು ಹಾಂಗ ಸಂಬಂಧ  ನಾನು ಚೀಮಣಿ ಎಣ್ಣಿ ಹಾಕೊಂಡು ಸುಟ್ಟುಕೊಂಡಿರುತ್ತೆನೆ. ಆ ನಾಯಿನ ಮಾತಾಡಸಬೇಡಿರಿ ಸುವರ್ ಚಿಲ್ಲರ ನಾನು ಕಾಲೇಜಿಗೆ ಹೋಗುವ ಟೈಮದಲ್ಲಿ ಚುಡಾಯಿಸುವದು ಕಣ್ಣು ಹೊಡೆಯುವದು ಬೈಯುವದು ಬೆರೆಯವರ ಜೊತೆ ಏನಾದರೂ ಬರೆದು ಕಳಿಸುವದು ಮಾಡುತ್ತಿದ್ದರು. ನಮ್ಮೂರವರಾದ ಮೌನೇಶ, ನಿಂಗಪ್ಪ ಇವರು ಏನೊ ಮಾಡಬೇಕು ಅಂದುಕೊಡ್ಡಿದ್ದರು ಹಳ್ಳದಲ್ಲಿ ಜಾಸ್ತಿ ಜನ ಇದ್ದರಿಂದ ಅವರು ಏನು ಮಾಡಲಿಲ್ಲ ಸುಮ್ಮನೆ ಆಗಿರುತ್ತಾರೆ. ಮೌನೇಶ, ನಿಂಗಪ್ಪ ಇವರು ನನಗೆ ಚುಡಾಯಿಸುವದು ಕೆಟ್ಟ ಕೆಟ್ಟದಾಗಿ ಬೈಯುವದು ಮಾಡುವದರಿಂದ ಚಿಮಣಿ ಎಣ್ಣೆ ಹಾಕಿಕೊಂಡು ಸುಟ್ಟುಕೊಂಡಿದ್ದು ಇರುತ್ತದೆ. ಅಂತಾ ಕೊಟ್ಟ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!