Yadgir District Reported Crimes Updated on 01-03-2018

By blogger on ಗುರುವಾರ, ಮಾರ್ಚ್ 1, 2018


                                          Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 69/2018.ಕಲಂ 279.338 ಐ.ಪಿ.ಸಿ.& 187 ಐ.ಎಂ.ವಿ,ಯಾಕ್ಟ;- ದಿನಾಂಕ 28/02/2018 ರಂದು 11-45 ಎ.ಎಂ.ಕ್ಕೆ ಶ್ರೀ ಎಂ.ಡಿ. ಮೀರಾಜುದ್ದಿನ್ ತಂದೆ ತಾಜುದ್ದಿನ್ ಶೇಖ್ ವ|| 52 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಗಾಂದಿ ಚೌಕ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರು ನಿಡಿದ್ದೆನೆಂದರೆೆ ಇಂದು ದಿನಾಂಕ 28/02/2018 ರಂದು ಬೆಳಿಗ್ಗೆ 8-30 ಗಂಟೆಗೆ ನಾನು ಮತ್ತು ನಮ್ಮ ಮಾವ ಇಮಾಮ್ ಸಾಬ ತಂದೆ ಹಸನಸಾಬ ಹಲಕಟ್ಟಿ ಇಬ್ಬರು ಕೂಡಿ ಕೊಂಡು ಚಹಾ ಕುಡಿಯಲು ನಮ್ಮ ಮನೆಯಿಂದ ನಡೆದು ಕೊಂಡು ಹಳೆ ಬಸ್ಸ ನಿಲ್ದಾಣದ ಪಕ್ಕದಲ್ಲಿರುವ ಮಕ್ಕಾ ಹೋಟೆಲ್ಕ್ಕೆ ಹೋಗಿ ಚಹಾ ಕುಡಿದು ಮರಳಿ ಮನೆಗೆ ಬರಲು ಮಕ್ಕಾ ಹೋಟೇಲ್ ಮುಂದೆ ಬೆಳಿಗ್ಗೆ 9-00 ಭೀ.ಗುಡಿ-ಶಹಾಪೂರ ಬಸವೇಶ್ವರ ಸರ್ಕಲ್ ಮುಖ್ಯ ರಸ್ತೆಯ ಮೇಲೆ ರಸ್ತೆಯ ಸೈಡಿಗೆ ನಿಂತಾಗ ಅದೆ ಸಮಯಕ್ಕೆ ಭೀ,ಗುಡಿ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿ ಕೊಂಡು ಬಂದು ನನ್ನ ಮಾವ ಇಮಾಮ್ ಸಾಬನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಇಮಾಮ್ ಸಾಬನು ರಸ್ತೆಯ ಮೇಲೆ ಬಿದ್ದನು ಆಗ ನಾನು ಮತ್ತು ಅಲ್ಲೆ ಹಣ್ಣು ಮಾರುತ್ತಿದ್ದ ಗಂಗಮ್ಮ ಗಂಡ ಬಸವರಾಜ ಸಾ|| ಗಂಗಾನಗರ ಶಹಾಪೂರ ಇವರು ಅಪಘಾತವನ್ನು ನೋಡಿ ಬಂದು ಇಬ್ಬರು ನೋಡಲಾಗಿ ಸದರಿ ಅಪಘಾತದಲ್ಲಿ ನನ್ನ ಮಾವ ಇಮಾಮ್ ಸಾಬನಿಗೆ, ತಲೆಯ ಹಿಂದೆ ತಿವ್ರರಕ್ತಗಾಯ, ಬಲಗೈ ಮೋಳಕೈಗೆ, ಬಲಗಾಲ ಮೊಳಕಾಲಿಗೆ ತರಚಿದ ರಕ್ತ ಗಾಯವಾಗಿರುತ್ತದೆ. ಸದರಿ ಅಪಘಾತ ಮಾಡಿದ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ ಮುಂದೆ ನಿಂತಿದ್ದನು ಸದರಿಯವರಿಗೆ ನೋಡಿ ಹೆಸರು ವಿಚಾರಿಸಲಾಗಿ ತನ್ನ ಹೆಸರು ರಾಮು ತಂದೆ ದನುಜಾ ರಾಠೋಡ್ ಸಾ|| ಗುಂಡಳ್ಳಿ ತಾಂಡಾ ಅಂತ ಹೇಳಿದನು. ಸ್ವಲ್ಪ ಹೋತ್ತು ನಿಂತ ಹಾಗೆ ಮಾಡಿ ಮೋಟರ್ ಸೈಕಲ್ ಬಿಟ್ಟು ಓಡಿ ಹೋದನು. ಸದರಿ ಅಪಘಾತಮಾಡಿದ ಮೋಟರ್ ಸೈಕಲ್ ನೋಡಲಾಗಿ ಹಿರೋ ಕಂಪನಿಯ ಮೋಟರ್ ಸೈಕಲ್ ಅದರ ನಂಬರ ಏಂ-33ಗಿ-5667 ನ್ನೇದ್ದು ಇರುತ್ತದೆ. ಸದರಿ ಅಪಘಾತವು ಬೆಳಿಗ್ಗೆ 9-00 ಗಂಟೆಗೆ ಜರುಗಿರುತ್ತದೆ. ಆಗ ನಾನು ಒಂದು ಆಟೋ ನಿಲ್ಲಸಿ ಅದರಲ್ಲಿ ಹಾಕಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಸೇರಿಕೆ ಮಾಡಿದೆನು. ನನ್ನ ಹೆಂಡತಿ ರೀಹಾನ ಬೇಗಂ ಗಂಡ ಮೀರಾಜುದ್ದಿನ್ ಶೇಖ್ಗೆ ಪೋನ ಮಾಡಿ ತಿಳಿಸಿದ್ದರಿಂದ ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ಅಲ್ಲಿಯ ವೈದ್ಯಾದಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದು ಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಹೆಂಡತಿ ರೀಹಾನ ಬೇಗಂ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಆಸ್ಪತ್ರೆಗೆ ಕರೆದು ಕೊಂಡು ಹೋದಳು. ಇಂದು ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 69/2018 ಕಲಂ 279. 338. ಐ.ಪಿ.ಸಿ.ಮತ್ತು 187 ಐ.ಎಂ.ವಿ. ಆ್ಯಕ್ಟ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 31/2018 ಕಲಂ. 341 504 506 ಸಂ. 34 ಐಪಿಸಿ ;- ದಿನಾಂಕ:28/02/2018 ರಂದು ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಗಂಡನೊಂದಿಗೆ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ಕೂಡಿ ಬಂದು ಪಿಯರ್ಾದಿಗೆ ನಿನ್ನ ಗಂಡ ಹೊಲಕ್ಕೆ ಸಹಿ ಮಾಡಿದ್ದನ್ನು ಯಾಕೆ ತಕರಾರು ಮಾಡಿ ಅಂತಾ ಜಗಳವನ್ನು ತೆಗೆದು ಅವಾಚ್ಯಶಬ್ದಗಳಿಂದಾ ಬೈದು, ತಡೆದು ನಿಲ್ಲಿಸಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ  ಕ್ರಮ ಜರುಗಿಸಲಾಗಿದೆ.  

ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 16/2017 ಕಲಂ 110 (ಇ)(ಜಿ) ಸಿಆರ್ಪಿಸಿ;- ಪ್ರಭುಲಿಂಗ ಎ ಎಎಸ್ ಐ ಕೊಡೆಕಲ್ಲ ಪೊಲೀಸ್ ಠಾಣೆ ತಮ್ಮಲ್ಲಿ ಸರಕಾರದ ತಫರ್ೆ ಪಿಯರ್ಾದಿ ಸಲ್ಲಿಸುವದೆನೆಂದರೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಶಂಕರಗೌಡ ಪಿಸಿ-299 ರವರೊಂದಿಗೆ ಇಂದು ದಿನಾಂಕಃ 27.02.218 ರಂದು 03.30 ಪಿ.ಎಮ್ ಗಂಟೆಗೆ ಕೊಡೇಕಲ್ಲ ಗ್ರಾಮದಲ್ಲಿ ಪೆಟ್ರೋಲಿಂಗ ಕುರಿತು ಹೊರಟು 03.45  ಪಿ.ಎಮ್ ಸುಮಾರಿಗೆ ಕೊಡೇಕಲ್ಲ ಗ್ರಾಮದ ಬಸವೇಶ್ವರ ವೈತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ   ಪೆಟ್ರೊಲಿಂಗ ಮಾಡುತ್ತಿರುವಾಗ ಅಲ್ಲಿ ಇಬ್ಬರೂ ವ್ಯಕ್ತಿಗಳು ನಿಂತು ನಾನು ಈ ಊರಿನ ರೌಡಿಗಳು ಇದ್ದೇವೆ ಅಂತಾ ಹೋಗು ಬರುವ ಜನರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತ, ಅಸಬ್ಯವಾಗಿ ವತರ್ಿಸುತ್ತ ನಿಂತಿದ್ದನು. ಅಲ್ಲದೆ ಊರಿನ ಜನರಿಗೆ ನೀವೆಲ್ಲರೂ ನಾನು ಹೇಳಿದಾಗ ಹಾಗೆ ಕೇಳಬೇಕು ಅಂತಾ ಅಸಬ್ಯವಾಗಿ ವತರ್ಿಸುತ್ತ ನಿಂತಿದ್ದನು. ಆಗ ನಾನು ಅವನಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರು ತನ್ನ ಹೆಸರು 1) ಶಾಂತಗೌಡ ತಂದೆ ಹಣಮಂತ್ರಾಯಗೌಡ ಮಾಲಿಗೌಡರ ವ:32 ವರ್ಷ ಜಾ:ಹಿಂದೂ ಬೇಡರ ಉ: ಒಕ್ಕಲುತನ 2) ಮೌನೇಶ ತಂದೆ ಬಸಪ್ಪ ಕಟ್ಟಿಮನಿ ವ:22 ವರ್ಷ ಜಾ: ಹರಿಜನ ಉ: ಕೂಲಿಕೆಲಸ.ಸಾ: ಇಬ್ಬರೂ  ಕೊಡೇಕಲ್ಲ ತಾ: ಸುರಪೂರ. ಅಂತಾ ಹೇಳಿದನು. ಸದರಿಯವರಿಗೆ ಹಾಗೇಯೇ ಬಿಟ್ಟಲ್ಲಿ ಯಾವ್ಯದಾದರೂ ಗಂಭೀರ ಸ್ವರೂಪದ ಅಪರಾಧ ಮಾಡಿ ಸಾರ್ವಜನಿಕ ಶಾಂತತೆಗೆ ದಕ್ಕೆಯನ್ನುಂಟು ಮಾಡಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವ ಸ್ವಭಾವದವರಿರುವನೆಂದು ಕಂಡುಬಂದಿದ್ದರಿಂದ ಸದರಿಯವರಿಗೆ 03.45 ಪಿ.ಎಮ್ ಕ್ಕೆ  ವಶಕ್ಕೆ ತೆಗೆದುಕೊಂಡು 04.00 ಪಿ.ಎಮ್ ಗೆ  ಠಾಣೆಗೆ ಬಂದು ಸದರಿಯವನ ಮೇಲೆ ಸರಕಾರದ ಪರವಾಗಿ ಫಿರ್ಯಾದಿಯಾಗಿ ಠಾಣಾ ಅಪರಾಧ ಸಂಖ್ಯೆ 16/2018 ಕಲಂ.110 (ಇ) &(ಜಿ) ಸಿಆರ್ಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 17/2018 ಕಲಂ: 366(ಎ) ಐಪಿಸಿ & 8 ಪೋಕ್ಸೋ ಕಾಯ್ದೆ;- ದಿನಾಂಕ:28.02.2018 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಫಿಯರ್ಾದಿ ಶ್ರೀಮತಿ ಗುಬ್ಬವ್ವ ತಾಯಿ ಯಮನವ್ವ ಮ್ಯಾಗೇರಿ ವಯ:50 ವರ್ಷ, ಉ:ಕೂಲಿ ಕೆಲಸ, ಜಾ:ಮಾದಿಗ, ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ,ನನಗೆ 5 ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗನಿದ್ದು, ಮೂರು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದು, ನನ್ನ ಮಗ ಸೋಮಪ್ಪನಿಗೆ ಮದುವೆ ಮಾಡಿದ್ದು, ಇಬ್ಬರು ಹೆಣ್ಣು ಮಕ್ಕಳಾದ ಸಾಮವ್ವ 19 ವರ್ಷ, ಗಂಗಮ್ಮ 17 ವರ್ಷ ಇಬ್ಬರಿಗೆ ಇನ್ನೂ ಮದುವೆಯಾಗಿರುವದಿಲ್ಲ. ನನ್ನ ಕೊನೆಯ ಮಗಳಾದ ಗಂಗಮ್ಮ ಇವಳಿಗೆ ನಮ್ಮೂರಿನ ಚಿದಾನಂದ ತಂದೆ ಹಣಮಂತ ತೆಳಗೇರಿ ಈತನು ಚುಡಾಯಿಸುತ್ತಿದ್ದು, ಅವನಿಗೆ ನಾವುಗಳು ಹಲವು ಸಲ ಬುದ್ದಿ ಹೇಳಿದ್ದು ಇರುತ್ತದೆ. ಹೀಗಿದ್ದು, ನಿನ್ನೆ ದಿನಾಂಕ:27.02.2018 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ನನ್ನ ಮಗ, ನನ್ನ ಸೊಸೆಯಾದ ಹುಲಗಮ್ಮ, ನನ್ನ ಇಬ್ಬರು ಹೆಣ್ಣು ಮಕ್ಕಳಾದ ಸಾಮವ್ವ, ಗಂಗಮ್ಮ ಎಲ್ಲರೂ ಕೂಡಿ ಊಟ ಮಾಡಿ ಮಲಗಿದ್ದು, ರಾತ್ರಿ 11 ಗಂಟೆಯ ಸುಮಾರಿಗೆ ನನಗೆ ಸಂಡಾಸ್ ಬಂದಿದ್ದರಿಂದ ನನ್ನ ಮಗಳಾದ ಗಂಗಮ್ಮಳನ್ನು ಕರೆದುಕೊಂಡು ಹೋಗಿ ಬಣದೊಡ್ಡಿ ರೋಡಿನ ಹತ್ತಿರ ಇರುವ ಶೌಚಾಲಯದ ಹತ್ತಿರ ನಾನು ಸಂಡಾಸ್ ಕುಳಿತಿದ್ದು, ಅಲ್ಲಿಯೇ ಸಮೀಪದಲ್ಲಿ ಇರುವ ಲೈಟಿನ ಕಂಬದ ಬೆಳಕಿನಲ್ಲಿ ನನ್ನ ಮಗಳು ನಿಂತಿದ್ದು, ಅದೇ ವೇಳೆಯಲ್ಲಿ ನಮ್ಮೂರಿನ ಚಿದಾನಂದ ತಂದೆ ಹಣಮಂತ ತೆಳಗೇರಿ ಈತನು ನನ್ನ ಮಗಳ ಕೈ ಹಿಡಿದು ಎಳೆದುಕೊಂಡು ಹೋಗುವಾಗ ನಾನು ಗಾಭರಿಯಾಗಿ ಚೀರಾಡುತ್ತ ಬರುವಷ್ಟರಲ್ಲಿಯೇ ನನ್ನ ಮಗಳನ್ನು ಎಳೆದುಕೊಂಡು ಕತ್ತಲಲ್ಲಿ ಮರೆಯಾದರು. ನಾನು ಚೀರಾಡುವ ದ್ವನಿಯನ್ನು ಕೇಳಿ ನನ್ನ ಮಗ ಸೋಮಪ್ಪ, ನನ್ನ ಸೊಸೆಯಾದ ಹುಲಗಮ್ಮ, ನನ್ನ ತಮ್ಮ ಹಣಮಂತ ಇವರು ಬಂದಿದ್ದು, ಇವರಿಗೆ ನಡೆದ ವಿಷಯ ತಿಳಿಸಿದ್ದು, ಎಲ್ಲರೂ ಕೂಡಿ ಕತ್ತಲಲ್ಲಿ ಹುಡುಕಾಡಿದ್ದು, ನನ್ನ ಮಗಳು ಸಿಗಲಿಲ್ಲ. ಶಾಂತಪೂರ ಕ್ರಾಸ್, ತಿಂಥಣಿ ಬ್ರಿಡ್ಜ್, ಬಣದೊಡ್ಡಿ ಎಲ್ಲಾ ಕಡೆ ನನ್ನ ಮಗನು ಮೋಟಾರು ಸೈಕಲ್ ತೆಗೆದುಕೊಂಡು ಹುಡುಕಾಡಿದ್ದು, ನನ್ನ ಮಗಳು ಸಿಕ್ಕಿರುವದಿಲ್ಲ. ನಂತರ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಇಂದು ಠಾಣೆಗೆ ತಡವಾಗಿ ಬಂದಿದ್ದು, ಕಾರಣ ನನ್ನ ಮಗಳನ್ನು ಅಪಹರಿಸಿಕೊಂಡು ಹೊದ ಚಿದಾನಂದ ತಂದೆ ಹಣಮಂತ ತೆಳಗೇರಿ ಈತನ ಮೇಲೆ ಕಾನೂನು ಕ್ರಮ ಕೈಕೊಂಡು, ನನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ. ಇದ್ದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 17/2018 ಕಲಂ: 366(ಎ) ಐಪಿಸಿ & 8 ಪೋಕ್ಸೋ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 23/2018 ಕಲಂ 279, 337, 338, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್;- ದಿನಾಂಕ:28/02/2018 ರಂದು 4.45 ಪಿಎಮ್ ಸುಮಾರಿಗೆ ಮೃತ ವತ್ಸಲಾ ಹಾಗೂ ಗಾಯಾಳುಗಳು ಕೂಡಿ ಆರೋಪಿತನ ಅಟೋ ಟಂಟಂ ನಂ:ಕೆಎ-33, 6237 ನೇದ್ದರಲ್ಲಿ ಕುಳಿತು ಹುಲಕಲ್(ಕೆ) ಗ್ರಾಮದಿಂದ ಭೀ.ಗುಡಿಯ ಕಡೆಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಕೃಷಿ ಮಹಾವಿದ್ಯಾಲಯದ ಹಾಸ್ಟಲ್ ಹತ್ತಿರ ಹೊರಟಾಗ ಚಾಲಕ ಶಾಂತಯ್ಯ ಈತನು ತನ್ನ ಅಟೋ ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಕೊಂಡು ಬಂದಿದ್ದರಿಂದ ಅಟೋ ಟಂಟಂ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಪಕ್ಕದಲ್ಲಿನ ತೆಗ್ಗಿನಲ್ಲಿ ಪಲ್ಟಿಯಾಗಿ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಫಿಯರ್ಾದಿಯ ಹೆಂಡತಿಯ ತಲೆಯ ಮೇಲೆ ಅಟೋ ಬಿದ್ದು ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದವರಿಗೆ ಭಾರಿ ಮತ್ತು ಸಾದಾ ಗುಪ್ತಗಾಯಗಳಾಗಿದ್ದು ಚಾಲಕನು ತನ್ನ ಅಟೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಅಟೋ ಟಂಟಂ ನಂ:ಕೆಎ-33, 6237 ನೇದ್ದರ ಚಾಲಕ ಶಾಂತಯ್ಯ ತಂದೆ ಅಬ್ದುಲ್ ಗುತ್ತೆದಾರ ಸಾ:ಹುಲಕಲ್(ಕೆ) ಈತನ ವಿರುಧ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!