Yadgir District Reported Crimes Updated on 23-02-2018

By blogger on ಶುಕ್ರವಾರ, ಫೆಬ್ರವರಿ 23, 2018


                                           Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 15/2018 ಕಲಂ 279, 338, 304(ಎ)  ಐಪಿಸಿ ಸಂ.187 ಐಎಂವಿ ಆ್ಯಕ್ಟ್;- ದಿನಾಂಕ 13/02/2018 ರಂದು ಸಾಯಂಕಾಲ 7 ಪಿ.ಎಂ. ಸುಮಾರಿಗೆ ಯಾದಗಿರಿ ನಗರದಲ್ಲಿನ ಅಂಬೇಡ್ಕರ್ ಚೌಕ್ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಒಬ್ಬ ಅಪರಿಚಿತ ಹೆಂಗಸು ವಯ ಅಂದಾಜು 90 ವರ್ಷ ಇವಳಿಗೆ ಯಾವುದೊ ವಾಹನದ ಚಾಲಕನು ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಅಪರಿಚಿತ ಹೆಂಗಸಿಗೆ ತಲೆಗೆ, ಬಲಗಾಲಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ವಾಹನ ಚಾಲಕನು ಸ್ಥಳದಿಂದ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಅಪರಿಚಿತ ಹೆಂಗಸಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಸೇರಿಕೆ ಮಾಡಿದ್ದು ಆಸ್ಪತ್ರೆಯ ಎಮ್.ಎಲ್.ಸಿ ಮಾಹಿತಿ ಮೇರೆಗೆ ಬೇಟಿ ನೀಡಿ ಗಾಯಾಳುವಿಗೆ ವಿಚಾರಿಸಲಾಗಿ ಪ್ರಜ್ಞೆ ಇರುವುದಿಲ್ಲ ಹಾಗೂ ಆಕೆಯ ವಾರಸುದಾರರು ಯಾರು ಇಲ್ಲದ ಕಾರಣ ಸಕರ್ಾರಿ ತಪರ್ೆಯಾಗಿ ಶ್ರಿ ಸುಖದೇವ್ ಪಿ.ಎಸ್.ಐ ರವರು ಫಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.15/2018 ಕಲಂ 279, 338  ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೆದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ನಂತರ ದಿನಾಂಕ 13/02/2018 ರಂದು ಗಾಯಾಳು ಅಪರಿಚಿತ ಹೆಂಗಸಿಗೆ ಉಪಚಾರ ಮಾಡಿ ನಂತರ ಹೆಚ್ಚಿನ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ವೈದ್ಯರು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ  ಕಳಿಸಿದ್ದು ಅಪರಿಚಿತ ಗಾಯಾಳು  ಮಹಿಳೆಯು ದಿನಾಂಕ 14/02/2018 ರಿಂದ ದಿನಾಂಕ 21/02/2018 ರ  ವರೆಗೆ ಚಿಕಿತ್ಸೆ ಪಡೆಯುತ್ತಾ  ದಿನಾಂಕ 13/02/2018 ರಂದು ರಸ್ತೆ ಅಪಗಾತದಲ್ಲಾದ ಗಾಯಗಳ ಬಾದೆಯಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 21/02/2018 ರಂದು ಸಾಯಂಕಾಲ 4-25 ಪಿ.ಎಂ. ದ ಸುಮಾರಿಗೆ ಮೃತಪಟ್ಟಿದ್ದರ ಬಗ್ಗೆ ರಿಮ್ಸ್ ಆಸ್ಪತ್ರೆಯಿಂದ ಯಾದಗಿರಿ ಕಂಟ್ರೋಲ್ ಕೋಣೆಗೆ ಪೋನ್ ಮಾಡಿ ತಿಳಿಸಿದ್ದು ಅದರಂತೆ ಯಾದಗಿರಿ ಜಿಲ್ಲಾ ನಿಸ್ತಂತು ಕೋಣೆಯಿಂದ ಡೆತ್ ಎಮ್.ಎಲ್.ಸಿ ನೆದ್ದು ಪೋನ್ ಮುಖಾಂತರ ತಿಳಿಸಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಗಾಯಾಳು ಮೃತಪಟ್ಟಿದ್ದರಿಂದ ಕಲಂ 304(ಎ)ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.                                                                                                                                                      
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 28/2018 ಕಲಂ: 143,147,148,504,354,324,323,506 ಸಂ 149 ಐಪಿಸಿ;- ದಿನಾಂಕ: 22/02/2018 ರಂದು 10 ಎಎಮ್ ಕ್ಕೆ ಯಾದಗಿರಿ ಜಿಲ್ಲಾ ನಿಯಂತ್ರಣ ಕೋಣೆಯಿಂದ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಲ್ಲಿ ಎಮ್.ಎಲ್.ಸಿ ಇದೆ ಎಂದು ಮಾಹಿತಿ ನಿಡಿದ್ದರಿಂದ ವಿಚಾರಣೆ ಕುರಿತು ಹೋಗಿ ಎಮ್.ಎಲ್.ಸಿ ಪಡೆದುಕೊಂಡು ಅಲ್ಲಿದ್ದ ಗಾಯಾಳು ಶ್ರೀಮತಿ ಶಂಕ್ರೆಮ್ಮ ಗಂಡ ಮಲ್ಲಿಕಾಜರ್ುನ ಇವರಿಗೆ ವಿಚಾರಿಸಲಾಗಿ ಅವರ ಅತ್ತೆಯಾದ ಶ್ರೀಮತಿ ನೀಲಮ್ಮ ಗಂಡ ಹಂಪಣ್ಣ ಹಾದಿಮನಿ ಸಾ:ನಾಯ್ಕಲ್ ಇವರು ಲಿಖಿತ ಫಿರ್ಯಾಧಿ ಕೊಡುವುದಾಗಿ ಹೇಳಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಕೊಟ್ಟಿದ್ದೆನಂದರೆ ನಮ್ಮ ಮನೆ ಬಾಜುದವರಾದ ಸಣ್ಣ ಭೀಮರಾಯ ಮತ್ತು ಅವನ ಹೆಂಡತಿ, ಮಕ್ಕಳು ವಿನಾಕಾರಣ ಸುಮಾರು ದಿವಸಗಳಿಂದ ನಮ್ಮೊಂದಿಗೆ ಜಗಳಕ್ಕೆ ಬರುವುದು, ತಕರಾರು ಮಾಡುವುದು ಮಾಡುತ್ತಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ: 21/02/2018 ರಂದು 7-30 ರಿಂದ 8 ಗಂಟೆ ರಾತ್ರಿಯ ಅವಧಿಯಲ್ಲಿ ನಾನು ಮತ್ತು ನನ್ನ ಮಕ್ಕಳಾದ ಮಲ್ಲಿಕಾಜರ್ುನ ಹಾಗೂ ಚನ್ನಬಸಪ್ಪ ಇವರೊಂದಿಗೆ ನಮ್ಮ ಮನೆ ಮುಂದೆ ಇದ್ದಾಗ ಶಿವಪ್ಪ ತಂದೆ ಸಣ್ಣ ಭೀಮರಾಯ ಕಾಡಂಗೇರಿ ಇವನು ನಮ್ಮ ಮನೆ ಕಡೆ ಕೈ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು ಹೀಗೆಕೆ ಬೈಯುತ್ತಿ ಎಂದು ಹೇಳುವಷ್ಟರಲ್ಲಿ 1) ಶಿವಪ್ಪ (ಶಿವ್ಯ) ತಂದೆ ಸಣ್ಣ ಭೀಮರಾಯ, 2) ಸಣ್ಣ ಭೀಮರಾಯ ತಂದೆ ಸಿದ್ದಣ್ಣ, 3) ಮಲ್ಲಮ್ಮ ಗಂಡ ಸಣ್ಣ ಭೀಮರಾಯ, 4) ಭೀಮಮ್ಮ ಗಂಡ ಹಣಮಂತ, 5) ಶರಣಮ್ಮ ತಂದೆ ಸಣ್ಣ ಭೀಮರಾಯ, 6) ಹಣಮಂತ (ಅಳಿಯ) ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದವರೆ ಹಳೆಯ ವೈಷಮ್ಯದಿಂದ ಜಗಳ ತೆಗೆದು ಶಿವಪ್ಪ (ಶಿವ್ಯ)ನು ನನ್ನ ಸೀರೆಯನ್ನು ಹಿಡಿದು ಎಳೆದು ನಿನ್ನನ್ನು ಇಲ್ಲೆ ಸಾಯಿಸುತ್ತೇನೆ ಎಂದು ಕೈಯಿಂದ ಹೊಡೆದು ಎಡಗೈ ಹಿಡಿದು ತಿರುವಿ ಒಳಪೆಟ್ಟು ಮಾಡಿದನು. ಬಿಡಿಸಲು ಬಂದ ನನ್ನ ಮಗ ಮಲ್ಲಿಕಾಜರ್ುನನಿಗೆ ಸಣ್ಣ ಭೀಮರಾಯನು ಬಡಿಗೆಯಿಂದ ಬಲಗಡೆ ಡುಬ್ಬಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಚನ್ನಬಸಪ್ಪನಿಗೆ ಹಣಮಂತನು ಕೈಯಲ್ಲಿ ಕಲ್ಲು ಹಿಡಿದುಕೊಂಡು ಹೊಟ್ಟೆಗೆ ಗುದ್ದಿರುತ್ತಾನೆ. ಮಲ್ಲಮ್ಮ, ಭೀಮಮ್ಮ, ಶರಣಮ್ಮ ಇವರು ನನಗೆ ಕೈಯಿಂದ ಮನಸ್ಸಿಗೆ ಬಂದಂತೆ ಹೊಡೆದಿರುತ್ತಾರೆ. ಆಗ ಹಣಮಂತ ತಂದೆ ಶರಣಪ್ಪ ಬಂದು ಬಿಡಿಸಿರುತ್ತಾನೆ. ಆಗ ಹೊಡೆಯವುದು ಬಿಟ್ಟ ಅವರು ಇವತ್ತು ಉಳಿದಿರಿ ಇನ್ನೊಮ್ಮೆ ಸಿಕ್ಕರೆ ನಿಮಗೆ ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ನಾವು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ಡಾಕ್ಟರರವರು ಎಮ್.ಎಲ್.ಸಿ ಮಾಡಿರುತ್ತಾರೆ. ನಾವು ವಡಗೇರಾ ಪೊಲೀಸರಿಗೆ ಬೆಳಗ್ಗೆ ವಿಚಾರ ಮಾಡಿ ಫಿರ್ಯಾಧಿ ಕೊಡುತ್ತೇವೆ ಎಂದು ಹೇಳಿರುತ್ತೇವೆ. ಆದರೆ ಇಂದು ದಿನಾಂಕ: 22/02/2018 ರಂದು ಬೆಳಗ್ಗೆ 7 ರಿಂದ 8 ಗಂಟೆ ಅವಧಿಯಲ್ಲಿ ಮನೆಯ ಮುಂದೆ ಒಬ್ಬಳೆ ಇದ್ದ ನನ್ನ ಸೊಸೆ ಶಂಕ್ರಮ್ಮ ಗಂಡ ಮಲ್ಲಿಕಾಜರ್ುನ ಈಕೆಗೆ ಶಿವಪ್ಪ, ಸಣ್ಣ ಭೀಮರಾಯ, ಹಣಮಂತ, ಮಲ್ಲಮ್ಮ, ಭೀಮಮ್ಮ ಮತ್ತು ಶರಣಮ್ಮ ಇವರೆಲ್ಲರೂ ಸೇರಿ ಹೋಗಿ ಈ ಭೋಸಡಿ ಇಲ್ಲೆ ಇದ್ದಾಳೆ ಹೊಡೆಯಿರಿ ಈಕೆಗೆ ಎಂದು ಜಗಳ ತೆಗೆದು ಸೀರೆ ಜಗ್ಗಿ ಕೈಯಿಂದ ಹೊಡೆದು ಒಳಪೆಟ್ಟು ಮಾಡಿದ್ದಾರೆ. ಆಗ ಜಗಳವನ್ನು ಸಿದ್ದು ತಂದೆ ಮಹಾದೇವಪ್ಪ ಇವರು ಬಿಡಿಸಿರುತ್ತಾರೆ. ನನ್ನ ಸೊಸೆ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಈ ಸಂಗತಿ ನನಗೆ ಹೇಳಿದಳು. ಕಾರಣ ನನಗೆ ಹೊಡೆಬಡೆ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಅಜರ್ಿ ಸ್ವಿಕೃತ ಮಾಡಿಕೊಂಡು 12-30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2018 ಕಲಂ: 143,147,148,504,324,354,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 35/2018 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 22/02/2018 ರಂದು 4-30 ಪಿ.ಎಮ್ ಕ್ಕೆ ಆರೋಪಿತನು ತನ್ನ ಅಂಗಡಿಯಲ್ಲಿ  ಅನದೀಕ್ರತವಾಗಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 7 ಕೆ.ಎಫ್. ಸ್ಟ್ರಾಂಗ ಬಿಯರ 650 ಎಮ್.ಎಲ್. ನ ಮಧ್ಯದ ಬಿಯರ್ ಬಾಟಲಿಗಳು ಅ.ಕಿ. 875/ರೂ, 5 ಕೆ.ಎಫ್. ಸ್ಟ್ರಾಂಗ ಬಿಯರ 330 ಎಮ್.ಎಲ್. ನ ಮಧ್ಯದ ಬಿಯರ್ ಬಾಟಲಿಗಳು ಅ.ಕಿ. 340/ರೂ ಒಟ್ಟು 1215/ರೂ ಕಿಮ್ಮತ್ತಿನ ಮಧ್ಯದ ಕೆ.ಎಫ್. ಸ್ಟ್ರಾಂಗ ಬಿಯರ 650 ಎಮ್.ಎಲ್. ನ ಮಧ್ಯದ ಬಿಯರ್ ಬಾಟಲಿಗಳನ್ನು ಮಾಲು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 38/2018 ಕಲಂ  87 ಕೆ.ಪಿ.ಕಾಯ್ದೆ ;- ದಿನಾಂಕ:22-02-2018 ರಂದು 6-15 ಪಿ.ಎಂ.ಸುಮಾರಿಗೆ ಸೂರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ರುಕ್ಮಾಪೂರ ಗ್ರಾಮದ ದಗರ್ಾದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯಂದಿಂದ ಅಂದರ-ಬಾಹರ ವೆಂಬ ಜೂಜಾಟ ಆಡುತ್ತಿರುವಾಗ ಸಿಬ್ಬಂಧಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮೂರು ಜನ ಆರೋಪಿತರದಿಂದ 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ 500/- ರೂಗಳು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಮೂರು ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 58/2018 ಕಲಂ 15[ಎ] 32[3]  ಅಬಕಾರಿ ಕಾಯ್ದೆ;- ದಿನಾಂಕ 22/02/2018 ರಂದು ಸಾಯಂಕಾಲ 16-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ನಾಗರಾಜ ಜಿ.  ಪಿ.ಐ ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 22/02/2018 ರಂದು ಮದ್ಯಾಹ್ನ 12-00 ಗಂಟೆಗೆ  ನಾನು  ಠಾಣೆಯಲ್ಲಿದ್ದಾಗ ಠಾಣೆಯ ಶ್ರೀ ಸಿದ್ದಯ್ಯ ಹೆಚ್.ಸಿ 65 ಇವರು   ತನಗೆ ಹಂಚಿಕೆಯಾದ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 17 ರಲ್ಲಿ ಬರುವ ಅನ್ವರ ಗ್ರಾಮದ  ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ತನ್ನ ಕಿರಾಣಿ ಅಂಗಡಿ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಮಾಹಿತಿ ಬಂದಿರುತ್ತದೆ ಅಂತ ತಿಳಿಸಿದನು. ಆಗ ನಾನು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಕು|| ಜಯಶ್ರೀ ಪಿ.ಎಸ್.ಐ[ಪ್ರೋ]  ಶಿವನಗೌಡ ಸಿ.ಪಿ.ಸಿ 141, ಲಕ್ಕಪ್ಪ ಸಿ.ಪಿ.ಸಿ 198 ಮತ್ತು  ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169  ಇವರಿಗೆ ಕರೆದು ವಿಷಯ ತಿಳಿಸಿ ಶ್ರೀ ಸಿದ್ದಯ್ಯ ಹೆಚ್.ಸಿ 65 ಇವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಕಳುಹಿಸಿಕೊಟ್ಟೆನು. ಸದರಿಯವರು ನಗರದಲ್ಲಿ ಹೋಗಿ ದಾಳಿ ಕುರಿತು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 25 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ  ಸಗರ ಶಹಾಪೂರ  2]  ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 45 ವರ್ಷ ಜಾತಿ ಪ.ಜಾತಿ ಉಃ ಖಾಸಗಿ ಕೆಲಸ ಸಾಃ ದೇವಿ  ನಗರ ಶಹಾಪೂರ ಇವರಿಗೆ ಮದ್ಯಾಹ್ನ 12-30 ಗಂಟೆಗೆ  ಠಾಣೆಗೆ ಕರೆದುಕೊಂಡು ಬಂದು  ನನ್ನ ಮುಂದೆ ಹಾಜರ ಪಡಿಸಿದ್ದು,  ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ  ಒಪ್ಪಿಕೊಂಡರು.
        ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ, ನಾನು  ಮತ್ತು ಪಂಚರು, ಹಾಗೂ ಮೇಲೆ ನಮೂದು ಮಾಡಿದ ಸಿಬ್ಬಂದಿಯವರು ಠಾಣೆಯಿಂದ ಮದ್ಯಾಹ್ನ 12-40  ಗಂಟೆಗೆ  ಹೊರಟೆವು, ಸದರಿ ವಾಹನವನ್ನು ಅಮಗೊಂಡ ಎ.ಪಿ.ಸಿ 169 ಇವರು ಚಲಾಯಿಸುತಿದ್ದರು,  ನೇರವಾಗಿ ಅನ್ವರ ಗ್ರಾಮಕ್ಕೆ ಮದ್ಯಾಹ್ನ 13-20 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಅನ್ವರ ಗ್ರಾಮದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗಿ ಸದರಿ ಕಿರಾಣಿ ಅಂಗಡಿಯಿಂದ ಅಂದಾಜು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಅಲ್ಲಿ  ಒಬ್ಬ ವ್ಯಕ್ತಿ  ಕಿರಾಣಿ ಅಂಗಡಿ ಪಕ್ಕದಲ್ಲಿರುವ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಸಾರ್ವನಿಕರಿಗೆ ಮದ್ಯ  ಕುಡಿಯಲು ಅನಕೂಲ ಮಾಡಿಕೊಟ್ಟಿದ್ದನ್ನು ಖಚಿತ ಪಡಿಸಿಕೊಂಡು,  ನಾನು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ ಮದ್ಯಾಹ್ನ 13-30  ಗಂಟೆಗೆ  ದಾಳಿ ಮಾಡಿ ಹಿಡಿದಾಗ ಸದರಿ ವ್ಯಕ್ತಿ  ಸಿಕ್ಕಿದ್ದು   ಮತ್ತು  ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನವು ಮಾಡಿ ಕೊಟ್ಟ ವ್ಯಕ್ತಿಯ  ಹೆಸರು ವಿಳಾಸ ವಿಚಾರಿಸಲು ಆನಂದ ತಂದೆ ಪರ್ವತರೆಡ್ಡಿ ಗುತ್ತೆದಾರ ವಯ 24 ವರ್ಷ ಜಾತಿ ಈಳಗೇರ ಉಃ ಕಿರಾಣಿ ಅಂಗಡಿ ವ್ಯಾಪಾರ ಸಾಃ ಅನ್ವರ ತಾಃ ಶಹಾಪೂರ ಜಿಃ ಯಾದಗಿರಿ ಸದರಿ ಕಿರಾಣಿ ಅಂಗಡಿ ನನ್ನದೆ ಇರುತ್ತದೆ ಅಂತ ಹೇಳಿದನು.  ಆಗ ನಾನು ಪಂಚರ ಸಮಕ್ಷಮದಲ್ಲಿ  ಸದರಿಯವನಿಗೆ, ವಿಚಾರಣೆ ಮಾಡಲಾಗಿ ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಕುಡಿಯಲು ಅನಕೂಲ ಮಾಡಿ ಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಸದರಿಯವನು ಯಾವುದೇ ದಾಖಲಾತಿಗಳು ಹೊಂದಿರುವುದಿಲ್ಲ ಅಂತ ಹೇಳಿದನು. ನಾವು ಮತ್ತು ಪಂಚರು ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 90 ಎಮ್.ಎಲ್ ನ  ಓರಿಜಿನಲ್ ಚಾಯ್ಸ ವಿಸ್ಕಿ  ಮದ್ಯದ ಪಾಕೇಟ್ ಇದ್ದು, ಎಣಿಕೆ ಮಾಡಲಾಗಿ 90 ಎಮ್.ಎಲ್.ನ 42 ಮದ್ಯ ತುಂಬಿದ ಪಾಕೇಟಗಳು ಇದ್ದವು, ಒಂದು ಪಾಕೇಟಿನ್ ಅಂ.ಕಿ 28 ರೂ 13 ಪೈಸೆ ಇದ್ದು, 42 ಮದ್ಯದ ಪಾಕೇಟಿನ ಅಂ.ಕಿ 1181  ರೂ 46 ಪೈಸೆ ಆಗುತ್ತದೆ. ಸದರಿ ಸ್ಥಳದಲ್ಲಿಯೇ  ಸಾರ್ವಜನಿಕರು ಉಪಯೋಗಿಸಿದ 90 ಎಮ್ ಎಲ್ ನ 4 ಓರಿಜಿನಲ್ ಚಾಯ್ಸ ವಿಸ್ಕಿ  ಮದ್ಯದ ಪಾಕೇಟ್ ಇದ್ದು,  ಸದರಿಯವುಗಳ ಹರಿದು ಉಪಯೋಗಿಸಿದ್ದು, ಅದರಲ್ಲಿ 2 ಪಾಕೇಟ್ಗಳು ಸಂಪೂರ್ಣವಾಗಿ ಖಾಲಿಯಾಗಿದು,್ದ ಇನ್ನೂಳಿದ 2 ಮದ್ಯದ ಪಾಕೇಟಗಳಲ್ಲಿನ ತಲಾ 30 ಎಮ್ ಎಲ್ ನಷ್ಟು ಮದ್ಯವಿದ್ದು ಎರಡು ಪಾಕೇಟನಲ್ಲಿಯ ಒಟ್ಟು 60 ಎಮ್.ಎಲ್ನ  ಅಂ.ಕಿ 18 ರೂ ಆಗುತ್ತದೆ. ಮತ್ತು 5 ಪ್ಲಾಸ್ಟಿಕ್ ಗ್ಲಾಸ್ ಇದ್ದು, 3 ಪ್ಲಾಸ್ಟೀಕ್ ಗ್ಲಾಸ್  ಮದ್ಯ ಕುಡಿಯಲು ಉಪಯೋಗಿಸಿದಂತೆ ಕಂಡು ಬಂದಿರುತ್ತದೆ.  90 ಎಮ್ ಎಂ.ಎಲ್ ನ  42  ಓರಿಜಿನಲ್ ಚಾಯ್ಸ ವಿಸ್ಕಿ ಪಾಕೇಟಗಳಲ್ಲಿ  ಒಂದು ಮದ್ಯ ತುಂಬಿದ 90 ಎಮ್.ಎಲ್.ನ ಓರಿಜಿನಲ್ ಜಾಯ್ಸ ವಿಸ್ಕಿ ಪಾಕೇಟನ್ನು  ಪಂಚರ ಸಮಕ್ಷಮದಲ್ಲಿ ತಜ್ಞರ ಪರೀಕ್ಷೆಗಾಗಿ ಕಳುಹಿಸುವ  ಸಲುವಾಗಿ ಒಂದು  ಬಿಳಿ ಬಟ್ಟೆಯ ಚೀಲದಲ್ಲಿ  ಹಾಕಿ ಹೊಲೆದು ಅದರ  ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ   ಅಂತ  ಮಾದರಿ ಸೀಲು ಹಾಕಿ ಪಂಚರು ಸಹಿ ಮಾಡಿದ ನಿಶಾನೆ ಚೀಟಿ  ಅಂಟಿಸಿ ಮುಂದಿನ ತನಿಖೆಗಾಗಿ ಬೇಕು ಅಂತ ಮದ್ಯಾಹ್ನ 13-40  ಗಂಟೆಯಿಂದ ಮದ್ಯಾಹ್ನ 14-40 ಗಂಟೆಯವರೆಗೆ ಜಪ್ತಿಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ ಆರೋಪಿತನನ್ನು  ಮತ್ತು ಮುದ್ದೆ ಮಾಲನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಮದ್ಯಾಹ್ನ 15-20 ಗಂಟೆಗೆ ಬಂದು ಆರೋಪಿತನ ವಿರುದ್ದ ವರದಿ ತಯ್ಯಾರಿಸಿದ್ದು ಸದರಿ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 58/2018 ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 42/2018 ಕಲಂ 143, 147, 323, 324, 354, 504, 506 ಸಂ. 149 ಐಪಿಸಿ;-ದಿನಾಂಕ 22.02.2018 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಪಿರ್ಯಾಧಿಯು ತಮ್ಮ ಹೊಸ ಮನೆ ಕಟ್ಟದ ಹತ್ತಿರ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಗೊಲ್ಲ ಸೂಳಿ ಮಕ್ಕಳೆ ನಿಮಗೆ ಸೊಕ್ಕು ಬಹಳ ಇದೆ ನಿಮ್ಮ ತುಲ್ಲು ಹಡಬೇಕು ಅಂತಾ ಅವಾಚ್ಯವಾಗಿ ಬೈದು ಪಿರ್ಯಾಧಿಗೆ ಕೈ ಹಿಡಿದು ಜಗ್ಗಿ ಮಾನಭಂಗಕ್ಕೆ ಪ್ರಯತ್ನಿಸಿದ್ದು ಅಲ್ಲದೆ ಪಿರ್ಯಾಧಿ ಭಾ ಮೈದನನಿಗೆ ಹಿಡಿ ಗಾತ್ರದ ಕಲ್ಲಿನಿಂದ ಕಾಲಿಗೆ ಹೊಡೆದು ಗುಪ್ತಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 44/2018 ಕಲಂ: 143, 147, 323, 324, 354, 504, 506 ಸಂಗಡ 149 ಐಪಿಸಿ ;- ದಿನಾಂಕ 22.02.2018 ರಂದು ಮಧ್ಯಾಹ್ನ 1-30 ಗಂಟೆಗೆ ಆರೋಪಿರೆಲ್ಲಾರು ಫಿರ್ಯಾದಿದಾರಳೊಂದಿಗೆ ಜಗಳವಾಡಿ ಆಕೆಯ ಸಿರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಸಿದ್ದು ಅಲ್ಲದೇ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿದ್ದು ಪುನಃ ಸಂಜೆ 5-30 ಗಂಟೆ ಸುಮಾರಿಗೆ ಫಿರ್ಯಾದಿದಾರರಳ ಮನೆಗೆ ಹೋಗಿ ಆಕೆಗೆ ಕಲ್ಲಿನಿಂದ ಹೊಡೆದು ಗುಪ್ತಗಾಯಪಡಿಸಿದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 44/2018 ಕಲಂ: 143, 147, 323, 324, 354, 504, 506 ಸಂಗಡ 149 ಐಪಿಸಿ   ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ:32, 34 ಕೆ.ಇ ಆಕ್ಟ್;- ದಿನಾಂಕ: 22/02/2018 ರಂದು ಸಾಯಂಕಾಲ 17:10 ಪಿ.ಎಂ ಕ್ಕೆ ಸಿಪಿಐ ಸಾಹೇಬರು ಹುಣಸಗಿ ವೃತ್ತ ರವರು ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಅದರ ಸಾರಾಂಶವೆನೆಂದರೆ, ಸಿಪಿಐ ಸಾಹೇಬರು ಕೊಡೇಕಲ್ಲ ಪೊಲೀಸ ಠಾಣೆಯ ಸರಹದ್ದಿನ ಪೈಕಿ ಬೈಲಕುಂಟಿ ಗ್ರಾಮದ ಗೋಪಾಲ ಹರನಾಳ ರವರ ಮನೆಯ ಮುಂದಿನ ಸಕರ್ಾರಿ ಖುಲ್ಲಾ ಜಾಗೆಯಲ್ಲಿ ಒಬ್ಬನು ನಿಂತು ಅನಧೀಕೃತವಾಗಿ ಯಾವೂದೇ ದಾಖಲಾತಿ ಹೊಂದದೆ ಮತ್ತು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯಮಾರಾಟ ಮಾಡುತ್ತಿರುವದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ಸಾಹೇಬರು ಸಿಬ್ಬಂದಿಯವರಾದ ಬಸವರಾಜ ಸಿಪಿಸಿ-173, ಶಂಕರಗೌಡ ಸಿಪಿಸಿ-299, ವಿಕಾಸ ಡಿಎಆರ್ ಪಿಸಿ-144, ರವರಿಗೆ ಸಂಗಡ ಕರೆದುಕೊಂಡು ಕಛೇರಿಯ ಜೀಪ್ ನಂ ಕೆಎ:33 ಜಿ:0164 ನೇದರಲ್ಲಿ ಕುಳಿತು ಎಲ್ಲರೂ ಕೂಡಿ ಕಛೇರಿಯಿಂದ 15.10 ಬಿಟ್ಟು 15.30 ಗಂಟೆಗೆ ಬೈಲಕುಂಟಿ ಗ್ರಾಮದ ಬಾತ್ಮಿ ಬಂದ ಸ್ಥಳವಾದ ಗೋಪಾಲ ಹರನಾಳ ರವರ ಮನೆಯ ಪಕ್ಕದಲ್ಲಿ ಮರೆಯಲ್ಲಿ ನಮ್ಮ ಜೀಪನ್ನು ನಿಲ್ಲಿಸಿ ನೋಡಲಾಗಿ ಒಬ್ಬನು ನಿಂತು ಗಿರಾಕಿಗಳಿಗೆ ಮದ್ಯದ ಬಾಟಲಿಗಳನ್ನು ಅವರಿಂದ ಹಣ ಪಡೆದು ಮಾರಾಟ ಮಾಡುತ್ತಿರುವನ್ನು ನೋಡಿ ಖಚಿತಪಡಿಸಿಕೊಂಡು 15.40 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಪಿಐ ಸಾಹೇಬರು ಮತ್ತು ಸಿಬ್ಬಂದಿಯವರು ಸದರಿಯವನ್ನು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದನ್ನು ನೋಡಿ ಸದರಿಯವನು ಓಡಿ ಹೋಗಿದ್ದು ಮದ್ಯದ ಬಾಟಲಿಗಳನ್ನು ಖರೀದಿ ಮಾಡುತ್ತಿದ್ದ ಗಿರಾಕಿಗಳು ಕೂಡಾ ಓಡಿ ಹೋಗಿದ್ದು ಅಲ್ಲಿಯೇ ಇದ್ದ ಒಬ್ಬನ್ನು ವಿಚಾರಿಲಾಗಿ ತನ್ನ ಹೆಸರು ಮಾನಪ್ಪ ತಂದೆ ಬಲವಂತಪ್ಪ ಬಿರಾದಾರ ಅಂತಾ ತಿಳಿಸಿದ್ದು  ಅವನಿಗೆ ಮಧ್ಯ ಬಾಟಲಿ ಮಾರುತ್ತಿರುವವನ ಹೆಸರು ವಿಚಾಸಲಾಗಿ ಸಾಹೇಬಣ್ಣ ಕೆಳಗಿನಮನಿ ಸಾ:ಬೈಲಕುಂಟಿ ಅಂತಾ ತಿಳಿಸಿದ್ದು ಸದರಿಯವನು ಯಾವುದೆ ಪರವಾನಿಗೆ ಇಲ್ಲದೆ ಆಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವದು ಖಚಿತಪಟ್ಟಿದ್ದು ಎಲ್ಲಾ ಮದ್ಯದ ಬಾಟಲಿಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದು. ಪರಿಶೀಲಿಸಿ ನೋಡಲಾಗಿ ಸ್ಥಳದಲ್ಲಿ 1)  ಔಐಆ ಖಿಂಗಿಇಖಓ ಘಞಥಿ 180 ಎಮ್.ಎಲ್ ನ ಹಳದಿ ಬಣ್ಣದ ರಟ್ಟಿನ 18 ಡಬ್ಬಿಗಳು ಒಟ್ಟು 3240 ಎಮ್.ಎಲ್ ಕಿಮ್ಮತ್ತು 1234.08, 2)  ಒಛಿ ಆಠತಿಜಟಟ' ಖಣಟ 90 ಎಮ್.ಎಲ್ ನ ಕೆಂಪು ರಟ್ಟಿನ 30 ಡಬ್ಬಿಗಳು ಒಟ್ಟು 2700 ಎಮ್.ಎಲ್ ಕಿಮ್ಮತ್ತು 1242.6, ಹೀಗೆ ಒಟ್ಟು ಎರಡೂ ನಮೂನೆಯ 5900 ಎಮ್.ಎಲ್ ಮದ್ಯ ಒಟ್ಟು ಮೌಲ್ಯ 2476.68 ಇದ್ದು, ಸದರಿಯವುಗಳನ್ನು ಇಂದು ದಿನಾಂಕ:22/02/2018 ರಂದು 15:40 ಪಿ.ಎಂ ದಿಂದ 16:40 ಪಿ.ಎಮ್ ವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚಾನಾಮೆ ಮಾಡುವ ಮೂಲಕ ಜಪ್ತುಪಡಿಸಿಕೊಂಡು ಮರಳಿ 17:10 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು ಸಾರಾಯಿ ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಹಾಗು ಜ್ಞಾಪನಾ ಪತ್ರದ ಆದಾರದ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿದ್ದು, ಸಿಪಿಐ ಸಾಹೆಬರ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:14/2018 ಕಲಂ:32, 34 ಕೆ.ಇ ಆಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!