Yadgir District Reported Crimes Updated on 15-02-2018

By blogger on ಗುರುವಾರ, ಫೆಬ್ರವರಿ 15, 2018


                                            Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 29/2018 ಕಲಂ 78(3) ಕೆ.ಪಿ ಎಕ್ಟ್ 1963 ;- ದಿನಾಂಕ 14/02/2018 ರಂದು 6-00 ಪಿಎಂಕ್ಕೆ ಶ್ರೀ ರಾಮಣ್ಣ ಎ.ಎಸ್.ಐ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಜ್ಞಾಪನವನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 14/02/2018 ರಂದು 4:00 ಪಿಎಮ್ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರು ರವರು ಠಾಣೆಯಲ್ಲಿದ್ದಾಗ ಯಾದಗಿರಿಯ ವಾಲ್ಮೀಕಿ ನಗರದಲ್ಲಿ  ತಿಮ್ಮಣ್ಣ ಬಗಲಿ ಈತನು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ,  ಸರಕಾರಿ ಜೀಪ ನಂ. ಕೆಎ 33.ಜಿ.0075 ನೇದ್ದರಲ್ಲಿ ಠಾಣೆಯಿಂದ ಹೊರಟು 4-20 ಪಿಎಮ್ಕ್ಕೆ ಹೋರಟುದ ದುಖಾನವಾಡಿಯಲ್ಲಿ 4-30 ಪಿಎಂಕ್ಕೆ ಜೀಪ ನಿಲ್ಲಿಸಿ ಮುಂದೆ ನಡೆದುಕೊಂಡು ಹೋಗಿ ಒಂದು ಮನೆಯ ಮರೆಯಲ್ಲಿ ನಿಂದು ನೋಡಲಾಗಿ  ತಿಮ್ಮಣ್ಣ ಬಗಲಿ ಈತನು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. ಗೆ 80/- ರೂ. ಗೆಲ್ಲಿರಿ ಮಟ್ಕಾ ನಂಬರಗಳನ್ನು ಬರೆಸಿರಿ ಅಂತಾ  ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು 4-45 ಪಿ.ಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು  ತಿಮ್ಮಣ್ಣ ತಂ. ಬಸ್ಸಪ್ಪ ಬಗಲಿ ವಃ45 ವರ್ಷ ಜಾಃ ಬೇಡರು ಉಃ ಮಟ್ಕಾ ದಂದೆ ಸಾಃ ವಾಲ್ಮೀಕಿ ನಗರ ಯಾದಗಿರಿ.  ಅಂತಾ ತಿಳಿಸಿದ್ದು ಸದರಿಯವರನ ಹತ್ತಿರ 1) ನಗದು ಹಣ 2550=00 ರೂ. ನಗದು ಹಣ ಸಿಕ್ಕಿದ್ದು 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅಂ.ಕಿ.00-00 ಮತ್ತು 3) ಒಂದು ಬಾಲ್ ಪೆನ್ ಅಂ.ಕಿ.00-00 ರೂ. ದೊರೆತ್ತಿದ್ದು, ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಒಂದು ಕಾಗದದ ಪುಡಿಯಲ್ಲಿ ಕಟ್ಟಿ ನಮ್ಮ ಸಹಿವುಳ್ಳ ಚೀಟಿಯನ್ನು ಅಂಟಿಸಿ ತಾಬೆಗೆ ತೆಗೆದುಕೊಂಡು  ಸದರಿ ಪಂಚನಾಮೆಯನ್ನು 4-45 ಪಿಎಮ್ ದಿಂದ 5-45 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡು  6-00 ಪಿಎಂಕ್ಕೆ ಬಂದು ಸದರಿ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನದೊಂದಿಗೆ ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ 8-45 ಪಿಎಂಕ್ಕೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಠಾಣೆ ಗುನ್ನೆ ನಂ. 29/2018 ಕಲಂ. 78(3) ಕೆಪಿ ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಐಕೊಂಡೆನು.
           
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 30/2018 ಕಲಂ 341.323.504.506.ಸಂ:34 ಐಪಿಸಿ;- ದಿನಾಂಕ: 14/02/2018 ರಂದು ಮುಂಜಾನೆ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ದುರಗಮ್ಮ ಗಂಡ ನಾಗರಾಜ ವಡಗೇರಾ ಸಾ|| ಹುಲಕಲ್ ಗುಡ್ಡ ತಾ|| ಸುರಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ  ಮಾಡಿಸಿದ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ಆರೋಪಿತರು ದಿನಾಂಕ: 01/02/2018 ರಂದು 8-00 ಗಂಟೆಗೆ ಸುರಪೂರ ನಗರದ ಗಾಂಧೀ ಚ್ಔಕ ಹತ್ತಿರ ನನ್ನ ಗಮಡನಿಗೆ ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಲ್ಲದೆ ನನಗೆ ಪೋನ ಮುಖಾಂತರ ಬೈಯಿದಿರುತ್ತಾರೆ ಕಾರಣ ಮಾನ್ಯರವರು ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಅರ್ಜಿ ಸಾರಾಂಶದ ಮೇಲಿಂಧ ಠಾಣಾ ಗುನ್ನೆ ನಂ 30/2018 ಕಲಂ 341,323,504,506,ಸಂಗಡ 34 ೈಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 31/2018 ಕಲಂ 279,337, 338 ಐಪಿಸಿ;- ದಿನಾಂಕ 14/02/2018 ರಂದು 1-00 ಪಿ,ಎಂ ಕ್ಕೆ ಕಾಮರಡ್ಡಿ ಆಸ್ವರ್ತೆ ಕಲಬುರಗಿಯಿಂದ ಾರ್,ಟಿ, ಎಂ ಎಲ್ ಸಿ ಇದೆ ಅಂತ ಪೋನ ಮೂಲಕ ಮಾಹಿತ ಬಂದ ಮೇರೆಗೆ ನಾನು ಫರ್ತುಮೀಯಾ ,ಎಸ್, 1-30 ಪಿ,ಎಂ ಕ್ಕೆ ಕಲಬುರಗಿಗೆ ಹೊರಟು 4-00 ಪಿ,ಎಂ ಕ್ಕೆ ಕಾಮರಡ್ಡಿ ಆಸ್ವರ್ತೆಗೆ ಭೆಟಿ ಮಾಡಿ ಆಸ್ವರ್ತೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳೂ ಪಿರ್ಯಾದಿ ಶ್ರೀಮತಿ ಶೋಭಾ ಗಂಡ ಚಿದಾನಂದ ಪತ್ತಾರ ಸಾ|| ಬೀರಿಮಡ್ಡಿ ಇವರ ಃಏಳಿಕೆ ಪಡೆಯಲಾಗಿ ಇಂದು ದಿನಾಂಕ14/02/2018 ರಂದು 8-00 ಗಂಟೆಗೆ ಬೀರಿಮಡ್ಡಿಯಿಂದ ಸುರಪೂರಕ್ಕೆ ಶಿವರಾರ್ತಿ ಹಬ್ಬದ ಪ್ರಯುಕ್ತ ಸಂತೆ ಮಾಡಿಕೊಂಡು ಬರಲು ನಾನು ಮತ್ತು ನನ್ನ ೆರಡನೆ ಮಗ ಚೇತನ ೀತನೊಂದಿಗೆ ನಮ್ಮ ಮೋಟಾರ ಸೈಕಲ ನಂ ಚೆಸ್ಸಿ ನಂ  MD2A11CYHWF24425 ENG nO: DHYWHF78260 ನೇದ್ದರ ಮೇಲೆ ಸುರಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಮರಳಿ 9-20 ,ಎಂ ಕ್ಕೆ ಮರಳಿ ಬೈರಿಮಡ್ಡಿಗೆ ಹೋಗುವಾಗ ಮಾಗಱ ಮದ್ಯ 9-30 ಗಂಟೆಗೆ ಸುರಪೂರ- ಕೆಂಬಾವಿ ಮುಖ್ಯ ರಸ್ತೆಯ ದರ್ಬಾರ ತಾತ ರವರ ಕೆರೆಯ ಹತ್ತಿರ ರೋಡಿನ ತಿರುವಿನಲ್ಲಿ ಹೋಗುವಾಗ ಎದುರಿನಿಂದ ಂದರೆ ಸಿದ್ದಾಪೂರ ಕಡೆಯಿಂದ ಿರಟಿಗಾ ಕಾರ ನಂ ಕೆಎ-33 ಎಂ-6254 ನೇದ್ದರ ಚಾಲಕ ಸುರೇಶ ತಂದೆ ಕರಿ ಕೆಂಪಯ್ಯ ದೋರಿ ಸಾ|| ಹೋಸ್ಕೆರಾ ಹಳ್ಳಿ ಬೆಂಗಳೂರು ಹಾ|| || ಸುರಪೂರ ೀತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸ್ಐಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದನು ಪರಿಣಾಮ ನಾವಿಬ್ಬರೂ ನಮ್ಮ ಮೋಟಾರ ಸ್ಐಕಲ ಮೇಲಿಂಧ ಕೆಳಗೆ ಬಿದ್ದು ನನಗೆ ಮತ್ತು ನನ್ನ ಮಗನಿಗೆ ಸಾದಾ ಮತ್ತು ಬಾರಿಗಾಯಗಳಾರುತ್ತವೆ,     ಕಾರಣ ತೀವೇಗ ಮತ್ತು ಅಲಕ್ಷತನದಿಂದ ತನ್ನ ಕಾರನ್ನು ಓಡಿಸಿಕೊಮಡು ಬಂದ ಕಾರ ಚಾಲಕ ಸುರೇಶ ತಂದೆ ಕರಿ ಕೆಂಪಯ್ಯ ದೋರಿ ಈತನ ಮೇಲೆ ಕನೂನು ಕ್ರಮ ಜರುಗಿಸಲು ವಿನಂತಿ ಅಂತ ಹೇಳಿಕೆ ಪಿಯಾಱದಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 31/2018 ಕಲಂ 279,337,338 ಐಪಿಸಿ ನೇದ್ದರ ಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು
                                                                    
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 22/2018 ಕಲಂ, 143,147,148,447, 323,324, 504,506 ಸಂ: 149 ಐ.ಪಿ.ಸಿ;- ದಿನಾಂಕ: 14/02/2018 ರಂದು ಶ್ರೀ ವೀರಣ್ಣ ಹೆಚ್.ಸಿ-138 ಇವರು ಕಲಬುರಗಿಯ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಶ್ರೀ ತಿರುಪತಿ ತಂದೆ ಶಂಕರ ಚವ್ಹಾಣ ವಯಾ; 17 ವರ್ಷ ಉ: ವಿದ್ಯಾಥರ್ಿ ಜಾ: ಲಮಾಣಿ ಸಾ: ಬಾಂಗ್ಲಾ ತಾಂಡಾ ಹೋಸ್ಕೇರಾ ತಾ|| ಶಹಾಪೂರ ಜಿ|| ಯಾದಗಿರ ಇವರ ಹೇಳಿಕೆ ಪಡೆದುಕೊಂಡು, ಮರಳಿ ಠಾಣೆಗೆ 06.10  ಪಿಎಂ ಕ್ಕೆ ಬಂದು ಹೇಳಿಕೆ ಪಿಯರ್ಾದಿ ಹಾಜರ ಪಡೆಸಿದ್ದು, ಸದರಿ ಹೇಳಿಕೆ ಸಾರಂಶವೇನಂದರೆ, ದಿನಾಂಕ:13/02/2018 ರಂದು ಪಿಯರ್ಾದಿಯು ತನ್ನ ಹೊಲದಲ್ಲಿ ಇದ್ದಾಗ ಪಕ್ಕದ ಹೊಲದ ಸಣ್ಣ ಮರೆಪ್ಪ ಇವರ ಮಗಳು ನಮ್ಮ ಹೊಲದಲ್ಲಿಯ ತೊಗರಿ ಕಟ್ಟಿಗೆ ತಗೆದುಕೊಳ್ಳುವಾಗ ಅಮದಾಜು 03.00 ಪಿಎಂ ಸುಮಾರಿಗೆ ನಾನು ನಮ್ಮ ಕಟ್ಟಿಗೆ ತಗೆದುಕೊಳ್ಳಬೇಡ ಅಂತ ಬಿಡಿಸಿ ಕಳುಹಿಸಿದ್ದೇನು. ನಂತರ 04.30 ಪಿಎಂ ಸುಮಾರಿಗೆ ಆರೋಪಿತರೆಲ್ಲೂರು ಕೂಡಿ ಭೀಮರಾಯ ತಂದೆ ಹಣಮಂತ ಪಟೇಲ ಈತನ ಅಟೋ ನಂ: ಕೆಎ-33 ಎ-2996 ನೇದ್ದರಲ್ಲಿ ಬಂದು ನನಗೆ ಅವಾಚ್ಯವಾಗಿ ಬೈಯ್ದು ಬೋಸಡಿ ಮಗನೆ ನಮ್ಮ ಹುಡುಗಿಗೆ ತೊಗರಿ ಕಟ್ಟಿಗೆ ತಗೆದುಕೊಂಡು ಹೋಗಲು ಬ್ಯಾಡ ಅಂತ್ಯಾ ಸೂಳಿ ಮಗನೆ, ಅಂತಾ ಅಂದು ಕೈಯಿಂದ, ಬೆಲ್ಟಿನಿಂದ ಬಾಯಿಗೆ, ಕಪಾಳಕ್ಕೆ, ತಲೆಗೆ ಬೆನ್ನಿಗೆ ಹಾಗೂ ಎದಗೆ ಹೊಡೆದು ಗುಪ್ತಗಾಯ ಪೆಟ್ಟು ಮಾಡಿರುತ್ತಾರೆ. ನಂತರ ಅದೆ ಅಟೋದಲ್ಲಿ ಹಾಕಿಕೊಂಡು ಸಣ್ಣ ಮರೆಪ್ಪ ಈತನ ಮನೆಗೆ ಕರೆದುಕೊಂಡು ಹೋಗಿ ಕೈಯಿಂದ, ಬೆಲ್ಟಿನಿಂದ ಹೋಡೆದಿರುತ್ತಾರೆ, ಅಷ್ಟರಲ್ಲಿ ನಮ್ಮ ಅಣ್ಣ ದನೇಶ ತಂದೆ ಶಂಕರ ಚವ್ಹಾಣ ಮತ್ತು ಇತರರು ಬಂದು ಬಿಡಿಸಿಕೊಂಡರು ಆಗ ಆರೋಪಿತರಲ್ಲೂ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಮಗನೆ ನಿನಗೆ ಅದೆ ಕಟ್ಟಿಗೆಯಲ್ಲಿ ಹಾಕಿ ಸುಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 22/2018 ಕಲಂ: 143, 147, 148, 447, 323, 324, 504, 506 ಸಂ: 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 34/2018 ಕಲಂ: 143, 147, 323, 324, 504, 506, ಸಂಗಡ 149 ಐಪಿಸಿ;- ದಿ: 14/02/18 ರಂದು 2.15 ಪಿಎಮ್ಕ್ಕೆ ಶ್ರೀಮತಿ ಗಂಗಮ್ಮ ಗಂಡ ಶೇಖರ ಬಂಡಿ ವ|| 45 ಜಾ|| ಹರಿಜನ ಉ|| ಹೊಲಮನೆಗೆಲಸ ಸಾ|| ಹದನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನಮ್ಮ ಅತ್ತಿಯವರಾದ ನೀಲಮ್ಮ ಗಂಡ ಭೀಮರಾಯ ಬಂಡಿ ಇವರ ಹೆಸರಿನಲ್ಲಿ ಮಲ್ಲಾ ಸೀಮಾಂತರದಲ್ಲಿ 50/6 ನೇದ್ದರಲ್ಲಿ 04 ಎಕರೆ 24 ಗುಂಟೆ ಹೊಲವಿದ್ದು ನಮ್ಮ ಅತ್ತಿಯವರು ಸಿಂದಗಿಯಲ್ಲಿ ವಾಸವಾಗಿದ್ದು ಸದರಿಯವರು ಆಗಾಗ ಬಂದು ಹೋಗುತ್ತಾರೆ. ಆದರೆ ಸದರಿ ಹೊಲವನ್ನು ನಾನೇ ನೋಡಿಕೊಂಡು ಹೋಗುತ್ತೇನೆ. ನಮ್ಮ ಹೊಲ ಹಾಗು ನಮ್ಮೂರ ಯಮನವ್ವ ಗಂಡ ಚಂದಪ್ಪ ಬಂಡಿ ಇವರ ಹೊಲ ಆಜುಬಾಜು ಇದ್ದು ನಮ್ಮ ಎಲ್ಲಾ ಹೊಲಗಳಿಗೆ ಕೆಬಿಜೆಎನ್ಎಲ್ ದಿಂದ ನೀರು ಬಂದಿದ್ದು ಇರುತ್ತದೆ. ಆದರೆ ಸದರ ನೀರು ನಮ್ಮ ಹೊಲಕ್ಕೆ ಬರಬೇಕಾದರೆ ಪಕ್ಕದ ಹೊಲದ ಯಮನವ್ವ ಇವರ ಹೊಲದ ಮುಖಾಂತರ ಬರಬೇಕು ಆದರೆ ಸದರಿ ಹೊಲ ಯಮನವ್ವ ಇವರ ಅಳಿಯನಾದ ಶರಣಪ್ಪ ತಂದೆ ಅಯ್ಯಪ್ಪ ಜಮಖಂಡಿ ಈತನು ಉಳಿಮೆ ಮಾಡುತ್ತಿದ್ದು ಸದ್ಯ ನನ್ನ ಗಂಡ ತೀರಿಹೋಗಿದ್ದು ನನ್ನ ಗಂಡ ಜೀವಂತವಿದ್ದಾಗ ಸದರ ಶರಣಪ್ಪ ಈತನು ನಮ್ಮ ಹೊಲಕ್ಕೆ ನೀರು ಬಿಡುತ್ತಿದ್ದನು. ಆದರೆ ನನ್ನ ಗಂಡ ತೀರಿ ಹೋದಾಗಿನಿಂದ ಸದರ ಶರಣಪ್ಪ ಈತನು ನಮ್ಮ ಹೊಲಕ್ಕೆ ನೀರು ಬಿಡುತ್ತಿಲ್ಲ ಕೇಳಲು ಹೋದರೆ ನಾನು ನೀರು ಬಿಡುವದಿಲ್ಲ ನೀನು ಯಾರಿಗೂ ಬೇಕಾದರು ಹೇಳು ಅಂತ ನನಗೆ ಅವಾಚ್ಯವಾಗಿ ಬೈಯುತ್ತಿದ್ದು ಈಗ ಸುಮಾರು ನಾಲ್ಕು ತಿಂಗಳಿನಿಂದ ನಮ್ಮ ಹೊಲಕ್ಕೆ ನೀರು ಬಿಟ್ಟಿರುವದಿಲ್ಲ ಕಾರಣ ಸದರಿಯವನು ನೀರು ಬಿಟ್ಟಿರುವದಿಲ್ಲವಾದ್ದರಿಂದ ನಮ್ಮ ಹೊಲದಲ್ಲಿನ ಬೆಳೆ ಒಣಗಿ ಸುಮಾರು ಹಾನಿಯಾಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 12/02/2018 ರಂದು ಬೆಳಿಗ್ಗೆ 09 ಗಂಟೆಗೆ ನಾನು ಹಾಗು ನನ್ನ ಮಗನಾದ ಸುನೀಲ ತಂದೆ ಶೇಖರ ಬಂಡಿ ಇಬ್ಬರು ಕೂಡಿ ನಮ್ಮ ಸಂಬಂದಿಯಾದ ಶರಣಪ್ಪ ತಂದೆ ಅಯ್ಯಪ್ಪ ಜಮಖಂಡಿ ಇವರ ಮನೆಯ ಮುಂದೆ ನಿಂತು ನೀನು ನಮ್ಮ ಹೊಲಕ್ಕೆ ಸುಮಾರು ನಾಲ್ಕು ತಿಂಗಳಿನಿಂದ ನೀರು ಬಿಟ್ಟಿಲ್ಲವಾಗಿದ್ದರಿಂದ ನಮ್ಮ 10 ಎಕರೆ ಹೊಲ ಹಾಳು ಬಿದ್ದಿರುತ್ತದೆ ನಿನಗೆ ತಿಳಿಯುವದಿಲ್ಲ ಏನು ಅಂತ ಅಂದಾಗ ಸದರಿ 1] ಶರಣಪ್ಪ ತಂದೆ ಅಯ್ಯಪ್ಪ ಜಮಖಂಡಿ 2] ಯಮನವ್ವ ಗಂಡ ಚಂದಪ್ಪ ಬಂಡಿ 3] ಜಟ್ಟೆಪ್ಪ ತಂದೆ ಚಂದಪ್ಪ ಬಂಡಿ 4] ಮಲ್ಲಪ್ಪ ತಂದೆ ಶರಣಪ್ಪ ಜಮಖಂಡಿ 5] ನಿರ್ಮಲಾ ಗಂಡ ಜಟ್ಟೆಪ್ಪ ಬಂಡಿ 6] ಅಯ್ಯಮ್ಮ ಗಂಡ ಪರಸಪ್ಪ ಬಂಡಿ 7] ಮಲ್ಲಮ್ಮ ಗಂಡ ಮರೆಪ್ಪ ತೆಗ್ಗೆಳ್ಳಿ 8] ನಿಂಗಮ್ಮ ಗಂಡ ಸಿದ್ರಾಮಪ್ಪ ತೆಗ್ಗೆಳ್ಳಿ ಇವರೆಲ್ಲರೂ ಮನೆಯಲ್ಲಿಂದ ಗುಂಪು ಕಟ್ಟಿಕೊಂಡು ಬಂದವರೇ ಈ ಸೂಳೆಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ನನ್ನ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡುತ್ತಾ ಎಲ್ಲರು ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ನಾನು ಸತ್ತೆನೆಪ್ಪೋ ಅಂತ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಅವರಲ್ಲಿಯ ಶರಣಪ್ಪ ಈತನು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸುತ್ತಿದ್ದಾಗ ಅಲ್ಲಿಯೇ ಇದ್ದ ನನ್ನ ಮಗ ಸುನೀಲ ಈತನು ಬಿಡಿಸಿಕೊಳ್ಳಲು ಮದ್ಯ ಬಂದಾಗ ಸದರಿಯವರೆಲ್ಲರೂ ನನ್ನ ಮಗನಿಗೂ ಸಹ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ನಂತರ ನಾವು ಚೀರಾಡುವ ಶಬ್ದ ಕೇಳಿ ಅಲ್ಲಿಯೇ ಇದ್ದ  ಶೈಲಶ್ರೀ ತಂದೆ ನಿಂಗಪ್ಪ ಬಂಡಿ, ನಾಗಪ್ಪ ತಂದೆ ಕರೆಪ್ಪ ಬಂಡಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ಹೊಡೆಯುವದನ್ನು ಬಿಟ್ಟು ಮಕ್ಕಳೆ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇವೆ ಮುಂದೆ ಒಂದು ಕೈ ನೋಡಿಕೊಳ್ಳುತ್ತೇವೆ ಅಂತ ಜೀವ ಬೆದರಿಕೆ ಹಾಕಿ ಹೋದರು. ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 34/2018 ಕಲಂ: 143, 147, 323, 324, 504, 506, ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 15/2018 ಕಲಂ 279, 338  ಐಪಿಸಿ ಸಂ.187 ಐಎಂವಿ ಆ್ಯಕ್ಟ್ ;- ದಿನಾಂಕ 13/02/2018 ರಂದು ಸಾಯಂಕಾಲ 7 ಪಿ.ಎಂ. ಸುಮಾರಿಗೆ ಯಾದಗಿರಿ ನಗರದಲ್ಲಿನ ಅಂಬೇಡ್ಕರ್ ಚೌಕ್ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಒಬ್ಬ ಅಪರಿಚಿತ ಹೆಂಗಸು ವಯ ಅಂದಾಜು 60 ರಿಂದ 65 ವರ್ಷ ಇವಳಿಗೆ ಯಾವುದೊ ವಾಹನದ ಚಾಲಕನು ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಅಪರಿಚಿತ ಹೆಂಗಸಿಗೆ ತಲೆಗೆ, ಬಲಗಾಲಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ವಾಹನ ಚಾಲಕನು ಸ್ಥಳದಿಂದ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಅಪರಿಚಿತ ಹೆಂಗಸಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಸೇರಿಕೆ ಮಾಡಿದ್ದು ಆಸ್ಪತ್ರೆಯ ಎಮ್.ಎಲ್.ಸಿ ಮಾಹಿತಿ ಮೇರೆಗೆ ಬೇಟಿ ನೀಡಿ ಗಾಯಾಳುವಿಗೆ ವಿಚಾರಿಸಲಾಗಿ ಪ್ರಜ್ಞೆ ಇರುವುದಿಲ್ಲ ಹಾಗೂ ಆಕೆಯ ವಾರಸುದಾರರು ಯಾರು ಇಲ್ಲದ ಕಾರಣ ಸಕರ್ಾರಿ ತಪರ್ೆಯಾಗಿ ಶ್ರಿ ಸುಖದೇವ್ ಪಿ.ಎಸ್.ಐ ರವರು ಫಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.15/2018 ಕಲಂ 279, 338  ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೆದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!