Yadgir District Reported Crimes Updated on 08-01-2018

By blogger on ಸೋಮವಾರ, ಜನವರಿ 8, 2018


                                              Yadgir District Reported Crimes
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 03/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994;- ದಿನಾಂಕ: 07/01/2018 ರಂದು 10.45 ಎ.ಎಂ ಕ್ಕೆ ಮಾನ್ಯ ಸಿಪಿಐ ಸಾಹೇಬರು ಮರಳು ತುಂಬಿದ ಒಂದು ಟ್ರ್ಯಾಕ್ಟರ್ನ್ನು ತಂದು ಒಂದು ವರದಿಯೊಂದಿಗೆ ಜಪ್ತಿಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ:07/01/2018 ರಂದು 08.15 ಎ.ಎಂ ಸುಮಾರಿಗೆ ನಾನು ಭೀ.ಗುಡಿ ಪೊಲೀಸ್ ಠಾಣೆಯಲ್ಲಿದ್ದಾಗ ಯಾರೋ ಇಂಗಳಗಿ ಹಳ್ಳದಲ್ಲಿ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳನ್ನು ತುಂಬಿ ಹುರಸಗುಂಡಗಿ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಹಾಗು ಪಂಚರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಸಕರ್ಾರಿ ಜೀಪ್ ನಂ:ಕೆಎ-33 ಜಿ-153 ನೇದ್ದರಲ್ಲಿ ಜೀಪ್ ಚಾಲಕ ಶ್ರೀ ಮಲ್ಕಾರಿ ಎಪಿಸಿ-45 ರವರೊಂದಿಗೆ ಹೊರಟು 09.00 ಎ.ಎಮ್ ಕ್ಕೆ ಶಿರವಾಳ ಗ್ರಾಮದಲ್ಲಿನ ಅಣಬಿ ಕ್ರಾಸ್ ಹತ್ತಿರ ಹೊರಟಾಗ ಒಂದು ಟ್ರಾಕ್ಟರದಲ್ಲಿ ಹಳ್ಳದ ಮರಳನ್ನು ತುಂಬಿಕೊಂಡು ಹೊರಟಿರುವದನ್ನು ನೋಡಿ ಸದರಿ ಟ್ರಾಕ್ಟರನ್ನು ನಿಲ್ಲಿಸಿದಾಗ ಚಾಲಕನು ಟ್ರಾಕ್ಟರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿಯವನ ಹತ್ತಿರ ಮರಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಇಲ್ಲದೇ ಮತ್ತು ಸರಕಾರಕ್ಕೆ ರಾಜಧನ ಕಟ್ಟದೇ ಇಂಗಳಗಿ ಹಳ್ಳದಿಂದ ಮರಳನ್ನು ತುಂಬಿಕೊಂಡು ಹುರಸಗುಂಡಗಿ ಕಡೆಗೆ ಹೊರಟಿರುವ ಬಗ್ಗೆ ಕಂಡು ಬಂದಿರುತ್ತದೆ. ಸದರಿ ಟ್ರಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಒಂದು ಸ್ವರಾಜ ಕಂಪನಿಯ ನೀಲಿ ಬಣ್ಣದ ಟ್ರಾಕ್ಟರ ಇದ್ದು, ಅದರ ಪಾಸಿಂಗ್ ನಂಬರ್ ಇರುವದಿಲ್ಲ. ಇಂಜಿನ ನಂ:ಈಪಿ010420ಎ ಅಂತಾ ಇರುತ್ತದೆ. ನೀಲಿ ಬಣ್ಣದ ಟ್ರಾಲಿ ಇದ್ದು, ಅದರ ಪಾಸಿಂಗ್ ನಂಬರ್ ಆಗಲಿ, ಚೆಸ್ಸಿ ನಂಬರ ಆಗಲಿ ಇರುವುದಿಲ್ಲ. ಟ್ರಾಲಿಯಲ್ಲಿದ್ದ ಮರಳನ್ನು ಪರಿಶೀಲಿಸಿ ನೋಡಲಾಗಿ ಅಂದಾಜು 2000/- ರೂ ಕಿಮ್ಮತ್ತಿನ ಮರಳು ಇರುತ್ತದೆ. ಓಡಿ ಹೋದ ಟ್ರಾಕ್ಟರ್ ಚಾಲಕನ ಹೆಸರು ಸಿದ್ದನಗೌಡ ತಂದೆ ಭೀಮನಗೌಡ ಚಟ್ನಳ್ಳಿ ಸಾ:ಇಂಗಳಗಿ ಇರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ. ನಂತರ ಸದರಿ ಟ್ರಾಕ್ಟರನ್ನು ಮತ್ತು ಅದರಲ್ಲಿದ್ದ ಮರಳು ಸಮೇತ ಪಂಚರ ಸಮಕ್ಷಮ 09.15 ಎ.ಎಮ್ ದಿಂದ 10.15 ಎ.ಎಮ್ ವರೆಗೆ ಜಪ್ತಿ ಪಡಿಸಿಕೊಂಡು ಸದರಿ ಟ್ರಾಕ್ಟರನ್ನು ಒಬ್ಬ ಖಾಸಗಿ ಚಾಲಕನ ಸಹಾಯದಿಂದ 10.45 ಎ.ಎಮ್.ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ಒಪ್ಪಿಸಿದ್ದು ಇರುತ್ತದೆ ಅಂತ ಅದರ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಗುನ್ನೆ ನಂ. 03/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ 279 337 338 ಐಪಿಸಿ ;- ದಿನಾಂಕ:07/01/2018 ರಂದು 14.30 ಗಂಟೆಗೆ ಮಹಾರಾಷ್ಟ್ರ ರಾಜ್ಯದ ಮಿರಜ ನಗರದ ಗಾಂಧಿಚೌಕ ಪೊಲೀಸ ಠಾಣೆಯಿಂದಾ ಒಂದು ಎಂಎಲ್ಸಿ ಹೇಳಿಕೆ ಅಂಚೆಯ ಮೂಲಕ ಮರಾಠಿ ಬಾಷೆಯಲ್ಲಿ ವಸೂಲಾಗಿದ್ದು ಪಡೆದಯಕೊಂಡು ನಿವೃತ್ತ ಹೆಚ್.ಸಿ ಸೋಮನಿಂಗಪ್ಪ ರವರಿಂದಾ ಕನ್ನಡ ಬಾಷೆಗೆ ಅನುವಾದ ಮಾಡಿಸಲು ಎಂಎಲ್ಸಿ ಹೇಳಿಕೆ ಸಾರಾಂಶವೇನಂದರೆ ದಿ:24/12/17 ರಂದು ಪ್ರಕರಣ ಫಿರ್ಯಾಧಿಯು ತನ್ನ ಗೆಳೆಯನಾದ ಸಿದ್ದನಗೌಡ ಈತನೊಂದಿಗೆ ಯುನಿಕಾರ್ನ ಮೋಟಾರ್ ಸೈಕಲ ನಂ. ಕೆಎ-33 ಯು-6783 ನೇದ್ದರ ಮೇಲೆ ಕೆಂಬಾವಿಯಿಂದಾ ಹುಣಸಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಕೆಂಭಾವಿಗೆ ಹೊರಟಾ ಹುಣಸಗಿ ಮಹಾಂತಸ್ವಾಮಿ ಸರ್ಕಲನಲ್ಲಿ ರಾತ್ರಿ 9.30 ಗಂಟೆಯ ಸುಮಾರಿಗೆ ತಾಳಿಕೋಟಿ ಕಡೆಯಿಂದಾ ಒಂದು ಟಾಟಾ ಎಸ್ ನಂ. ಕೆಎ-28 ಸಿ-7880 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಪಿಯರ್ಾದಿ ಹಿಂದೆ ಕುಳಿತು ಹೊರಟ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಪಿಯರ್ಾದಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಂತೆ ಆಗಿದ್ದು, ಮೋಟಾರ್ ಸೈಕಲ ನಡೆಯಿಸುತ್ತಿದ್ದ ಸಿದ್ದನಗೌಡನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು ನನಗೆ ನಮ್ಮ ಸಂಭಂದಿ ಒಂದು ಖಾಸಗಿ ಜೀಪನಲ್ಲಿ ಉಪಚಾರಕ್ಕೆಂದು ಮಿರಜ ದವಾಖಾನೆ ಕಳಿಸಿದ್ದು ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.  
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!